MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಪುರುಷರು ಮರೆತೂ ತಿನ್ನಬಾರದ ಆಹಾರಗಳು, ಇವುಗಳನ್ನು ಕಡ್ಡಾಯವಾಗಿ ಬಿಟ್ಟುಬಿಡಿ

ಪುರುಷರು ಮರೆತೂ ತಿನ್ನಬಾರದ ಆಹಾರಗಳು, ಇವುಗಳನ್ನು ಕಡ್ಡಾಯವಾಗಿ ಬಿಟ್ಟುಬಿಡಿ

Foods men should not eat: ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ತಮ್ಮ ವೀರ್ಯದ ಗುಣಮಟ್ಟ ಮತ್ತು ಸಂಖ್ಯೆಯನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳಿಂದ ದೂರವಿರಬೇಕು.

2 Min read
Author : Mahmad Rafik
Published : Oct 09 2025, 11:06 PM IST
Share this Photo Gallery
  • FB
  • TW
  • Linkdin
  • Whatsapp
17
ಪುರುಷರ ಆರೋಗ್ಯ
Image Credit : Asianet News

ಪುರುಷರ ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಕ್ಕಳುನ ಮಾಡಿಕೊಳ್ಳುವುದರ ಬಗ್ಗೆ ತುಂಬಾನೇ ಯೋಚಿಸುತ್ತಾರೆ. ಮದುವೆಯಾದ ಮೂರ್ನಾಲ್ಕು ವರ್ಷ ಸಂಸಾರ ವಿಸ್ತರಣೆಗೆ ಮುಂದಾಗಲ್ಲ. ನಂತರ ಮಗು ಪಡೆದುಕೊಳ್ಳಲು ಮುಂದಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂದಿನ ಆಧುನಿಕ ಜೀವನಶೈಲಿಯಿಂದ ಪುರುಷರಲ್ಲಿಯೂ ಬಂಜೆತನದ ಸಮಸ್ಯೆಗಳು ಕಂಡು ಬರುತ್ತಿವೆ.

27
ಪುರುಷರು ಮತ್ತು ಆಹಾರ
Image Credit : Getty

ಪುರುಷರು ಮತ್ತು ಆಹಾರ

ಮದುವೆ ನಂತರ ಪುರುಷರಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲವು ಆಹಾರಗಳಿಂದ ಪುರುಷರು ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ಕಡ್ಡಾಯವಾಗಿ ಕೆಲವೊಂದು ಆಹಾರವನ್ನು ಕಡ್ಡಾಯವಾಗಿ ತಪ್ಪಿಸಬೇಕು. ಆ ಆಹಾರ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Related Articles

Related image1
ಪುರುಷನ ವೀರ್ಯಶಕ್ತಿಗೂ ಸರ್ಪಲೋಕಕ್ಕೂ ಸಂಬಂಧವಿದೆಯಂತೆ! ಹಾಗಂತಾರೆ ವಿನಯ್‌ ಗುರೂಜಿ
Related image2
ಪುರುಷರಿಗೆ ಗಡ್ಡ, ಮೀಸೆ ಬೆಳೆಯದೇ ಇರಲು ಕಾರಣ ಇದೇ ಹಾರ್ಮೋನ್
37
ಟ್ರಾನ್ಸ್ ಫ್ಯಾಟ್ಸ್
Image Credit : AI generated

ಟ್ರಾನ್ಸ್ ಫ್ಯಾಟ್ಸ್

ಆರೋಗ್ಯ ತಜ್ಞರ ಪ್ರಕಾರ, ಪುರುಷರು ಟ್ರಾನ್ಸ್ ಫ್ಯಾಟ್ ಇರುವ ಆಹಾರ ತಪ್ಪಿಸಬೇಕು. ಈ ಆಹಾರವನ್ನು ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಟ್ರಾನ್ಸ್ ಫ್ಯಾಟ್ ಆಹಾರ ಪುರುಷರಲ್ಲಿ ಆಹಾರದ ವೀರ್ಯದ ಗುಣಮಟ್ಟ ಕಡಿಮೆ ಮಾಡುತ್ತದೆ. ಸ್ಪ್ಯಾನಿಷ್ ಅಧ್ಯಯನದ ಪ್ರಕಾರ, ಈ ಟ್ರಾನ್ಸ್ ಫ್ಯಾಟ್ ಇರುವ ಆಹಾರ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

47
ಸಂಸ್ಕರಿಸಿದ ಮಾಂಸ
Image Credit : Asianet News

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಯಾವುದೇ ಮಾದರಿಯ ಮಾಂಸದ ಸೇವನೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಂಸ್ಕರಿಸಿದ ಮಾಂಸದಿಂದ ಮಾಡಿದ ಅಡುಗೆಯ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

57
ಸೋಯಾ ಆಹಾರ
Image Credit : Getty

ಸೋಯಾ ಆಹಾರ

ಸೋಯಾ ಆಹಾರಗಳಲ್ಲಿ ಫೈಟೊಈಸ್ಟ್ರೊಜೆನ್‌ಗಳು ಅಧಿಕವಾಗಿರುತ್ತದೆ. ಫೈಟೊಈಸ್ಟ್ರೊಜೆನ್‌ಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದ ಹಾರ್ಮೋನ್ ಸಮತೋಲನವನ್ನು ಹಾಳುಮಾಡುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಇದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮನೆಯಲ್ಲಿಯೇ ಸ್ಪರ್ಮ್ ಕೌಂಟ್ ಚೆಕ್ ಮಾಡಿಕೊಳ್ಳಬಹುದಾ? ಹೇಗೆಂದು ತಿಳಿದುಕೊಳ್ಳಿ

67
ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು
Image Credit : Pinterest

ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು

ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ವರದಿಗಳಲ್ಲಿ ತಿಳಿದು ಬಂದಿದೆ. ಈ ಕುರಿತು ನಡೆಸಿದ ಅಧ್ಯಯನದಲ್ಲಿ, ಪೂರ್ಣ ಕೊಬ್ಬಿನ ಹಾಲು, ಕ್ರೀಮ್ ಮತ್ತು ಚೀಸ್ ಸೇವನೆಯಿಂದ ವೀರ್ಯದ ಗುಣಮಟ್ಟ ಕ್ಷೀಣಿಸುವ ಸಾಧ್ಯತೆಗಳಿರುತ್ತವೆ.

77
'ಅತಿಯಾದರೆ ಅಮೃತವೂ ವಿಷ'
Image Credit : Getty

'ಅತಿಯಾದರೆ ಅಮೃತವೂ ವಿಷ'

'ಅತಿಯಾದರೆ ಅಮೃತವೂ ವಿಷ' ಎಂಬ ಗಾದೆಯಂತೆ ಆರೋಗ್ಯಕರ ಆಹಾರಗಳನ್ನು ಮಿತವಾಗಿ ಸೇವಿಸುವುದು ಮುಖ್ಯ. ಆರೋಗ್ಯಕರ ಜೀವನ ನಡೆಸಲು ಸರಿಯಾದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುವುದು ಬಹಳ ಅವಶ್ಯಕ.

ಇದನ್ನೂ ಓದಿ: ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಪುರುಷರ ಆರೋಗ್ಯ
ಆರೋಗ್ಯ
ಆರೋಗ್ಯಕರ ಆಹಾರಗಳು

Latest Videos
Recommended Stories
Recommended image1
Fasting Benefits: ಖಾಲಿ ಹೊಟ್ಟೆಯಲ್ಲಿ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುತ್ತೆ ಗೊತ್ತಾ?
Recommended image2
Stronger Hair: ಪಾರ್ಲರ್‌ಗೆ ಹೋಗೋದು ನಿಲ್ಲಿಸಿ, ನಿಮ್ಮ ಕೂದಲು ಸ್ಟ್ರಾಂಗ್ ಆಗ್ಬೇಕಾ? ಹಾಗಾದ್ರೆ ಈ 10 ಆಹಾರಗಳು ತಿನ್ನಿ ಸಾಕು!
Recommended image3
ಮಕ್ಕಳ ಮೆದುಳು ಚುರುಕಾಗಬೇಕೇ? ಹಾಗಿದ್ರೆ ಈ 7 ಆಹಾರ ತಪ್ಪದೇ ತಿನ್ನಿಸಿ
Related Stories
Recommended image1
ಪುರುಷನ ವೀರ್ಯಶಕ್ತಿಗೂ ಸರ್ಪಲೋಕಕ್ಕೂ ಸಂಬಂಧವಿದೆಯಂತೆ! ಹಾಗಂತಾರೆ ವಿನಯ್‌ ಗುರೂಜಿ
Recommended image2
ಪುರುಷರಿಗೆ ಗಡ್ಡ, ಮೀಸೆ ಬೆಳೆಯದೇ ಇರಲು ಕಾರಣ ಇದೇ ಹಾರ್ಮೋನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved