ಮೈಸೂರು: ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯವಾಯಿತು? ಎಂದು ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಎಚ್.ವಿಶ್ವನಾಥ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ನಾನು ಕೂಡ ಶಿಕ್ಷಣ ಸಚಿವನಾಗಿದ್ದವನು. ಇಂಟರ್ನಲ್ ಮಾರ್ಕ್ಸ್ 20ಕ್ಕೆ 20 ಕೊಡುತ್ತಾರೆ. ಇನ್ನು ಉಳಿದ 80 ಮಾರ್ಕ್ಸ್‌ನಲ್ಲಿ 13 ನಂಬರ್ ತೆಗೆದರೆ ಪಾಸ್. ಈ ರೀತಿಯಾದರೆ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಹೋಗಬೇಕು? ಪಾಸಾದ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

11:21 PM (IST) Apr 26
Kidney Health: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಗೆ ಯಾವುದೇ ರೀತಿಯ ಹಾನಿಯಾದರೂ ಅದು ತಡವಾಗಿ ತಿಳಿಯುತ್ತದೆ. ಇದರಿಂದ ರೋಗವು ಗಂಭೀರ ಸ್ವರೂಪ ಪಡೆದು, ಹೆಚ್ಚಿನ ಜಟಿಲತೆಗೆ ಕಾರಣವಾಗಬಹುದು.
09:49 PM (IST) Apr 26
ಭಾರತದ ಆರ್ಥಿಕತೆ ಹಾಗೂ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಪಾತ್ರ ಅತ್ಯಂತ ನಿರ್ಣಾಯಕ. ಆದರೆ, ಅವುಗಳ ಸಮಸ್ಯೆಗಳನ್ನೇ ಹತ್ತಿಕ್ಕಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
08:18 PM (IST) Apr 26
ರೈತರಿಗೆ ಸರಿಯಾದ ಪರಿಹಾರ ಸಿಗದಿದ್ದರೆ ವಿಮೆ ಮಾಡದಂತೆ ರೈತರಿಗೆ ನಾವೇ ಹೇಳಬೇಕಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
06:50 PM (IST) Apr 26
ಅನಾಥ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿರುವ ಅಜ್ಜಿಗೆ ಒಂದು ಮನೆ, ಅಗತ್ಯ ಧನಸಹಾಯ ಮಕ್ಕಳಿಗೆ ಆಧಾರ್ ಕಾರ್ಡ್ ಪಡಿತರ ಚೀಟಿ ಮಾಡಿಸಿಕೊಡುವ ಭರವಸೆ ಸಿಕ್ಕಿದ್ದು ಈ ಮಕ್ಕಳ ಭವಿಷದಲ್ಲಿ ಆಶಾಕಿರಣ ಮೂಡಿದೆ.
06:36 PM (IST) Apr 26
ಪ್ರಧಾನಿ ಅವರು ಇಂತಹದ್ದೊಂದು ಮಸೂದೆಗಳನ್ನು ಮಂಡಿಸಿದ್ದರು. ಆದರೆ, ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಇದರಿಂದ ಮಹಿಳೆಯರಿಗೆ ಮೀಸಲಾತಿ ದೊರೆಯಲಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
06:07 PM (IST) Apr 26
ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
05:56 PM (IST) Apr 26
ಊಟ, ವ್ಯಾಯಾಮದಷ್ಟೇ ಒಳ್ಳೆ ನಿದ್ದೆ ಕೂಡ ಆರೋಗ್ಯಕ್ಕೆ ತುಂಬಾನೇ ಮುಖ್ಯ. ಇದು ನಮ್ಮ ಮೂಡ್ ಚೆನ್ನಾಗಿಡೋಕೆ ಸಹಾಯ ಮಾಡುತ್ತೆ. ಆದ್ರೆ, ಕೆಲವೊಮ್ಮೆ ಚೆನ್ನಾಗಿ ನಿದ್ದೆ ಮಾಡಿದ್ರೂ ಸುಸ್ತು ಮಾತ್ರ ಕಡಿಮೆ ಆಗಲ್ಲ. ಯಾಕೆ ಹೀಗೆ?
05:48 PM (IST) Apr 26
05:36 PM (IST) Apr 26
05:12 PM (IST) Apr 26
Anushka Sharma Watch Price: ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs GT ಪಂದ್ಯ ನಡೆಯಿತು. ಮದುವೆ ಬಳಿಕ ನಟನೆಯಿಂದ ದೂರ ಇರುವ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಬಂದೇ ಬರುತ್ತಾರೆ. ಈಗ ಇವರ ವಾಚ್ ಬೆಲೆ ಸಂಚಲನ ಮೂಡಿಸುತ್ತಿದೆ.
04:44 PM (IST) Apr 26
ಈ ಬಾರಿಯ ತಮಿಳುನಾಡು ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿತ್ತು. ಯಾಕಂದ್ರೆ, ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಇಡೀ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮತ್ತು ಕುತೂಹಲ ಮೂಡಿಸಿತ್ತು.
04:32 PM (IST) Apr 26
ಯಗಚಿ ಹಳ್ಳಕ್ಕೆ ಕೊಳಚೆ ನೀರು ಸೇರುತ್ತಿರುವ ಗಂಭೀರ ಸಮಸ್ಯೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಚಿಕ್ಕಮಗಳೂರಿನ ರಾಮೇಶ್ವರ ಬಡಾವಣೆಯಲ್ಲಿರುವ ಈ ಹಳ್ಳದ ನೀರು ನೇರವಾಗಿ ಯಗಚಿ ಡ್ಯಾಂ ಸೇರುತ್ತಿದೆ.
04:23 PM (IST) Apr 26
Tiruvannamalai Arunachaleswarar: ಶಿವನ ಪಂಚಭೂತ ಕ್ಷೇತ್ರಗಳಲ್ಲಿ ಅಗ್ನಿ ಕ್ಷೇತ್ರವೇ ತಿರುವಣ್ಣಾಮಲೈ. ಇಲ್ಲಿ ಶಿವನೇ ಬೆಟ್ಟದ ರೂಪದಲ್ಲಿ ನೆಲೆಸಿದ್ದಾನೆ ಅನ್ನೋದು ನಂಬಿಕೆ. ಅದಕ್ಕೇ ಇಲ್ಲಿ ಗಿರಿವಲಂ ಬಂದ್ರೆ, ಸಾಕ್ಷಾತ್ ಶಿವನಿಗೆ ಪ್ರದಕ್ಷಿಣೆ ಹಾಕಿದಂತೆ. ಈ ಗಿರಿವಲಂನಿಂದ ಶಿವನ ಜೊತೆ ಸಿದ್ಧರ ಕೃಪೆಯೂ ಸಿಗುತ್ತೆ ಅಂತಾರೆ.
04:14 PM (IST) Apr 26
ಬೆಂಗಳೂರು ಉದ್ಯಮಿ ಹನಿಟ್ರಾಪ್ ಬಲೆ, ₹1.5 ಕೋಟಿಗೆ ಬೇಡಿಕೆ ಇಟ್ಟ ಇನ್‌ಫ್ಲುಯೆನ್ಸರ್ ವಿರುದ್ಧ ಕೇಸ್, ಉದ್ಯಮಿ ಜೊತೆಗಿನ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಬೇಡಿಕೆ ಇಡಲಾಗಿದೆ. ಉದ್ಯಮಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಲಿಸಿದ್ದಾರೆ.
04:07 PM (IST) Apr 26
Fasting Advantage: ಉಪವಾಸ ಅಂದ ತಕ್ಷಣ ಹೊಟ್ಟೆಗೇನೂ ಹಾಕದೆ ಪೂಜೆ ಮಾಡೋದು ಅಂತಾ ಹೆಚ್ಚಿನವರು ಅಂದುಕೊಂಡಿದ್ದಾರೆ. ಹೀಗೆ ಉಪವಾಸ ಮಾಡೋದರಿಂದ ಸುಸ್ತಾಗುತ್ತೆ, ಆರೋಗ್ಯ ಹಾಳಾಗುತ್ತೆ ಅಂತಾನೂ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಆದ್ರೆ, ಈ ಆಚರಣೆ ಹಿಂದೆ ಅಡಗಿರುವ ವಿಜ್ಞಾನ ಮತ್ತು ಆರೋಗ್ಯದ ಲಾಭಗಳು ಮಾತ್ರ ಬಹಳ ಜನರಿಗೆ ಗೊತ್ತೇ ಇಲ್ಲ.
03:38 PM (IST) Apr 26
03:35 PM (IST) Apr 26
ಜಿಲ್ಲೆಯ ಪ್ರಭಾವಿ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ 1 ರಿಂದ 2 ಗಂಟೆಯ ಮಧ್ಯೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಅವರ ಮನೆಯ ಮೊದಲ ಮಹಡಿಯಲ್ಲಿ ಅವರ ಮಗಳು ಸಂಸ್ಕೃತಿ ಓದುವುದರಲ್ಲಿ ಮಗ್ನರಾಗಿದ್ದರು ಎಂದು ತಿಳಿದು ಬಂದಿದೆ.
03:33 PM (IST) Apr 26
'ಅಂಜನಿಪುತ್ರ' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿಸುವಾಗ ರಶ್ಮಿಕಾ ಅವರಿಗೆ ಸಿನಿಮಾ ರಂಗದ ಬಗ್ಗೆ ಇದ್ದ ದೃಷ್ಟಿಕೋನವೇ ಬದಲಾಯಿತಂತೆ. ವಿಡಿಯೋದಲ್ಲಿ ಮಾತನಾಡುತ್ತಾ ರಶ್ಮಿಕಾ, "ಪುನೀತ್ ಸರ್ ಜೊತೆ ಕೆಲಸ ಮಾಡಿದ ಮೇಲೆಯೇ ನನಗೆ ಅರ್ಥವಾಗಿದ್ದು..' ಇನ್ನೂ ಏನು ಹೇಳಿದ್ದಾರೆ ನೋಡಿ..
03:24 PM (IST) Apr 26
02:50 PM (IST) Apr 26
Ginger Garlic Paste: ಅಡುಗೆಯಲ್ಲಿ ಪ್ರತಿದಿನ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬೇಕೇಬೇಕು. ಆದರೆ ಪ್ರತಿ ಬಾರಿಯೂ ಶುಂಠಿ ಸಿಪ್ಪೆ ತೆಗೆಯೋದು, ಬೆಳ್ಳುಳ್ಳಿ ಸುಲಿಯೋದು ದೊಡ್ಡ ಕೆಲಸ. ಹಾಗಾಗಿ ಹೆಚ್ಚಿನವರು ಪೇಸ್ಟ್ ಮಾಡಿಟ್ಟುಕೊಳ್ಳುತ್ತಾರೆ. ತಿಂಗಳುಗಟ್ಟಲೆ ತಾಜಾ ಆಗಿಡಲು ಹೀಗೆ ಮಾಡಿ.
01:44 PM (IST) Apr 26
ಇತ್ತೀಚೆಗೆ ನಡೆದ ಒಂದು ಮಸಾಲೆಯುಕ್ತ ಸಂದರ್ಶನದಲ್ಲಿ ಈ ಹಳೆಯ ಪ್ರಶ್ನೆ ಜಗಪತಿ ಬಾಬು ಅವರ ಮುಂದೆ ಬಂತು. "ನೀವು ನಿಜವಾಗಿಯೂ ಸೌಂದರ್ಯಗೆ ಲವ್ ಲೆಟರ್ ಬರೆದಿದ್ದೀರಾ?" ಎಂದು ಕೇಳಿದಾಗ, ಜಗಪತಿ ಬಾಬು ಒಂದು ಕ್ಷಣ ನಕ್ಕು ನಂತರ ಗಂಭೀರವಾದರು. ಮುಂದೆ ಈ ನಟ ಹೇಳಿದ್ದೇನು?
12:55 PM (IST) Apr 26
ಕೊಡಗಿನ ಚೇರಂಬಾಣೆಯಲ್ಲಿ, ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ 51 ವರ್ಷದ ಶಿಕ್ಷಕಿ ರೋಹಿಣಿ ಎ ಯು ಅವರು ತಮ್ಮ ಮನೆಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ.
12:43 PM (IST) Apr 26
ಇತ್ತೀಚೆಗೆ ಯುವ ರೈತರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ತರುವ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೇ ಸಂಪಾದಿಸುತ್ತಿದ್ದಾರೆ. ಅಂತಹ ಒಂದು ಬೆಳೆಯೇ ಕ್ಯಾರೆಟ್. ಇದರ ಕೃಷಿ ಬಗ್ಗೆ ತಿಳಿಯೋಣ.
12:30 PM (IST) Apr 26
ಈಗಾಗಲೇ ಸೀಸನ್ 9 ರ ಅತಿಥಿಗಳ ಬಗ್ಗೆ ಸಾಕಷ್ಟು ಊಹೆಗಳು ಶುರುವಾಗಿವೆ. ಈ ಬಾರಿ ಯಾರು ಕರಣ್ ಅವರ 'ರಾಪಿಡ್ ಫೈಯರ್' ರೌಂಡ್‌ನಲ್ಲಿ ಬೆವರು ಇಳಿಸಿಕೊಳ್ಳುತ್ತಾರೆ? ಯಾರಿಗೆ ಆ ಪ್ರತಿಷ್ಠಿತ 'ಕಾಫಿ ಹ್ಯಾಂಪರ್' ಸಿಗಲಿದೆ? ಮತ್ತು ಕರಣ್ ಅವರ ಬಾಯಿಯಿಂದ ಯಾವ ಹೊಸ ಸೀಕ್ರೆಟ್ ಹೊರಬರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
12:21 PM (IST) Apr 26
ಅಮೆರಿಕದಿಂದ ಅಕ್ಕನ ಮಗನ ಮದುವೆಗೆ ಬಂದಿದ್ದ NRI ವೈದ್ಯೆಯೊಬ್ಬರಿಗೆ ಬೆಂಗಳೂರಿನಲ್ಲಿ ಆಘಾತಕಾರಿ ಅನುಭವವಾಗಿದೆ. ಹೊಸಕೋಟೆ ಬಳಿಯ ಚೌಟ್ರಿಯೊಂದರಲ್ಲಿ ನಡೆದ ರಿಸೆಪ್ಷನ್ ವೇಳೆ, ರೂಮಿನಲ್ಲಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವಾಗಿವೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
11:45 AM (IST) Apr 26
11:42 AM (IST) Apr 26
ಅಡುಗೆ ಮಾಡುವಾಗ ಕಿಚನ್ ಕೌಂಟರ್ ತುಂಬಾ ಹರಡಿಕೊಂಡಂತೆ ಕಾಣಿಸುತ್ತಿದೆಯೇ? ಹಾಗಿದ್ದರೆ, ನಿಮ್ಮ ಅಡುಗೆಮನೆಯನ್ನು ಕ್ಲೀನ್ ಆಗಿಡಲು ಮತ್ತು ಸ್ಟೈಲಿಶ್ ಲುಕ್ ನೀಡಲು ಇಲ್ಲಿದೆ ಕೆಲವು ಸ್ಪೇಸ್ ಸೇವಿಂಗ್ ಮಸಾಲಾ ರ್ಯಾಕ್ ಡಿಸೈನ್‌ಗಳು
11:09 AM (IST) Apr 26
10:01 AM (IST) Apr 26
ಬೀದರ್ ಶಿಕ್ಷಣ ಸಂಸ್ಥೆಯು ಎಸ್‌ಎಸ್‌ಎಲ್‌ಸಿಯಲ್ಲಿ 95%ಕ್ಕೂ ಹೆಚ್ಚು ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಫೌಂಡೇಷನ್ ಕೋರ್ಸ್‌ಗಳನ್ನು ಸಹ ನಡೆಸಲಾಗುತ್ತಿದೆ.
09:53 AM (IST) Apr 26
09:10 AM (IST) Apr 26
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ, ಸಾಂಬಾರ್ ಮಾಡಿಲ್ಲವೆಂದು ತಂದೆ ಗದರಿದ್ದಕ್ಕೆ ಮನನೊಂದು 22 ವರ್ಷದ ಯುವತಿಯೊಬ್ಬಳು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ಪಕ್ಕದ ಮನೆಯಿಂದ ಸಾಂಬಾರ್ ತರುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿದ್ದು, ಈ ಕುರಿತು ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
08:14 AM (IST) Apr 26
SSLC ಪರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕನ್ನಡದಲ್ಲಿ ಅನುತ್ತೀರ್ಣರಾಗಲು ಹಳೆಯ ಬೋಧನಾ ವಿಧಾನ ಮತ್ತು ಕ್ಲಿಷ್ಟಕರ ಪಠ್ಯಕ್ರಮವೇ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾಷಾ ಬೋಧನೆಯನ್ನು ಸರಳೀಕರಿಸಿ, ವ್ಯಾಕರಣ ಮತ್ತು ವಾಕ್ಯ ರಚನೆಗೆ ಒತ್ತು ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.
07:43 AM (IST) Apr 26
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಧಾರವಾಡದ ಹೈದರ್‌ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಮಫೀರ್ ಖಾದ್ರಿ ತಿಳಿಸಿದ್ದಾರೆ. ಹಜರತ್ ಸಯ್ಯದ್ ಶಾ ದರ್ಗಾ ಆವರಣದಲ್ಲಿ ನಡೆದ ಭೂಮಿಪೂಜೆ ಸಮಾರಂಭ ನಡೆಯಿತು.
07:00 AM (IST) Apr 26
ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದಕ್ಕೆ ಹರಿಹರ ಶಾಸಕ ಬಿ.ಪಿ.ಹರೀಶ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ತಮ್ಮ ಸಿಎಂ ಆಗುವ ಕನಸು ಭಗ್ನಗೊಂಡಿದ್ದರಿಂದ ಖರ್ಗೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹರೀಶ ಆರೋಪಿಸಿದ್ದಾರೆ.
06:51 AM (IST) Apr 26
06:43 AM (IST) Apr 26
06:10 AM (IST) Apr 26
ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ದೇಶದ ಮೊದಲ ಬಿ28 ಬುಲೆಟ್ ರೈಲು ಬೋಗಿಗಳ ವಿನ್ಯಾಸ ಕಾರ್ಯ ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಘಟಕವನ್ನು ಉದ್ಘಾಟಿಸಿದ್ದು, 2027ರ ಅಂತ್ಯಕ್ಕೆ ರೈಲು ಸಂಪೂರ್ಣ ಸಿದ್ಧಗೊಳ್ಳಲಿದೆ ಎಂದು ತಿಳಿಸಿದ್ದಾರೆ.
06:02 AM (IST) Apr 26
ಬೆಳಗಾವಿಯಲ್ಲಿ ವಿಶ್ವ ಪಶುವೈದ್ಯಕೀಯ ದಿನಾಚರಣೆಯಂದು ಕಾಲು-ಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ, ಪಶು ಸಂಗೋಪನೆ ಸಚಿವರು 2 ಜಿಲ್ಲೆಗಳ ರೈತರಿಗೆ ಶೇ.25ರ ಸಬ್ಸಿಡಿಯೊಂದಿಗೆ 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದರು.
05:54 AM (IST) Apr 26
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್, ತಾನು ಕೃತ್ಯ ಎಸಗಿದ್ದಾಗಿ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಏಪ್ರಿಲ್ 27 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟವಾಗಲಿದೆ.
05:45 AM (IST) Apr 26
ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರು ಮೊಣಕಾಲು ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದ ಸೋಂಕಿನಿಂದ ಪ್ರಜ್ಞಾಹೀನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಶ್ವಾಸಕೋಶ ಕಸಿಗೆ ಸೂಚಿಸಿದ್ದಾರೆ.