- Home
- Entertainment
- Sandalwood
- 200ಕ್ಕೂ ಹೆಚ್ಚು ಕತೆ ರಿಜೆಕ್ಟ್ ಮಾಡಿ 'ಉಗ್ರಾಯುಧಮ್' ಒಪ್ಪಿಕೊಂಡೆ: ನಟ ಶ್ರೀಮುರಳಿ ಹೇಳಿದ್ದೇನು?
200ಕ್ಕೂ ಹೆಚ್ಚು ಕತೆ ರಿಜೆಕ್ಟ್ ಮಾಡಿ 'ಉಗ್ರಾಯುಧಮ್' ಒಪ್ಪಿಕೊಂಡೆ: ನಟ ಶ್ರೀಮುರಳಿ ಹೇಳಿದ್ದೇನು?
ಐತಿಹಾಸಿಕ ಕಥೆಗಾಗಿ ಕಾಯುತ್ತಿದ್ದ ನನಗೆ ಉಗ್ರಾಯುಧಮ್ ಕಥೆ ಬಹಳ ಇಷ್ಟವಾಯ್ತು. ನನ್ನ ಇನ್ನೊಂದು ಸಿನಿಮಾ ಪರಾಕ್‌ಗೂ ಮೊದಲೇ ಈ ಸಿನಿಮಾದ ಶೂಟಿಂಗ್ ನಡೆಯಲಿದೆ ಎಂದು ನಟ ಶ್ರೀಮುರಳಿ ತಿಳಿಸಿದರು.

ಡಾ ರಾಜ್ ಚಿತ್ರಗಳೇ ಸ್ಫೂರ್ತಿ
‘ನನ್ನ ನಿರ್ದೇಶನದ ಮೊದಲ ಎರಡು ಸಿನಿಮಾಗಳು ಐತಿಹಾಸಿಕ ಕಥೆಗಳನ್ನೇ ಹೊಂದಿವೆ. ಇಂಥಾ ಸಿನಿಮಾ ಮಾಡಲು ಡಾ ರಾಜ್ ಅವರ ಚಿತ್ರಗಳೇ ಸ್ಫೂರ್ತಿ’ ಎಂದು ನಿರ್ದೇಶಕ ಪುನೀತ್ ರುದ್ರನಾಗ್ ಹೇಳಿದ್ದಾರೆ.
ಬಂಡೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ
ಜಯರಾಮ್ ದೇವಸಮುದ್ರ ನಿರ್ಮಾಣದ ಶ್ರೀಮುರಳಿ ನಾಯಕನಾಗಿರುವ ಪುನೀತ್ ನಿರ್ದೇಶನದ ‘ಉಗ್ರಾಯುಧಮ್’ ಸಿನಿಮಾದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆಯಿತು.
ಉಗ್ರಂ ಸಿನಿಮಾಕ್ಕೂ ಇದಕ್ಕೂ ಸಂಬಂಧ ಇಲ್ಲ
ಈ ವೇಳೆ ಮಾತನಾಡಿದ ಪುನೀತ್, ಉಗ್ರಾಯುಧಂ ಸಿನಿಮಾದ್ದು 700 ವರ್ಷ ಹಿಂದಿನ ಐತಿಹಾಸಿಕ ಕಥೆ. ಶ್ರೀಮುರಳಿ ಅವರ ಈ ಹಿಂದಿನ ಉಗ್ರಂ ಸಿನಿಮಾಕ್ಕೂ ಇದಕ್ಕೂ ಸಂಬಂಧ ಇಲ್ಲ. ಸಕಲೇಶಪುರದ 148 ಎಕರೆಗಳಷ್ಟು ವಿಶಾಲವಾದ ಎಸ್ಟೇಟ್‌ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯಲಿದೆ. ಈ ಚಿತ್ರದ ನಾಯಕಿಯಾಗಿ ಕನ್ನಡತಿಯೇ ಇರುತ್ತಾರೆ ಎಂದರು.
ಮಾತೃಭಾಷೆಯ ಸಿನಿಮಾಕ್ಕೆ ಆದ್ಯತೆ
ನಾಯಕ ಶ್ರೀಮುರಳಿ, ಬಘೀರ ಸಿನಿಮಾದ ಬಳಿಕ 200ಕ್ಕೂ ಹೆಚ್ಚು ಕತೆ ಕೇಳಿದ್ದೇನೆ. ಅದರಲ್ಲಿ ಪರಭಾಷೆಯ ಚಿತ್ರಗಳೂ ಇದ್ದವು. ಸದ್ಯಕ್ಕೆ ನನ್ನ ಮಾತೃಭಾಷೆಯ ಸಿನಿಮಾಕ್ಕೆ ಆದ್ಯತೆ.
ಕಥೆ ಬಹಳ ಇಷ್ಟವಾಯ್ತು
ಐತಿಹಾಸಿಕ ಕಥೆಗಾಗಿ ಕಾಯುತ್ತಿದ್ದ ನನಗೆ ಉಗ್ರಾಯುಧಮ್ ಕಥೆ ಬಹಳ ಇಷ್ಟವಾಯ್ತು. ನನ್ನ ಇನ್ನೊಂದು ಸಿನಿಮಾ ಪರಾಕ್‌ಗೂ ಮೊದಲೇ ಈ ಸಿನಿಮಾದ ಶೂಟಿಂಗ್ ನಡೆಯಲಿದೆ. ಇದೇ ಚಿತ್ರ ಮೊದಲು ರಿಲೀಸ್ ಆಗಲಿದೆ ಎಂದರು.