Published : Dec 08, 2025, 07:12 AM ISTUpdated : Dec 08, 2025, 11:27 PM IST

Karnataka News Live: ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ - Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!

ಸಾರಾಂಶ

 

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಅವಿಶ್ವಾಸ ನಿರ್ಣಯ ಮಂಡನೆಗೂ ಪ್ರತಿಪಕ್ಷಗಳು ಅಣಿಯಾಗಿದ್ದವು, ಇದರ ಸೂಚನೆ ಅರಿತ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಜತೆಗೆ ಬಿಜೆಪಿ ಒಡಕು, ಬಿಜೆಪಿ-ಜೆಡಿಎಸ್‌ ನಡುವಿನ ಸಾಮರಸ್ಯ ಕೊರತೆ, ಜೆಡಿಎಸ್‌ನಲ್ಲಿ ಜಿ.ಟಿ.ದೇವೇಗೌಡ ಸೇರಿ ಹಲವು ನಾಯಕರು ಪಕ್ಷದ ವಿರುದ್ಧವೇ ಧ್ವನಿ ಎತ್ತಿರುವುದನ್ನೂ ಕಾಂಗ್ರೆಸ್‌ ದಾಳವಾಗಿ ಬಳಸುವ ಸಾಧ್ಯತೆಯಿದೆ. ಮತ್ತೊಂದೆಡೆ ಕಬ್ಬು ಬೆಂಬಲ ಬೆಲೆ ಹೆಚ್ಚಳ ಮಾಡದಿರುವ ಕೇಂದ್ರದ ನಿರ್ಲಕ್ಷ್ಯ, ಸಕ್ಕರೆ ಎಂಎಸ್‌ಪಿ ದರ ಹೆಚ್ಚಿಸದ, ರಾಜ್ಯದಿಂದ ಹೆಚ್ಚಿನ ಎಥೆನಾಲ್‌ ಖರೀದಿಸದ ಕೇಂದ್ರ ಸರ್ಕಾರದಿಂದಲೇ ಕಬ್ಬು ಬೆಲೆ ಕುಸಿದಿದೆ ಎಂದು ಬೊಟ್ಟು ಮಾಡಿ ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜಾಗಿದೆ.

11:27 PM (IST) Dec 08

ಅಸಮಾನ್ಯಳಲ್ಲಿ ಅಸಮಾನ್ಯ ಈ ಪುಟಾಣಿ - Naa Ninna Bidalaare ಹಿತಾ ನಿಬ್ಬೆರಗಾಗುವ ಫೋಟೋಶೂಟ್​!

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಹಿತಾ ಪಾತ್ರಧಾರಿ ಮಹಿತಾ, ತನ್ನ ಅದ್ಭುತ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾಳೆ. ತಾಯಿಯನ್ನು ಕಳೆದುಕೊಂಡ ತಬ್ಬಲಿ ಮಗುವಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ, ನಟನೆಯ ಜೊತೆಗೆ ಗಾಯಕಿಯಾಗಿಯೂ ಗಮನ ಸೆಳೆದಿದ್ದಾಳೆ.
Read Full Story

10:59 PM (IST) Dec 08

Bigg Boss ಅಭಿಷೇಕ್​ಗೆ ದೊಡ್ಮನೆಯಿಂದ ಸಿಕ್ಕಿರೋ ಸಂಭಾವನೆ ಎಷ್ಟು? ಫ್ಯಾನ್ಸ್​ ನಿರೀಕ್ಷೆ ಸುಳ್ಳಾಗೋಯ್ತು!

ಕಲರ್ಸ್ ಕನ್ನಡದ ಬಿಗ್ ಬಾಸ್ 12 ರಿಂದ ಹೊರಬಂದಿರುವ ನಟ ಅಭಿಷೇಕ್ ಶ್ರೀಕಾಂತ್, ತಮಗೆ ಸಿಕ್ಕ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದರ ಬಗ್ಗೆ ನಟ ಹೇಳಿದ್ದೇನು? ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದ್ದೇಕೆ? 

Read Full Story

10:43 PM (IST) Dec 08

ಕರ್ಮ ಯಾರನ್ನೂ ಬಿಡಲ್ಲ, ಆ ತಾಯಿ ನೋಡ್ತಾ ಇರ್ತಾಳೆ - Bigg Boss ಈ ಸ್ಪರ್ಧಿ ಬಗ್ಗೆ ಉಗ್ರಂ ಮಂಜು ಗರಂ

ಬಿಗ್​ಬಾಸ್​ನಲ್ಲಿ ಗಿಲ್ಲಿ ನಟ, ಉಗ್ರಂ ಮಂಜು ಅವರ ಮದುವೆಯ ಬಗ್ಗೆ ಮಾಡಿದ ಕಾಮಿಡಿಯಿಂದ ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಸಮಾಧಾನ ಹೊರಹಾಕಿರುವ ಮಂಜು, ಕಾಮಿಡಿ ಹೆಸರಲ್ಲಿ ನೋವು ನೀಡಿ ಸಿಂಪಥಿ ಗಿಟ್ಟಿಸಿಕೊಳ್ಳುವುದು ಸರಿಯಲ್ಲ, ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
Read Full Story

10:17 PM (IST) Dec 08

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ ನಡೆದಿದೆ. ಬೆಂಗಳೂರಿನ ಗೋವಿಂದರಾಜನಗರದಲ್ಲಿ ಈ ದುರಂತ ನಡೆದಿದೆ. ಗೀಸರ್ ಅನಿಲ ಸೋರಿಕೆಯಾಗಿ ತಾಯಿ ಹಾಗೂ ಮಗೂ ಇಬ್ಬರು ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story

09:47 PM (IST) Dec 08

ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ - ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ

ಪ್ರಬಲ ಸ್ಪರ್ಧಿ ಎನಿಸಿದ್ದ ಅಭಿಷೇಕ್ ಅವರು ಕ್ಯಾಪ್ಟನ್ ಆಗಿದ್ದಾಗಲೇ ಬಿಗ್ ಬಾಸ್ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರಬಂದ ಅವರು, ವಿನ್ನರ್ ಹಾಗೂ ಟಾಪ್ 5 ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Read Full Story

09:08 PM (IST) Dec 08

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?

ಕರ್ಣ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ಹುಡುಗನೊಬ್ಬನ ಕೈ ಹಿಡಿದ ಫೋಟೋ ಹಂಚಿಕೊಂಡು ಪ್ರೀತಿಯ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ, ಬಿಗ್ ಬಾಸ್ ಸ್ಪರ್ಧಿ ಅವಿನಾಶ್ ಶೆಟ್ಟಿ ಜೊತೆ ಮದುವೆ ಎಂಬ ಸುದ್ದಿ ಹರಡಿದ್ದು, ಈ ಬಗ್ಗೆ ಅವಿನಾಶ್ ಸ್ಪಷ್ಟನೆ ನೀಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Read Full Story

07:39 PM (IST) Dec 08

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?

ಬಿಗ್ ಬಾಸ್ ಮನೆಗೆ ತಮ್ಮ ಶಿಷ್ಯಂದಿರನ್ನು ಕಳುಹಿಸುತ್ತಾರೆ ಎಂಬ ಆರೋಪಕ್ಕೆ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. ಆದರೆ, ಕಿಚ್ಚನ ಬಗ್ಗೆ ಆರೋಪ ಮಾಡಿದ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ಬಿಗ್ ಬಾಸ್ ಮನೆಯೊಳಗೆ ಅನ್ನ ತಿಂದು ಹೋದ ಮಾಜಿ ಸ್ಪರ್ಧಿಯೇ ಆಗಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ.

Read Full Story

07:31 PM (IST) Dec 08

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC

ರಾಜ್ಯದಲ್ಲಿ ಕುಸಿದಿರುವ ಅಬಕಾರಿ ಆದಾಯವನ್ನು ಹೆಚ್ಚಿಸಲು, ಕುಡುಕರ ಲಿವರ್‌ಗೆ ಸರ್ಕಾರ ಗ್ಯಾರಂಟಿ ನೀಡಬೇಕೆಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಮದ್ಯಪಾನದಿಂದ ಬರುವ ಆದಾಯದ 20% ಅನ್ನು ಅವರ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.

Read Full Story

06:56 PM (IST) Dec 08

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ. ಇದರೊಂದಿಗೆ ಕಾನೂನು ಹೋರಾಟ ಆರಂಭಿಸಿದ ನಾಯಕನಿಗೆ ತೀವ್ರ ಹಿನ್ನಡೆಯಾಗಿದೆ.

Read Full Story

06:52 PM (IST) Dec 08

ಮೋದಿ-ಪುಟಿನ್‌ ಒಪ್ಪಂದ - 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ವೇಳೆ, ಚೆನ್ನೈ-ವ್ಲಾಡಿವೋಸ್ಟಾಕ್ ಪೂರ್ವ ಕಾರಿಡಾರ್‌ಗೆ ಚಾಲನೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಈ ಹೊಸ ಸಮುದ್ರ ಮಾರ್ಗವು ಪ್ರಯಾಣದ ಸಮಯವನ್ನು 40 ದಿನಗಳಿಂದ 24 ದಿನಗಳಿಗೆ ಇಳಿಸಲಿದೆ.

Read Full Story

06:47 PM (IST) Dec 08

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಲಕ್ಷಾಂತರ ಮೌಲ್ಯದ ಗಿರ್ ಹಸುಗಳ ಕಳ್ಳತನ! ಕಳ್ಳರು ಒಂದು ಹಸುವಿನ ಕತ್ತು ಕೊಯ್ದು ಕ್ರೌರ್ಯ ಮೆರೆದಿದ್ದಾರೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ವಿವರ ತಿಳಿಯಿರಿ.

Read Full Story

06:18 PM (IST) Dec 08

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎ ವಿಳಂಬದಿಂದಾಗಿ ನಿವೇಶನದಾರರು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಯಸ್ಸಿನ ಮಿತಿ, ರೇರಾ ತೊಡಕು ಮತ್ತು ಭೂಸ್ವಾಧೀನ ಸಮಸ್ಯೆಗಳಿಂದ ಬ್ಯಾಂಕುಗಳು ಗೃಹ ಸಾಲ ನಿರಾಕರಿಸುತ್ತಿದ್ದು, ಸಾವಿರಾರು ಮಂದಿಯ ಸ್ವಂತ ಮನೆಯ ಕನಸು ನನಸಾಗದ ಸ್ಥಿತಿ ತಲುಪಿದೆ.
Read Full Story

04:46 PM (IST) Dec 08

ಟಿಪ್ಸ್‌ ಹಣದಿಂದಲೇ 10 ಲಕ್ಷದ ಕಾರ್‌ ಖರೀದಿ ಮಾಡಿದ ವ್ಯಕ್ತಿ!

ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಕಾರ್‌ಅನ್ನು ಬರೀ ಟಿಪ್ಸ್‌ಗಳಿಂದ ಬಂದ ಹಣದಲ್ಲೇ ಖರೀದಿ ಮಾಡಿದ್ದಾನೆ. ಆತ ಕ್ರೂಸ್‌ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ರೀಲ್ಸ್, ಕಂಟೆಂಟ್‌ ಮೂಲಕ ಇತರರರಿಗೆ ಕ್ರೂಸ್‌ ಶಿಪ್‌ನಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದಾರೆ.

 

Read Full Story

04:41 PM (IST) Dec 08

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!

ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ವ್ಯಾಪಾರದ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ತಾಯಿ ಮತ್ತು ಮಗ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿಷ ಸೇವಿಸದ ಅಜ್ಜಿಯೂ ಹೇಗೆ ಸತ್ತರು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಇದು ಕೇಸಿಗೆ ಟ್ವಿಸ್ಟ್ ನೀಡಿದೆ.

Read Full Story

04:32 PM (IST) Dec 08

Mark Movie - ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?

Kiccha Sudeep Mark Movie: ನಟ ಕಿಚ್ಚ ಸುದೀಪ್ ಅವರು ನಟಿಸಿರುವ ಮಾರ್ಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಸಿನಿಮಾ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಯ್ತು. ಆಗ ಸಿನಿಮಾ ತಂಡವು ಏನು ಹೇಳಿದೆ?

 

Read Full Story

04:04 PM (IST) Dec 08

ಚೈತ್ರಾ ಕುಂದಾಪುರ, ಸ್ಪಂದನಾ ಸೋಮಣ್ಣ ನಡುವೆ ತಂದಿಟ್ಟು ನಕ್ಕ ವಿಲನ್‌ Bigg Boss; ಯಾಕ್ರೀ ಹೀಗ್‌ ಮಾಡ್ತೀರಾ?

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಇವರ ವೈಯಕ್ತಿಕ ಕೆಲಸಗಳನ್ನು ಮಾಡೋದು ಕೂಡ ಕಷ್ಟ ಆಗಿತ್ತು. ಇವ ಬದಲು ಚೈತ್ರಾ ಆಟ ಆಡಿ ಕ್ಯಾಪ್ಟನ್‌ ಆದರು.

 

Read Full Story

03:59 PM (IST) Dec 08

'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು' - ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರನ್ನು ನೋಡಿ, 'ಏನು ಅಶೋಕ್, ಸಣ್ಣಗಾಗಿದ್ಯಾ?' ಎಂದು ತಕ್ಷಣ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, 'ನಾಟಿ ಕೋಳಿ ತಿನ್ನುವುದು ಬಿಟ್ಟುಬಿಟ್ಟಿದ್ದೀನಿ ಸಾರ್' ಎಂದು ಹೇಳಿದ್ದಾರೆ.

Read Full Story

03:56 PM (IST) Dec 08

ದ್ವೇಷ ಭಾಷಣ ತಡೆಗೆ ಹೊಸ ಕಾನೂನು - ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!

Basangowda patil on hate speech bill: ದ್ವೇಷ ಭಾಷಣ ನಿಯಂತ್ರಣಕ್ಕೆ ಹೊಸ ಕಾನೂನು ತರುವ ಸರ್ಕಾರದ ಚಿಂತನೆಯು ತನ್ನನ್ನೇ ಗುರಿಯಾಗಿಸಿಕೊಂಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಹಿಂದೂಗಳ ಪರ ಮಾತನಾಡುವವರನ್ನು ಹತ್ತಿಕ್ಕಲು ಈ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದರು.

Read Full Story

03:27 PM (IST) Dec 08

BBK 12 - ಗಿಲ್ಲಿ ನಟನ ಜೊತೆ ಅಮಾನವೀಯವಾಗಿ ನಡ್ಕೊಂಡ ರಘು; ಪ್ರತ್ಯಕ್ಷಸಾಕ್ಷಿ ಅಭಿಷೇಕ್‌ ಶ್ರೀಕಾಂತ್‌ ಏನಂದ್ರು?

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ 11ನೇ ವಾರ ಹೊರಗಡೆ ಬಂದಿರುವ ಅಭಿಷೇಕ್‌ ಶ್ರೀಕಾಂತ್‌ ಅವರು ಗಿಲ್ಲಿ ನಟ ಹಾಗೂ ರಘು ನಡುವಿನ ಬಾಂಧವ್ಯದ ಜೊತೆಗೆ ರಘು ಬಳಿ ಮನವಿ ಮಾಡಿದ್ರೂ ಚಪಾತಿ ಕೊಟ್ಟಿಲ್ಲ ಎನ್ನುವ ವಿಚಾರ ಚರ್ಚೆಯಾಗಿದೆ.

Read Full Story

03:15 PM (IST) Dec 08

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಉದ್ಯೋಗ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಎದುರು ಗಳಗಳನೇ ಅತ್ತ ಕೊಪ್ಪಳದ ಯುವತಿ

ಧಾರವಾಡದಲ್ಲಿ ನಿಗದಿಯಾಗಿದ್ದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮುಂದೆ ಕೊಪ್ಪಳ ಮೂಲದ ಯುವತಿಯೊಬ್ಬಳು, ವಯಸ್ಸು ಮೀರುತ್ತಿದೆ, ಬೇಗ ಉದ್ಯೋಗ ಕರೆಯಿರಿ ಎಂದು ಕಣ್ಣೀರು ಹಾಕಿದ ಘಟನೆ ನಡೆಯಿತು.

Read Full Story

02:50 PM (IST) Dec 08

BBK 12 - ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್‌ ಆಯ್ತು - ಅಭಿಷೇಕ್‌ ಶ್ರೀಕಾಂತ್

Bigg Boss Kannada Season 12: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬಂದಿರುವ ಅಭಿಷೇಕ್‌ ಶ್ರೀಕಾಂತ್‌ ಅವರು ರಕ್ಷಿತಾ ಶೆಟ್ಟಿ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ರಕ್ಷಿತಾ ಆ ರೀತಿ ಮಾಡಿದ್ದು ಶಾಕ್‌ ಆಯ್ತು ಎಂದು ಹೇಳಿದ್ದಾರೆ. ಹಾಗಾದರೆ ರಕ್ಷಿತಾ ಏನು ಮಾಡಿದರು?

Read Full Story

02:38 PM (IST) Dec 08

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ - ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಒಂದು ವೇಳೆ ಹೈಕಮಾಂಡ್ ನಿರ್ಧಾರದಿಂದ ಬದಲಾವಣೆ ಅನಿವಾರ್ಯವಾದರೆ, ಡಿಸಿಎಂ ಡಿಕೆ ಶಿವಕುಮಾರ್ ಮಾತ್ರವಲ್ಲದೆ ಇತರರು ಸಿಎಂ ರೇಸ್‌ನಲ್ಲಿದ್ದಾರೆ ಎಂದರು.

Read Full Story

02:27 PM (IST) Dec 08

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿರಿಯಾನಿ ಬಾಡೂಟ ವ್ಯಾಪಾರ ಮಾಡುತ್ತಿದ್ದ ಮಾದಮ್ಮ ಕುಟುಂಬ ಸಾಲದ ಸುಳಿಗೆ ಸಿಲುಕಿ, ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಅಜ್ಜಿ, ತಾಯಿ ಹಾಗೂ ಮೊಮ್ಮಗ ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ.

Read Full Story

01:58 PM (IST) Dec 08

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ - ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ

ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಗಡೀಪಾರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ವಿಚಾರಣೆಗಾಗಿ ಪುತ್ತೂರು ಎಸಿ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ, ಅವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ತಮಗೆ ದೇವರ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ ಎಂದರು.

Read Full Story

01:34 PM (IST) Dec 08

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!

ಬೆಳಗಾವಿ ಅಧಿವೇಶನದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾಜ್ಯದ ಕೇಬಲ್ ಆಪರೇಟರ್‌ಗಳಿಗೆ ವಿದ್ಯುತ್ ಕಂಬಗಳಿಗೆ ವಿಧಿಸುವ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದಾರೆ. ಈ ಮೊದಲು ಪ್ರತಿ ಕಂಬಕ್ಕೆ ₹150 ಇದ್ದ ಶುಲ್ಕವನ್ನು ಇದೀಗ ₹75ಕ್ಕೆ ಇಳಿಸಲಾಗಿದೆ.

Read Full Story

01:28 PM (IST) Dec 08

ಕೊಪ್ಪಳ - ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!

ಡಿಸೆಂಬರ್ 20 ರಂದು ವಿವಾಹವಾಗಬೇಕಿದ್ದ ಭಾವಿ ದಂಪತಿ, ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ಹಿಂದಿರುಗುತ್ತಿದ್ದಾಗ ಕೊಪ್ಪಳದ ಗಂಗಾವತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಲಾರಿ ಅವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಸಾವು. ಮದುವೆ ಮನೆಯಲ್ಲಿ ಸೂತಕ.

Read Full Story

01:06 PM (IST) Dec 08

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ

ಈ ಸಭೆಯ ನಂತರ ನಾಯಕತ್ವ ಬದಲಾವಣೆಗೆ ಕದನ ವಿರಾಮ ಬಿದ್ದಿದೆ ಎಂಬ ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಪುತ್ರ, ಎಂಎಲ್‌ಎಸಿ ಯತೀಂದ್ರ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

Read Full Story

01:01 PM (IST) Dec 08

ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್ - ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ನಟ ದರ್ಶನ್ ದರ್ಪ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ತಮ್ಮ ಸಹ ಕೈದಿಗಳ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವರದಿಯಾಗಿದೆ. ಅವರ ಹಿಂಸೆ ತಾಳಲಾರದೆ, ಇಬ್ಬರು ಸಹ ಕೈದಿಗಳು ತಮ್ಮನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Read Full Story

12:43 PM (IST) Dec 08

ಸಿಎಂ ಸಿದ್ದರಾಯ್ಯಗೆ ಈಶ್ವರಪ್ಪ ವಾರ್ನಿಂಗ್ - ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ

ಭಗವದ್ಗೀತೆ ಕುರಿತ ಹೇಳಿಕೆ ಮತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಬಳಸಿದ ಪದಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ ಓಲೈಕೆಗಾಗಿ ಸಿಎಂ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Read Full Story

12:31 PM (IST) Dec 08

ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್ - ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್, ಸಿಎಂ ಹಾಗೂ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿದೆ.  ಹೈಕೋರ್ಟ್ ಈ ಹಿಂದೆ ಅರ್ಜಿಯನ್ನು ವಜಾಗೊಳಿಸಿತ್ತು.

Read Full Story

12:18 PM (IST) Dec 08

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree ರೋಶನ್‌ ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್

Anchor Anushree News: ಕಳೆದ ಆಗಸ್ಟ್‌ ತಿಂಗಳಿನಲ್ಲಿ ನಿರೂಪಕಿ ಅನುಶ್ರೀ, ರೋಶನ್‌ ಮದುವೆ ಆಗಿದ್ದಾರೆ. ಕನ್ನಡದಲ್ಲಿ ನಿರೂಪಣೆ ಮೂಲಕ ಗಮನಸೆಳೆದಿರುವ ಅನುಶ್ರೀ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿದೆ. ಇತ್ತೀಚೆಗೆ ಪತಿಯ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

Read Full Story

11:56 AM (IST) Dec 08

ಪ್ರೆಗ್ನಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ - ಯುವತಿ ಆತ್ಮ*ಹತ್ಯೆ

ನಿನ್ನ ನಂಬಿಕೆಗೆ ನಾನು ಮಾಡಿದ್ದೇನೆ ಅಂತ ನನಗೆ ಗೊತ್ತು ಅಮ್ಮ. ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. Sorry ಯವಿಟ್ಟು ಯಾರೂ ನನ್ನ ಹಾಗೆ ಮಾಡಿಕೊಳ್ಳಬೇಡಿ. ಈ ರೀತಿ ಇರೋ ನಾಯಿಗಳನ್ನು ನಂಬಿ ಮೋಸ ಹೋಗಬೇಡಿ.

Read Full Story

11:54 AM (IST) Dec 08

ಉಡುಪಿ - 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!

ಉಡುಪಿಯ ಉದ್ಯಾವರದಲ್ಲಿ 108 ಆಂಬುಲೆನ್ಸ್ ಸಕಾಲಕ್ಕೆ ಬಾರದೆ ವೃದ್ಧ ರೋಗಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರು ತಮ್ಮ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದು ಪ್ರಾಣ ಉಳಿಸಿದ್ದಾರೆ.
Read Full Story

11:29 AM (IST) Dec 08

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?

ಧಾರ್ಮಿಕ ಕಾರಣ ನೀಡಿ ದೇಗುಲ ಮತ್ತು ಗುರುದ್ವಾರ ಪ್ರವೇಶಿಸಲು ನಿರಾಕರಿಸಿದ ಕ್ರಿಶ್ಚಿಯನ್ ಸೇನಾಧಿಕಾರಿಯ ಅಮಾನತು ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಸೇನಾ ಆದೇಶಕ್ಕಿಂತ ಧರ್ಮವನ್ನು ಮೇಲೆ ಇಡುವುದು ಘೋರ ಅಶಿಸ್ತು ಎಂದು ನ್ಯಾಯಾಲಯ ಹೇಳಿದೆ.

Read Full Story

11:08 AM (IST) Dec 08

ಬೆಂಗಳೂರು - ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ವಿರುದ್ಧ ಯುವತಿಯೊಬ್ಬಳು ಸಾಮೂಹಿಕ ಅತ್ಯಾ೧ಚಾರದ ದೂರು ನೀಡಿದ್ದಳು. ಆದರೆ, ಬಾಣಸವಾಡಿ ಪೊಲೀಸರ ತನಿಖೆಯಲ್ಲಿ ಇಬ್ಬರಿಗೂ ಮೊದಲೇ ಪರಿಚಯವಿದ್ದು, ಇದು ಒಪ್ಪಿಗೆಯ ಸಂಬಂಧವಾಗಿತ್ತು ಎಂಬುದು ಬಯಲಾಗಿದೆ. ಸದ್ಯ ಪೊಲೀಸರು ಯುವತಿಯ ಗೊಂದಲದ ಹೇಳಿಕೆ ಬಗ್ಗೆ ತನಿಖೆ..

Read Full Story

11:07 AM (IST) Dec 08

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!

Bigg Boss: ಬಿಗ್‌ ಬಾಸ್‌ ಶೋನಲ್ಲಿ ಗೌರವ್‌ ಖನ್ನಾ ( Gaurav Khanna ) ವಿಜೇತರಾಗಿದ್ದಾರೆ. ಆದರೆ ಈ ಟ್ರೋಫಿ ಸಿಕ್ಕಿದ್ದು ಸರಿ ಅಲ್ಲ ಎಂಬ ವಿರೋಧ ಕೇಳಿ ಬರುತ್ತಿದೆ. ಕೆಂಪು ಬಣ್ಣದ ಡ್ರೆಸ್‌ ಹಾಕಿಕೊಂಡೋರಿಗೆ, ಸಲ್ಮಾನ್‌ ಖಾನ್‌ ಬಲಭಾಗದಲ್ಲಿ ನಿಂತೋರಿಗೆ ಯಶಸ್ಸು ಸಿಗಲ್ಲ ಎನ್ನೋ ಚರ್ಚೆ ಶುರುವಾಗಿದೆ.

 

Read Full Story

10:25 AM (IST) Dec 08

ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು - Suhana Syed ಎಂದೂ ಹೇಳಿರದ ರಿಯಲ್ ಕಥೆ

Suhana Syed Marriage: ಸರಿಗಮಪ ಶೋ ಖ್ಯಾತಿಯ ಸುಹಾನಾ ಸೈಯದ್‌ ಅವರು ನಿತಿನ್‌ ಶಿವಾಂಶ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ. ಹೀಗಾಗಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಆಗಿರಲಿಲ್ಲ. ಆದರೆ ಇದಕ್ಕೆ ಕಾರಣ ರಾಯರಂತೆ.

Read Full Story

10:23 AM (IST) Dec 08

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು - ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ

ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದವರು, ಇಂದು ಅದೇ ಸಂವಿಧಾನವನ್ನು ತುಳಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗದ ಇವರು ದೇಶಕ್ಕಾಗಿ ಯಾವ ಒಳ್ಳೆಯ ಕೆಲಸವನ್ನು ಮಾಡಿಲ್ಲ

Read Full Story

10:23 AM (IST) Dec 08

ಅಂದು ಕನ್ನಡಿಗರ ಕೆಣಕಿದ್ದ ಕರಾವಳಿ ಹುಡುಗಿ ಇಂದು ಮನೆಮಗಳು ಆಗಿದ್ದು ಹೇಗೆ? ಸೀಕ್ರೆಟ್ ಸ್ಟ್ರಾಟಜಿ ಏನು?

ರಕ್ಷಿತಾ ಶೆಟ್ಟಿ ಬಿಗ್​ಬಾಸ್ ಗೆಲ್ಲುವ ರೇಸ್​ನಲ್ಲಿದ್ರೂ ಒಂದಿಷ್ಟು ಎಡವಟ್ಟು ಮಾಡಿಕೊಂಡಿರೋದು ಸುಳ್ಳಲ್ಲ. ಅಂತೆಯೇ ಈವಾರ ರಕ್ಷಿತಾ ಮೇಲೆ ಮನೆಮಂದಿಯೆಲ್ಲಾ ಮುಗಿ ಬಿದ್ದಿದ್ದಾರೆ. ಈ ಎಡವಟ್ಟುಗಳನ್ನ ಮೀರಿ, ರಕ್ಷಿತಾ ಗೆಲ್ಲಬಹುದಾ.? ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಸ್ಟೋರಿ ನೋಡಿ...

Read Full Story

09:58 AM (IST) Dec 08

ನಾನೀಗ ಮನೆಯನ್ನು ಕಂಟ್ರೋಲ್‌ ಮಾಡಲಾಗ್ತಿಲ್ಲ, ವಿಲನ್‌ ಬಂದ್ರು ಎಂದು ನಡುಗಿದ Bigg Boss

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಿಲನ್‌ ಎಂಟ್ರಿಯಾಗಿದೆ. ಹೌದು, ಈಗ ಬಿಗ್‌ ಬಾಸ್‌ ಕಂಟ್ರೋಲ್‌ ಮಾಡುತ್ತಿಲ್ಲ. ಹಾಗಾದರೆ ಬಂದೋರು ಯಾರು? ಒಟ್ಟಿನಲ್ಲಿ ಈ ಎಪಿಸೋಡ್‌ ಭಾರೀ ಕುತೂಹಲದಿಂದ ಕೂಡಿದೆ.

Read Full Story

More Trending News