ಬೆಂಗಳೂರು (ಜು.22): ಮುಡಾ ಹಗರಣದ ವಿಚಾರವಾಗಿ ಜಾರಿ ನಿರ್ದೇಶನಾಲದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕೇಸ್ ಇಡಿ ಕುಣಿಕೆಯಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಬಿಎಂ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ಗೆ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಜಕೀಯ ಹೋರಾಟಗಳು ಚುನಾವಣೆಯಲ್ಲಿ ನಡೆಯಲಿ, ಇಲ್ಲಿ ಬೇಡ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ತಿಳಿಸಿದೆ. ಅದರೊಂದಿಗೆ ಅಧಿಕಾರ ಹಸ್ತಾಂತರದ ಗೊಂದಲದ ವೇಳೆ ಸಿಎಂಗೆ ಮಹತ್ವದ ರಾಜಕೀಯ ಜಯ ಸಿಕ್ಕಂತಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:05 PM (IST) Jul 22
ವಿಶ್ವದ ಶ್ರೀಮಂತ ಸಂಸ್ಥೆ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಮಸೂದೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮಸೂದೆ ಪ್ರಕಾರ ಇತರ ಕ್ರೀಡಾ ಫೆಡರೇಷನ್ ಮಾದರಿಯಲ್ಲಿ ಬಿಸಿಸಿಐಗೂ ಕೂಡ ಈ ನೆಲಸದ ಕಾನೂನು ಅನ್ವಯವಾಗಲಿದೆ.
10:59 PM (IST) Jul 22
10:37 PM (IST) Jul 22
ಹಿಮೇಶ್ ರೆಶಮಿಯಾ ದೆಹಲಿ ಮ್ಯೂಸಿಕ್ ಕಾನ್ಸರ್ಟ್ ಅದ್ಧೂರಿಯಾಗಿ ನಡೆದಿದೆ. ಜನಸಾಗರವೇ ಸೇರಿತ್ತು. ಹಿಮೇಶ್ ಹಾಡು, ಮ್ಯೂಸಿಕ್ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕಾಂಡೋಮ್ ಜಾಹೀರಾತು ಭಾರಿ ವೈರಲ್ ಆಗಿದೆ.
09:44 PM (IST) Jul 22
ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಸೇರಿದಂತೆ ಯಾವುದೇ ರೀತಿಯ ಬೆಸ್ಕಾಂ ಹಾಗೂ 5 ಎಸ್ಕಾಂಗಳ ಆನ್‌ಲೈನ್ ಸೇವೆಗಳು ಎರಡು ದಿನ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.
08:59 PM (IST) Jul 22
ಪ್ರತಿ ದಿನ ಕೆಲಸ ಸುಲಭವಾಗಲು ಸುಲಭದ ಪಾಸ್‌ವರ್ಡ್ ಹಾಕಿದ್ದಾನೆ. ಆದರೆ ಹ್ಯಾಕರ್ಸ್ ಈ ಪಾಸ್‌ವರ್ಡ್ ಗೆಸ್ ಮಾಡಿ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಅಲ್ಪ ಸ್ವಲ್ಪ ನಷ್ಟವಾಗುತ್ತಿತ್ತು. ಆದರೆ ಖದೀಮರು ಕಂಪನಿಯನ್ನೇ ಹ್ಯಾಕ್ ಮಾಡಿ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಕಂಪನಿಗೆ ಬೀಗ ಬಿದ್ದಿದೆ.
08:52 PM (IST) Jul 22
08:15 PM (IST) Jul 22
ಎರಡೂ ವರೆ ವರ್ಷದ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಜಿಗಿದ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಹುಟುಕಾಟ ನಡೆಸಿದ್ದ ರಕ್ಷಣಾ ತಂಡ ಕೊನೆಗೂ ಮಗುವಿನ ಮೃತದೇಹ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ.
07:54 PM (IST) Jul 22
07:42 PM (IST) Jul 22
07:29 PM (IST) Jul 22
ವೈದ್ಯರ ಭೇಟಿಗೆ ಒಂದ್ ಐದ್ ನಿಮಿಷ ಕುಳಿತುಕೊಳ್ಳಿ. ಕ್ಲೀನಿಕ್ ರಿಸೆಪ್ಶನಿಸ್ಟ್ ಇಷ್ಟು ಹೇಳಿದ್ದೇ ತಡ, ವ್ಯಕ್ತಿಯೊಬ್ಬ ಗರಂ ಆಗಿದ್ದಾನೆ. ಮಹಿಳಾ ರೆಸೆಪ್ಶನಿಸ್ಟ್ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
06:56 PM (IST) Jul 22
06:48 PM (IST) Jul 22
06:45 PM (IST) Jul 22
ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ. ಲ್ಯಾಂಡ್ ಆಗುತ್ತಿದ್ದಂತೆ ದಿಡೀರ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
06:22 PM (IST) Jul 22
ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಲಿಂಗಾಯತ ಸಮುದಾಯದ ಏಕತೆ ಮತ್ತು ಹಕ್ಕುಗಳಿಗಾಗಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜನಗಣತಿಯಲ್ಲಿ 'ವೀರಶೈವ ಲಿಂಗಾಯತ' ಎಂದು ನೋಂದಾಯಿಸಿಕೊಳ್ಳುವಂತೆ ಸೂಚಿಸಿಲಾಗಿದೆ.
06:15 PM (IST) Jul 22
ಮದುವೆಯಾಗಿ 18 ತಿಂಗಳಿಗೆ ವಿಚ್ಚೇದನ ಅರ್ಜಿ ಕೋರ್ಟ್ ಮೆಟ್ಟಿಲೇರಿದೆ. ಪತಿಯಿಂದ ಜೀವನಾಂಶವಾಗಿ ಪತ್ನಿ ಕೇಳಿದ್ದು 12 ಕೋಟಿ ರೂಪಾಯಿ, ಮುಂಬೈನಲ್ಲೊಂದು ಮನೆ, BMW ಕಾರು. ಈ ಬೇಡಿಕೆ ಆಲಿಸಿದ ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆಯೊಂದನ್ನು ಕೇಳಿದೆ.
06:11 PM (IST) Jul 22
06:06 PM (IST) Jul 22
ಸಿನಿಮಾದ ಶೂಟಿಂಗ್ ಸಮಯದಲ್ಲಿ ಗುಂಡೇಟಿಗೆ ತಾವು ಬಲಿಯಾಗಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿ ನಟಿ ಶಿಲ್ಪಾ ಶಿರೋಡ್ಕರ್ ಮೂರ್ಚೆ ಹೋಗಿದ್ದರಂತೆ. ಆ ಘಟನೆಯನ್ನು ವಿವರಿಸಿದ್ದಾರೆ ನೋಡಿ!
05:53 PM (IST) Jul 22
05:20 PM (IST) Jul 22
ನಾಟಕಕ್ಕಾಗಿ ಮೊದಲ ಬಾರಿಗೆ ಬೀಡಿ ಸೇದಲು ಹೋಗಿ ತುಟಿ, ರೆಪ್ಪೆ ಎಲ್ಲಾ ಸುಟ್ಟುಕೊಂಡು ಪಡಬಾರದ ಪಾಡುಪಟ್ಟ ಬಗ್ಗೆ ಕರ್ಣ ಸೀರಿಯಲ್ ಕರ್ಣ ಉರ್ಫ್ ವಿನಯ್ ಕಶ್ಯಪ್ ಹೇಳಿದ್ದಾರೆ ಕೇಳಿ...
03:53 PM (IST) Jul 22
ಸೀತಾರಾಮ ಸೀರಿಯಲ್ ಸೂಪರ್ ಜೋಡಿಯಾಗಿದ್ದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಅವರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ವೈಷ್ಣವಿ ಅವರ ಮದುವೆಯಾಗಿದ್ದು, ಈಗ ಗಗನ್ ಅವರ ಮದ್ವೆ ಯಾವಾಗ ಎಂದು ಕೇಳ್ತಿರೋ ನಡುವೆಯೇ ನಟ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಏನಿದೆ ಅದರಲ್ಲಿ?
03:52 PM (IST) Jul 22
03:40 PM (IST) Jul 22
ವಾರ್ಷಿಕ ಟೋಲ್ ಪಾಸ್ ನಿಯಮ ಆಗಸ್ಟ್ 15ರಿಂದ ಜಾರಿಯಾಗುತ್ತಿದೆ. ಕಾರು, ವ್ಯಾನ್, ಜೀಪ್ ಸೇರಿದಂತೆ ಖಾಸಗಿ ವಾಹನಗಳು ವಾರ್ಷಿಕ ಟೋಲ್ ಪಾಸ್ ಪಡೆಯಬುಹುದು. ಟೋಲ್ ಪಾಸ್ ಬೆಲೆ ಎಷ್ಟು? ಪಾಸ್ ಆ್ಯಕ್ಟಿವೇಟ್ ಮಾಡುವುದರಿಂದ ಎಷ್ಟು ಉಳಿತಾಯ ಮಾಡಬಹುದು?
03:27 PM (IST) Jul 22
ಭಾರತೀಯ ಸೇನೆಯು ಅಮೆರಿಕದಿಂದ ಮೂರು ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಿದೆ. ಪಾಕಿಸ್ತಾನದ ಗಡಿಯಲ್ಲಿ ನಿಯೋಜನೆಗೊಳ್ಳಲಿರುವ ಈ ಹೆಲಿಕಾಪ್ಟರ್‌ಗಳು ಸೇನೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
02:53 PM (IST) Jul 22
02:42 PM (IST) Jul 22
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‌ಪೇಟ್ ಬಳಿ ಮಣಿಪುರದ ಲಾಲ್ಜಮ್ಲುವೈ ಮತ್ತು ಮಿಜೋರಾಂನ ಲಾಲ್ತಾಂಗ್ಲಿಯಾನಿ ಎಂದು ಗುರುತಿಸಲಾದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
02:24 PM (IST) Jul 22
ಯೆಮೆನ್ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ನರ್ಸ್ ನಿಮಿಷ ಪ್ರಿಯಾ ಅವರ ಶಿಕ್ಷೆ ರದ್ದಾಗಿರುವುದಾಗಿ ಧರ್ಮಗುರು ಕೆ.ಎ ಪಾಲ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಅವರು ನೀಡಿರೋ ಹೇಳಿಕೆ ಏನು?
01:33 PM (IST) Jul 22
01:14 PM (IST) Jul 22
ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ 1’ ಶೂಟಿಂಗ್ ಮುಕ್ತಾಯಗೊಂಡಿದ್ದು, ಆ.2ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ
01:08 PM (IST) Jul 22
ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಹರಿದಾಡ್ತಿರೋ ಬೆನ್ನಲ್ಲೇ ಕುತೂಹಲದ ಪೋಸ್ಟ್ ಒಂದನ್ನು ಶೇರ್ ಮಾಡಿ ಶಾಕ್ ಕೊಟ್ಟಿದ್ದಾರೆ. ಅದರಲ್ಲಿ ಇರೋದೇನು?
12:39 PM (IST) Jul 22
ಲಾಸ್ಟ್ ಬೆಂಚ್ ಪದ್ಧತಿಗೆ ಕೋಕ್ ನೀಡುವ ಮೂಲಕ ಅರ್ಧ ಚಂದ್ರಾಕೃತಿಯಲ್ಲಿ ಬೆಂಚ್‌ಗಳನ್ನು ಅಳವಡಿಸಿ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯೋಗವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಅನುದಾನಿತ ಮತ್ತು ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಸೋಮವಾರ ಆರಂಭಿಸಿದೆ.
11:47 AM (IST) Jul 22
ಕೊರೋನಾ ಕಾಲದಲ್ಲಿ ಉದ್ಯೋಗ ಕಳೆದುಕೊಂಡವರು, ಉದ್ಯಮ ಮುಚ್ಚಿದವರು ಅಸಂಖ್ಯ. ಕೊರೋನಾ ಜೀವವನ್ನು ಮಾತ್ರವಲ್ಲ ಕೋಟ್ಯಂತರ ಜನರ ಜೀವನವನ್ನೂ ಕಿತ್ತುಕೊಂಡಿತು. ಆದರೆ, ಬೆಂಗಳೂರಿನ ಗೃಹಿಣಿಯೊಬ್ಬರು ಕೊರೋನಾ ಕಾಲದಲ್ಲೇ ಉದ್ಯಮಿಯಾಗಿ ಬೆಳೆದು ನಿಂತರು.
11:26 AM (IST) Jul 22
ಒಲ್ಲೂರು ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಫರ್ಷದ್ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ ಶ್ರೀಲಕ್ಷ್ಮಿ ಅವರು ಹೇಳಿಕೆ ನೀಡಲು ನ್ಯಾಯಾಲಯಕ್ಕೆ ಬಂದಿದ್ದರು.
11:18 AM (IST) Jul 22
ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ - ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿ
10:20 AM (IST) Jul 22
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ನಗರ ಪಾಲಿಕೆ ರಚನೆ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದರೂ ಸಾರ್ವಜನಿಕರಷ್ಟೇ ಅಲ್ಲದೆ ಜನಪ್ರತಿನಿಧಿಗಳೂ ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
10:10 AM (IST) Jul 22
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಂಡ ಮತ್ತು ಬಡ್ಡಿ ಕಟ್ಟಬೇಕು ಎಂಬ ನೋಟಿಸ್ ನೋಡಿ ನಮಗೆ ರಕ್ತದೊತ್ತಡ (ಬಿ.ಪಿ) ಹೆಚ್ಚಿದ್ದು, ಆತಂಕವಾಗಿದೆ. ನಿತ್ಯದ ದುಡಿಮೆ, ಕೆಲಸ ಕಾರ್ಯಗಳನ್ನು ಬಿಟ್ಟು ಈ ನೋಟಿಸ್‌ಗೆ ಏನು ಮಾಡುವುದು ಎಂಬ ಚಿಂತೆ ಶುರುವಾಗಿದೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡರು.
09:29 AM (IST) Jul 22
ನಾವು ಮಾತನಾಡಲು ಆರಂಭಿಸಿದರೆ ಇ.ಡಿ ವಿರುದ್ಧ ಬಹಳ ಕಟುವಾಗಿ ಮಾತನಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಘಟನೆಗಳನ್ನು ನಾವು ಕಂಡಿದ್ದೇವೆ. ಇ.ಡಿ ದೇಶಾದ್ಯಂತ ಈ ರೀತಿಯ ಕೆಟ್ಟ ಪ್ರವೃತ್ತಿ ಹರಡುವುದನ್ನು ನಾವು ಸಹಿಸುವುದಿಲ್ಲ ಎಂದು ಇ.ಡಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
09:13 AM (IST) Jul 22
ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್ ಮಂಗಳವಾರ ಸಂಜೆಯೊಳಗೆ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್
09:08 AM (IST) Jul 22
ನಗದು ಬಹುಮಾನಕ್ಕಾಗಿ ಪ್ಯಾರಾ ಸ್ವಿಮ್ಮರ್, 2023 ರಲ್ಲಿ ಹೈಕೋರ್ಟ್ ಮೊರೆ ಹೋದರು ಮತ್ತು ನೋಟಿಸ್ ಜಾರಿಯಾದ ನಂತರ 4.74 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿತ್ತು.
07:45 AM (IST) Jul 22
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ವಿರುದ್ಧ ತನಿಖೆಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
07:45 AM (IST) Jul 22
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.