Published : Apr 04, 2026, 06:13 AM ISTUpdated : Apr 04, 2026, 11:20 PM IST

Karnataka News Live: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ ಆರೋಪ, ಕೇಸರಿ ಶಾಲು ಹಾಕಿ ಕೃತ್ಯ

ಸಾರಾಂಶ

ಉಪ್ಪಿನಂಗಡಿ: ಹಾಸನದಿಂದ ಕೇರಳಕ್ಕೆ ಕಂಟೈನರ್ ವಾಹನದಲ್ಲಿ ಅತ್ಯಂತ ಅಮಾನವೀಯವಾಗಿ ತುಂಬಿ ಸಾಗಿಸುತ್ತಿದ್ದ 20 ಜಾನುವಾರುಗಳನ್ನು ಕಡಬ ಪೊಲೀಸರು ರಕ್ಷಿಸಿ, ಒಬ್ಬನನ್ನು ವಶಕ್ಕೆ ಪಡೆಡುಕೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಪಾನ್ ವಶಕ್ಕೆ ಪಡೆಯಲಾಗಿದೆ. ವಾಹನ ಚಾಲಕ ನಯಾಝ್ ಪರಾರಿ ಆಗಿದ್ದಾನೆ. ಲಾರಿ ಮಾಲೀಕ‌ ಅಬ್ದುಲ್ ರಹಿಮಾನ್ ವಿರುದ್ದ ಪ್ರಕರಣ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ ಜಾನುವಾರು ಸಾಗಿಸುತ್ತಿರುವ ಮಾಹಿತಿ ತಿಳಿದು ಪೊಲೀಸರು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಕಂಟೈನರ್ ಒಳಗಡೆ ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿದ್ದ 20 ಜಾನುವಾರುಗಳು ಪತ್ತೆಯಾಗಿವೆ.

11:20 PM (IST) Apr 04

ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ ಆರೋಪ, ಕೇಸರಿ ಶಾಲು ಹಾಕಿ ಕೃತ್ಯ

ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಸಂಘಟನೆ ಅಪಪ್ರಚಾರ, ಕೇಸರಿ ಶಾಲು ಹಾಕಿ ಕೃತ್ಯ, ಸಂಘಟಕ ವಶಕ್ಕೆ ಪಡೆಯಲಾಗಿದೆ. ಬಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

 

Read Full Story

11:19 PM (IST) Apr 04

ಹೀಗೆ ಮಾಡಿದ್ರೆ ಹಸಿ ತೆಂಗಿನಕಾಯಿ ತುರಿ 6 ತಿಂಗಳಾದ್ರೂ ಹಾಳಾಗಲ್ಲ; ಎಷ್ಟೋ ಜನರಿಗೆ ಗೊತ್ತಿಲ್ಲದ ಸೀಕ್ರೇಟ್!

How to keep fresh coconut from spoiling: ಇಂದು ಗಡಿಬಿಡಿಯ ಜೀವನದಲ್ಲಿದ್ದೇವೆ, ತೆಂಗಿನಕಾಯಿ ತುರಿಯನ್ನು ಹೇಗೆ ಜಾಸ್ತಿ ದಿನ ಇಡಬಹುದು? ಹಾಳಾಗದಂತೆ ಹೇಗೆ ತಡೆಯಬಹುದು ಎಂದು ಅನೇಕರಿಗೆ ಸಂದೇಹ ಇರುತ್ತದೆ. ಇದಕ್ಕೆ ಉತ್ತಮವಾದ ಪರಿಹಾರ ಇಲ್ಲಿದೆ, ಈ ವಿಧಾನಗಳನ್ನು ಅನುಸರಿಸಿ. 

Read Full Story

10:50 PM (IST) Apr 04

LPG Cylinder Price - ಎಲ್‌ಪಿಜಿ ಬಳಕೆದಾರರಿಗೆ ನೆಮ್ಮದಿಯ ಸುದ್ದಿ; ಸಿಗ್ತಿದೆ ಭರ್ಜರಿ ರಿಯಾಯಿತಿ!

LPG: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಭಾರತ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ದೇಶದ ಕೋಟ್ಯಂತರ ಬಡ ಕುಟುಂಬಗಳ, ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಇದು ಮಹತ್ವದ ಬದಲಾವಣೆ ತಂದಿದೆ. ಹೊಗೆ-ಮುಕ್ತ ಅಡುಗೆಮನೆ ಒದಗಿಸುವುದು, ಶುದ್ಧ ಇಂಧನವಾದ ಎಲ್‌ಪಿಜಿಗೆ ಸಂಪರ್ಕ ಕಲ್ಪಿಸುವುದಾಗಿದೆ. 

 

Read Full Story

10:37 PM (IST) Apr 04

ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ

ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ ಮಾಡಲಾಗಿದೆ. ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರಾರ್ಥಿಸಿದ್ದಾರೆ. 

Read Full Story

09:45 PM (IST) Apr 04

ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್

ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯ ಹಿನ್ನಲೆ, ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಪಂದ್ಯಕ್ಕೆ ಆಗಮಿಸುವ ಹಾಗೂ ಪಂದ್ಯ ಮುಗಿದ ಬಳಿಕ ಮನೆಗೆ ತೆರಳುವ ಅಭಿಮಾನಿಳಿಗೆ BMTC ಕೊಡುಗೆ ಏನು?

 

Read Full Story

09:03 PM (IST) Apr 04

ಜಾಮೀನು ಕೊಡಲು ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

ಜಾಮೀನು ಕೊಡಲು ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ, ಅಟ್ರಾಸಿಟಿ ಪ್ರಕರಣದಲ್ಲಿ ಜಾಮೀನು ಕೊಡಿಸಲು ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ

 

Read Full Story

08:46 PM (IST) Apr 04

Bhagyalakshmi Serial - ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way

Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಮಾತ್ರ ಬದಲಾಗಿಲ್ಲ, ಭಾಗ್ಯ ಬದುಕನ್ನು ಇನ್ನಷ್ಟು ಹಾಳು ಮಾಡಬೇಕು, ಭಾಗ್ಯ-ಆದಿ ದೂರ ಆಗಬೇಕು ಎಂದು ಅವನು ಪ್ಲ್ಯಾನ್‌ ಮಾಡಿದ್ದಾನೆ. ಈಗ ಶ್ರೇಷ್ಠ ಅವನಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾಳೆ.

 

Read Full Story

08:35 PM (IST) Apr 04

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ

ಲವ್ ಜಿಹಾದ್ ಸಂತ್ರಸ್ತೆ ಮನೆಗೆ ಮುತಾಲಿಕ್, ಹುಬ್ಬಳ್ಳಿ ಬಂದ್ ಎಚ್ಚರಿಕೆ ನೀಡಿದ ಹಿಂದೂ ಮುಖಂಡ, ಜಿಮ್‍‌ಗೆ ಬರುತ್ತಿದ್ದ ಹಿಂದೂ ಹುಡುಗಿಯರ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಮೀರ್ ಮುಲ್ಲಾ ಪ್ರಕರಣ ಕುರಿತು ಮುತಾಲಿಕ್ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

Read Full Story

07:27 PM (IST) Apr 04

ಶತ್ರುಗಳ ಎದೆ ಮೇಲೆ ಬಿದ್ರೆ ಏಳೋಕೇ ಆಗ್ಬಾರ್ದು; 1,000 ಕೆಜಿ ತೂಕದ Mk-84 ಮಾದರಿ ಬಾಂಬ್‌ ಇನ್ನು ದೇಶದಲ್ಲೇ ನಿರ್ಮಾಣ

ಭಾರತೀಯ ವಾಯುಪಡೆಗಾಗಿ 1,000 ಕೆಜಿ ತೂಕದ ಅತ್ಯಾಧುನಿಕ ವೈಮಾನಿಕ ಬಾಂಬುಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣಾ ಸಚಿವಾಲಯವು 'Make-II' ಯೋಜನೆಯಡಿ ಮುಂದಾಗಿದೆ. ಅಮೆರಿಕದ 'Mk-84' ಮಾದರಿಗೆ ಸಮಾನವಾದ ಈ ಬಾಂಬುಗಳನ್ನು, ಕನಿಷ್ಠ 50% ಸ್ವದೇಶಿ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ.

Read Full Story

06:10 PM (IST) Apr 04

ನನಗೆ ಬಂತು ಆ ಕಾಂಗ್ರೆಸ್ಸಿನ ಕಾಲ್, ಎಲ್ಲಾ IPL ಮಾಯೆ​... ಸುರೇಶ್​ ಕುಮಾರ್ ಕುತೂಹಲದ ಪೋಸ್ಟ್​ ಶೇರ್

ಶಾಸಕರಿಗೆ ಐಪಿಎಲ್ ಪಂದ್ಯದ ಉಚಿತ ಟಿಕೆಟ್ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಈ ವಿಐಪಿ ಸಂಸ್ಕೃತಿಯನ್ನು ವಿರೋಧಿಸಿ ತಮಗೆ ಟಿಕೆಟ್ ನಿರಾಕರಿಸಿದ್ದಾರೆ. ಇದರ ಬೆನ್ನಲ್ಲೇ, ತೆಲಂಗಾಣ ಸಿಎಂ ಸಂಬಂಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ತಮಗೆ ಟಿಕೆಟ್‌ಗಾಗಿ ಕರೆ ಮಾಡಿದ್ದ ವಿಚಿತ್ರ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
Read Full Story

06:08 PM (IST) Apr 04

3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ

3 ಕೋಟಿ ಡಿಫೆಂಡರ್ ಕಾರು ಬೆಂಗಳೂರಲ್ಲಿ ಟ್ಯಾಕ್ಸಿ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ, ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಸೆಲೆಬ್ರೆಟಿಗಳ ಕಾರು ಎಂದೇ ಗುರುತಿಸಿಕೊಂಡಿದೆ. ಆದರೆ ಬೆಂಗಳೂರಲ್ಲಿ ಹಾಗಲ್ಲ.

 

Read Full Story

06:03 PM (IST) Apr 04

ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್‌ ಮಹೇಂದರ್‌ ಮುಕ್ತ ಮಾತು

Director S Mahendar On Daughter Gowri Shruti: ಕನ್ನಡದ ಅನೇಕ ಕೌಂಟುಬಿಕ ಸಿನಿಮಾಗಳ ನಿರ್ದೇಶಕ ಎಸ್‌ ಮಹೇಂದರ್‌ ಹಾಗೂ ಶ್ರುತಿ ಅವರ ದಾಂಪತ್ಯ ಮುರಿದಿದೆ. ಆದರೆ ಇವರ ಮಗಳು ಗೌರಿ ಮಾತ್ರ ತಂದೆ-ತಾಯಿ ಜೊತೆಗೆ ಅದೇ ಬಾಂಧವ್ಯ ಹೊಂದಿದ್ದಾರೆ.

 

Read Full Story

05:43 PM (IST) Apr 04

30 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ - ಕವಿರಾಜ್

Company Layoffs:‌ ಇಂದು ಕಂಪೆನಿಗಳು ಲೇಆಫ್‌ ಮಾಡುತ್ತಿವೆ. ಕಷ್ಟಪಟ್ಟು ಓದಿ, ಕಂಪೆನಿಯಲ್ಲಿ ಕೆಲಸ ಮಾಡೋಣ, ಸೆಟಲ್‌ ಆಗೋಣ ಎಂದುಕೊಂಡರೆ ತುಂಬ ಕಷ್ಟ. ಯಾವಾಗ ಯಾರು ಲೇಆಫ್‌ ಆಗುತ್ತಾರೆ ಎಂದು ಹೇಳಲಾಗದು. ಈ ಬಗ್ಗೆ ಗೀತರಚನೆಕಾರ ಕವಿರಾಜ್‌ ಅವರು ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

05:28 PM (IST) Apr 04

ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್, ಹತ್ಯೆ ಹಿಂದಿತ್ತು ಯುವತಿ ವಿಚಾರ

ಬೆಂಗಳೂರಲ್ಲಿ ಯುವಕ ವಿಜಯ್ ಕೊಲೆ ಕೇಸ್‌ನಲ್ಲಿ ಟ್ವಿಸ್ಟ್, ಪ್ರಕರಣದ ಹಿಂದಿನ ಯವತಿ ವಿಷ್ಯ ಬೆಳಕಿಗೆ, ಆರಂಭದಲ್ಲಿ ಕ್ಷುಲಕ್ಕ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಅಸಲಿ ವಿಚಾರ ಬೇರೇನೆ ಇದೆ. 

Read Full Story

05:25 PM (IST) Apr 04

ಇದಪ್ಪ ಸ್ನೇಹ ಅಂದ್ರೆ! ಕನ್ನಡ ಯುಟ್ಯೂಬರ್ ಭೂಮಿಕಾ ಬಸವರಾಜ್ ಕೊಟ್ಟ‌ ಗೋಲ್ಡ್ ಗಿಫ್ಟ್‌ ನೋಡಿ ಗೆಳತಿ ಕಣ್ಣೀರು

Bhumika Basavaraj: ಸಾಮಾನ್ಯವಾಗಿ ಕುಟುಂಬದಲ್ಲಿ, ರಕ್ತ ಸಂಬಂಧದಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದರ ಹೊರತಾಗಿ ಒಳ್ಳೆಯ ಸ್ನೇಹ ಸಂಬಂಧ ಕೂಡ ಇರುವುದು. ಈಗ ಕನ್ನಡ ಯುಟ್ಯೂಬರ್‌, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಭೂಮಿಕಾ ಬಸವರಾಜ್‌ ಅವರು ತನ್ನ ಗೆಳತಿಗೆ ದುಬಾರಿ ಗಿಫ್ಟ್‌ ನೀಡಿದ್ದಾರೆ.

 

Read Full Story

05:18 PM (IST) Apr 04

Bigg Boss ಗಿಲ್ಲಿ ನಟ ಜಿಮ್​ನಲ್ಲಿ ವರ್ಕ್​ ಔಟ್​ - ಏಕಾಏಕಿ ಫಿಟ್ನೆಸ್​ ಮನಸ್ಸು ಮಾಡಿದ ಹಿಂದಿರೋ ರಹಸ್ಯವೇನು

ಬಿಗ್‌ಬಾಸ್ ಇತಿಹಾಸದಲ್ಲೇ ದಾಖಲೆ ಮತಗಳನ್ನು ಪಡೆದು ಗೆದ್ದ ಗಿಲ್ಲಿ ನಟ, ಇದೀಗ ಜಿಮ್‌ನಲ್ಲಿ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ. ಈ ಹಿಂದೆ ಫಿಟ್ನೆಸ್ ಕಡೆಗಣಿಸಿದ್ದ ಅವರ ಈ ಬದಲಾವಣೆ, ಸ್ಯಾಂಡಲ್‌ವುಡ್‌ಗೆ ಹೀರೋ ಆಗಿ ಪಾದಾರ್ಪಣೆ ಮಾಡುವ ಸಿದ್ಧತೆಯೇ ಎಂಬ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.
Read Full Story

04:46 PM (IST) Apr 04

'ಸ್ಯಾಂಡಲ್‌ವುಡ್‌ನಲ್ಲಿ ಸೈಡ್‌ ರೋಲ್‌ ಕೊಡಿಸಿ, ಆಕ್ಟಿಂಗ್‌ ಮಾಡ್ತೀನಿ..' ಕಿಂಗ್‌ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಶಾಕ್‌

ಆರ್‌ಸಿಬಿ ಇನ್ಸೈಡರ್ ವಿಡಿಯೋದಲ್ಲಿ, ಮಿಸ್ಟರ್ ನಾಗ್ಸ್ ಜೊತೆಗಿನ ತಮಾಷೆಯ ಸಂಭಾಷಣೆಯ ವೇಳೆ ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರ ಮಾಡಲು ಸಿದ್ಧ ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

04:28 PM (IST) Apr 04

ಹುಡುಗಿ ನೋಡಿದ್ದೇನೆ, ಮುಂದಿನ ವರ್ಷ ಮದ್ವೆ - ಮರು ವಿವಾಹದ ಬಗ್ಗೆ ಮೌನ ಮುರಿದ ಚಂದನ್ ಶೆಟ್ಟಿ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ನಂತರ ಅನುಭವಿಸಿದ ನೋವಿನಿಂದ ಹೊರಬಂದಿದ್ದಾರೆ. ಮುಂದಿನ ವರ್ಷ ಮದುವೆಯಾಗಲು ಯೋಜಿಸಿದ್ದು, ಈಗಾಗಲೇ  ಹುಡುಗಿಯರನ್ನು ನೋಡಿರುವುದಾಗಿ ಮತ್ತು ಈ ಬಾರಿ ತರಾತುರಿ ಮಾಡದೆ ಪೋಷಕರ ಒಪ್ಪಿಗೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ.

Read Full Story

04:18 PM (IST) Apr 04

ಎಎಸ್ಪಿ ಹುದ್ದೆಗೆ ಡಿವೈಎಸ್ಪಿಗಳ ಮಧ್ಯೆ ಬಡ್ತಿ ಸಂಘರ್ಷ, ಜ್ಯೇಷ್ಠತಾ ಪಟ್ಟಿ ಪ್ರಕಟ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಏರುದನಿ!

ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ ಆದೇಶದಂತೆ ರಾಜ್ಯ ಸರ್ಕಾರವು ಡಿವೈಎಸ್ಪಿ ವೃಂದದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಎಎಸ್ಪಿ ಹುದ್ದೆಯ ಮುಂಬಡ್ತಿ ವಿಚಾರವಾಗಿ ನೇರ ನೇಮಕಾತಿ  ಮತ್ತು ಮುಂಬಡ್ತಿ   ಅಧಿಕಾರಿಗಳ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಿಆರ್‌ ಅಧಿಕಾರಿಗಳು ಇದು ಅವೈಜ್ಞಾನಿಕವೆಂದು ವಾದಿಸಿದರೆ, ಡಿಆರ್‌ ಅಧಿಕಾರಿಗಳು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Read Full Story

04:00 PM (IST) Apr 04

ಲಾಲ್‌ಬಾಗ್ ಸುರಂಗ ರಸ್ತೆ ಮಾರ್ಗ ಕುರಿತು ಜಿಎಸ್‌ಐ ತಜ್ಞರ ಭೌಗೋಳಿಕ ಮತ್ತು ತಾಂತ್ರಿಕ ಪರಿಶೀಲನೆ

ಬೆಂಗಳೂರಿನ ಪ್ರಸ್ತಾಪಿತ ಸುರಂಗ ರಸ್ತೆ ಯೋಜನೆಗಾಗಿ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ (ಜಿಎಸ್‌ಐ) ತಜ್ಞರ ಸಮಿತಿಯು ಲಾಲ್‌ಬಾಗ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಲಾಲ್‌ಬಾಗ್ ಬೆಟ್ಟದ ಕೆಳಗೆ ಸುರಂಗ ಹಾದುಹೋಗುವುದರಿಂದ ಉಂಟಾಗಬಹುದಾದ ಭೌಗೋಳಿಕ ಮತ್ತು ಪರಿಸರ ಪರಿಣಾಮಗಳ ಕುರಿತು ತಂಡವು ಅಧ್ಯಯನ ನಡೆಸಿ, ವರದಿ ಸಲ್ಲಿಸಲಿದೆ. ಈ ವರದಿಯು ಯೋಜನೆಯ ಮುಂದಿನ ಹಂತಗಳನ್ನು ನಿರ್ಧರಿಸಲಿದೆ.
Read Full Story

03:27 PM (IST) Apr 04

ಕದ್ದ ಮೊಬೈಲ್ ನಿಂದ ರ್ಯಾಪಿಡೋ ಬುಕ್ ಮಾಡಿ ಆಟೋ ಡ್ರೈವರ್ ಥಳಿಸಿದ್ರು, ಅದೇ ರಿಕ್ಷಾ ಅಡವಿಟ್ಟು ದುಡ್ಡು ಮಾಡಿದ್ರು!

ಬೆಂಗಳೂರಿನಲ್ಲಿ, ರಿಹ್ಯಾಬ್ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಯುವಕರು ಕದ್ದ ಮೊಬೈಲ್‌ನಿಂದ ರ್ಯಾಪಿಡೋ ಆಟೋ ಬುಕ್ ಮಾಡಿದ್ದಾರೆ. ಬಳಿಕ ಚಾಲಕನ ಮೇಲೆ ಹಲ್ಲೆ ನಡೆಸಿ, ಆತನ ಆಟೋ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
Read Full Story

03:09 PM (IST) Apr 04

ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ

ಕನ್ನಡ ಧಾರಾವಾಹಿಗಳಲ್ಲಿ ಪುರುಷರನ್ನು ಶತದಡ್ಡರೆಂದು ಚಿತ್ರಿಸುವುದು ಸಾಮಾನ್ಯವಾಗಿದೆ. 'ಬ್ರಹ್ಮಗಂಟು' ಮತ್ತು 'ಶ್ರಾವಣಿ ಸುಬ್ರಹ್ಮಣ್ಯ'ದಂತಹ ಸೀರಿಯಲ್‌ಗಳಲ್ಲಿ, ನಾಯಕರು ವೇಷ ಬದಲಿಸಿ ಬಂದ ತಮ್ಮ ಪತ್ನಿಯರನ್ನು ಗುರುತಿಸಲು ವಿಫಲರಾಗುತ್ತಾರೆ. ಈ ಚಿತ್ರಣವು ಪುರುಷ ವೀಕ್ಷಕರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ

Read Full Story

01:44 PM (IST) Apr 04

ದಕ್ಷಿಣದಲ್ಲಿ ಹೆಚ್ಚಾಯ್ತು ರುಕ್ಮಿಣಿ ವಸಂತ್‌ಗೆ ಡಿಮ್ಯಾಂಡ್; ಸಾಲು ಸಾಲು ಚಿತ್ರಗಳಿಗೆ ರುಕ್ಕು ಗ್ರೀನ್ ಸಿಗ್ನಲ್!

'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ನಟಿ ರುಕ್ಮಿಣಿ ವಸಂತ್, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಬೃಹತ್ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಹೊಸ ಸಿನಿಮಾವನ್ನು 'ಸಪ್ತ ಸಾಗರದಾಚೆ ಎಲ್ಲೋ' ನಿರ್ದೇಶಕ ಹೇಮಂತ್ ರಾವ್ ಅವರೇ ನಿರ್ದೇಶಿಸುತ್ತಿದ್ದಾರೆ.
Read Full Story

01:26 PM (IST) Apr 04

'ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ' - ರಾಜ್ಯಪಾಲರಿಗೆ ಕರವೇ ನಾರಾಯಣಗೌಡ ಖಡಕ್ ಎಚ್ಚರಿಕೆ!

ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಗ್ರೇಡಿಂಗ್ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿರುದ್ಧ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುವ ಹಕ್ಕಿಲ್ಲವೆಂದು ಹೇಳಿದ್ದಾರೆ.

Read Full Story

01:24 PM (IST) Apr 04

ಹುಬ್ಬಳ್ಳಿ Love Jihad ಕೇಸ್​ಗೆ ಟ್ವಿಸ್ಟ್​ - ಮಲಗಿದ್ದು ಯಾರಂತ ಅವಳ ಫೋನ್​ ನೋಡಿ ಅಂದ ಸಮೀರ್​; ಅಕ್ಕ ಹೇಳಿದ್ದೇನು?

ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ಮುಲ್ಲಾ ಮೇಲೆ ಲವ್ ಜಿಹಾದ್, ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮೀರ್ ಸಹೋದರಿ ಇದು ಪ್ರೀತಿ ಸಂಬಂಧ ಎಂದಿದ್ದರೆ, ಸಂತ್ರಸ್ತೆಯ ಮೊಬೈಲ್ ಪರಿಶೀಲಿಸಿದರೆ ಸತ್ಯ ಹೊರಬರಲಿದೆ ಎಂದು ಸಮೀರ್ ಹೇಳಿದ್ದಾನೆ. ಈ ಘಟನೆಯು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Read Full Story

01:12 PM (IST) Apr 04

ಊಟದ ರುಚಿ ಹೆಚ್ಚಿಸಲು ನೆಲ್ಲಿಕಾಯಿ ಚಟ್ನಿ ಮಾಡಿ - ಆದ್ರೆ ಇದೊಂದನ್ನು ಸೇರಿಸಿದರೆ ನಿಮ್ಮ ಅಡುಗೆ 'ಮಾಂತ್ರಿಕ' ಎನ್ನಿಸುತ್ತದೆ!

ಆಯುರ್ವೇದದಲ್ಲಿ ನೆಲ್ಲಿಕಾಯಿಗೆ (Amla) ವಿಶೇಷ ಸ್ಥಾನವಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ರಾಮಬಾಣ. ಪ್ರತಿದಿನ ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಾಗದವರು, ಅದನ್ನು ಚಟ್ನಿ ರೂಪದಲ್ಲಿ ಬಳಸಬಹುದು. ಇದರ ಸ್ಪೆಷಾಲಿಟಿ ತಿಳಿದುಕೊಳ್ಳಿ..

Read Full Story

01:10 PM (IST) Apr 04

ಇನ್ನೊಂದೇ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಿರ್ಮಿಸಲಾದ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಸಿದ್ಧವಾಗಿದೆ. ಈ ಮೇಲ್ಸೇತುವೆಯು ಹೆಚ್‌ಎಸ್‌ಆರ್ ಲೇಔಟ್‌ನಿಂದ ಜಯದೇವ ಆಸ್ಪತ್ರೆಯವರೆಗಿನ ಸಂಚಾರ ದಟ್ಟಣೆಯನ್ನು ಶೇ. 80ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. 

Read Full Story

12:18 PM (IST) Apr 04

ತುಮಕೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆ! ಎಲ್ಲಿದ್ದರೂ ಗೊತ್ತಾ?

ತುಮಕೂರಿನ ಹೊಸ ಬಡಾವಣೆ ಠಾಣೆಯ ಪಿಎಸ್ಐ ಮಂಗಳಮ್ಮ ಅವರ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಕೌಟುಂಬಿಕ ಕಲಹದಿಂದ ಮನನೊಂದು ಮನೆಬಿಟ್ಟು ಹೋಗಿದ್ದ ಅವರು, ತೀವ್ರ ಹುಡುಕಾಟದ ಬಳಿಕ ಚಿಕ್ಕಮಗಳೂರಿನ ಸಂಬಂಧಿಕರ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
Read Full Story

12:18 PM (IST) Apr 04

4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ ಸಂಬಳ? ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು?

ನಿತೇಶ್ ತಿವಾರಿ ನಿರ್ದೇಶನದ, 4 ಸಾವಿರ ಕೋಟಿ ಬಜೆಟ್‌ನ 'ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಸಂಭಾವನೆ ವಿವರಗಳು ಬಹಿರಂಗಗೊಂಡಿವೆ. ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್, ರಾವಣನಾಗಿ ನಟಿಸುತ್ತಿರುವ ಯಶ್ ಹಾಗೂ ಸೀತೆ ಪಾತ್ರದಲ್ಲಿರುವ ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಕೋಟಿ ಕೋಟಿ ಸಂಭಾವನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

11:38 AM (IST) Apr 04

Davanagere Bypoll - ಕಾಂಗ್ರೆಸ್ ಗೆಲುವಿಗೆ ಡಿಸಿಎಂ ತಡರಾತ್ರಿ ಸಭೆ! ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ರಣತಂತ್ರ ಹೆಣೆದ ಡಿಕೆಶಿ

ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿವರೆಗೆ ಕಾಂಗ್ರೆಸ್ ನಾಯಕರು ಮತ್ತು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಗೆಲುವಿಗೆ ರಣತಂತ್ರ ಹೆಣೆದರು. 

Read Full Story

11:16 AM (IST) Apr 04

ಬೇಸಿಗೆಯಲ್ಲಿ ಅಡುಗೆಮನೆ ಶಾಖದಿಂದ ಕೆಂಡವಾಗಿದ್ಯಾ? ಕಿಚನ್ ತಂಪಾಗಿಡುವ ಸರಳ ವಿಧಾನಗಳು

Kitchen Cooling Tips: ಬೇಸಿಗೆಯಲ್ಲಿ ಅಡುಗೆಮನೆಯನ್ನು ತಂಪಾಗಿರಿಸಲು ಕೆಲವು ಸರಳ ಉಪಾಯಗಳಿವೆ. ಕೆಲ ವಿಧಾನಗಳು ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯ ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Read Full Story

11:11 AM (IST) Apr 04

ದರ್ಶನ್ ಜೈಲು ಸೇರಿ 365 ದಿನ, ಜಾಮೀನು ಯಾವಾಗ? ರೇಣುಕಾಸ್ವಾಮಿ ಸಹವಾಸ, ದಾಸ 365 ದಿನ ವನವಾಸ.!

ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಒಂದು ವರ್ಷ ಪೂರ್ಣಗೊಂಡಿದೆ. ಈ ವರದಿಯು ಅವರ ಬಂಧನ, ಜೈಲುವಾಸದ ದಿನಗಳು ಮತ್ತು ಪ್ರಸ್ತುತ ಕಾನೂನು ಹೋರಾಟದ ಕುರಿತು ವಿವರಿಸುತ್ತದೆ.
Read Full Story

11:07 AM (IST) Apr 04

Davanagere Bypolls - - ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಬೇಡಿ - ಸಯದ್ ಮುಜಿಬುಲ್ಲ

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನೋಟಾ ಮತ ನೀಡುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತಾರಕ್ಷಣೆ ವೇದಿಕೆ ಕರೆ ನೀಡಿದೆ. 

Read Full Story

10:31 AM (IST) Apr 04

ಸುನಿ-ಮಲ್ಲಿ ಮಧುಚಂದ್ರದಲ್ಲಿ ಮೃತ್ಯುಪಾಶ - ಜೈದೇವ್‌ ಸೀರಿಯಲ್ ನಿರ್ದೇಶಕರ ಸಂಬಂಧಿನಾ?

ಗೌತಮ್ ಮತ್ತು ಭೂಮಿಕಾ ಅವರು ಜೈದೇವ್‌ನ ಸಂಚನ್ನು ವಿಫಲಗೊಳಿಸಿ ಮಲ್ಲಿ ಮತ್ತು ಸುನೀಲ್ ಮದುವೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.  ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಜೈದೇವ್ ನಿರ್ದೇಶಕರ ಸಂಬಂಧಿ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

10:17 AM (IST) Apr 04

ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಅಲ್ಲಿ ತನಕ ಕುರಿಮೇಯಿಸಿಕೊಂಡಿರು ಎಂದಿದ್ದಕ್ಕೆ ಯುವಕ ಸಾವಿಗೆ ಶರಣು!

ಮದುವೆಯಾಗುತ್ತಿಲ್ಲವೆಂದು ಮನನೊಂದು ಚಿಕ್ಕಮಗಳೂರಿನಲ್ಲಿ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ವೈಯಕ್ತಿಕ ಕಾರಣಗಳಿಂದ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Read Full Story

10:12 AM (IST) Apr 04

Karnataka Mango Crisis - ಹವಾಮಾನ ವೈಪರಿತ್ಯಕ್ಕೆ ಮಾವು ಫಸಲು ಶೇ.50 ಕುಸಿತ!

ರಾಜ್ಯದಲ್ಲಿ ಪ್ರತಿಕೂಲ ಹವಾಮಾನ, ಅಧಿಕ ಚಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.50-60ರಷ್ಟು ಕುಸಿತವಾಗುವ ಆತಂಕ ಎದುರಾಗಿದೆ. ಇದರಿಂದ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮಾವು ಪ್ರಿಯರ ಜೇಬಿಗೂ ಕತ್ತರಿ ಬೀಳಲಿದೆ.
Read Full Story

09:47 AM (IST) Apr 04

Karnataka Vision Care - 40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ

ಕರ್ನಾಟಕ ಆರೋಗ್ಯ ಇಲಾಖೆಯು 40 ವರ್ಷ ಮೇಲ್ಪಟ್ಟವರಿಗೆ ಉಚಿತ ದೃಷ್ಟಿ ತಪಾಸಣೆ ಮತ್ತು ಓದುವ ಕನ್ನಡಕ ನೀಡಲು 'ರಿಸ್ಟೋರಿಂಗ್ ವಿಷನ್' ಸಂಸ್ಥೆಯೊಂದಿಗೆ ಒಪ್ಪಂದ. ಮೊದಲ ಹಂತದಲ್ಲಿ ಯಾದಗಿರಿ ಜಿಲ್ಲೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ತಪಾಸಣೆ ನಡೆಸಲಿದ್ದಾರೆ.

Read Full Story

09:46 AM (IST) Apr 04

ಬಾಲ್ಕನಿಯ 4×4 ಅಡಿ ಜಾಗದಲ್ಲಿ ತರಕಾರಿ ಬೆಳೆಯಲು ಆರು ಸೂತ್ರಗಳು; ಆರೋಗ್ಯಕರ ಪುಟ್ಟ ತೋಟ

ಈಗಿನ ಕಾಲದಲ್ಲಿ ತರಕಾರಿಗಳಲ್ಲಿ ಕಲಬೆರಕೆ, ಕೆಮಿಕಲ್ ಮತ್ತು ಕೀಟನಾಶಕಗಳ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ, ಜನ ಮತ್ತೆ ಮನೆಯಲ್ಲೇ ಬೆಳೆದ ಆರ್ಗ್ಯಾನಿಕ್ ತರಕಾರಿಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಒಂದು ಪುಟ್ಟ ತರಕಾರಿ ತೋಟ ನಿಮಗೆ ತಾಜಾ ಮತ್ತು ಪೌಷ್ಟಿಕ ತರಕಾರಿಗಳನ್ನು ನೀಡುತ್ತದೆ.

Read Full Story

09:26 AM (IST) Apr 04

ಬೆಂಗಳೂರು - ಮನೆಗೆ ಹಾವು ಬಂತಾ? ಹಿಡಿಯಲು ಜನರಿಲ್ಲ, ಪಂಚ ಪಾಲಿಕೆಗಳಲ್ಲಿ ಇರೋದು ಏಳೇ ಜನ!

ಬೆಂಗಳೂರಿನಲ್ಲಿ ಬೇಸಿಗೆಯ ತಾಪಮಾನ ಏರಿಕೆಯಿಂದಾಗಿ, ಮನೆಗಳು ಮತ್ತು ಉದ್ಯಾನವನಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ, ಬಿಬಿಎಂಪಿ ಬಳಿ ಅಧಿಕೃತ ಹಾವು ರಕ್ಷಕರ ಕೊರತೆ ಇರುವುದರಿಂದ ಸಕಾಲದಲ್ಲಿ ರಕ್ಷಣಾ ಕಾರ್ಯ ವಿಳಂಬವಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
Read Full Story

09:23 AM (IST) Apr 04

ಹುಬ್ಬಳ್ಳಿ ಲವ್‌ ಜಿಹಾದ್ ಪ್ರಕರಣ - ಸಮೀರ್‌ ಮೊಬೈಲ್ ನಲ್ಲಿ ಹಲವು ವಿಡಿಯೋ, ಹಿಂದೂ ಯುವತಿಯರ ಸಂಪರ್ಕಕ್ಕೆ ತಂಗಿಯೇ ಸಾಥ್!

ಹುಬ್ಬಳ್ಳಿಯ ಜಿಮ್‌ ಟ್ರೈನರ್‌ ಸಮೀರ್‌ ಮುಲ್ಲಾ ವಿರುದ್ಧ ಲವ್‌ ಜಿಹಾದ್‌ ಆರೋಪ ಕೇಳಿಬಂದಿದ್ದು, ಆತ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಖುಷಿ ಎಂಬ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿ, ಹಲವು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಆತನ ಮೊಬೈಲ್‌ನಲ್ಲಿದ್ದ ವಿಡಿಯೋಗಳು ಸಾಕ್ಷಿಯಾಗಿವೆ.
Read Full Story

More Trending News