Published : Apr 20, 2026, 06:51 AM ISTUpdated : Apr 20, 2026, 09:52 PM IST

Karnataka News Live: 2023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

ಸಾರಾಂಶ

ವಿಜಯನಗರ: ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಒಂದೇ ಕುಟುಂಬದ ಮೂವರಾದ ನಾಗಪ್ಪ (56), ಪುತ್ರ ಕೊಟ್ರೇಶ್ (22), ಪುತ್ರಿ ಸುಜಾತಾ (35), ತಿಮ್ಮಲಾಪುರ ಗ್ರಾಮದ ದುರುಗಪ್ಪ (55) ಮೃತರು. 

ಕಿತ್ನೂರು ಗ್ರಾಮದ ನಾಲ್ವರು 2 ಬೈಕ್‌ನಲ್ಲಿ ಕೊಟ್ರೇಶ್‌ಗೆ ಕನ್ಯೆ ನೋಡಲು ಹೊರಟಿದ್ದಾಗ ಡಣಾಪುರ ಸೇತುವೆ ಬಳಿ ಲಾರಿ 2 ಬೈಕ್‌ಗಳಿಗೆ ಡಿಕ್ಕಿ‌ ಹೊಡೆದಿದ್ದರಿಂದ 3 ಮಂದಿ ಸಾವನ್ನಪ್ಪಿದ್ದಾರೆ. ಈ ಮೊದಲೇ 2 ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಒಬ್ಬ ಬೈಕ್‌ ಸವಾರ ಮೃತಪಟ್ಟಿದ್ದಾನೆ. ನಂತರ ಕಾರು ಹಾಗೂ ಸೇತುವೆ ಮೇಲೆ ಬಸ್ ಹಿಂಭಾಗಕ್ಕೆ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದಿದೆ.

09:52 PM (IST) Apr 20

2023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ? - ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

‘ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರವಾಗಿದ್ದರೂ ಜಾರಿ ಮಾಡದೆ ಕತ್ತೆ ಕಾಯತ್ತಿದ್ದರೇ ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

Read Full Story

09:35 PM (IST) Apr 20

ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್

ಬೆಂಗಳೂರಿನ ಬಿಸಿಲ ಬೇಗೆಗೆ ಹೋಟೆಲ್ ಸೇರಿದ ಯುವತಿ, ಮಾಡರ್ನ್ ಪ್ರಾಬ್ಲಂಗೆ ಮಾಡರ್ನ್ ಸೊಲ್ಯೂಷನ್ , ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಸುಸ್ತಾಗುವ ಈ ವಾತಾವರಣಕ್ಕೆ ಯುವತಿ ಹೊಸ ಪ್ಲಾನ್ ಮಾಡಿದ್ದಾಳೆ.

 

Read Full Story

09:27 PM (IST) Apr 20

ಆಕಾಶವನ್ನೇ ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ - ಸಚಿವ ಚಲುವರಾಯಸ್ವಾಮಿ ಬೇಸರ

ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

Read Full Story

08:54 PM (IST) Apr 20

ರಾಜ್ಯದ ಶೇ. 27.7ರಷ್ಟು ನಿರ್ಮಾಣ ಕಾರ್ಮಿಕರಲ್ಲಿ ಯಕೃತ್ತಿನ ಕಾಯಿಲೆ, ಸಂಶೋಧನೆ ಬಿಚ್ಚಿಟ್ಟಿತು ಶಾಕಿಂಗ್ ಸಂಗತಿ!

ಕಾರ್ಮಿಕ ಇಲಾಖೆಯು ನಡೆಸಿದ ಆರೋಗ್ಯ ತಪಾಸಣೆಯಲ್ಲಿ, 24 ಲಕ್ಷ ನಿರ್ಮಾಣ ಕಾರ್ಮಿಕರಲ್ಲಿ ಶೇ. 27.7ರಷ್ಟು ಜನ ಯಕೃತ್ತಿನ ಕಾಯಿಲೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಮದ್ಯಪಾನ ಮತ್ತು ಅಸುರಕ್ಷಿತ ಹಚ್ಚೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಈ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವು 'ಸಾರ್ವತ್ರಿಕ ಆರೋಗ್ಯ ಕಾರ್ಡ್' ಪರಿಚಯಿಸಲು ಯೋಜಿಸುತ್ತಿದೆ.
Read Full Story

08:31 PM (IST) Apr 20

ಬೆಂಗಳೂರು ಗಿಗ್ ಮಹಿಳಾ ಕಾರ್ಮಿಕರ ಸಂಕಷ್ಟ, ಮನೆಕೆಲಸ, ಬ್ಯೂಟಿಷನ್ ಗಾಗಿ ತೆರಳುವ ಮನೆಗಳಲ್ಲಿ 1 ತೊಟ್ಟು ನೀರೂ ಇಲ್ಲ, ಶೌಚವೂ ಇಲ್ಲ!

ಬೆಂಗಳೂರಿನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕೆಲಸ ಮಾಡುವ ಮಹಿಳಾ ಗಿಗ್ ಕಾರ್ಮಿಕರು ಶೌಚಾಲಯ, ವಿಶ್ರಾಂತಿ ಸ್ಥಳಗಳ ಕೊರತೆ ಮತ್ತು ಕಠಿಣ ದಂಡಗಳಿಂದ ತೊಂದರೆಗೊಳಗಾಗಿದ್ದಾರೆ. ಉದ್ಯೋಗ ಭದ್ರತೆಯಿಲ್ಲದೆ, ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರನ್ನು ಕೆಲಸದಿಂದ ವಜಾಗೊಳಿಸುವಂತಹ ಗಂಭೀರ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ.
Read Full Story

07:31 PM (IST) Apr 20

‌Sher Movie - ಇದುವರೆಗೂ ಕಾಣಿಸಿಕೊಳ್ಳದ ಪೋಷಾಕು ಧರಿಸಿದ ಕಿರುತೆರೆಯ ಕರ್ಣ, ನಟ ಕಿರಣ್‌ ರಾಜ್!

Kiran Raj Movies: ಪ್ರಸಿದ್ಧ್ ನಿರ್ದೇಶನದಲ್ಲಿ ಕಿರಣ್‌ ರಾಜ್ ನಟಿಸಿರುವ ಚಿತ್ರ "ಶೇರ್". ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಗ್ರೇಸ್ ರಾಜ್ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಸುದರ್ಶನ್ ಸುಂದರರಾಜ್ ನಿರ್ಮಿಸಿರುವ ಸಿನಿಮಾ ಇದಾಗಿದೆ. ಎಚ್.ಕುಮಾರ್ (ರಾಟೆ) ಕಾರ್ಯಕಾರಿ ನಿರ್ಮಾಪಕರು.

 

Read Full Story

07:31 PM (IST) Apr 20

Summer Diet - ಈ ಆಹಾರಗಳಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತೆ - ಬೇಸಿಗೆಯಲ್ಲಿ ಕೂಲ್ ಆಗಿರಲು ಇವುಗಳಿಂದ ದೂರವಿರಿ

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳಿಂದ ದೂರವಿರುವುದು ಬಹಳ ಮುಖ್ಯ. ಮಸಾಲೆಯುಕ್ತ, ಕರಿದ ಪದಾರ್ಥ, ಕೆಫೀನ್ ಮತ್ತು ಜಂಕ್ ಫುಡ್‌ಗಳಿಂದ ಯಾಕೆ ದೂರವಿರಬೇಕು? ಇವುಗಳಿಂದ ದೂರವಿದ್ದರೆ ನಿರ್ಜಲೀಕರಣ ಮತ್ತು ಅಸಿಡಿಟಿಯಿಂದ ಹೇಗೆ ಪಾರಾಗಬಹುದು? ಇಲ್ಲಿದೆ ಮಾಹಿತಿ.

Read Full Story

07:16 PM (IST) Apr 20

Jackfruit Pickle - ಅಜ್ಜಿ ಕೈರುಚಿಯ ಹಲಸಿನಕಾಯಿ ಉಪ್ಪಿನಕಾಯಿ - ಮನೆಯಲ್ಲೇ ಮಾಡಿ, ವರ್ಷವಿಡೀ ಸವಿಯಿರಿ!

ಹಲಸಿನಕಾಯಿ ಉಪ್ಪಿನಕಾಯಿ ಒಂದು ಸಾಂಪ್ರದಾಯಿಕ ಮತ್ತು ರುಚಿಕರವಾದ ರೆಸಿಪಿ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸಾಸಿವೆ ಎಣ್ಣೆ ಮತ್ತು ದೇಸಿ ಮಸಾಲೆಗಳನ್ನು ಬಳಸಿ ಮಾಡುವ ಈ ಉಪ್ಪಿನಕಾಯಿ, ಊಟದ ರುಚಿಯನ್ನು ಹೆಚ್ಚಿಸುವುದಲ್ಲದೆ, ಹೆಚ್ಚು ದಿನಗಳ ಕಾಲ ಸಂಗ್ರಹಿಸಿಡಬಹುದು.

Read Full Story

07:09 PM (IST) Apr 20

Elra Kaleleyutte Kala Movie - ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಚಂದನ್‌ ಶೆಟ್ಟಿ ಕನಸು ನನಸಾಗತ್ತೆ!

elra kaleleyutte kala movie: ಸುಜಯ್ ಶಾಸ್ತ್ರಿ ನಿರ್ದೇಶನದ, ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ನಿರ್ಮಿಸಿರುವ,ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ "ಎಲ್ರ ಕಾಲೆಳಿಯತ್ತೆ ಕಾಲ". ಇತ್ತೀಚೆಗೆ ನಡೆದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲಾಯ್ತು.

Read Full Story

07:03 PM (IST) Apr 20

ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ! ಈ ಬಾರಿ ಹೊಸ ದಾಖಲೆ

ಡಾ.ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯವು ಈ ಬಾರಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಮತ್ತು ತಾಳವಾದ್ಯ ವಾರ್ಷಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಮೇ 10 ರಿಂದ 25ರ ವರೆಗೆ ರಾಜ್ಯದ 30 ಕೇಂದ್ರಗಳಲ್ಲಿ ಈ ಪರೀಕ್ಷೆಗಳು ನಡೆಯಲಿದ್ದು, ಇದು ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ಕಂಡಿದೆ.
Read Full Story

06:53 PM (IST) Apr 20

OTT Releases - ಒಟಿಟಿಯಲ್ಲಿ ರಿಲೀಸ್‌ ಆಯ್ತು ಕೊನೇವರೆಗೂ ಸಸ್ಪೆನ್ಸ್‌, ಕಾಮಿಡಿಯಿಂದಲೇ ಕಾಡಿಸುವ ಸಿನಿಮಾಗಳು

ಏಪ್ರಿಲ್ 20 ರಿಂದ 27ರ ನಡುವೆ ಒಟಿಟಿಯಲ್ಲಿ ಭರ್ಜರಿ ಸಿನಿಮಾ ಮತ್ತು ವೆಬ್ ಸೀರೀಸ್‌ಗಳು ಬಿಡುಗಡೆಯಾಗುತ್ತಿವೆ. ಮನೆಯಲ್ಲೇ ಕೂತು ಆ್ಯಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ಎಂಜಾಯ್ ಮಾಡಬಹುದು. ಯಾವೆಲ್ಲಾ ಸಿನಿಮಾ, ಸೀರೀಸ್‌ಗಳು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗಲಿವೆ?

Read Full Story

06:37 PM (IST) Apr 20

'ಯೂತ್' ಚಿತ್ರಕ್ಕೆ ಮನಸೋತ ರಿಷಬ್ ಶೆಟ್ಟಿ - "ಇದು ಪ್ರತಿ ಪೋಷಕರಿಗೆ ಅರ್ಪಿಸಿದ ಸಿನಿಮಾ" ಎಂದ 'ಕಾಂತಾರ' ಸ್ಟಾರ್

ರಿಷಬ್ ಶೆಟ್ಟಿಯಂತಹ ಸ್ಟಾರ್ ನಟರು ಇಂತಹ ಭಾವನಾತ್ಮಕ ಸಿನಿಮಾಗಳನ್ನು ಗುರುತಿಸಿ ಬೆಂಬಲ ನೀಡುತ್ತಿರುವುದು ಸಿನಿರಂಗಕ್ಕೆ ಹೊಸ ಶಕ್ತಿ ತಂದಂತಾಗಿದೆ. ನೀವು ಈ ವಾರಾಂತ್ಯದಲ್ಲಿ ಯಾವುದಾದರೂ ಒಳ್ಳೆಯ ಫೀಲ್ ಗುಡ್ ಸಿನಿಮಾ ನೋಡಬೇಕೆಂದು ಅಂದುಕೊಂಡಿದ್ದರೆ, ರಿಷಬ್ ಶೆಟ್ಟಿ ಶಿಫಾರಸು ಮಾಡಿರುವ ಈ 'ಯೂತ್' ಸಿನಿಮಾ ನೋಡಬಹುದು.

Read Full Story

06:04 PM (IST) Apr 20

ಕೊನೆಗೂ ಮಾತಾಡಿದ ನಟಿ ಶ್ರೀದೇವಿ ಆತ್ಮ; ಸತ್ತ ಜಾಗದಲ್ಲೇ ಸಾವಿನ ರಹಸ್ಯ ಬಯಲು ಮಾಡಿದ ತನಿಖಾಧಿಕಾರಿ!

Actress Sridevi Death: ಭಾರತೀಯ ಚಿತ್ರರಂಗದ ಅಪ್ರತಿಮ ನಟಿ, 'ಅತಿಲೋಕ ಸುಂದರಿ' ಶ್ರೀದೇವಿ ಸಾವು ಹೇಗೆ ಆಯ್ತು ಎಂದು ಇನ್ನೂ ಅನೇಕರಿಗೆ ಡೌಟ್‌ ಇದೆ. Paranormal Investigation ಆಗಿರುವ Saurabh Poonia ಅವರು ಈ ಬಗ್ಗೆ ಶಲೀನ್‌ ಶ್ರೋತ್ರಿಯಾ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

 

Read Full Story

05:44 PM (IST) Apr 20

ಹುಬ್ಬಳ್ಳಿಯಿಂದ ನ್ಯೂ ಟಿನ್ಸುಕಿಯಾ ನಡುವೆ ವಿಶೇಷ ರೈಲು, ಈಶಾನ್ಯ ಭಾರತ ಭೇಟಿ ಈಗ ಸುಲಭ, ಎಲ್ಲೆಲ್ಲಿ ನಿಲುಗಡೆ?

ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈರುತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ನ್ಯೂ ಟಿನ್ಸುಕಿಯಾ ನಡುವೆ ವಿಶೇಷ ರೈಲು (07325/07326) ಸೇವೆಯನ್ನು ಘೋಷಿಸಿದೆ. ಈ ರೈಲು ಕರ್ನಾಟಕದಿಂದ ಈಶಾನ್ಯ ಭಾರತಕ್ಕೆ ಪ್ರಯಾಣಿಸುವವರಿಗೆ ಅನುಕೂಲ ಕಲ್ಪಿಸಲಿದ್ದು, ಏಪ್ರಿಲ್ 2026 ರಲ್ಲಿ ಸಂಚರಿಸಲಿದೆ.
Read Full Story

05:38 PM (IST) Apr 20

ಜೆಡಿಎಸ್ ಎಲ್ಲಿದೆ ಎಂಬ ಟೀಕೆಗೆ ಸೇರಿರುವ ಸಾವಿರಾರು ಜನರೇ ಸಾಕ್ಷಿ - ನಿಖಿಲ್ ಕುಮಾರಸ್ವಾಮಿ

ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಟೀಕಿಸುವವರಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದ್ದಾರೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story

05:23 PM (IST) Apr 20

ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಬಳಿ ನಿಯೋಗ - ವಿ.ಎಸ್.ಉಗ್ರಪ್ಪ

ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸಲು ಪ್ರಯತ್ನಿಸಬೇಕು ಎಂದು ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.

Read Full Story

05:11 PM (IST) Apr 20

ಮಹಿಳಾ ಮೀಸಲಾತಿಗಲ್ಲ, ಕ್ಷೇತ್ರ ವಿಂಗಡಣೆಗೆ ವಿಪಕ್ಷಗಳ ವಿರೋಧ - ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಅದಕ್ಕೆ ಸೇರಿಸಿ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story

05:10 PM (IST) Apr 20

ಶಿರಸಿಯಲ್ಲಿ ಎರಡನೇ ಮದುವೆಗೆ ತಯಾರಾಗಿದ್ದ ವೈದ್ಯನ ಭೀಕರ ಹತ್ಯೆ! ಆರೋಪಿಯ ಹೆಸರು ಬಹಿರಂಗಪಡಿಸದ ಪೊಲೀಸ್

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಎರಡನೇ ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಆಯುರ್ವೇದ ವೈದ್ಯ ಡಾ. ರಮೇಶ್ ಕಲ್ಗುಟ್ಕರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಮದುವೆಗೆಂದು ಖರೀದಿಸಿದ್ದ ಚಿನ್ನಾಭರಣಗಳ ಆಸೆಗಾಗಿ ಅವರ ಸ್ನೇಹಿತನೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.
Read Full Story

04:08 PM (IST) Apr 20

ಬಿಟ್‌ಕಾಯಿನ್ ಹಗರಣ ಮತ್ತೆ ಮುನ್ನಲೆಗೆ, ಹೈಪ್ರೊಫೈಲ್ ವ್ಯಕ್ತಿಗಳ ಮೇಲೆ ಇಡಿ ದಾಳಿ! ಯಾರ ಮೇಲೆಲ್ಲ ಕಣ್ಣಿಟ್ಟಿದೆ ?

ಬೆಂಗಳೂರಿನಲ್ಲಿ ನಡೆದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ  ED 17ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ಶಾಸಕ ನಲಪಾಡ್ ಹ್ಯಾರಿಸ್, ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಸಂಬಂಧಿಕರು ಹಾಗೂ ಹಲವು ಕ್ರಿಪ್ಟೋ ಕಂಪನಿಗಳ ಮೇಲೆ ಶೋಧ ನಡೆಸಲಾಗಿದ್ದು, ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ. 2020ರ ವಂಚನೆ ಪ್ರಕರಣದಿಂದ ಆರಂಭವಾದ ಈ ತನಿಖೆಯು ಇದೀಗ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತೀವ್ರಗೊಂಡಿದೆ.

Read Full Story

03:43 PM (IST) Apr 20

ಎಂಗೇಜ್‌ಮೆಂಟ್‌ ಟೈಮ್‌ನಲ್ಲೇ ಕಣ್ಣೀರು ಹಾಕಿದ ಟಾಲೆಂಟೆಡ್‌ ಕಲಾವಿದ ಪ್ರಶಾಂತ್‌ ಮನದರಸಿ; ಕೃತಿ ಗೌಡ ಯಾರು?

Gicchi Gili Gili Prashanth Gowda Wedding: ಕ್ವಾಟ್ಲೆ ಕಿಚನ್‌, ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ನಟ ಟಾಲೆಂಟೆಡ್‌ ಕಲಾವಿದ ಅವರು ಎಂಗೇಜ್‌ ಆಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವಿಶೇಷ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

03:22 PM (IST) Apr 20

ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ

ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ, ಸ್ಕೋಡಾ ಕಾರನ್ನು ಸಂಪೂರ್ಣವಾಗಿ ಆರ್‌ಸಿಬಿ ಮಯ ಮಾಡಿದ್ದಾರೆ. ಈ ಕಾರು ಕನ್ನಡ ಬೆಂಗಾಲಿ ದಂಪತಿಗಳ ಕಣ್ಣಿಗೆ ಬಿದ್ದು ಇದೀಗ ಭಾರಿ ವೈರಲ್ ಆಗಿದೆ.

Read Full Story

03:18 PM (IST) Apr 20

ತಿರುವಿನಲ್ಲಿ ಕಾದಿದ್ದ ಜವರಾಯ - ಕಂದಕಕ್ಕೆ ಉರುಳಿದ ಸರ್ಕಾರಿ ಬಸ್ - 21 ಜನರ ದಾರುಣ ಸಾವು

ಜಮ್ಮು ಕಾಶ್ಮೀರದ ಉದ್ದಂಪುರದಲ್ಲಿ ಸರ್ಕಾರಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಬಸ್‌ನಲ್ಲಿದ್ದ 21 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 29 ಜನ ಗಾಯಗೊಂಡಿದ್ದು, ಗಾಯಾಳುಗಳ ಸ್ಥಿತಿಯೂ ಗಂಭೀರವಾಗಿದೆ.

Read Full Story

03:14 PM (IST) Apr 20

ಕೆಕೆಆರ್ ವಿರುದ್ಧ ಸೋತು ಮೈದಾನದಲ್ಲೇ ಅಳುತ್ತಾ ಕುಳಿತ ವೈಭವ್ ಸೂರ್ಯವಂಶಿ; ಸಮಾಧಾನ ಹೇಳಿದ ಎದುರಾಳಿ ತಂಡದ ಸಿಬ್ಬಂದಿ

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋತರೂ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಕಣ್ಣೀರು ಎಲ್ಲರ ಗಮನ ಸೆಳೆದಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ತಂಡ ಸೋತ ನೋವಿನಲ್ಲಿ ಮೈದಾನದಲ್ಲೇ ಅತ್ತ ವೈಭವ್ ಅವರ ಕ್ರೀಡಾಸ್ಪೂರ್ತಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

02:51 PM (IST) Apr 20

700 ಕೋಟಿ ರೂ. ಆಸ್ತಿ, 20 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನದ ಒಡತಿಯಾಗಿರೋ ನಟಿ ಯಾರು?

Actress Priyanka Chopra: ಬಾಲಿವುಡ್‌ ತೊರೆದು ಹಾಲಿವುಡ್‌ ಸೇರಿದ ನಟಿಯೊಬ್ಬರು ಸದ್ಯ 700 ಕೋಟಿ ಆಸ್ತಿ, 20 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಒಡತಿಯಾಗಿದ್ದಾರೆ. ಹಾಲಿವುಡ್‌ ಪತಿಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಿರುವ ಈ ನಟಿ ಬೇರಾರೂ ಅಲ್ಲ, ನಮ್ಮದೇ ಪ್ರಿಯಾಂಕಾ ಚೋಪ್ರಾ.

 

Read Full Story

02:48 PM (IST) Apr 20

ಬೆಂಗಳೂರಿನ ಐಟಿ ಹಬ್‌ಗೆ ಪ್ರಧಾನ ಕಚೇರಿ ಸ್ಥಳಾಂತರಿಸಿದ ಸ್ವಿಗ್ಗಿ - 4 ಮಹಡಿಯ ಪರಿಸರ ಸ್ನೇಹಿ ಕ್ಯಾಂಪಸ್‌ ವಿಶೇಷತೆಗಳಿವು

ಪ್ರಮುಖ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತನ್ನ ಹೊಸ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ತೆರೆದಿದೆ. 'ದಿ ಎವೆರಿಡೇ ಎನೇಬಲರ್' ಪರಿಕಲ್ಪನೆಯಡಿ ನಿರ್ಮಿಸಲಾದಪರಿಸರ ಸ್ನೇಹಿ ಕ್ಯಾಂಪಸ್, ಶೇ. 85ರಷ್ಟು ಹಳೆಯ ವಸ್ತುಗಳ ಮರುಬಳಕೆ, ವಿದ್ಯುತ್ ಉಳಿತಾಯವನ್ನು ಹೊಂದಿದೆ.

Read Full Story

02:46 PM (IST) Apr 20

ಪ್ರಧಾನಿ ಹೇಳಿದ ಗುಟ್ಟು ರಟ್ಟು ಮಾಡಿದ ಸಿಎಂ - ಮೋದಿ ಸಿದ್ದು ಕಿವಿಯಲ್ಲಿ ಹೇಳಿದ್ದೇನು?

ಪ್ರಧಾನಿ ಮೋದಿ ಕಳೆದ ಬುಧವಾರ ರಾಜ್ಯಕ್ಕೆ ಆಗಮಿಸಿದ್ದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ಗುಟ್ಟು ಹೇಳುತ್ತಿರುವಂತಹ ಫೋಟೋಗಳು ವೀಡಿಯೋಗಳು ಭಾರಿ ವೈರಲ್ ಆಗಿದ್ದವು. ಆದರೆ ಈಗ ಪಿಎಂ ತಮ್ಮ ಕಿವಿಯಲ್ಲಿ ಹೇಳಿದ್ದೇನು ಎಂಬುದನ್ನು ಸಿಎಂ ರಿವೀಲ್ ಮಾಡಿದ್ದಾರೆ.

Read Full Story

02:18 PM (IST) Apr 20

ಬೆಂಗಳೂರು ಜಲಮಂಡಳಿಯಿಂದ ದೇಶದ ಅತೀ ದೊಡ್ಡ ಬಯೋ-ಗ್ಯಾಸ್ ಪ್ಲಾನ್‌, ₹120 ಕೋಟಿಗೂ ಅಧಿಕ ಆದಾಯ ಗಳಿಸುವ ಗುರಿ!

ಬೆಂಗಳೂರು ಜಲಮಂಡಳಿಯು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಕಂಪ್ರೆಸ್ಡ್ ಬಯೋ-ಗ್ಯಾಸ್  ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಿದೆ.  ಖಾಸಗಿ ಸಹಭಾಗಿತ್ವದ ಯೋಜನೆಯು, ಯಾವುದೇ ಹೂಡಿಕೆಯಿಲ್ಲದೆ ಮುಂದಿನ 20 ವರ್ಷಗಳಲ್ಲಿ ₹120 ಕೋಟಿಗೂ ಅಧಿಕ ಆದಾಯ ಗಳಿಸುವ ಗುರಿ ಹೊಂದಿದೆ. ಇದು ಸುಸ್ಥಿರ ನಗರ ನಿರ್ವಹಣೆ ಮತ್ತು ಸರ್ಕ್ಯುಲರ್ ಎಕಾನಮಿ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

Read Full Story

02:09 PM (IST) Apr 20

ಬೇಸಿಗೆಯಲ್ಲಿ ದಿನಕ್ಕೆ 2 ಬಾರಿ ಕಾಯಿಸಿದರೂ ಹಾಲು ಒಡೆದು ಹೋಗುತ್ತಾ? ಅದೊಂದು ಪೌಡರ್‌ ಹಾಕಿದ್ರೆ ಕೆಡೋದೆ ಇಲ್ಲ!

How to prevent milk curdling: ಬೇಸಿಗೆಯಲ್ಲಿ ದಿನಕ್ಕೆ ಎರಡು ಬಾರಿ ಕಾಯಿಸಿದರೂ ಹಾಲು ಒಡೆದು ಹೋಗುತ್ತಿದೆಯೇ? ಹಾಗಿದ್ರೆ ಚಿಂತೆ ಬೇಡ. ಫ್ರಿಡ್ಜ್ ಇಲ್ಲದೆಯೂ ಹಾಲನ್ನು ಕೆಡದಂತೆ ತಾಜಾವಾಗಿ ಇಡಲು ಕೆಲವು ಸುಲಭ ಟಿಪ್ಸ್ ಇಲ್ಲಿವೆ. 

Read Full Story

02:01 PM (IST) Apr 20

ಫ್ರಿಜ್​ ಹೊರಗಿಟ್ಟರೂ 6-8 ತಿಂಗಳು ಕೆಡದ, ದಿಢೀರ್​ ದೋಸೆ- ಇಡ್ಲಿ ಹಿಟ್ಟು ರೆಡಿ ಹೀಗೆ - ಆಹಾರ ತಜ್ಞ ಮಾಹಿತಿ

ಆರ್​ಆರ್​ವಿ ಕೇಟರ್ಸ್​ನ ವಿನಯ್​ ಶ್ರೀನಿವಾಸ್​​ ಅವರು ಮನೆಯಲ್ಲಿಯೇ ದಿಢೀರ್ ಇಡ್ಲಿ-ದೋಸೆ ಪುಡಿ ತಯಾರಿಸುವ ಸುಲಭ ವಿಧಾನವನ್ನು ಹಂಚಿಕೊಂಡಿದ್ದಾರೆ. ಅಕ್ಕಿ, ಉದ್ದಿನಬೇಳೆ ಮತ್ತು ಅವಲಕ್ಕಿ ಬಳಸಿ ತಯಾರಿಸಿದ ಈ ಪುಡಿಯನ್ನು ಫ್ರಿಜ್ ಇಲ್ಲದೆಯೇ ಆರೆಂಟು ತಿಂಗಳು ಸಂಗ್ರಹಿಸಿಡಬಹುದು.  

Read Full Story

01:25 PM (IST) Apr 20

'ವಿಶ್ವದ ಅತಿದೊಡ್ಡ ಕೆಫೆ' ಬೆಂಗಳೂರು ರಾಮೇಶ್ವರಂ ಕೆಫೆ ಭವ್ಯ ಒಳಾಂಗಣ ನೋಟ ಇಲ್ಲಿದೆ - ಸಂಸ್ಕೃತಿ, ಕಲೆಯ ಕೇಂದ್ರ

ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ರಾಮೇಶ್ವರಂ ಕೆಫೆ, 90,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ವಿಶ್ವದ ಅತಿದೊಡ್ಡ ಕೆಫೆಯಾಗಿದೆ. ಇದು ಕೇವಲ ರೆಸ್ಟೋರೆಂಟ್ ಆಗಿರದೆ, ಆದಿಯೋಗಿ ಪ್ರತಿಮೆ, ದೇವಾಲಯ, ದೈವಿಕ ಹಾಗೂ ಸಾಂಸ್ಕೃತಿಕ ಅನುಭವ ಕೇಂದ್ರವಾಗಿದೆ.

Read Full Story

01:24 PM (IST) Apr 20

ಬಿಟ್‌ಕಾಯಿನ್ ಪ್ರಕರಣದ ಕಿಂಗ್ ಪಿನ್ ಶ್ರೀಕಿ ಸೇರಿ ದೆಹಲಿ ಪಬ್ಲಿಕ್ ಸ್ಕೂಲ್‌ ಮಾಲೀಕನ ಮನೆಗೂ ಇಡಿ ದಾಳಿ

ಬೆಂಗಳೂರಿನ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) 17 ಕಡೆ ದಾಳಿ ನಡೆಸಿದೆ. ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಮಹಮ್ಮದ್ ಹಕೀಬ್ ಖಾನ್ ಅವರ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆದಿದೆ. ಇವರಿಬ್ಬರ ನಡುವಿನ ಹಣಕಾಸು ವ್ಯವಹಾರದ ಶಂಕೆಯ ಮೇಲೆ ಈ ದಾಳಿಗಳು ನಡೆದಿವೆ.
Read Full Story

12:59 PM (IST) Apr 20

ಮೂರು ಧಾರಾವಾಹಿಗಳ ಸಂಗಮ; ಭರ್ಜರಿ ಟ್ವಿಸ್ಟ್‌ ಕೊಟ್ಟ ಸ್ಟಾರ್‌ ಸುವರ್ಣ ವಾಹಿನಿ!

Star Suvarna Serials: ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಂದಾಗುವುದನ್ನು 'ಮಹಾಸಂಗಮ' ಎಂದು ಹೇಳಲಾಗುತ್ತದೆ. ಆದರೆ ಕಿರುತೆರೆಯಲ್ಲಿ ಮೂರೂ ಧಾರಾವಾಹಿಗಳನ್ನು ಸೇರಿಸಿ ತ್ರಿವೇಣಿ ಸಂಗಮ ಮಾಡುತ್ತಿರುವುದು ಇದೇ ಮೊದಲು. ಈ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. 

 

Read Full Story

12:43 PM (IST) Apr 20

ಬಿಟ್‌ಕಾಯಿನ್ ಹಗರಣದ ಬೇಟೆ, ಹ್ಯಾರಿಸ್ ನಲಪಾಡ್ ಪುತ್ರನಿಗೆ ಇಡಿ ಶಾಕ್! 17 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) 17 ಕಡೆ ದಾಳಿ ನಡೆಸಿದ್ದು, ಬಿಟ್‌ಕಾಯಿನ್ ಹಗರಣದ ತನಿಖೆಯ ಭಾಗವಾಗಿ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್ ನಿವಾಸದ ಮೇಲೂ ಶೋಧ ನಡೆಸಿದೆ. ಪ್ರಮುಖ ಆರೋಪಿ ಶ್ರೀಕೃಷ್ಣ ಜೊತೆಗಿನ ಸಂಪರ್ಕದ ಶಂಕೆಯ ಮೇಲೆ ಈ ದಾಳಿ ನಡೆದಿದೆ.
Read Full Story

12:41 PM (IST) Apr 20

ಢಂ ಎಂದ ಟೈರ್, ಸುಂಯ್ ಅಂತ ಜಾರಿದ ಬೈಕ್; ಅಪ್ಪ-ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟ ಮಗಳು

ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬೈಕ್ ಟಯರ್ ಬ್ಲಾಸ್ಟ್ ಆಗಿ ಸಂಭವಿಸಿದ ಅಪಘಾತದಲ್ಲಿ 16 ವರ್ಷದ ವಿದ್ಯಾರ್ಥಿನಿ ಸಿಂಚನಾ ಸಾವನ್ನಪ್ಪಿದ್ದಾಳೆ. ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ನಾಲ್ವರು ಪ್ರಯಾಣಿಸುತ್ತಿದ್ದು, ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

12:39 PM (IST) Apr 20

ಒಣಹುಲ್ಲು ಸಾಗಿಸುತ್ತಿದ್ದ ಬೊಲೆರೋಗೆ ವಿದ್ಯುತ್ ತಂತಿ ತಗುಲಿ ಬೆಂಕಿ - ನಡುರಸ್ತೆಯಲ್ಲಿ ಧಗಧಗ

ಯಾದಗಿರಿ ಜಿಲ್ಲೆಯ ವಡಗೇರಾ ಬಳಿ, ಒಣ ಹುಲ್ಲು ಸಾಗಿಸುತ್ತಿದ್ದ ಬೊಲೆರೋ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
Read Full Story

12:35 PM (IST) Apr 20

ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?

ಕರ್ಣ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ, ತಮ್ಮನ್ನು 'ಅಟಿಟ್ಯೂಡ್' ಹುಡುಗಿ ಎಂದು ತಪ್ಪಾಗಿ ತಿಳಿಯುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಬಿಗ್‌ಬಾಸ್ ನಂತರ ಬದಲಾದ ತಮ್ಮ ಜೀವನ ಹಾಗೂ ಬಾಲ್ಯದ ಬಗ್ಗೆ ಮಾತನಾಡಿದ ಅವರು, ಕಾರ್ತಿಕ್ ಮಹೇಶ್ ಜೊತೆಗಿನ ಡೇಟಿಂಗ್  ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

Read Full Story

11:49 AM (IST) Apr 20

Bidar - ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ

ಬೀದರ್ ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

11:14 AM (IST) Apr 20

DCRE ಇಲಾಖೆಯಲ್ಲೇ ದಲಿತ ಇನ್ಸ್‌ಪೆಕ್ಟರ್‌ಗೆ ಜಾತಿ ದೌರ್ಜನ್ಯ? ಎಸ್‌ಪಿ, ಡಿವೈಎಸ್‌ಪಿ ವಿರುದ್ಧ ಡಿಜಿಗೆ ದೂರು

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಇನ್ಸ್‌ಪೆಕ್ಟರ್ ಶ್ರೀನಿವಾಸ್, ತಮ್ಮ ಮೇಲಾಧಿಕಾರಿಗಳಾದ ಎಸ್‌ಪಿ ಕರಿಬಸನಗೌಡ ಮತ್ತು ಡಿವೈಎಸ್‌ಪಿ ಮಹೇಶ್ವರಗೌಡ ವಿರುದ್ಧ ಜಾತಿ ನಿಂದನೆ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. 

Read Full Story

11:13 AM (IST) Apr 20

ನಂದಗೋಕುಲದಲ್ಲಿ ಮಹಾ ಬಿರುಕು - ಅತಿಯಾಗಿ ಆಡ್ತಿದ್ದ ಹಿತ್ತಾಳೆ ಕಿವಿ ನಂದನಿಗೆ ಬಿಗ್ ಶಾಕ್!

ನಂದಗೋಕುಲ ಧಾರಾವಾಹಿಯಲ್ಲಿ, ಪತ್ನಿ ಮೀನಾಗೆ ಆದ ಅವಮಾನವನ್ನು ಸಹಿಸದ ಕೇಶವ, ತಂದೆ ನಂದಕುಮಾರ್ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ಬೇಸತ್ತು, ಪ್ರತ್ಯೇಕ ಮನೆ ಮಾಡುವ ನಿರ್ಧಾರವನ್ನು ಮೀನಾ ಮುಂದೆ ಪ್ರಸ್ತಾಪಿಸಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ.
Read Full Story

10:38 AM (IST) Apr 20

ಪೊಲೀಸ್ ಇಲಾಖೆಯಲ್ಲಿ 'ಖಾಕಿ' ವಾರ್ - ಐಪಿಎಸ್ ಅಧಿಕಾರಿ ರೆಡ್ಡಿ ವಿರುದ್ಧ ಡಿಜಿಪಿಗೆ ಎಸ್‌ಪಿ ದೂರು

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ, ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಡಿ ಸಿ ಆರ್ ಇ ಎಸ್‌ಪಿ ಕಾಶಿನಾಥ್ ಅವರು ಡಿಜಿಪಿ ಸಲೀಂ ಅವರಿಗೆ ಪತ್ರ ಬರೆದಿದ್ದಾರೆ. 

Read Full Story

More Trending News