- Home
- Entertainment
- TV Talk
- ಅಸುರನ ಹುಚ್ಚು ಬಿಡಿಸಿದ ಬಿಗ್ ಮನೆಯ ಪುಟ್ಟಿ: ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ
ಅಸುರನ ಹುಚ್ಚು ಬಿಡಿಸಿದ ಬಿಗ್ ಮನೆಯ ಪುಟ್ಟಿ: ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ
Bigg Boss Kananda 12: ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿ ಅವರ ಅಡುಗೆಗೆ ಟೀ ಪುಡಿ ಸೇರಿಸಿದಾಗ ಜಗಳ ಪ್ರಾರಂಭವಾಯಿತು. ಇದು ರಕ್ಷಿತಾ, ಸುಧಿ ಮತ್ತು ಮಂಜು ಭಾಷಿಣಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ, ಕೊನೆಗೆ ರಕ್ಷಿತಾ ಕಣ್ಣೀರು ಹಾಕಿದರು.

ಜಗಳದಿಂದಲೇ ಶುರು
ಇಂದಿನ ಸಂಚಿಕೆ ಜಗಳದಿಂದಲೇ ಶುರುವಾಯ್ತು. ಜಂಟಿಗಳ ಪೈಕಿ ಮಂಜು ಭಾಷಿಣಿ ಮತ್ತು ರಾಶಿಕಾ ಅಡುಗೆ ಮಾಡುತ್ತಿದ್ದರು. ಮತ್ತೊಂದೆಡೆ ಒಂಟಿಯಾಗಿ ರಕ್ಷಿತಾ ಶೆಟ್ಟಿ ಹಾಗಲಕಾಯಿಯ ಪದಾರ್ಥ ತಯಾರಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಸುರ ಕಾಕ್ರೋಚ್ ಸುಧಿ, ರಕ್ಷಿತಾ ತಯಾರಿಸುತ್ತಿದ್ದ ಅಡುಗೆಗೆ ಟೀ ಪುಡಿ ಸೇರಿಸುತ್ತಾರೆ. ಇದರಿಂದ ಕೋಪಗೊಂಡ ರಕ್ಷಿತಾ ಶೆಟ್ಟಿ, ಟೀ ಸೇರಿಸಿದ ಹಾಗಲಕಾಯಿಯನ್ನು ಚಿಕನ್ ಅಡುಗೆಗೆ ಸೇರಿಸುತ್ತಾರೆ
ನನ್ನ ಹೊಟ್ಟೆಗೆ ಬೆಲೆ ಇಲ್ಲವಾ?
ಚಿಕನ್ ಅಡುಗೆ ಹಾಳು ಮಾಡಲು ಪ್ರಯತ್ನಿಸಿದ್ದಕ್ಕೆ ಮಂಜು ಭಾಷಿಣಿ, ಇದು 12 ಜನರ ಊಟವಾಗಿದೆ. ಊಟದ ವಿಷಯದಲ್ಲಿ ಈ ರೀತಿ ಎಲ್ಲಾ ಮಾಡಬೇಡಿ. ನಿಮ್ಮ ಆಹಾರ ಹಾಳು ಮಾಡಿದವರನ್ನು ಪ್ರಶ್ನೆ ಮಾಡಿ ಎಂದು ಹೇಳುತ್ತಾರೆ. ಇದೇ ವೇಳೆ ಅಲ್ಲಿಗೆ ಬಂದ ಅಸುರ ಕಾಕ್ರೋಚ್, ಅದು 12 ಜನರ ಊಟ ಎಂದು ಹೇಳುತ್ತಾರೆ. ಇದಕ್ಕೆ ಮರು ಉತ್ತರ ನೀಡಿದ ರಕ್ಷಿತಾ ಶೆಟ್ಟಿ, ನನ್ನ ಹೊಟ್ಟೆಗೆ ಬೆಲೆ ಇಲ್ಲವಾ ಎಂದು ಪ್ರಶ್ನೆ ಮಾಡುತ್ತಾರೆ.
ಸಹಾಯ ಕೇಳಿದ ಸುಧಿ
ನೀವು ಕೆಟ್ಟ ರಾಕ್ಷಸ. ನೀವು ಒಳ್ಳೆಯವರಲ್ಲ. ನನ್ನ ಊಟಕ್ಕೆ ಮೋಸ ಮಾಡಿದ್ದು ತಪ್ಪು ಎಂದು ಕಾಕ್ರೋಚ್ ಸುಧಿಯವರನ್ನು ರಕ್ಷಿತಾ ಶೆಟ್ಟಿ ಸಾಲು ಸಾಲು ಪ್ರಶ್ನೆ ಮಾಡುತ್ತಾರೆ. ಸುಧಿ ಎಲ್ಲೇ ಹೋದ್ರೂ ಹಿಂದೆ ಹಿಂದೆಯೇ ಹೋಗಿ ರಕ್ಷಿತಾ ಪ್ರಶ್ನಿಸುತ್ತಿದ್ದರು. ಇದರಿಂದ ಕಾಕ್ರೋಚ್ ಸುಧಿ ಸೇವಕರ ಸಹಾಯ ಪಡೆದು ರಕ್ಷಿತಾರನ್ನು ತಡೆಯುವಂತೆ ಹೇಳುತ್ತಾರೆ.
ಮಂಜು ಭಾಷಿಣಿ ವರ್ಸಸ್ ರಕ್ಷಿತಾ ಶೆಟ್ಟಿ
ಇದೇ ಸಂದರ್ಭದಲ್ಲಿ ಮಂಜು ಭಾಷಿಣಿ ಮತ್ತು ರಕ್ಷಿತಾ ನಡುವೆಯೂ ವಾಗ್ವಾದ ನಡೆಯುತ್ತದೆ. ಕೈಯಲ್ಲಿರುವ ಪ್ಯಾನ್ ಎಸೆಯುವಂತೆ ಮಾಡಿ ರಕ್ಷಿತಾ ಶೆಟ್ಟಿಯನ್ನು ಮಂಜು ಭಾಷಿಣಿ ಹೆದರಿಸುತ್ತಾರೆ. ಇದರಿಂದ ಒಂದು ಕ್ಷಣ ರಕ್ಷಿತಾ ಶೆಟ್ಟಿ ಹೆದರುತ್ತಾರೆ. ಆದರೂ ರಕ್ಷಿತಾ ಶೆಟ್ಟಿ ತಮ್ಮ ವಾದವನ್ನು ಮುಂದುವರಿಸುತ್ತಾರೆ.
ಯಾವಳ್ಯಾವಳು ನಾಯಿ ಅಂದಿದ್ದು?
ಇಷ್ಟರಲ್ಲಿ ರಕ್ಷಿತಾ ಶೆಟ್ಟಿ ಬೆಂಬಲಕ್ಕೆ ಇತರೆ ಒಂಟಿಗಳಾದ ಅಶ್ವಿನಿ ಗೌಡ ಮತ್ತು ಧನುಷ್ ಆಗಮಿಸುತ್ತಾರೆ. ಕಾಕ್ರೋಚ್ ಸುಧಿ ಬಳಿ ಹೋದ ಧನುಷ್, ಊಟದ ವಿಷಯದಲ್ಲಿ ಮಾಡಿದ್ದು ತಪ್ಪು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆ ಹುಡುಗಿ ತನ್ನ ಪಾಡಿಗೆ ಏನೋ ಅಡುಗೆ ಮಾಡಿಕೊಳ್ಳುತ್ತಿದ್ದಳು. ಆಕೆಗೆ ತೊಂದರೆ ಕೊಟ್ಟಿದ್ದು ಯಾಕೆ? ಆಕೆಯ ಆಹಾರ ಹಾಳು ಮಾಡಿದ್ದೇಕೆ ಎಂದು ಅಶ್ವಿನಿ ಗೌಡ ಪ್ರಶ್ನೆ ಮಾಡಿದರು. ಇದೇ ವೇಳೆ ಅಶ್ವಿನಿ ಗೌಡರಿಗೆ ಏನು ಕೇಳಿಸಿತೋ ಗೊತ್ತಿಲ್ಲ, ಯಾವಳ್ಯಾವಳು ನಾಯಿ ಅಂದಿದ್ದು ಎಂದು ಜೋರಾಗಿ ಗುಡುಗುತ್ತಾರೆ.
ಇದನ್ನೂ ಓದಿ: ಉರಿಯೋ ಬೆಂಕಿಗೆ ತುಪ್ಪ ಸುರಿದು ಚೆನ್ನಾಗಿದೆ ಚೆನ್ನಾಗಿದೆ ಎಂದ ಜಾನ್ವಿ & ಅಶ್ವಿನಿ ಗೌಡ
ಕಣ್ಣೀರಿಟ್ಟ ರಕ್ಷಿತಾ ಶೆಟ್ಟಿ?
ಕಾಕ್ರೋಚ್ ಸುಧಿ ಮತ್ತು ಮಂಜು ಭಾಷಿಣಿ ಜೊತೆ ಏನೆಲ್ಲಾ ನಡೆಯಿತು ಎಂದು ಹೇಳುತ್ತಾ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದರು. ಅಳುತ್ತಿದ್ದ ರಕ್ಷಿತಾ ಅವರನ್ನು ಸಮಾಧಾನ ಮಾಡಿದರು. ಅಷ್ಟರಲ್ಲಿ ತಟ್ಟೆಗೆ ಊಟ ಹಾಕಿಕೊಂಡು ಬಂದ ಮಲ್ಲಮ್ಮ, ಅಳೋದು ಸಾಕು. ಮುಖ ತೊಳೆದುಕೊಂಡು ಊಟ ಮಾಡು ಎಂದು ಹೇಳುತ್ತಾರೆ.
ಇದನ್ನೂ ಓದಿ: ರಾಜಮಾತೆ ಅಶ್ವಿನಿ ಗೌಡಗೆ ಮುಳುವಾಗುತ್ತಾ ಎರಡು ಪದ? ಕ್ಲಾಸ್ ತೆಗೆದುಕೊಳ್ತಾರಾ ಸುದೀಪ್?