Published : Mar 25, 2026, 06:23 AM ISTUpdated : Mar 25, 2026, 10:49 PM IST

Karnataka News Live: ವಾರದ ಒಳಗೆ ಮಾಲೀಕರಿಗೆ 'ಲ್ಯಾಂಬೋರ್ಗಿನಿ' ವಾಪಸ್ ನೀಡಿ - ಕಾರು ಜಪ್ತಿ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ!

ಸಾರಾಂಶ

ಇತ್ತೀಚೆಗೆ ವಿಧಾನ ಸಭೆಯಲ್ಲಿ ಅಧಿಕಾರಿಗಳು ಶಾಸಕರ ಪ್ರಶ್ನೆಗೆ ಉತ್ತರ ನೀಡದೆ ಬಾಕಿ ಉಳಿಸಿಕೊಂಡಿದ್ದಕ್ಕೆ ಸ್ಪೀಕ‌ರ್ ಯು.ಟಿ.ಖಾದರ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿ, ಸಭಾತ್ಯಾಗ ಮಾಡಿದ್ದರು. ಇದೇ ವಿಚಾರ ವಿಧಾನ ಪರಿಷತ್‌ನಲ್ಲೂ ಪುನರಾವರ್ತನೆ ಆಗಿದ್ದು, ಸಭಾಪತಿ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಬುಧವಾರದೊಳಗೆ ಉತ್ತರ ನೀಡದಿದ್ದರೆ ಅಂಥ ಅಧಿಕಾರಿ ಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳ ಲಾಗುವುದು. ಈ ಸಂಬಂಧ ತಾವು ಕೊಡುವ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಟುವಾಗಿ ಹೇಳಿದ್ದಾರೆ.

ಪ್ರಶೋತ್ತರ ಕಲಾಪದ ನಂತರ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಬೋಜೇಗೌಡ ಅವರು ಸದಸ್ಯರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ನಿತ್ಯ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದೆ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಸದನವನ್ನು ಅಧಿಕಾರಿಗಳು ಹಗುರವಾಗಿ ತೆಗೆದು ಕೊಂಡಿದ್ದಾರೆ. ಅಧಿವೇಶನ ಮುಗಿಯುತ್ತಾ ಬರುತ್ತಿದ್ದರೂ ಉತ್ತರ ನೀಡಲು 10-15 ದಿನ ಕಾಲಾವಕಾಶ ಕೇಳುತ್ತಿದ್ದಾರೆ. ಎಂದರು.

ಸದಸ್ಯರ ಸ್ವರ ಮಾತಿಗೆ ಸ್ಪಂದಿಸಿದ ಸಭಾಪತಿ ಹೊರಟ್ಟಿ ಅವರು, ಕಲಾಪ ಮುಗಿದ ನಂತರ ಸಭಾನಾಯಕ, ಪ್ರತಿಪಕ್ಷದ ನಾಯಕ, ಎರಡೂ ಕಡೆಯ ಮುಖ್ಯ ಸಚೇತಕರು ತಮ್ಮ ಕಚೇರಿಗೆ ಬಂದು ಎಲ್ಲ ವಿವರವನ್ನು ತಮಗೆ ತಿಳಿಸಬೇಕು. ಉತ್ತರ ನೀಡದ ಅಧಿಕಾರಿಗಳ ವಿರುದ್ಧ  ಕ್ರಮ ಜರುಗಿಸಲಾಗುವುದು ಎಂದರು.

10:49 PM (IST) Mar 25

ವಾರದ ಒಳಗೆ ಮಾಲೀಕರಿಗೆ 'ಲ್ಯಾಂಬೋರ್ಗಿನಿ' ವಾಪಸ್ ನೀಡಿ - ಕಾರು ಜಪ್ತಿ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ ಚಾಟಿ!

ಸಹಕಾರ ನಗರದಲ್ಲಿ ಜಪ್ತಿ ಮಾಡಲಾಗಿದ್ದ 'ಲ್ಯಾಂಬೋರ್ಗಿನಿ ಹುರಾಕನ್' ಕಾರನ್ನು ಅದರ ಮಾಲೀಕರಿಗೆ ಹಿಂದಿರುಗಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ತೆರಿಗೆ ವಂಚನೆ ಮತ್ತು ನಕಲಿ ದಾಖಲೆ ಆರೋಪದ ಮೇಲೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

Read Full Story

09:53 PM (IST) Mar 25

IPL 2026 - ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!

ಐಪಿಎಲ್ 19ನೇ ಸೀಸನ್‌ಗೂ ಮುನ್ನ ನಡೆದ ಆರ್‌ಸಿಬಿ ಆಂತರಿಕ ಅಭ್ಯಾಸ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಅವರು ತಮ್ಮ ಭರ್ಜರಿ ಫಾರ್ಮ್ ಪ್ರದರ್ಶಿಸಿ, ಮುಂಬರುವ ಟೂರ್ನಿಯಲ್ಲಿ ಎದುರಾಳಿ ತಂಡಗಳಿಗೆ ಕಠಿಣ ಸವಾಲು ನೀಡುವ ಮುನ್ಸೂಚನೆ ನೀಡಿದ್ದಾರೆ.
Read Full Story

09:34 PM (IST) Mar 25

ಚಿನ್ನ ವ್ಯಾಪಾರಿಗಳ ಸಮಸ್ಯೆ ಇತ್ಯರ್ಥಕ್ಕೆ ಸರ್ಕಾರ ಬದ್ಧ - ಸಚಿವ ಸತೀಶ್‌ ಜಾರಕಿಹೊಳಿ

ಚಿನ್ನದ ವ್ಯಾಪಾರ ಮಾಡುವವರಿಗೆ ಅನಗತ್ಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಈ ಅಸಂಘಟಿತ ವಲಯ ಬಲಪಡಿಸಲು ಅಗತ್ಯ ಸಹಕಾರ ನೀಡಲಾಗುವುದು.

Read Full Story

09:00 PM (IST) Mar 25

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಎಲ್ಲಾ ರೀತಿಯ ಕ್ರಮ - ಗೃಹ ಸಚಿವ ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವ ಭಾಗದಲ್ಲಿ ಡ್ರಗ್ಸ್‌ ಪತ್ತೆಯಾಗುತ್ತದೆಯೋ ಅಲ್ಲಿನ ಇನ್ಸ್‌ಪೆಕ್ಟರ್‌, ಡಿಸಿಪಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.

Read Full Story

08:08 PM (IST) Mar 25

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳ ಸ್ಮಾರಕ ಮಾಡಿದ್ದೇಕೆ KSCA? ಮೋಜು, ಮಸ್ತಿ ಮಾಡೋದಕ್ಕೆ ಮಾತ್ರ RCB Cafe ಇರೋದಾ?

ಕಳೆದ ವರ್ಷದ ಕಾಲ್ತುಳಿತದಲ್ಲಿ ಮೃತಪಟ್ಟ 11 ಆರ್‌ಸಿಬಿ ಅಭಿಮಾನಿಗಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮಾರಕವನ್ನು ಅನಾವರಣಗೊಳಿಸಲಾಗಿದೆ. ಆದರೆ, ಖಾಸಗಿ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಎಸ್‌ಸಿಎ ಆವರಣದಲ್ಲಿ ಸ್ಮಾರಕ ನಿರ್ಮಿಸಿರುವುದರ ಔಚಿತ್ಯವನ್ನು ಪ್ರಶ್ನಿಸಲಾಗಿದೆ.

Read Full Story

07:29 PM (IST) Mar 25

ಮೈಚಳಿ ಬಿಟ್ಟು ನೀರಿನಲ್ಲಿ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್‌ ಶಾಸ್ತ್ರಿ ರೊಮಾನ್ಸ್​ - ವಿಡಿಯೋ ವೈರಲ್​

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ, ನದಿ ತೀರದಲ್ಲಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮಿಬ್ಬರ ನಡುವೆ ಏನೂ ಇಲ್ಲ ಎಂದಿದ್ದ ಈ ಜೋಡಿ, ಈಗ ಮದುವೆಯ ಬಗ್ಗೆ ಪರೋಕ್ಷ ಸುಳಿವು ನೀಡಿದೆ.

Read Full Story

06:51 PM (IST) Mar 25

Vijay Sangeetha Divorce - ವಿಜಯ್ ಏನೆಲ್ಲಾ ಮಾಡಿದ್ದರು? ಹಳೆ ಇಂಟರ್ವ್ಯೂನಲ್ಲಿ ಲಿಸ್ಟ್ ಕೊಟ್ಟಿದ್ದ ಸಂಗೀತಾ!

ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎನ್ನಲಾದ ಈ ಹೊತ್ತಲ್ಲಿ, ಅವರು ಈ ಹಿಂದೆ ದಳಪತಿ ವಿಜಯ್ ಬಗ್ಗೆ ಮಾತನಾಡಿದ್ದ ಹಳೆಯ ಸಂದರ್ಶನವೊಂದು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

Read Full Story

06:07 PM (IST) Mar 25

ವಿಧಾನಸೌಧದಲ್ಲಿ 'ಮನಿ ಬ್ಯಾಗ್' - ಭಾರೀ ಹಣದೊಂದಿಗೆ ಶಕ್ತಿಸೌಧಕ್ಕೆ ಹೋಗಲು ಯತ್ನಿಸಿದ ಯುವಕ ಪೊಲೀಸ್ ವಶಕ್ಕೆ!

ವಿಧಾನಸೌಧಕ್ಕೆ 6 ಲಕ್ಷ ರೂಪಾಯಿ ನಗದು ಸಾಗಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ ಆತ, ಹಣವನ್ನು ತನ್ನ ದೊಡ್ಡಪ್ಪನ ಚಿಕಿತ್ಸೆಗೆಂದು ತಂದಿದ್ದಾಗಿ ಸಮರ್ಥಿಸಿಕೊಂಡಿದ್ದಾನೆ. 

Read Full Story

05:09 PM (IST) Mar 25

ಈ ನಟ ಜೊತೆ ಇದ್ರೆ ಸಾಕು, ಸಿನಿಮಾ 1000 ಕೋಟಿ ಕ್ಲಬ್ ಸೇರೋದು ಗ್ಯಾರಂಟಿ - ಯಾರು ಆ ಲಕ್ಕಿ ಚಾರ್ಮ್!

90ರ ದಶಕದ ಸೂಪರ್‌ಸ್ಟಾರ್ ಸಂಜಯ್ ದತ್ ಈಗ 'ಮಹಾಖಳನಾಯಕ'ನಾಗಿ ತೆರೆ ಮೇಲೆ ಮಿಂಚ್ತಿದ್ದಾರೆ. ಇವರು ನಟಿಸಿದ್ರೆ ಸಾಕು, ಸಿನಿಮಾ 1000 ಕೋಟಿ ಬಾಚುತ್ತೆ ಅನ್ನೋ ನಂಬಿಕೆ ನಿರ್ಮಾಪಕರದ್ದು. ಸಂಜು ಬಾಬಾ ಈಗ ಬಾಕ್ಸಾಫೀಸ್‌ನ 'ಲಕ್ಕಿ ಚಾರ್ಮ್' ಆಗಿದ್ದಾರೆ.

Read Full Story

05:07 PM (IST) Mar 25

Amruthadhaare ಜೈದೇವ್- ಹಳೆಯ ಮಲ್ಲಿ ರಿಯಲ್​ ಮದ್ವೆಗೆ ರವಿಚಂದ್ರನ್​ ಜೊತೆ ದರ್ಶನ್ ಹಾಜರು?

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೈದೇವ್ ಅಲಿಯಾಸ್ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ, ರಾಣವ್ ಅವರಲ್ಲಿ ನಟ ದರ್ಶನ್ ಅವರನ್ನು ಕಾಣುವ ರಾಧಾ, ತಮ್ಮ ಮದುವೆಗೆ ದರ್ಶನ್ ಬರಬೇಕೆಂದು ಆಶಿಸಿದ್ದಾರೆ.
Read Full Story

04:53 PM (IST) Mar 25

'ಧುರಂಧರ್' ನೋಡಿದೋರಿಗೂ 'ಭೂತ್ ಬಂಗ್ಲಾ' ಇಷ್ಟ ಆಗುತ್ತೆ - ನಟ ಅಕ್ಷಯ್ ಕುಮಾರ್ ಭರವಸೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಹೊಸ ಸಿನಿಮಾ 'ಭೂತ್ ಬಂಗ್ಲಾ' ಬಗ್ಗೆ ಮಾತನಾಡಿದ್ದಾರೆ. 'ಧುರಂಧರ್' ತರಹದ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ 'ಭೂತ್ ಬಂಗ್ಲಾ' ಸಿನಿಮಾ ಇಷ್ಟವಾಗಲಿದೆ ಎಂದಿದ್ದಾರೆ.

Read Full Story

04:36 PM (IST) Mar 25

ಕನ್ನಡ ಕಲಾವಿದರಿಗೆ ಪ್ರಶಸ್ತಿ ಕೊಟ್ಟು ಗೌರವ ಕೊಡದ ಫಿಲ್ಮ್‌ಫೇರ್? ನಟ ಶ್ರೀಮುರಳಿ ಬೇಸರ

ನಟ ನಟಿಯರ ಫೋಟೋಗಳನ್ನು ಫಿಲಂಫೇರ್‌ ಮ್ಯಾಗಜೀನ್‌ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ.

Read Full Story

04:30 PM (IST) Mar 25

ಕರ್ನಾಟಕ ಪೊಲೀಸ್ ನೇರ ನೇಮಕಾತಿ ವಯೋಮಿತಿ ಸಡಿಲಿಸಿ ಮಹಾ ನಿರ್ದೇಶಕ ಡಾ ಸಲೀಂ ಆದೇಶ! ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ಕರ್ನಾಟಕ ಪೊಲೀಸ್ ಇಲಾಖೆಯು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಘೋಷಿಸಿದೆ. ಈ ಒಂದು ಬಾರಿಯ ವಿಶೇಷ ಕ್ರಮವು 2026ರ ಮಾರ್ಚ್ 24 ರಿಂದ 2027ರ ಡಿಸೆಂಬರ್ 31ರ ವರೆಗಿನ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಕೋವಿಡ್ ಮತ್ತು ಆಡಳಿತಾತ್ಮಕ ವಿಳಂಬದಿಂದ ವಯೋಮಿತಿ ಮೀರಿದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

04:21 PM (IST) Mar 25

ಧುರಂಧರ್ 3 ಬರೋದಿಲ್ಲ, 8 ಗಂಟೆಯಲ್ಲಿ ನನ್ನ ಕಥೆ ಹೇಳಿ ಮುಗಿಸಿದ್ದೇನೆ - ಆದಿತ್ಯ ಧರ್‌

ನನಗೆ ಹೇಳಬೇಕಿದ್ದ ಕಥೆಯನ್ನು 8 ಗಂಟೆಗಳಲ್ಲಿ ಎರಡು ಭಾಗಗಳಲ್ಲಿ ಹೇಳಿ ಮುಗಿಸಿದ್ದೇನೆ. ಕಥೆಯೇ ಇಲ್ಲದೇ ಸಿನಿಮಾವನ್ನು ಅನವಶ್ಯಕ ಎಳೆದಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಬಾರದು ಎಂದಿದ್ದಾರೆ ಆದಿತ್ಯ ಧರ್‌.

Read Full Story

04:07 PM (IST) Mar 25

ಜಮೀರ್ ಅಲ್ಲ, ಆ ಪರಮಾತ್ಮನೇ ಬಂದ್ರೂ ನಾಮಪತ್ರ ವಾಪಸ್ ಪಡೆಯೊಲ್ಲ - ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಸವಾಲ್

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮನವೊಲಿಸಲು ಬರುವ ಸಚಿವ ಜಮೀರ್ ಅಹ್ಮದ್‌ಗೆ 'ಗೋ ಬ್ಯಾಕ್' ಎನ್ನುವುದಾಗಿ ಸವಾಲು ಹಾಕಿದ್ದಾರೆ.

Read Full Story

04:04 PM (IST) Mar 25

ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆಗೆ ಒಪ್ಪಿಗೆ, ಸಂಸದ ಸಂತಸ

ಬೆಂಗಳೂರು-ಮೈಸೂರು ಮಾರ್ಗದ ಪ್ರಸಿದ್ಧ ಒಡೆಯರ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಇನ್ನು ಮುಂದೆ ರಾಮನಗರ ರೈಲು ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಲಾಗಿದೆ. ಜನಪ್ರತಿನಿಧಿಗಳ ನಿರಂತರ ಪ್ರಯತ್ನದ ಫಲವಾಗಿ ಈ ಬಹುದಿನಗಳ ಬೇಡಿಕೆ ಈಡೇರಿದ್ದು, ಇದು ಸ್ಥಳೀಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ.
Read Full Story

03:42 PM (IST) Mar 25

ಬೆಂಗಳೂರು - ರೈಲ್ವೆ ಹಳಿಗಳ ಬಳಿಯ ಮನೆಗಳ್ಳನಿಂದ ಅರ್ಧ ಕೆಜಿ ಚಿನ್ನ ಜಪ್ತಿ! ಖತರ್ನಾಕ್ ಕಳ್ಳನ ಕರಾಮತ್ತು ಕೇಳಿ!

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ರೈಲು ಹಳಿಗಳನ್ನೇ ಬಳಸಿ ಸಿಸಿಟಿವಿ ಕಣ್ತಪ್ಪಿಸಿ ಸರಣಿ ಮನೆಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹79 ಲಕ್ಷ ಮೌಲ್ಯದ 527 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಈ ಹಿಂದೆಯೂ ಇದೇ ಮಾದರಿಯ ಕೃತ್ಯಕ್ಕಾಗಿ ಬಂಧಿತನಾಗಿದ್ದನು.
Read Full Story

03:22 PM (IST) Mar 25

ಶಾಸಕರಾಯ್ತು, ಸ್ಪೀಕರ್ ಖಾದರ್ ಜೊತೆಗೆ ಈಗ ಸಿಬ್ಬಂದಿಗಳ ಫೋಟೋಶೂಟ್, ಬದಲಾವಣೆಯ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ!

ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಫೋಟೋ ಶೂಟ್ ರಾಜಕೀಯ ಬದಲಾವಣೆಯ ಊಹಾಪೋಹಗಳಿಗೆ ಕಾರಣವಾಯಿತು. ಪರಿಷತ್ತಿನ ಸದಸ್ಯರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಈ ಫೋಟೋ ಸೆಷನ್ ನಡೆದಿದೆ ಎಂದು ಸ್ಪೀಕರ್ ಸ್ಪಷ್ಟನೆ ನೀಡಿದರೂ, ರಾಜಕೀಯ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.
Read Full Story

03:00 PM (IST) Mar 25

ಪ್ರದೀಪ್ ಈಶ್ವರ್‌ನ ನಿಮ್ಹಾನ್ಸ್ ಗೆ ಸೇರಿಸಿ - ಡಿಸಿ ಮೂಲಕ ಚುನಾವಣಾ ಆಯೋಗಕ್ಕೆ ಮಂಡ್ಯ ಬಿಜೆಪಿ ಮನವಿ

ದಾವಣಗೆರೆಯಲ್ಲಿ ಬಿಜೆಪಿ ವಿರುದ್ಧ ಲಘು ಹೇಳಿಕೆ ನೀಡಿದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರದೀಪ್ ಈಶ್ವರ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ, ಶಾಸಕ ಸ್ಥಾನದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ದೂರು.

Read Full Story

02:05 PM (IST) Mar 25

ಸರ್ಕಾರದ ಅವಧಿ ಮುಗಿಯೋ ಮುನ್ನವೇ ವಿಧಾನಸೌಧದಲ್ಲಿ ಫೋಟೋ ಶೂಟ್! ಸಿಎಂ ಬದಲಾವಣೆ? ಸ್ಪೀಕರ್ ಬದಲಾವಣೆ? ಸಂಪುಟ ಪುನರಚನೆ?

ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ.
Read Full Story

01:35 PM (IST) Mar 25

Viral Video - ಡ್ರೈವಿಂಗ್ ವೇಳೆ ರೀಲ್ಸ್ ನೋಡುತ್ತಿದ್ದ ಆಟೋ ಚಾಲಕ, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ!

ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಡ್ರೈವಿಂಗ್ ಮಾಡುವಾಗ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದ ಆತಂಕಕಾರಿ ಘಟನೆ ನಡೆದಿದೆ. ಚಾಲಕನ ಈ ಅಜಾಗರೂಕತೆಯಿಂದಾಗಿ ಟ್ರಕ್‌ಗೆ ಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.

Read Full Story

01:18 PM (IST) Mar 25

ಸಾಮರ್ಥ್ಯ ಇರೋರಿಗೆ ಸಿಗುತ್ತಿಲ್ಲ ಅವಕಾಶ, ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ! ಸಿಡೆದಿದ್ದ ಅಥ್ಲೀಟ್ಸ್‌

ಕರ್ನಾಟಕದ 'ಮಿಷನ್ ಒಲಿಂಪಿಕ್ಸ್' ಯೋಜನೆಯಲ್ಲಿ ಅರ್ಹ ಕ್ರೀಡಾಪಟುಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಮತ್ತು ರಾಜಕೀಯ ಪ್ರಭಾವವಿದೆ ಎಂದು ಆರೋಪಿಸಿರುವ ಅವರು, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮ ಸೇರಿದಂತೆ ಹಲವರು ತನಿಖೆಗೆ ಒತ್ತಾಯಿಸಿದ್ದಾರೆ.
Read Full Story

01:18 PM (IST) Mar 25

MUDA Land Scam - ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ? 'ಬಿ' ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್‌ಗೆ ಹೋದ ಆರ್‌ಟಿಐ ಕಾರ್ಯಕರ್ತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ಭೂ ಹಗರಣ ಪ್ರಕರಣದಲ್ಲಿ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ 'ಬಿ' ರಿಪೋರ್ಟ್‌ ಅನ್ನು ವಿಶೇಷ ನ್ಯಾಯಾಲಯ ಒಪ್ಪಿಕೊಂಡಿತ್ತು. ಇದನ್ನು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Read Full Story

01:13 PM (IST) Mar 25

ಇದು ಸಿನಿಮಾವಲ್ಲ, ರಿಯಲ್ ಸ್ಟೋರಿ; ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಪೊಲೀಸರು ಎದುರಿಸಿದ್ದು ದೊಡ್ಡ ಬಿಕ್ಕಟ್ಟು!

ಪಶ್ಚಿಮ ಬಂಗಾಳ ಮೂಲದ, ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದರು. 22 ದಿನಗಳ ಸತತ ಮತ್ತು ಸವಾಲಿನ ಹುಡುಕಾಟದ ನಂತರ, ಗೋವಿಂದಪುರ ಪೊಲೀಸರು ಅವರನ್ನು ಪತ್ತೆಹಚ್ಚಿ, ಮಗನೊಂದಿಗೆ ಪುನಃ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

12:54 PM (IST) Mar 25

Puttakkana Makkalu ನಟಿ ಸಂಜನಾ ಬುರ್ಲಿ ಮದುವೆ ಸಂಭ್ರಮ - ರಿಸೆಪ್ಷನ್​ ಫೋಟೋಸ್​ ಇಲ್ಲಿವೆ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗಾಗಿ ಧಾರಾವಾಹಿಗಳಿಂದ ಹೊರಬಂದಿದ್ದ ನಟಿಯ, ವಿವಾಹ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಇದೀಗ ವೈರಲ್ ಆಗಿವೆ.
Read Full Story

12:17 PM (IST) Mar 25

ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ

ಟೀಚಿಂಗ್ ಬಿಟ್ಟು ಮೀನು ಮಾರಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ, ಟೀಚಿಂಗ್ ಪರೀಕ್ಷೆಗಳಲ್ಲಿ ಪಾಸ್ ಆಗಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ ಪ್ರೇಮಾ ಇದೀಗ ಯಶಸ್ವಿ ಮೀನು ಉದ್ಯಮಿಯಾಗಿ ಬೆಳೆದಿದ್ದಾರೆ.

Read Full Story

12:00 PM (IST) Mar 25

ವಿಧಾನಸಭೆ - 'ನಮ್ಮ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ, ವಿಪಕ್ಷ ಪ್ರಶ್ನೆಗಳಿಗೆ ಸಿಎಂ ಉತ್ತರ

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಉತ್ತರ ನೀಡಿದರು. ವಿಪಕ್ಷಗಳ 'ಖಾಲಿ ಚೊಂಬು' ಟೀಕೆಗೆ ತಿರುಗೇಟು ನೀಡಿದ ಅವರು, ತಮ್ಮ ಬಜೆಟ್ 'ತುಂಬಿದ ಕೊಡ'ವಿದ್ದಂತೆ ಎಂದು ಸಮರ್ಥಿಸಿಕೊಂಡರು. ಈ ಬಾರಿಯ ಚರ್ಚೆಯಲ್ಲಿ ದಾಖಲೆಯ 50 ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
Read Full Story

11:31 AM (IST) Mar 25

ಮಡಿಕೇರಿ ಸಮೀಪ ಕಾಫಿತೋಟದಲ್ಲಿ ಹುಲಿ ಓಡಾಟ - ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

tiger in coffee plantation kodagu: ಮಡಿಕೇರಿ ಸಮೀಪದ ಇಬ್ಬನಿವಳವಾಡಿ ಗ್ರಾಮದ ಕಾಫಿತೋಟವೊಂದರಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಿಸಿ ಕ್ಯಾಮರಾದಲ್ಲಿ ಇದರ ದೃಶ್ಯ ಸೆರೆಯಾಗಿದೆ. ಈ ಘಟನೆಯಿಂದಾಗಿ ಸ್ಥಳೀಯ ಗ್ರಾಮಸ್ಥರು ಮತ್ತು ಕಾರ್ಮಿಕರಲ್ಲಿ ತೀವ್ರ ಆತಂಕ ಮನೆಮಾಡಿದೆ.

Read Full Story

11:27 AM (IST) Mar 25

BWSSB ಬೆಂಗಳೂರಿಗರೇ ಎಚ್ಚರ - ಜಲಮಂಡಳಿ ಸದ್ದಿಲ್ಲದೆ ನೀರಿನ ದರ ಏರಿಕೆ, ವಾರ್ಷಿಕ 12% ದರ ಹೆಚ್ಚಳ!

ಬೆಂಗಳೂರು ಜಲಮಂಡಳಿಯು (BWSSB) ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರಿಗೆ ಮಾಹಿತಿ ನೀಡದೆ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ದರವನ್ನು ಹೆಚ್ಚಿಸುತ್ತಿದೆ. ಈ ವಾರ್ಷಿಕ 12% ರಷ್ಟು ದರ ಏರಿಕೆಯ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ಈ ಕುರಿತು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
Read Full Story

11:22 AM (IST) Mar 25

ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ

ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ವಿಶೇಷ ಪೂಜೆ ನಡೆದಿದೆ. ಗಣಹೋಮ ಸೇರಿದಂತೆ ವಿಶೇಷ ಪೂಜೆ ಮಾಡಲಾಗಿದೆ. ಕ್ರೀಡಾಂಗಣ, ಗೇಟ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೂಜೆ ಮಾಡಲಾಗಿದೆ.

 

Read Full Story

11:08 AM (IST) Mar 25

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ

ಬಂಗಾರಿ ನಿನ್ಗೆ ಪಾಪಣ್ಣ ಅಲ್ಲ ಪಾಪು ನಾನು, ಮಹಿಳಾ ರೌಡಿ ಶೀಟರ್ ಜೊತೆ ಇನ್ಸ್‌ಪೆಕ್ಟರ್ ಕಾಮಪುರಾಣ ಬಹಿರಂಗವಾಗಿದೆ. ಆಡಿಯೋ, ವ್ಯಾಟ್ಸಾಪ್ ಮೆಸೇಜ್‌ಗಳು ಇನ್ಸ್‌ಪೆಕ್ಟರ್ ಪಾಪಣ್ಣನ ಕತೆ ಹೇಳುತ್ತಿದೆ.

Read Full Story

10:50 AM (IST) Mar 25

ಬೆಂಗಳೂರಿನ ಭವಿಷ್ಯ ಬರೆಯಲಿದೆಯೇ ₹20,000 ಕೋಟಿ ಬಜೆಟ್, ಮಾ 27, 28 ಎರಡು ದಿನ ಜಿಬಿಎ ಬಜೆಟ್‌ ಮಂಡನೆ!

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ, ನಗರದ ಐದು ಹೊಸ ನಗರ ಪಾಲಿಕೆಗಳು ಮಾರ್ಚ್ 27 ಮತ್ತು 28 ರಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿವೆ. ಒಟ್ಟು ₹20,000 ಕೋಟಿಗೂ ಅಧಿಕ ಗಾತ್ರದ ಈ ಬಜೆಟ್‌ನಲ್ಲಿ ಮೂಲಸೌಕರ್ಯ, ಸಾರ್ವಜನಿಕ ಸೇವೆಗಳ ಸುಧಾರಣೆ ಮತ್ತು ಮುನ್ಸಿಪಲ್ ಬಾಂಡ್‌ಗಳಂತಹ ಹೊಸ ಆದಾಯ ಮೂಲಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.
Read Full Story

10:40 AM (IST) Mar 25

ಹೊಸಪೇಟೆಯಲ್ಲಿ ಎಟಿಎಂ ಕಾರ್ಡ್ ಬದಲಿಸಿ ಲಕ್ಷ ಲಕ್ಷ ಪಂಗನಾಮ, ಹಣ ವಿತ್‌ಡ್ರಾ ಮಾಡಲು ಅಪರಿಚಿತರಿಗೆ ಕಾರ್ಡ್ ಕೊಡುವ ಮುನ್ನ ಎಚ್ಚರ!

ಹೊಸಪೇಟೆಯಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಲು ಅಪರಿಚಿತನ ಸಹಾಯ ಪಡೆದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಸಹಾಯ ಮಾಡುವ ನೆಪದಲ್ಲಿ ಖದೀಮನು ಎಟಿಎಂ ಕಾರ್ಡ್ ಬದಲಾಯಿಸಿ, ಬೇರೆಡೆ ಹಂತ ಹಂತವಾಗಿ 1.27 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾನೆ. 

Read Full Story

10:26 AM (IST) Mar 25

ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್

ಬೆಂಗಳೂರಿನ ಪೋಲಿ ಪಾಪಣ್ಣ ಇನ್ಸ್‌ಪೆಕ್ಟರ್, ಮಹಿಳಾ ರೌಡಿ ಶೀಟರ್‌ನ್ನೇ ಮಂಚ ಕರೆದ ಆಡಿಯೋ ರಿಲೀಸ್ ಆಗಿದೆ. ಮಹಿಳಾ ರೌಡಿ ಶೀಟರ್‌ಗೆ ಮುದ್ದು ಬಂಗಾರಿ, ಚಿನ್ನು ಎಂದು ಕರೆದು ಮನೇಲಿ ಯಾರೂ ಇಲ್ಲ ಬಾ ಎಂದು ಕರೆಯುವ ಆಡಿಯೋ ಬಿಡುಗಡೆಯಾಗಿದೆ.

Read Full Story

10:18 AM (IST) Mar 25

ಬೆಂಗಳೂರಲ್ಲಿ ಸ್ಥಗಿತಗೊಂಡ ಮನೆಮನೆ ಕಸ ಸಂಗ್ರಹಣೆ, ಸಿಬ್ಬಂದಿಗಳ ಅಸಹಕಾರ ಚಳವಳಿ ಪರಿಸ್ಥಿತಿ ಗಂಭೀರ!

ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಸಿಬ್ಬಂದಿ ಅಸಹಕಾರ ಚಳುವಳಿಗೆ ಇಳಿದಿದ್ದು, ನಗರದಾದ್ಯಂತ ಕಸದ ರಾಶಿಗಳು ನಿರ್ಮಾಣವಾಗಿವೆ. ಸಂಬಳ ಬಾಕಿ ಮತ್ತು ಅವೈಜ್ಞಾನಿಕ ಕಸ ವಿಂಗಡಣೆ ವ್ಯವಸ್ಥೆಯನ್ನು ವಿರೋಧಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Read Full Story

09:25 AM (IST) Mar 25

ಬಿಪಿಎಲ್‌ ಕನಿಷ್ಠ ಆದಾಯ ಮಿತಿ ಏರಿಕೆ - ಮುನಿಯಪ್ಪ

ರಾಜ್ಯದಲ್ಲಿ ಬಿಪಿಎಲ್‌ ರೇಷನ್‌ ಕಾರ್ಡ್‌ ನೀಡಲು ನಿಗದಿಗೊಳಿಸಿರುವ ₹1.20 ಲಕ್ಷ ಕನಿಷ್ಠ ಆದಾಯ ಮಿತಿಯನ್ನು ₹3 ಲಕ್ಷಕ್ಕೆ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

Read Full Story

09:07 AM (IST) Mar 25

ಮಾ.30ರ ವರೆಗೆ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆ, 17 ಜಿಲ್ಲೆಗಳಿಗೆ ಯೆಲ್ಲೆ ಅಲರ್ಟ್

ಮಾ.30ರ ವರೆಗೆ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.

 

Read Full Story

08:16 AM (IST) Mar 25

ವಾಹನ ಮಾಲೀಕರೇ ಎಚ್ಚರ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭ, ಈ ಬಾರಿ ದಂಡ ದುಬಾರಿ

ವಾಹನ ಮಾಲೀಕರೇ ಎಚ್ಚರ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭ, ಈ ಬಾರಿ ದಂಡ ದುಬಾರಿ, ಎಲ್ಲೆಂದರಲ್ಲಿ ಪಾರ್ಕಿಂಗ್, ನೋ ಪಾರ್ಕಿಂಗ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ನಿಮ್ಮ ವಾಹನ ಟೋಯಿಂಗ್ ಮಾಡಿ ದುಬಾರಿ ದಂಡ ವಿಧಿಸಲಾಗುತ್ತದೆ.

 

Read Full Story

08:15 AM (IST) Mar 25

ಹುಬ್ಬಳ್ಳಿ-ರಾಮೇಶ್ವರಂ ನಡುವೆ ವಿಶೇಷ ರೈಲು, ಒಟ್ಟು 9 ಟ್ರಿಪ್‌, ಕರ್ನಾಟಕದ ಈ ಎಲ್ಲಾ ಜಿಲ್ಲೆಗಳಲ್ಲಿ ಹಾದು ಹೋಗಲಿದೆ!

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಶ್ರೀಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು (07355/07356) ಏಪ್ರಿಲ್‌ನಿಂದ ಜೂನ್‌ವರೆಗೆ ಒಟ್ಟು 9 ಟ್ರಿಪ್‌ಗಳನ್ನು ಮಾಡಲಿದ್ದು, ಹಾವೇರಿ, ದಾವಣಗೆರೆ, ತುಮಕೂರು, ಸೇಲಂ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲ್ಲಲಿದೆ.
Read Full Story

07:47 AM (IST) Mar 25

15 ನಿಮಿಷದಲ್ಲಿ ಆರ್‌ಸಿಬಿ ಉದ್ಘಟನಾ ಪಂದ್ಯದ ಟಿಕೆಟ್ ಸೋಲ್ಡ್ ಔಟ್, ಅಭಿಮಾನಿಗಳ ಆಕ್ರೋಶ

15 ನಿಮಿಷದಲ್ಲಿ ಆರ್‌ಸಿಬಿ ಉದ್ಘಟನಾ ಪಂದ್ಯದ ಟಿಕೆಟ್ ಸೋಲ್ಡ್ ಔಟ್, ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದಾರೆ. ನೆಚ್ಚಿನ ತಂಡದ ಪಂದ್ಯ ನೋಡಲು ಕಾತರಗೊಂಡಿದ್ದ ಸಾವಿರಾರು ಅಭಿಮಾನಿಗಳಿಗೆ ಟಿಕೆಟ್ ಸಿಕ್ಕಿಲ್ಲ.

 

Read Full Story

More Trending News