LIVE NOW
Published : Mar 09, 2026, 06:32 AM ISTUpdated : Mar 09, 2026, 10:49 PM IST

Karnataka News Live: Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ - ಪ್ರೊಮೋದಲ್ಲಿ ಮಿಸ್​ ಆಗಿರೋ ವಿಲನ್​ ಬರೋದು ಯಾವಾಗ?

ಸಾರಾಂಶ

ಚಾಮರಾಜನಗರ: ಉಡುತೊರೆ ಹಳ್ಳಕ್ಕೆ ಬಜೆಟ್‌ನಲ್ಲಿ ₹490 ಕೋಟಿ ಘೋಷಿಸಿದ್ದಕ್ಕೆ ಜೆಡಿಎಸ್‌ ಶಾಸಕ ಎಂ.ಆರ್‌.ಮಂಜುನಾಥ್‌ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರ ಹೆಸರಿನಲ್ಲಿ ಶ್ರೀಕ್ಷೇತ್ರ ಮಲೆಮಹದೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಹು ದಶಕಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಚಿವ ಡಾ.ಎಚ್.ಸಿ. ಮಹಾದೇವಪ್ಪ ಹೆಸರಿನಲ್ಲಿ ಶಾಸಕ ಮಂಜುನಾಥ್ ಅರ್ಚನೆ ಮಾಡಿಸಿದರು

ಕುಡಿಯುವ ನೀರು ಮತ್ತು 12,000 ಎಕರೆಗೆ ನೀರಾವರಿ ಕಲ್ಪಿಸುವ ಉಡುತೊರೆ ಹಳ್ಳ ಜಲಾಶಯ ನೀರಾವರಿ ಯೋಜನೆಯನ್ನು ₹490 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದೆಂದು ಸಿದ್ದರಾಮಯ್ಯ ಘೋಷಿಸಿದ್ದು, ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.

10:49 PM (IST) Mar 09

Rani Serialನಲ್ಲಿ ಕಾಣದ ರಾಣಿಯ ಅಪ್ಪ ಇವರೇ - ಪ್ರೊಮೋದಲ್ಲಿ ಮಿಸ್​ ಆಗಿರೋ ವಿಲನ್​ ಬರೋದು ಯಾವಾಗ?

ಜೀ ಕನ್ನಡದಲ್ಲಿ ಆರಂಭವಾಗಿರುವ 'ರಾಣಿ' ಸೀರಿಯಲ್, ಜೈಲಿನಲ್ಲಿರುವ ಅಮ್ಮ ಮತ್ತು ಮಗಳ ಭಾವನಾತ್ಮಕ ಕಥೆಯನ್ನು ಹೊಂದಿದೆ. ಈ ಕಥೆಯಲ್ಲಿ ರಾಣಿಯ ಅಪ್ಪನ ಪಾತ್ರ ನಿಗೂಢವಾಗಿದ್ದು, ಈ ಪಾತ್ರವನ್ನು ನಟ ಆರವ್ ಸೂರ್ಯ ನಿರ್ವಹಿಸುತ್ತಿದ್ದು, ಇದೊಂದು ನೆಗೆಟಿವ್ ಶೇಡ್ ಪಾತ್ರವೆಂದು ಅವರೇ ತಿಳಿಸಿದ್ದಾರೆ.
Read Full Story

10:23 PM (IST) Mar 09

ಗೃಹಲಕ್ಷ್ಮಿ, ಶಕ್ತಿ ಯೋಜನೆಗಳಿಂದ ಮಹಿಳಾ ಸಬಲೀಕರಣ - ಸಚಿವ ಈಶ್ವರ್ ಖಂಡ್ರೆ

‘ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು’ ಎಂಬ ಮಾತಿನಂತೆ ಮಹಿಳೆಯರು ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Read Full Story

10:15 PM (IST) Mar 09

ಹಾಸನ, ಮೈಸೂರು ಮಾರ್ಗದ ರೈಲು ಸಂಚಾರದಲ್ಲಿ ದಿಢೀರ್ ಬದಲಾವಣೆ! ಹಲವು ರೈಲುಗಳು ರದ್ದು!

ಹಾಸನ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ಕೆಳಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ, ದಕ್ಷಿಣ ಪಶ್ಚಿಮ ರೈಲ್ವೆಯು ಮಾರ್ಚ್ 16 ರಂದು ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಅರಸೀಕೆರೆ-ಮೈಸೂರು ಪ್ಯಾಸೆಂಜರ್ ಮತ್ತು ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಅಂದು ಸಂಚರಿಸುವುದಿಲ್ಲ.
Read Full Story

10:12 PM (IST) Mar 09

ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ - ಸಚಿವ ಎಚ್.ಕೆ.ಪಾಟೀಲ

ಗ್ಯಾರಂಟಿ ಯೋಜನೆಗಳಿಂದ ಬಡತನವನ್ನು ಬೇರುಸಮೇತ ಕಿತ್ತೊಗೆಯುವ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಮಾನವ ಹಕ್ಕುಗಳಾಗಿ ಪರಿಗಣಿಸಲ್ಪಡುವ ಕಾನೂನು ರೂಪುಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Read Full Story

09:57 PM (IST) Mar 09

ನಾನು ಎಚ್.ಎನ್.ವ್ಯಾಲಿ ಶುದ್ಧೀಕರಣ ಪರವಾಗಿರುವ ಶಾಸಕ - ಪ್ರದೀಪ್ ಈಶ್ವರ್ ಹೇಳಿದ್ದೇನು?

ಎಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ, ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

Read Full Story

09:45 PM (IST) Mar 09

ಕೇಂದ್ರ ಅಧೀನದಲ್ಲಿರುವ ಕಾಯಿರ್ ಬೋರ್ಡ್ ನೇಮಕಾತಿ - ಬೆಂಗಳೂರಿನಲ್ಲಿ ನಿಮಗೊಂದು ಉತ್ತಮ ಉದ್ಯೋಗ ಅವಕಾಶ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾಯಿರ್ ಬೋರ್ಡ್, 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ 07 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Read Full Story

09:37 PM (IST) Mar 09

400ಕ್ಕೂ ಹೆಚ್ಚು ಕೆರೆ ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ - ಡಿ.ಕೆ.ಶಿವಕುಮಾರ್‌

ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 400ಕ್ಕೂ ಹೆಚ್ಚಿನ ಕೆರೆಗಳು ತುಂಬಿಸುವ ನೀರಾವರಿ ಗ್ಯಾರಂಟಿ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Read Full Story

09:34 PM (IST) Mar 09

ಲವ್‌ ಮಾಕ್ಟೇಲ್‌ ಸಿನಿಮಾದಿಂದ ನನಗೆ ಫೇಮ್‌ ಅಲ್ಲ, ಶೇಮ್‌ ಸಿಕ್ಕಿತು - ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್

ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. ಆ ಬಳಿಕ ಲವ್‌ ಮಾಕ್ಟೇಲ್‌ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಡೈಲಾಗ್‌ ಬಗ್ಗೆ ಗೀತಾ ಭಾರತಿ ಭಟ್‌ ಆರೋಪ ಮಾಡಿದ್ದು, ಡಾರ್ಲಿಂಗ್‌ ಕೃಷ್ಣ ದಂಪತಿ ಸ್ಪಷ್ಟನೆ ನೀಡಿದ್ದರು. ಈಗ ಗೀತಾ ಮತ್ತೆ ದನಿ ಎತ್ತಿದ್ದಾರೆ.

 

Read Full Story

09:29 PM (IST) Mar 09

ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ

ಬೆಲೆ ಏರಿಕೆ ನಡುವೆ ಗ್ಯಾಸ್ ಸರಬರಾಜು ಬಂದ್, ನಾಳೆಯಿಂದ ಎಲ್ಲಾ ಹೊಟೆಲ್ ಬಂದ್ ಆತಂಕ, ಏಕಾಏಕಿ ಗ್ಯಾಸ್ ಸರಬಾರದು ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅನಿವಾರ್ಯವಾಗಿ ಬಂದ್ ಮಾಡಬೇಕಾದ ಪರಿಸ್ಥಿತಿ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚಿರಿಸಿದೆ.

Read Full Story

08:59 PM (IST) Mar 09

ದಾವಣಗೆರೆ 'ದಕ್ಷಿಣ' ಸಮರದಲ್ಲಿ ಜಮೀರ್ ಮಾತಿಗೆ ಮಲ್ಲಿಕಾರ್ಜುನ ಕೌಂಟರ್ - 'ಅವನೊಬ್ಬನಿಂದ ಊರು ಹಾಳಾಗೋದು ಬೇಡ'!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ಅವರ ಹೇಳಿಕೆಗಳು ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ನಡೆಗಳಿಂದ ಗೊಂದಲ ಸೃಷ್ಟಿಯಾಗಿದೆ ಎಂದರು.

Read Full Story

08:56 PM (IST) Mar 09

ಅನೇಕಲ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್

ರಿಯಲ್ ಎಸ್ಟೇಟ್ ಎಜೆಂಟ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್, ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬಿರನ್ನು ಟ್ರೇಸ್ ಮಾಡಲಾಗಿದೆ ಎಂದಿದ್ದಾರೆ.

Read Full Story

08:56 PM (IST) Mar 09

ಅವಳಿ ಮಕ್ಕಳಿಗಾಗಿ Lakshmi Nivasa ನಟಿ ಟ್ವಿನ್​ ಬಾಳೆಹಣ್ಣು ತಿಂದ್ರಂತೆ! ಮಾನಸಾ ಮನೋಹರ ಏನ್​ ಹೇಳಿದ್ರು ಕೇಳಿ

'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವ ಮಾನಸಾ ಮನೋಹರ್ ಗರ್ಭಿಣಿಯಾಗಿದ್ದು, ತಮಗೆ ಅವಳಿ ಮಕ್ಕಳಾಗಬೇಕೆಂಬ ಆಸೆಯಿಂದ ಅವಳಿ ಬಾಳೆಹಣ್ಣುಗಳನ್ನು ತಿಂದಿದ್ದಾಗಿ ಹೇಳಿಕೊಂಡಿದ್ದಾರೆ. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರನ್ನು ಎರಡನೇ ಮದುವೆಯಾಗಿದ್ದಾರೆ.

Read Full Story

08:34 PM (IST) Mar 09

ಮುಖದ ಮೇಲೆ ಬ್ಲ್ಯಾಕ್ ಹೆಡ್ಸ್ ಕಾಣಿಸ್ತಿದ್ರೆ ಪಾರ್ಲರ್ ಗೆ ಓಡ್ಬೇಕಾಗಿಲ್ಲ, ಮನೆಯಲ್ಲೇ ಇದೆ ಟ್ರೀಟ್ಮೆಂಟ್

ಮುಖದ ಮೇಲಿರುವ ಬ್ಲ್ಯಾಕ್ ಹೆಡ್ಸ್ ಸೌಂದರ್ಯ ಹಾಳು ಮಾಡುತ್ತೆ. ಪಾರ್ಲರ್ ನಲ್ಲಿ ಬ್ಲ್ಯಾಕ್ ಹೆಡ್ಸ್ ತೆಗೆಯೋ ಪ್ರೊಸೆಸ್ ನೋವಿನಿಂದ ಕೂಡಿರುತ್ತೆ. ಅಲ್ದೆ ಗಲ್ಲ ರೆಡ್ ಆಗುತ್ತೆ. ಮನೆಯಲ್ಲೇ ನೀವು ಬ್ಲ್ಯಾಕ್ ಹೆಡ್ಸ್ ತೆಗೆಯಬಹುದು. ಸುಲಭ ಮನೆ ಮದ್ದು ಇಲ್ಲಿದೆ.

 

Read Full Story

08:30 PM (IST) Mar 09

Krishna Rukku Serialಗಾಗಿ ಕುಡುಕ ಆಗ್ಬೇಕಾಯ್ತು, ನಾನು ಕುಡಿದವನೇ ಅಲ್ಲ- ನಟ ಅಕ್ಷಯ್ ಏನಂದ್ರು ನೋಡಿ

'ಕೃಷ್ಣ ರುಕ್ಕು' ಧಾರಾವಾಹಿ ಆರಂಭವಾಗಿದ್ದು, ಇದು ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕುಡುಕ ಕೃಷ್ಣನ ನಡುವಿನ ಕಥೆಯಾಗಿದೆ. ಕುಡುಕನ ಪಾತ್ರದಲ್ಲಿ ನಟ ಅಕ್ಷಯ್ ನಾಯಕ್ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿ ತಾವು ಪಟ್ಟ ಶ್ರಮದ ಕುರಿತು ಹೇಳಿದ್ದಾರೆ. 

Read Full Story

07:17 PM (IST) Mar 09

ಕಾರವಾರ - ಕಾರಿನ ಮೇಲೆ ಮಗುಚಿದ ಕಂಟೈನರ್ ಟ್ರಕ್ - ಕುಡುಕ ಚಾಲಕನ ಅವಾಂತರಕ್ಕೆ ಬಾಲಕ ಬಲಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಕುಡಿದ ಮತ್ತಿನಲ್ಲಿದ್ದ ಕಂಟೈನರ್ ಚಾಲಕನೋರ್ವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 8 ವರ್ಷದ ಬಾಲಕ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Read Full Story

06:45 PM (IST) Mar 09

ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಕಡಿಮೆ - ಸಚಿವ ಎನ್.ಚಲುವರಾಯಸ್ವಾಮಿ

ಬಹುತೇಕ ರಾಜೀ- ಸಂಧಾನದಲ್ಲೇ ಪ್ರಕರಣಗಳು ಬಗೆಹರಿದಿರುವುದರಿಂದ ಮಂಡ್ಯ ಜಿಲ್ಲೆಯನ್ನು ದೌರ್ಜನ್ಯ ಮುಕ್ತಗೊಳಿಸಬಹುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Read Full Story

06:25 PM (IST) Mar 09

ಹಾನಿಗೊಂಡ ಬ್ಯಾಗ್‌, ನಕಾರ ಮಾಡಿದ ಏರ್ ಇಂಡಿಯಾಗೆ ಪಾಠ ಕಲಿಸಿದ ಬೆಂಗಳೂರು ಯುವಕ! ಇದು ಪ್ರತಿಯೊಬ್ಬರು ತಿಳಿದಿರಬೇಕು

ಬೆಂಗಳೂರಿನ ಯುವಕನೊಬ್ಬನ ಟ್ರಾಲಿ ಬ್ಯಾಗ್ ಏರ್ ಇಂಡಿಯಾ ವಿಮಾನ ಪ್ರಯಾಣದಲ್ಲಿ ಹಾನಿಗೊಂಡಿತ್ತು. ವಿಮಾನಯಾನ ಸಂಸ್ಥೆ ದೂರು ಸ್ವೀಕರಿಸಲು ನಿರಾಕರಿಸಿದಾಗ, ಆತ ಗ್ರಾಹಕ ಆಯೋಗದ ಮೊರೆ ಹೋಗಿ ನ್ಯಾಯಕ್ಕಾಗಿ ಹೋರಾಟ ನಡೆಸಿದ. ಅಂತಿಮವಾಗಿ, ಆಯೋಗವು ಯುವಕನ ಪರವಾಗಿ ತೀರ್ಪು ನೀಡಿ, ಏರ್ ಇಂಡಿಯಾಗೆ ಪರಿಹಾರ ಪಾವತಿಸಲು ಆದೇಶಿಸಿದೆ.
Read Full Story

06:21 PM (IST) Mar 09

ಕಾಡಾನೆ ದಾಳಿಗೆ ಕೊಡಗಿನಲ್ಲಿ ಮಹಿಳೆ ಬಲಿ - ಚಿಕ್ಕಮಗಳೂರಿನಲ್ಲಿ ಹಾಲು ಕೊಡುವ ಹಸು ತುಳಿದು ಸಾಯಿಸಿದ ಆನೆ

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟರೆ, ಚಿಕ್ಕಮಗಳೂರಿನಲ್ಲಿ ಹಸುವೊಂದು ಬಲಿಯಾಗಿದೆ. ಈ ಮಧ್ಯೆ, ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ 'ಝೂ ಅಭಿ' ಎಂಬ ಆನೆಯೂ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

06:13 PM (IST) Mar 09

ಹಿರಿಯ ನಟ ದ್ವಾರಕೀಶ್‌ ಸೊಸೆಯಿಂದ ಸರಣಿ ವಂಚನೆ, ರಸ್ತೆಯಲ್ಲೇ ಪೊರಕೆ ಹಿಡಿದು ವ್ಯಕ್ತಿ ಮೇಲೆ ಹಲ್ಲೆ!

ಹಿರಿಯ ನಟ ದ್ವಾರಕೀಶ್ ಅವರ ಸೊಸೆ ವರ್ಷಾ ರೈ ವಿರುದ್ಧ ಹಣಕಾಸು ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ. ಚೀಟಿ ವ್ಯವಹಾರ, ಚಿನ್ನ ಹಾಗೂ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಹತ್ತಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ.

Read Full Story

05:50 PM (IST) Mar 09

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಶೀಘ್ರ ಉಪನ್ಯಾಸಕರ ನೇಮಕ - ಸಚಿವ ಡಾ.ಎಂ.ಸಿ.ಸುಧಾಕರ್

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಗಳಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

Read Full Story

05:46 PM (IST) Mar 09

ಜೀ, ಕಲರ್ಸ್‌ ಬಿಟ್ಟು ಹೊಸ ವಾಹಿನಿಯ ಮೂಲಕ ಕಿರುತೆರೆ ರೀಎಂಟ್ರಿಗೆ ಸಜ್ಜಾದ ವೈಷ್ಣವಿ ಗೌಡ!

ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಸುಮಾರು ಒಂದು ದಶಕದ ನಂತರ ಉದಯ ವಾಹಿನಿಗೆ ಮರಳುತ್ತಿದ್ದಾರೆ. ಈ ಹೊಸ ಧಾರಾವಾಹಿಯಲ್ಲಿ ಅವರು 'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ ರವೀಂದ್ರ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದು, ಇಬ್ಬರು ಪ್ರಬಲ ನಾಯಕಿಯರ ಈ ಕಥೆಯು ಕಿರುತೆರೆಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Read Full Story

05:36 PM (IST) Mar 09

ಅಷ್ಟೊಂದು 'ವರ್ತ್' ಇಲ್ವಾ? ಇದಕ್ಕೆ ಮಹಿಳೆಯರು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದಾರಾ? ವಿಜಯ್ ವಿರುದ್ಧ ನಟಿ ಗರಂ

ನಟ ವಿಜಯ್ ಅವರ ವಿಚ್ಛೇದನದ ವದಂತಿಗಳ ನಡುವೆಯೇ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 'ಅಷ್ಟೊಂದು ವರ್ತ್ ಇಲ್ಲ' ಎಂಬ ಅವರ ಮಾತನ್ನು ನಟಿಯೊಬ್ಬರು ತೀವ್ರವಾಗಿ ಟೀಕಿಸಿದ್ದಾರೆ.

Read Full Story

05:24 PM (IST) Mar 09

Kitchen Garden - 6 ಇಂಚಿನ ಪಾಟಲ್ಲಿ ಶುಂಠಿ-ಮೆಣಸು ಬೆಳೆಸಿ, ಬುಟ್ಟಿ ತುಂಬಾ ಫಸಲು ಪಡೀರಿ!

Kitchen Gardenನಲ್ಲಿ ಶುಂಠಿ ಮತ್ತು ಮೆಣಸಿನಕಾಯಿ ಬೆಸ್ಟ್ ಕಾಂಬಿನೇಷನ್. ಎರಡೂ ಗಿಡಗಳು ಕಡಿಮೆ ಜಾಗದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕೇವಲ 6 ಇಂಚಿನ ಪಾಟಲ್ಲಿ ಈ ಎರಡೂ ತರಕಾರಿಗಳನ್ನು ಹೇಗೆ ಬೆಳೆಸಬಹುದು ಎಂದು ತಿಳಿಯೋಣ.

Read Full Story

05:00 PM (IST) Mar 09

ದಳಪತಿ ವಿಜಯ್ ಹಿಟ್‌ ವಿಕೆಟ್! ಸಂಸಾರದಲ್ಲಿ ಬಿರುಗಾಳಿ, ರಾಜಕೀಯದಲ್ಲಿ ಸುಂಟರಗಾಳಿ

ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ನಡುವಿನ ಪ್ರೀತಿಯ ವಿಚಾರ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯ ಪ್ರವೇಶಿಸಿರುವ ವಿಜಯ್, ಪತ್ನಿ ಸಂಗೀತಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಇದಕ್ಕೆ ತ್ರಿಶಾ ಜೊತೆಗಿನ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

Read Full Story

04:42 PM (IST) Mar 09

ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ 'ಅಪ್ಪನ' ಸಾಧನೆ ಎಂದ ಸಚಿವ ಮಂಕಾಳು ವೈದ್ಯ ಪುತ್ರಿ! ಟ್ರೋಲ್‌ ಮಾಡಿದ ಜಿಲ್ಲೆಯ ಜನ!

ಉತ್ತರ ಕನ್ನಡ ಜಿಲ್ಲೆಗೆ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿದ್ದು, ಸಚಿವ ಮಂಕಾಳು ವೈದ್ಯರ ಪುತ್ರಿ ಇದನ್ನು ತಮ್ಮ ತಂದೆಯ ಸಾಧನೆ ಎಂದಿದ್ದಾರೆ. ಆದರೆ, ಆಸ್ಪತ್ರೆಯ ಸ್ಥಳದ ಬಗ್ಗೆ ಜಿಲ್ಲೆಯ ದಕ್ಷಿಣ ಭಾಗದ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

04:01 PM (IST) Mar 09

ಕನಸಿನ ಮನೆ ಕಟ್ಟುತ್ತಿದ್ದ ದಂಪತಿಯ ದುರಂತ ಸಾವು - ಮನೆಯ ಮೆಟ್ಟಿಲು ಬಿದ್ದು ಅವಘಡ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೋಡೆ ಪ್ಲಾಸ್ಟರ್ ಕೆಲಸಕ್ಕೆ ಮುಂದಾಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

03:54 PM (IST) Mar 09

ಗಿಡದ ತುಂಬಾ ಗುಲಾಬಿ ಹೂ ಬಿಡ್ಬೇಕು ಅಂದ್ರೆ ಇದೊಂದು ವಸ್ತು ಹಾಕಿ ಮ್ಯಾಜಿಕ್ ನೋಡಿ

Garden Tips : ಬೆಳಿಗ್ಗೆ ಮನೆಯಲ್ಲಿ ಅರಳಿದ ಗುಲಾಬಿ ಹೂ ನೋಡಿದ್ರೆ ಮನಸ್ಸು ಖುಷಿಯಾಗುತ್ತದೆ. ಅದೇ ಒಣಗಿದ ಗಿಡ ಮನಸ್ಸಿಗೆ ನೋವು ನೀಡುತ್ತದೆ. ಮನೆ ಬಾಲ್ಕನಿಯಲ್ಲಿರುವ ಗುಲಾಬಿ ಗಿಡದಲ್ಲಿ ಪ್ರತಿ ದಿನ ಒಂದೊಂದು ಹೂ ಅರಳಬೇಕು ಅಂದ್ರೆ ಈ ಟಿಪ್ಸ್ ಟ್ರೈ ಮಾಡಿ.

 

Read Full Story

03:47 PM (IST) Mar 09

'ನಗಲಿಕ್ಕೆ ಇದಕ್ಕಿಂತ ದೊಡ್ಡ ಕಾರಣ ಬೇಕಾ?' ಎಂ ಎಸ್ ಧೋನಿ ಪೋಸ್ಟ್‌ಗೆ ಗೌತಮ್ ಗಂಭೀರ್ ಸೂಪರ್ ರಿಪ್ಲೇ!

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ಅಭಿನಂದನೆ ಸಲ್ಲಿಸಿದ್ದು, ವಿಶೇಷವಾಗಿ ಕೋಚ್ ಗೌತಮ್ ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ. ಧೋನಿಯ ಈ ಭಾವುಕ ಪೋಸ್ಟ್‌ಗೆ ಗಂಭೀರ್ ಕೂಡ ಪ್ರೀತಿಯಿಂದ ಉತ್ತರಿಸಿದ್ದಾರೆ. 

Read Full Story

03:26 PM (IST) Mar 09

ಬ್ಯಾಡಗಿ ಮೆಣಸಿನಕಾಯಿ ಮೇಲೆ ಯುದ್ಧದ ಕಾರ್ಮೋಡ - ರಫ್ತು ಬಂದ್, ಆತಂಕದಲ್ಲಿ ಬೆಳೆಗಾರರು

ಇರಾನ್-ಇಸ್ರೇಲ್-ಅಮೆರಿಕಾ ಯುದ್ಧದ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ಬ್ಯಾಡಗಿ ಮೆಣಸಿನಕಾಯಿ ರಫ್ತು ಸ್ಥಗಿತಗೊಂಡಿದೆ.  ಇದರಿಂದಾಗಿ ಮಾರುಕಟ್ಟೆಯಲ್ಲಿ ವಹಿವಾಟು ಕುಸಿಯುವ ಮತ್ತು ರೈತರು ಬೆಳೆದ ಮೆಣಸಿನಕಾಯಿ ಬೆಲೆ ಕಡಿಮೆಯಾಗುವ ಆತಂಕ ಎದುರಾಗಿದೆ.

Read Full Story

01:39 PM (IST) Mar 09

ಉಡುಪಿಯ ಅಳಿಯ ಸೂರ್ಯಕುಮಾರ್ ಯಾದವ್‌ ಬಾಳಲ್ಲಿ ಕಾಪು ಮಾರಿಯಮ್ಮನ ಪವಾಡ!

ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಡುಪಿಯ ಕಾಪು ಹೊಸ ಮಾರಿಗುಡಿ ಕ್ಷೇತ್ರದ ನಡುವೆ ಒಂದು ವಿಶೇಷ ದೈವಿಕ ಸಂಬಂಧವಿದೆ. ಕ್ಷೇತ್ರದ ದೇವಿಯ ಆಶೀರ್ವಾದದಿಂದ ಅವರು ನಾಯಕನಾದದ್ದು, ದೇವಸ್ಥಾನಕ್ಕೆ ನೀಡಿದ ಕೊಡುಗೆ ಮತ್ತು ಅವರ ಅಚಲ ಭಕ್ತಿಯ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

01:24 PM (IST) Mar 09

ಐಬಿಎಂ ಉದ್ಯೋಗ ತಿರಸ್ಕರಿಸಿ ಭಾರತೀಯ ಸೇನೆ ಸೇರಿದ ಬೆಂಗಳೂರು ಎಂಜಿನಿಯರ್, ವಿಶ್ವ ಗೆದ್ದ ಮೇಜರ್ ಸ್ವಾತಿ

ಬೆಂಗಳೂರಿನ ಎಂಜಿನಿಯರಿಂಗ್ ಪದವೀಧರೆ ಸ್ವಾತಿ ಶಾಂತಾ ಕುಮಾರ್, ಐಬಿಎಂ ಉದ್ಯೋಗವನ್ನು ತೊರೆದು ಭಾರತೀಯ ಸೇನೆಗೆ ಸೇರಿದರು. ದಕ್ಷಿಣ ಸೂಡಾನ್‌ನಲ್ಲಿ ಐಕ್ಯರಾಷ್ಟ್ರಗಳ ಶಾಂತಿ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಅವರು, ತಮ್ಮ ಮಹತ್ವದ ಕಾರ್ಯಕ್ಕಾಗಿ 2025ನೇ ಸಾಲಿನ ಐಕ್ಯರಾಷ್ಟ್ರಗಳ ಮಹಾಸಚಿವರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Read Full Story

01:02 PM (IST) Mar 09

ಸಾವಿತ್ರಿಯ ಫೇಸ್‌ಬುಕ್ ಮೆಸೆಂಜರ್ ಕಾಲ್ ರಿಸೀವ್ ಮಾಡಿದ್ರೆ ಲೈಂಗಿಕ ಕ್ರಿಯೆ ಮಾಡೋ ಅಶ್ಲೀಲ ವೀಡಿಯೋ ತೋರಿಸೋದಾ?

ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಭಾನು ಮುಷ್ತಾಕ್ ಅವರು ಮೆಸೆಂಜರ್‌ನಲ್ಲಿ 'ಸಾವಿತ್ರಿ ಮಜುಂದಾರ್' ಎಂಬ ಹೆಸರಿನಿಂದ ಬಂದ ಅಸಭ್ಯ ವಿಡಿಯೋ ಕಾಲ್‌ನಿಂದಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಸೈಬರ್ ಸ್ಪ್ಯಾಮ್ ಅಥವಾ ಸೆಕ್ಸ್‌ಟಾರ್ಶನ್ ಜಾಲದ ಬಗ್ಗೆ ಅನುಮಾನ ಮೂಡಿಸಿದೆ.

Read Full Story

12:26 PM (IST) Mar 09

ನವಮಂಗಳೂರು ಬಂದರಿಗೆ ಬಂದಿಳಿದ 600ಕ್ಕೂ ಹೆಚ್ಚು ವಿದೇಶಿ ಅತಿಥಿಗಳು - ಕರಾವಳಿ ಸಂಸ್ಕೃತಿಯ ವೈಭವಕ್ಕೆ ಪ್ರವಾಸಿಗರು ಫಿದಾ!

'ಎಂಎಸ್ ಸಿರೆನಾ' ಎಂಬ ವಿಲಾಸಿ ಹಡಗು 619 ಪ್ರಯಾಣಿಕರೊಂದಿಗೆ ನವಮಂಗಳೂರು ಬಂದರಿಗೆ ಆಗಮಿಸಿತು. ಪ್ರವಾಸಿಗರು ಗೋಕರ್ಣನಾಥೇಶ್ವರ ದೇವಸ್ಥಾನ, ಸಾವಿರ ಕಂಬದ ಬಸದಿ ಸೇರಿದಂತೆ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಮಂಗಳೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರು.

Read Full Story

12:16 PM (IST) Mar 09

Gadag ambulance misuse - ಗದಗ - ರೋಗಿಗಳನ್ನ ಸಾಗಿಸಬೇಕಿದ್ದ ಜಿಮ್ಸ್ ಆಂಬುಲೆನ್ಸ್‌ನಲ್ಲಿ ಕುರಿಗಳಂತೆ ಪ್ರಯಾಣಿಕರ ಸಾಗಾಟ! ವಿಡಿಯೋ ವೈರಲ್

ಗದಗ ಜಿಲ್ಲಾಸ್ಪತ್ರೆಯ ಆಂಬುಲೆನ್ಸ್‌ಗಳನ್ನು ರೋಗಿಗಳ ಬದಲು ಸಾಮಾನ್ಯ ಪ್ರಯಾಣಿಕರನ್ನು ಸಾಗಿಸಲು ಅಕ್ರಮವಾಗಿ ಬಳಸಲಾಗುತ್ತಿದೆ. ಈ ಕಾನೂನುಬಾಹಿರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕರು ಹಣಕ್ಕಾಗಿ ಆಂಬುಲೆನ್ಸ್‌ಗಳನ್ನು ಟ್ಯಾಕ್ಸಿಯಂತೆ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Read Full Story

12:14 PM (IST) Mar 09

Mandya - ರಾಸುಗಳಿಗೆ ಆರ್ಯ-ಸೂರ್ಯ ಅಂತ ಹೆಸರಿಟ್ಟು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ ರೈತ

ಶ್ರೀರಂಗಪಟ್ಟಣದ ರೈತ ಹೇಮಂತ್ ಶೇಖರ್ ತಮ್ಮ ಜೋಡಿ ಕರುಗಳಿಗೆ 'ಆರ್ಯ-ಸೂರ್ಯ' ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಪ್ರಾಣಿಪ್ರೀತಿ ಮೆರೆದಿದ್ದಾರೆ.  ಶಾಸಕ ದರ್ಶನ್ ಪುಟ್ಟಣ್ಣಯ್ಯ ಪಾಂಡವಪುರದ ಒಣಭೂಮಿಗೆ ನೀರುಣಿಸುವ ದಶಕಗಳ ಕನಸಿನ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

Read Full Story

11:52 AM (IST) Mar 09

ಫಲ ನೀಡಿದ ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ! ಕೊನೆಗೂ ಬಯಲಾಯ್ತು ಗೆಲುವಿನ ಗುಟ್ಟು!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ಗೆಲುವಿಗೆ ನಿಜವಾದ ಕಾರಣ ಆಯ್ಕೆ ಸಮಿತಿಯ ಕಠಿಣ ನಿರ್ಧಾರ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

 

Read Full Story

11:26 AM (IST) Mar 09

ವಿಜಯಪುರ ನಗರಕ್ಕೆ ಆಗಮಿಸಿದ ಯಡೂರಿನಿಂದ ಶ್ರೀಶೈಲಕ್ಕೆ ತೆರಳುತ್ತಿರುವ ನಂದಿಸೇನೆ ರಥಯಾತ್ರೆ

ಯಡೂರಿನಿಂದ ಶ್ರೀಶೈಲದವರೆಗೆ ಸಾಗುತ್ತಿರುವ ನಂದಿಸೇನೆ ರಥಯಾತ್ರೆಯು ವಿಜಯಪುರ ನಗರಕ್ಕೆ ಆಗಮಿಸಿತು. ಜೋಡೆತ್ತಿನ ಕೃಷಿಕರ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಅವರಿಗೆ ಮಾಸಿಕ ₹11,000 ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.
Read Full Story

10:52 AM (IST) Mar 09

Bengaluru temperature - ಇದು ಗಾರ್ಡನ್ ಸಿಟಿನಾ, ಕಲ್ಬುರ್ಗಿನಾ? ಬೇಸಿಗೆ ಆರಂಭವಾದ ಹತ್ತೇ ದಿನದಲ್ಲಿ 33 ಡಿಗ್ರಿ ಬಿಸಿಲು!

ತಂಪಾದ ವಾತಾವರಣಕ್ಕೆ ಹೆಸರಾಗಿದ್ದ ಬೆಂಗಳೂರು ಈಗ ಉಷ್ಣನಗರಿಯಾಗಿ ಮಾರ್ಪಟ್ಟಿದೆ. ಬೇಸಿಗೆ ಆರಂಭದಲ್ಲೇ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ರಾತ್ರಿಯಲ್ಲೂ ಸೆಕೆಯ ಅನುಭವ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಆತಂಕ ಶುರುವಾಗಿದೆ.
Read Full Story

10:32 AM (IST) Mar 09

Bengaluru - ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ - ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ

ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮುಂದೆ ಯುವತಿಯರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದ ಬಳಿ ನಡೆದ ಈ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Read Full Story

10:18 AM (IST) Mar 09

ತನ್ನ ಅಜ್ಜಿಯ ವಯಸ್ಸಿನ ಅಭಿಮಾನಿ ಭೇಟಿ ಮಾಡಿ ಆಸೆ ಈಡೇರಿಸಿದ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ,  ತಮ್ಮ ಹಿರಿವಯಸ್ಸಿನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಅಜ್ಜಿಯ ಆಸೆಯಂತೆ ಅವರ ಮನೆಗೆ ತೆರಳಿ, ಅವರೊಂದಿಗೆ ಸಮಯ ಕಳೆದು ಆಶೀರ್ವಾದ ಪಡೆದಿದ್ದು, ಈ ವೀಡಿಯೋಗಳು ನೆಟ್ಟಿಗರ ಮನಗೆದ್ದಿವೆ.

Read Full Story

More Trending News