ಬೆಂಗಳೂರು (ಡಿ.19): ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ, ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂಥ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025’ ಅಂಗೀಕಾರ ಮಾಡಲಾಗಿದೆ. ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್ ಮಾಡಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:45 PM (IST) Dec 19
ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ ನಡೆದಿದೆ. ಕರ್ತವ್ಯ ಮುಗಿಸಿ ಮರಳುತ್ತಿದ್ದ ಬೀದಿ ಕಾಮಕ ವೈದ್ಯ ಅಡ್ಡಗಟ್ಟಿ ಮುಟ್ಟಲು ಯತ್ನಿಸಿದ್ದಾನೆ. ವೈದ್ಯೆ ಕಿರುಚಾಡಿದ್ದಾರೆ.
10:40 PM (IST) Dec 19
ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ, ಈ ದೇಶದಲ್ಲಿ ಪ್ರಧಾನಿಯಾಗಲು ಅರ್ಹ, ಸೂಕ್ತ ವ್ಯಕ್ತಿ ಎಂದು ಯಾರಾದರು ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಎಂದಿದ್ದಾರೆ. ನೋವಿನಲ್ಲಿ ರಾಯರೆಡ್ಡಿ ಹೇಳಿದ್ದೇನು?
10:06 PM (IST) Dec 19
ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮತ್ತೆ ನಾಗರಿಕ ಪ್ರಯಾಣಕ್ಕೆ ಬಳಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
09:35 PM (IST) Dec 19
ಬಿಜೆಪಿ ಅವರು ಮಹಿಳಾ ವಿರೋಧಿಗಳು. ಹೀಗಾಗಿಯೇ ಶಕ್ತಿ, ಗೃಹಲಕ್ಷ್ಮಿಯಂತಹ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
09:29 PM (IST) Dec 19
ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸುವ ಮೂಲಕ ಕೇಂದ್ರ ಸರ್ಕಾರವು ರಾಮನ ಹೆಸರಲ್ಲಿ ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ.
09:02 PM (IST) Dec 19
ನಂದಮೂರಿ ಬಾಲಕೃಷ್ಣ ವಾರಣಾಸಿಗೆ ಭೇಟಿ ನೀಡಿ ಕಾಶಿ ವಿಶ್ವನಾಥ ಮತ್ತು ಮಾತಾ ವಿಶಾಲಾಕ್ಷಿ ದರ್ಶನ ಪಡೆದರು. ಈ ಸಮಯದಲ್ಲಿ, ಅವರು ತಮ್ಮ ಅಖಂಡ 2 ಚಿತ್ರದ ಪ್ರಚಾರ ಮಾಡಿದರು. ಈ ಚಿತ್ರವು ಸನಾತನ ಧರ್ಮವನ್ನು ಆಧರಿಸಿದೆ ಮತ್ತು ಇದು ಭಕ್ತಿ ಹಾಗೂ ಸಿನಿಮಾದ ಸಂಗಮ ಎಂದು ಹೇಳಿದರು.
08:56 PM (IST) Dec 19
ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯುವೆಲರ್ಸ್ ಮಾಲೀಕ ಗೋವರ್ಧನ್ ಅವರನ್ನು ಕೇರಳ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮರುಲೇಪನದ ಬಳಿಕ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿತ್ತು.
08:40 PM (IST) Dec 19
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವದಂತಿಗಳು ಮತ್ತೆ ಜೋರಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಅವರ ಮದುವೆಯ ಫೋಟೋಗಳು AI ನಿಂದ ರಚಿಸಲಾಗಿದ್ದು, ಸಂಪೂರ್ಣವಾಗಿ ನಕಲಿಯಾಗಿವೆ.
08:25 PM (IST) Dec 19
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯವು (ED) ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ 8.07 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ.
08:18 PM (IST) Dec 19
'ಧುರಂಧರ್' ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ಆದಿತ್ಯ ಧರ್ ತುಂಬಾ ಖುಷಿಯಾಗಿದ್ದಾರೆ. ಈ ಸ್ಪೈ ಥ್ರಿಲ್ಲರ್ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.
08:18 PM (IST) Dec 19
ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ 8.61 ಎಕರೆ ಪ್ರದೇಶದಲ್ಲಿರುವ 371 ಮರಗಳನ್ನು ಕಡಿಯದಂತೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ವಾಣಿಜ್ಯ ಬಳಕೆಗಾಗಿ ಈ ಜಾಗವನ್ನು ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ಮರ ಕಡಿಯಬಾರದು ಎಂದಿದೆ.
08:09 PM (IST) Dec 19
ಶಾಲಾ ಬಸ್ ಹಾಗೂ ಟಾಟಾ ಏಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
08:07 PM (IST) Dec 19
ನಟ ಕಿಚ್ಚ ಸುದೀಪ್ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಶಾಂತವಾಗಿರುವುದರ ಹಿಂದಿನ ರಹಸ್ಯವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಖಾರ ಮತ್ತು ಮಸಾಲೆ ಪದಾರ್ಥಗಳಿಂದ ದೂರವಿದ್ದು, ದೇಹ ಮತ್ತು ಹೊಟ್ಟೆಯನ್ನು ತಂಪಾಗಿರಿಸುವ ದಾಲ್ನಂತಹ ಆಹಾರ ಸೇವಿಸುವುದೇ ತಮ್ಮ ಕೂಲ್ ಸ್ವಭಾವಕ್ಕೆ ಕಾರಣ ಎಂದಿದ್ದಾರೆ
07:54 PM (IST) Dec 19
ಸಾರ್ ನಿಮ್ಮ ಕುರ್ಚಿ ಅಲುಗಾಡ್ತಿದೆ ಅಂತಾರೆ. 2028ರವರೆಗೆ ನೀವೇ ಸಿಎಂ ಆಗಿರಿ, ನಮಗೇನೂ ತೊಂದರೆ ಇಲ್ಲ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ. ಆಯ್ತು, ಸಂಜೆ ಬನ್ನಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರಿಗೆ ಆಹ್ವಾನಿಸಿದರು.
07:28 PM (IST) Dec 19
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (DRDO) 2025ನೇ ಸಾಲಿಗೆ 764 ಹಿರಿಯ ತಾಂತ್ರಿಕ ಸಹಾಯಕ ಮತ್ತು ತಂತ್ರಜ್ಞ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ, ಮತ್ತು ಬಿ.ಇ/ಬಿ.ಟೆಕ್ ಪೂರ್ಣಗೊಳಿಸಿದ ಆಸಕ್ತರು ಡಿಸೆಂಬರ್ 31, 2025ರೊಳಗೆ ಅರ್ಜಿ ಸಲ್ಲಿಸಬಹುದು.
07:19 PM (IST) Dec 19
ಬಿಗ್‌ಬಾಸ್ ಮನೆಯಲ್ಲಿ ಧನುಷ್, ಸ್ಪಂದನಾ ಸೋಮಣ್ಣ ಅವರ 'ಕರಿಮಣಿ' ಸೀರಿಯಲ್ ಪಾತ್ರವನ್ನು ತಮಾಷೆ ಮಾಡಿದ್ದಾರೆ. ಸೀರಿಯಲ್‌ನಲ್ಲಿ ಗರ್ಭಿಣಿಯಾಗಿದ್ದಾಗ ಫೈಟಿಂಗ್ ಮಾಡಿದ ದೃಶ್ಯವನ್ನು ಧನುಷ್ ನಟಿಸಿ ತೋರಿಸಿದ್ದು, ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದೆ.
07:05 PM (IST) Dec 19
ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರಗೆ ತಂದೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಉಡುಪಿ ನ್ಯಾಯಾಲಯದಿಂದ ಆದೇಶ. ಏನಿದು ಪ್ರಕರಣ? ಪೂರ್ತಿ ವಿವರ ತಿಳಿಯಲು ಕ್ಲಿಕ್ ಮಾಡಿ.
06:44 PM (IST) Dec 19
ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಎಣ್ಣೆ ಹೊಡೆದು ಕಿಕ್ ಕೊಡ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಆ ಸಹವಾಸವೇ ಬೇಡ ನಾನು ಗ್ಲಾಮರ್ ಕಡೆ ಮುಖನು ಹಾಕಲ್ಲ ಅಂತ ಬಣ್ಣ ಬದಲಿಸಿದ್ದಾರೆ.
06:43 PM (IST) Dec 19
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಒಳಚರಂಡಿ ಜಾಲಕ್ಕಾಗಿ 1200 ಕೋಟಿ ರೂಪಾಯಿಗಳ ಬೃಹತ್ ಯೋಜನೆ ಸಿದ್ಧವಾಗುತ್ತಿದೆ. ಇದರೊಂದಿಗೆ, ಬೀದಿ ನಾಯಿಗಳ ಪುನರ್ವಸತಿ ಮತ್ತು ನಗರಕ್ಕೆ 100 ಹೊಸ ಎಲೆಕ್ಟ್ರಿಕ್ ಬಸ್ಸುಗಳನ್ನು ತರುವ ಯೋಜನೆಯನ್ನು ಜಿಲ್ಲಾಧಿಕಾರಿ ದರ್ಶನ್ ಬಹಿರಂಗಪಡಿಸಿದ್ದಾರೆ.
06:26 PM (IST) Dec 19
ಅಪ್ಪ ಸೂಪರ್ ಸ್ಟಾರ್.. ಶ್ರೀಮಂತ ನಟ. ಬೇಕಾಗಿದ್ದೆಲ್ಲಾ ಕಣ್ ಮುಂದೆಯೇ ಇರುತ್ತೆ. ಮನೆ ಫ್ರೆಂಡ್ಸ್ ಆಂತ ಓಡಾಡ್ಕೊಂಡು ಎಂಜಾಯ್ ಮಾಡ್ಕೊಂಡು ಇರಬಹುದು.. ಆದ್ರೆ ಬಾದ್ ಷಾ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಗಲ್ಲ.
06:19 PM (IST) Dec 19
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್ ಹೇಳುವವರೆಗೂ ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಮತ್ತು ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದ ಇಲ್ಲವೆಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
06:15 PM (IST) Dec 19
ನಟ ದರ್ಶನ್ಗೆ ಜೈಲು ಅದೃಷ್ಟ ಕೈ ಕೊಟ್ಟಿದೆ. ದಾಸ ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದೆ. ಅಷ್ಟೆ ಅಲ್ಲ ಜೈಲಿನಲ್ಲೂ ದಾಸ ಆಟಾಟೋಪ ನಡೀತಾ ಇಲ್ಲ. ಹಾಗಾದ್ರೆ ದಾಸನಿಗಿದ್ದ ಆ ಅದೃಷ್ಟ ಯಾವ್ದು..? ದಚ್ಚು ನಿರೀಕ್ಷೆ ಮಾಡಿದ್ದೆಲ್ಲವೂ ಸುಳ್ಳಾಗಿದ್ದು ಏನು..?
05:51 PM (IST) Dec 19
ಕನ್ನಡಕ್ಕೆ ಡಬ್ಬಿಂಗ್ ಆದ ಪರಭಾಷಾ ಸಿನಿಮಾಗಳ ಸಂಖ್ಯೆಯನ್ನೂ ಸೇರಿಸಿದರೆ ಈ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ 282. ಅದರಲ್ಲಿ ಬರೀ ಕನ್ನಡ ಸಿನಿಮಾಗಳ ಸಂಖ್ಯೆ 256.
05:48 PM (IST) Dec 19
ಧಾರವಾಡದ ಸತ್ತೂರು ಬಳಿ ಕೆಎಚ್‌ಬಿ ನಿರ್ಮಿಸುತ್ತಿರುವ 4ನೇ ಹಂತದ ವಸತಿ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಮಣ್ಣು ಬದಲಾವಣೆ, ಒಳಚರಂಡಿ, ರಸ್ತೆ ನಿರ್ಮಾಣದ ಹೆಸರಿನಲ್ಲಿ ಗುತ್ತಿಗೆದಾರರು ಸುಳ್ಳು ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಪಡೆದಿದ್ದು ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.
05:35 PM (IST) Dec 19
ಕೋಟಿ ಕೋಟಿ ಬೆಲೆಬಾಳುವ ಲಕ್ಸುರಿ ಲ್ಯಾಂಬೋರ್ಗಿನಿ ಕಾರಿನ ಮಾಲೀಕ ಸಾರಿಗೆ ಇಲಾಖೆ ಅಧಿಕಾರಿಗಳ ಮುಂದೆ ಮಂಡಿಯೂರಿದ್ದಾನೆ. ಮುಂದಿನ 15 ದಿನದಲ್ಲಿ ಸೈಲೆನ್ಸರ್ ಚೇಂಜ್ ಮಾಡಿಕೊಂಡು ಬರದಿದ್ದರೆ ನಿಮ್ಮ ಕಾರಿನ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡೋ ಎಚ್ಚರಿಕೆ ನೀಡಿದ್ದಾರೆ.
05:32 PM (IST) Dec 19
ಡಿಸೆಂಬರ್ ತಿಂಗಳು ಬಂತೆಂದರೆ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಬೆಂಕಿಯಲ್ಲಿ ಕೂತಂಥಾ ಅನುಭವ. ಹಲವು ಸಿನಿಮಾ ತಂಡಗಳು ಏಕಾಏಕಿ ನುಗ್ಗಿ ಹೇಗಾದರೂ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೆಟ್ ನೀಡುವಂತೆ ದುಂಬಾಲು ಬೀಳುತ್ತವೆ.
05:07 PM (IST) Dec 19
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಆರ್ಥಿಕ ಸಂಕಷ್ಟದಲ್ಲಿರುವ ಪವಿತ್ರಾ ಗೌಡ ಅವರು ದರ್ಶನ್ ಭೇಟಿಗಾಗಿ ಹರಸಾಹಸ ಪಡುತ್ತಿದ್ದಾರೆ. ಆದರೆ, ಪವಿತ್ರಾ ಮೇಲೆಯೇ ದರ್ಶನ್ ಕೆಂಡಾಮಂಡಲವಾಗಿದ್ದಾರೆ.
05:07 PM (IST) Dec 19
ಬಿಗ್‌ಬಾಸ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಮೇಲೆ ಸುದೀಪ್ ಗರಂ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಆರೋಪಗಳಿಗೆ ಇದೀಗ ಮಾಜಿ ಸ್ಪರ್ಧಿ ವಿನಯ್ ಗೌಡ ಪ್ರತಿಕ್ರಿಯಿಸಿದ್ದು, ಸುದೀಪ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
04:55 PM (IST) Dec 19
ಹಾರ್ಟ್‌ಫುಲ್‌ನೆಸ್ ಇನ್‌ಸ್ಟಿಟ್ಯೂಟ್ ʻವಿಶ್ವ ಧ್ಯಾನ ದಿನ 2025ʼ ಘೋಷಿಸಿದೆ. ಅವಲೋಕನದ ಏಕೀಕೃತ ಕ್ಷಣವನ್ನು ಸೃಷ್ಟಿಸಲು ಪ್ರಾದೇಶಿಕತೆ, ಸಂಸ್ಕೃತಿ ಮತ್ತು ನಂಬಿಕೆಯ ವ್ಯವಸ್ಥೆಗಳನ್ನು ಮೀರುವಂತೆ ವಿನ್ಯಾಸಗೊಳಿಸಲಾಗಿದೆ.
04:44 PM (IST) Dec 19
04:42 PM (IST) Dec 19
2025ರಲ್ಲಿ ತೆರೆಗೆ ಕಂಡ ಚಿತ್ರಗಳಲ್ಲಿ 5 ಸಿನಿಮಾಗಳು 500 ಕೋಟಿ ಕ್ಲಬ್ ಸೇರಿವೆ. ಅದರಲ್ಲಿ ಹಿಂದಿಯಲ್ಲಿ ಮೂರು, ಕನ್ನಡದಲ್ಲಿ ಒಂದು, ತಮಿಳಿನಲ್ಲಿ ಒಂದು ಸೇರಿ ಒಟ್ಟು ಐದು ಚಿತ್ರಗಳಿಂದಲೇ 3,135 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಲಾಗಿದೆ.
04:35 PM (IST) Dec 19
04:25 PM (IST) Dec 19
ಸುಕೃತಿ ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಬೆಂಗಳೂರು ಮಿಡ್ಟೌನ್ ಸಂಸ್ಥೆಗಳ ಸಹಯೋಗದಲ್ಲಿ ನೆಮ್ಮದಿ ಪ್ಯಾಲಿಯೇಟಿವ್ ಕೇರ್ ಸೆಂಟರ್ ಅನ್ನು ಬೆಂಗಳೂರಿನ ನೆಲಮಂಗಲದ ಹೊರವಲಯದಲ್ಲಿ ಉದ್ಘಾಟಿಸಲಾಗುತ್ತಿದೆ.
03:59 PM (IST) Dec 19
ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2033ರವರೆಗಿನ ಅಡ್ಡಿಯಿದ್ದರೂ, ಸರ್ಕಾರ ದೂರದೃಷ್ಟಿಯಿಂದ ಈಗಲೇ ಸಿದ್ಧತೆ ಆರಂಭಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಸ್ಥಳದ ಆಯ್ಕೆ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಗಾಗಿ ಟೆಂಡರ್ ಕರೆಯಲಾಗಿದೆ.
03:43 PM (IST) Dec 19
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಕೂದಲು ಬಾಚೋದಿಲ್ಲ, ಹಲ್ಲುಜ್ಜಲ್ಲ, ಊಟಕ್ಕೆ ಸರಿಯಾಗಿ ಕೂರೋದಿಲ್ಲ ಎಂಬ ಆರೋಪ ಇದೆ. ಇತ್ತೀಚೆಗೆ ಇವರ ನಡೆ ನುಡಿ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವೀಕ್ಷಕರು ಹೇಳಿದ್ದೇನು?
03:42 PM (IST) Dec 19
ಕಸ ಸುಡುವುದರಿಂದ ಉಂಟಾಗುತ್ತಿರುವ ಹೊಗೆಯಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ನಟಿ ಐಂದ್ರಿತಾ ರೇ, ಬಿಬಿಎಂಪಿ ಸಹಾಯವಾಣಿ ಸ್ಪಂದಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯರ ದೂರಿಗೆ ಕಿವಿಗೊಡದ ಅಧಿಕಾರಿಗಳು, ಸೆಲೆಬ್ರಿಟಿ ಮಾತಿಗೆ ಬೆಲೆ ಕೊಡುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ.
03:18 PM (IST) Dec 19
ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸಲ್ಲಿಸಿದ ಪೂರ್ವ-ಕಾರ್ಯಸಾಧ್ಯತಾ ವರದಿಗೆ ರಾಜ್ಯ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
03:08 PM (IST) Dec 19
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನಿಗೆ ಈ ಮನೆಯಲ್ಲಿ ಉಳಿದುಕೊಳ್ಳೋಕೆ ಏನಾದರೂ ಕಂಟೆಂಟ್ ಬೇಕು, ಅವನು ಯಾರನ್ನಾದರೂ ಹುಡುಕುತ್ತಾನೆ ಎಂದು ಧ್ರುವಂತ್, ಜಾಹ್ನವಿ, ಅಶ್ವಿನಿ ಗೌಡ ಹೇಳುತ್ತಿದ್ದರು. ಈಗ ಈ ವಿಚಾರವನ್ನು ಸ್ವತಃ ಗಿಲ್ಲಿ ಒಪ್ಪಿಕೊಂಡಿದ್ದಾರೆ.
03:03 PM (IST) Dec 19
02:34 PM (IST) Dec 19
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರ ಲವ್, ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈಗ ಗಿಲ್ಲಿ ನಟನಿಗೆ ಹೆಣ್ಣು ಕೊಡೋ ಮಾವನ ಜೊತೆ ರಘು ಅವರು ಮಾತನಾಡೋಕೆ ರೆಡಿ ಆಗಿದ್ದಾರೆ. ಈ ಬಗ್ಗೆ ಮಾತುಕತೆ ಆಗಿದೆ.