ಬೆಂಗಳೂರು (ಜೂ.09): ಸಿಲಿಕಾನ್ ಸಿಟಿ ಬೆಂಗಳೂರು ಸಂಡೇ ಮೂಡ್‌ನ ಮಧ್ಯೆ, ನೂತನ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ನಗರದ ಪೊಲೀಸ್ ಅಧಿಕಾರಿಗಳನ್ನು ಒಟ್ಟಿಗೆ ಕರೆದು ಸಭೆ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಡಿಸಿಪಿ ಮಟ್ಟದಿಂದ ಹಿಡಿದು ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳವರೆಗೆ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಕಮಿಷನರ್ ಮಾಡಿ ಕಠಿಣ ಸಂದೇಶ ರವಾನಿಸಿದ್ದಾರೆ.
ಈ ಸಭೆಯಲ್ಲಿ ಪ್ರಮುಖ ಅಂಶಗಳಾಗಿ ಅಪರಾಧ ಪ್ರಕರಣಗಳ ಸ್ಥಿತಿ, ಸೈಬರ್ ಕ್ರೈಂ ನಿಯಂತ್ರಣ, ಮಾದಕ ವಸ್ತುಗಳ ಜಾಲ ವಿಸ್ಥಾರ, ಮತ್ತು ಇತ್ತೀಚಿನ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಅವ್ಯವಸ್ಥೆಯ ಬಗ್ಗೆ ವಿಮರ್ಶಾತ್ಮಕ ಚರ್ಚೆ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ. ನೂತನ ಕಮಿಷನರ್ ಸೀಮಂತ್ ಕುಮಾರ್ ಅವರ ಈ ಮೊದಲ ಮ್ಯಾರಥಾನ್ ಮೀಟಿಂಗ್, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಿತವಾಗುವ ನಿರೀಕ್ಷೆಯ ಹೊರೆಯನ್ನು ಹೆಚ್ಚಿಸಿದೆ.
ನಗರದಲ್ಲಿ ರೌಡಿ ಪ್ರಕರಣ, ಗ್ಯಾಂಬ್ಲಿಂಗ್, ಮಟ್ಕಾ, ಬೆಟ್ಟಿಂಗ್ ಕಂಟ್ರೋಲ್ ಮಾಡಬೇಕು. ಮುಖ್ಯವಾಗಿ ರಿಯಲ್ ಎಸ್ಟೇಟ್ ಸೆಟಲ್ ಮೆಂಟ್ ಆದರೆ ಕ್ರಮ ತೆಗೆದುಕೊಳ್ತೇನೆ ಎಂದು ಸೂಚನೆ ನೀಡಿದರು.
04:04 AM (IST) Jun 10
ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಇಮೇಜ್ ವೃದ್ಧಿಸಲು ಸಚಿವ ಸಂಪುಟ ಪುನಾರಚನೆಗೆ ಸೂಚನೆ ನೀಡುವ ದಿಸೆಯಲ್ಲಿ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಖುದ್ದು ವರಿಷ್ಠ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ.
11:13 PM (IST) Jun 09
ಶ್ರೀಲಂಕಾದಿಂದ ಮುಂಬೈಗೆ ಆಗಮಿಸುತ್ತಿದ್ದ ಸಿಂಗಾಪುರ ಮೂಲದ ಸರಕು ಹಡಗು ಕೇರಳ ತೀರದಲ್ಲಿ ಅಗ್ನಿ ದುರಂತಕ್ಕೆ ಗುರಿಯಾಗಿದೆ. ಸ್ಥಳಕ್ಕೆ ಧಾವಿಸಿದ ಭಾರತೀಯ ನೌಕಾಪಡೆ 22 ಸಿಬ್ಬಂದಿ ಪೈಕಿ 18 ಮಂದಿ ರಕ್ಷಿಸಿದ್ದಾರೆ. ನಾಲ್ಪರು ನಾಪತ್ತೆಯಾಗಿದ್ದಾರೆ.
10:31 PM (IST) Jun 09
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
10:30 PM (IST) Jun 09
ಶಾಸಕ ಲಕ್ಷ್ಮಣ ಸವದಿ ಸಂಚರಿಸುತ್ತಿದ್ದ ಕಾರಿಗೆ ಪಿಕ್ ಅಪ್ ವಾಹನ ಡಿಕ್ಕಿಯಾದ ಘಟನೆ ನಡೆದಿದೆ. ಮುಖಾಮುಖಿ ಡಿಕ್ಕಿಯಿಂದ ಶಾಸಕರ ಕಾರು ಜಖಂಗೊಂಡಿದೆ.
10:27 PM (IST) Jun 09
ಭಾರತದಲ್ಲಿ ಉತ್ಪಾದನಾ ವಲಯಕ್ಕೆ ಪೂರಕ ಪರಿಸರ, ಸಂಪನ್ಮೂಲ ಮತ್ತು ಸಶಕ್ತ ಯುವ ಸಮೂಹವಿದ್ದು, ಭವಿಷ್ಯದಲ್ಲಿ ಭಾರತ ಜಾಗತಿಕ ಉತ್ಪಾದನಾ ಹಬ್ ಆಗಿ ಪರಿವರ್ತನೆ ಹೊಂದಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
10:18 PM (IST) Jun 09
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ, ನಮಗೆಲ್ಲಾ ಬಹಳ ದುಃಖವಾಗಿದೆ. ಮುಖ್ಯಮಂತ್ರಿಗಳಂತೂ ಬಹಳ ನೋವು ತಿಂದಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
10:02 PM (IST) Jun 09
ಅದು ಗಡಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.ಇಬ್ಬರು ಶಿಕ್ಷಕರಿದ್ದರು,ಇವರಿಬ್ಬರ ಕಿತ್ತಾಟಕ್ಕೆ ಬೇಸತ್ತಿದ್ದ ಗ್ರಾಮಸ್ಥರು ಈ ಬಾರಿ ಮಕ್ಕಳನ್ನು ಅಡ್ಮಿಷನ್ ಮಾಡಲೂ ಹಿಂದೇಟು ಹಾಕಿದ್ದರು.
09:58 PM (IST) Jun 09
ಉಡುಪಿಯ ಪೆರ್ಣಂಕಿಲ ಗ್ರಾಮದ ಹಳ್ಳಿ ಹುಡುಗಿ ಇದೀಗ ಭಾರತೀಯ ನೌಕಾಪಡೆಯ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್ ಪದವಿ ಪೂರೈಸಿರುವ ಸೀಮಾ ನೌಕಾಪಡೆಯ ಪೈಲೆಟ್ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
09:51 PM (IST) Jun 09
ಸಿಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಅಮಾಯಕರ ಜೀವ ಹೋಗಿದೆ. ಸಿದ್ದರಾಮಯ್ಯ ಅವರಿಂದ ಇಂತಹ ದುರಾಡಳಿತ ನಿರೀಕ್ಷಿಸಿರಲಿಲ್ಲ. ಈಗಲಾದರೂ ಘಟನೆಯ ಹೊಣೆ ಹೊತ್ತುಕೊಳ್ಳಿ ಎಂದು ವಿ.ಸೋಮಣ್ಣ ಆಗ್ರಹಿಸಿದರು.
09:37 PM (IST) Jun 09
ವಿದೇಶಿ ಯುವತಿಯೊಬ್ಬಳು 9 ಸಾವಿರ ರೂಪಾಯಿ ಅಥ್ವಾ ತನ್ನ ಜೊತೆ ಡೇಟಿಂಗ್ ಆಫರ್ ಕೊಟ್ಟಾಗ ಈ ಯುವಕ ಮಾಡಿದ್ದೇನು ನೋಡಿ! ಉತ್ತರ ಕೇಳಿ ಸುಸ್ತಾದ ಬೆಡಗಿ
09:27 PM (IST) Jun 09
ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಪಿತ್ತಕೋಶದಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.
09:08 PM (IST) Jun 09
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಕೈಗೊಳ್ಳಬೇಕಿದ್ದ ಬಾಹ್ಯಾಕಾಶ ಯಾತ್ರೆ ದಿಢೀರ್ ರದ್ದಾಗಿದೆ. Axiom-4 ಉಡಾವಣೆ ರದ್ದಾಗಿರುವ ಕುರಿತು ಇಸ್ರೋ ಸ್ಪಷ್ಟಪಡಿಸಿದೆ.
08:45 PM (IST) Jun 09
ಪತಿಯನ್ನು ಹನಿಮೂನ್ಗೆ ಕರೆದೊಯ್ದು ಅಲ್ಲಿಯೇ ಆತನನ್ನು ಮುಗಿಸಿದ ಹಂತಕಿ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದ ರೀತಿಯಲ್ಲಿಯೇ ಸಿಕ್ಕಿಬಿದ್ದಿದ್ದಾಳೆ! ಏನದು?
08:23 PM (IST) Jun 09
ಉದ್ಯಮಿ ವಿಜಯ್ ಮಲ್ಯ ಆಸ್ತಿಗಳೆಲ್ಲವು ಮುಟ್ಟುಗೋಲಾಗಿದೆ. ವಿದೇಶಗಳಲ್ಲಿರುವ ಉದ್ಯಮಗಳಿಂದ ಕೋರ್ಟ್, ಕೇಸ್ ನಡೆಸುತ್ತಿದ್ದಾರೆ. ಆದರೆ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಕಟ್ಟಿದ ವಾಚ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕಾರಣ ಇದು ಲಿಮಿಟೆಡ್ ಎಡಿಶನ್ ಹ್ಯುಬ್ಲೋಟ್ ವಾಚ್, ಇದರ ಬೆಲೆ ಎಷ್ಟು ಗೊತ್ತಾ?
07:51 PM (IST) Jun 09
07:38 PM (IST) Jun 09
ದಿನಾ 7,000 ಹೆಜ್ಜೆ ನಡೆಯೋದ್ರಿಂದ ಆಗೋ ಅದ್ಭುತ ಬದಲಾವಣೆಗಳ ಬಗ್ಗೆ ತಿಳ್ಕೊಳ್ಳಿ.
07:36 PM (IST) Jun 09
ಪ್ರತಿ ದಿನ 3 ಜಿಬಿ ಡೇಟಾ ಉಚಿತ, ಜಿಯೋಹಾಟ್‌ಸ್ಟಾರ್ ಸೇರಿ 17 ಒಟಿಟಿ ಉಚಿತ, 350 ಲೈವ್ ಟಿವಿ ಸಬ್‌ಸ್ಕ್ರಿಪ್ಶನ್, ಅನ್‌ಲಿಮಿಟೆಡ್ ಕಾಲ್, 100 ಎಸ್ಎಂಎಸ್ ಸೇರಿದಂತೆ ಹಲವು ಆಫರ್ ಘೋಷಣೆಯಾಗಿದೆ. ಇದು ವಿವೋ V50e ಹಾಗೂ ವಿಐ ಜಂಟಿಯಾಗಿ ಘೋಷಿಸಿದ ಆಫರ್
07:15 PM (IST) Jun 09
06:52 PM (IST) Jun 09
ಮಂಗಳೂರಿನಲ್ಲಿ 1.70ಲಕ್ಷ ಕಿಲೋಗ್ರಾಂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಪ್ಲಾಸ್ಟಿಕ್ ಅನ್ನು ನಾಲ್ಕು MRF ಘಟಕಗಳಿಂದ ಸಂಗ್ರಹಿಸಿ, ತಲಪಾಡಿ–ನಂತೂರು ಮತ್ತು ಸುರತ್ಕಲ್–ಸಾಸ್ತಾನ ನಡುವಿನ ಸೇವಾ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ.
06:40 PM (IST) Jun 09
ಬಿಜೆಪಿ, ಮೋದಿಯಿಂದ ದೇಶ ಒಗ್ಗಟ್ಟಾಗಿಲ್ಲ. ಅಂಬೇಡ್ಕರ್ ಸಂವಿಧಾನದಿಂದ ಮಾತ್ರ ದೇಶ ಒಗ್ಗಟ್ಟಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
06:30 PM (IST) Jun 09
ಸಿಕ್ಕಿಂಗೆ ಹನಿಮೂನ್ ತೆರಳಿದ ನವ ಜೋಡಿಯ ದುರಂತ ಕತೆ. ಮದುವೆಯಾದ ಕೆಲವೇ ದಿನಗಳಲ್ಲಿ ಸಿಕ್ಕಿಂ ತಲುಪಿದ ಈ ಜೋಡಿ ನಾಪತ್ತೆಯಾಗಿ 11 ದಿನಗಳು ಉರುಳಿದೆ. ಪೋಷಕರು, ಕುಟುಂಬಸ್ಥರು ಸಿಕ್ಕಿಂಗೆ ತೆರಳಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ.ಆದರೆ ಇದುವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಏನಿದು ಘಟನೆ?
06:29 PM (IST) Jun 09
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಈ ಜಿಲ್ಲೆಯಲ್ಲಿ ಭಾರತದ ಭೂಪಟದಲ್ಲಿ ಗುರುತಿಸುವ ಕೆಲಸ ಮಾಡುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
06:24 PM (IST) Jun 09
06:08 PM (IST) Jun 09
ಟಾಟಾ ಮೋಟಾರ್ಸ್ ₹33,000-₹35,000 ಕೋಟಿ ಹೂಡಿಕೆ ಮಾಡಲಿದೆ. ಈ ಹೂಡಿಕೆಯು 30 ಹೊಸ ಉತ್ಪನ್ನಗಳನ್ನು ಒಳಗೊಂಡಿದೆ, ಜೊತೆಗೆ EV ಗಳ ಮೇಲೆ ಗಮನ ಹರಿಸಲಾಗಿದೆ. ಕಂಪನಿಯು FY27 ರ ವೇಳೆಗೆ ಪಿವಿ ಮಾರುಕಟ್ಟೆಯಲ್ಲಿ 16% ಪಾಲನ್ನು ಮತ್ತು EV ಮಾರಾಟದಲ್ಲಿ 20% ಪಾಲನ್ನು ಗುರಿಯಾಗಿಸಿಕೊಂಡಿದೆ.
06:01 PM (IST) Jun 09
05:32 PM (IST) Jun 09
04:48 PM (IST) Jun 09
04:45 PM (IST) Jun 09
ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮೂಲಕ ಶೇಕ್ ಹಸೀನಾ ಸರ್ಕಾರವನ್ನು ಉರುಳಿಸಿದ ನಾಯಕ ನ್ಯೂಟನ್ ದಾಸ್, ಭಾರತದ ಪಶ್ಚಿಮ ಬಂಗಾಳದಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಅನ್ನೋದನ್ನು ನಿರ್ಧರಿಸುತ್ತಾನೆ. ಇದು ನಿಜ, ಈತ ಬಾಂಗ್ಲಾದೇಶದ ಪ್ರಜೆ, ಆದರೆ ಪಶ್ಚಿಮ ಬಂಗಾಳದ ಮತದಾರರ ಗುರುತಿನ ಚೀಟಿಯೂ ಈತನಲ್ಲಿದೆ.
04:39 PM (IST) Jun 09
04:12 PM (IST) Jun 09
ಮೆಘಾಲಯದ ಹನಿಮೂನ್ ಸಂಭ್ರಮದಲ್ಲಿ ಹತ್ಯೆಯಾದ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪತ್ನಿ ಸೋನಮ್ ಆಕೆಯ ಗೆಳೆಯ ಅರೆಸ್ಟ್ ಆಗಿದ್ದಾರೆ.ಆದರೆ ಕುಟುಂಬಸ್ಥರು ಸ್ವಲ್ಪ ಗಮನಿಸಿದರೆ ಈ ಹತ್ಯೆ ತಪ್ಪಿಸಬಹುದಿತ್ತು.
04:09 PM (IST) Jun 09
ಇಶಾ ಅಂಬಾನಿ ಯಶಸ್ಸಿನ ಕಥೆ: ರಿಲಯನ್ಸ್ ಅಲ್ಲ, ಬೇರೆ ಕಂಪನಿಯಲ್ಲಿ ಕೆರಿಯರ್ ಶುರು ಮಾಡಿದ್ರು ಇಶಾ! ಭಾರತದ ಯುವ, ಯಶಸ್ವಿ ಉದ್ಯಮಿಯಾಗಿದ್ದು ಹೇಗೆ? ಇಡೀ ಕಥೆ, ಕೆರಿಯರ್-ವಿದ್ಯಾಭ್ಯಾಸದ ಕುತೂಹಲಕಾರಿ ಸಂಗತಿಗಳನ್ನು ಓದಿ.
04:07 PM (IST) Jun 09
03:45 PM (IST) Jun 09
03:44 PM (IST) Jun 09
ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟ ಯಾದಗಿರಿಯ ಶಿವಲಿಂಗ ಕುಟುಂಬಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಡಿಸಿ ಕಚೇರಿಯಲ್ಲಿ 30 ನಿಮಿಷ ನಿಲ್ಲಿಸಿ ಪರಿಹಾರ ನೀಡಿದ್ದಾರೆ. ಇತರೆಡೆ ಸಂತ್ರಸ್ತರ ಮನೆಗೇ ತೆರಳಿ ಪರಿಹಾರ ನೀಡಿದ್ದರೆ, ಯಾದಗಿರಿಯಲ್ಲಿ ಮಾತ್ರ ಸಂತ್ರಸ್ತ ಕುಟುಂಬಕ್ಕೆ ಅಗೌರವ ತೋರಿದ್ದಾರೆ.
03:29 PM (IST) Jun 09
ಲೀವ್ ಇನ್ ರಿಲೇಶನ್‌ಶಿಪ್ ಯುವ ಸಮೂಹದ ಟ್ರೆಂಡ್ ಆಗಿ ಬದಲಾಗಿದೆ. ಆದರೆ ಈ ಟ್ರೆಂಡ್ ಅಲ್ಲ ಯೋಚನೆ ಮಾಡುವ ಮೊದಲೇ ಇವರಿಬ್ಬರು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬರೋಬ್ಬರಿ 70 ವರ್ಷ ಬಳಿಕ ಇದೀಗ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದೆ. ಗಂಡಿನ ವಯಸ್ಸು 95 ಹಾಗೂ ವಧು ವಯಸ್ಸು 90.
03:27 PM (IST) Jun 09
03:25 PM (IST) Jun 09
ಅಮೃತಧಾರೆಯಲ್ಲಿ ಗೌತಮ್ ದಿವಾನ್ ಆಗಿ ಮಿಂಚುತ್ತಿರುವ ನಟ ರಾಜೇಶ್ ನಟರಂಗ ಇತ್ತೀಚಿಗೆ ಗಾಜನೂರಿನಲ್ಲಿನ ಅಣ್ಣಾವ್ರ ಮನೆಗೆ ಭೇಟಿ ನೀಡಿ ಧನ್ಯತಾ ಭಾವವನ್ನು ಅನುಭವಿಸಿದ್ದಾರೆ.
03:04 PM (IST) Jun 09
02:47 PM (IST) Jun 09
02:36 PM (IST) Jun 09