ಬರವಣಿಗೆ ನನ್ನ ಆಸಕ್ತಿ ಕ್ಷೇತ್ರವೂ ಹೌದು. ‘ಓ ಮೈ ಡಾಗ್’ ಎನ್ನುವ ಪುಸ್ತಕ ಬರೆದಿದ್ದೇನೆ. ತುಳು ಭಾಷೆಯಲ್ಲಿ ‘ಸರ್ಕಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಅದು ಸೂಪರ್ ಹಿಟ್ ಆಗಿದೆ ಎಂದು ನಟಿ ರಚನಾ ರೈ ಸಂದರ್ಶನದಲ್ಲಿ ಹೇಳಿದ್ದಾರೆ.
ಆರ್. ಕೇಶವಮೂರ್ತಿ
* ನಿಮ್ಮ ಹಿನ್ನೆಲೆ ಏನು?
ನನ್ನ ಮೊದಲ ಹೆಸರು ಶ್ರಾವ್ಯ ರೈ. ಪುತ್ತೂರಿನವಳು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ಓದಿದ್ದೇನೆ. ಅಮ್ಮ ಸರ್ಕಾರಿ ಉದ್ಯೋಗಿ. ಅಪ್ಪ ಉದ್ಯಮಿ. ನಾನು ಡ್ಯಾನ್ಸರ್. ಬ್ಯಾಡ್ಮಿಂಟನ್ ಪ್ಲೇಯರ್ ಕೂಡ ಆಗಿದ್ದೆ. ಇದರ ನಡುವೆ ಮಾಡೆಲಿಂಗ್ ಮಾಡುತ್ತಿದ್ದೆ. ಬರವಣಿಗೆ ನನ್ನ ಆಸಕ್ತಿ ಕ್ಷೇತ್ರವೂ ಹೌದು. ‘ಓ ಮೈ ಡಾಗ್’ ಎನ್ನುವ ಪುಸ್ತಕ ಬರೆದಿದ್ದೇನೆ. ತುಳು ಭಾಷೆಯಲ್ಲಿ ‘ಸರ್ಕಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಅದು ಸೂಪರ್ ಹಿಟ್ ಆಗಿದೆ. ‘ವಾಮನ’ ಚಿತ್ರದಲ್ಲೂ ನಾನು ನಟಿಸಬೇಕಿತ್ತು. ಆದರೆ, ಕಾಲೇಜು ಕಾರಣದಿಂದ ಸಾಧ್ಯವಾಗಿಲ್ಲ.
* ಡೆವಿಲ್ ಚಿತ್ರಕ್ಕೆ ನೀವು ನಾಯಕಿ ಆಗಿದ್ದು ಹೇಗೆ?
ಚಿತ್ರರಂಗಕ್ಕೆ ಬರಬೇಕು ಎನ್ನುವ ಪ್ಲಾನ್ ಇರಲಿಲ್ಲ. ಮಾಡೆಲಿಂಗ್ ಮಾಡುವಾಗ ಸಿನಿಮಾಗಳಿಗೆ ಹಾಗೆ ಸುಮ್ಮನೆ ಟ್ರೈ ಮಾಡುತ್ತಿದ್ದೆ. ಒಮ್ಮೆ ‘ದಿ ಡೆವಿಲ್’ ಚಿತ್ರಕ್ಕೆ ಆಡಿಷನ್ ಮಾಡುತ್ತಿದ್ದಾರೆ ಅಂತ ಗೊತ್ತಾಗಿ ಆಡಿಷನ್ ಕೊಟ್ಟೆ. ನಿರ್ದೇಶಕ ಪ್ರಕಾಶ್ ಅವರಿಗೆ ನನ್ನ ನಟನೆ ಇಷ್ಟ ಆಗಿ ಆಯ್ಕೆ ಮಾಡಿಕೊಂಡರು.
* ‘ಡೆವಿಲ್’ಗೆ ನೀವು ಸೆಲೆಕ್ಟ್ ಆಗುವ ನಂಬಿಕೆ ಇತ್ತಾ?
ಖಂಡಿತಾ ಇರಲಿಲ್ಲ. ನಾನೇ ನಾಯಕಿ ಅಂತ ಹೇಳಿದ ಮೇಲೂ ನಂಬಲಾಗಲಿಲ್ಲ. ಆದರೆ, ‘ಡ್ರೀಮ್ ಕಂ ಟ್ರೂ’ ಅನ್ನೋ ಮಾತು ನನ್ನ ಜೀವನದಲ್ಲಿ ‘ಡೆವಿಲ್’ ಚಿತ್ರ ನಿಜ ಮಾಡಿದೆ.
* ದರ್ಶನ್ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು?
ದರ್ಶನ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ನನಗೆ ಶೂಟಿಂಗ್ ಸೆಟ್‌ನಲ್ಲಿ ತುಂಬಾ ಹೇಳಿಕೊಟ್ಟಿದ್ದಾರೆ. ಟೆಕ್ನಿಕಲ್ ವಿಷಯಗಳು ಬಂದಾಗ, ಸೀನ್ ಓಕೆ ಮಾಡುವಾಗ, ಟೇಕ್ ಮಾಡುವಾಗ ತುಂಬಾ ಕಂಫರ್ಟ್ ಆಗಿ ನಟಿಸುವಂತೆ ಮಾಡಿದ್ದಾರೆ.
* ನಿಮ್ಮ ಪಾತ್ರ ಹೇಗಿರುತ್ತೆ?
ರೆಗ್ಯೂಲರ್ ಹೀರೋಯಿನ್ ಪಾತ್ರವಂತೂ ಅಲ್ಲ. ಇಡೀ ಸಿನಿಮಾದಲ್ಲಿ ನನ್ನ ಪಾತ್ರದ ಜರ್ನಿ ಇರುತ್ತದೆ. ಆ್ಯಕ್ಷನ್ ಸನ್ನಿವೇಶಗಳಲ್ಲೂ ಕಾಣಿಸಿಕೊಂಡಿದ್ದೇನೆ. ಬೇರೆ ರೀತಿಯ ಪಾತ್ರ.
* ದರ್ಶನ್ ಪಾತ್ರ ಹೇಗಿರುತ್ತದೆ?
ಅವರ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಮೂಡಿಸುವಷ್ಟು ಗ್ರ್ಯಾಂಡ್ ಆಗಿರುತ್ತದೆ. ದರ್ಶನ್ ಲುಕ್ಕು ಸಖತ್ತಾಗಿದೆ. ಬೇರೆ ರೀತಿಯ ದರ್ಶನ್ ಅವರನ್ನು ನೀವು ತೆರೆ ಮೇಲೆ ನೋಡುತ್ತೀರಿ. ‘ದರ್ಶನ್ ಈಸ್ ಬ್ಯಾಕ್’ ಅನ್ನೋ ರೀತಿ ದರ್ಶನ್ ಕಾಣಿಸಿಕೊಂಡಿದ್ದಾರೆ.
* ಡೆವಿಲ್ ಚಿತ್ರದ ನಂತರ ಯಾವ ಚಿತ್ರ ಒಪ್ಪಿದ್ದೀರಿ?
ಎರಡು ಕತೆ ಒಪ್ಪಿದ್ದೇನೆ. ಸದ್ಯದಲ್ಲೇ ನಿರ್ಮಾಣ ಸಂಸ್ಥೆಗಳೇ ಆ ಚಿತ್ರಗಳನ್ನು ಘೋಷಣೆ ಮಾಡುತ್ತಾರೆ. ಆದರೆ, ಮುಂದೆ ನಾನು ಏನೇ ಆದರೂ, ಎಷ್ಟೇ ಸಕ್ಸಸ್ ಬಂದರೂ ಅದೆಲ್ಲವೂ ‘ಡೆವಿಲ್’ ಚಿತ್ರಕ್ಕೆ ಮತ್ತು ನಿರ್ದೇಶಕ ಪ್ರಕಾಶ್ ಅವರಿಗೇ ಸೇರುತ್ತದೆ. ‘ಡೆವಿಲ್’ ಸಿನಿಮಾ ನನ್ನ ಪಾಲಿಗೆ ಗಾಡ್ ಫಾದರ್.
