Published : Nov 23, 2025, 06:50 AM ISTUpdated : Nov 23, 2025, 11:09 PM IST

Karnataka News Live: ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ

ಸಾರಾಂಶ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಐಎಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸಹೋದರರ ಇಬ್ಬರ ತಲೆ ಮೇಲೆ ಸಿದ್ದರಾಮಯ್ಯ ಕೈ ಇಟ್ಟು ಎರಡೂವರೆ ವರ್ಷಗಳು ತುಂಬಿದ ಮೇಲೆ ಸಿಎಂ ಸ್ಥಾನ ಬಿಟ್ಟು ಕೊಡುವೆನೆಂದು ವಚನ ಕೊಟ್ಟಿದ್ದು, ಆ ಸಂದರ್ಭದಲ್ಲಿ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಆದರೆ, ಈ ಬಗ್ಗೆ ಯಾರೊಬ್ಬರೂ ಈಗ ಬಾಯಿ ಬಿಡುತ್ತಿಲ್ಲ. ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರು

Cobra snake

11:09 PM (IST) Nov 23

ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ

ಸಕಲೇಶಪುರದಲ್ಲಿ ಆತಂಕ ಸೃಷ್ಟಿಸಿದ ನಾಲ್ಕು ಅಡಿ ಉದ್ದದ ನಾಗರ ಹಾವು ರಕ್ಷಣೆ, ಕಾಫಿ ತೋಟದಲ್ಲಿ ಕಾಣಿಸಿಕೊಂಡ ದೊಡ್ಡ ಗಾತ್ರದ ನಾಗರ ಹಾವನ್ನು ಯಶಸ್ವಿಯಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

Read Full Story

10:19 PM (IST) Nov 23

ನಾಯಕತ್ವ ಬದಲಾವಣೆ ಕ್ಲಾರಿಟಿ ಬಯಸಿದ ಡಿಕೆಶಿ, ಜಾರ್ಜ್‌ಗೆ ಟಾಸ್ಕ್ ನೀಡಿ ತೆರೆ ಹಿಂದೆ ಸರಿಯಿತಾ ಹೈಕಮಾಂಡ್?

ನಾಯಕತ್ವ ಬದಲಾವಣೆ ಸ್ಪಷ್ಟತೆ ಬಯಸಿದ ಡಿಕೆಶಿ, ಜಾರ್ಜ್‌ಗೆ ಟಾಸ್ಕ್ ನೀಡಿ ತೆರೆ ಹಿಂದೆ ಸರಿಯಿತಾ ಹೈಕಮಾಂಡ್?, ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ರಣತಂತ್ರ ಬದಲಾಗಿದೆ. ಆದರೆ ಡಿಕೆಶಿ ಪಟ್ಟು ಬಿಗಿ ಗೊಳಿಸಿದ್ದಾರೆ.

Read Full Story

09:29 PM (IST) Nov 23

ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ - ಸಿಎಂ ಸಿದ್ದರಾಮಯ್ಯ

ಮೀನುಗಾರರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳ’ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿದರು.

Read Full Story

09:18 PM (IST) Nov 23

ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ, ಪೊಲೀಸ್ ಪೇದೆ ಅಣ್ಣಪ್ಪ ನಾಯಕ್ ಅಮಾನತು

ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣ, ಪೊಲೀಸ್ ಪೇದೆ ಅಣ್ಣಪ್ಪ ನಾಯಕ್ ಅಮಾನತು, ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆರೋಪಿ ಅಣ್ಣಪ್ಪ ಇದೀಗ ಪೊಲೀಸ್ ಕಸ್ಚಡಿಯಲ್ಲಿದ್ದಾನೆ. ಇತ್ತ ಈತನ ಕೆಲಸವೂ ಹೋಗಿದೆ.

Read Full Story

09:11 PM (IST) Nov 23

ಕೋರ್ಟ್‌ಗಳಲ್ಲಿ 61000 ನೀರಾವರಿ ಕೇಸ್‌, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತನಿಖೆ - ಡಿಕೆಶಿ ಹೇಳಿದ್ದೇನು?

ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬ ಮಾಡಿ, ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಕುರಿತಂತೆ ತನಿಖೆ ನಡೆಸಲು ನಿರ್ಧರಿಸಲಾಗಿದೆ.

Read Full Story

08:46 PM (IST) Nov 23

ಡಿಸೆಂಬರ್ 5ರಿಂದ ಲಾಕ್‌ಡೌನ್ ಕನ್ಫರ್ಮ್.. ಆದ್ರೆ ಅದಕ್ಕೂ ಮುನ್ನ ಕಾದಿದೆ ಒಂದು ಸಖತ್ ಸರ್ಪ್ರೈಸ್!

ಡಿಸೆಂಬರ್ 5 ರಿಂದ ಲಾಕ್‌ಡೌನ್ ಎಂಬ ಘೋಷಣೆ ಇತ್ತೀಚೆಗೆ ಹೊರಬಿದ್ದಿದ್ದು, ಇದೀಗ ಅದರ ಬಗ್ಗೆ ಮತ್ತೊಂದು ಸಖತ್ ಅಪ್‌ಡೇಟ್ ವೈರಲ್ ಆಗಿದೆ. ಲಾಕ್‌ಡೌನ್ ಚಿತ್ರಕ್ಕೆ ಸಿಕ್ಕಿರುವ ಅಂತರರಾಷ್ಟ್ರೀಯ ಮನ್ನಣೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

Read Full Story

08:33 PM (IST) Nov 23

ಇಟಲಿಯಲ್ಲಿ ಆ ಪ್ರಶಸ್ತಿ ಗೆದ್ದ ನಟ ಅಜಿತ್ ಕುಮಾರ್.. ಸಿನಿಮಾದಾಚೆಗೂ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಸ್ಟಾರ್!

ತಮಿಳು ಚಿತ್ರರಂಗದಲ್ಲಿ ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ನಟ ಅಜಿತ್ ಕುಮಾರ್. ಇಟಲಿಯ ವೆನಿಸ್ ನಗರದಲ್ಲಿ 'ಜೆಂಟಲ್‌ಮನ್ ಡ್ರೈವರ್' ಪ್ರಶಸ್ತಿ ಪಡೆದ ಅಜಿತ್ ಕುಮಾರ್‌ಗೆ ಅಭಿಮಾನಿಗಳು ಅಭಿನಂದನೆಗಳ ಮಳೆ ಸುರಿಸುತ್ತಿದ್ದಾರೆ.

Read Full Story

08:11 PM (IST) Nov 23

ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಸಾವು

ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಸಾವು , ಹಳಿ ದಾಟುವ ಪ್ರಯತ್ನದಲ್ಲಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿಯಾಗಿದೆ. ಸ್ಥಳದಲ್ಲೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

Read Full Story

08:01 PM (IST) Nov 23

ನಮ್ಮೆಲ್ಲರ ಒಳ್ಳೆಯ ಕೆಲಸಗಳಲ್ಲಿ ಸತ್ಯ ಸಾಯಿ ಬಾಬಾ ಇದ್ದಾರೆ - ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದಲ್ಲಿ ನಡೆದ ನೂರು ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ವು 400 ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಿದ 'ಸಾಯಿ ಸಿಂಫನಿ ಆರ್ಕೆಸ್ಟ್ರಾ'ದ ಅದ್ಭುತ ಸಂಗೀತ ಪ್ರಸ್ತುತಿಯೊಂದಿಗೆ ಸಂಪನ್ನವಾಯಿತು.

Read Full Story

07:44 PM (IST) Nov 23

ರಾಜ್ಯ ಸರ್ಕಾರ ಹಿಂದುಳಿದ ವರ್ಗ, ರೈತ ವಿರೋಧಿ - ಸಂಸದ ಬಸವರಾಜ ಬೊಮ್ಮಾಯಿ ಕಿಡಿ

ರೈತರ ಬೀಜ, ಗೊಬ್ಬರಕ್ಕಾಗಿ ₹10 ಸಾವಿರ ಹಣ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಗೂ ರೈತ ವಿರೋಧಿ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Read Full Story

07:30 PM (IST) Nov 23

55 ಸಾವಿರ ಕೋಟಿ ಪಂಚ ಗ್ಯಾರಂಟಿ ಯೋಜನೆಗೆ ಬಳಕೆ - ಸಚಿವ ಎನ್.ಎಸ್.ಬೋಸರಾಜು

ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ‘ಪಂಚ ಗ್ಯಾರಂಟಿ’ ಅನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

Read Full Story

07:10 PM (IST) Nov 23

ಹುಟ್ಟುಹಬ್ಬ ಸಂಭ್ರಮದಲ್ಲಿ Bigg Boss ಅಶ್ವಿನಿ ಗೌಡ - ವಯಸ್ಸೆಷ್ಟು? ನಟಿಯ ಒಂದಿಷ್ಟು ಇಂಟರೆಸ್ಟಿಂಗ್​ ಮಾಹಿತಿ

ಬಿಗ್ ಬಾಸ್ ಮನೆಯಲ್ಲಿ ಜಗಳದಿಂದಲೇ ಸದ್ದು ಮಾಡುತ್ತಿರುವ ನಟಿ ಅಶ್ವಿನಿ ಗೌಡ ಅವರ 40ನೇ ಹುಟ್ಟುಹಬ್ಬದ ವಿಶೇಷವಿದು. 17ನೇ ವಯಸ್ಸಿಗೆ ಮದುವೆ, ಮಗ, 150 ಮನೆಗಳ ಒಡತಿಯಾಗಿರುವ ಅವರ ಶ್ರೀಮಂತಿಕೆ, ವಿವಾದಗಳು ಹಾಗೂ ಜಾಹ್ನವಿ ಮೇಲಿನ ಪ್ರೀತಿಯ ಹಿಂದಿನ ಕಾರಣವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

06:55 PM (IST) Nov 23

ಒಟ್ಟಿಗೆ ಕಾಣಿಸಿಕೊಂಡ ಭಾಯ್‌ಜಾನ್-ಕಿಂಗ್‌ಖಾನ್ - ಸಲ್ಮಾನ್-ಶಾರುಖ್ ವೈರಲ್ ಫೋಟೋಗೆ ಕಾಮೆಂಟ್‌ಗಳ ಸುರಿಮಳೆ

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಅಬುಧಾಬಿಯ ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದೀಗ ಇಬ್ಬರು ಸ್ಟಾರ್‌ಗಳ ಸ್ನೇಹ ಮತ್ತು ಅವರ ಮುಂಬರುವ 'ಕಿಂಗ್' ಮತ್ತು 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರಗಳು ಅಭಿಮಾನಿಗಳಿಗೆ ವಿಶೇಷವಾಗಿವೆ.

Read Full Story

06:26 PM (IST) Nov 23

ಕೊನೆಗೂ ರಿವೀಲ್ ಆಯ್ತು ಅಲ್ಲು ಅರ್ಜುನ್ 800 ಕೋಟಿಯ AA22xA06 ಚಿತ್ರದ ಫೈನಲ್ ಕಾಸ್ಟ್ - ಯಾರ್ಯಾರಿದ್ದಾರೆ?

ಪುಷ್ಪ 2 ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸೌತ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅವರ ಪುಷ್ಪ 3 ಚಿತ್ರವನ್ನೂ ಘೋಷಿಸಲಾಗಿದೆ. ಈ ನಡುವೆ, ಅವರ ಬಹುನಿರೀಕ್ಷಿತ ಚಿತ್ರ AA22xA06 ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.

Read Full Story

06:07 PM (IST) Nov 23

ಪುಟ್ಟಕ್ಕನ ಮಕ್ಕಳು- Bigg Boss ಮಂಜು ಭಾಷಿಣಿ ಕೊನೆಯ ದಿನದ ಶೂಟಿಂಗ್ - ಉಮಾಶ್ರೀ ಕಣ್ಣೀರು- ವಿಡಿಯೋ ವೈರಲ್

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಬಂಗಾರಮ್ಮ ಪಾತ್ರಧಾರಿ ಮಂಜು ಭಾಷಿಣಿ, ಬಿಗ್ ಬಾಸ್ ಪ್ರವೇಶಕ್ಕಾಗಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಅವರ ಪಾತ್ರವನ್ನು ಅಂತ್ಯಗೊಳಿಸಲಾಗಿದ್ದು, ಕೊನೆಯ ದಿನದ ಶೂಟಿಂಗ್‌ನಲ್ಲಿ ಸಹನಟಿ ಉಮಾಶ್ರೀ ಸೇರಿದಂತೆ ಇಡೀ ತಂಡ ಭಾವುಕರಾಗಿದ್ದರು.
Read Full Story

05:33 PM (IST) Nov 23

ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ ಬಂಡೀಪುರ - ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಕಾರಣ?

ಕಾಡಂಚಿನ ಗ್ರಾಮದಲ್ಲಿ ಹುಲಿ ದಾಳಿಗೆ ರೈತರ ಬಲಿ ಹಿನ್ನಲೆ ನಾಗರಹೊಳೆ ಹಾಗೂ ಬಂಡೀಪುರದಲ್ಲಿ ಸಫಾರಿ ನಿಷೇಧಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. 15 ದಿನಗಳಿಂದ ಸಫಾರಿ ಕೇಂದ್ರ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ.

Read Full Story

05:23 PM (IST) Nov 23

ಹಿಸಾರ್ ಕೋಟೆಯ ಇತಿಹಾಸ.. ಹರಿಯಾಣದಲ್ಲಿರುವ ಫಿರೋಜ್ ಷಾ ಅರಮನೆ ಬಗ್ಗೆ ನಿಮಗೆ ಗೊತ್ತೇ?

ಫಿರೋಜ್ ಷಾ ಅರಮನೆ ಸಂಕೀರ್ಣ ಭಾರತದ ಹರಿಯಾಣ ರಾಜ್ಯದ ಆಧುನಿಕ ಹಿಸಾರ್‌ನಲ್ಲಿರುವ ಒಂದು ಪುರಾತತ್ವ ಸಂಕೀರ್ಣವಾಗಿದ್ದು, ಇದನ್ನು ಕ್ರಿ.ಶ. 1354ರಲ್ಲಿ ದೆಹಲಿ ಸುಲ್ತಾನರ ಫಿರೋಜ್ ಷಾ ತುಘಲಕ್ ನಿರ್ಮಿಸಿದನು.

Read Full Story

04:37 PM (IST) Nov 23

ಕಾಂಗ್ರೆಸ್‌ನಲ್ಲಿ ಯಾವ ಬಣಗಳೂ ಇಲ್ಲ, ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ - ಸಚಿವ ಸಂತೋಷ್‌ ಲಾಡ್

ಕಾಂಗ್ರೆಸ್ ಪಕ್ಷದಲ್ಲಿ ಯಾವ ಬಣಗಳೂ ಇಲ್ಲ. ಕಾಂಗ್ರೆಸ್ ಪಕ್ಷ ಒಂದೇ ಬಣ, ಆ ಬಣ, ಈ ಬಣ ಎಂಬುವುದು ಇಲ್ಲ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದಾರೆಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್ ಹೇಳಿದರು.

Read Full Story

04:36 PM (IST) Nov 23

ಇದು ಲೇಟೆಸ್ಟ್​ ಫ್ಯಾಷನ್​ ಕಣ್ರೀ ​ - ಜೀವಂತ ಇಲಿ- ಕೋಳಿಮರಿಗಳೇ ಇವರ ಡ್ರೆಸ್​; ವಿಡಿಯೋ ನೋಡಿದ್ರೆ ಸುಸ್ತಾಗ್ತೀರಾ!

ಫ್ಯಾಷನ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಗಳಾದ ಓರ್ರಿ ಮತ್ತು ಶೆರ್ರಿಸೋನಿ, ಜೀವಂತ ಕೋಳಿಮರಿ ಮತ್ತು ಇಲಿಗಳಿಂದ ಮಾಡಿದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವಿಚಿತ್ರ ಫ್ಯಾಷನ್​ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿವೆ.
Read Full Story

04:33 PM (IST) Nov 23

ಕರ್ನಾಟಕ ಕೇರಳ ಗಡಿ ಬಂದ್‌ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್, ಕನ್ನಡಿಗರ ಪರ ಹೋರಾಟ

ಕರ್ನಾಟಕ ಕೇರಳ ಗಡಿ ಬಂದ್‌ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್, ಕನ್ನಡಿಗರ ಪರ ಹೋರಾಟ, ಕರ್ನಾಟಕ ಗಡಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಮಲೆಯಾಳಿ ಮಾಡಲಾಗುತ್ತಿದೆ ಎಂದು ವಾಟಾಳ್ ಹೇಳಿದ್ದಾರೆ. ಬಂದ್ ದಿನಾಂಕ ಘೋಷಿಸಿದ್ದಾರೆ.

Read Full Story

04:31 PM (IST) Nov 23

ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆ - ಎಚ್‌.ಡಿ.ಕುಮಾರಸ್ವಾಮಿ

ಮುಂದಿನ ಐದಾರು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Read Full Story

04:24 PM (IST) Nov 23

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸದ್ಯಕ್ಕಿಲ್ಲ, ನಾನೇ ಮುಂದುವರಿವೆ - ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Read Full Story

03:15 PM (IST) Nov 23

Annayya Serial - ಕೊನೆಗೂ ಬೆಂಕಿಯೊಳಗಡೆ ಅಡಗಿದ್ದ ಸತ್ಯದರ್ಶನ ಮಾಡಿಸಿದ ಮಾಂಕಾಳವ್ವ! ಈಗ ಆಟ ಶುರು

Annayya Kannada Serial Episode Update: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮೈಮೇಲೆ ದೇವಿ ಬಂದಾಗಿದೆ. ಅವನ ಮೈಮೇಲೆ ದೇವಿ ಬರಬಾರದು, ಸತ್ಯ ಹೊರಗಡೆ ಬರಬಾರದು ಎಂದು ಕಿಡಿಗೇಡಿಗಳು ಪ್ರಯತ್ನಪಟ್ಟರು. ಆದರೆ ಸತ್ಯ ಯಾವತ್ತಿದ್ರೂ ಹೊರಗಡೆ ಬರಲೇಬೇಕಿತ್ತು, ಬಂದಿದೆ.

Read Full Story

03:10 PM (IST) Nov 23

Karna ಸೀರಿಯಲ್​ ನಿತ್ಯನ ನಟನೆಗೆ ಅಪ್ಪು ಶ್ಲಾಘನೆ - ಪುನೀತ್​ ರಾಜ್​ ದನಿ ಕೇಳಿ ನಮ್ರತಾ ಗೌಡ ಕಣ್ಣೀರು

'ಕರ್ಣ' ಧಾರಾವಾಹಿಯಲ್ಲಿ ನಟಿ ನಮ್ರತಾ ಗೌಡ ಅವರ ನಿತ್ಯಾ ಪಾತ್ರಕ್ಕೆ ಕೃತಕ ಬುದ್ಧಿಮತ್ತೆ (AI) ಮೂಲಕ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯಲ್ಲಿ ಧೈರ್ಯ ತುಂಬಲಾಗಿದೆ. ಸೀರಿಯಲ್‌ನ ಜಾತ್ರೆಯ ದೃಶ್ಯದಲ್ಲಿ, ವೇದಿಕೆಯ ಮೇಲಿದ್ದ ನಿತ್ಯಾಗೆ ಅಪ್ಪು ಅವರ ಧ್ವನಿಯು ಜೀವನದ ಪಾಠ ಹೇಳಿದ್ದಾರೆ. 

Read Full Story

02:56 PM (IST) Nov 23

ಈ ಆಹಾರ ಪದಾರ್ಥ ಸೇವನೆಯಿಂದ ಪುರುಷರ ವೀರ್ಯಾಣು ಗುಣಮಟ್ಟ ಕುಸಿತ - ತಜ್ಞರಿಂದ ಎಚ್ಚರಿಕೆ

ಇತ್ತೀಚಿನ ಸಂಶೋಧನೆಯೊಂದು ಕೃಷಿಯಲ್ಲಿ ಬಳಸುವ ನಿಯೋನಿಕೋಟಿನಾಯ್ಡ್ಸ್ ಕೀಟನಾಶಕಗಳು ಪುರುಷರ ಫಲವತ್ತತೆ ಕುಸಿತಕ್ಕೆ ಕಾರಣವಾಗುತ್ತಿವೆ ಎಂದು ಬಹಿರಂಗಪಡಿಸಿದೆ. ರಾಸಾಯನಿಕಗಳು ಪ್ರಾಣಿಗಳಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿ ಮಾಡುತ್ತದೆ ತಜ್ಞರು ಎಚ್ಚರಿಸಿದ್ದಾರೆ.

Read Full Story

02:26 PM (IST) Nov 23

ದತ್ತಜಯಂತಿ ಭದ್ರತೆ ಪರಿಶೀಲನೆಗೆ ಡಿಜಿಪಿ ಸಲೀಂ ಚಿಕ್ಕಮಗಳೂರಿಗೆ ಭೇಟಿ - 2005ರ ನಂತರ ಮೊದಲ ಬಾರಿ!

ಚಿಕ್ಕಮಗಳೂರಿನಲ್ಲಿ ನವೆಂಬರ್ 26 ರಿಂದ ನಡೆಯಲಿರುವ ದತ್ತಜಯಂತಿ ಹಿನ್ನೆಲೆಯಲ್ಲಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಡಿಸೆಂಬರ್ 4 ರಂದು 20 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ. ಬಿಗಿ ಬಂದೋಬಸ್ತ್, ಕಟ್ಟುನಿಟ್ಟಿನ ಸೂಚನೆ

Read Full Story

02:00 PM (IST) Nov 23

ಕಾರಿನ ಮೇಲೆ ದಾಳಿ ಮಾಡಿ ವೈರಲ್ ಆಗಿದ್ದ ಡಾಗೇಶ್ ಭಾಯ್ ಮಾಲೀಕರು ಪತ್ತೆ!

Viral Video of Dog Attacking Car Reunites Pet with Owner: ಈ ತಿಂಗಳ ಆರಂಭದಲ್ಲಿ, ಮಾರುತಿ ಸುಜುಕಿ ಕಾರಿನ ಮೇಲೆ ನಾಯಿಯೊಂದು ದಾಳಿ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಕತ್ತಿಗೆ ಕಾಲರ್ ಕಟ್ಟಿದ್ದ ಕಂದು ಬಣ್ಣದ ನಾಯಿ ಇತ್ತು.

Read Full Story

01:36 PM (IST) Nov 23

Karna Serial - ನಿಧಿ-ಕರ್ಣ ಜೀವನದಲ್ಲಿ ಮುಂದಾಗೋದನ್ನು ಹೇಳೇಬಿಟ್ಟಳು ಶಿವು ಮೈಮೇಲೆ ಬಂದ ದೇವಿ!

Karna Kannada Serial Written Update: ಅಣ್ಣಯ್ಯ ಧಾರಾವಾಹಿ ಹಾಗೂ ಕರ್ಣ ಧಾರಾವಾಹಿ ಮಹಾಮಿಲನ ಆಗಿದೆ. ಸದ್ಯ ಮಾರಿಗುಡಿಯಲ್ಲಿ ಎಲ್ಲರೂ ಸೇರಿದ್ದಾರೆ. ಆ ವೇಳೆ ಕಿಡಿಗೇಡಿಗಳು ಸೇರಿಕೊಂಡು ಸತ್ಯ ಹೊರಬರದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾದರೆ ಮುಂದೆ ಏನಾಗುವುದು? ವೀಕ್ಷಕರ ಆಸೆಯಂತೆ ನಡೆಯುತ್ತಿದೆಯಾ? 

Read Full Story

01:20 PM (IST) Nov 23

ಫ್ಲೆಕ್ಸ್ ತಗುಲಿ ವಿದ್ಯಾರ್ಥಿ ಬಲಿ; ನೆಲಮಂಗಲ ನಗರಸಭೆ ಅಧಿಕಾರಿಗಳಿಂದ ಬ್ಯಾನರ್, ಫ್ಲೆಕ್ಸ್‌ಗಳ ತೆರವು!

ನೆಲಮಂಗಲದಲ್ಲಿ ಅನಧಿಕೃತ ಫ್ಲೆಕ್ಸ್‌ ಬ್ಯಾನರ್ ತಗುಲಿ, ಜರ್ಮನಿಯಲ್ಲಿ ಎಂಎಸ್ ಓದುತ್ತಿದ್ದ ತೇಜಸ್ ಗೌಡ ಎಂಬ ಯುವಕ ಬೈಕ್‌ನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ದುರಂತದ ನಂತರ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ನಗರಸಭೆ ಅಧಿಕಾರಿಗಳು, ನಗರದಾದ್ಯಂತ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ.
Read Full Story

01:12 PM (IST) Nov 23

ಅಕ್ಕನ ಮದುವೆಯಲ್ಲಿ ಮದುಮಗಳಂತೆ ಮಿಂಚಿನ 'ಭಾಗ್ಯಲಕ್ಷ್ಮಿ' ಕನ್ನಿಕಾ! ನಟಿ ಸುಕೃತಾ ಕ್ಯೂಟ್​ ಫೋಟೋಸ್​

'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ನಟಿ ಸುಕೃತಾ ನಾಗ್ ಅವರ ಅಕ್ಕನ ಮದುವೆ ಇತ್ತೀಚೆಗೆ ನಡೆದಿದೆ. ಈ ಸಂದರ್ಭದಲ್ಲಿ, ಅವರು ತಮ್ಮ ಹಿಂದಿನ ಪ್ರೀತಿ, ಬ್ರೇಕಪ್, ಹಾಗೂ ಖಿನ್ನತೆಯಿಂದ ಹೊರಬಂದ ಕಥೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಗುಟ್ಟನ್ನೂ ಸಹ ನಟಿ ಬಹಿರಂಗಪಡಿಸಿದ್ದಾರೆ.
Read Full Story

12:56 PM (IST) Nov 23

BBK 12 - ಕೊನೆಗೂ ಅಶ್ವಿನಿ ಗೌಡ ನಡೆದು ಬಂದ ಹಾದಿ ಹಿಡಿದ ಗಿಲ್ಲಿ ನಟ; ಎಲ್ಲರಿಗೂ ಶಾಕ್

Bigg Boss Kannada 12 Update: ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಹಾಗೂ ಗಿಲ್ಲಿ ನಟನ ಮಧ್ಯೆ ಭಾರೀ ಕಾಮಿಡಿ ಮಾತುಕತೆ ನಡೆದಿದೆ. ಈ ಹಿಂದೆಯೇ ವೀಕೆಂಡ್‌ ಎಪಿಸೋಡ್‌ನಲ್ಲಿ ಅಶ್ವಿನಿ ಹೇಗೆ ಮಾತನಾಡ್ತಾರೆ ಎಂದು ಗಿಲ್ಲಿ ನಟ ಹೇಳಿದ್ದರು. ಈಗ ಅವರು ಮತ್ತೆ ಮಿಮಿಕ್ರಿ ಮಾಡಿದ್ದರು. 

Read Full Story

12:51 PM (IST) Nov 23

ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ದೇವರಗುಡ್ಡದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ!

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಹಾರೈಸಿ, ಹಾವೇರಿ ಜಿಲ್ಲೆಯ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅಭಿಮಾನಿಯೊಬ್ಬರು ಗೊರವಯ್ಯನ ವೇಷ ಧರಿಸಿ ಛಾಟಿ ಸೇವೆ ನೆರವೇರಿಸಿದ್ದು ವಿಶೇಷವಾಗಿತ್ತು.
Read Full Story

12:41 PM (IST) Nov 23

Naa Ninna Bidalaare - ಅಮ್ಮನ ಆತ್ಮ ಪುಟಾಣಿ ಹಿತಾಗೆ ಕಾಣಿಸಿಬಿಡ್ತಾ? ಇದೇನಿದು ಭಾರಿ ಟ್ವಿಸ್ಟ್​?

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾ ಆತ್ಮವಾಗಿ ಕಾಣಿಸಿಕೊಂಡರೆ, ನಿಜ ಜೀವನದಲ್ಲಿ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಮತ್ತು ಮಗಳು ಹಿತಾ ಪಾತ್ರಧಾರಿ ಮಹಿತಾ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.  

Read Full Story

12:38 PM (IST) Nov 23

Bengaluru - ಲೈಂ*ಗಿಕ ಸಮಸ್ಯೆ, ನಿಗೂಢ ಔಷಧಿಗೆ 48 ಲಕ್ಷ - ಬೆಂಗಳೂರಿನ ಟೆಕ್ಕಿಗೆ ಮಹಾಮೋಸ

ಬೆಂಗಳೂರಿನ ಟೆಕ್ಕಿಯೊಬ್ಬರು ಲೈಂ*ಗಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋಗಿ ನಕಲಿ ಗುರೂಜಿಯಿಂದ 48 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 'ದೇವರಾಜ್ ಬೂಟಿ' ಎಂಬ ದುಬಾರಿ ಔಷಧಿಯನ್ನು ಖರೀದಿಸಿ ಸೇವಿಸಿದ್ದರಿಂದ, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿದೆ. 

Read Full Story

12:27 PM (IST) Nov 23

20 ವರ್ಷಗಳ ಸ್ನೇಹವನ್ನೇ ಬಂಡವಾಳ ಮಾಡಿ ವಂಚನೆ! ಗೆಳತಿಯಿಂದಲೇ ಕೋಟಿಗಟ್ಟಲೆ ಹಣ ಕಳೆದುಕೊಂಡ ಮಹಿಳೆ!

ಬೆಂಗಳೂರಿನಲ್ಲಿ 20 ವರ್ಷಗಳ ಆಪ್ತ ಗೆಳತಿಯೇ ತನ್ನ ಸ್ನೇಹಿತೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ. ಲತಾ ಮತ್ತು ಆಕೆಯ ಕುಟುಂಬಸ್ಥರು ಪ್ರಿಯಾಂಕ ಅವರಿಂದ ಹಂತ ಹಂತವಾಗಿ 68 ಲಕ್ಷ ರೂ. ಪಡೆದು, 50 ಲಕ್ಷ ರೂ. ಹಿಂತಿರುಗಿಸದೆ ಮೋಸ ಮಾಡಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read Full Story

12:24 PM (IST) Nov 23

ಕನ್ನಡಿಗರಿಗೆ ಆಕ್ರೋಶ ಆಗುವಂಥ ರಕ್ಷಿತಾ ಶೆಟ್ಟಿ ವಿಡಿಯೋ ವೈರಲ್‌ ಆಗಿತ್ತು! ಇದರ ಸತ್ಯಾಸತ್ಯತೆ ಈಗ ರಿವೀಲ್

ಬೆಂಗಳೂರಿನಲ್ಲಿ ಒಮ್ಮೆ ರಕ್ಷಿತಾ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಆಗ ಡ್ರೈವರ್‌ಗೆ ನಿಮಗೆ ತುಳು ಬರಲ್ಲವಾ? ಮಂಗಳೂರಿನಲ್ಲಿ ನಮಗೆ ತುಳು ರಾಜ್ಯಭಾಷೆ. ನಮಗ್ಯಾಕೆ ಕನ್ನಡ ಬೇಕು ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದರು. ರಕ್ಷಿತಾ ಶೆಟ್ಟಿ ಮಾತು ಕೇಳಿ ಡ್ರೈವರ್, ನಮ್ಮ ಭಾಷೆ ಕನ್ನಡ ಎಂದಿದ್ದರು.

Read Full Story

12:05 PM (IST) Nov 23

DKD ವೇದಿಕೆಯಲ್ಲಿ ಸೀರೆಯುಟ್ಟ ನಾರಿಯ ಧಮಾಕಾ ಪರ್ಫಾಮೆನ್ಸ್​ - ಅಪ್ಪು ಡಾನ್ಸ್​ಗೆ ಚಿಂದಿ ಉಡಾಯಿಸಿದ ಗೃಹಿಣಿ!

ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಗೃಹಿಣಿಯೊಬ್ಬರು ಸೀರೆಯಲ್ಲೇ ಪುನೀತ್ ರಾಜ್‌ಕುಮಾರ್ ಅವರ ಹಾಡಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.ತೀರ್ಪುಗಾರರಾದ ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ ಮತ್ತು ರಚಿತಾ ರಾಮ್ ದಿಗ್ಭ್ರಮೆಗೊಂಡಿದ್ದು, ಶಿವಣ್ಣ  ಚಪ್ಪಾಳೆ ತಟ್ಟಿ ಶ್ಲಾಘಿಸಿದ್ದಾರೆ.

Read Full Story

11:46 AM (IST) Nov 23

ರಾಯಭಾಗ - ಮೂರು ಮಕ್ಕಳ ತಂದೆಯೊಂದಿಗೆ ಯುವತಿ ಪರಾರಿ? ಕಿಡ್ನಾಪ್ ದೂರು ದಾಖಲು

ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಕಾಲೇಜಿಗೆ ತೆರಳಿದ್ದ 19 ವರ್ಷದ ಪ್ರಿಯಾಂಕಾ ಅಕ್ಕೇನ್ನವರ್ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾರೆ. ಯುವತಿಯ ಕುಟುಂಬಸ್ಥರು, ಮೂರು ಮಕ್ಕಳ ತಂದೆಯಾಗಿರುವ ಪಕ್ಕದ ಮನೆಯ ಸುರೇಶ್ ಹುಲ್ಲೇನ್ನವರ್ ಎಂಬಾತನೇ ಆಕೆಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ.

Read Full Story

11:38 AM (IST) Nov 23

ಬೆಂಗಳೂರು ದರೋಡೆ ಕೇಸ್ - ಹೊಸಕೋಟೆ ಕೆರೆ ಬಳಿ ಹಣ ಇರಿಸಿ ಎಸ್ಕೇಪ್ ಆಗಿತ್ತು ಗ್ಯಾಂಗ್!

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ, ಕದ್ದ ಹಣವನ್ನು ಹೊಸಕೋಟೆಯ ಪಾಳು ಮನೆಯಲ್ಲಿ ಬಚ್ಚಿಡಲಾಗಿತ್ತು. ಸಿಎಂಎಸ್ ಉದ್ಯೋಗಿ ಹಾಗೂ ನಿರುದ್ಯೋಗಿ ಯುವಕರ ಜೊತೆ ಸೇರಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪನೇ ಈ ದರೋಡೆಯ ಸೂತ್ರಧಾರಿಯಾಗಿದ್ದನು.

Read Full Story

11:32 AM (IST) Nov 23

Gicchi Gili Gili Show ವಿಜೇತರ ಜೊತೆ ಮದುವೆ ಆಗೋಕೆ ರೆಡಿಯಾದ್ರಾ 'ಮಜಾ ಭಾರತ' ಶೋ ಮಾನಸಾ? ಸತ್ಯ ಏನು?

ಗಿಚ್ಚಿ ಗಿಲಿಗಿಲಿ ಶೋ, ಮಜಾಭಾರತ ಶೋನಲ್ಲಿ ಭಾಗವಹಿಸಿದ್ದ ಜಗಪ್ಪ, ಸುಷ್ಮಿತಾ ಗೌಡ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ ಕೆಲವರು ಪ್ರೀತಿ ಮಾಡುತ್ತಿದ್ದಾರೆ ಎಂಬ ಗಾಸಿಪ್‌ ಆಗೀಗ ಹರಡುತ್ತಿರುತ್ತದೆ. ಈಗ ಇನ್ನೊಂದು ಜೋಡಿ ಹೆಸರು ಕೇಳಿ ಬರುತ್ತಿದೆ.

 

Read Full Story

More Trending News