Published : Feb 06, 2026, 06:36 AM ISTUpdated : Feb 06, 2026, 11:10 PM IST

karnataka news live: ಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!

ಸಾರಾಂಶ

ಬೆಂಗಳೂರು ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲ ಬಗೆಹರಿಸಿ ಎಂಬ ಶಾಸಕರ ಕೂಗಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯತಮ್ಮ 17ನೇ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆ.  ಅವರು ಗುರುವಾರ ಇಡೀ ದಿನ ಗೃಹ ಇಲಾಖೆ ಸೇರಿ ವಿವಿಧ 10 ಇಲಾಖೆಗಳ ಸಚಿವರು, ಉನ್ನತ ಅಧಿಕಾರಿಗಳ ಜತೆ ಬಜೆಟ್ ಪೂರ್ವಭಾವಿ ಚರ್ಚೆ ನಡೆಸಿದರು. ಇದರೊಂದಿಗೆ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಅಧಿಕೃತ ತಯಾರಿ ಆರಂಭಿಸಿದರು. ಶುಕ್ರವಾರವೂ ಈ ಸಭೆಗಳು ಮುಂದುವರಿಯಲಿವೆ.

telangana Swamiji Ganja Case

11:10 PM (IST) Feb 06

ಕರ್ನಾಟಕದ ಗುರೂಜಿ ಕಮಲಾಕರ ಭಟ್ ಅನೈತಿಕ ಸಂಬಂಧ ಬೆಳೆಸಿದರೆ, ತೆಲಂಗಾಣ ಸ್ವಾಮೀಜಿ ದೇವಸ್ಥಾನದಲ್ಲೇ ಗಾಂಜಾ ಬೆಳೆಸಿದ!

ನಮ್ಮ ರಾಜ್ಯದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಬೆಳೆಸಿ ಜೈಲು ಸೇರಿದರೆ, ತೆಲಂಗಾಣದ ಸ್ವಾಮೀಜಿಯೊಬ್ಬರು ದೇವಸ್ಥಾನದ ಆವರಣದ ಹೂವಿನ ತೋಟದಲ್ಲಿ ಗಾಂಜಾ ಗಿಡ ಬೆಳೆಸಿ ಜೈಲು ಸೇರಿದ ಪ್ರಸಂಗ ನಡೆದಿದೆ. ಇಂತಹ ಸ್ವಾಮೀಜಿ, ಜ್ಯೋತಿಷಿಗಳ ಬಗ್ಗೆ ಭಕ್ತರು ಜಾಗೃತರಾಗಬೇಕು.

Read Full Story

10:43 PM (IST) Feb 06

ಮೈಸೂರಿನ ಹುಡುಗನಿಗೆ ಡಿವೋರ್ಸ್;‌ 'ಮುಕೇಶ್‌ ಅಂಬಾನಿ ಜೊತೆ ಮದುವೆಯಾಗ್ತೀನಿ' ಎಂದ 47ರ ರಾಖಿ ಸಾವಂತ್!

Bigg Boss Rakhi Sawant: ಈ ಹಿಂದೆ ಮೈಸೂರಿನ ಆದಿಲ್‌ ಖಾನ್‌ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್‌ ಅವರು ರಿಲಾಯನ್ಸ್‌ ಸಾಮ್ರಾಜ್ಯದ ಮಾಲೀಕ ಮುಕೇಶ್‌ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

 

Read Full Story

10:31 PM (IST) Feb 06

ಕಮಲಾಕರ್ ಭಟ್, ಸುಚಿತ್ರಾ 'ಕಾಮಾಯಣ' ದೂರಿನ ನಿರ್ಲಕ್ಷ್ಯ - ಇಬ್ಬರು ಪೊಲೀಸರ ಎತ್ತಂಗಡಿ-ಎಸ್ಪಿ ದೀಪನ್ ಮಾಹಿತಿ!

ಉತ್ತರ ಕನ್ನಡದ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಗ್ಯಾಂಗ್‌ನಿಂದ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ವರ್ಗಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಆದೇಶ ಹೊರಡಿಸಿದ್ದಾರೆ.

Read Full Story

08:42 PM (IST) Feb 06

AR Rahman ಕೋಮುವಾದಿ ವಿವಾದ - ಜನರು ಬೊಗಳೋಕೆ ಶುರು ಮಾಡಿದ್ದಾರೆ - ಟೀಕಿಸಿದ PraKash Raj!

ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕುರಿತ ಕಂಗನಾ ರಣಾವತ್ ಹೇಳಿಕೆಗೆ ನಟ ಪ್ರಕಾಶ್ ರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೆಹಮಾನ್ ಅವರನ್ನು ದೇಶದ್ರೋಹಿ ಎಂದವರನ್ನು ಟೀಕಿಸಿದ್ದು, ಈ ಬೆಳವಣಿಗೆಯನ್ನು 'ಬೊಗಳುವಿಕೆ' ಎಂದು ಕರೆದಿದ್ದಾರೆ.
Read Full Story

07:53 PM (IST) Feb 06

Karna Serial - ಆ ಎರಡು ತಪ್ಪಿಗೆ, ಸಾಕ್ಷಿ ಸಮೇತ ನಿರ್ದೇಶಕರನ್ನು ತರಾಟೆಗೆ ತಗೊಂಡ ವೀಕ್ಷಕರು

ಕರ್ಣ ಧಾರಾವಾಹಿಯಲ್ಲಿ ಇತ್ತೀಚೆಗೆ ಕರ್ಣ ರೋಗಿಯೋರ್ವರಿಗೆ ಮೆಡಿಸಿನ್‌ ಚೀಟಿ ಬರೆದುಕೊಟ್ಟಿದ್ದು, ಆ ಬಳಿಕ ನಿಧಿ, ನಿತ್ಯಾ ನಡುವೆ ಚರ್ಚೆ ಆದ ವಿಷಯದ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಅದೆಲ್ಲ ಹೇಗೆ ಸಾಧ್ಯ ಎಂಬ ಚರ್ಚೆ ಆಗುತ್ತಿದೆ. ವೀಕ್ಷಕರ ಪ್ರಕಾರ ನಿರ್ದೇಶಕರು ಮಾಡಿದ ತಪ್ಪೇನು?

 

Read Full Story

07:51 PM (IST) Feb 06

ಬಿಗ್ ಬಾಸ್ ಮನೆಯ ಇಬ್ಬರು ಹುಡ್ಗೀರೂ ನನ್ನ ಮದುವೆಯಾಗಬೇಕು; ಸ್ಪರ್ಧಿಗಳಿದ್ದ ರೆಸಾರ್ಟ್‌ಗೆ ನುಗ್ಗಿದ ಆಗಂತುಕ!

ಬಿಗ್ ಬಾಸ್ ಮಹಿಳಾ ಸ್ಪರ್ಧಿಗಳನ್ನು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಪೀಡಿಸುತ್ತಿದ್ದ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಈ ಕಿರುಕುಳವು, ಅವರು ತಂಗಿದ್ದ ರೆಸಾರ್ಟ್‌ಗೆ ನುಗ್ಗಿದ್ದಾನೆ. ತಮ್ಮ ಸುರಕ್ಷತೆಗೆ ಹೆದರಿ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

Read Full Story

07:35 PM (IST) Feb 06

ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಫೆ.7ರಿಂದ ಸಂಚಾರ ಪುನರಾರಂಭ

ದಾಂಡೇಲಿ-ಅಳ್ನಾವರ ರೈಲು ಸೇವೆ ಪುನರಾರಂಭಗೊಳ್ಳಲಿದ್ದು, ಹಾಸನ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಮತ್ತು ಕಲಬುರ್ಗಿ-ಲಾತೂರ್ ಹೊಸ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಬೆಳವಣಿಗೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ರೈಲ್ವೆ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆ ಮೂಡಿಸಿವೆ.
Read Full Story

07:08 PM (IST) Feb 06

ಗಿಲ್ಲಿ ನಟ ಸಿನಿಮಾ ಡೈರೆಕ್ಟರ್ ಆಗುವ ಆಸೆ ಆರಂಭದಲ್ಲಿಯೇ ಕಮರಿ ಹೋಗುತ್ತಾ? ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲು!

'ಸರ್ಕಾರಿ ಶಾಲೆ ಹೆಚ್-8' ಸಿನಿಮಾದ ಪ್ರಚಾರಕ್ಕೆ ಗೈರಾದ ಕಾರಣ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ನಿಯಮ ಉಲ್ಲಂಘನೆಗೆ ಚಿತ್ರರಂಗದಿಂದ ಬ್ಯಾನ್ ಮಾಡಿದಲ್ಲಿ ನಿರ್ದೇಶಕನಾಗುವ ಕನಸಿಗೆ ಕುತತು ಬರಲಿದೆ.

Read Full Story

06:56 PM (IST) Feb 06

Bhagyalakshmi - ಲೈವ್​ಗೆ ಬಂದ ತಾಂಡವ್​ ಫುಲ್​ ಸ್ಟೋರಿ ಹೇಳೇಬಿಟ್ರು! ಸಿಕ್ರೆ ಸಾಯಿಸಿಬಿಡ್ತೇನೆ ಎಂದ ಫ್ಯಾನ್​

ಮುಕ್ತಾಯದ ಹಂತದಲ್ಲಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್, ನೇರಪ್ರಸಾರದಲ್ಲಿ ಬಂದು ಕ್ಷಮೆ ಯಾಚಿಸಿದ್ದಾರೆ. ತನ್ನ ತಪ್ಪಿನ ಅರಿವಾಗಿದೆ, ಭಾಗ್ಯ ಕ್ಷಮಿಸಿದರೆ ಸಾಕು ಎಂದಿರುವ ತಾಂಡವ್ ಮಾತಿನಿಂದ, ಕಥೆಯ ಅಂತ್ಯದಲ್ಲಿ ಭಾಗ್ಯ ಮತ್ತು ಆದಿ ಒಂದಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
Read Full Story

06:55 PM (IST) Feb 06

ಆರೋಪಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ ಭಟ್ ಪುತ್ರಿ ಸುಮಶ್ರೀಗೆ ಟಾರ್ಚರ್! ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ

ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ಅವರ ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಇದೀಗ ಶಿರಸಿ ಉಪವಿಭಾಗದ ಡಿವೈಎಸ್‌ಪಿಗೆ ವಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಯಲಿದೆ.

Read Full Story

06:09 PM (IST) Feb 06

ಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಜಾಲ, ಪತ್ತೆ ಹಚ್ಚುವಲ್ಲಿ ಇಲಾಖೆ ವಿಫಲ, ಸಿಸಿಬಿಗೆ ಬಿತ್ತು ಕಮಿಷನರ್ ಬರೆ!

ಮೈಸೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ ಹಾವಳಿ ನಿಯಂತ್ರಣದಲ್ಲಿ ವಿಫಲವಾದ ಆರೋಪದ ಮೇಲೆ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಸಿಸಿಬಿ ವಿಭಾಗಕ್ಕೆ 'ಮೇಜರ್ ಸರ್ಜರಿ' ನಡೆಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಏಕಕಾಲದಲ್ಲಿ ವರ್ಗಾವಣೆ ಮಾಡಿದ್ದಾರೆ.

Read Full Story

06:08 PM (IST) Feb 06

ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​ - 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?

'ಸಪ್ತಸಾಗರದಾಚೆ ಎಲ್ಲೋ' ಸಹನಟ ರಕ್ಷಿತ್ ಶೆಟ್ಟಿ ಅವರ ವಿಭಿನ್ನ ವ್ಯಕ್ತಿತ್ವದ ಬಗ್ಗೆ ನಟಿ ರುಕ್ಮಿಣಿ ವಸಂತ್ ಮಾತನಾಡಿದ್ದಾರೆ. ಸಿನಿಮಾ ಶೂಟಿಂಗ್​ನಲ್ಲಿ ಮಧ್ಯರಾತ್ರಿ 2 ಗಂಟೆಗೆ ನಡೆದ ಘಟನೆಯ ಬಗ್ಗೆಯೂ ಅವರು ವಿವರಿಸಿದ್ದಾರೆ. 

Read Full Story

06:04 PM (IST) Feb 06

ಬೇಸಿಗೆಗೂ ಮುನ್ನವೇ ಬೆಂಗಳೂರಲ್ಲಿ ಪವರ್ ಕಟ್ - ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳ ಪಟ್ಟಿ ಇಲ್ಲಿದೆ!

ಬೆಂಗಳೂರಿನ ಹೃದಯಭಾಗದ ಹಲವು ಪ್ರದೇಶಗಳಲ್ಲಿ ಫೆಬ್ರವರಿ 8, ಭಾನುವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ, ಗಾಂಧಿನಗರ, ಶೇಷಾದ್ರಿಪುರಂ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
Read Full Story

05:28 PM (IST) Feb 06

ರಾಜ್ಯವನ್ನೇ ಬೆಚ್ಚಿಬೀಳಿಸಿದ ಅಕ್ರಮ ಶಸ್ತ್ರಾಸ್ತ್ರ ಜಾಲ, ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅಕ್ರಮ ನಾಡ ಬಂದೂಕು ತಯಾರಿಕಾ ಜಾಲವೊಂದು ಪತ್ತೆಯಾಗಿದೆ. ಭದ್ರಾಪುರ ಗ್ರಾಮದ ಕಾರ್ಪೆಂಟರ್ ಲಕ್ಷ್ಮಣಪ್ಪ ಎಂಬಾತನನ್ನು ಬಂಧಿಸಿದ್ದು, ಈತ ಗುಜರಿ ಸಾಮಾನು ಬಳಸಿ ಬಂದೂಕು ತಯಾರಿಸಿ ರೈತರಿಗೆ ಮಾರಾಟ ಮಾಡುತ್ತಿದ್ದ. 

Read Full Story

05:25 PM (IST) Feb 06

ಹಾವೇರಿ ಹೆದ್ದಾರಿಯಲ್ಲಿ ಹೈಟೆಕ್ ದರೋಡೆ - ಮೂವಿಂಗ್ ಲಾರಿಯಿಂದಲೇ 25 ಲಕ್ಷದ ಫ್ಲಿಪ್‌ಕಾರ್ಟ್ ಮಾಲು ಮಂಗಮಾಯ!

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುತ್ತಿದ್ದ ಫ್ಲಿಪ್‌ಕಾರ್ಟ್ ಲಾರಿಯಿಂದ ಸಿನಿಮೀಯ ಶೈಲಿಯಲ್ಲಿ ಕಳ್ಳತನ ನಡೆದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಬಳಿ, ಖದೀಮರು ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

05:10 PM (IST) Feb 06

ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ಆದೇಶ, ರಾಜ್ಯದ ಪಾತ್ರವಿಲ್ಲ; ಬಿಜೆಪಿ ಮೊಸಳೆ ಕಣ್ಣೀರು ನಿಲ್ಲಿಸಲಿ- ಸಿದ್ದರಾಮಯ್ಯ

ಬೆಂಗಳೂರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವಲ್ಲ, ಇದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯ ಆದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story

04:59 PM (IST) Feb 06

Strawberries - ಬರೀ ರುಚಿಯಲ್ಲ, ಆರೋಗ್ಯಕ್ಕೂ ಸೂಪರ್‌ಫುಡ್! ಇಲ್ಲಿದೆ ಅಚ್ಚರಿಯ ಲಾಭಗಳು

ಸ್ಟ್ರಾಬೆರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಂದು ಸೂಪರ್‌ಫುಡ್. ಇದರಲ್ಲಿ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್ ಹೇರಳವಾಗಿದ್ದು, ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿದೆ.

Read Full Story

04:44 PM (IST) Feb 06

ಮೇಘಾಲಯದಲ್ಲಿ ಕರ್ನಾಟಕ ಮಾಧ್ಯಮ ತಂಡ - ನೈಸರ್ಗಿಕ ಸೇತುವೆ ನಿರ್ಮಾತೃ ಶ್ರೀ ಹ್ಯಾಲಿ ವಾರ್ ಜೊತೆ ಸಂವಾದ.

ಮೇಘಾಲಯದ ದುರ್ಗಮ ಸೀಜ್ ಗ್ರಾಮದಲ್ಲಿ ಮರದ ಬೇರುಗಳಿಂದ ನೈಸರ್ಗಿಕ ಸೇತುವೆ ನಿರ್ಮಿಸಿ ಪದ್ಮಶ್ರೀ ಪುರಸ್ಕೃತ ಹ್ಯಾಲಿ ವಾರ್ ಅವರ ಸಾಧನೆಯನ್ನು ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡ ವೀಕ್ಷಿಸಿತು. ಪ್ರಕೃತಿಯ ಒಡನಾಟದಿಂದ 70 ಅಡಿ ಉದ್ದದ ಬೇರಿನ ಸೇತುವೆ ನಿರ್ಮಿಸಿರುವ ಅವರ ಜೀವನಗಾಥೆ ಇಲ್ಲಿದೆ.

 

Read Full Story

04:20 PM (IST) Feb 06

ಸಾಣಾಪುರ ಬಳಿ ಇಸ್ರೇಲ್ ಮಹಿಳೆ ಮೇಲೆ ಬಲತ್ಕಾರ - ಪ್ರಕರಣದ ಆರೋಪಿಗಳು ದೋಷಿ, ಗಂಗಾವತಿ ಕೋರ್ಟ್ ಮಹತ್ವದ ಆದೇಶ, 16ಕ್ಕೆ ಅಂತಿಮ ತೀರ್ಪು!

ಗಂಗಾವತಿ ತಾಲೂಕಿನ ಸಾಣಾಪೂರ ಬಳಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾ೧ಚಾರ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ, ಗಂಗಾವತಿ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ. ಘಟನೆ ನಡೆದ 9 ತಿಂಗಳೊಳಗೆ ತನಿಖೆ ಪೂರ್ಣಗೊಂಡಿದ್ದು, ಫೆಬ್ರವರಿ 16 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

Read Full Story

04:19 PM (IST) Feb 06

101 ದೇವಸ್ಥಾನ, 101 ಬಾವಿಗಳ ಲಕ್ಕುಂಡಿ ಜನರನ್ನು ಊರಿಂದಾಚೆ ಕಳಿಸೋದು ಅನಿವಾರ್ಯ; ಎಚ್.ಕೆ. ಪಾಟೀಲ

ಐತಿಹಾಸಿಕ ಲಕ್ಕುಂಡಿಯಲ್ಲಿ ₹10 ಕೋಟಿ ವೆಚ್ಚದಲ್ಲಿ 'ಪಂಚ ದೇವಾಲಯ' ಮತ್ತು 'ಪಂಚ ಬಾವಿ' ಅಭಿವೃದ್ಧಿ ಯೋಜನೆಗೆ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು. ಲಕ್ಕುಂಡಿಯ 101 ದೇವಾಲಯಗಳು ಮತ್ತು 101 ಬಾವಿಗಳ ಉತ್ಖನನಕ್ಕಾಗಿ ಗ್ರಾಮವನ್ನು ಸ್ಥಳಾಂತರಿಸಿ 'ನವ ಲಕ್ಕುಂಡಿ' ನಿರ್ಮಿಸುವ ಪ್ರಸ್ತಾಪವೂ ಚರ್ಚೆಯಲ್ಲಿದೆ.

Read Full Story

03:53 PM (IST) Feb 06

ನನ್ನಿಂದ ಎಲ್ಲರನ್ನೂ ಒಪ್ಪಿಕೊಳ್ಳೋಕೆ ಆಗಲ್ಲ; ಮಂಗಳಮುಖಿಯರ ವಿರುದ್ಧ ಮಾತನಾಡಿದ ನಟಿಗೆ ತರಾಟೆ

LGBTQIA+ ಸಮುದಾಯದ ಎಲ್ಲಾ ವಿಭಾಗಗಳನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಗ್ ಬಾಸ್ ಸ್ಪರ್ಧಿ ವೇದಲಕ್ಷ್ಮಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.
Read Full Story

03:43 PM (IST) Feb 06

ಎವಿಆರ್ ರೆಡ್ಡಿ ಸ್ಯಾಂಡಲ್‌ವುಡ್‌ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!

ನಿರ್ಮಾಪಕ ಅರವಿಂದ ರೆಡ್ಡಿಗೆ ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಬೆದರಿಕೆ ಪತ್ರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸರು ಈ ಸಂಬಂಧ ಸ್ಯಾಂಡಲ್‌ವುಡ್ ನಟಿಯ ಗೆಳೆಯ ವೈಶಾಕ್‌ನನ್ನು ಆಕೆಯ ಮನೆಯಿಂದಲೇ ಬಂಧಿಸಿದ್ದಾರೆ. ಈ ಬಂಧನವು ಪ್ರಕರಣದಲ್ಲಿ ನಟಿಯ ಪಾತ್ರದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Read Full Story

03:18 PM (IST) Feb 06

ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್‌ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!

ಇತ್ತೀಚೆಗೆ ನಂದಗೋಕುಲ ಧಾರಾವಾಹಿಯಲ್ಲಿ ಮೂರನೇ ಮಗ ಮಾಧವನ ಮದುವೆ ಆಗಿದೆ. ನಟಿ ಕೃಷ್ಣಪ್ರಿಯಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಅಮೃತಾ ರೂಪೇಶ್‌ ಕೂಡ ಶುಭಾಶಯ ತಿಳಿಸಿದ್ದಾರೆ.

Read Full Story

03:12 PM (IST) Feb 06

ಕೊರಿಯನ್ ಗೇಮ್‌ನಿಂದ ಮೂವರು ಬಾಲಕಿಯರು ಸಾವನ್ನಪ್ಪಿದ ಕೇಸಿಗೆ ಸಿಕ್ತು ಟ್ವಿಸ್ಟ್; ಅಪ್ಪನೇ ಸತ್ಯ ಬಾಯ್ಬಿಟ್ಟ!

ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೊರಿಯನ್ ಸೀರೀಸ್ ಮತ್ತು ಗೇಮ್‌ಗಳಿಗೆ ದಾಸರಾಗಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಅಸಲಿ ಕಾರಣವನ್ನು ಇದೀಗ ಅವರ ತಂದೆಯೇ ಪೊಲಿಸರ ಮುಂದೆ ರಿವೀಲ್ ಮಾಡಿದ್ದಾರೆ.

Read Full Story

02:42 PM (IST) Feb 06

ಮಗು ಮಾಡ್ಕೊಳ್ತಿಲ್ಲ, ಸುದ್ದಿಗೋಷ್ಠಿಯಲ್ಲೇ ಎಳೆದು ತೂರಾಡಿ ಡ್ಯಾನ್ಸ್ ಮಾಡ್ತೀರಾ?; Bigg Boss ಸ್ಪರ್ಧಿಯ ಪತ್ನಿಗೆ ತರಾಟೆ

Bigg Boss Akanksha Chamola: ಸುದ್ದಿಗೋಷ್ಠಿಯಲ್ಲಿ ನಟಿ ಆಕಾಂಕ್ಷಾ ಅವರು ಇಬ್ಬರು ನಟರ ಜೊತೆ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗ್ತಿದೆ. ಮಗು ಮಾಡಿಕೊಂಡಿಲ್ಲ, ಆದರೆ ಹೀಗೆಲ್ಲ ಡ್ಯಾನ್ಸ್‌ ಮಾಡುತ್ತಿರುವುದು ಸರಿಯೇ ಎಂದು ಅನೇಕರು ಕಾಮೆಂಟ್‌ ಹಾಕುತ್ತಿದ್ದಾರೆ. 

Read Full Story

02:14 PM (IST) Feb 06

ಐತಿಹಾಸಿಕ ಲಕ್ಕುಂಡಿ ಪುನರುತ್ಥಾನಕ್ಕೆ 10 ಕೋಟಿ ಅನುದಾನ - ರಾಜಕೀಯ ವೈಷಮ್ಯ ಮರೆತು ಒಟ್ಟಾ ಬಿಜೆಪಿ-ಕಾಂಗ್ರೆಸ್ ನಾಯಕರು!

ಲಕ್ಕುಂಡಿ ಗತವೈಭವ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅಭಿವೃದ್ಧಿಗೆ ಸಚಿವ ಎಚ್‌ಕೆ ಪಾಟೀಲ್ ಮತ್ತು ಶಾಸಕ ಸಿಸಿ ಪಾಟೀಲ್ ಚಾಲನೆ ನೀಡಿದರು. ಉತ್ಖನನದಲ್ಲಿ ಸುಮಾರು 45 ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಿಂದ 'ನವ ಲಕ್ಕುಂಡಿ' ನಿರ್ಮಾಣಕ್ಕೆ ಮನವಿ

Read Full Story

01:38 PM (IST) Feb 06

5 ವರ್ಷವೂ ನಮ್ಮ ತಂದೆಯವರೇ ಸಿಎಂ - ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ!

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣ 5 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಈ ಬಗ್ಗೆ ಈಗಾಗಲೇ ತೀರ್ಮಾನಿಸಿದ್ದು, ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. 

Read Full Story

01:15 PM (IST) Feb 06

Lecture Video Viral - ಸಾಗರದಲ್ಲಿ ವಿದ್ಯೆ ಕಲಿಸೋ ಶಿಕ್ಷಕನಿಂದಲೇ ಕಾಮದಾಟ; ಅಟ್ಟಾಡಿಸಿಕೊಂಡು ಹೊಡೆದ ಯುವಕರು!

Lecture Video Viral: ಬೇಲಿಯೇ ಎದ್ದು ಹೊಲ ಮೇಯ್ದರೇ ಎಂಬ ಗಾದೆಯನ್ನು ಕೇಳುತ್ತೀರಿ. ಅಂತೆಯೇ ವಿದ್ಯೆ ಕಲಿಸುವ ಶಿಕ್ಷಕ, ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಸಾಗರದಲ್ಲಿ ನಡೆದಿದೆ. ಆಮೇಲೆ ಯುವಕರ ಗುಂಪೊಂದು ಗೂಸಾ ನೀಡಿದೆ.

 

Read Full Story

12:47 PM (IST) Feb 06

Maniyanpilla Raju - ಬೈಕ್‌ಗೆ ಕಾರು ಡಿಕ್ಕಿ ಹೊಡೆದ ನಟ ಮಣಿಯನ್​ಪಿಳ್ಳ ರಾಜು ಅರೆಸ್ಟ್, ಇಬ್ಬರಿಗೆ ಗಂಭೀರ ಗಾಯ

ತಿರುವನಂತಪುರಂನಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪ್ರಕರಣದಲ್ಲಿ ಮಲಯಾಳಂ ನಟ ಮಣಿಯನ್​ಪಿಳ್ಳ ರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ನಂತರ ಸ್ಥಳದಲ್ಲಿ ನಿಲ್ಲಿಸಿಲ್ಲ ಎಂಬ ಆರೋಪದ ಮೇಲೆ BNS ಮತ್ತು MV ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಟನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
Read Full Story

12:34 PM (IST) Feb 06

Bigg Boss ಸ್ಪರ್ಧಿಗಳ ಸಮಾಗಮ; ವೀಕ್ಷಕರಿಗೆ ಗಿಲ್ಲಿ ನಟ, ಕಾವ್ಯ ಶೈವ ಶುಭ ಸುದ್ದಿ ಕೊಟ್ಟರಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದು, ಸ್ಪರ್ಧಿಗಳೆಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಹೀಗಿರುವಾಗ ಇವರೆಲ್ಲರೂ ಒಟ್ಟಿಗೆ ಸೇರಿರುವ ಫೋಟೋಗಳು ವೈರಲ್‌ ಆಗ್ತಿದೆ. ಹಾಗಾದರೆ ಇದರ ಹಿಂದಿನ ಕಥೆ ಏನು?

 

Read Full Story

12:29 PM (IST) Feb 06

ಅಮೆರಿಕಾಗೆ ಹೊರಟಿದ್ದ ಹುಬ್ಬಳ್ಳಿ ಮಹಿಳೆಯ ಕೋಟಿಗಟ್ಟಲೆ ಚಿನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಬಳಿಕ ಮಾಯ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ, ದುಬೈ ಮೂಲಕ ಅಮೆರಿಕಾಗೆ ತೆರಳುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯ ಲಗೇಜ್ ಬ್ಯಾಗ್‌ನಿಂದ ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿದೆ. ಚೆಕ್-ಇನ್ ನಂತರ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಶಂಕೆ ವ್ಯಕ್ತವಾಗಿದೆ.

Read Full Story

12:15 PM (IST) Feb 06

ಕಾರವಾರ ನಗರಸಭೆಯ ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಭಾರೀ ಅಗ್ನಿ ಅವಘಡ! ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

ಕಾರವಾರದ ತ್ಯಾಜ್ಯ ಘಟಕದಲ್ಲಿ ಅಗ್ನಿ ಅವಘಡ: ಶಿರವಾಡದ ಡಂಪಿಂಗ್ ಯಾರ್ಡ್‌ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡವನ್ನು ಕಾರವಾರ, ಅಂಕೋಲಾ ಮತ್ತು ಬಿಣಗಾದ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಹತೋಟಿಗೆ ತಂದಿದ್ದಾರೆ.ಘಟನೆ ರಣಭೀಕರ ದೃಶ್ಯಗಳು ಇಲ್ಲಿವೆ ನೋಡಿ!

Read Full Story

12:07 PM (IST) Feb 06

ಬೆಂಗಳೂರು - ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?

ಬೆಸ್ಕಾಂನ 66/11 ಕೆ.ವಿ ರಾಜರಾಜೇಶ್ವರಿ ನಗರ, 66/11 ಕೆ.ವಿ ಬನಶಂಕರಿ, 66/11 ಕೆ.ವಿ ಸರ್.ಎಂ.ವಿ. ಲೇಔಟ್ ಮತ್ತು 220/66/11 ಕೆ.ವಿ ವೃಷಭಾವತಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಿನ್ನೆಲೆ   ಫೆ.7ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Read Full Story

12:03 PM (IST) Feb 06

Darshan Wife Vijayalakshmi ವಿರುದ್ಧ ಪೊಲೀಸರಿಗೇ ಅಸಮಾಧಾನ! ಅಂಥದ್ದೇನಾಯ್ತು?

Vijayalakshmi Darshan Case: ನಟ ದರ್ಶನ್‌ ತೂಗುದೀಪ ಅವರು ಜೈಲಿನಲ್ಲಿದ್ದರೆ, ಪತ್ನಿ ವಿಜಯಲಕ್ಷ್ಮೀ ಅವರು ನನಗೆ ನೆಗೆಟಿವ್‌ ಕಾಮೆಂಟ್ಸ್‌ ಬರುತ್ತಿದೆ ಎಂದು ದೂರು ನೀಡಿದ್ದರು. ಈಗ ಪೊಲೀಸರು ವಿಜಯಲಕ್ಷ್ಮೀ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಂಥದ್ದು ಏನಾಯ್ತು?

 

Read Full Story

11:40 AM (IST) Feb 06

ಸನ್ಯಾಸ ದೀಕ್ಷೆ ಸ್ವೀಕರಿಸಿದ ದಾವಣಗೆರೆ ಟಾಪರ್ ಎಂಜಿನಿಯರಿಂಗ್ ವಿದ್ಯಾರ್ಥಿನಿ!

ದಾವಣಗೆರೆ: ದಾವಣಗೆರೆಯ ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ ಇಂದು ತಮ್ಮ 26ನೇ ವಯಸ್ಸಿಗೆ ಜೈನ ಸನ್ಯಾಸಿ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

11:40 AM (IST) Feb 06

ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಸಡಗರ - ಪಾದಚಾರಿ ಭಕ್ತರ ರಕ್ಷಣೆಗೆ ಅರಣ್ಯ ಇಲಾಖೆ ಹೈ ಅಲರ್ಟ್; ದಾರಿ ಉದ್ದಕ್ಕೂ ಡ್ರೋನ್ ಕಣ್ಗಾವಲು!

ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಇತ್ತೀಚಿನ ಚಿರತೆ ದಾಳಿಯ ಹಿನ್ನೆಲೆ ಅರಣ್ಯ ಇಲಾಖೆ ಭಕ್ತರ ಸುರಕ್ಷತೆಗೆ ತಾಳುಬೆಟ್ಟದಿಂದ ಬೆಟ್ಟದವರೆಗೆ 8 ವಿಶೇಷ ಸಶಸ್ತ್ರ ತಂಡ ನಿಯೋಜಿಸಿ, ಡ್ರೋನ್ ಕ್ಯಾಮೆರಾಗಳ ಮೂಲಕ ಹೈಟೆಕ್ ಕಣ್ಗಾವಲು ಇರಿಸಿದೆ.

Read Full Story

11:36 AM (IST) Feb 06

ಫೋಟೋಗಳು - Radhika Pandit ಮನೆಯಲ್ಲಿ ಡಬಲ್‌ ಸಂಭ್ರಮ; ಸೊಸೆಗೆ ವಿಶ್‌ ಮಾಡಿದ 'ರಾಕಿಂಗ್‌ ಸ್ಟಾರ್‌' ಪತ್ನಿ

Actress Radhika Pandit Photos: ನಟಿ ರಾಧಿಕಾ ಪಂಡಿತ್‌ ಮನೆಯಲ್ಲಿ ಡಬಲ್‌ ಸಂಭ್ರಮ ಎನ್ನಬಹುದು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಅವರು ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ.

 

Read Full Story

10:50 AM (IST) Feb 06

ಸುಚಿತ್ರಾ ಚಿಟಿಕಿ ಹೊಡೆದ್ರೆ ಕ್ಯೂ ನಿಲ್ತಾರೆ, ನಾನೇ ನಾಯಿ ಥರ ಅವಳ ಹಿಂದೆ ಅಲೆದೆ - Kamalakar Bhat ಆಡಿಯೋ ವೈರಲ್

Astrologer Kamalakar Bhat Suchitra: ಸಿದ್ದಾಪುರ ಮೂಲದ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಅಕ್ರಮ ಸಂಬಂಧದಿಂದ ಒಂದು ಕೊಲೆ ಆಗಿದೆ. ಸುಚಿತ್ರಾರ ಅಕ್ರಮ ಸಂಬಂಧದಿಂದ ಬೇಸತ್ತ ಮಗಳು ಸುಮಶ್ರೀ ಕೂಡ ತಾಯಿ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಕಮಲಾಕರ್‌, ಸುಚಿತ್ರಾರ ಆಡಿಯೋ ಕೂಡ ವೈರಲ್‌ ಆಗ್ತಿದೆ.

 

Read Full Story

10:44 AM (IST) Feb 06

ಕಾಂಗ್ರೆಸ್ ನಾಯಕರಿಗೆ ಮಹಾತ್ಮ ಗಾಂಧಿ ದೊಣ್ಣೆಯಿಂದ ಹೊಡೆಯುವ ಜಾಹೀರಾತು ನೀಡಿದ ಬಿಜೆಪಿ; ಪ್ರಿಯಾಂಕ್ ಖರ್ಗೆ ಆಕ್ರೋಶ

ಬಿಜೆಪಿಯು ತನ್ನ ಹೊಸ ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್ ನಾಯಕರಿಗೆ ದೊಣ್ಣೆಯಿಂದ ಹೊಡೆಯುತ್ತಿರುವಂತೆ ಚಿತ್ರಿಸಿ ವಿವಾದ ಸೃಷ್ಟಿಸಿದೆ. ಈ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಇದು ಗಾಂಧಿವಾದದ ಹತ್ಯೆ ಎಂದು ಕಿಡಿಕಾರಿದ್ದಾರೆ.

Read Full Story

10:27 AM (IST) Feb 06

ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌

ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯಲು ಅರ್ಥವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲು ಮುಂದಾಗಿರುವ ಭಾರತ, ಶೀಘ್ರವೇ ಇನ್ನೂ 11 ದೇಶಗಳೊಂದಿಗೆ ಶೀಘ್ರವೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವತ್ತ ಹೆಜ್ಜೆ ಇಟ್ಟಿದೆ.

Read Full Story

More Trending News