Published : Apr 19, 2025, 07:18 AM ISTUpdated : Apr 19, 2025, 11:57 PM IST

Karnataka News Live 19th April: ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

ಸಾರಾಂಶ

ಶಾಂತವಾಗಿದ್ದ ಕರ್ನಾಟಕದಲ್ಲಿ ಮತ್ತೆ ಡಾನ್ ಸಮರ ಆರಂಭಗೊಂಡಿದೆಯಾ ಅನ್ನೋ ಅನುಮಾನ ಮೂಡಿಸಿದೆ. ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗ ರಿಕ್ಕಿ ರೈ ಮೇಲೆ ದಾಳಿ ನಡೆದಿದೆ. ಮುತ್ತಪ್ಪ ರೈ ಬಿಡದಿ ಮನೆಯಿಂದ ಬೆಂಗಳೂರಿಗೆ ಹೊರಟ ಬೆನ್ನಲ್ಲೇ ಈ ದಾಳಿ ನಡೆದಿದೆ. ಸದ್ಯ ರಿಕ್ಕಿ ರೈಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿ, ಕರ್ನಾಟಕದಲ್ಲಿ ಮಾಜಿ ಡಾನ್ ಸಮರ ಅಂತ್ಯಗೊಂಡಿಲ್ಲ, ಈ ತಲೆಮಾರಿಗೂ ಮುಂದುವರಿದಿದೆ ಅನ್ನೋ ಸೂಚನೆ ನೀಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ಜಾತಿ ಗಣತಿ ವರದಿ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಲವು ಸಮುದಾಯಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದಿದೆ. ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್‌ಡೇಟ್.

Karnataka News Live 19th April: ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

11:57 PM (IST) Apr 19

ಖುಷ್ಬೂ 20 ಕೆಜಿ ತೂಕ ಇಳಿಕೆ ರಹಸ್ಯ; ಇಂಜೆಕ್ಷನ್ ತಗೊಂಡ್ರಾ 54ರ ನಟಿ!

ನಟಿ ಖುಷ್ಬು ಸುಂದರ್ 20 ಕೆಜಿ ತೂಕ ಇಳಿಸಿಕೊಂಡಿದ್ದು, ಅವರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿವೆ.  ಆದರೆ, ತೂಕ ಇಳಿಕೆಗೆ ಇಂಜೆಕ್ಷನ್ ತಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ

11:49 PM (IST) Apr 19

ಮುಂಬೈನಲ್ಲಿ ಪಾಲಿಕೆಯಿಂದ 90 ವರ್ಷದಷ್ಟು ಹಳೆಯ ದೇಗುಲ ಧ್ವಂಸ: ಬೀದಿಗಿಳಿದ ಜೈನ ಸಮುದಾಯ

ಮುಂಬೈನಲ್ಲಿ 90 ವರ್ಷಕ್ಕೂ ಹಳೆಯ ಜೈನ ದೇಗುಲವೊಂದನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೆಡವಿ ಹಾಕಿದ್ದು, ಇದನ್ನು ಖಂಡಿಸಿ ಸಾವಿರಾರು ಜೈನ ಸಮುದಾಯದ ಜನ ರಸ್ತೆಗಿಳಿದು ಶಾಂತಿಯುತ ಪ್ರತಿಭಟನೆ ನಡೆಸಿದರು

ಪೂರ್ತಿ ಓದಿ

11:39 PM (IST) Apr 19

ಮಲ್ಲಿಕಾರ್ಜುನ ಖರ್ಗೆಯವರೇ ರಾಜ್ಯ ಸರ್ಕಾರ ಬೀಳಿಸ್ತಾರೆ: ಶ್ರೀರಾಮುಲು ಬಾಂಬ್‌

ರಾಜ್ಯದಲ್ಲಿನ ವಿಫಲ ಸರ್ಕಾರ ಇನ್ನು ಬಹಳ ದಿನ ಇರಲ್ಲ. ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಿ ಇರಬೇಕು ಅಂತ ಡಿಕೆಶಿ, ಸಿದ್ರಾಮಯ್ಯ ನಡುವೆ ಕಿತ್ತಾಟ ನಡೆದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. 

ಪೂರ್ತಿ ಓದಿ

11:30 PM (IST) Apr 19

ಕೇರಳದಲ್ಲಿ 45 ಸಿನಿಮಾ ಟೀಸರ್ ಬಿಡುಗಡೆ; ಉಪೇಂದ್ರ, ಶಿವಣ್ಣ ಹಾವಳಿ!

45 ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಲಯಾಳಂನ ಯುವ ನಟ ಆಂಟನಿ ವರ್ಗೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ಯಾನ್ ಇಂಡಿಯಾ ಸಿನಿಮಾ 

ಪೂರ್ತಿ ಓದಿ

10:33 PM (IST) Apr 19

ರಾಜ್ಯದಲ್ಲಿ 958 ನಕಲಿ ವೈದ್ಯರು ಪತ್ತೆ; ಕೋಲಾರ, ತುಮಕೂರಲ್ಲಿ ಹಾವಳಿ!

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ 958 ನಕಲಿ ವೈದ್ಯರನ್ನು ಪತ್ತೆಹಚ್ಚಿದೆ. ಬೀದರ್, ಕೋಲಾರ, ಮತ್ತು ತುಮಕೂರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗಿದೆ. ಹೈಡೋಸ್ ಔಷಧಿಗಳನ್ನು ನೀಡಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಪೂರ್ತಿ ಓದಿ

09:53 PM (IST) Apr 19

ಜಗತ್ತಿನ ಅತ್ಯಂತ ತೆಳ್ಳಗಿನ ಗಗನಚುಂಬಿ ಕಟ್ಟಡ: ಮತ್ತೊಂದು ಅದ್ಭುತಕ್ಕೆ ಸಾಕ್ಷಿಯಾಗಲಿದೆ ದುಬೈ

ದುಬೈನಲ್ಲಿ 13,000 ಅಡಿ ಎತ್ತರದ 73 ಮಹಡಿಗಳ ವಿಶ್ವದ ಅತ್ಯಂತ ತೆಳ್ಳಗಿನ ಗಗನಚುಂಬಿ ಕಟ್ಟಡ ನಿರ್ಮಾಣವಾಗುತ್ತಿದೆ. 

ಪೂರ್ತಿ ಓದಿ

09:44 PM (IST) Apr 19

5 ವರ್ಷಗಳಲ್ಲಿ 58 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಸಂಸದ ಗೋವಿಂದ ಕಾರಜೋಳ

ದೇಶದ ರೇಲ್ವೆ ಇಲಾಖೆಯ ಮೂಲಭೂತ ಸೌಕರ್ಯ, ಉದ್ಯೋಗ, ಹೊಸ ಮಾರ್ಗಗಳ ಉನ್ನತೀಕರಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ 58 ಲಕ್ಷ ಕೋಟಿ ರು. ಬಂಡವಾಳ ಹೂಡಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗಳನ್ನು ಅನುಮೋದಿಸಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. 

ಪೂರ್ತಿ ಓದಿ

09:38 PM (IST) Apr 19

ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದಲ್ಲಿ ಅವರವರ ಜಾತಿಯನ್ನ ಪಟ್ಟಿ ಮಾಡಿ ಕೂಡಿಸಿದರೆ 15 ರಿಂದ 20 ಕೋಟಿ ಜನಸಂಖ್ಯೆ ಬರುತ್ತೆ, ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ, ಕೆಲವರು ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮೀಕ್ಷೆ ವಿರೋಧಿಗಳಿಗೆ ಟಾಂಗ್ ನೀಡಿದರು. 
 

ಪೂರ್ತಿ ಓದಿ

09:01 PM (IST) Apr 19

ಜನಿವಾರ ಚೆಕ್ ಮಾಡಿದ ಹೋಮ್‌ಗಾರ್ಡ್ ಸಸ್ಪೆಂಡ್; ಆದೇಶ ಕೊಟ್ಟವರು ಸೇಫ್!

ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಜನಿವಾರ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ನಡೆಸಿದ ನಂತರ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಪೂರ್ತಿ ಓದಿ

07:55 PM (IST) Apr 19

ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು

ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಬೋಸರಾಜು ತಿಳಿಸಿದರು.

ಪೂರ್ತಿ ಓದಿ

07:48 PM (IST) Apr 19

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!

ಆ ಜನರ ಆರೋಗ್ಯ ಹದಗೆಟ್ಟರೆ ಅಥವಾ ಗರ್ಭಿಣಿ ಮಹಿಳೆಯರನ್ನು ತುರ್ತು ಆಸ್ಪತ್ರೆಗೆ ರವಾನಿಸಬೇಕಾದರೆ ಡೋಲಿ ಕಟ್ಟಿಕೊಂಡು ಕಾಡಿನ ರಸ್ತೆಯಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ನಡೆದೆ ಡೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸುವ ಪರಿಸ್ಥಿತಿ ಇತ್ತು. 

ಪೂರ್ತಿ ಓದಿ

07:27 PM (IST) Apr 19

ಹತ್ತು ದಿನಗಳಲ್ಲಿ ಐದು ಜಾನುವಾರುಗಳ ಕೊಂದ ಹುಲಿ: ಅರಣ್ಯ ಇಲಾಖೆ ಕಾರ್ಯಾಚರಣೆ

ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯ ಜೀವಿ ಸಂಘರ್ಷ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದ್ದು, ಹಲವು ದಿನಗಳಿಂದ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುತ್ತಿರುವ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. 

ಪೂರ್ತಿ ಓದಿ

07:12 PM (IST) Apr 19

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸೋ ಭಾರತೀಯರಿಗೆ ಶಾಕ್ ನೀಡಿದ ಅಬುಧಾಬಿ

ಬಾಲ್ಕನಿಯಲ್ಲಿ ಇನ್ನು ಮುಂದೆ ಕಸಗಳನ್ನು ರಾಶಿ ಹಾಕುವುದು ಅಥವಾ ಬಟ್ಟೆಗಳನ್ನು ನೇತು ಹಾಕಲು ಜಾಗ ಮಾಡಿಕೊಂಡರೆ ಅಂತಹ ಜನರಿಗೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸಿದೆ.

ಪೂರ್ತಿ ಓದಿ

07:03 PM (IST) Apr 19

SSLC ಪಾಸಾದ್ರೆ ನನ್ ಹುಡುಗಿ ಲವ್ ಮಾಡ್ತಾಳೆ; ₹500 ತಗೊಂಡು ಚಾ ಕುಡಿರಿ, ನನ್ನ ಪಾಸ್ ಮಾಡ್ರಿ!

SSLC ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು 500 ರೂ. ಲಂಚ ನೀಡಿ ಪ್ರೀತಿಸುವ ಹುಡುಗಿ ಮನವೊಲಿಸಲು ಮನವಿ ಮಾಡಿದ್ದಾನೆ. ಈ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಎಲ್ಲರನ್ನೂ ದಂಗಾಗಿಸಿದೆ.

ಪೂರ್ತಿ ಓದಿ

06:17 PM (IST) Apr 19

ರೈಲು ತತ್ಕಾಲ್ ಟಿಕೆಟ್ ಬುಕಿಂಗ್ ಮಾಡೋ ಮುನ್ನ IRCTC ಸ್ಪಷ್ಟನೆ ನೋಡಿ!

ತತ್ಕಾಲ್ ಟಿಕೆಟ್ ಬುಕಿಂಗ್: ಪ್ರಯಾಣದ ದಿನಾಂಕದ ಒಂದು ದಿನ ಮೊದಲು, ಆರಂಭಿಕ ನಿಲ್ದಾಣದಿಂದ ಪ್ರಯಾಣದ ದಿನವನ್ನು ಹೊರತುಪಡಿಸಿ, ಆಯ್ದ ರೈಲುಗಳಿಗೆ ತತ್ಕಾಲ್ ಇ-ಟಿಕೆಟ್‌ಗಳನ್ನು ಪ್ರಯಾಣಿಕರು ಕಾಯ್ದಿರಿಸಬಹುದು.

ಪೂರ್ತಿ ಓದಿ

06:03 PM (IST) Apr 19

ವರದಕ್ಷಿಣೆ ತರಲಿಲ್ಲ ಅಂತ ಮಹಿಳೆಯ ತಲೆಕೂದಲು ಕತ್ತರಿಸಿದ ಗಂಡ

ಉತ್ತರ ಪ್ರದೇಶದಲ್ಲಿ ವರದಕ್ಷಿಣೆಗಾಗಿ ಪತಿಯೊಬ್ಬ ಪತ್ನಿಯ ಕೂದಲನ್ನು ಕತ್ತರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೂರ್ತಿ ಓದಿ

05:35 PM (IST) Apr 19

ಬೆಂಗಳೂರು ಮೆಟ್ರೋ 13 ವರ್ಷ ಸೇವೆಯಲ್ಲಿ 3ನೇ ಅತ್ಯಧಿಕ ಪ್ರಯಾಣಿಕ ಸಂಚಾರ ದಾಖಲೆ!

ದರ ಏರಿಕೆಯ ನಂತರವೂ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಏಪ್ರಿಲ್ 17 ರಂದು 9.08 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ, ಇದು ಹೊಸ ದಾಖಲೆಯಾಗಿದೆ. ಇದು ಬೆಂಗಳೂರು ಮೆಟ್ರೋ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯಾಗಿದೆ.

ಪೂರ್ತಿ ಓದಿ

05:01 PM (IST) Apr 19

ತರಗೆಲೆಯಂತೆ ಕುಸಿದ 4 ಅಂತಸ್ತಿನ ಕಟ್ಟಡ: 8 ಜನ ಸಾವು

ಈಶಾನ್ಯ ದೆಹಲಿಯ ಮುಸ್ತಫಾಬಾದ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 8 ಜನ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ದೆಹಲಿ ಸಿಎಂ ತನಿಖೆಗೆ ಆದೇಶಿಸಿದ್ದಾರೆ.

ಪೂರ್ತಿ ಓದಿ

04:42 PM (IST) Apr 19

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಅಡಿ ಪುರಾತನ ದೇವಾಲಯ: ಪಿಚ್ ಅಗೆಯಲು ನೆಟ್ಟಿಗರ ಆಗ್ರಹ!

ಐಪಿಎಲ್ 2025ರಲ್ಲಿ ಆರ್‌ಸಿಬಿ ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಇದರಿಂದಾಗಿ ನೆಟ್ಟಿಗರು ಚಿನ್ನಸ್ವಾಮಿ ಸ್ಟೇಡಿಯಂ ಅಗೆಯಲು ಆಗ್ರಹಿಸಿದ್ದಾರೆ. ಆರ್‌ಸಿಬಿ ತವರಿನಾಚೆ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ತವರಿನಲ್ಲೇ ಸೋಲುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

04:36 PM (IST) Apr 19

ವೀರ ಚಂದ್ರಹಾಸ: ಯಕ್ಷಗಾನ ಪ್ರೀತಿಯಿಂದ ಹುಟ್ಟಿದ ವಿಶಿಷ್ಟ ಪ್ರಯೋಗ

ರಂಗಸ್ಥಳದಲ್ಲಿ ಭಾಗವತರ ಹಾಡುಗಾರಿಕೆ ಮತ್ತು ಅರ್ಥಧಾರಿಗಳ ಮಾತುಕತೆ ಮೂಲಕವೇ ಕತೆ ಮತ್ತು ಪರಿಸರ ಅನಾವರಣಗೊಂಡರೆ ಈ ಸಿನಿಮಾದಲ್ಲಿ ವಾಸ್ತವ ಪರಿಸರದಲ್ಲಿ ಕತೆ ನಡೆಯುತ್ತದೆ. ತಂತ್ರಜ್ಞಾನ ಬಳಸಿಕೊಂಡು ಅರಮನೆ, ಕಾಡು, ದೇಗುಲ ಇತ್ಯಾದಿ ಸೃಷ್ಟಿಸಿದ್ದಾರೆ. 

ಪೂರ್ತಿ ಓದಿ

04:34 PM (IST) Apr 19

ಬೆಂಗಳೂರು ಮೆಟ್ರೋದಲ್ಲಿ ಚಿತ್ರೀಕೃತವಾಗಿರುವ ಕನ್ನಡ ಸಿನಿಮಾಗಳ ಝಲಕ್!

ಬೆಂಗಳೂರು ಮೆಟ್ರೋದಲ್ಲಿ ಹಲವು ಕನ್ನಡ ಸಿನಿಮಾಗಳನ್ನು ಚಿತ್ರೀಕರಿಸಲಾಗಿದೆ. 'ರಣವಿಕ್ರಮ', 'ಭರ್ಜರಿ' ಮತ್ತು 'ಯಾಣ' ಸಿನಿಮಾಗಳ ಜೊತೆಗೆ, ನಟ ಶಂಕರ್ ನಾಗ್ ಅವರ ಮೆಟ್ರೋ ಕನಸಿನ ಬಗ್ಗೆಯೂ ಈ ಲೇಖನ ಒಳನೋಟ ನೀಡುತ್ತದೆ.

ಪೂರ್ತಿ ಓದಿ

04:33 PM (IST) Apr 19

ಕರೆಂಟ್​ ಹೋದ್ರೆ ಚಿಂತೆ ಬಿಡಿ: 3 ಚಮಚ ಅಕ್ಕಿ, ಎಣ್ಣೆಯಿಂದ ಮ್ಯಾಜಿಕ್​! ಈ ವಿಡಿಯೋ ನೋಡಿ...

ಕರೆಂಟ್​ ಹೋದ ಸಂದರ್ಭದಲ್ಲಿ ಬೆಳಕಿಗಾಗಿ ಏನೂ ಸಿಗದೇ ಪರದಾಡುವ ಸ್ಥಿತಿ ಬಂದ್ರೆ ಚಿಂತೆ ಬಿಡಿ. 3 ಚಮಚ ಅಕ್ಕಿ, ಎಣ್ಣೆಯಿಂದ ಮ್ಯಾಜಿಕ್​ ನೋಡಿ. ಇಲ್ಲಿದೆ ವಿಡಿಯೋ.
 

ಪೂರ್ತಿ ಓದಿ

04:26 PM (IST) Apr 19

ಯುದ್ಧಕಾಂಡ: ಸೂಕ್ಷ್ಮ ಪ್ರಶ್ನೆಯನ್ನೆತ್ತುವ ಕೋರ್ಟ್ ರೂಮ್‌ ಡ್ರಾಮಾ

ಹೆಣ್ಣು ಮಗುವಿನ ಮೇಲಿನ ಬಲಾತ್ಕಾರದಂತಹ ಸೂಕ್ಷ್ಮ ವಿಷಯವನ್ನು ಹೊಂದಿರುವ ಸಿನಿಮಾ ಇದು. ಬಲಾತ್ಕಾರ ಪ್ರಸಂಗ ಬಂದಾಗ ಸೂಕ್ಷ್ಮ ಮನಸ್ಸುಗಳಿಗೆ ಸ್ವಲ್ಪ ಹಿಂಸೆ ಅನ್ನಿಸಬಹುದು. 

ಪೂರ್ತಿ ಓದಿ

04:15 PM (IST) Apr 19

ಕೋರ ಚಿತ್ರ ವಿಮರ್ಶೆ: ಆದಿವಾಸಿಗಳ ಶೋಷಣೆ, ಖಳನಾಯಕನ ವಿಜೃಂಭಣೆ

ಇದು ಹಿಟ್ಲರನ ಕಾಲದ ಶೋಷಣೆಯನ್ನು ನೆನಪಿಸುತ್ತದೆ. ಯಾವಾಗಲೂ ಮಾಂಸ ಕಡಿಯುತ್ತ, ಮೈ ಒತ್ತಿಸಿಕೊಳ್ಳುತ್ತ ಇರುವ ವಿಲನ್‌ಗಳು. ಇವರು ಆಗಾಗ ಎದ್ದು ಬಂದು ಸಾಯುವಂತೆ ಜೀತದವರಿಗೆ ಹೊಡೆಯುತ್ತಿರುತ್ತಾರೆ. 

ಪೂರ್ತಿ ಓದಿ

04:15 PM (IST) Apr 19

ಬೆಂಗಳೂರಲ್ಲಿ ಇರ್ಬೇಕಂದ್ರೆ ಹಿಂದಿ ಕಲಿ: ಆಟೋ ಚಾಲಕನಿಗೆ ಉತ್ತರ ಭಾರತೀಯನ ಧಮ್ಕಿ

ಬೆಂಗಳೂರಿನಲ್ಲಿ ಉತ್ತರ ಭಾರತದ ವ್ಯಕ್ತಿಯೊಬ್ಬ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿಂದಿ ಹೇರಿಕೆ ಕುರಿತು ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವಂತೆ ಹಲವರು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ

04:06 PM (IST) Apr 19

ಕರ್ನಾಟಕದಲ್ಲಿ ಗುಂಡಿನ ಮೊರೆತ: ಅಪರಾಧಿಗಳ ಸದ್ದಡಗಿಸಬಲ್ಲರೇ ಪೊಲೀಸರು?

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಬಿಡದಿಯಲ್ಲಿ ನಡೆದ ಗುಂಡಿನ ದಾಳಿ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಬಾಲಕಿಯ ಅತ್ಯಾ*ಚಾರ ಮತ್ತು ಹತ್ಯೆ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಪೊಲೀಸರು ಹೇಗೆ ಶಾಂತಿ ಮತ್ತು ಸುರಕ್ಷತೆಯನ್ನು ಮರಳಿ ತರುತ್ತಾರೆ ಎಂಬುದು ಈಗಿನ ಪ್ರಶ್ನೆ.

ಪೂರ್ತಿ ಓದಿ

03:48 PM (IST) Apr 19

ಸಿಎಂ ಸಿದ್ದರಾಮಯ್ಯ ಕಾಲು ನೋವಿನ ರಹಸ್ಯ ಬಯಲು!

ತುಮಕೂರಿನ ಕುರುಬರ ಸಾಹಿತಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲು ನೋವಿಗೆ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಜಾತಿ ವ್ಯವಸ್ಥೆ, ಮನುಸ್ಮೃತಿ ಮತ್ತು ಸಾಮಾಜಿಕ ಅಸಮಾನತೆಯ ಬಗ್ಗೆಯೂ ಮಾತನಾಡಿದ್ದಾರೆ.

ಪೂರ್ತಿ ಓದಿ

03:43 PM (IST) Apr 19

ಸರ್ಕಾರದ ಗೋಧಿ ಎಫೆಕ್ಟ್​? ಹಲವು ಊರುಗಳಲ್ಲಿ ತಲೆಬೋಳು, ಕಳಚುತ್ತಿವೆ ಉಗುರು! ಎಲ್ಲೆಡೆ ಆತಂಕ

ಹಲವು ಜನರಿಗೆ ತಲೆಗೂದಲು ಉದುರು ತಲೆ ಸಂಪೂರ್ಣ ಬೋಳಾಗುತ್ತಿರುವುದು ಒಂದೆಡೆಯಾದರೆ, ಉಗುರುಗಳು ತಾವಾಗಿಯೇ ಕಳಚಿ ಬೀಳುತ್ತಿವೆ. ಆತಂಕದ ಘಟನೆಯ ವಿವರ ಇಲ್ಲಿದೆ... 
 

ಪೂರ್ತಿ ಓದಿ

03:28 PM (IST) Apr 19

ಮಹ್ವಾಶ್ ಜೊತೆ ಡೇಟಿಂಗ್ ಸುದ್ದಿ ನಡುವೆ ಅಚ್ಚರಿ, ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡ ಧನಶ್ರಿ-ಚಹಾಲ್

ಡಿವೋರ್ಸ್ ಬಳಿಕ ಯಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಡೇಟಿಂಗ್ ಸುದ್ದಿ ಹರಿದಾಡುತ್ತಿದೆ. ಇಬ್ಬರು ಜೊತಯಾಗಿ ಕಾಣಿಸಿಕೊಂಡಿದ್ದಾರೆ. ಇದರ ನಡವೆ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಮತ್ತೆ ಏನು ನಡೆಯುತ್ತಿದೆ? 

ಪೂರ್ತಿ ಓದಿ

01:59 PM (IST) Apr 19

ಬಪ್ಪನಾಡು ಬ್ರಹ್ಮರಥೋತ್ಸ ದುರಂತ, ದುರ್ಗೆ ದೇವಿ ಮುನಿಸಿಕೊಂಡಳಾ? ಇದು ಸೂಚನೆಯಾ?

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ತೇರು ಮುರಿದು ಬಿದ್ದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಗೆದ್ದಲು ಹಿಡಿದ ಮರದಿಂದ ನಿರ್ಮಾಣಗೊಂಡ ರಥ ಶಿಥಿಲಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪೂರ್ತಿ ಓದಿ

01:41 PM (IST) Apr 19

2.5 ಕೋಟಿ ಸ್ಯಾಲರಿ, ಲೈಂಗಿಕ ಶಿಸ್ತು, ಅಬ್ಬಬ್ಬಾಈಕೆ ಮದ್ವೆಯಾಗೋ ಗಂಡಿಗೆ ಈ ಗುಣ ಇರ್ಬೇಕು

ಮ್ಯಾಟ್ರಿಮೋನಿಯಲ್ಲಿ ಈಕೆ ಪ್ರೊಫೈಲ್ ಹಾಕಿದ್ದಾಳೆ. ಈಕೆಯ ಪ್ರೊಫೈಲ್ ನೋಡಿ ಮಾತುಕತೆ ನಡೆಸಿದ ಯುವಕರಿಗೆ ತಲೆ ಸುತ್ತು ಬಂದಿದೆ. ಕಾರಣ ಈಕೆ ನೀಡಿದ 18 ಗುಣಗಳ ಪಟ್ಟಿ. ಅಷ್ಟಕ್ಕೂ ಈಕೆಯ ಮದುವೆಯಾಗಲು ಏನೆಲ್ಲಾ ಗುಣಗಳಿರಬೇಕು ಗೊತ್ತಾ? ಈ ಕ್ವಾಲಿಟಿ ಇದ್ರೆ ನಿಮ್ಮದಾಗಿಸುವ ಅವಕಾಶವಿದೆ.

ಪೂರ್ತಿ ಓದಿ

01:37 PM (IST) Apr 19

10 ವರ್ಷ ಕೂಲಿ ಮಾಡಿದ್ರೆ ಸೇವೆ ಕಾಯಂಗೆ ಅರ್ಹ: ಹೈಕೋರ್ಟ್

30 ವರ್ಷಗಳ ಕಾಲ ದಿನಗೂಲಿ ನೌಕರನಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರ ಸೇವೆಯನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ನ್ಯಾಯಾಲಯ, 10 ವರ್ಷಗಳ ನಿರಂತರ ಸೇವೆಯ ನಂತರ ಕಾಯಂಗೊಳಿಸುವಿಕೆಗೆ ಅರ್ಹತೆ ಇದೆ ಎಂದು ಸ್ಪಷ್ಟಪಡಿಸಿದೆ.

ಪೂರ್ತಿ ಓದಿ

01:16 PM (IST) Apr 19

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ್ದು ಒಪ್ಪುವಂತದ್ದಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಧಿಕ ಪ್ರಸಂಗ ಮಾಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಶಿವಮೊಗ್ಗ ಮತ್ತು ಬೀದರ್‌ನಲ್ಲಿ ನಡೆದ ಘಟನೆಗಳ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ಕೋರಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಪೂರ್ತಿ ಓದಿ

12:57 PM (IST) Apr 19

ನೀವು ಹೇಳಿದ 'ಚೆಂಗ್ಲು ನಾನಲ್ಲ, ನಿಜವಾದ ಚೆಂಗ್ಲು ಅಂದ್ರೇ ನೀವೇ: ಡಿಕೆಶಿ ವಿರುದ್ಧ ಮುನಿರತ್ನ ಕಿಡಿ!

ಬಿಜೆಪಿ ಶಾಸಕ ಮುನಿರತ್ನ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ರಾಜಕಾಲುವೆ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಟೆಂಡರ್ ಹಗರಣ ಮತ್ತು 'ಚೆಂಗ್ಲು' ವಿವಾದದ ಬಗ್ಗೆಯೂ ಟೀಕಿಸಿದ್ದಾರೆ.

ಪೂರ್ತಿ ಓದಿ

12:51 PM (IST) Apr 19

ರಿಕ್ಕಿ ರೈ ಪ್ರಕರಣ, ಮುತ್ತಪ್ಪ ರೈ ಪತ್ನಿ ಸೇರಿ ನಾಲ್ವರ ವಿರುದ್ಧ FIR!

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಪೂರ್ತಿ ಓದಿ

12:15 PM (IST) Apr 19

6 ಜನ ಮಕ್ಕಳಲ್ಲಿ ನಾನೊಬ್ಬನೇ ಓದಿ ಸಿಎಂ ಆದೆ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಡಿವಾಳ ಸಮುದಾಯದವರನ್ನು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತೆ ಕರೆ ನೀಡಿದರು. ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಸಮುದಾಯದ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ಒದಗಿಸುವ ಭರವಸೆ ನೀಡಿದರು.

ಪೂರ್ತಿ ಓದಿ

12:13 PM (IST) Apr 19

ಬರಿಗಾಲಲ್ಲಿದ್ದ ಮಹಿಳೆಯರ ನೋಡಿ ಇಡೀ ಗ್ರಾಮಸ್ಥರಿಗೆ ಹೊಸ ಚಪ್ಪಲಿ ಕೊಟ್ಟ ಪವನ್ ಕಲ್ಯಾಣ್

ಜನರ ಸಮಸ್ಯೆ ಆಲಿಸಲು ಕುಗ್ರಾಮಕ್ಕೆ ತೆರಳಿದ ಡಿಸಿಎಂ ಪವನ್ ಕಲ್ಯಾಣ್ ಹಲವು ಮಹಿಳೆಯರು ಬರಿಗಾಲಲ್ಲೇ ಓಡಾಡುತ್ತಿರುವುದನ್ನು ನೋಡಿದ್ದಾರೆ. ಇದರ ಪರಿಣಾಮ ಇಡೀ ಗ್ರಾಮದ ಜನತೆಗೆ ಪವನ್ ಕಲ್ಯಾಣ್ ಹೊಸ ಚಪ್ಪಲಿ ಕೊಡಿಸಿದ ವಿಶೇಷ ಘಟನೆ ನಡೆದಿದೆ.

ಪೂರ್ತಿ ಓದಿ

12:05 PM (IST) Apr 19

ಕಾಗೆಯ ದ್ವೇಷ 17 ವರುಷ! ಸುದೀರ್ಘ ಅಧ್ಯಯನ ರೋಚಕ ವರದಿ ಇಲ್ಲಿದೆ...

ಕಾಗೆಗೆ ಹಾನಿ ಮಾಡೋ ಮುನ್ನ ಎಚ್ಚರ ಎಚ್ಚರ... 17 ವರ್ಷಗಳವರೆಗೆ ಕಾಗೆ ನಿಮ್ಮ ಮೇಲೆ ದ್ವೇಷ ಸಾಧಿಸ್ಬೋದು. ಕುತೂಹಲದ ಅಧ್ಯಯನ ವರದಿ ಇಲ್ಲಿದೆ... 
 

ಪೂರ್ತಿ ಓದಿ

11:51 AM (IST) Apr 19

ತಿಪ್ಪೇಲಿ ಮದ್ಯ ಬಚ್ಚಿಟ್ಟು ಮಾರಾಟ ಮಾಡ್ತಿದ್ದ ಮಹಿಳೆಯನ್ನ ಹಿಡಿದುಕೊಟ್ಟ ಜನ!

ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗೇರಿಯಲ್ಲಿ ತಿಪ್ಪೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ. ಕಳಪೆ ಗುಣಮಟ್ಟದ ಮದ್ಯ ಸೇವನೆಯಿಂದ ಸಾವು ಸಂಭವಿಸಿರುವುದು ಇದಕ್ಕೆ ಕಾರಣ.

ಪೂರ್ತಿ ಓದಿ

11:19 AM (IST) Apr 19

ಬಹಿರಂಗ ಕ್ಷಮೆ ಯಾಚಿಸಿ ಮತ್ತೆ ಬ್ರಾಹ್ಮಣ ಸಮುದಾಯ ಅವಮಾನಿಸಿದ್ರಾ ಅನುರಾಗ್ ಕಶ್ಯಪ್?

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದ ಕಾರಣದಿಂದ ಭಾರಿ ಟೀಕೆ, ಬೆದರಿಕೆ ಎದುರಿಸಿದ್ದಾರೆ. ಇದರ ಬೆನ್ನಲ್ಲೇ ಅನುರಾಗ್ ಕಶ್ಯಪ್ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಈ ವೇಳೆ ಮತ್ತೆ ಬ್ರಾಹ್ಮಣ ಸಮುದಾಯವನ್ನು ಗುರಿಯಾಸಿದ ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

More Trending News