Published : Feb 22, 2026, 06:35 AM ISTUpdated : Feb 22, 2026, 11:22 PM IST

Karnataka News Live: Channagiri woman death - ಇಂಜೆಕ್ಷನ್ ಮಾಡಿಸಿಕೊಳ್ಳಲು ಹೋದ ಮಹಿಳೆ ಆಸ್ಪತ್ರೆಯಲ್ಲೇ ಸಾವು!

ಸಾರಾಂಶ

‘ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಏನಾಗುತ್ತದೆಯೋ ಅದು ನನಗೆ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಷಯ. ಹೈಕಮಾಂಡ್‌ ಮೇಲೆ ನನಗೆ ವಿಶ್ವಾಸವಿದೆ. ಏನು ಮಾಡಬೇಕು ಎಂಬುದು ಅವರಿಗೆ ತಿಳಿದಿದೆ. ಅವರು ಕರ್ನಾಟಕದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾರೆಂದು ನನಗೆ ಖಾತ್ರಿಯಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

medical Negligence Alleged in Davanagere Woman Passes Away in Channagiri Hospital After Routine Injection

11:22 PM (IST) Feb 22

Channagiri woman death - ಇಂಜೆಕ್ಷನ್ ಮಾಡಿಸಿಕೊಳ್ಳಲು ಹೋದ ಮಹಿಳೆ ಆಸ್ಪತ್ರೆಯಲ್ಲೇ ಸಾವು!

ದಾವಣಗೆರೆಯ ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದ ಕೆಲವೇ ನಿಮಿಷಗಳಲ್ಲಿ ಅನುಷಾ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.

Read Full Story

11:00 PM (IST) Feb 22

ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ - ಎಚ್‌ಡಿ ಕುಮಾರಸ್ವಾಮಿ ಸೇರಿ ಗಣ್ಯರಿಗೆ 'ರಾಯರ ಅನುಗ್ರಹ' ಪ್ರಶಸ್ತಿ ಪ್ರದಾನ!

ರಾಯಚೂರಿನ ಮಂತ್ರಾಲಯದಲ್ಲಿ ಜರುಗುತ್ತಿರುವ 'ಗುರು ವೈಭವೋತ್ಸವ' ಸಪ್ತಮಿ ಕಾರ್ಯಕ್ರಮದ ಭವ್ಯ ಫೋಟೋ ಗ್ಯಾಲರಿ ವರದಿ ಇಲ್ಲಿದೆ

 

Read Full Story

10:11 PM (IST) Feb 22

ಮುಡಾ ಹಗರಣ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್, ದೂರು ಕೊಟ್ಟ ಆ ಮಹಿಳೆ ಯಾರು?

ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ವಿರುದ್ಧ ಬೆಂಗಳೂರಿನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಪತಿಯ ಸಾವಿನ ಮರು ತನಿಖೆಗೆ ಒತ್ತಾಯಿಸಿ ಸ್ನೇಹಮಯಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪವಿತ್ರಾ ಎಂಬ ಮಹಿಳೆ ದೂರು ನೀಡಿದ್ದಾರೆ. 

Read Full Story

09:47 PM (IST) Feb 22

Bagalkot Shivaji Jayanti postponed - ನಾಳೆ ನಡೆಯಬೇಕಿದ್ದ ಭವ್ಯ ಶಿವಾಜಿ ಜಯಂತಿ, ಶೋಭಾಯಾತ್ರೆ ಈ ಒಂದು ಕಾರಣಕ್ಕೆ ದಿಢೀರ್ ಮುಂದೂಡಿಕೆ!

ಬಾಗಲಕೋಟೆ ನವನಗರದಲ್ಲಿ ನಡೆಯಬೇಕಿದ್ದ 396ನೇ ಶಿವಾಜಿ ಜಯಂತ್ಯೋತ್ಸವವನ್ನು ಮುಂದೂಡಲಾಗಿದೆ. ಮುಖ್ಯ ಅತಿಥಿ, ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿರುವುದೇ ಇದಕ್ಕೆ ಕಾರಣವಾಗಿದೆ.

Read Full Story

09:25 PM (IST) Feb 22

Bagalkote Tragedy - ಡಿವೈಡರ್‌ಗೆ ಡಿಕ್ಕಿ ಹೊಡೆದು ಕ್ರೆಟಾ ಕಾರು ಪಲ್ಟಿ, ಎಂಜಿನಿಯರ್ ಪತ್ನಿ ಸಾವು!

Engineer s Wife Killed as Creta Car Hits Divider : ಬಾಗಲಕೋಟೆಯ ನವನಗರದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಬಿಟಿಡಿಎ ಇಂಜಿನಿಯರ್ ಪತ್ನಿ ದೀಪು ನೋಟಗಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಅವರ 6 ವರ್ಷದ ಮಗನ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

07:54 PM (IST) Feb 22

Bandipur safari restart details ರೈತರ ವಿರೋಧದ ನಡುವೆಯೇ ಪೊಲೀಸ್ ಭದ್ರತೆಯಲ್ಲಿ ಸಫಾರಿ ಪುನರಾಂಭ!

ಹುಲಿ ದಾಳಿಯಿಂದ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿಯು, ರೈತ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಪೊಲೀಸ್ ಸರ್ಪಗಾವಲಿನಲ್ಲಿ ಪುನರಾರಂಭಗೊಂಡಿದೆ. ಶೇ. 50ರಷ್ಟು ವಾಹನ ಬಳಕೆ ಮತ್ತು ಪರಿಷ್ಕೃತ ಸಮಯದಂತಹ ಮಾರ್ಪಾಡುಗಳೊಂದಿಗೆ ಆರಂಭವಾದ ಮೊದಲ ದಿನವೇ ಪ್ರವಾಸಿಗರು ಹುಲಿ, ಆನೆಗಳನ್ನು ಕಂಡು ಸಂತಸಪಟ್ಟರು.
Read Full Story

07:27 PM (IST) Feb 22

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ ಭಾರೀ ನೇಮಕಾತಿ, ಬಿಇ-ಬಿಟೆಕ್ ಪದವೀಧರರ ಭವಿಷ್ಯಕ್ಕೆ ಹೊಸ ದಾರಿ!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) 2026ನೇ ಸಾಲಿಗೆ 608 ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅರ್ಹ ಬಿಇ/ಬಿಟೆಕ್ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ,  

Read Full Story

07:20 PM (IST) Feb 22

Bigg Boss ಅಶ್ವಿನಿ ಗೌಡ - ಗಿಲ್ಲಿ ನಟ ಮಂಡ್ಯದಲ್ಲಿ ಮುಖಾಮುಖಿ! ಈ ಬಾರಿ ಇಬ್ಬರ ನಡುವೆ ರೋಚಕ ಟ್ವಿಸ್ಟ್​

ಬಿಗ್‌ಬಾಸ್‌ 12ರ ವಿಜೇತ ಗಿಲ್ಲಿ ನಟನ ಬಗ್ಗೆ ಅಸಮಾಧಾನ ಹೊಂದಿದ್ದ ಅಶ್ವಿನಿ ಗೌಡ, ಇದೀಗ ತಮ್ಮ ನಿಲುವನ್ನು ಬದಲಿಸಿದಂತೆ ಕಾಣುತ್ತಿದೆ. ಇತ್ತೀಚೆಗೆ 'ಹಯಗ್ರೀವ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಗಿಲ್ಲಿ ನಟನನ್ನು 'ಮಾವನ ಮಗ' ಎಂದು ಸಂಬೋಧಿಸಿದ್ದಾರೆ.

Read Full Story

07:14 PM (IST) Feb 22

ನಿಮ್ಹಾನ್ಸ್ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿ 2026, ನಿಮ್ಮ ಭವಿಷ್ಯ ಬದಲಿಸುವ ಅವಕಾಶ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಬೆಂಗಳೂರಿನಲ್ಲಿ 52 ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 10ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story

07:08 PM (IST) Feb 22

ಚಿಕ್ಕಮಗಳೂರು - ಕಾಡಾನೆ ದಾಳಿಗೆ ಮಹಿಳೆ ಬಲಿ, ರಣಾಂಗಣವಾದ ಕಡಬಗೆರೆ, ಕಲ್ಲು ತೂರಾಟ, ಲಾಠಿ ಚಾರ್ಜ್‌!

ಚಿಕ್ಕಮಗಳೂರಿನ ಕಡಬಗೆರೆಯಲ್ಲಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾದ ನಂತರ, ಆನೆ ಹಾವಳಿಗೆ ಶಾಶ್ವತ ಪರಿಹಾರ ಕೋರಿ ಸ್ಥಳೀಯರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ವಿಕೋಪಕ್ಕೆ ತಿರುಗಿ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ, ಕಲ್ಲು ತೂರಾಟ ಹಾಗೂ ಲಾಠಿ ಚಾರ್ಜ್.

Read Full Story

06:59 PM (IST) Feb 22

ಆರ್‌ಬಿಐ ಸಹಾಯಕ ಹುದ್ದೆಗಳ ನೇಮಕಾತಿ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಪದವೀಧರರಿಗೆ ಸುವರ್ಣಾವಕಾಶ

RBI 2026ರ ಸಾಲಿನ 650 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವೀಧರರಿಗೆ ಕೇಂದ್ರ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಹಾಗೂ ಭತ್ಯೆಗಳು ಲಭ್ಯವಿವೆ.

Read Full Story

06:41 PM (IST) Feb 22

Sullia - ಕ್ರಾಂತಿಗಳ ಊರು ಸುಳ್ಯ ತಾಲೂಕಿಗೆ ಈಗ 60ರ ಹರೆಯ, ದಕ್ಷಿಣದ ಕನ್ನಡದ ಈ ತಾಲೂಕು ಕೊಡುಗೆ ಅಪಾರ

1965ರಲ್ಲಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರಿಂದ ಉದ್ಘಾಟನೆಗೊಂಡ ಸುಳ್ಯ ತಾಲೂಕು 60ವರ್ಷಗಳನ್ನು ಪೂರೈಸಿದೆ. ಒಂದು ಕಾಲದಲ್ಲಿ ಮುಳಿಹುಲ್ಲಿನ ಗುಡಿಸಲುಗಳ ಊರಾಗಿದ್ದ ಸುಳ್ಯವು,  ತಾಲೂಕಾಗಿ ರೂಪುಗೊಂಡು, ಇಂದು ಶೈಕ್ಷಣಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಬೆಳೆದು ನಿಂತಿದೆ.

Read Full Story

06:39 PM (IST) Feb 22

ದರ್ಶನ್​ ಬಗ್ಗೆ ಗುಡ್​ನ್ಯೂಸ್​ ಕೊಟ್ಟ ವಿಜಯಲಕ್ಷ್ಮಿ - ಕುಣಿದಾಡಿದ ಅಭಿಮಾನಿಗಳು- ಬಿಡುಗಡೆ ಯಾವಾಗ?

'ಹಯಗ್ರೀವ' ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಜೈಲಿನಲ್ಲಿರುವ ತಮ್ಮ ಪತಿಯ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳ ಬೆಂಬಲದಿಂದ ದರ್ಶನ್ ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂದು ತಿಳಿಸಿ, ಅಭಿಮಾನಿಗಳ ಆತಂಕವನ್ನು ದೂರ ಮಾಡಿದ್ದಾರೆ.
Read Full Story

06:29 PM (IST) Feb 22

ಕಾರವಾರಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್; ಮುಂದಿನ ಬಜೆಟ್‌ನಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ!

Karwar Super Specialty Hospital ಕಾರವಾರದಲ್ಲಿ 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಸತೀಶ್ ಸೈಲ್ ಅವರ ಕೋರಿಕೆಯ ಮೇರೆಗೆ ಮುಂದಿನ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು. 

Read Full Story

06:16 PM (IST) Feb 22

ಆರೋಗ್ಯಕ್ಕೆ ಬೇಕು ತಂಗಳನ್ನ - ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ

ಆಧುನಿಕ ಆಹಾರ ಪದ್ಧತಿಯಿಂದ ಹೆಚ್ಚುತ್ತಿರುವ ರೋಗಗಳ ನಡುವೆ, ನಮ್ಮ ಹಿರಿಯರ ಆಹಾರವಾದ ತಂಗಳನ್ನದ ಮಹತ್ವವನ್ನು ನಟರಾದ ಸತೀಶ್ ನಿನಾಸಂ ಮತ್ತು ಸಪ್ತಮಿಗೌಡ ವಿವರಿಸಿದ್ದಾರೆ. ಶುಗರ್ ನಿಯಂತ್ರಣ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ಹೊಂದಿರುವ ತಂಗಳನ್ನದ ಬಗ್ಗೆ ವೈದ್ಯರೂ ಶಿಫಾರಸು ಮಾಡುತ್ತಾರೆ ಎಂದಿದ್ದಾರೆ.

Read Full Story

05:58 PM (IST) Feb 22

ಬೆಂಗಳೂರು - ಮಾದಾವರ ಮೆಟ್ರೋ ನಿಲ್ದಾಣ ಬಳಿ 4 ವಾಹನಗಳ ಮಧ್ಯೆ ಸರಣಿ ಅಪಘಾತ! 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಬೆಂಗಳೂರಿನ ಮಾದಾವರ ಮೆಟ್ರೋ ನಿಲ್ದಾಣದ ಬಳಿಯ ಪ್ಲೈಓವರ್ ಮೇಲೆ KSRTC ಬಸ್ ಸೇರಿದಂತೆ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Read Full Story

05:56 PM (IST) Feb 22

ಕಾರವಾರದಲ್ಲಿ ಆಸ್ಪತ್ರೆ ಉದ್ಘಾಟನೆ; ಪಕ್ಕದಲ್ಲೇ ಇದ್ದರೂ ಸಿಎಂ-ಡಿಸಿಎಂ ನಡುವೆ ಮಾತಿಲ್ಲ, ಕಥೆಯಿಲ್ಲ!

ಕಾರವಾರದಲ್ಲಿ 450 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಆದರೆ, ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಇಬ್ಬರೂ ನಾಯಕರು ಪರಸ್ಪರ ಮಾತನಾಡದೆ ಮೌನ ವಹಿಸಿದ್ದು, ಅವರ ನಡುವಿನ ಅಸಮಾಧಾನ ಮತ್ತೆ ಬಹಿರಂಗ?

Read Full Story

05:30 PM (IST) Feb 22

ಬಿಜೆಪಿ ಶಾಸಕನ ಮೇಲೆ ಲೋಕಾಯುಕ್ತ ದಾಳಿ - ನಮಗೂ ಇದಕ್ಕೂ ಸಂಬಂಧವಿಲ್ಲ ಎಂದ ಡಿಸಿಎಂ, 'ಇಕ್ಬಾಲ್ ಬಾಯಿ ಮುಚ್ಚು' ಎಂದಿದ್ದೇಕೆ ಡಿಕೆಶಿ?

ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲಿನ ಲೋಕಾಯುಕ್ತ ದಾಳಿಯು ಸ್ವತಂತ್ರ ಸಂಸ್ಥೆಯ ತನಿಖೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಅನಗತ್ಯ ಹೇಳಿಕೆ ನೀಡುತ್ತಿರುವ ಸ್ವಪಕ್ಷದ ಶಾಸಕರಿಗೆ ಬಾಯಿ ಮುಚ್ಚುವಂತೆ ಎಚ್ಚರಿಕೆ ನೀಡಿದರು.

Read Full Story

05:21 PM (IST) Feb 22

ಲಂಚ ಪಡೆದು ಶಾಸಕ ಲಮಾಣಿ ಜೈಲಿಗೆ, ಇದರ ಬೆನ್ನಲ್ಲೇ ಗುತ್ತಿಗೆದಾರನಿಗೆ ಧಮ್ಕಿ ಹಾಕೋ ಆಡಿಯೋ ವೈರಲ್, ಎಲ್ಲಾ ಬೀಪ್ ಸೌಂಡ್!

ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದಾರೆ. ಇದರ ಬೆನ್ನಲ್ಲೇ, ಅವರು ಗುತ್ತಿಗೆದಾರರಿಗೆ ಕಮಿಷನ್‌ಗಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್‌ಗಳು ವೈರಲ್ ಆಗಿದ್ದು, ತೀವ್ರ ಸಂಚಲನ ಸೃಷ್ಟಿಸಿವೆ.

Read Full Story

05:04 PM (IST) Feb 22

ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು - ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು 'ನಾ ಕಂಡ ಅಪ್ಪು' ಸಂದರ್ಶನದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಳೆದ ದಿನಗಳು, 'ಕುದುರೆ' ಎಂಬ ಅಡ್ಡಹೆಸರು, ಮತ್ತು ಮರ ಹತ್ತಿ ಹಣ್ಣು ಕೀಳುತ್ತಿದ್ದ ತುಂಟಾಟದ ಕ್ಷಣಗಳನ್ನು ಅವರು ಮೆಲುಕು ಹಾಕಿದ್ದಾರೆ.
Read Full Story

04:59 PM (IST) Feb 22

AI Summit - 'ಕಾಂಗ್ರೆಸ್ ಈಗಾಗಲೇ ಬೆತ್ತಲೆಯಾಗಿದೆ' - ಎಐ ಶೃಂಗಸಭೆಯಲ್ಲಿ ಒದೆ ತಿಂದ ಘಟನೆ ಉಲ್ಲೇಖಿಸಿ ಮೋದಿ ವಾಗ್ದಾಳಿ

'ಇಂಡಿಯಾ ಎಐ ಇಂಪ್ಯಾಕ್ಟ್' ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಈ ರೀತಿ ವರ್ತಿಸಿ ದೇಶಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

04:54 PM (IST) Feb 22

Rishab Shetty Movie - ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಮುಹೂರ್ತ! ರಿಷಬ್‌ ಶೆಟ್ಟಿ ಭಾಗಿ

ಕಾಂತಾರ ಪಾರ್ಟ್- 1 ಸೂಪರ್ ಸಕ್ಸಸ್ ಬಳಿಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಬಹುನಿರೀಕ್ಷಿತ ಜೈ ಹನುಮಾನ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಇಂದು ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ.

 

Read Full Story

04:42 PM (IST) Feb 22

ಕಾವ್ಯಾ ಗೌಡ ಕುಟುಂಬ ಕಲಹ - ವಿಡಿಯೋ ರಿಲೀಸ್ ಬಗ್ಗೆ ಸ್ಪಷ್ಟನೆ, ಬೆಡ್‌ ರೂಂನಲ್ಲಿಯೂ ಸಿಸಿಟಿವಿ ಹಾಕಿಸಿರುವ ನಟಿ

ಕಿರುತೆರೆ ನಟಿ ಕಾವ್ಯಾ ಗೌಡ  ಮತ್ತು ವಾರಗಿತ್ತಿ ಕುಟುಂಬದ ನಡುವಿನ ಕಲಹದ ಬಗ್ಗೆ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಮತ್ತು ಮಗುವಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಅವರು, ಘಟನೆಯ ಸಿಸಿಟಿವಿ ದೃಶ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Read Full Story

04:01 PM (IST) Feb 22

ಈ Scrubber ಬಳಸಿದ್ರೆ ಮಾತ್ರ ನಿಮ್ಮ ಪಾತ್ರೆಗಳಿಗೆ Scratch ಆಗಲ್ಲ! ಜಿಡ್ಡು ಕಲೆ ಪಕ್ಕಾ ಹೋಗುತ್ತೆ!

Dish Wash Brush: ಕಸವೆಂದು ಬಿಸಾಡುವ ತೆಂಗಿನ ನಾರಿನಿಂದ, ಯಾವುದೇ ಖರ್ಚಿಲ್ಲದೆ ಪರಿಸರ ಸ್ನೇಹಿ ಪಾತ್ರೆ ತೊಳೆಯುವ ಸ್ಕ್ರಬ್ಬರ್ ತಯಾರಿಸಬಹುದು. ಪ್ಲಾಸ್ಟಿಕ್ ಸ್ಕ್ರಬ್ಬರ್‌ಗಳಿಗಿಂತ ಹೆಚ್ಚು ಬಾಳಿಕೆ ಬರುವ ಮತ್ತು ನೈಸರ್ಗಿಕವಾಗಿ ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.

Read Full Story

03:51 PM (IST) Feb 22

ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಚಿಂತನೆ, ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಕುಲಪತಿಗಳ ತೀವ್ರ ವಿರೋಧ

ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಮರುಪ್ರಾರಂಭಿಸುವ ಕುರಿತು ಸಿಎಂ ಚಿಂತನೆ ವ್ಯಕ್ತಪಡಿಸಿದ್ದಾರೆ. ಆದರೆ, ಕ್ಯಾಂಪಸ್‌ನಲ್ಲಿ ಅಶಾಂತಿ, ರಾಜಕೀಯ ಹಸ್ತಕ್ಷೇಪ, ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುವ ಆತಂಕದಿಂದಾಗಿ ಬಹುತೇಕ ವಿವಿ ಕುಲಪತಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story

03:09 PM (IST) Feb 22

ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧ, ಸರ್ಕಾರದ ಗಂಭೀರ ಚಿಂತನೆ - ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಯನ್ನು ನಿಷೇಧಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಡ್ರಗ್ಸ್ ಹಾವಳಿಯನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಕುಲಪತಿಗಳಿಂದ ಅಭಿಪ್ರಾಯ ಸಂಗ್ರಹಿಸಿದ್ದು,ಬಹುತೇಕರು ಈ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Read Full Story

02:51 PM (IST) Feb 22

ಈ ಸಣ್ಣ ಟಿಪ್ಸ್‌ ಫಾಲೋ ಮಾಡಿದ್ರೆ, ಪಾಟ್‌ನಲ್ಲೇ ನುಗ್ಗೇಕಾಯಿ ಬೆಳೆಯುತ್ತೆ; ನೀವು ತಿಂದು, ಜಾಸ್ತಿ ಆಗಿ ಮಾರ್ತೀರಾ!

ನುಗ್ಗೇಕಾಯಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಬಲು ಅಪರೂಪದ ತರಕಾರಿ ಇದು. ಈ ನುಗ್ಗೇಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಅಂಶಗಳಿವೆ. ನುಗ್ಗೇಕಾಯಿ ಬೆಳೆಯುವುದು ಹೇಗೆ? ನಿಮ್ಮ ಮನೆಯ ಟೆರೆಸ್‌ ಮೇಲೂ ಕೂಡ ಈ ತರಕಾರಿಯನ್ನು ಬೆಳೆಯಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

01:56 PM (IST) Feb 22

ಹುಡುಗಿಗೆ ಹುಡುಗ ಸ್ನಾನ ಮಾಡ್ಸೋದು, ಬಾಯಿಂದ ಮಸಾಜ್‌ ಮಾಡೋದು - ಅಸಹ್ಯ ರಿಯಾಲಿಟಿ ಶೋನಾ? ವೀಕ್ಷಕರ ಆಕ್ರೋಶ

ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಯಾವ ವಿಷಯದಲ್ಲಿ ರಿಯಾಲಿಟಿ ಇರಬೇಕೋ ಅದರಲ್ಲಿ ರಿಯಾಲಿಟಿ ಅಂತೂ ಇಲ್ಲ. ಆದರೆ ಅನುಚಿತ, ಅಸಹ್ಯ ವಿಚಾರದಲ್ಲಿ ರಿಯಾಲಿಟಿಯನ್ನು ಎತ್ತಿ ತೋರಿಸುತ್ತಿವೆ. ಹೌದು, 50 ಎನ್ನುವ ಶೋನಲ್ಲಿ ಅಸಹ್ಯ ಎನ್ನೋದು ಮಿತಿ ಮೀರಿದೆ.

 

Read Full Story

01:48 PM (IST) Feb 22

ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು , ಕೇಂದ್ರ ಸಚಿವ ಕುಮಾರಸ್ವಾಮಿ ಗೃಹ ಸಚಿವ ಪರಮೇಶ್ವರ್ ರಹಸ್ಯ ಭೇಟಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನ ತಾಜ್ ವೆಸ್ಟ್‌ಎಂಡ್ ಹೋಟೆಲ್‌ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವಾಗಲೇ ನಡೆದ ಈ ಭೇಟಿಯು, ಅಭಿವೃದ್ಧಿ ಯೋಜನೆಗಳ ಕುರಿತ ಚರ್ಚೆ ಎಂದು ಹೇಳಲಾಗಿದೆ.

Read Full Story

01:15 PM (IST) Feb 22

OTT Release this Week - ಒಟಿಟಿಗೆ ಬಂದ ಒಂದಕ್ಕಿಂತ ಒಂದು ಸೂಪರ್‌ ಹಿಟ್‌ ಸಿನಿಮಾಗಳು! ಅಬ್ಬಬ್ಬಾ.. ಏನ್‌ ಕಥೆ, ಥ್ರಿಲ್ಲರ್!

2026 feb OTT This Week: ಈ ವಾರ ಓಟಿಟಿ ಪ್ರಿಯರಿಗೆ ಭರ್ಜರಿ ಹಬ್ಬ. ಒಂದೇ ವಾರದಲ್ಲಿ ಬರೋಬ್ಬರಿ 46 ಹೊಸ ಸಿನಿಮಾ ಮತ್ತು ವೆಬ್ ಸೀರಿಸ್‌ಗಳು ಬಿಡುಗಡೆಯಾಗಿವೆ. ಇದರಲ್ಲಿ ತೆಲುಗು, ತಮಿಳು ಸಿನಿಮಾಗಳೂ ಸೇರಿವೆ. ಆ ಲಿಸ್ಟ್ ಇಲ್ಲಿದೆ ನೋಡಿ.

Read Full Story

12:59 PM (IST) Feb 22

ತೆರಿಗೆ ಕಟ್ಟದಿದ್ದರೆ ಬೆಂಗಳೂರಿನಲ್ಲಿರುವ ನಿಮ್ಮ ಆಸ್ತಿಗೆ ಕುತ್ತು, ಟ್ಯಾಕ್ಸ್ ಕಟ್ಟದ ಮನೆಗಳನ್ನು ಹರಾಜಿಗಿಟ್ಟ ಜಿಬಿಎ!

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಈಗಾಗಲೇ ಹಲವು ಮನೆ ಮತ್ತು ಫ್ಲ್ಯಾಟ್‌ಗಳನ್ನು ಹರಾಜು ಹಾಕಿ ಕೋಟ್ಯಂತರ ರೂಪಾಯಿ ತೆರಿಗೆ ವಸೂಲಿ ಮಾಡಲಾಗಿದೆ.  

Read Full Story

12:56 PM (IST) Feb 22

ಯಾರ ದೃಷ್ಟಿ ಬಿತ್ತೋ ಏನೋ! 2.5 ವರ್ಷದ ಮುದ್ದಾದ ಮಗ, ಪತ್ನಿ ಬಿಟ್ಟು ಹೊರಟ ಕನ್ನಡ Social Media Influencer

The couple buns ಎನ್ನುವ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ದಂಪತಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಎಚ್‌ಡಿ ಕೋಟೆಯ ಭರತ್‌ ಗೌಡ ಅವರು ನಿಧನರಾಗಿದ್ದಾರೆ. ಇದ್ದರೆ ಹೀಗೆ ಇರಬೇಕು, ಎಂಥ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದ ಈ ದಂಪತಿ ಮೇಲೆ ಯಾರ ಕಣ್ಣು ಬಿತ್ತೋ ಏನೋ!

 

Read Full Story

12:53 PM (IST) Feb 22

ಹೆಂಡ್ತಿ ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಕುಚುಕು ಗೆಳೆಯನ ಹೃದಯಕ್ಕೆ ಚಾಕು ಇರಿದವ ಅರೆಸ್ಟ್

ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ದತ್ತು ಎಂಬಾತ ತನ್ನ ಬಾಲ್ಯದ ಗೆಳೆಯ ಶರಣು ಗೌಳಿಯ ಹೃದಯಕ್ಕೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕಲಬುರಗಿಯ ನರ್ತಕಿ ಬಾರ್ ಬಳಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
Read Full Story

10:31 AM (IST) Feb 22

Filmfare Awards 2026 - ದಾವಣಗೆರೆ ಹುಡುಗಿ, ಕಲಬುರಗಿ ಸೊಸೆ ಶ್ರುತಿ ಪ್ರಹ್ಲಾದ್‌ಗೆ ಫಿಲ್ಮ್‌ಫೇರ್ ಕಿರೀಟ

Filmfare Awards 2026: ದಾವಣಗೆರೆಯ ಮಗಳು ಮತ್ತು ಕಲಬುರಗಿಯ ಸೊಸೆ ಶ್ರುತಿ ಪ್ರಹ್ಲಾದ ಈಗಾಗಲೇ 50ಕ್ಕೂ ಹೆಚ್ಚು ಸಿನೆಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ದರಾಗಿದ್ದಾರೆ. ಈಗ ಇವರಿಗೆ ಹಿತ್ತಲಕ ಕರಿಯಬ್ಯಾಡ ಮಾವ ಹಾಡಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

09:09 AM (IST) Feb 22

ಅತ್ಯುತ್ತಮ ವಿವಿ ಕಟ್ಟಲು ಏಕೆ ಆಗುತ್ತಿಲ್ಲ? ಕುಲಪತಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಲಪತಿಗಳ ಸಭೆ ನಡೆಸಿ, ರಾಜ್ಯದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಅನುಪಾತ ಕಡಿಮೆಯಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಇದ್ದಂತೆ ಈಗ ಅತ್ಯುತ್ತಮ ವಿವಿಗಳನ್ನು ಏಕೆ ಕಟ್ಟಲಾಗುತ್ತಿಲ್ಲ ಎಂದು  ಪ್ರಶ್ನಿಸಿದ್ದಾರೆ.

Read Full Story

09:08 AM (IST) Feb 22

ಫಸ್ಟ್‌ ಮದುವೆಯಲ್ಲಿ ನರಕ; ಪ್ರೀತಿಸಿ ಎರಡನೇ ಮದುವೆಯಾದ Shikhar Dhawan; ಫೋಟೋಗಳಿವು

Shikhar Dhawan News: ಕ್ರಿಕೆಟರ್‌ ಶಿಖರ್‌ ಧವನ್‌ ಅವರು ಎರಡನೇ ಮದುವೆಯಾಗಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಿಖರ್, ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಜೊರಾವರ್ ಎಂಬ ಮಗನಿದ್ದಾನೆ. 

 

 

Read Full Story

08:48 AM (IST) Feb 22

ನ್ಯಾಯಾಂಗ ಅಪರಾಧ ದ್ವೇಷಿಸಬೇಕೇ ವಿನಃ ಅಪರಾಧಿಯನ್ನಲ್ಲ - ಹೈಕೋರ್ಟ್

ಜನರಿಂದ ಎಟಿಎಂ ಕಾರ್ಡ್‌ಗಳನ್ನು ಕದ್ದು ಹಣ ಪಡೆಯುತ್ತಿದ್ದ ಇಬ್ಬರು ಅಪರಾಧಿಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ದಂಡವಾಗಿ ಪರಿವರ್ತಿಸಿದೆ. ಕ್ರಿಮಿನಲ್‌ ನ್ಯಾಯವ್ಯವಸ್ಥೆ ಅಪರಾಧವನ್ನು ದ್ವೇಷಿಸಬೇಕೇ ವಿನಃ ಅಪರಾಧಿಯನ್ನಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Read Full Story

08:10 AM (IST) Feb 22

ಕೊಪ್ಪಳದ ಈ ಗ್ರಾಮದಲ್ಲಿ ಬದಕಲು ಬೇಕು ನೆಬುಲೈಜೇಷನ್!

ಈ ಗ್ರಾಮದಲ್ಲಿ ಮಕ್ಕಳು, ವೃದ್ಧರು ಕನಿಷ್ಠ ವಾರಕ್ಕೆ ಮೂರು ದಿನ ನೆಬುಲೈಜೇಷನ್‌ ಮಾಡಿಸಿಕೊಳ್ಳಬೇಕು. ಇದಿಲ್ಲದಿದ್ದರೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಂತ ಇದು ಯುದ್ಧಪೀಡಿತ ಪ್ರದೇಶವಲ್ಲ.

Read Full Story

06:51 AM (IST) Feb 22

ವಿಜಯನಗರದ ಯುವಕ ಮಂಜುನಾಥಗೆ ಒಲಿದ 7 ಸರ್ಕಾರಿ ಹುದ್ದೆ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಗೇರಲು ಸಿಕ್ಕ ಸಿಕ್ಕ ಕಡೆಗಳಲ್ಲಿ ತರಬೇತಿ ಪಡೆದು ಕಷ್ಟ ಪಟ್ಟು ಒಂದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಹೆಣಗಾಡುವ ಇಂದಿನ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಗ್ರಾಮೀಣ ಯುವಕನಿಗೆ 7 ಸರ್ಕಾರಿ ಹುದ್ದೆಗಳು ಅರಸಿ ಬಂದಿವೆ.

Read Full Story

06:39 AM (IST) Feb 22

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ - ಜಾರಕಿಹೊಳಿ

ಸದ್ದಿಲ್ಲದೆ ದೆಹಲಿಗೆ ತೆರಳಿ ಎರಡು ದಿನ ಅಲ್ಲೇ ಬೀಡು ಬಿಟ್ಟು, ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಟೀಮ್‌ಗೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸುವ ಭರವಸೆ ಹೈಕಮಾಂಡ್‌ನಿಂದ ದೊರಕಿದೆ.

Read Full Story

More Trending News