Published : Apr 22, 2025, 07:22 AM ISTUpdated : Apr 22, 2025, 11:56 PM IST

Karnataka News Live: ಪಹಲ್ಗಾಮ್‌ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r

ಸಾರಾಂಶ

ಬೆಂಗಳೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರದಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಆಗಲಿದೆ’ ಎಂದು ಭರವಸೆ ನೀಡಿದರು. ಕಳೆದ ವಾರ ರಾಜ್ಯದ ಹಲವು ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ, ತೆಗೆದು ಕತ್ತರಿಸಿದ ಘಟನೆ ನಡೆದಿತ್ತು. ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಅವರು ಭಾನುವಾರ ಮಧ್ಯಾಹ್ನ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು
 

Karnataka News Live: ಪಹಲ್ಗಾಮ್‌ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r

11:56 PM (IST) Apr 22

ಪಹಲ್ಗಾಮ್‌ ದಾಳಿ, ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್! r

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿದ್ದಾರೆ. ಕನ್ನಡಿಗರ ಸುರಕ್ಷತೆ ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳಲು ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಪೂರ್ತಿ ಓದಿ

11:26 PM (IST) Apr 22

ಪಹಲ್ಗಾಮ್‌ ದಾಳಿ, ಸೌದಿ ಪ್ರವಾಸ ತೊರೆದು ಇಂದು ರಾತ್ರಿಯೇ ಪ್ರಧಾನಿ ಭಾರತಕ್ಕೆ ವಾಪಸ್‌!

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಮರಳುತ್ತಿದ್ದಾರೆ. 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿರುವ ಈ ದಾಳಿಯನ್ನು ಖಂಡಿಸಿರುವ ಪ್ರಧಾನಿಗಳು, ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪೂರ್ತಿ ಓದಿ

11:10 PM (IST) Apr 22

'ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಸದಾ ಬೆಂಬಲ..' ಪಹಲ್ಗಾಮ್‌ ದಾಳಿ ಖಂಡಿಸಿದ ಟ್ರಂಪ್‌, ಪುಟಿನ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 28 ಜನರು ಸಾವನ್ನಪ್ಪಿದ್ದಾರೆ. ಅಮೆರಿಕ, ರಷ್ಯಾ, ಇಸ್ರೇಲ್ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಈ ದಾಳಿಯನ್ನು ಖಂಡಿಸಿವೆ.

ಪೂರ್ತಿ ಓದಿ

11:01 PM (IST) Apr 22

'ಭಾರತಕ್ಕೆ ಈಗ ಒಳ್ಳೇಯ ಟೈಮ್ ಬಂದಿದೆ..' ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯನ್ನು ಚಕ್ರವರ್ತಿ ಸೂಲಿಬೆಲೆ ಖಂಡಿಸಿದ್ದಾರೆ. ಸ್ಥಳೀಯರ ಕುಮ್ಮಕ್ಕು ಇದೆ ಎಂದು ಹೇಳಿ, ತಾತ್ಕಾಲಿಕವಾಗಿ ಜಮ್ಮು ಕಾಶ್ಮೀರಕ್ಕೆ ಪ್ರವಾಸ ನಿಷೇಧಿಸಬೇಕೆಂದು ಸಲಹೆ ನೀಡಿದ್ದಾರೆ.

ಪೂರ್ತಿ ಓದಿ

10:48 PM (IST) Apr 22

ಸ್ಮಾರ್ಟ್ ಮೀಟರ್ ಲೂಟಿ ತಡೆಯಬೇಕಾ ಸೈನ್ ಮಾಡಿ!

ಕರ್ನಾಟಕ ಸರ್ಕಾರವು ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ. ಈ ಹಗರಣದ ವಿರುದ್ಧ ಹೋರಾಡಲು ಸಾರ್ವಜನಿಕರು change.org ನಲ್ಲಿ ಪಿಟಿಷನ್ ಗೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ.

ಪೂರ್ತಿ ಓದಿ

10:29 PM (IST) Apr 22

ಎಂ.ಎಸ್.ಧೋನಿ ದಿನಕ್ಕೆ 5 ಲೀಟರ್ ಕುಡಿತಾರಾ? ಇಲ್ಲಿದೆ ಧೋನಿ ಸ್ಪಷ್ಟನೆ

ಮಹೇಂದ್ರ ಸಿಂಗ್ ಧೋನಿ ದಿನಕ್ಕೆ 5 ಲೀಟರ್ ಹಾಲು ಕುಡಿಯುತ್ತಾರೆ ಎಂಬ ವದಂತಿಯನ್ನು ತಳ್ಳಿಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್ 2025ರಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಕಷ್ಟಕರವಾಗಿದೆ.

ಪೂರ್ತಿ ಓದಿ

10:17 PM (IST) Apr 22

ಮದುವೆಯಾದ ಆರೇ ದಿನಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 28 ಮಂದಿ ಪ್ರವಾಸಿಗರು ಬಲಿಯಾಗಿದ್ದು, ಇಬ್ಬರು ಕರ್ನಾಟಕದವರು. ಭಾರತೀಯ ನೌಕಾಸೇನೆಯ ಅಧಿಕಾರಿ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಕೂಡ ಸಾವಿಗೀಡಾಗಿದ್ದಾರೆ.

ಪೂರ್ತಿ ಓದಿ

10:14 PM (IST) Apr 22

Video | ನಮ್ಮ ದುಡಿಮೆನೇ ಹಾಳಾಗೋಯ್ತು..' ಭಯೋತ್ಪಾದಕ ದಾಳಿ ಬಗ್ಗೆ ಸ್ಥಳೀಯರು ಆಕ್ರೋಶ

Pahalgam terror attack Live:  'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಪೂರ್ತಿ ಓದಿ

09:58 PM (IST) Apr 22

ಯುಪಿಎಸ್‌ಸಿ ಫಲಿತಾಂಶ: 12 ಅಂಕದಿಂದ ವಂಚಿತಳಾಗಿದ್ದ 'ಶಕ್ತಿ ದುಬೆ' ಈಗ ದೇಶಕ್ಕೆ ಟಾಪರ್!

ಕಳೆದ ಬಾರಿ 12 ಅಂಕಗಳಿಂದ ವಂಚಿತಳಾಗಿದ್ದ ಶಕ್ತಿ ದುಬೆ ಈ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾಳೆ.  ಶಕ್ತಿ ದುಬೆ ಅವರ ಸಾಧನೆಯ ಹಿಂದಿನ ಹೋರಾಟ, ಛಲ ಬಿಡದೆ ಓದಿ ಯಶಸ್ಸಿನ ಕಥೆ ಇಲ್ಲಿದೆ ನೋಡಿ.

ಪೂರ್ತಿ ಓದಿ

09:50 PM (IST) Apr 22

Relationship Tips: ಹುಡುಗಿಯರು ಬ್ರೇಕ್ ಅಪ್ ಆದ ನಂತರ ಈ 5 ಕೆಲಸ ಮಾಡುತ್ತಾರೆ! ತಿಳಿದರೆ ಅಚ್ಚರಿಪಡ್ತೀರಿ!

ಹುಡುಗಿಯರು ಬ್ರೇಕಪ್ ನಂತರ ಸಾಮಾನ್ಯವಾಗಿ ವಿಭಿನ್ನವಾಗಿ ವರ್ತಿಸುತ್ತಾರೆ. ಅವರು ತಮ್ಮ ಮಾಜಿಗಳನ್ನು ನಿರ್ಬಂಧಿಸುತ್ತಾರೆ ಮತ್ತು ಅನಿರ್ಬಂಧಿಸುತ್ತಾರೆ, ಅವರೊಂದಿಗೆ ಮಾತನಾಡಲು ನೆಪಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ.

ಪೂರ್ತಿ ಓದಿ

09:33 PM (IST) Apr 22

'ಸಾವು ಕೂಡ ಧರ್ಮವನ್ನೇ ನೋಡಿತು..' ಸೋಶಿಯಲ್‌ ಮೀಡಿಯಾದಲ್ಲಿ ಪಹಲ್ಗಾಮ್‌ ರಕ್ತದೋಕುಳಿಗೆ ಕಂಬನಿ!

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, ಪ್ರವಾಸಿಗರ ಧರ್ಮವನ್ನು ಕೇಳಿ ಗುಂಡು ಹಾರಿಸಿದ್ದಾರೆ. ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪೂರ್ತಿ ಓದಿ

09:30 PM (IST) Apr 22

ಕುಶಾಲನಗರದಲ್ಲಿ ತೆರಿಗೆ ಏರಿಕೆ: ಪರಸಭೆ ವಿರುದ್ಧ ಚೇಂಬರ್ ಆಫ್ ಕಾಮರ್ಸ್, ಜನರ ಆಕ್ರೋಶ

ಕುಶಾಲನಗರ ಪುರಸಭೆಯು ಆಸ್ತಿ ಮತ್ತು ವ್ಯಾಪಾರ ಪರವಾನಗಿ ತೆರಿಗೆಯನ್ನು ದುಪ್ಪಟ್ಟು ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ನಿಯಮಗಳನ್ನು ಮೀರಿ ತೆರಿಗೆ ಹೆಚ್ಚಳ ಮಾಡಿರುವುದಕ್ಕೆ ಚೇಂಬರ್ ಆಫ್ ಕಾಮರ್ಸ್ ಅಸಮಾಧಾನ ವ್ಯಕ್ತಪಡಿಸಿದೆ.

ಪೂರ್ತಿ ಓದಿ

09:23 PM (IST) Apr 22

ಮಸಾಲೆ ದೋಸೆಯಲ್ಲಿ ಅಡಗಿದ್ದ ಯಮರಾಯ! 3 ವರ್ಷದ ಬಾಲಕಿ ಸಾವು...

ವಿದೇಶದಿಂದ ಬಂದ ತಂದೆಯನ್ನು ಭೇಟಿಯಾಗಲು ಹೋಟೆಲ್‌ಗೆ ಹೋಗಿದ್ದ ಮೂರು ವರ್ಷದ ಬಾಲಕಿ ಮಸಾಲೆ ದೋಸೆ ತಿಂದು ಸಾವನ್ನಪ್ಪಿದ್ದಾಳೆ. ಫುಡ್ ಪಾಯ್ಸನ್ ನಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ.

ಪೂರ್ತಿ ಓದಿ

09:05 PM (IST) Apr 22

ಪಹಲ್ಗಾಮ್ ಉಗ್ರರ ದಾಳಿ ಮತ್ತೊಬ್ಬ ಕನ್ನಡಿಗ ಹಾವೇರಿ ಭರತ್ ಭೂಷಣ್ ಬಲಿ!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 24 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿಯ ಭರತ್ ಭೂಷಣ್ ಸೇರಿದ್ದಾರೆ. ಭರತ್, ಮಾಜಿ ಸ್ಪೀಕರ್ ಕೆ.ಬಿ. ಕೋಳೀವಾಡ ಅವರ ಸಂಬಂಧಿ.

ಪೂರ್ತಿ ಓದಿ

08:58 PM (IST) Apr 22

ದಾಲ್‌ ಲೇಕ್‌ನಲ್ಲಿ ಪತ್ನಿ ಪಲ್ಲವಿ ಜೊತೆ ದೋಣಿ ವಿಹಾರ ಮಾಡಿದ್ದ ಮಂಜುನಾಥ್‌ ಕೊನೇ ವಿಡಿಯೋ ವೈರಲ್‌!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಅವರ ಪತ್ನಿ ಪಲ್ಲವಿ ದಾಲ್ ಲೇಕ್‌ನಲ್ಲಿ ವಿಹರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ

08:43 PM (IST) Apr 22

ಯುಪಿಎಸ್‌ಸಿ ಪಾಸಾದ 20 ಕನ್ನಡಿಗರು! ಟಾಪರ್‌ಗಳ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ ನೋಡಿ!

2024ರ UPSC ಪರೀಕ್ಷೆಯಲ್ಲಿ 1009 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 20 ಕನ್ನಡಿಗರು ಸೇರಿದ್ದಾರೆ. ವೈದ್ಯರು, ಇಂಜಿನಿಯರ್‌ಗಳು ಮತ್ತು ಕೃಷಿಕರೂ ಸೇರಿದಂತೆ ವಿವಿಧ ಹಿನ್ನೆಲೆಯ ಈ ಅಭ್ಯರ್ಥಿಗಳ ಶ್ರೇಣಿ, ಹಿನ್ನೆಲೆ ಮತ್ತು ಸಾಧನೆಯ ಕುರಿತು ತಿಳಿಯಿರಿ.

ಪೂರ್ತಿ ಓದಿ

08:36 PM (IST) Apr 22

Pahalgam terror attack: 'ಈಗ ಮಾತಾಡಿದ್ರೆ ರಾಜಕೀಯ ಆಗುತ್ತೆ..' ಉಗ್ರರ ದಾಳಿ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನ್ನಡಿಗ ಸೇರಿ ಓರ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಒಡ್ಡುಗೈ ಎನಿಸಿಕೊಂಡಿರುವ ಟಿಆರ್‌ಎಫ್ ಹೊಣೆ ಹೊತ್ತಿದೆ.

ಪೂರ್ತಿ ಓದಿ

08:01 PM (IST) Apr 22

ಪಹಲ್ಗಾಮ್‌ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಟಿಆರ್‌ಎಫ್ ಹೊತ್ತುಕೊಂಡಿದೆ.

ಪೂರ್ತಿ ಓದಿ

07:59 PM (IST) Apr 22

ಆನೇಕಲ್ ಮಹದೇಶ್ವರಸ್ವಾಮಿ ಜಾತ್ರೆಯಲ್ಲಿ ಅಗ್ನಿಕೊಂಡದಲ್ಲಿ ಕಾಲು ಜಾರಿ ಬಿದ್ದ ಪೂಜಾರಿ!

ಆನೇಕಲ್ ತಾಲೂಕಿನ ಚಿಕ್ಕ ಹೊಸಹಳ್ಳಿಯ ಮಹದೇಶ್ವರ ಸ್ವಾಮಿ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಅರ್ಚಕರೊಬ್ಬರು ಬೆಂಕಿಗೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಹೊರತಾಗಿಯೂ ಜಾತ್ರೆ ಮುಂದುವರೆದಿದೆ.

ಪೂರ್ತಿ ಓದಿ

07:28 PM (IST) Apr 22

Breaking: ಪಹಲ್ಗಾಮ್‌ ಟರರಿಸ್ಟ್‌ ದಾಳಿಯಲ್ಲಿ 24ಕ್ಕೂ ಅಧಿಕ ಪ್ರವಾಸಿಗರು ಸಾವು!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 24 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಭೇಟಿ ನೀಡಿದ್ದಾರೆ.

ಪೂರ್ತಿ ಓದಿ

07:28 PM (IST) Apr 22

ಬಿಜೆಪಿಯವ್ರು ತಮ್ಮ ಪರ ತೀರ್ಪು ಬಂದ್ರೆ ಗ್ರೇಟ್ ಅಂತಾರೆ, ವಿರುದ್ಧ ಬಂದ್ರೆ ಸುಪ್ರೀಂ ಮೇಲೆ ಮುಗಿಬೀಳ್ತಾರೆ: ಲಾಡ್ ವಾಗ್ದಾಳಿ

ಸಂಸದ ದುಬೆ ಹೇಳಿಕೆಗೆ ಸಚಿವ ಸಂತೋಷ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ತಮಗೆ ಅನುಕೂಲವಾದಾಗ ಸುಪ್ರೀಂಕೋರ್ಟ್ ಅನ್ನು ಹೊಗಳುತ್ತದೆ, ವಿರುದ್ಧ ತೀರ್ಪು ಬಂದಾಗ ಪ್ರಶ್ನಿಸುತ್ತದೆ ಎಂದು ಲಾಡ್ ಕಿಡಿಕಾರಿದರು. ರಾಜ್ಯಪಾಲರ ಕಾರ್ಯವೈಖರಿಯನ್ನೂ ಲಾಡ್ ಟೀಕಿಸಿದ್ದಾರೆ.

ಪೂರ್ತಿ ಓದಿ

07:07 PM (IST) Apr 22

ಉಗ್ರರ ದಾಳಿಗೆ ಕನ್ನಡಿಗ ಬಲಿ, ಸಿಎಂ ತುರ್ತು ಸಭೆ, ಕಾಶ್ಮೀರಕ್ಕೆ ಹೊರಟ ಅಧಿಕಾರಿಗಳು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸಲು ತುರ್ತು ಸಭೆ ನಡೆಸಿ, ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದೆ.

ಪೂರ್ತಿ ಓದಿ

07:01 PM (IST) Apr 22

Video | ಸೌದಿ ಅರೇಬಿಯಾದಲ್ಲಿ ಮೋದಿಗೆ F-15 ಜೆಟ್‌ಗಳಿಂದ ಸೆಕ್ಯೂರಿಟಿ!

ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಸೌದಿ  ಪ್ರಧಾನಿ ಮೋದಿಯವರ ಭದ್ರತೆಗೆ F-15 ಫೈಟರ್ ಜೆಟ್‌ಗಳು ಸೆಕ್ಯೂರಿಟಿ ಕೊಟ್ಟವು. ಭಾರತ-ಸೌದಿ ಸಂಬಂಧ ಎಷ್ಟು ಗಟ್ಟಿ ಎಂಬುದಕ್ಕೆ ಈ ಸೆಕ್ಯೂರಿಟಿ ನಿದರ್ಶನ.. ಆದ್ರೆ ಈ ಸೆಕ್ಯೂರಿಟಿ ಹಿಂದೆ ನಿಜವಾದ ಕಾರಣ ಏನು? ಇಲ್ಲಿ ತಿಳಿಯೋಣ.

ಪೂರ್ತಿ ಓದಿ

06:55 PM (IST) Apr 22

'ಯಾರನ್ನೂ ಸುಮ್ಮನೆ ಬಿಡೋದಿಲ್ಲ..' ಪಹಲ್ಗಾಮ್‌ ಟೆರರಿಸ್ಟ್‌ಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್‌ ರಾವ್‌ ಸಾವಿಗೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಪ್ರಧಾನಿ ಮೋದಿ ಘಟನೆಯನ್ನು ಖಂಡಿಸಿದ್ದಾರೆ.

ಪೂರ್ತಿ ಓದಿ

06:49 PM (IST) Apr 22

ಟೆರರಿಸ್ಟ್​ ಎಂದು ಬಂಧಿಸಿದ್ರು, ರೇ* ಮಾಡಿದ್ರು, ವಾಂತಿ ಮಾಡಿಕೊಂಡೆ: ಘನಘೋರ ಘಟನೆ ತೆರೆದಿಟ್ಟ ನಟಿ ದಿಯಾ

ಟೆರರಿಸ್ಟ್​ ಎಂದು ಬಂಧಿಸಿದ್ರು, ರೇ* ಮಾಡಿದ್ರು, ವಾಂತಿ ಮಾಡಿಕೊಂಡೆ.. ಆ ಘಟನೆ ಭಯಾನಕವಾಗಿತ್ತು ಎನ್ನುತ್ತಲೇ ಅದನ್ನು ನೆನಪಿಸಿಕೊಂಡಿದ್ದಾರೆ ಬಾಲಿವುಡ್​ ನಟಿ ದಿಯಾ ಮಿರ್ಜಾ 
 

ಪೂರ್ತಿ ಓದಿ

06:40 PM (IST) Apr 22

ಈ ಹಲಸಿನ ತಂದೂರಿ ಕಬಾಬ್ ಕೋಳಿ ಮಾಂಸಕ್ಕಿಂತಲೂ ರುಚಿ! ಇಲ್ಲಿದೆ ರೆಸಿಪಿ ಟ್ರೈ ಮಾಡಿ!

ಬೇಸಿಗೆಯಲ್ಲಿ ಹಲಸಿನಿಂದ ಮಾಡಿದ ಈ ರುಚಿಕರವಾದ ಕಬಾಬ್‌ಗಳು ಮಾಂಸಾಹಾರದಂತಹ ರುಚಿಯನ್ನು ನೀಡುತ್ತವೆ. ಬೆಂಗಳೂರಿನ ಪ್ರಸಿದ್ಧ ಪಾಕವಿಧಾನ, ಸಸ್ಯಾಹಾರಿ ಮತ್ತು ಸಸ್ಯಾಹಾರಿಗಳಿಗೆ ಸೂಕ್ತ.

ಪೂರ್ತಿ ಓದಿ

06:34 PM (IST) Apr 22

ನನ್ನ, ನನ್ನ ಮಗನನ್ನೂ ಕೊಲ್ಲಿ ಎಂದು ಉಗ್ರರೆದುರು ಕಣ್ಣೀರಿಟ್ಟ ಪಲ್ಲವಿ, 'ಇದನ್ನ ಮೋದಿಗೆ ತಿಳಿಸು' ಎಂದ ಉಗ್ರ!

ಜಮ್ಮು ಕಾಶ್ಮೀರದ ಪಹಲ್ಗಾಮ್ ಬಳಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ದಾಳಿಕೋರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪೂರ್ತಿ ಓದಿ

06:14 PM (IST) Apr 22

Pahalgam terror attack: : ಹಿಂದೂಗಳ ಗುರಿಯಾಗಿಸಿ ದಾಳಿ, ಪಾಕಿಸ್ತಾನದ ಕೈವಾಡ, ಪೊಲೀಸ್ ಸಮವಸ್ತ್ರದಲ್ಲಿದ್ದ ಟೆರರಿಸ್ಟ್!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಲಶ್ಕರ್-ಎ-ತೈಯಬಾ ಸಂಘಟನೆಯ TRF ಭಾಗಿಯಾಗಿರುವ ಸಾಧ್ಯತೆಯಿದೆ.

ಪೂರ್ತಿ ಓದಿ

06:06 PM (IST) Apr 22

ಪೋಪ್ ಪ್ರಾನ್ಸಿನ್ ನಿಧನ; ರಾಜ್ಯ ಸರ್ಕಾರದಿಂದಲೂ 2 ದಿನ ಶೋಕಾಚರಣೆ!

ಪೋಪ್‌ ಫ್ರಾನ್ಸಿಸ್‌ ಅವರು ಏಪ್ರಿಲ್ 21 ರಂದು ನಿಧನರಾಗಿದ್ದು, ಭಾರತ ಸರ್ಕಾರವು ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಅಂತ್ಯಕ್ರಿಯೆಯು ವ್ಯಾಟಿಕನ್‌ನ ಹೊರಗೆ ನಡೆಯಲಿದ್ದು, ಹೊಸ ಪೋಪ್‌ ಆಯ್ಕೆ ಪ್ರಕ್ರಿಯೆಯು ಶೀಘ್ರದಲ್ಲೇ ಆರಂಭವಾಗಲಿದೆ.

ಪೂರ್ತಿ ಓದಿ

05:59 PM (IST) Apr 22

Breaking: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವು!

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್‌ ರಾವ್‌ ಸಾವನ್ನಪ್ಪಿದ್ದಾರೆ. ಭಯೋತ್ಪಾದಕರು ಹೆಸರು ಮತ್ತು ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಪೂರ್ತಿ ಓದಿ

05:52 PM (IST) Apr 22

ಲಖನೌ ಎದುರು ಮ್ಯಾಚ್ ಫಿಕ್ಸಿಂಗ್ ಮಾಡ್ತಾ ರಾಜಸ್ಥಾನ ರಾಯಲ್ಸ್? ಮತ್ತೆ ಬ್ಯಾನ್ ಆಗುತ್ತಾ?

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ರೋಚಕ ಸೋಲಿನ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಡ್‌ ಹಾಕ್ ಕಮಿಟಿ ಕನ್ವೀನಿಯರ್, ತಂಡದ ಕೆಟ್ಟ ಆಟದ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ಕೊನೆಯ ಓವರ್‌ನಲ್ಲಿ ಕೇವಲ 9 ರನ್‌ಗಳ ಅಗತ್ಯವಿರುವಾಗ ಸೋಲು ಅನುಭವಿಸಿದ್ದನ್ನು ಅನುಮಾನಿಸಲಾಗಿದೆ.

ಪೂರ್ತಿ ಓದಿ

05:44 PM (IST) Apr 22

ದೇವಾಲಯಕ್ಕೆ ಹೋಗ್ತೀನಿ ಆದರೆ ಹರಕೆ ಹೊತ್ತು ಹೋಗಲ್ಲ; ಮಾನವೀಯತೆ ಪಾಠ ಮಾಡಿದ ಸಿಎಂ

ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ನಂತರ ಹುಚ್ಚಪ್ಪಸ್ವಾಮಿ ಜಾತ್ರೆ ನಡೆದಿದ್ದು, ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ದೇವಾಲಯ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಹತ್ವ ಸಾರಿದರು.

ಪೂರ್ತಿ ಓದಿ

05:39 PM (IST) Apr 22

ಬನಶಂಕರಿಯಲ್ಲಿ ಬೃಹತ್ ಸ್ಕೈವಾಕ್ ನಿರ್ಮಾಣ: 5 ವರ್ಷಗಳ ವಿಳಂಬದ ಬಳಿಕ ಚಾಲನೆ

ಐದು ವರ್ಷಗಳ ವಿಳಂಬದ ನಂತರ, ಬನಶಂಕರಿ ಜಂಕ್ಷನ್‌ನಲ್ಲಿ ವೃತ್ತಾಕಾರದ ಸ್ಕೈವಾಕ್ ನಿರ್ಮಾಣವಾಗಲಿದೆ. ಈ ಸ್ಕೈವಾಕ್ ಮೆಟ್ರೋ ನಿಲ್ದಾಣವನ್ನು ಟಿಟಿಎಂಸಿಗೆ ಸಂಪರ್ಕಿಸುತ್ತದೆ ಮತ್ತು ಪಾದಚಾರಿಗಳಿಗೆ ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.

ಪೂರ್ತಿ ಓದಿ

05:27 PM (IST) Apr 22

ಸಿಹಿ ಸತ್ತ ಸುದ್ದಿ ಸೀತಾಗೆ ಗೊತ್ತಾಯ್ತು; ಸಿಹಿ ಆತ್ಮ ಓಡಾಡ್ತಿರೊ ಸುದ್ದಿ ಅಶೋಕ್​ಗೆ ತಿಳಿದಾಯ್ತು! ಮುಂದೆ?

ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯ ಅಪಘಾತದ ವಿಷಯ ಸೀತಾಗೆ ತಿಳಿದಿದ್ದು, ಆಕೆ ಅಲ್ಲಿಯೇ ಓಡಾಡ್ತಿರೋ ವಿಷ್ಯ ಅಶೋಕ್​ಗೆ ತಿಳಿದಿದೆ. ಮುಗಿಯತ್ತಾ ಸೀರಿಯಲ್​?

 

ಪೂರ್ತಿ ಓದಿ

05:09 PM (IST) Apr 22

ಕನ್ನಡಿಗನ ಮೇಲೆ ಹಲ್ಲೆಗೆ ವಾಯುಪಡೆ ವಿಷಾಧ! ವಿಂಗ್ ಕಮಾಂಡರ್‌ ಕೆಲಸ ಕುತ್ತು?

ರಸ್ತೆಯಲ್ಲಿ ವಾಹನ ಹಿಂದಿಕ್ಕುವ ವಿಚಾರವಾಗಿ ಭಾರತೀಯ ವಾಯು ದಳದ ವಿಂಗ್ ಕಮಾಂಡರ್ ಮತ್ತು ಬೈಕ್ ಸವಾರನ ನಡುವೆ ಹಲ್ಲೆ ನಡೆದಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿವೆ. ವಾಯುಪಡೆಯು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದು, ತನಿಖೆಗೆ ಸಹಕರಿಸುವುದಾಗಿ ತಿಳಿಸಿದೆ.

ಪೂರ್ತಿ ಓದಿ

04:30 PM (IST) Apr 22

ಅಮೇರಿಕಾದಲ್ಲಿ ಮಗು ಮಾಡಿಕೊಂಡರೆ 4.25 ಲಕ್ಷ ಬೋನಸ್; ಟ್ಯಾಕ್ಸ್ ಫ್ರೀ!

ಜನನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಮಗುವಿನ ಜನನದ ನಂತರ ತಾಯಿಗೆ ₹4.25 ಲಕ್ಷ 'ಬೇಬಿ ಬೋನಸ್' ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ.

ಪೂರ್ತಿ ಓದಿ

04:16 PM (IST) Apr 22

Shakti Dubey: ಬನಾರಸ್‌ ಹಿಂದು ವಿವಿ ವಿದ್ಯಾರ್ಥಿನಿ, ಪೊಲೀಸಪ್ಪನ ಮಗಳು ದೇಶಕ್ಕೆ ನಂ.1

2024 ರ UPSC ಪರೀಕ್ಷೆಯಲ್ಲಿ ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಅಗ್ರಸ್ಥಾನ ಪಡೆದಿದ್ದಾರೆ. ಜೀವರಸಾಯನಶಾಸ್ತ್ರದ ಪದವೀಧರೆಯಾದ ಇವರು, ತಮ್ಮ ಕುಟುಂಬದ ಹಿನ್ನೆಲೆಯೇ ನಾಗರಿಕ ಸೇವೆಗಳಿಗೆ ಸೇರುವ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ.

ಪೂರ್ತಿ ಓದಿ

04:07 PM (IST) Apr 22

Pahalgam Terrorist Attack: ನಾಲ್ವರು ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಪೂರ್ತಿ ಓದಿ

03:35 PM (IST) Apr 22

ಯುಪಿಎಸ್‌ಸಿ ರಿಸಲ್ಟ್‌ ಔಟ್‌, ವಾರಣಾಸಿಯ ಶಕ್ತಿ ದುಬೆ ಟಾಪರ್‌!

ಕೇಂದ್ರ ಲೋಕಸೇವಾ ಆಯೋಗವು ಯುಪಿಎಸ್‌ಸಿ ಸಿಎಸ್‌ಇ 2025 ರ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ವಾರಣಾಸಿಯ ಶಕ್ತಿ ದುಬೆ ಅಗ್ರಸ್ಥಾನ ಗಳಿಸಿದ್ದಾರೆ, ಹರಿಯಾಣದ ಹರ್ಷಿತಾ ಗೋಯಲ್ ಎರಡನೇ ಸ್ಥಾನ ಮತ್ತು ಡೊಂಗ್ರೆ ಅರ್ಚಿತ್ ಪರಾಗ್ ಮೂರನೇ ಸ್ಥಾನ ಗಳಿಸಿದ್ದಾರೆ.

ಪೂರ್ತಿ ಓದಿ

03:29 PM (IST) Apr 22

ಕನ್ನಡಿಗನ ಮೇಲೆ ಹಲ್ಲೆ ಮಾಡಿದ ವಿಂಗ್ ಕಮಾಂಡರ್: ಸಿಎಂ ಕ್ರಮಕ್ಕೆ ಆದೇಶ

ಬೆಂಗಳೂರಿನಲ್ಲಿ ವಾಹನ ಟಚ್ ವಿಚಾರಕ್ಕೆ ಕನ್ನಡಿಗನ ಮೇಲೆ ಹಲ್ಲೆ ನಡೆದ ಘಟನೆ. ಹಲ್ಲೆ ನಡೆಸಿದ ವ್ಯಕ್ತಿಯಿಂದ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅಪಪ್ರಚಾರ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ.

ಪೂರ್ತಿ ಓದಿ

More Trending News