Published : Jul 26, 2025, 07:41 AM ISTUpdated : Jul 26, 2025, 11:22 PM IST

Karnatata Latest News Live: ಕಾರವಾರ ಕಾರಾಗೃಹಕ್ಕೆ ಕರೆತರುತ್ತಿದ್ದ ಆರೋಪಿ ಕಾರಿನಿಂದ ಜಿಗಿದು ಪರಾರಿ, ಭಟ್ಕಳದಲ್ಲಿ ಬಂಧನ

ಸಾರಾಂಶ

ಬೆಂಗಳೂರು (ಜು.26): ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ದೊರೆಯದ್ದರಿಂದ ರೈತರು ಕಂಗಾಲಾಗಿದ್ದು, ಗೊಬ್ಬರಕ್ಕಾಗಿ ಕೃಷಿ ಚಟುವಟಿಕೆ ಬಿಟ್ಟು ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿ ಯಾಗಿದ್ದು,ಶುಕ್ರವಾರ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇನ್ನೂ ಕೆಲವು ಕಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:22 PM (IST) Jul 26

ಕಾರವಾರ ಕಾರಾಗೃಹಕ್ಕೆ ಕರೆತರುತ್ತಿದ್ದ ಆರೋಪಿ ಕಾರಿನಿಂದ ಜಿಗಿದು ಪರಾರಿ, ಭಟ್ಕಳದಲ್ಲಿ ಬಂಧನ

ಚೆಕ್ ಬೌನ್ಸ್ ಪ್ರಕರಣದ ಆರೋಪಿ ಕಾರವಾರ ಜೈಲಿಗೆ ಹೋಗುವಾಗ ಕುಮಟಾ ಟೋಲ್ ಬಳಿ ಕಾರಿನಿಂದ ಜಿಗಿದು ಪರಾರಿಯಾಗಿದ್ದ. ಕುಮಟಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಭಟ್ಕಳದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Read Full Story

10:43 PM (IST) Jul 26

ಟಾಟಾಗೆ ಸೆಡ್ಡು ಹೊಡೆದ ನಿಸಾನ್, ಭಾರತದಲ್ಲೇ ತಯಾರಾದ ಮ್ಯಾಗ್ನೈಟ್ ಕಾರಿಗೆ 5 ಸ್ಟಾರ್ ಸೇಫ್ಟಿ

ನಿಸಾನ್ ಮ್ಯಾಗ್ನೈಟ್ ಕಾರು ಸಂಪೂರ್ಣವಾಗಿ ಭಾರತದಲ್ಲೇ ತಯಾರಿಗಿದೆ. ವಿಶೇಷ ಅಂದರೆ ಮ್ಯಾಗ್ನೈಟ್ ಕಾರು ಸುರಕ್ಷತಾ ರೇಟಿಂಗ್‌ನಲ್ಲಿ 5 ಸ್ಟಾರ್ ಪಡೆದುಕೊಂಡಿದೆ. ಇದರ ಬೆಲೆ, ಫೀಚರ್ಸ್ ಏನು?

 

Read Full Story

10:05 PM (IST) Jul 26

'ಎಕ್ಕ' ಯಶಸ್ಸಿನ ಸಂಭ್ರಮ - ಬಾಗಲಕೋಟೆಗೆ ನಟ ಯುವ ರಾಜ್ ಕುಮಾರ್ ಭೇಟಿ; ಅಪ್ಪು ಫ್ಯಾನ್ಸ್‌ನಿಂದ ಅದ್ದೂರಿ ಸ್ವಾಗತ!

ಎಕ್ಕ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಯುವ ರಾಜಕುಮಾರ್ ಬಾಗಲಕೋಟೆಗೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ಚಿತ್ರದ ಯಶಸ್ಸು ಮತ್ತು ಯುವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡರು. ಚಿತ್ರಮಂದಿರದಲ್ಲಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು.
Read Full Story

09:48 PM (IST) Jul 26

ನಾಗರ ಹಾವನ್ನೇ ಕಚ್ಚಿ ಅಸ್ವಸ್ಥಗೊಂಡ 1 ವರ್ಷದ ಮಗು ಚೇತರಿಕೆ, ವಿಷ ಸರ್ಪ ಸಾವು

ಆಟವಾಡುತ್ತಿದ್ದ ವೇಳೆ ಸಾಗಿ ಬಂದ ನಾಗರ ಹಾವನ್ನು ಮಗು ಆಟಿಕೆ ಎಂದು ತಿಳಿದು ಕೈಯಲ್ಲಿ ಹಿಡಿದು ಕಚ್ಚಿದೆ. ಇದರ ಪರಿಣಾಮ ಅಸ್ವಸ್ಥಗೊಂಡಿದ್ದ 1 ವರ್ಷದ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದರೆ, ವಿಷ ಸರ್ಪ ಸತ್ತಿದೆ.

Read Full Story

09:09 PM (IST) Jul 26

ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್

ಡಿಸಿಎಂ ಡಿಕೆ ಶಿವಕುಮಾರ್ ಕೋಡಿ ಶ್ರೀಗಳ ಭೇಟಿ ಮಾಡಿದ್ದಾರೆ. ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಡಿಕೆಶಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ನಾನು ಏನು ಪ್ರಾರ್ಥನೆ ಬೇಕೋ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Read Full Story

08:32 PM (IST) Jul 26

ಧರ್ಮಸ್ಥಳ ಕೇಸ್ SIT ತನಿಖೆ, 8 ಗಂಟೆ ವಿಚಾರಣೆ ಬಳಿಕ ಅಜ್ಞಾತ ಸ್ಥಳಕ್ಕೆ ಮುಸುಕುಧಾರಿ

ಧರ್ಮಸ್ಥಳ ತೆಲೆಬುರುಡೆ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ದೂರು ನೀಡಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ.ಇಂದಿನ ವಿಚಾರಣೆ ಅಂತ್ಯಗೊಂಡ ಬೆನ್ನಲ್ಲೇ ಮುಸುಕುಧಾರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

Read Full Story

08:05 PM (IST) Jul 26

ನವೆಂಬರ್‌ನಲ್ಲಿ ಭೂಮಿ ಮೇಲೆ ಏಲಿಯನ್ ನೌಕೆ ದಾಳಿ, ಸಂಶೋಧನೆ ಬೆನ್ನಲ್ಲೇ ವಿಜ್ಞಾನಿಗಳು ಅಲರ್ಟ್

ಪ್ರವಾಹ, ಭೂಕುಸಿತ, ಭೂಕಂಪ ಸೇರಿ ಹಲವು ವಿಕೋಪಗಳಿಂದ ಜನರು ಹೈರಾಣಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಭೂಮಿಯ ಸರ್ವನಾಶಕ್ಕೆ ಏಲಿಯನ್ ಟೊಂಕ ಕಟ್ಟಿ ನಿಂತಿದೆಯಾ? ಹೌದು ಎನ್ನುತ್ತಿದೆ ವಿಜ್ಞಾನಿಗಳ ವರದಿ. ನವೆಂಬರ್‌ನಲ್ಲಿ ಏಲಿಯನ್ ಬಾಹ್ಯಾಕಾಶ ನೌಕೆ ಭೂಮಿ ಮೇಲೆ ದಾಳಿ ಮಾಡಲಿದೆ ಎಂದು ಅಧ್ಯಯನ ವರದಿ ಹೇಳಿದೆ.

Read Full Story

07:08 PM (IST) Jul 26

ಗರ್ಭಿಣಿಯಾಗಿ ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಯಶಿಕಾ ರೋಚಕ ಪಯಣ

ಕ್ಯಾಪ್ಟನ್ ಯಶಿಕಾ ತ್ಯಾಗಿ ರೋಚಕ ಪಯಣ ಎಲ್ಲರಿಗೂ ಸ್ಪೂರ್ತಿಯಾಗಿದೆ. ಪುಟ್ಟ ಮಗುವನ್ನು ಬೆನ್ನ ಮೇಲೆ ಹೊತ್ತು, ಗರ್ಭಿಣಿಯಾಗಿದ್ದ ಕ್ಯಾಪ್ಟನ್ ಯಶಿಕಾ ತ್ಯಾಗಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ವಿಜಯ್ ದಿವಸದ ಈ ದಿನ ಹೆಮ್ಮೆಯ ಸೇನಾಧಿಕಾರಿ ಯಶಿಕಾ ರೋಚಕ ಪಯಣ ಇಲ್ಲಿದೆ.

Read Full Story

06:19 PM (IST) Jul 26

ಕೊಪ್ಪಳ ಬಲ್ಡೋಟಾ ಸಿಬ್ಬಂದಿಯಿಂದ ಕುರಿಗಾಹಿ ಮೇಲೆ ಹಲ್ಲೆ ಪ್ರಕರಣ; ಮತ್ತೊಂದು ಹಂತಕ್ಕೆ ತಲುಪಿದ ರೈತರ ಹೋರಾಟ!

ಕೊಪ್ಪಳದ ಬಸಾಪುರ ಗ್ರಾಮದಲ್ಲಿ ಬಲ್ಡೋಟಾ ಕಾರ್ಖಾನೆಯ ಸಿಬ್ಬಂದಿ ಮತ್ತು ಕುರಿಗಾಹಿಗಳ ನಡುವೆ ನಡೆದ ಹಲ್ಲೆಯಿಂದಾಗಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಕಾರ್ಖಾನೆಯ ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ಕುರಿಗಾಹಿಗಳ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದು, ಎರಡೂ ಕಡೆಯಿಂದ ದೂರು ದಾಖಲಾಗಿದೆ.
Read Full Story

06:18 PM (IST) Jul 26

ಹೊಸ ಫೀಚರ್, ಅತ್ಯಾಕರ್ಷಕ ಮಹೀಂದ್ರ 3XO REVX ಕಾರು ಲಾಂಚ್, ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಮಹೀಂದ್ರ ಹೊಸ 3XO REVX ಕಾರು ಬಿಡುಗಡೆ ಮಾಡಿದೆ. ಹೊಸ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆ ಅತ್ಯಾಕರ್ಷಕ ಕಾರಿನ ಬೆಲೆ ಎಷ್ಟು?

Read Full Story

05:52 PM (IST) Jul 26

ಕೊಡಗಿನಲ್ಲಿ ಅಕ್ರಮ ಗೋಮಾಂಸ ಮಾರಾಟ - ಅಸ್ಸಾಂ ಮೂಲದ ಕಾರ್ಮಿಕ ಬಂಧನ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 15 ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆದಿದೆ.
Read Full Story

05:32 PM (IST) Jul 26

'ನಾಲ್ವಡಿ ಹಳೇ ಮೈಸೂರು ಭಾಗಕ್ಕೆ ಮಾತ್ರ, ಸಿದ್ದರಾಮಯ್ಯ ಇಡೀ ಕರ್ನಾಟಕಕ್ಕೆ ಕೊಡುಗೆ' ಯತೀಂದ್ರ ಹೇಳಿಕೆ ಬೆಂಬಲಿಸಿದ ಸಚಿವ ಎಂಬಿ ಪಾಟೀಲ್

ಸಚಿವ ಎಂಬಿ ಪಾಟೀಲ್ ಸಿಎಂ ಪುತ್ರ ಡಾ. ಯತೀಂದ್ರ ಅವರ 'ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ' ಎಂಬ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

Read Full Story

05:16 PM (IST) Jul 26

ಹೋಮ್ ಗಾರ್ಡ್ ನೇಮಕಾತಿ ವೇಳೆ ಕುಸಿದ ಯವತಿ ಮೇಲೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾ*ರ

ಹೋಮ್ ಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಯುವತಿ ಅಸ್ವಸ್ಥಗೊಂಡು ಕುಸಿದು ಬಿದ್ದ ಯುವತಿಯನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದೆ. ಆದರೆ ದುರಂತ ಅಂದರೆ ಯುವತಿನ್ನು ಆಸ್ಪತ್ರೆ ಸಾಗಿಸುವ ನಡುವೆ ಆ್ಯಂಬುಲೆನ್ಸ್‌ನಲ್ಲಿ ಸಾಮೂಹಿಕ ಅತ್ಯಾ*ರ ನಡೆಸಲಾಗಿದೆ.

Read Full Story

04:42 PM (IST) Jul 26

ಧರ್ಮಸ್ಥಳ ಶವಹೂಟತಿಟ್ಟ ಪ್ರಕರಣ, ಸತತ 5 ಗಂಟೆಯಿಂದ ಮುಸುಕುಧಾರಿಯ ವಿಚಾರಣೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ದೂರು ನೀಡಿದ ಮುಸುಕುಧಾರಿ ವ್ಯಕ್ತಿಯನ್ನು ಕಳೆದ 5 ಗಂಟೆಗಳಿಂದ ಸತತ ವಿಚಾರಣೆ ನಡೆಸಲಾಗುತ್ತಿದೆ. ಎಸ್‌ಐಟಿ ತಂಡ ಮಂಗಳೂರಿಗೆ ಆಗಮಿಸಿದ ಬೆನ್ನಲ್ಲೇ ಇದೀಗ ತನಿಖೆ ತೀವ್ರಗೊಂಡಿದೆ.

Read Full Story

04:05 PM (IST) Jul 26

ಫ್ರೆಂಡ್‌ಶಿಪ್ ದೈಹಿಕ ಸಂಪರ್ಕಕ್ಕೆ ಕೊಟ್ಟ ಲೈಸೆನ್ಸ್ ಅಲ್ಲ, ಅತ್ಯಾ*ರ ಆರೋಪಿಗೆ ಬೇಲ್ ನಿರಾಕರಿಸಿದ ಕೋರ್ಟ್

ಫ್ರೆಂಡ್‌ಶಿಪ್ ಇದೆ ಎಂದ ಮಾತ್ರಕ್ಕೆ ಅದು ನಿಮಗೆ ದೈಹಿಕ ಸಂಪರ್ಕಕ್ಕೆ ಕೊಟ್ಟ ಅನುಮತಿಯಲ್ಲ ಎಂದು ಹೈಕೋರ್ಟ್ ಅತ್ಯಾ*ರ ಆರೋಪಿ/ ಜಾಮೀನು ನಿರಾಕರಿಸಿದ ಘಟನೆ ನಡೆದಿದೆ.

 

Read Full Story

03:56 PM (IST) Jul 26

ಧರ್ಮಸ್ಥಳ ಕೇಸ್‌ - ಅನಾಮಿಕ ತಂದುಕೊಟ್ಟ ತಲೆಬುರುಡೆ ರಹಸ್ಯ ಹೊರತೆಗೆಯಲು ಮುಂದಾದ ಎಸ್‌ಐಟಿ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಮಂಗಳೂರಿನಲ್ಲಿ ಮುಂದುವರೆದಿದ್ದು, ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ. ಎಸ್ಐಟಿ ಅಧಿಕಾರಿಗಳು ಬುರುಡೆಯ ಸತ್ಯಾಸತ್ಯತೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ದೂರುದಾರನ ಹೇಳಿಕೆಗಳನ್ನು ಪರಿಶೀಲಿಸಿ, ಸ್ಥಳೀಯರನ್ನು ವಿಚಾರಿಸಲು ಯೋಜಿಸಲಾಗಿದೆ.
Read Full Story

03:19 PM (IST) Jul 26

ಧರ್ಮಸ್ಥಳ ಕೇಸ್‌ - ಅನಾಮಿಕ ವ್ಯಕ್ತಿಯ ಮುಸುಕು ತೆರವುಗೊಳಿಸಿ ಎಸ್‌ಐಟಿ ಡ್ರಿಲ್‌!

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ವಿಚಾರಣೆ ಇಂದು ಎಸ್‌ಐಟಿ ಅಧಿಕಾರಿಗಳಿಂದ ನಡೆಸಲಾಗಿದೆ. ಶವಗಳನ್ನು ಹೂತಿಟ್ಟ ಸ್ಥಳಗಳನ್ನು ಬಹಿರಂಗಪಡಿಸಲು ದೂರುದಾರ ಸಿದ್ಧ ಎಂದು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆಯೂ ಎಸ್‌ಐಟಿ ಪ್ರಶ್ನೆ ಮಾಡಲಿದೆ.
Read Full Story

01:53 PM (IST) Jul 26

ಕೆಆರ್‌ ಆಸ್ಪತ್ರೆಗೆ ಸುಣ್ಣ ಹೊಡಿಸೋಕೆ ಆಗ್ಲಿಲ್ಲ, ನಾಲ್ವಡಿ ಜೊತೆ ಹೋಲಿಕೆ ಮಾಡ್ತೀರಾ? ಯತೀಂದ್ರಗೆ ಜಾಡಿಸಿದ ಪ್ರತಾಪ್‌ ಸಿಂಹ

ಮೈಸೂರು ಅರಸರ ಕೊಡುಗೆಗಿಂತ ತಂದೆ ಸಿದ್ದರಾಮಯ್ಯ ಕೊಡುಗೆ ದೊಡ್ಡದು ಎಂಬ ಯತೀಂದ್ರ ಹೇಳಿಕೆಗೆ ವ್ಯಾಪಕ ಟೀಕೆ. ಪ್ರತಾಪ್ ಸಿಂಹ ಯತೀಂದ್ರಗೆ ತಿರುಗೇಟು ನೀಡಿದ್ದು, ಸಿಎಂ ಸಿದ್ದರಾಮಯ್ಯ ಬಿಜೆಪಿಗಿಂತ ನಾವು ಹೆಚ್ಚು ಕೆಲಸ ಮಾಡಿದ್ದೇವೆ ಎಂದಿದ್ದಾರೆ.
Read Full Story

01:33 PM (IST) Jul 26

ವೇಲಂಕಣಿ ಜಾತ್ರೆ - ಗೋವಾ, ಕರ್ನಾಟಕ, ತಮಿಳುನಾಡಿನ ಜನತೆಗಾಗಿ ವಿಶೇಷ ರೈ ಲು

Indian Railways: ಈ ರೈಲುಗಳು ಗೋವಾದ ವಾಸೋ-ಡ-ಗಾಮಾದಿಂದ ವೇಲಂಕಣಿಗೆ ಮತ್ತು ವಾಪಸ್ ಸಂಚರಿಸಲಿದ್ದು, ಆಗಸ್ಟ್ 27 ರಿಂದ ಸೆಪ್ಟೆಂಬರ್ 8 ರವರೆಗೆ ಕಾರ್ಯನಿರ್ವಹಿಸುತ್ತವೆ. ಜಾತ್ರೆಗೆ ತೆರಳುವ ಭಕ್ತರಿಗೆ ಈ ರೈಲುಗಳು ಅನುಕೂಲಕರವಾಗಲಿವೆ.

Read Full Story

01:26 PM (IST) Jul 26

ರಮ್ಯಾ ಬೆನ್ನಲ್ಲೇ, ಕೊಲೆ ಆರೋಪಿ ದರ್ಶನ್‌ ಬಗ್ಗೆ ರಾಜ್‌ ಬಿ ಶೆಟ್ಟಿ ಮಾತನಾಡಿರುವ ವಿಡಿಯೋ ವೈರಲ್‌!

ದರ್ಶನ್‌ ಪ್ರಕರಣದ ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು, ರಮ್ಯಾ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ರಾಜ್ ಬಿ ಶೆಟ್ಟಿ ದರ್ಶನ್‌ ಬಗ್ಗೆ ಖಡಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋ ವೈರಲ್‌ ಆಗಿದೆ.
Read Full Story

12:20 PM (IST) Jul 26

ಡಿ.ಕೆ.ಶಿವಕುಮಾರ್‌ ಹೇಳಿಕೆ ಕಾಂಗ್ರೆಸ್‌ ಸಂಸ್ಕೃತಿ - ಗೋವಾ ಸಿಎಂ ಸಾವಂತ್‌ ಕಿಡಿ

ಮಹದಾಯಿ ವಿಚಾರವಾಗಿ ತಮ್ಮ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:08 PM (IST) Jul 26

'ನಮ್ಮ ಕಡೆ ಈ ರೀತಿ ಮಾತಾಡಿದ್ರೆ HM ಅಂತಾರೆ..' ಯತೀಂದ್ರ ಸಿದ್ಧರಾಮಯ್ಯಗೆ ತಿರುಗೇಟು ಕೊಟ್ಟ ಎಚ್‌.ವಿಶ್ವನಾಥ್‌!

ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಸಿದ್ದರಾಮಯ್ಯ ಮೈಸೂರನ್ನು ಹೆಚ್ಚು ಅಭಿವೃದ್ಧಿಪಡಿಸಿದ್ದಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಎಚ್‌.ವಿಶ್ವನಾಥ್‌ ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಕುಟುಂಬದಲ್ಲಿ ಅಹಂಕಾರ ವಂಶವಾಹಿಯಾಗಿ ಬಂದಿದೆ ಎಂದು ಆರೋಪಿಸಿದ್ದಾರೆ.

Read Full Story

11:51 AM (IST) Jul 26

ಕಾರ್ಗಿಲ್‌ ಯುದ್ಧದ ಹಿಂದೆ ಪಾಕ್ ಕ್ರೌರ್ಯ - ಭಾರತೀಯ ಸೇನೆಯ ದಿಟ್ಟತನಕ್ಕೆ ಸಲಾಂ

ಆಗ ಕಾರ್ಗಿಲ್, ಲಡಾಕ್‌ ಜಿಲ್ಲೆಯ ತಾಲೂಕು ಅಗಿತ್ತು. ಕಾಶ್ಮೀರದಿಂದ 200 ಕಿ.ಮೀ. ದೂರದಲ್ಲಿ ಇರುವ ಕಾರ್ಗಿಲ್‌ ಮೂಲಕ ರಾಷ್ಟ್ರೀಯ ಹೆದ್ದಾರಿ 1 ಹಾದು ಹೋಗುತ್ತಿತ್ತು.

Read Full Story

11:33 AM (IST) Jul 26

ಕರೀಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಕಪೂರ್‌ ಸಾವಿನ ಬೆನ್ನಲ್ಲೇ, ಸೋನಾ ಕಾಮ್‌ಸ್ಟರ್‌ ಕಂಪನಿಯಲ್ಲಿ ಅತ್ತೆ-ಸೊಸೆ ಜಗಳ ಶುರು!

ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಅವರ ಹಠಾತ್ ಮರಣದ ನಂತರ ಸೋನಾ ಕಾಮ್‌ಸ್ಟರ್‌ನಲ್ಲಿ ಕೌಟುಂಬಿಕ ವಿವಾದ ಭುಗಿಲೆದ್ದಿದೆ. ಸಂಜಯ್ ಅವರ ತಾಯಿ ರಾಣಿ ಕಪೂರ್, ಸೊಸೆ ಪ್ರಿಯಾ ಸಚ್‌ದೇವ್ ಕಪೂರ್ ಅವರನ್ನು ಮಂಡಳಿಗೆ ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. 

Read Full Story

11:00 AM (IST) Jul 26

ರಾಜ್ಯದ ಶ್ರೀಮಂತ ದೇವಾಲಯಕ್ಕೆ ಭಕ್ತರ ಭೇಟಿ, ಆದಾಯ ಕುಸಿತ!

ಕರ್ನಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಭಕ್ತರ ಸಂಖ್ಯೆ ಮತ್ತು ಧಾರ್ಮಿಕ ವಿಧಿವಿಧಾನಗಳಲ್ಲಿ ಇಳಿಕೆ ಕಂಡಿದೆ. ಈ ಇಳಿಕೆಯು ದೇವಾಲಯದ ಆದಾಯದ ಮೇಲೆ ಪರಿಣಾಮ ಬೀರಿದೆ, ಮತ್ತು ಸರ್ಕಾರವು ಸೌಲಭ್ಯಗಳನ್ನು ನವೀಕರಿಸಲು ಯೋಜನೆ ರೂಪಿಸಿದೆ.
Read Full Story

10:35 AM (IST) Jul 26

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ - ಮಂಗಳೂರು ತಲುಪಿದ SIT, ಹೇಗಿರಲಿದೆ ತನಿಖೆ?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಮಂಗಳೂರಿಗೆ ಆಗಮಿಸಿದೆ. ತನಿಖಾಧಿಕಾರಿಗಳು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. 

Read Full Story

09:41 AM (IST) Jul 26

ನುಗ್ಗೆಸೊಪ್ಪಿನಿಂದಲೇ ಆಹಾರ ಉದ್ಯಮ ಆರಂಭ - ಇಲ್ಲಿದೆ ಮಾಸ್ಟರ್ ಕಿಶನ್ ತಾಯಿ ಯಶೋಗಾಥೆ!

ಕೊರೋನಾ ಕಾಲದಲ್ಲಿ ರೋಗ ನಿರೋಧಕತೆ ಹೆಚ್ಚಿಸಲು ಶುರುವಾದ ಅಧ್ಯಯನ ಮತ್ತು ಸಂಶೋಧನೆಯ ಫಲವಾಗಿ ನ್ಯೂಟ್ರಿ ಮೊರಿಂಗಾ ಎಂಬ ಬ್ರ್ಯಾಂಡ್ ಹುಟ್ಟಿಕೊಂಡಿದೆ.

Read Full Story

08:59 AM (IST) Jul 26

ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆ ಕಾರಣ - ಕೃಷ್ಣ ಬೈರೇಗೌಡ

ಕರ್ನಾಟಕದಲ್ಲಿ ತಲಾ ಆದಾಯ ಹೆಚ್ಚುವುದಕ್ಕೆ ಗ್ಯಾರಂಟಿ ಯೋಜನೆ ಕಾರಣ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

Read Full Story

08:51 AM (IST) Jul 26

ಯಾವ ಕ್ರಾಂತಿಯೂ ಇಲ್ಲ, ಎಲ್ಲ ಸರಿಯಾಗಿದೆ - ಸಚಿವ ದಿನೇಶ್‌ ಗುಂಡೂರಾವ್‌

ಸೆಪ್ಟೆಂಬರ್ ಕ್ರಾಂತಿ ಹೇಳಿಕೆಗೆ ಈಗಲೂ ಬದ್ಧ ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌.

Read Full Story

08:40 AM (IST) Jul 26

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್‌ ಸೇರಿದಂತೆ ಇತರ ಕ್ರಿಕೆಟ್‌ ಪಂದ್ಯ ನಡೆಯೋದೇ ಇನ್ನು ಅನುಮಾನ!

ಕರ್ನಾಟಕ ಸರ್ಕಾರದೊಂದಿಗೆ ಹಂಚಿಕೊಳ್ಳಲಾದ ಮತ್ತು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪಡೆದುಕೊಂಡ ವರದಿಯಲ್ಲಿ ಆರ್‌ಸಿಬಿ ವಿರುದ್ಧ ದೋಷಾರೋಪಣೆ ಮಾಡಲಾಗಿದೆ.

 

Read Full Story

08:34 AM (IST) Jul 26

ಡ್ರೋನ್‌ನಿಂದಲೇ ಹಾರಿಸಬಲ್ಲ ಕ್ಷಿಪಣಿ ಪರೀಕ್ಷೆ ಯಶಸ್ವಿ - ಆಂಧ್ರದ ಕರ್ನೂಲ್‌ನಲ್ಲಿ ಪರೀಕ್ಷೆ

ಯುಎಲ್‌ಪಿಜಿಎಂ ಕ್ಷಿಪಣಿ ಕಾರ್ಯಕ್ರಮದ ಮೂಲಕ ಮೂರು ಆವೃತ್ತಿಗಳನ್ನು ಅಭಿ‍ವೃದ್ಧಿಪಡಿಸಲಾಗಿದೆ. ಮೊದಲ ಆವೃತ್ತಿಯು ಮಾದರಿ ಕ್ಷಿಪಣಿಯಾಗಿದ್ದು, ಈ ಮೂರು ಆವೃತ್ತಿಗಳನ್ನು ವಿಭಿನ್ನ ಯುದ್ಧ ಸನ್ನಿವೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.

Read Full Story

08:32 AM (IST) Jul 26

ಇಂದು ಕಾರ್ಗಿಲ್‌ ವಿಜಯ ದಿವಸ - 3 ಯೋಜನೆಗೆ ಚಾಲನೆ

1999ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸಾಧಿಸಿದ ಜಯದ ನೆನಪಿಗೆ ಆಚರಿಸಲಾಗುವ ‘ಕಾರ್ಗಿಲ್‌ ವಿಜಯ ದಿವಸ’ದ ನಿಮಿತ್ತ ಶನಿವಾರ ಸೇನೆಯು 3 ಯೋಜನೆಗಳ ಉದ್ಘಾಟನೆಗೆ ಸಜ್ಜಾಗಿದೆ.

Read Full Story

08:21 AM (IST) Jul 26

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆ ರಹಸ್ಯ..!

ತಾವೇ ನೇಮಿಸಿದ ಉಪರಾಷ್ಟ್ರಪತಿಯನ್ನು ಬಿಜೆಪಿ ವರಿಷ್ಠರು ರಾತ್ರೋರಾತ್ರಿ ಕಿತ್ತೊಗೆದಿದ್ದು ಏಕೆ? ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆ ರಹಸ್ಯ

Read Full Story

08:05 AM (IST) Jul 26

ಕಪ್‌ತುಳಿತ - 5 ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್‌ ರದ್ದು?

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್‌ ಸೇರಿ ಐವರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಅಮಾನತು ಆದೇಶ ಹಿಂಪಡೆಯುವ ಕುರಿತು ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

Read Full Story

07:50 AM (IST) Jul 26

ಗುಂಪು ಹತ್ಯೆ ಎಫ್‌ಐಆರ್‌ಗೂ ಮುನ್ನ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆಯಿರಿ - ಡಾ.ಎಂ.ಸಲೀಂ

ಗುಂಪು ಹತ್ಯೆ ಕೃತ್ಯಗಳ ಸಂಬಂಧ ಎಫ್‌ಐಆರ್ ದಾಖಲಿಸುವ ಮುನ್ನ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆಯುವಂತೆ ಸೂಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.

Read Full Story

07:46 AM (IST) Jul 26

ರಸಗೊಬ್ಬರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ - ಪ್ರಲ್ಹಾದ್‌ ಜೋಶಿ ಕಿಡಿ

ಕರ್ನಾಟಕಕ್ಕೆ ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಸುಳ್ಳು ಹೇಳುತ್ತ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಕಿಡಿ ಕಾರಿದ್ದಾರೆ.

Read Full Story

07:46 AM (IST) Jul 26

ರಾಜ್ಯದಲ್ಲಿ ಯೂರಿಯಾ ಕಿಚ್ಚು, ಗೊಬ್ಬರಕ್ಕೆ ರಾತ್ರಿ ಇಡೀ ಕ್ಯೂ, ಆದರೂ ಸಿಗುತ್ತಿಲ್ಲ ಗೊಬ್ಬರ, ರೈತರು ಆಕ್ರೋಶ

ರಾಜ್ಯದಲ್ಲಿ ಯೂರಿಯಾ ಗೊಬ್ಬರದ ತೀವ್ರ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗದಗ, ಹಾವೇರಿ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕೆಲವೆಡೆ ಪೊಲೀಸ್ ಭದ್ರತೆಯಲ್ಲಿ ಗೊಬ್ಬರ ವಿತರಣೆ ಮಾಡಲಾಗಿದೆ.

 

Read Full Story

07:45 AM (IST) Jul 26

ಚುನಾವಣಾ ಆಯೋಗವನ್ನು ಟೀಕಿಸಿದ ಸಿಎಂ, ಡಿಸಿಎಂ ಕ್ಷಮೆ ಕೇಳಲಿ: ವಿಜಯೇಂದ್ರ

ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

 

Read Full Story

07:45 AM (IST) Jul 26

ಕೇರಳ ನರ್ಸ್‌ ಗಲ್ಲು ಕನ್ನಡಿಗ ತಪ್ಪಿಸಿದ್ದು ಹೇಗೆ?

ಯೆಮನ್‌ ದೇಶದಲ್ಲಿ ಕೇರಳದ ನಿಮಿಷ ಪ್ರಿಯಾ ಎಂಬ ನರ್ಸ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದ್ದು, ಈ ಪ್ರಕ್ರಿಯೆಯ ಹಿಂದೆ ಕನ್ನಡಿಗ ಡಾ.ಮೌಲಾ ಷರೀಫ್ ಅವರ ಪ್ರಯತ್ನ, ಸುದೀರ್ಘ ಹೋರಾಟವಿದೆ.

 

Read Full Story

07:44 AM (IST) Jul 26

ಮೈಸೂರಿಗೆ ಸಿದ್ದರಾಮಯ್ಯರಿಂದ ಒಡೆಯರ್‌ ಕೊಟ್ಟಷ್ಟೇ ಕೊಡುಗೆ: ಯತೀಂದ್ರ

ಅಭಿವೃದ್ಧಿ ಮಾಡಿರುವುದಕ್ಕಾಗಿಯೇ ಸಾಧನಾ ಸಮಾವೇಶ ಮಾಡಿದ್ದು‌. ಸುಮ್ಮನೇ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

 

Read Full Story

More Trending News