LIVE NOW
Published : Apr 19, 2026, 06:36 AM ISTUpdated : Apr 19, 2026, 09:11 PM IST

Karnataka News Live: ಮಹಿಳಾ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ಸನ್ನು ದೇಶದ ಜನ ಕ್ಷಮಿಸಲ್ಲ - ಆರ್‌.ಅಶೋಕ್‌

ಸಾರಾಂಶ

ಬೆಂಗಳೂರು: ಗುತ್ತಿಗೆದಾರರ ಹೋರಾಟದ ನಂತರದಿಂದ ಬಾಕಿ ಬಿಲ್ ಪಾವತಿಗೆ ಮುಂದಾಗುತ್ತಿರುವ ರಾಜ್ಯ ಸರ್ಕಾರ, ಮಾರ್ಚ್‌ನಲ್ಲಿ 2 ಸಾವಿರ ಕೋಟಿ ರುಪಾಯಿ ಪಾವತಿ ನಂತರ ಇದೀಗ ಸಣ್ಣ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ 300 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕಳೆದ ತಿಂಗಳು ರಾಜ್ಯ ಗುತ್ತಿಗೆದಾರರ ಸಂಘದಿಂದ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಅದಾದ ನಂತರ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಂತಹಂತವಾಗಿ ಬಾಕಿ ಬಿಲ್ ಪಾವತಿಸುವುದಾಗಿ ತಿಳಿಸಿದ್ದರು.

r ashok

09:11 PM (IST) Apr 19

ಮಹಿಳಾ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ಸನ್ನು ದೇಶದ ಜನ ಕ್ಷಮಿಸಲ್ಲ - ಆರ್‌.ಅಶೋಕ್‌

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್‌ ಪಕ್ಷವನ್ನು ಈ ದೇಶದ ಜನ ಕ್ಷಮಿಸುವುದಿಲ್ಲ. ಮುಂಬರುವ ರಾಜ್ಯಗಳ ಚುನಾವಣೆಯಲ್ಲಿ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

Read Full Story

08:53 PM (IST) Apr 19

ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ ಕಾರು ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ

ಮಾಜಿ ಪ್ರಧಾನಿ ದೇವೇಗೌಡರಿಗೆ 1.25 ಕೋಟಿ ರೂ ಕಾರು ಖರೀದಿಗೆ ರಾಜ್ಯ ಸರ್ಕಾರ ಒಪ್ಪಿಗೆ, ಈ ಕುರಿತು ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ. ದೇವೇಗೌಡರಿಗೆ ಸರ್ಕಾರ ನೀಡುತ್ತಿರುವ ಕಾರು ಯಾವುದು?

 

Read Full Story

07:41 PM (IST) Apr 19

ಅಕ್ಷಯ ತೃತೀಯಕ್ಕೆ 'ಗೋಲ್ಡನ್ ಗರ್ಲ್' ರಶ್ಮಿಕಾ ಮಂದಣ್ಣ ಮಿಂಚು - ಹಳದಿ-ಚಿನ್ನದ ಲುಕ್ ವೈರಲ್

ಈ ಹಬ್ಬದ ಸೀಸನ್‌ನಲ್ಲಿ ರಶ್ಮಿಕಾ ಮಂದಣ್ಣ ಹಳದಿ ಮತ್ತು ಗೋಲ್ಡನ್ ಬಣ್ಣದ ಉಡುಗೆಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಇದು ಅವರ 'ಗೋಲ್ಡನ್ ಗರ್ಲ್' ಇಮೇಜ್‌ಗೆ ಮತ್ತಷ್ಟು ಮೆರುಗು ನೀಡಿದೆ. ಸಿನಿರಂಗದಲ್ಲಿ ಅವರ ಯಶಸ್ಸು ಮತ್ತು ಅಭಿಮಾನಿಗಳಲ್ಲಿ ಹೆಚ್ಚುತ್ತಿರುವ ಅವರ ಕ್ರೇಜ್‌ಗೆ ಇದು ಕನ್ನಡಿ ಹಿಡಿದಂತಿದೆ.
Read Full Story

07:19 PM (IST) Apr 19

Toothbrush Hygiene - ಟೂತ್‌ಬ್ರಷ್ ಯಾವಾಗ ಬದಲಿಸಬೇಕು? ಈ ತಪ್ಪು ಮಾಡಿದ್ರೆ ಅಪಾಯ ಗ್ಯಾರಂಟಿ!

ನಾವು ಪ್ರತಿದಿನ ಬಳಸೋ ಟೂತ್‌ಬ್ರಷ್‌ನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಅದರಲ್ಲೂ ಬಾತ್‌ರೂಮ್‌ನಲ್ಲಿ ಬ್ರಷ್ ಇಡುವುದರಿಂದ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಿದ್ರೆ ಬ್ರಷ್ ಯಾವಾಗ ಬದಲಿಸಬೇಕು?

Read Full Story

06:58 PM (IST) Apr 19

Amruthadhaare Serial - ‌ ಚೆನ್ನಾಗಿ ತಿರುಗಿಸಿ ಕೊಟ್ಟ ಕರ್ಮ; ಎಲ್ಲಿ ಬಿದ್ನೋ ಅಲ್ಲೇ ಎದ್ದ ಗೌತಮ್‌ ದಿವಾನ್!

Amruthadhaare Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಕಥೆ ಈಗ ನಿಜಕ್ಕೂ ರೋಚಕ ಘಟ್ಟಕ್ಕೆ ಬಂದಿದೆ. ಉದ್ಯಮಿ ಗೌತಮ್ ದಿವಾನ್ ತನ್ನ ಎಲ್ಲ ಆಸ್ತಿಯನ್ನು ಮಲಸಹೋದರ ಜಯದೇವ್‌ ದಿವಾನ್‌ಗೆ ನೀಡಿದ್ದನು. ಈಗ ಅವನು ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾನೆ. ಅವನು ತನ್ನ ಆಸ್ತಿಯನ್ನು ಮರಳಿ ಪಡೆಯುವ ಹಾಗೆ ಕಾಣ್ತಿದೆ.

Read Full Story

06:53 PM (IST) Apr 19

ಬೇಸಿಗೆಯಲ್ಲಿ ಇಡ್ಲಿ-ದೋಸೆ ಹಿಟ್ಟು ಹುಷಾರ್​ - ಬೆಂಗಳೂರಿನ 97 ನೌಕರರು ಅಸ್ವಸ್ಥ- ಆಹಾರ ತಜ್ಞರು ಹೇಳೋದೇನು?

ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ ಇಡ್ಲಿ, ದೋಸೆ ಸೇವಿಸಿ 97 ಉದ್ಯೋಗಿಗಳು ಅಸ್ವಸ್ಥರಾದ ಘಟನೆಯ ಹಿನ್ನೆಲೆಯಲ್ಲಿ, ಬೇಸಿಗೆಯಲ್ಲಿ ಹುದುಗಿಸಿದ ಆಹಾರಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ತಾಪಮಾನವು ಹುದುಗುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸಿ, ಬ್ಯಾಕ್ಟೀರಿಯಾ ಮಾಲಿನ್ಯಕ್ಕೆ ಕಾರಣವಾಗಿ ಆಹಾರ ವಿಷವಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದ್ದಾರೆ.
Read Full Story

06:21 PM (IST) Apr 19

ಫೇಸ್ ಯೋಗಾ ವಿಡಿಯೋಗೆ ಟ್ರೋಲ್ ಆದ ಪಾರ್ವತಿ ಕೃಷ್ಣ ಯಾರು? ಇಲ್ಲಿದೆ ಉತ್ತರ

ಫೇಸ್ ಯೋಗಾದಿಂದ ಮುಖದ ಸ್ವರೂಪ ಬದಲಿಸಬಹುದು ಎಂದು ಹೇಳಿದ್ದಕ್ಕೆ ನಟಿ ಪಾರ್ವತಿ ಕೃಷ್ಣ ಟ್ರೋಲ್ ಆಗಿದ್ದಾರೆ. ಇದಕ್ಕೆ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಅವರು, ತಮ್ಮ ತರಬೇತಿ ಮತ್ತು ಸರ್ಟಿಫಿಕೇಶನ್ ಬಗ್ಗೆ ಹೇಳಿ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

Read Full Story

06:17 PM (IST) Apr 19

ಯಶ್‌ TO ದೀಪಿಕಾ ಪಡುಕೋಣೆ; 2 ವರ್ಷದೊಳಗೆ 'ಬ್ಯಾಕ್ ಟು ಬ್ಯಾಕ್' ಮಗು; ಸೆಲೆಬ್ರಿಟಿಗಳ ಅವಸರದ ಹಿಂದಿದೆ ಬಲವಾದ ಕಾರಣ

Why celebrities have babies close together: ನಟ ಯಶ್‌ರಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಸೆಲೆಬ್ರಿಟಿಗಳು ಮೊದಲ ಮಗು ಹುಟ್ಟಿದ ಎರಡು ವರ್ಷದೊಳಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರಿಗೆ ಇದೆಲ್ಲ ಟ್ರೆಂಡ್‌ ಎನಿಸಬಹುದು. ಇದರ ಹಿಂದೆ ಬೇರೆ ಕಾರಣ ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Read Full Story

05:31 PM (IST) Apr 19

ಹಗಲಿಗಿಂತ ರಾತ್ರಿಯಲ್ಲಿ ಯಾಕೆ ಟ್ರೇನ್‌ ರಾಕೆಟ್‌ ವೇಗದಲ್ಲಿ ಓಡುತ್ತೆ! ನಿಮಗೆ ಗೊತ್ತೇ ಇಲ್ಲದ ರಹಸ್ಯವಿದು!

Why trains are faster at night: ಹಗಲಿಗಿಂತ ರಾತ್ರಿ ಹೊತ್ತು ರೈಲು ಹೆಚ್ಚು ವೇಗವಾಗಿ ಚಲಿಸಿದಂತೆ ಭಾಸವಾಗಲು ಮೂರು ಮುಖ್ಯ ಕಾರಣಗಳಿವೆ. ಮೊದಲನೆಯದು ದೃಷ್ಟಿ ಭ್ರಮೆ, ಎರಡನೆಯದು ಸ್ಪಷ್ಟ ಸಿಗ್ನಲ್‌ಗಳು ಮತ್ತು ಮೂರನೆಯದು ಖಾಲಿ ಟ್ರ್ಯಾಕ್‌ಗಳು. ಈ ಕುತೂಹಲಕಾರಿ ಕಾರಣಗಳು ಏನು? 

Read Full Story

05:19 PM (IST) Apr 19

ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?

ಜವರಪ್ಪ ಎಂಬುವವರ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಲಾಗಿತ್ತು. 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಪೊಲೀಸರು, ಮೃತನ ಪತ್ನಿ ಅಮೃತಾ ಹಾಗೂ ಆಕೆಯ ಪ್ರಿಯಕರ ಸಿದ್ದೇಶ್ ಈ ಕೃತ್ಯದ ಹಿಂದಿದ್ದಾರೆ ಎಂದು ಪತ್ತೆಹಚ್ಚಿದ್ದಾರೆ. ಆರೋಪಿ ಸಿದ್ದೇಶ್‌ನನ್ನು ಬಂಧಿಸಲಾಗಿದೆ.

Read Full Story

05:09 PM (IST) Apr 19

Photos - ಸೀರಿಯಲ್ ಮದುವೆಯಾಯ್ತು, ರಿಯಲ್‌ ಆಗಿ ಹಸೆಮಣೆ ಏರಲು ರೆಡಿಯಾದ ಪ್ರೇಮಕಾವ್ಯ ಧಾರಾವಾಹಿ ನಟಿ!

Actress Shreya Malatesh: ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಶ್ರೇಯಾ ಮಾಲತೇಶ್‌ ಅವರು ಸದ್ಯ ಪ್ರೇಮಕಾವ್ಯ ಸೀರಿಯಲ್‌ನಲ್ಲಿ ಪಂಚಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಸೀರಿಯಲ್‌ ಟೀಂ ಜೊತೆಗೆ ಬ್ಯಾಚುಲರ್‌ ಪಾರ್ಟಿ ಮಾಡಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ. 

Read Full Story

04:19 PM (IST) Apr 19

ಮುದ್ದಾದ ಮೂರು ಮಕ್ಕಳ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದ ಪತ್ನಿ; ಏಕಾಂಗಿಯಾದ ಕಿರುತೆರೆ ನಟ

Actor Karanvir Bohra Wife Teejay Sidhu: ನಟ ಕರಣ್‌ ವೀರ್‌ ಬೊಹ್ರಾ, ಅವರ ಪತ್ನಿ ತೀಜಯ್ ಸಿಧು ಸದ್ಯ ದೂರ ಇರುವುದು‌ ಸಾಕಷ್ಟು ಅನುಮಾನ ಮೂಡಿಸಿದೆ. ಬಾಲಿವುಡ್‌ನಲ್ಲಿ ಧಾರಾವಾಹಿ, ಸಿನಿಮಾ ಮಾಡುತ್ತಿರುವ ಕರಣ್‌ ವೀರ್‌ ಬೊಹ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿಯನ್ನು ಕೂಡ ಫಾಲೋ ಮಾಡ್ತಿಲ್ಲ.

 

Read Full Story

03:57 PM (IST) Apr 19

ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದ ಸ್ಯಾಂಡಲ್‌ವುಡ್ ಖ್ಯಾತ ಹೀರೋ ಪುತ್ರ ಹರುಷ್

Saregamapa Lil Champs ಖ್ಯಾತ ನಟನ ಪುತ್ರ ಹರುಷ್, ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಮಗನಿಗೆ ತನ್ನಂತೆ 'ನಟನ ಮಗ' ಎಂಬ ಲೇಬಲ್ ಬೇಡ, ಬದಲಿಗೆ ಮಗನಿಂದ ತಾನು ಗುರುತಿಸಿಕೊಳ್ಳಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

Read Full Story

03:35 PM (IST) Apr 19

40ನೇ ವಯಸ್ಸಿಗೆ ರಾಯಲ್‌ ಮದುವೆ ಆಯ್ತು, 2 ವರ್ಷಕ್ಕೆ ಪತ್ನಿಯಿಂದ ದೂರವಾದ್ರಾ ಸ್ಟಾರ್‌ ನಟ? ಛೇ....!

ತೆಲುಗು ನಟ ಶರ್ವಾನಂದ್ (Sharwanand) ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ಮದುವೆಯ ಫೋಟೋಗಳನ್ನು ಕೂಡ ಅವರು ಡಿಲಿಟ್‌ ಮಾಡಿದ್ದಾರೆ. 

Read Full Story

03:21 PM (IST) Apr 19

ಗಜೇಂದ್ರಗಡದಲ್ಲಿ 'ಥರ್ಡ್ ಐ' ತಪ್ಪಿಸಲು ವಾಹನ ಸವಾರರ ವಾಮಮಾರ್ಗ! ಸಫಲವಾಗದ ಸುಗಮ ಸಂಚಾರ

ಗಜೇಂದ್ರಗಡದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಥರ್ಡ್ ಐ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು, ಕೆಲ ವಾಹನ ಸವಾರರು ತಮ್ಮ ನೋಂದಣಿ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ ಅಥವಾ ನಂಬರ್ ಪ್ಲೇಟ್‌ಗಳನ್ನೇ ತೆಗೆದುಹಾಕುತ್ತಿದ್ದಾರೆ.

Read Full Story

03:20 PM (IST) Apr 19

ಪತಿಯ ಅಕ್ರಮ ಸಂಬಂಧ ಪತ್ತೆ ಮಾಡಿದ್ದ ಪತ್ನಿ ನಿಗೂಢ ಸಾವು - ಪೋಷಕರಿಂದ ಕೊಲೆ ಆರೋಪ

ದಾವಣಗೆರೆಯಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ಕಾವ್ಯ ಎಂಬ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪತಿಯ ಅಕ್ರಮ ಸಂಬಂಧದ ಸಾಕ್ಷ್ಯ ಸಂಗ್ರಹಿಸಿದ್ದ ಆಕೆಯನ್ನು, ಪತಿಯೇ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಪೋಷಕರು ಆರೋಪಿಸಿ, ದೂರು ದಾಖಲಿಸಿದ್ದಾರೆ.
Read Full Story

03:00 PM (IST) Apr 19

Mysuru - ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ

ಮೈಸೂರಿನ ಪಬ್‌ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್‌ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Read Full Story

01:05 PM (IST) Apr 19

Thalapathy Vijay - ಸ್ಫೋಟಕ ವಿಷಯ ಬಯಲು ಮಾಡಲು ಮುಹೂರ್ತ ಇಟ್ಟ ದಳಪತಿ ವಿಜಯ್‌ ಪತ್ನಿ ಸಂಗೀತಾ!

Thalapathy Vijay Wife Sangeetha Marriage: ನಟ ವಿಜಯ್‌ಗೆ ಇನ್ನೊಬ್ಬ ನಟಿಯೊಂದಿಗೆ ಸಂಬಂಧವಿದೆ ಮತ್ತು ಅವರೊಂದಿಗೆ ವಿದೇಶದಲ್ಲಿ ಸುತ್ತಾಡಿದ್ದಾರೆ ಎಂದು ಆರೋಪಿಸಿ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.

 

Read Full Story

12:36 PM (IST) Apr 19

ಯಾದಗಿರಿ ಖಾಸಗಿ ಬಸ್ ಅಗ್ನಿ ದುರಂತ - 20 ಜೀವ ಉಳಿಸಿದ ಆಪದ್ಬಾಂಧವ ಉಮೇಶ್ ಬಿರಾದಾರ್ ಕಥೆ

ಯಾದಗಿರಿಯಲ್ಲಿ ನಡೆದ ಖಾಸಗಿ ಬಸ್ ಮತ್ತು ಕಾರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇದೇ ಬಸ್‌ನಲ್ಲಿದ್ದ ಪ್ರಯಾಣಿಕ ಉಮೇಶ ಬಿರಾದಾರ್, ತಮ್ಮ ಪ್ರಾಣ ಪಣಕ್ಕಿಟ್ಟು ಬಸ್‌ನಲ್ಲಿದ್ದ 20 ಜನರನ್ನು ಹಾಗೂ ಕಾರಿನಲ್ಲಿದ್ದ ಏಕೈಕ ಬಾಲಕನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
Read Full Story

12:35 PM (IST) Apr 19

IPL 2026 - ಸೋಲಿನ ಬೆನ್ನಲ್ಲೇ CSKಗೆ ಮತ್ತೊಂದು ಶಾಕ್ - ಯುವ ಆಟಗಾರನಿಗೆ ಗಂಭೀರ ಗಾಯ, 19ನೇ ಸೀಸನ್‌ನಿಂದಲೇ ಔಟ್?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ ಕಾಲಿನ ಸ್ನಾಯು ಸೆಳೆತದಿಂದ ಗಾಯಗೊಂಡಿದ್ದು, ಮುಂದಿನ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಿಎಸ್‌ಕೆಗೆ ಇದು ದೊಡ್ಡ ನಷ್ಟವಾಗಿದೆ.
Read Full Story

12:25 PM (IST) Apr 19

ನಿಧಾನ ಕೈ ಹಾಕಿದ, ಸುಮ್ನೆ ಬಿಡ್ತಿನಾ? ಬಸ್​ನಲ್ಲಿ ನಡೆದ ಕರಾಳ ಘಟನೆ ನೆನೆದ Bigg Boss ರಿಷಾ ಗೌಡ

ಬಿಗ್​ಬಾಸ್​ ಖ್ಯಾತಿಯ ನಟಿ ರಿಷಾ ಗೌಡ ಅವರು, ಬೆಂಗಳೂರಿನ ಬಸ್​ನಲ್ಲಿ ಪ್ರಯಾಣಿಸುವಾಗ ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ಮಹಿಳೆಯರ ಉಡುಗೆಗೂ ಇಂತಹ ಘಟನೆಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

12:14 PM (IST) Apr 19

ಸಿಂಧನೂರು - ಗ್ರಾಹಕರಂತೆ ಬಂದ ಬುರ್ಖಾದಾರಿ ಮಹಿಳೆಯರು ಬಟ್ಟೆ ಕದ್ದು ಎಸ್ಕೇಪ್, ಸಿಸಿಟಿವಿಯಲ್ಲಿ ಬಯಲಾಯ್ತು ಕಳ್ಳಿಯರ ಕೈಚಳಕ!

ರಾಯಚೂರು ಜಿಲ್ಲೆಯ ಸಿಂಧನೂರಿನ ಬಟ್ಟೆ ಅಂಗಡಿಯೊಂದರಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಕಳ್ಳತನ ಮಾಡಿದ್ದಾರೆ. ಒಬ್ಬಳು ಮಾಲೀಕರ ಗಮನ ಬೇರೆಡೆ ಸೆಳೆದರೆ, ಮತ್ತೊಬ್ಬಳು ಬಟ್ಟೆಗಳ ಚೀಲವನ್ನು ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

11:54 AM (IST) Apr 19

ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ.
Read Full Story

11:52 AM (IST) Apr 19

ಬೆಟ್ಟ ಗುಡ್ಡ ನುಂಗಿಲ್ಲಾರಿ, ಮಗು ಹೆತ್ತಿದ್ದೇನಷ್ಟೇ - ಬಾಡಿ ಶೇಮಿಂಗ್​ಗೆ ಗೋಲ್ಡನ್​ ಸ್ಟಾರ್​ ನಾಯಕಿ ಖಡಕ್​ ರಿಪ್ಲೈ

ನಟಿ ಪತ್ರಲೇಖಾ ಅವರು ಮಗುವಿನ ಜನನದ ನಂತರ ದಪ್ಪ ಆಗಿದ್ದಕ್ಕೆ ನೆಟ್ಟಿಗರಿಂದ ಬಾಡಿ ಶೇಮಿಂಗ್​ಗೆ ಒಳಗಾಗಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದು ಗರ್ಭಧಾರಣೆಯ ನೈಸರ್ಗಿಕ ಪ್ರಕ್ರಿಯೆ, ನಾನು ಬೆಟ್ಟ-ಗುಡ್ಡ ನುಂಗಿಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

Read Full Story

11:31 AM (IST) Apr 19

ಸ್ಟಾರ್‌ ಸಿನಿಮಾಗಳನ್ನು ಸೈಡ್‌ಗೆ ನಿಲ್ಲಿಸಿ 100 ಕೋಟಿ ಕಲೆಕ್ಷನ್ ಮಾಡಿದ ಹೊಸಬರ ಮಲಯಾಳಂ ಸಿನಿಮಾ

'ವಾಝಾ 2' ಇಷ್ಟೊಂದು ದೊಡ್ಡ ಹಿಟ್ ಆಗುತ್ತಿದ್ದಂತೆಯೇ ಚಿತ್ರತಂಡ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದೆ. ಹೌದು, ಈಗಲೇ 'ವಾಝಾ 3' ಘೋಷಣೆಯಾಗಿದೆ! ವಿಶೇಷ ಅಂದ್ರೆ, ಮುಂದಿನ ಭಾಗದಲ್ಲಿ ಹುಡುಗರ ಬದಲಿಗೆ ಮಹಿಳಾ ನಾಯಕಿಯರೇ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.

Read Full Story

11:28 AM (IST) Apr 19

ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ - ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕಾರ್, ಸರ್ಕಾರಿ ಬಸ್ ಹಾಗೂ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Read Full Story

11:09 AM (IST) Apr 19

Mysuru - ಅವನನ್ನ ಕೊಂದು ಬಿಡು, ಇಬ್ಬರು ಚೆನ್ನಾಗಿರೋಣ; ಗಂಡನ ಉಸಿರು ನಿಲ್ಲಿಸಿ ಜೈಲು ಸೇರಿದ ಪತ್ನಿ

ಮೈಸೂರಿನ ಸರಗೂರು ತಾಲೂಕಿನಲ್ಲಿ ನಡೆದ ಜವರಪ್ಪ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಪತ್ನಿ ಅಮೃತಾ ತನ್ನ ಪ್ರಿಯಕರ ಸಿದ್ದೇಶ್ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಹತ್ಯೆಗೈದಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
Read Full Story

10:52 AM (IST) Apr 19

Women's Bill - ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತಹ ವರ್ತನೆ; ವಿಂಗಡಣೆ ಇಲ್ಲದೆ ಮೀಸಲು ಬೇಗನೆ ಜಾರಿ ಹೇಗೆ?

ಕ್ಷೇತ್ರ ಮರು ವಿಂಗಡಣೆಯು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯ ಮತ್ತು ಮಹಿಳಾ ಮೀಸಲಾತಿ ಜಾರಿಗೆ ಅತ್ಯವಶ್ಯಕವಾಗಿದೆ. ಈ ಸುಧಾರಣೆಯು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತದೆ ಎಂಬ ವಿಪಕ್ಷಗಳ ಆರೋಪಗಳ ನಡುವೆ, ಇದು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಐತಿಹಾಸಿಕ ಹೆಜ್ಜೆ

Read Full Story

10:28 AM (IST) Apr 19

Bengaluru - 50 ಮಹಿಳೆಯರೊಂದಿಗೆ ದೈಹಿಕ ಸಂಪರ್ಕ? ಉದ್ಯಮಿ ಕೃಪಲಾನಿ ಕರಾಳ ಮುಖ ಬಯಲು!

ಕೃಪಲಾನಿ, ಪ್ರೀತಿ ಮತ್ತು ಮದುವೆಯ ನೆಪದಲ್ಲಿ ಸುಮಾರು 50 ಮಹಿಳೆಯರಿಗೆ ವಂಚಿಸಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಬೆದರಿಸುತ್ತಿದ್ದ ಈತನ ಕೃತ್ಯ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

Read Full Story

10:24 AM (IST) Apr 19

Muddu Sose Serial - ಅಯ್ಯಯ್ಯೋ..ಅತಿ ಮುಖ್ಯವಾದ ಪಾತ್ರವನ್ನೇ ಮುಗಿಸಿಬಿಟ್ರಾ? ಏನ್ರೀ ಹಿಂಗಾಯ್ತೋ!

Muddu Sose Kannada Serial: ಮುದ್ದು ಸೊಸೆ ಧಾರಾವಾಹಿಯಲ್ಲಿ‌ ತಾನು ಹುಟ್ಟಿದ ಮನೆಗೆ ಸುಭಾಷ್ ದ್ರೋಹ ಮಾಡಿದ್ದಾನೆ, ಎಷ್ಟೇ ಬಾರಿ ಬುದ್ಧಿ ಹೇಳಿದರೂ ಕೂಡ ಅವನು ಮಾತ್ರ ತಪ್ಪು ತಿದ್ದಿಕೊಳ್ಳಲ್ಲ, ಬದಲಾಗಿ ಒಂದಿಲ್ಲೊಂದು ಮೋಸ ಮಾಡುತ್ತಿದ್ದಾನೆ. ಈಗ ಅವನು ತನ್ನ ಮನೆಯವರನ್ನೇ ಕೊಂದಿದ್ದಾನೆ.

 

Read Full Story

09:31 AM (IST) Apr 19

ದಾವಣಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಕ್ಕೆ ಸಲೀಂ, ರಿಜ್ವಾನ್ ಕಾರಣ - ಅಲ್ಪಸಂಖ್ಯಾತ ಮುಖಂಡರ ಆಕ್ರೋಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಗೊಂದಲಕ್ಕೆ ಸಲೀಂ ಅಹ್ಮದ್ ಮತ್ತು ರಿಜ್ವಾನ್ ಅರ್ಷದ್ ಅವರೇ ಕಾರಣ ಎಂದು ಆರೋಪಿಸಿರುವ ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು, ಪಕ್ಷಕ್ಕಾಗಿ ದುಡಿದ ಕೆ. ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹಮ್ಮದ್ ವಿರುದ್ಧದ ಕ್ರಮವನ್ನು ಖಂಡಿಸಿದ್ದಾರೆ. 

Read Full Story

09:22 AM (IST) Apr 19

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ನಂತರ, ಅವರ ಪುತ್ರಿ ದೀಪಾಲಿ ಕುಲಕರ್ಣಿ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.

Read Full Story

08:54 AM (IST) Apr 19

ನ್ಯಾಯಾಂಗದಲ್ಲಿ ಎಐ ಬಳಕೆಗೆ ಸಿಎಂ ಕಳವಳ, ನ್ಯಾಯಾಂಗ ಸಮ್ಮೇಳನದಲ್ಲಿ ಸಿದ್ದೆರಾಮಯ್ಯ ಹೇಳಿದ್ದೇನು?

ಬೆಂಗಳೂರಿನಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ, ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಪ್ರಕರಣಗಳ ತ್ವರಿತ ಇತ್ಯರ್ಥದ ಸಾಧ್ಯತೆಗಳ ಜೊತೆಗೆ ಅಲ್ಗಾರಿದಮಿಕ್ ಪಕ್ಷಪಾತದಂತಹ ಆಳವಾದ ಕಳವಳಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Read Full Story

08:40 AM (IST) Apr 19

Karnataka Lokayukta 40th anniversary - ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ; ಸಿಜೆಐ ಮೆಚ್ಚುಗೆ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಂಸ್ಥೆಯನ್ನು ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತದಲ್ಲಿ ಸಂಸ್ಥೆಯ ಪಾತ್ರವನ್ನು ಕೊಂಡಾಡಿದರು.

Read Full Story

08:01 AM (IST) Apr 19

ಆಭರಣ ಖರೀದಿಸುವವಳಂತೆ ನಟಿಸಿ ಎರಡು ಚಿನ್ನದ ಉಂಗುರ ಕದ್ದ ಎಂಬಿಎ ಪದವೀಧರೆ!

MBA graduate caught stealing ಖರೀದಿ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ತೆರಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಉಂಗುರ ಕಳವು  ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಪದವೀಧರೆಯಾದ ಆರೋಪಿಯಿಂದ ಸುಮಾರು 1 ಲಕ್ಷ ಮೌಲ್ಯದ ಉಂಗುರವನ್ನು ಜಪ್ತಿ ಮಾಡಲಾಗಿದೆ.

Read Full Story

More Trending News