ಕೊಪ್ಪಳ: ಹೊಸ ಪಕ್ಷ ಕಟ್ಟುವ ಕುರಿತು ಈಗಲೇ ಏನು ಹೇಳಲು ಆಗದು, ರಾಜ್ಯಾದ್ಯಂತ ಸುತ್ತಾಟ ನಡೆಸಿ ಜನರ ಅಭಿಪ್ರಾಯ ಪಡೆದ ನಂತರ ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಯಾರಾದರೂ ಸಿಎಂ ಆಗಲಿ ನಮಗೆ ಗೊತ್ತಿಲ್ಲ. ಆದರೆ, ಉತ್ತಮ ಆಡಳಿತ ಕೊಡಲಿ ಎಂದರು.
ಪಂಚಮಸಾಲಿ ಸಮುದಾಯದ ಎರಡೂ ಟ್ರಸ್ಟ್‌ಗಳಲ್ಲಿ ಭ್ರಷ್ಟರೇ ಇದ್ದಾರೆ. ಟ್ರಸ್ಟ್ ರಾಜಕೀಯೇತರ ಇರಬೇಕು. ರಾಜಕೀಯದಿಂದ ಕೂಡಿದ್ದರೆ ಹೀಗೆಯೇ ಆಗುವುದು. ಕೂಡಲಸಂಗಮ ಮತ್ತು ಹರಿಹರ ಪಂಚಮಸಾಲಿ ಟ್ರಸ್ಟ್‌ಗಳು ರದ್ದಾಗಬೇಕು ಎಂದರು.
ಐಪಿಎಲ್ ಟಿಕೆಟ್ ಕೇಳಿದ್ದರಿಂದ ಬೆಂಗಳೂರಿಂದ ಗುಜರಾತಿಗೆ ಫೈನಲ್ ಪಂದ್ಯ ಕಿತ್ತುಕೊಂಡು ಹೋಯಿತು. ತಮ್ಮ ಭಾಗದ ಸಮಸ್ಯೆ ಕೇಳದವರು ಐಪಿಎಲ್ ಟಿಕೆಟ್ ಕೇಳುತ್ತಾರೆ. ತಮ್ಮ ಕುಟುಂಬದವರಿಗೆ ಎಸಿ ಕುರ್ಚಿ ಕೇಳುತ್ತಾರೆ ಅಂದರೆ ಏನರ್ಥ? ಎಂದು ಕಿಡಿಕಾರಿದರು.
11:16 PM (IST) May 09
ಕರ್ನಾಟಕದ ಸವದಿ ಗ್ರಾಮದ ಯುವಕನ ಸಾಧನೆಗೆ ದೇಶವೆ ಸಲಾಂ ಹೇಳಿದೆ. ಪ್ರತಿ ದಿನ ಲೈಬ್ರರಿಗೆ ತೆರಳಿ ಅಧ್ಯಯನ ಮಾಡುತ್ತಾ ಐಎಫ್ ಪರೀಕ್ಷೆ ಬರೆದ ರೈತನ ಮಗ, ಇದೀಗ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ.
10:27 PM (IST) May 09
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಿದೆ. ಮೆಟ್ರೋ ಸಂಚಾರ ಸ್ಥಗಿತ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದೆ. ಬಿಎಂಆರ್‌ಸಿಎಲ್ ಪ್ರಯಾಣಿಕರಿಗಾಗಿ ಹೊರಡಿಸಿದ ಹೊಸ ಆದೇಶ ಏನು?
07:38 PM (IST) May 09
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ವಿಶೇಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯಾವುದೇ ರಾಸಾಯನಿಕ ಬಳಸದ ಈ ಮಾವು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗಾಗಿ ಭಾರಿ ಬೇಡಿಕೆ ಇದೆ.
07:38 PM (IST) May 09
07:15 PM (IST) May 09
06:28 PM (IST) May 09
ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ..
06:14 PM (IST) May 09
ಈ ಪಾತ್ರವನ್ನು ನಾನು ಒಪ್ಪಿಕೊಂಡ ಮೇಲೆ ಶೂಟಿಂಗ್‌ಗೂ ಮೊದಲು ರಂಜನಿ ಅವರು ಖುಷಿಯಲ್ಲಿದ್ದಾಗ ಹೇಗಿರ್ತೀನಿ, ನನ್ನ ಹತ್ರ ತುಂಬ ಪರ್ಸನಲ್ ವಿಚಾರಗಳನ್ನು ಕೇಳಿದ್ರು ಎಂದರು ಮೇಘನಾ ಗಾಂವ್ಕರ್.
05:30 PM (IST) May 09
ದುನಿಯಾ ವಿಜಯ್ ಎರಡನೇ ಮಗಳು ಮೋನಿಷಾ ವಿಜಯ್ ಕುಮಾರ್ ಚೊಚ್ಚಲ ಸಿನಿಮಾ ಇದು. ಹಾಗೇ ವಿಜಯ್ ನಿರ್ದೇಶನದಲ್ಲಿ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರೋ ಚಿತ್ರವೂ ಹೌದು.
02:04 PM (IST) May 09
12:59 PM (IST) May 09
Sirsi Family Dispute: ಖಾಸಗಿ ಜಮೀನಿನಲ್ಲಿ ಯಕ್ಷಗಾನ ಮಾಡುವ ಬಗ್ಗೆ ದಾಯಾದಿಗಳು ಜಗಳ ಆಡಿಕೊಂಡಿದ್ದಾರೆ. ಚಪ್ಪಲಿಯಲ್ಲಿ, ಕೋಲಿನಲ್ಲಿ ಹೊಡೆದುಕೊಳ್ಳುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
12:54 PM (IST) May 09
ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯು ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಕಾಡುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
12:34 PM (IST) May 09
12:22 PM (IST) May 09
Appe Midi Pickle Recipe: ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯಿ ಎನ್ನುವುದು ಸಿಕ್ಕಾಪಟ್ಟೆ ಫೇಮಸ್. ಇನ್ನೇನು ಮಾವಿನಕಾಯಿ ಸೀಸನ್ ಬಂತು ಎಂದಕೂಡಲೇ ಅಪ್ಪೇಮಿಡಿ ಹುಡುಕಾಟ ಶುರು ಆಗುತ್ತದೆ. ಅಪ್ಪೇಮಿಡಿಯಿಂದ ಉಪ್ಪಿನಕಾಯಿ ಮಾಡಿಕೊಂಡು, ವರ್ಷಾನುಗಟ್ಟಲೇ ತಿನ್ನುತ್ತಾರೆ.
12:10 PM (IST) May 09
ಶಾಸಕರು ಟಿಕೆಟ್ ಕೇಳಿದ್ದರಿಂದ ಐಪಿಎಲ್ ಫೈನಲ್ ಪಂದ್ಯವನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿರಾಕರಿಸಿದ್ದಾರೆ. ಹೆಚ್ಚಿನ ಲಾಭಕ್ಕಾಗಿ ಅಹಮದಾಬಾದ್‌ಗೆ ಪಂದ್ಯ ಸ್ಥಳಾಂತರಿಸಲಾಗಿದೆ ಎಂದರು.
11:58 AM (IST) May 09
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಜನರಿಗೆ ಆಸನದ ವ್ಯವಸ್ಥೆ, ಬೃಹತ್ ವೇದಿಕೆ, ಸಾವಿರಾರು ಜನರಿಂದ ಅಡುಗೆ ಭಾರೀ ವ್ಯವಸ್ಥೆ ಮಾಡಲಾಗಿದೆ.
11:38 AM (IST) May 09
11:33 AM (IST) May 09
11:13 AM (IST) May 09
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2024ರ ವರದಿಯ ಪ್ರಕಾರ, ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳನ್ನು ಹೊಂದಿದೆ. ಕೇವಲ ವರದಕ್ಷಿಣೆ ಮಾತ್ರವಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್‌ಗಳಲ್ಲೂ ಬೆಂಗಳೂರು ಮುಂದಿದೆ.
11:09 AM (IST) May 09
ಬೆಂಗಳೂರಿನಿಂದ ಹಂಪಿಗೆ ಪ್ರವಾಸ ಯೋಜಿಸುತ್ತಿರುವವರಿಗೆ ಕೆಎಸ್‌ಆರ್‌ಟಿಸಿ ನೇರ ಬಸ್ ಸೌಲಭ್ಯವನ್ನು ಒದಗಿಸಿದೆ. ರಾತ್ರಿ ಬೆಂಗಳೂರಿನಿಂದ ಹೊರಡುವ ಈ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್, ಮರುದಿನ ಬೆಳಗ್ಗೆ ಹಂಪಿ ತಲುಪಲಿದ್ದು, ಅದರ ಸಮಯ, ದರ ಮತ್ತು ಬುಕ್ಕಿಂಗ್ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
11:03 AM (IST) May 09
ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ 'ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ವಾಹನ ನಿಲುಗಡೆ ಸ್ಥಳಗಳಿಗೆ ಕಾವೇರಿ, ವೇದಾವತಿ, ಭದ್ರಾ, ತುಂಗಾ ಎಂಬ ನದಿಗಳ ಹೆಸರಿಡಲಾಗಿದೆ.
10:49 AM (IST) May 09
10:37 AM (IST) May 09
10:14 AM (IST) May 09
ಐಪಿಎಲ್ ಫೈನಲ್ ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್‌ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
09:59 AM (IST) May 09
09:53 AM (IST) May 09
09:41 AM (IST) May 09
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ನನ್ನು ದಿಯಾ ಜೈಲಿಗೆ ಹಾಕಿಸಿದ್ದಳು. ಈಗ ಅವನಿಗೆ ಜಾಮೀನು ಸಿಕ್ಕಿದ್ದು, ಹೊರಗಡೆ ಬಂದಿದ್ದಾನೆ. ಇದರ ಹಿಂದೆ ಇದ್ದೋರು ಯಾರು?
09:05 AM (IST) May 09
ಐಪಿಎಲ್ ವೇಳೆ ಸಂಭವನೀಯ ಹನಿಟ್ರ್ಯಾಪ್ ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ತಂಡದ ಮಾಲೀಕರಿಗೂ ಪಂದ್ಯದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸದಂತೆ ಸೂಚನೆ
09:00 AM (IST) May 09
ಮೂಲ್ಕಿ, ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮೂಲ್ಕಿ ತಾಲೂಕಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.
08:55 AM (IST) May 09
08:46 AM (IST) May 09
Corruption" ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಿಪಿಐ ವೀರಣ್ಣ ಎಸ್. ದೊಡ್ಡಮನಿ 1 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
08:24 AM (IST) May 09
ಹುಬ್ಬಳ್ಳಿಯ ಬಹುನಿರೀಕ್ಷಿತ ಮೇಲ್ಸೇತುವೆ ಕಾಮಗಾರಿಯು ಶೇ.70ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಶಾಸಕ ಮಹೇಶ ಟೆಂಗಿನಕಾಯಿ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
08:02 AM (IST) May 09
07:57 AM (IST) May 09
07:43 AM (IST) May 09
07:18 AM (IST) May 09