LIVE NOW
Published : Dec 23, 2025, 06:54 AM ISTUpdated : Dec 23, 2025, 09:07 PM IST

Karnataka News Live: ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!

ಸಾರಾಂಶ

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ಮಾನವೀಯ ದೃಷ್ಟಿಯಿಂದ ದಲಿತರಿಗೆ ಅವಕಾಶ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ. ಅಧಿಕಾರ ಹಂಚಿಕೆ ವಿಷಯದ ಬಗ್ಗೆ ನಾನೇನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ, ಸಿಎಂ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರಿಗೆ ಒಂದು ಅವಕಾಶ ನೀಡಬೇಕು. ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಸ್ವಾಭಾವಿಕವಾಗಿ ಊಟಕ್ಕೆ ಕರೆದಿದ್ದರು ಅಷ್ಟೇ. ರಾಜಕೀಯ ವಿಚಾರಗಳೇನೂ ಅಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.

AEE Vijayalakshmi

09:07 PM (IST) Dec 23

ರಾಯಚೂರು ಲೋಕಾ ದಾಳಿ, ಎಇಇ ವಿಜಯಲಕ್ಷ್ಮಿ ಮನೆಯಲ್ಲಿ ಸಿಕ್ತು ಲೆಕ್ಕವಿಲ್ಲದಷ್ಟು ಆಸ್ತಿ, ಚಿನ್ನ! ಬೆಳಗ್ಗಿನಿಂದ ಇನ್ನೂ ಮುಗಿಯದ ಶೋಧ!

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಆರ್‌ಡಿಪಿಆರ್ ಎಇಇ ಡಿ. ವಿಜಯಲಕ್ಷ್ಮಿ ಅವರ ಮನೆ, ಕಚೇರಿ ಸೇರಿದಂತೆ ಐದು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಶೋಧ ಕಾರ್ಯದಲ್ಲಿ 50ಕ್ಕೂ ಹೆಚ್ಚು ಆಸ್ತಿ ದಾಖಲೆಗಳು, 33 ಎಕರೆ ಜಮೀನು, ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.
Read Full Story

08:38 PM (IST) Dec 23

ಬೆಚ್ಚಿಬಿದ್ದ ಬೆಂಗಳೂರು, ಡಿವೋರ್ಸ್ ಕೇಳಿದ ಪತ್ನಿಯನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಕೊಂದ ಪತಿ!

ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಬಂದ ಪತಿ ಬಾಲ ಮುರುಗನ್, ಪತ್ನಿ ಭುವನೇಶ್ವರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ದಾಂಪತ್ಯ ಕಲಹ ಮತ್ತು ಅನುಮಾನವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
Read Full Story

07:47 PM (IST) Dec 23

ವಿದೇಶದ ಅತಿಥಿಗಳಿಗೆ ನೆಲೆಯಾದ ಸಿಂಗಟಾಲೂರಿನ ಹಿನ್ನೀರು, ಹಿಮಾಲಯ ದಾಟಿ ಬಂದ ರಹಸ್ಯವಿದು!

ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರು, ಮಧ್ಯ ಏಷ್ಯಾ ಮತ್ತು ಯುರೋಪ್‌ನಿಂದ ವಲಸೆ ಬರುವ ಬ್ರಾಹ್ಮಣಿ ಬಾತುಕೋಳಿಗಳಂತಹ ವಿದೇಶಿ ಹಕ್ಕಿಗಳಿಗೆ ಚಳಿಗಾಲದ ಆಶ್ರಯತಾಣವಾಗಿದೆ. ಹಿಮಾಲಯವನ್ನು ದಾಟಿ ಬರುವ ಈ ಹಕ್ಕಿಗಳು ಸಂತಾನೋತ್ಪತ್ತಿ ಮುಗಿಸಿ ಹಿಂದಿರುಗುತ್ತವೆ.

Read Full Story

07:20 PM (IST) Dec 23

ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ನೀಡಿದ ಇಲಾಖೆ, ಋತುಚಕ್ರ ರಜೆಗೆ ಗ್ರೀನ್‌ ಸಿಗ್ನಲ್‌!

ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC, ಮತ್ತು KKRTCಯ ಮಹಿಳಾ ನೌಕರರಿಗೆ ರಾಜ್ಯ ಸರ್ಕಾರವು ಋತುಚಕ್ರ ರಜೆಯನ್ನು ಮಂಜೂರು ಮಾಡಿದೆ. ಜನವರಿ 1 ರಿಂದ ಜಾರಿಗೆ ಬರುವ ಈ ಆದೇಶದ ಅಡಿಯಲ್ಲಿ, ಅರ್ಹ ಮಹಿಳಾ ನೌಕರರು ಪ್ರತಿ ತಿಂಗಳು ಒಂದು ದಿನದ ರಜೆಯನ್ನು ಪಡೆಯಬಹುದು.

Read Full Story

07:07 PM (IST) Dec 23

ಬರೋಬ್ಬರಿ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದ ಮಂಗಳೂರು ವಿಶ್ವವಿದ್ಯಾಲಯ! ಕಾರಣವೇನು?

ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ನಿರಂತರವಾಗಿ ಕುಸಿದ ಹಿನ್ನೆಲೆಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯವು ತನ್ನೊಂದಿಗೆ ಸಂಯೋಜಿತವಾಗಿರುವ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಿದೆ. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.

Read Full Story

06:57 PM (IST) Dec 23

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ

ಜನವರಿ 1ರಿಂದ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ ಬದಲಾವಣೆ, ನಿರ್ಗಮನ ಸಮಯ, ಮಾರ್ಗ ಸೇರಿದಂತೆ ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ರೈಲು ಬದಲಾವಣೆ ವಿವರವನ್ನು ಸಚಿವಾಲಯ ಪ್ರಕಟಿಸಿದೆ.

 

Read Full Story

06:56 PM (IST) Dec 23

Darshan Vs Sudeep War - ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ತಾನು ಯಾರ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಯದೆ ನನ್ನನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿರುವ ಅವರು, 'ದೇವಸ್ಥಾನದ ಘಂಟೆ ಹೊಡೆದುಕೊಂಡರೆ ಆ ಘಂಟೆಯನ್ನೇ ಕೇಳಬೇಕು' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Read Full Story

06:47 PM (IST) Dec 23

ಸೆಲ್ಫಿ ವಿಡಿಯೋ ಮಾಡಿ ಪ್ರಾಣಬಿಟ್ಟ ಮಹಿಳೆ ಕೇಸಿಗೆ ಟ್ವಿಸ್ಟ್; ಗಂಡನ ಬಿಟ್ಟು ಬಂದರೂ ನರಕ ತೋರಿಸಿದ್ದ ಪ್ರೇಮಿ!

ಬಳ್ಳಾರಿಯಲ್ಲಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಿಯಕರನಿಂದ ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಚಿತ್ರೀಕರಿಸಿ, ತಮ್ಮ ಸಾವಿಗೆ ಪ್ರಿಯಕರ ಶೇಕ್ಷಾವಲಿ ಮತ್ತು ಆತನ ಕುಟುಂಬವೇ ಕಾರಣ ಎಂದು ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

06:18 PM (IST) Dec 23

ಬಿಕ್ಲು ಶಿವ ಹತ್ಯೆ ಪ್ರಕರಣ, ಬೈರತಿಗೆ ಮತ್ತಷ್ಟು ಬಿಗಿಯಾದ ಕಾನೂನು, ಮತ್ತೊಮ್ಮೆ ಜಾಮೀನು ವಜಾ

ಭಾರತೀನಗರದ ರೌಡಿ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಾಸಕ ಬೈರತಿ ಬಸವರಾಜು ಅವರಿಗೆ ಮತ್ತೆ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.  

Read Full Story

06:12 PM (IST) Dec 23

ಕಿಶೋರ್‌ ಬಳಿಕ ಪ್ರಕಾಶ್‌ ರಾಜ್‌ಗೆ ಜಾಕ್‌ಪಾಟ್‌, 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನೇಮಕ!

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ. ಜನವರಿ 29 ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ ಈ ಚಿತ್ರೋತ್ಸವವು 'ಮಹಿಳಾ ಸಬಲೀಕರಣ' ಥೀಮ್ ಹೊಂದಿದ್ದು, 60ಕ್ಕೂ ಹೆಚ್ಚು ದೇಶಗಳ 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

Read Full Story

06:06 PM (IST) Dec 23

ದರ್ಶನ್ ನಟನೆಯ​ The Devil ಚಿತ್ರ ರಿಜೆಕ್ಟ್​ ಮಾಡಿರುವುದಕ್ಕೆ ಶಾಕಿಂಗ್​ ಕಾರಣ ಕೊಟ್ಟ ನಟಿ ರಾಗಿಣಿ ದ್ವಿವೇದಿ!

ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ರಾಗಿಣಿ ದ್ವಿವೇದಿ, ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರದ ಪಾತ್ರವನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Read Full Story

05:55 PM (IST) Dec 23

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಫೀಡರ್ ಬಸ್ ಗಿಫ್ಟ್ - ಇಲ್ಲಿದೆ ಪೂರ್ಣ ವೇಳಾಪಟ್ಟಿ

ಬೆಂಗಳೂರು ಮೆಟ್ರೋ ಪ್ರಯಾಣಿಕರೇ ಗಮನಿಸಿ! ಜ್ಞಾನಭಾರತಿ, ಕೆ.ಆರ್. ಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳಿಂದ ಹೊಸ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭ. ಮಾರ್ಗ, ಸಮಯ ತಿಳಿಯಲು ಕ್ಲಿಕ್ ಮಾಡಿ.

Read Full Story

05:43 PM (IST) Dec 23

ಅಂಡರ್-19 ಏಷ್ಯಾಕಪ್ - ಭಾರತದ ಆಟಗಾರರ ಮೇಲೆ ಮೊಹ್ಸಿನ್ ನಖ್ವಿ ಗರಂ, ಐಸಿಸಿಗೆ ದೂರು ನೀಡಲು ರೆಡಿಯಾದ ಪಾಕ್ ಸಚಿವ!

ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತೀಯ ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಐಸಿಸಿಗೆ ಅಧಿಕೃತ ದೂರು ನೀಡಲು ನಿರ್ಧರಿಸಿದೆ. ಪಾಕ್ ತಂಡದ ಕೋಚ್ ಸರ್ಫರಾಜ್ ಅಹ್ಮದ್ ಅವರ ಆರೋಪದ ಬೆನ್ನಲ್ಲೇ ನಖ್ವಿ ಈ ಕ್ರಮವನ್ನು ಖಚಿತಪಡಿಸಿದ್ದಾರೆ. 

Read Full Story

05:37 PM (IST) Dec 23

ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿ ಹಣ ವಸೂಲಿ!

ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಸುಲಿಗೆ ಮಾಡಿದೆ. ವಿದ್ಯಾರ್ಥಿಗಳನ್ನು ಒಂದು ಗಂಟೆ ಕಾಲ ಒತ್ತೆಯಾಳಾಗಿರಿಸಿ, ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡು, ದೈಹಿಕ ಹಿಂಸೆ ನೀಡಿ ಪರಾರಿಯಾಗಿದ್ದಾರೆ. 

Read Full Story

05:30 PM (IST) Dec 23

BBK 12 ಗೆಲ್ಲೋದು ಯಾರು? ಗಿಲ್ಲಿ ನಟನ ಮುಂದಿನ ಜೀವನ ಹೇಗಿರಲಿದೆ? ಮಂತ್ರಾಲಯದ ಗಿಣಿ ಭವಿಷ್ಯ ನುಡೀತು

Bigg Boss Kannada Season 12 Winner: ದಿನದಿಂದ ದಿನಕ್ಕೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಕುತೂಹಲದಿಂದ ಕೂಡಿದೆ. ಇನ್ನು ಫಿನಾಲೆಯಲ್ಲಿ ಯಾರು ಗೆಲ್ಲಲಿದ್ದಾರೆ? ಯಾರು ಟ್ರೋಫಿ ಪಡೆಯಲಿದ್ದಾರೆ ಎಂಬ ಕುತೂಹಲವಿದೆ. ಈ ಬಗ್ಗೆ ಮಂತ್ರಾಲಯ ಗಿಣಿ ಹೇಳಿದ್ದೇನು?

Read Full Story

05:12 PM (IST) Dec 23

ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!

ವಿವಾದಗಳಿಂದಲೇ ಖ್ಯಾತರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮೂಲಕ ಮತ್ತೆ ಜನಪ್ರಿಯತೆ ಗಳಿಸಿದ್ದರು. ಇದೀಗ ಚೀನಾಕ್ಕೆ ಹಾರಿದ್ದು, ಅಲ್ಲಿ ಚೀನಿ ಯುವತಿಯೊಂದಿಗೆ ಕಾಣಿಸಿಕೊಂಡು ಡ್ರೋನ್ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

Read Full Story

05:07 PM (IST) Dec 23

ಅಂದು ನಡೆದ ಘಟನೆ ಬಳಸ್ಕೊಂಡು, ದೇಶ-ವಿದೇಶದಲ್ಲಿ ಉದ್ಯಮ ಮಾಡಿ ಗೆದ್ದ Bigg Boss ಸ್ಪರ್ಧಿ! ಯಾರದು?

Bigg Boss Shrutika Arjun: ಇಂದು ಅನೇಕರು ಉದ್ಯಮ ಮಾಡಿ ಗೆದ್ದ ಉದಾಹರಣೆಯೂ ಇದೆ, ಕೆಲವರು ಉದ್ಯಮ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಯೂ ಇದೆ. ಕೆಲವೊಮ್ಮೆ ನಾವು ಏನೂ ಪ್ಲ್ಯಾನ್‌ ಮಾಡದೆ, ಏನೇನೋ ಆಗುವುದುಂಟು. ಅಂತೆಯೇ ಈ ನಟಿ ಕೂಡ ಉದ್ಯಮ ಆರಂಭಿಸಿ, ಇಂದು ದೊಡ್ಡ ಮಟ್ಟದದಲ್ಲಿ ಯಶಸ್ಸು ಪಡೆದಿದ್ದಾರೆ. 

Read Full Story

04:43 PM (IST) Dec 23

ಕಿಚ್ಚ ಸುದೀಪ್ ಪರ ಬ್ಯಾಟ್ ಬೀಸಿದ ಜೆಡಿಎಸ್ ಮುಖಂಡ ಪ್ರವೀಣ್ - 'ಅಂದಾಭಿಮಾನಿಗಳು ಚಿತ್ರರಂಗಕ್ಕೆ ಶಾಪ' ಎಂದು ಆಕ್ರೋಶ!

ಕಿಚ್ಚ ಸುದೀಪ್-ದರ್ಶನ್ ಅಭಿಮಾನಿಗಳ ವಾರ್‌ಗೆ ರಾಜಕೀಯದ ಎಂಟ್ರಿ! ಜೆಡಿಎಸ್ ಮುಖಂಡನ ಪ್ರವೀಣ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಸುದೀಪ್ 'ಯುದ್ಧ'ದ ಹೇಳಿಕೆ, ವಿಜಯಲಕ್ಷ್ಮಿ ಕೌಂಟರ್ ವಿವರ ತಿಳಿಯಲು ಓದಿ.

Read Full Story

04:26 PM (IST) Dec 23

ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ - ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು

ಭಾರತೀಯರು ಆಯುರ್ವೇದವನ್ನು ಕಡೆಗಣಿಸುತ್ತಿದ್ದರೆ, ಚೀನಿಯರು ಆರೋಗ್ಯಕ್ಕಾಗಿ ವಿಶೇಷ ಕಷಾಯವನ್ನು ಅವಲಂಬಿಸಿದ್ದಾರೆ. ನಮ್ಮ ಅಡುಗೆಮನೆಯಲ್ಲಿಯೇ ಪದಾರ್ಥಗಳಿಂದ ಚೀನಿಯರು ವೈದ್ಯರಿಂದ ದೂರ ಇರುವುದು ಹೇಗೆ? ಇಲ್ಲಿದೆ ಅವರ ರೆಸಿಪಿ.

Read Full Story

04:21 PM (IST) Dec 23

8 ತಿಂಗಳಲ್ಲೇ ದೇವನಹಳ್ಳಿ ಪ್ಲ್ಯಾಂಟ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಿಸಿಕೊಂಡ ಫಾಕ್ಸ್‌ಕಾನ್‌!

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಫಾಕ್ಸ್‌ಕಾನ್ ದೇವನಹಳ್ಳಿಯಲ್ಲಿ ಐಫೋನ್ ಉತ್ಪಾದನೆಯನ್ನು ಪ್ರಾರಂಭಿಸಿತು. ಇದು ಐಫೋನ್ 16 ಉತ್ಪಾದನೆಯೊಂದಿಗೆ ಪ್ರಾರಂಭವಾಯಿತು ಮತ್ತು ಈಗ ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಉತ್ಪಾದಿಸುತ್ತಿದೆ.

 

Read Full Story

04:01 PM (IST) Dec 23

ಬೆಂಗಳೂರು ಉದ್ಯಮಿ ನಿಗೂಢ ಸಾವು, ಆಂಧ್ರದ ಮಾಜಿ ಸಂಸದನ ಪುತ್ರ, ಪುತ್ರಿ ಸೇರಿ ಮೂವರನ್ನು ಬಂಧಿಸಿದ ಸಿಬಿಐ

ರಿಯಲ್ ಎಸ್ಟೇಟ್ ಉದ್ಯಮಿ ಕೆ. ರಘುನಾಥ್  2019ರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಹತ್ವದ ಕ್ರಮ ಕೈಗೊಂಡಿದೆ. 6 ವರ್ಷಗಳ ಬಳಿಕ, ಮಾಜಿ ಸಂಸದ ಡಿ.ಕೆ.ಆದಿಕೇಶವುಲು ನಾಯ್ಡು ಅವರ ಪುತ್ರ ಡಿ.ಎ.ಶ್ರೀನಿವಾಸ್, ಪುತ್ರಿ ಡಿ.ಎ.ಕಲ್ಪಜಾ ಹಾಗೂ ಡಿವೈಎಸ್ಪಿ ಎಸ್.ವೈ. ಮೋಹನ್ ಅವರನ್ನು ಬಂಧಿಸಲಾಗಿದೆ.

Read Full Story

03:38 PM (IST) Dec 23

Bengaluru - ಯಲಹಂಕದಲ್ಲಿ ನಿರ್ಮಾಣವಾಗಲಿದೆ ಭಾರತದ ಮೊಟ್ಟಮೊದಲ, ಚೀನಾ ಸ್ಟೈಲ್‌ನ ಎತ್ತರಿಸಿದ ರೈಲ್ವೆ ಟರ್ಮಿನಲ್‌!

ಬೆಂಗಳೂರಿನ ನಾಲ್ಕನೇ ರೈಲ್ವೆ ಟರ್ಮಿನಲ್ ಮತ್ತು ಭಾರತದ ಮೊದಲ ಸಂಪೂರ್ಣ ಎತ್ತರದ ಕೋಚಿಂಗ್ ಟರ್ಮಿನಲ್ ಯಲಹಂಕದಲ್ಲಿರುವ ರೈಲ್ ವೀಲ್ ಫ್ಯಾಕ್ಟರಿ ಭೂಮಿಯಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ.

 

Read Full Story

03:17 PM (IST) Dec 23

ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!

ಬೆಂಗಳೂರಿನ ಖಾಸಗಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿಯೊಬ್ಬಳು ವಾರಾಂತ್ಯದಲ್ಲಿ ಮದುವೆ ಮಂಟಪಗಳಿಗೆ ನುಗ್ಗಿ ಚಿನ್ನಾಭರಣ ಕದಿಯುತ್ತಿದ್ದಳು. ಬಸವನಗುಡಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದು, ಆಕೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
Read Full Story

03:00 PM (IST) Dec 23

BBK 12 - ರಾಶಿಕಾ ಶೆಟ್ಟಿಯನ್ನು ಮಗಳಾಗಿ ಪಡೆಯೋಕೆ ಎಷ್ಟು ಜನ್ಮದ ಪುಣ್ಯ ಮಾಡಿದ್ದೆವೋ; ಆ ಸೀಕ್ರೆಟ್‌ ಬಿಚ್ಚಿಟ್ಟ ತಾಯಿ

Bigg Boss Kannada Season 12 Rashika Shetty: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಪೇರೆಂಟ್ಸ್‌ ವೀಕ್‌ ಇದೆ. ಕಳೆದ ಎರಡು ವಾರಗಳಿಂದಲೂ ರಾಶಿಕಾ ಶೆಟ್ಟಿ ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ.

 

Read Full Story

02:58 PM (IST) Dec 23

Birth Numerology - ಈ ದಿನಾಂಕಗಳಲ್ಲಿ ಹುಟ್ಟಿದ್ರೆ 35 ವರ್ಷದ ಬಳಿಕ ಜೀವನ ಪೂರ್ತಿ ಅದೃಷ್ಟಗಳ ಸುರಿಮಳೆ

ಕೆಲವರಿಗೆ ಯಶಸ್ಸು ತಡವಾಗಿ, ಅಂದರೆ 35 ವರ್ಷಗಳ ನಂತರ ಸಿಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ,  ಕೆಲವು ಜನ್ಮದಿನ ಹೊಂದಿದವರು ತಮ್ಮ ಕಠಿಣ ಪರಿಶ್ರಮದಿಂದಾಗಿ ಈ ವಯಸ್ಸಿನ ನಂತರ ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಯಾವುದು ಆ ಸಂಖ್ಯೆ? 

Read Full Story

02:29 PM (IST) Dec 23

ಕೊಡಬಾರದ ಪರೀಕ್ಷೆ ಕೊಟ್ರೀ.. Bigg Boss; ಅಂದು ನಟ ರಮೇಶ್‌ ಅರವಿಂದ್‌ಗೆ ಬಂದ ಸ್ಥಿತಿ ಧನುಷ್‌ ಗೌಡಗೆ ಬಂತು,

Bigg Boss Kannada Season 12 Episode: ರಮೇಶ್‌ ಅರವಿಂದ್‌, ಪ್ರೇಮಾ ಅವರ ‘ತುತ್ತಾ ಮುತ್ತಾ’ ಎನ್ನುವ ಸಿನಿಮಾವನ್ನು ನೋಡಿರಬಹುದು. ಅಲ್ಲಿ ರಮೇಶ್‌ ಅರವಿಂದ್‌ ಅವರು ಒದ್ದಾಡಿದಂತೆ, ಬಿಗ್‌ ಬಾಸ್‌ ಶೋನಲ್ಲಿ ಧನುಷ್‌ ಅವರು ಪರದಾಡುವ ಪರಿಸ್ಥಿತಿ ಬಂದಿದೆ. ಹಾಗಾದರೆ ಏನಾಯ್ತು?

Read Full Story

02:11 PM (IST) Dec 23

ಸೂಪರ್ ಪವರ್ ಪಡೆದುಕೊಳ್ಳಲು ದಿನಕ್ಕೆ ಎರಡು ಮೊಟ್ಟೆ ತಿನ್ನಿ

ಪ್ರತಿದಿನ ಮೊಟ್ಟೆ ಸೇವಿಸುವುದರಿಂದ ಪ್ರೋಟೀನ್ ಕೊರತೆ ನೀಗುತ್ತದೆ ಮತ್ತು ತೂಕ ಇಳಿಕೆಗೆ ಸಹಾಯವಾಗುತ್ತದೆ. ಇದು ಮೆದುಳು, ಕಣ್ಣು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
Read Full Story

01:56 PM (IST) Dec 23

ಇದೇನಿದು ಟ್ವಿಸ್ಟ್‌.. ನಾಗ ಚೈತನ್ಯ ಜೊತೆ ಸಮಂತಾ, ಶೋಭಿತಾ ಧೂಳಿಪಾಲ.. ಅಸಲಿ ಕಥೆ ಇಲ್ಲಿದೆ!

ಏನು! ಟೈಟಲ್ ನೋಡಿ ಶಾಕ್ ಆದ್ರಾ? ಸಮಂತಾ ಮತ್ತೆ ನಾಗಚೈತನ್ಯರನ್ನು ಭೇಟಿಯಾಗಿದ್ದೇಕೆ ಅಂತ ಯೋಚಿಸ್ತಿದ್ದೀರಾ? ಸ್ವಲ್ಪ ನಿಮ್ಮ ಯೋಚನೆ ನಿಲ್ಲಿಸಿ.. ಈ ಸ್ಟೋರಿ ಓದಿದ್ರೆ ಎಲ್ಲವೂ ನಿಮಗೇ ಅರ್ಥವಾಗುತ್ತೆ. ತಡ ಯಾಕೆ, ಒಮ್ಮೆ ನೋಡಿ.

Read Full Story

01:31 PM (IST) Dec 23

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!

ಇರುಳು ಕುರುಡು ಎಂದು ನಾಟಕವಾಡಿ ಹಗಲಲ್ಲೇ ಮನೆ ದೋಚುತ್ತಿದ್ದ ಅಂತರರಾಜ್ಯ ಖದೀಮನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ನಟನ ಮನೆ ಕಳ್ಳತನದ ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿಬಿದ್ದ ಈತನ ಕಥೆ ತಿಳಿಯಿರಿ. ಆರೋಪಿಯಿಂದ 65.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಶ.

Read Full Story

01:30 PM (IST) Dec 23

'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಎಂ.ಎಸ್. ಧೋನಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಬದಲಾಗಿ, ಧೋನಿಯ ನಾಯಕತ್ವದಲ್ಲೇ ತಮಗೆ ತಂಡದಲ್ಲಿ ಅವಕಾಶ ಸಿಕ್ಕಿದ್ದು ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

Read Full Story

01:15 PM (IST) Dec 23

ಪ್ರೀತಿಸಿ, ಮದುವೆಯಾಗಿ ಗಂಡನ ಜೊತೆ ನಿಂತು, ಚೆನ್ನೈನಲ್ಲಿ ಮನೆ ಮಾಡಿದ ಕನ್ನಡತಿ, ಕಿರುತೆರೆ ನಟಿ! Photos

ಪ್ರೀತಿ ಎಂದರೆ ಶಕ್ತಿ. ಪ್ರೀತಿ ಮಾಡುವವರು ಜೊತೆಯಾಗಿ ಬೆಳೆದು ಗೆದ್ದ ಉದಾಹರಣೆ ಸಾಕಷ್ಟಿವೆ. ಈಗ ಮಂಗಳೂರಿನ ಕನ್ನಡತಿ, ನಟಿ ಶ್ರೇಯಾ ಅಂಚನ್‌ ಅವರು ಲವ್‌ ಮ್ಯಾರೇಜ್‌ ಮಾಡಿಕೊಂಡಿದ್ದಲ್ಲದೆ, ಹೊಸ ಮನೆಗೆ ಕಾಲಿಟ್ಟಿದ್ದಾರೆ. ಶ್ರೇಯಾ ಅಂಚನ್‌ ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ. 

Read Full Story

01:09 PM (IST) Dec 23

ಹುಬ್ಬಳ್ಳಿ ಮರ್ಯಾದಾ ಹತ್ಯೆ ಮಾಸುವ ಮುನ್ನವೇ, ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಜಾತಿ ದ್ವೇಷಕ್ಕೆ ಬಲಿ!

ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆಗೆ ಅಪ್ಪನೇ ಗರ್ಭಿಣಿ ಮಗಳನ್ನು ಕೊಂದ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಬ್ಬ ಗರ್ಭಿಣಿ ಯುವತಿ ಜಾತಿ ದ್ವೇಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾಳೆ.

Read Full Story

01:04 PM (IST) Dec 23

ದುಬೈನಲ್ಲೂ Bigg Boss ಕಾವ್ಯಾ ಶೈವ ಹವಾ - ಅಭಿಮಾನಿಗಳು ಏನು ಹೇಳಿದ್ರು ನೋಡಿ

ಬಿಗ್‌ಬಾಸ್ ಸ್ಪರ್ಧಿ ಕಾವ್ಯಾ ಶೈವ ಅವರು ತಮ್ಮ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಅವರ ಜನಪ್ರಿಯತೆ ಇದೀಗ ದುಬೈವರೆಗೂ ತಲುಪಿದೆ. ದುಬೈನಲ್ಲಿರುವ ಅವರ ಅಭಿಮಾನಿಗಳು 'ವೋಟ್ ಫಾರ್ ಕಾವ್ಯಾ' ಎಂದು ಪ್ರಚಾರ ಮಾಡುತ್ತಿದ್ದಾರೆ. 

Read Full Story

12:53 PM (IST) Dec 23

ಯುದ್ಧ ಬೇಡ ಸಿನಿಮಾ ನೋಡೋಣ - ಅಡ್ವಾನ್ಸ್ ಟಿಕೆಟ್​ ಬುಕ್ಕಿಂಗ್​​ನಲ್ಲಿ ದಾಖಲೆ ಬರೆದ 45 ಸಿನಿಮಾ

ಸ್ಯಾಂಡಲ್​ವುಡ್​ನಲ್ಲಿ ಈಗ ಯುದ್ಧದ ಕಾರ್ಮೋಡ ಕವಿದಿದೆ.. ಈ ಯುದ್ಧ ಯಾರ ಮೇಲೆ..? ಯಾಕೆ..? ಆದ್ರೆ ಯುದ್ಧ ಮಾಡೋರು ಮಾಡಿಕೊಳ್ಳಲಿ. ನಾವು ಸಿನಿಮಾ ಮಾಡಿ ಗೆಲ್ಲೋಣ ಅಂತ 45 ಸ್ಟಾರ್ಸ್ ಸೈಲೆಂಟ್ ಆಗಿ ಮುನ್ನುಗ್ಗುತ್ತಿದ್ದಾರೆ.

Read Full Story

12:50 PM (IST) Dec 23

ಗಾಳಿಗೆ ಗುಂಡುಹಾರಿಸಿ ಬಿಲ್ಡಪ್ ಕೊಟ್ಟಿದ್ದ ‘ಗನ್ ಸ್ವಾಮೀಜಿ’ ಅರೆಸ್ಟ್ - ಉಡಚಣ ಮಠದ ಶಾಂತಲಿಂಗ ಶ್ರೀಗಳು ಖಾಕಿ ವಶಕ್ಕೆ!

ಕಲಬುರಗಿಯ ಉಡಚಣ ಮಠದ ಆವರಣದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದ ಶಾಂತಲಿಂಗ ಸ್ವಾಮೀಜಿ ಬಂಧನವಾಗಿದೆ. ವಿವಾದಿತ ಸ್ವಾಮೀಜಿಯ ಬಂಧನದ ಹಿಂದಿನ ಕಾರಣ, ವೈರಲ್ ವಿಡಿಯೋ ಬಗ್ಗೆ ಪೂರ್ಣ ಮಾಹಿತಿ ತಿಳಿಯಿರಿ.

Read Full Story

12:31 PM (IST) Dec 23

ಸುದೀಪ್ ಮಾತಿನ ಏಟು.. ವಿಜಯಲಕ್ಷ್ಮೀ ಎದಿರೇಟು! ಕಿಚ್ಚನ ಜೊತೆ ದಾಸನ ಪತ್ನಿ.. ಫೋಟೊ ಹಿಂದಿನ ವಿಷ್ಯ!

ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್.. ಫ್ಯಾನ್ಸ್ ವಾರ್​​.. ಪರ್ವ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಮಾರ್ಕ್ ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಸುದೀಪ್ ಯುದ್ಧಕ್ಕೆ ಸಿದ್ದ ಮಾತಿಗೆ ಬದ್ಧ ಅಂತ ಹೇಳಿದ್ರು. ಅದಕ್ಕೆ ಟಾಂಗ್ ಕೊಡುವಂತೆ ವಿಜಯಲಕ್ಷ್ಮೀ ಮಾತನಾಡಿದ್ರು.

Read Full Story

12:29 PM (IST) Dec 23

ರಾಹುಲ್ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ 8 ಪುಟಗಳ ಪತ್ರ; ಮಹಾನಾಯಕನ ಬಣ್ಣ ಬಯಲಿಗೆ ಯತ್ನ!

ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್. ರಾಜಣ್ಣ ರಾಹುಲ್ ಗಾಂಧಿಗೆ ಬರೆದ ಪತ್ರದ ಸಂಪೂರ್ಣ ವಿವರ. ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನಕ್ಕೆ ಕಾರಣವೇನು? ಪತ್ರದ ಸ್ಫೋಟಕ ಅಂಶಗಳನ್ನು ತಿಳಿಯಲು ಓದಿ.

Read Full Story

12:18 PM (IST) Dec 23

ಯಾರಿಗೂ ಕ್ಯಾರೆ ಎನ್ನದ, ಬೇರೆಯವ್ರ ಭಾವನೆಗೆ ಬೆಲೆ ಕೊಡದ Gilli Nata ಗೌರವ ಕೊಡೋದು ಇವರಿಗೆ ಮಾತ್ರ; ರಜತ್‌ ರಿವೀಲ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಾತು, ಡೈಲಾಗ್‌, ಕಿಲಾಡಿ ಬುದ್ಧಿಯಿಂದಲೇ ವೀಕ್ಷಕರ ಮನಸ್ಸು ಗೆದ್ದಿರುವ ಮಂಡ್ಯದ ಹುಡುಗ ಗಿಲ್ಲಿ ನಟನ ಬಗ್ಗೆ ಮನೆಯವರಿಗೆ ಒಂದೆರಡು ದೂರಿದೆ. ಈ ಬಗ್ಗೆ ರಜತ್‌ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

Read Full Story

12:14 PM (IST) Dec 23

ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ ಸರಣಿ - ವಿಜಯಪುರ, ರಾಯಚೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭ್ರಷ್ಟರ ಭೇಟೆ!

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೃಷಿ ಅಧಿಕಾರಿ, ಸಹಕಾರ ಸಂಘದ ಸಿಇಒ, ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿಗಳ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆಯಾಗಿವೆ.

Read Full Story

12:00 PM (IST) Dec 23

Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! ಜಾಹ್ನವಿ ಶಾಕಿಂಗ್​ ವಿಷ್ಯ ರಿವೀಲ್​

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಆ್ಯಂಕರ್​ ಜಾಹ್ನವಿ, ತಮ್ಮ ಎಲಿಮಿನೇಷನ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮನೆಯೊಳಗಿನ ಜಗಳಗಳಿಂದಾಗಿ ತಮ್ಮ ಇಮೇಜ್ ಬದಲಾಗಿದ್ದು, ಮದುವೆ ಪ್ರಸ್ತಾಪಗಳು ಬರುವುದೂ ನಿಂತುಹೋಗಿದೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Read Full Story

More Trending News