First Hindu state school in UK: ಯುಕೆಯ ಮೊದಲ ಸರ್ಕಾರಿ ಅನುದಾನಿತ ಹಿಂದೂ ಶಾಲೆಯಾದ ಹ್ಯಾರೋದಲ್ಲಿರುವ ಕೃಷ್ಣ ಅವಂತಿಗೆ, ದೇಶದ ಅಧಿಕೃತ ಶಿಕ್ಷಣ ಕಾವಲು ಸಂಸ್ಥೆ ಆಫ್‌ಸ್ಟೆಡ್‌ನಿಂದ 'ಅತ್ಯುತ್ತಮ' ರೇಟಿಂಗ್ ಲಭಿಸಿದೆ.

ಯುಕೆ ಮೊದಲ ಸರ್ಕಾರಿ ಅನುದಾನಿತ ಹಿಂದೂ ಶಾಲೆಗೆ ಅತ್ಯುತ್ತಮ ಶಾಲೆ ಮಾನ್ಯತೆ:

ಯುಕೆಯ ಮೊದಲ ಸರ್ಕಾರಿ ಅನುದಾನಿತ ಹಿಂದೂ ಶಾಲೆಗೆ ಅತ್ಯುತ್ತಮ ರೇಟಿಂಗ್ ಸಿಕ್ಕಿದ್ದಾಗು ವರದಿಯಾಗಿದೆ. ಹ್ಯಾರೋದಲ್ಲಿರುವ ಕೃಷ್ಣ ಅವಂತಿ ಹೆಸರಿನ ಸರ್ಕಾರಿ ಅನುದಾನಿತ ಪ್ರಾಥಮಿಕ ಹಿಂದೂ ಶಾಲೆಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ದೇಶದ ಅಧಿಕೃತ ಶಿಕ್ಷಣ ಕಾವಲು ಸಂಸ್ಥೆಯಾದ ಆಫ್‌ಸ್ಟೆಡ್ ಅತ್ಯುತ್ತಮ ಎಂದು ರೇಟಿಂಗ್ ನೀಡಿದೆ. ಇತ್ತೀಚಿನ ಪರಿಶೀಲನೆಯಲ್ಲಿ ಶಿಕ್ಷಣ ಕಾವಲು ಸಂಸ್ಥೆಯಾದ ಆಫ್‌ಸ್ಟೆಡ್, ಕೃಷ್ಣ ಆವಂತಿ ಶಾಲೆಯ ಶಿಕ್ಷಣದ ಬಗ್ಗೆ ಶಾಲೆಯ ಉದ್ದೇಶ ಮತ್ತು ಮಹತ್ವಾಕಾಂಕ್ಷೆಯ ಬಗ್ಗೆ ಶ್ಲಾಘಿಸಿದೆ. ಇಲ್ಲಿ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕ ಮಾನದಂಡಗಳನ್ನು ಪೂರೈಸುವುದಲ್ಲದೆ, ಕಾಳಜಿಯುಳ್ಳ, ಗೌರವಾನ್ವಿತ ವಾತಾವರಣದಲ್ಲಿ ಪೋಷಿಸಲ್ಪಡುತ್ತಿದ್ದಾರೆ ಎಂದು ಆಫ್‌ಸ್ಟೆಡ್ ಹೇಳಿದೆ. ಶಾಲೆಯ ಪರಿಶೀಲನೆಗೆ ಬಂದ ಶಿಕ್ಷಣ ತಜ್ಞರು, ಶಾಲೆಯ ವಿಶಾಲ ಪಠ್ಯಕ್ರಮವನ್ನು ಅದರಲ್ಲೂ ವಿಶೇಷವಾಗಿ ಆರಂಭಿಕ ಸಾಕ್ಷರತೆ ಮತ್ತು ಗಣಿತಶಾಸ್ತ್ರದಲ್ಲಿ, ಹಾಗೆಯೇ ವಿಶೇಷ ಶೈಕ್ಷಣಿಕ ಅಗತ್ಯತೆಗಳು ಮತ್ತು ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಅದರ ಬಲವಾದ ನಿಬಂಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಯುಕೆಯ ಶಿಕ್ಷಣ ಕಾವಲು ಸಂಸ್ಥೆ ಆಫ್‌ಸ್ಟೆಡ್‌ನಿಂದ ಕೃಷ್ಣ ಆವಂತಿ ಶಾಲೆಗೆ ಅತ್ಯುತ್ತಮ ರೇಟಿಂಗ್

ಅಲ್ಲಿನ ಹ್ಯಾರೋ ಆನ್‌ಲೈನ್ ವೆಬ್‌ಸೈಟ್ ಪ್ರಕಾರ ಯುಕೆಯ ಶಿಕ್ಷಣ ತಜ್ಞರು 2025ರ ಜೂನ್ 24-25 ರಂದು ಶಾಲೆಗೆ ಭೇಟಿ ನೀಡಿದ್ದು ಸೆಪ್ಟೆಂಬರ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಸಂತೋಷವಾಗಿದ್ದಾರೆ ಮತ್ತು ಅವರ ಶೈಕ್ಷಣಿಕ ಸಾಧನೆ ಮತ್ತು ವೈಯಕ್ತಿಕ ಅಭಿವೃದ್ಧಿಯ ಬಗ್ಗೆ ಶಾಲೆಯ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸುತ್ತಿದ್ದಾರೆ. ಈ ಶಾಲೆಯು ಅವರ ಹಿನ್ನೆಲೆ ಅಥವಾ ಆರಂಭಿಕ ಹಂತವನ್ನು ಲೆಕ್ಕಿಸದೆ ಎಲ್ಲಾ ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷಿಯಾಗಿದೆ, ವಿದ್ಯಾರ್ಥಿಗಳು ಈ ಮಹತ್ವಾಕಾಂಕ್ಷೆಯನ್ನು ಹಂಚಿಕೊಳ್ಳುತ್ತಾರೆ. ಇದು ಅವರ ಅನುಕರಣೀಯ ವರ್ತನೆಗಳು ಮತ್ತು ಪ್ರಯತ್ನಗಳಲ್ಲಿ ಕಾಣುತ್ತಿದೆ. ಅವರು ಅಸಾಧಾರಣವೆನ್ನುವಂತೆ ಉತ್ತಮವಾಗಿ ಸಾಧಿಸಿದ್ದಾರೆ. ಇಲ್ಲಿ ಅವರ ಕಲಿಕೆಯ ಮುಂದಿನ ಹಂತಕ್ಕೆ ಚೆನ್ನಾಗಿ ಸಿದ್ಧರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಈ ಶಾಲೆಯ ಬಗ್ಗೆ ಹೆಮ್ಮೆಪಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳು ಹಾಗೂ ಶಾಲೆಯ ಆಡಳಿತ ವರ್ಗ ಸಂಸ್ತೆಯನ್ನು ಅಂತಹ ಶ್ರಮಶೀಲ, ಯಶಸ್ವಿ ಕಲಿಕಾ ವಾತಾವರಣವನ್ನಾಗಿ ಮಾಡುವಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಅನೇಕ ವಿದ್ಯಾರ್ಥಿಗಳು ನಾಯಕತ್ವ ವಹಿಸುತ್ತಾರೆ. ಮಕ್ಕಳು ಶಾಲಾ ಮಂಡಳಿ ಮತ್ತು ಕಲಾ ಮಂಡಳಿಯ ಸದಸ್ಯರಾಗಿ ಮತ್ತು ಪರಿಸರದ ಬಗ್ಗೆ ತಮ್ಮ ಜವಾಬ್ದಾರಿಗಳ ಬಗ್ಗೆ ಉತ್ಸುಕರಾಗಿರುವ 'ಪರಿಸರ ಯೋಧರು' ಆಗಿದ್ದಾರೆ. ಈ ಶಾಲೆಯ ಪ್ರಾಂಶುಪಾಲರಾದ ಶೃತಿ ಗಾಧಿಯಾ ಈ ಮನ್ನಣೆಯ ಹಿಂದೆ ಇಡೀ ಶಾಲಾ ಸಮುದಾಯದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವಿದೆ ಎಂದು ಹೇಳಿದ್ದಾರೆ.

ಈ ವರದಿಯು ನಾವು ಒದಗಿಸುವ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ನಾವು ಬೆಳೆಸಿದ ಪೋಷಣೆಯ ವಾತಾವರಣವನ್ನು ಗುರುತಿಸುತ್ತದೆ. ಇದು ಆಧ್ಯಾತ್ಮಿಕವಾಗಿ ಕರುಣೆಯುಳ್ಳ ಬದಲಾವಣೆ ತರುವವರನ್ನು ಅಭಿವೃದ್ಧಿಪಡಿಸುವ ನಮ್ಮ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಬಲವಾದ ಬೋಧನೆ ಮತ್ತು ಕಲಿಕೆಯ ಅಭ್ಯಾಸಗಳಿಗೆ ನಮ್ಮ ಬದ್ಧತೆ ಮತ್ತು ಶ್ರೀಮಂತ, ಆಕರ್ಷಕ ಪಠ್ಯಕ್ರಮವನ್ನು ನೀಡುವುದರಿಂದ ನಮ್ಮ ಕಲಿಯುವವರ ಜೀವನದಲ್ಲಿ ಆಳವಾದ ಬದಲಾವಣೆ ಉಂಟಾಗುತ್ತಿದೆ ಎಂದು ತಪಾಸಣೆಯ ಸಂಶೋಧನೆಗಳು ದೃಢಪಡಿಸುತ್ತವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಪಠ್ಯಕ್ರಮದ ಜೊತೆ ಯೋಗ, ಸಂಸ್ಕೃತ, ಧ್ಯಾನ ಮೌಲ್ಯಾಧಾರಿತ ಕಲಿಕೆ

2008 ರಲ್ಲಿ ಪ್ರಾರಂಭವಾದ ಈ ಕೃಷ್ಣ ಅವಂತಿ ಪ್ರಾಥಮಿಕ ಶಾಲೆಯು, ಯುಕೆ ರಾಷ್ಟ್ರೀಯ ಪಠ್ಯಕ್ರಮದ ಜೊತೆ ಯೋಗ, ಸಂಸ್ಕೃತ, ಧ್ಯಾನ ಮತ್ತು ಮೌಲ್ಯಾಧಾರಿತ ಕಲಿಕೆ ಸೇರಿದಂತೆ ಹಿಂದೂ ಸಂಪ್ರದಾಯಗಳೊಂದಿಗೆ ಸಂಯೋಜಿಸುವ ವಿಶಿಷ್ಟ ಪಠ್ಯಕ್ರಮವನ್ನು ನೀಡುತ್ತದೆ. ಶಾಲೆಯು ವೈವಿಧ್ಯಮಯ ವಿದ್ಯಾರ್ಥಿ ಸಮೂಹಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ನೈತಿಕ ಬೆಳವಣಿಗೆಗೆ ಒತ್ತು ನೀಡುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಾಡಿನ ಮಧ್ಯೆ ಭೂಮಿಗಾಗಿ ಅಮ್ಮ ಮಗಳ ಭೀಕರ ಕಾಳಗ: ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ
ಇದನ್ನೂ ಓದಿ: ಫೀಸ್ ಕಟ್ಟದ್ದಕ್ಕೆ ವಿದ್ಯಾರ್ಥಿಯನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಸಿದ ಶಾಲೆ