ಯಾದಗಿರಿ: ಗುರುಮಠಕಲ್‌ನಲ್ಲಿ ಫೆ.21ರಂದು ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗಾಂಧೀಜಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಗಾಂಧಿ ಭಾರತ ದೇಶಕ್ಕೆ ರಾಷ್ಟ್ರಪಿತರಲ್ಲ, ಪಾಕಿಸ್ತಾನಕ್ಕೆ ರಾಷ್ಟ್ರಪಿತ ಎಂಬುದು ಸೇರಿದಂತೆ, ಪ್ರಧಾನಿ ನೆಹರು ಹಾಗೂ ಅನ್ಯಕೋಮಿನ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಕ್ಕೆ ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ.
ಶಾಸಕ ಯತ್ನಾಳ್ ಅವರ ಭಾಷಣ ವ್ಯಾಪಕ ಚರ್ಚೆಗೆ ಗ್ರಾಸವಾಗಿ, ಕೆಲವರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ತಮ್ಮ ವಿರುದ್ಧ ಈಗಾಗಲೇ 79 ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯೂ ಕೂಡ ದಾಖಲಾದರೆ ತಾವೇನು ಹೆದರುವುದಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
11:38 PM (IST) Feb 25
11:03 PM (IST) Feb 25
ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಕರ್ತವ್ಯದಲ್ಲಿದ್ದ 22 ವರ್ಷದ ಸೇನಾ ಕ್ಯಾಪ್ಟನ್ ಅಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರ ಪ್ರದೇಶದ ನಿವಾಸಿಯಾಗಿದ್ದ ಇವರು ಪೋಷಕರ ಏಕೈಕ ಪುತ್ರರಾಗಿದ್ದು, ಇತ್ತೀಚೆಗಷ್ಟೇ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದರು. ಅವರ ಹಠಾತ್ ಸಾವು ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.
10:52 PM (IST) Feb 25
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಹಂತ ಆಧಾರಿತ ಟಿಕೆಟ್ ದರ ಪದ್ಧತಿಯಿಂದಾಗಿ ಪ್ರಯಾಣಿಕರು ಕಡಿಮೆ ದೂರಕ್ಕೂ ಹೆಚ್ಚು ಹಣ ಪಾವತಿಸುವಂತಾಗಿದೆ. ಜಿಪಿಎಸ್ ತಂತ್ರಜ್ಞಾನ ಲಭ್ಯವಿದ್ದರೂ, ಬಿಎಂಟಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಿದೆ.
10:28 PM (IST) Feb 25
ಬೆಂಗಳೂರಿನ ರಾಜಾಜಿನಗರದಲ್ಲಿ, ಮೊಬೈಲ್ ಖರೀದಿಸುವ ನೆಪದಲ್ಲಿ ಬಂದ ವಂಚಕನೊಬ್ಬ, 76 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ಗಳಿಗೆ ನಕಲಿ ಪೇಮೆಂಟ್ ಸ್ಕ್ರೀನ್‌ಶಾಟ್ ತೋರಿಸಿ ಅಂಗಡಿ ಮಾಲೀಕರಿಗೆ ವಂಚಿಸಿದ್ದಾನೆ. ಹಣ ಜಮೆಯಾಗದಿರುವುದನ್ನು ಅರಿತ ಮಾಲೀಕರು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
10:23 PM (IST) Feb 25
Retired HC Employee Arrested for Murdering Partner in Kochi ಕೊಚ್ಚಿಯ ರೈಲ್ವೆ ಹಳಿಯಲ್ಲಿ ಸುಧಾ ಬೇಬಿ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಇದೊಂದು ಕೊಲೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃಟ್ಟು ಹೈಕೋರ್ಟ್ ಉದ್ಯೋಗಿ ಶಾಜಿ ಕೆ.ವಿ.ಯನ್ನು ಬಂಧಿಸಲಾಗಿದೆ.
09:59 PM (IST) Feb 25
ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ನಡೆದ ಕಲ್ಲೆಸೆತದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಪೊಲೀಸರು ನಗರದಾದ್ಯಂತ ಪಥಸಂಚಲನ ನಡೆಸಿದರು.
09:49 PM (IST) Feb 25
ಉತ್ತರ ಕನ್ನಡ ಮೂಲದ ರಾಜಕಾರಣಿ ಶಶಿಭೂಷಣ್ ಹೆಗಡೆ ಅವರು ಕ್ರೀಡಾ ಲೋಕದಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಲೇಖಕ, ಡಾ ಅಜಿತ್ ಹರೀಶಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:22 PM (IST) Feb 25
ಸೆಲೆಬ್ರಿಟಿಗಳ ವಿವಾವ ಸಿಕ್ಕಾಪಟ್ಟೆ ಸೌಂಡ್ ಮಾಡುವುದು. ಅದರಲ್ಲಿಯೂ ಕೆಲ ಸೆಲೆಬ್ರಿಟಿಗಳು ಒಂದು, ಎರಡು, ಮೂರು ಮದುವೆ ಆಗುತ್ತಾರೆ. ಇನ್ನೂ ಕೆಲವರು ಡಿವೋರ್ಸ್ ತಗೊಂಡು, ಸಿಂಗಲ್ ಆಗಿಯೇ ಉಳಿದವರು ಕೂಡ ಇದ್ದಾರೆ. ಇನ್ನೂ ಕೆಲವರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ.
09:22 PM (IST) Feb 25
ಬೆಂಗಳೂರಿನ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗವು ಅಂತಿಮ ಹಂತ ತಲುಪಿದ್ದು, 2026ರ ವೇಳೆಗೆ ಸಾರ್ವಜನಿಕ ಸೇವೆಗೆ ಮುಕ್ತವಾಗುವ ನಿರೀಕ್ಷೆಯಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಕಾಮಗಾರಿಯನ್ನು BMRCL ಎಂಡಿ ರವಿಶಂಕರ್ ಪರಿಶೀಲಿಸಿದರು.
09:16 PM (IST) Feb 25
ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್, ಸರ್ಕಾರದ ಆಂತರಿಕ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗಿನ ಕರ್ತೋಜಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
08:42 PM (IST) Feb 25
Sandalwood Actress Love Marriage News: ಕನ್ನಡದ ಕೆಲ ನಟಿಯರು ಬ್ರೇಕಪ್ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿ ಅನುಭವ ಆಗಿರುತ್ತದೆ, ಹಾಗೆಯೇ ಬ್ರೇಕಪ್ ಕೂಡ ಆಗಿದೆ ಎಂದು ನಟಿಯರು ಮಾಧ್ಯಮದ ಮುಂದೆ ಕೂಡ ಹೇಳಿದ್ದುಂಟು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
08:33 PM (IST) Feb 25
ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಮುಂಬೈನ 'ಅಬೋಡ್' ನಿವಾಸವನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ.
08:15 PM (IST) Feb 25
ಬೆಂಗಳೂರಿನ ಸಿಬಿಎಸ್‌ಇ ಶಾಲೆಗಳು ಏಪ್ರಿಲ್ 1 ರ ಮೊದಲು 10 ಮತ್ತು 12 ನೇ ತರಗತಿಗಳನ್ನು ಪ್ರಾರಂಭಿಸಬಾರದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಿಸಿದೆ. ವಿದ್ಯಾರ್ಥಿಗಳ ಆತಂಕ ಮತ್ತು ಬಳಲಿಕೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
08:14 PM (IST) Feb 25
ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಬಳಸಿದ್ದಕ್ಕೆ ವಿಪಕ್ಷಗಳು ಮತ್ತು ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ಯಾರನ್ನೂ ಓಲೈಕೆ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
07:52 PM (IST) Feb 25
07:35 PM (IST) Feb 25
ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ 'ತಾಜ್ ದರ್ಬಾರ್' ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ.
07:34 PM (IST) Feb 25
ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲೆಸೆತವನ್ನು ಖಂಡಿಸಿ, ಹಿಂದೂ ಸಂಘಟನೆಗಳು ಫೆಬ್ರವರಿ 26ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ, ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
07:33 PM (IST) Feb 25
ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಲಾದ ಐದು ಹೆಚ್ಚುವರಿ ಬೋಗಿಗಳ ಸೇವೆಯನ್ನು ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ಬದಲಾವಣೆಯಿಂದಾಗಿ ರೈಲು ಒಟ್ಟು 19 ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
07:22 PM (IST) Feb 25
ರಾಮನಗರ ಪೊಲೀಸ್ ಇಲಾಖೆಯ 'ಆಸರೆ' ಯೋಜನೆಯು ನಿರ್ಲಕ್ಷ್ಯ ಮತ್ತು ದೌರ್ಜನ್ಯಕ್ಕೊಳಗಾದ ಹಿರಿಯ ನಾಗರಿಕರು ಮತ್ತು ಒಂಟಿ ಮಹಿಳೆಯರಿಗೆ ಆಸರೆಯಾಗಿದೆ. ಗೃಹಬಂಧನದಲ್ಲಿದ್ದ ತಾಯಿ ಹಾಗೂ ಅಳಿಯನಿಂದ ಮನೆಯಿಂದ ಹೊರಹಾಕಲ್ಪಟ್ಟ ಅತ್ತೆಯಂತಹ ಪ್ರಕರಣಗಳಲ್ಲಿ ಈ ಯೋಜನೆ ನ್ಯಾಯ ಒದಗಿಸಿದೆ.
06:48 PM (IST) Feb 25
ಕೋಮು ರಾಜಕೀಯದಿಂದ ಕಂಗೆಟ್ಟಿದ್ದ ಮಂಗಳೂರು-ಉಡುಪಿ ವಲಯವು ಈಗ 'ಭಾರತದ ಸಿಲಿಕಾನ್ ಬೀಚ್' ಆಗಿ ರೂಪುಗೊಳ್ಳುತ್ತಿದೆ. ಸರ್ಕಾರದ 'ಬಿಯಾಂಡ್ ಬೆಂಗಳೂರು' ಯೋಜನೆ, ವರ್ಕ್ ಫ್ರಮ್ ಹೋಮ್ ಪರಿಣಾಮ ಮತ್ತು ಸ್ಥಳೀಯ ಉದ್ಯಮಶೀಲತೆಯಿಂದಾಗಿ ಐಟಿ ಆದಾಯ ಮತ್ತು ಉದ್ಯೋಗಾವಕಾಶಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.
06:43 PM (IST) Feb 25
06:16 PM (IST) Feb 25
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಬಳಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಕ್ರಮಕ್ಕೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
05:51 PM (IST) Feb 25
ಬೆಂಗಳೂರಿನ ಜನಪ್ರಿಯ ಡಿಜಿಟಲ್ ಚಿನ್ನದ ಹೂಡಿಕೆ ವೇದಿಕೆ 'ಜಾರ್' ಕಚೇರಿಯ ಮೇಲೆ ಸಿಐಡಿ ದಾಳಿ ನಡೆಸಿದೆ. ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS) ಉಲ್ಲಂಘನೆಯ ಆರೋಪದ ಮೇಲೆ ಈ ತನಿಖೆ ನಡೆಯುತ್ತಿದೆ.
05:42 PM (IST) Feb 25
ಯುನೆಸ್ಕೋ ಪಾರಂಪರಿಕ ತಾಣವಾದ ನೀಲಗಿರಿ ಮೌಂಟೇನ್ ರೈಲ್ವೆಯ ಭಾಗವಾಗಿರುವ ಕೂನೂರು ರೈಲ್ವೆ ನಿಲ್ದಾಣ ಈಗ ಪ್ರವಾಸಿಗರಿಗೆ ವಿಶೇಷ ವಾಸ್ತವ್ಯದ ಅನುಭವ ನೀಡುತ್ತಿದೆ. ಇಲ್ಲಿನ ಬ್ರಿಟಿಷ್ ಕಾಲದ ರಿಟೈರಿಂಗ್ ರೂಮ್‌ಗಳನ್ನು ನವೀಕರಿಸಿ, ಪ್ರಕೃತಿಯ ಮಡಿಲಲ್ಲಿ ಕಡಿಮೆ ದರದಲ್ಲಿ ಉಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
05:16 PM (IST) Feb 25
ಬೆಂಗಳೂರಿನ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಈ ರಸ್ತೆ ಸಂಚಾರಕ್ಕೆ ಮುಕ್ತವಾದರೆ, ಮೈಸೂರು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.
04:47 PM (IST) Feb 25
ಇಡಿ ವಿಚಾರಣೆಗೆ ಹಾಜರಾಗಬೇಕಿದ್ದ ದಿನವೇ ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ತಮ್ಮ ಕೋರಮಂಗಲ ನಿವಾಸದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಇಡಿ ದಾಳಿಯ ನಂತರ ಅವರು ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
04:29 PM (IST) Feb 25
04:26 PM (IST) Feb 25
ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರು ಸದ್ಯ ವಿದೇಶದಲ್ಲಿದ್ದಾರೆ. ಫಿಟ್‌ನೆಸ್ ಎಂದು ಸದಾ ಆಕ್ಟಿವ್ ಆಗಿರುವ ಅವರು ಸೇಬು ಹಣ್ಣಿನಿಂದ ಮಾಡುವ ಗೊಜ್ಜು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಹಾಗಾದರೆ ಹೇಗೆ ಮಾಡುವುದು ನೋಡಿ…
04:23 PM (IST) Feb 25
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ಪರಾಸ್ ಡೋಗ್ರಾ ಕರ್ನಾಟಕದ ಫೀಲ್ಡರ್‌ಗೆ ತಲೆಯಿಂದ ಗುದ್ದಿ ವಿವಾದ ಸೃಷ್ಟಿಸಿದ್ದಾರೆ. ಈ ಘಟನೆಯಿಂದ ಕೆರಳಿದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಡೋಗ್ರಾ ವಿರುದ್ಧ ವಾಗ್ದಾಳಿ ನಡೆಸಿದರು.
03:58 PM (IST) Feb 25
ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಅವರು ಫೆಬ್ರವರಿ 26ರಂದು ಪಾಕಿಸ್ತಾನಿ ನಟಿಯ ಜೊತೆ 4ನೇ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಆ ನಟಿ ಬೇರೆ ಹುಡುಗನ ಜೊತೆ ಮದುವೆ ಆದರು. ಈಗ ಮಹಿಳೆ ಜೊತೆ ಫ್ಲರ್ಟ್ ಮಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
03:48 PM (IST) Feb 25
03:41 PM (IST) Feb 25
02:15 PM (IST) Feb 25
ಜೀ ಕನ್ನಡದ 'ಕರ್ಣ' ಧಾರಾವಾಹಿಯ ಕೆಲವ ದೃಶ್ಯಗಳು ಸದ್ದು ಮಾಡುತ್ತಿದೆ. ಅವಧಿ ಮೀರಿದ ಮಾತ್ರೆಗಳ ಪ್ರಕರಣದಲ್ಲಿ ಜೈಲು ಸೇರಿರುವ ಕರ್ಣನ ವಿರುದ್ಧ ಆರೋಗ್ಯ ಸಚಿವರೇ ಪಿತೂರಿ ನಡೆಸಿ, ಆತನನ್ನು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
01:59 PM (IST) Feb 25
01:54 PM (IST) Feb 25
ರಶ್ಮಿಕಾ ಮಂದಣ್ಣ - ವಿಜಯ ದೇವರಕೊಂಡ ವಿವಾಹ ನಾಳೆ (ಫೆ.26) ವಿಧ್ಯುಕ್ತವಾಗಿ ರಾಜಸ್ಥಾನದ ಉದಯಪುರದ ಅರಾವಳಿ ಬೆಟ್ಟದ ತಪ್ಪಲಿನಲ್ಲಿರುವ ಐಟಿಸಿ ಮೆಮೆಂಟೋ ಲಕ್ಸುರಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ರೆಸಾರ್ಟ್ ಅನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದ್ದು, ಒಂದು ದಿನಕ್ಕೆ ಸುಮಾರು ರೂ.2 ಕೋಟಿ ಬಾಡಿಗೆ ಇರಲಿದೆ.
01:41 PM (IST) Feb 25
ಬೆಂಗಳೂರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ ವೇಳೆ ಮಹಿಳೆಯೊಬ್ಬರು ಹೈಡ್ರಾಮಾ ಸೃಷ್ಟಿಸಿ, ಪೊಲೀಸರಿಂದಲೇ 'ಸಾರಿ' ಕೇಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
01:38 PM (IST) Feb 25
ಹಾಸನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪಾರದರ್ಶಕತೆಗಾಗಿ ಸಿಸಿಟಿವಿ ಅಳವಡಿಸಿದ್ದಕ್ಕೆ ಮ್ಯಾನೇಜರ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿ, ಕ್ಯಾಮೆರಾವನ್ನು ಮುರಿಯಲು ಯತ್ನಿಸಿದ ಘಟನೆ ನಡೆದಿದೆ.
01:30 PM (IST) Feb 25
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಇದು ಪಕ್ಷದ ಕಾರ್ಯಕರ್ತರ ಬಯಕೆಯಾಗಿದ್ದು, ಅವರ ಆದೇಶವೇ ಅಂತಿಮ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
01:21 PM (IST) Feb 25
Rashmika Mandanna Vijay Deverakonda: ಅಂತೂ ಇಂತೂ ಕರ್ನಾಟಕದ ಸ್ಟಾರ್‌ಗಳಿಗೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರು ಮದುವೆಯ ಆಹ್ವಾನ ಪತ್ರಿಕೆ ತಲುಪಿದೆ. ಕನ್ನಡದಲ್ಲೇ ಸಿನಿಮಾ ಆರಂಭಿಸಿದ ರಶ್ಮಿಕಾ ಮಂದಣ್ಣ, ಬೇರೆ ಭಾಷೆಯಲ್ಲಿ ಹೆಸರು ಮಾಡಿದರು. ಈಗ ತೆಲುಗು ನಟನನ್ನು ಮದುವೆ ಆಗುತ್ತಿದ್ದಾರೆ.
01:08 PM (IST) Feb 25