LIVE NOW
Published : Jun 18, 2026, 06:52 AM ISTUpdated : Jun 18, 2026, 09:20 PM IST

Karnataka News Live: Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ - ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!

ಸಾರಾಂಶ

ಬೆಂಗಳೂರು: ‘ನಾವೇನು ಆಪರೇಷನ್‌ ಮಾಡೋದು? ನಮ್ಮದು ಸಣ್ಣ ಪಕ್ಷ. ಮ್ಯಾನ್‌ ಪವರ್‌, ಮಸಲ್‌ ಪವರ್‌, ಮನಿ ಪವರ್‌ ಇರುವವರ ಎದುರು ನಾವು ಫೈಟ್‌ ಮಾಡಲು ಆಗುತ್ತಾ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕೈಯಲ್ಲಿ ಏನಾಗುತ್ತೆ? ಸರ್ಕಾರ ಅವರ ಕೈಯಲ್ಲಿದೆ. ನಮ್ಮ ಕೈಯಲ್ಲಿ ಏನಿದೆ? ನಾವು ನಮ್ಮ ಪಕ್ಷದ ಮತಗಳು ಚೆಲ್ಲಾಪಿಲ್ಲಿ ಆಗದೆ ಒಟ್ಟಾಗಿರಬೇಕು ಎಂಬ ಉದ್ದೇಶದಿಂದ ಅಭ್ಯರ್ಥಿ ಹಾಕಿದ್ದೇವೆ. ಕುತಂತ್ರ ಮಾಡಿ ಗೆಲ್ಲಬೇಕು ಎಂಬ ಪ್ರಶ್ನೆ ಇಲ್ಲ. ನಮ್ಮ ಅಭ್ಯರ್ಥಿ ಅರ್ಜಿ ಹಾಕುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ನನಗೆ ಮತ ಕೊಡಿ ಎಂದು ಕೇಳಿದ್ದಾರೆ ಎಂದರು. ನಮ್ಮ ಮತಗಳ ಜೊತೆಗೆ ಹೆಚ್ಚುವರಿ ಮತ ನಮಗೆ ಕೊಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇವೆ. ನಮ್ಮ ಮತ ಭದ್ರವಾಗಿಸಲು ನಾವು ಅಭ್ಯರ್ಥಿ ಹಾಕಿದ್ದೇವೆ ಎಂದು ಹೇಳಿದರು.

ಒಂದು ವೇಳೆ ಕಾಂಗ್ರೆಸ್‌ನಿಂದ ಅಡ್ಡಮತದಾನವಾಗಿ ನಮ್ಮ ಅಭ್ಯರ್ಥಿ ಗೆದ್ದರೆ, ಸರ್ಕಾರವನ್ನು ಬಿಗಿ ಮಾಡಲು ನಮಗೆ ಅನುಕೂಲವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

09:20 PM (IST) Jun 18

Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ - ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!

Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್‌ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

Read Full Story

08:38 PM (IST) Jun 18

Snake Rescue - ಕೈಯಲ್ಲೇ ಹಾವು ಹಿಡಿದು ರಕ್ಷಿಸಿದ ನಟ ಜಗ್ಗೇಶ್ - ನವರಸ ನಾಯಕನ ವಿಡಿಯೋ ವೈರಲ್!

Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

08:13 PM (IST) Jun 18

Spiritual Signs - ನಿಮ್ಮಲ್ಲೂ ಈ 5 ಗುಣಗಳಿವೆಯೇ? ಹಾಗಿದ್ರೆ ನಿಮಗೆ ಮರುಜನ್ಮ ಇಲ್ವಂತೆ!

Hindu ಧರ್ಮ ಮತ್ತು ಆಧ್ಯಾತ್ಮದಲ್ಲಿ 'ಮುಕ್ತಿ' ಅಥವಾ 'ಮೋಕ್ಷ' ಪಡೆಯುವುದೇ ಆತ್ಮದ ಅಂತಿಮ ಗುರಿ. ಒಬ್ಬ ವ್ಯಕ್ತಿಗೆ ಇದೇ ಕೊನೆಯ ಜನ್ಮ, ಇದರ ನಂತರ ಜನ್ಮ-ಮರಣ ಚಕ್ರ ಇರುವುದಿಲ್ಲ ಎಂಬುದನ್ನು ಸೂಚಿಸುವ 5 ಆಧ್ಯಾತ್ಮಿಕ ಮತ್ತು ಮಾನಸಿಕ ಸಂಕೇತಗಳು ಇಲ್ಲಿವೆ…

Read Full Story

07:41 PM (IST) Jun 18

ಮಂಡ್ಯ - ಮಳವಳ್ಳಿ ಶಾಲೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಶಂಕೆ, 67 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಶಂಕೆಯಿಂದ ಆತಂಕ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಊಟ ಸೇವಿಸಿದ್ದ 67 ವಿದ್ಯಾರ್ಥಿಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಪ್ರಕಾರ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ.
Read Full Story

07:16 PM (IST) Jun 18

ಚಿತ್ರದುರ್ಗ - ಕತ್ತಿಗೆ ಗ್ರ್ಯಾನೈಟ್ ಕಲ್ಲು ಬಿದ್ದು CUDA ಮಾಜಿ ಅಧ್ಯಕ್ಷರ ಪುತ್ರ ಸಾವು, ಕುಟುಂಬದಿಂದ ಮಗನ ಕಣ್ಣುದಾನ

ಚಿತ್ರದುರ್ಗದ ಮಾರ್ಬಲ್ಸ್ ಗೋದಾಮಿನಲ್ಲಿ ಗ್ರ್ಯಾನೈಟ್ ಬಿಲ್ಲೆ ಕುತ್ತಿಗೆ ಮೇಲೆ ಬಿದ್ದು ರಾಣಾ ಪ್ರತಾಪ್ ಸಿಂಹ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ಈ ದುಃಖದ ನಡುವೆಯೂ, ಮೃತನ ಕುಟುಂಬವು ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.
Read Full Story

06:24 PM (IST) Jun 18

ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯದಲ್ಲಿ ಉದ್ಯೋಗ ಅವಕಾಶ, ಪರೀಕ್ಷೆಯಿಲ್ಲದೆ ನೇರ ಸಂದರ್ಶನ!

ಬೆಂಗಳೂರಿನ ಸಿಎಸ್ಐಆರ್ - ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (NAL) 48 ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಕೇವಲ ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 29, 2026 ರಂದು ಸಂದರ್ಶನಕ್ಕೆ ಹಾಜರಾಗಬಹುದು.
Read Full Story

06:22 PM (IST) Jun 18

Chanakya Niti - ಪತ್ನಿಯನ್ನು ಈ 4 ಬಗೆಯ ಮಹಿಳೆಯರಿಂದ ದೂರವಿಡಿ ಅಂತಾರೆ ಚಾಣಕ್ಯ, ಇಲ್ಲದಿದ್ರೆ ಸಂಸಾರ ಹಾಳು!

Chanakya Niti for Family: ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವರ ಸಹವಾಸದಿಂದ ದೂರವಿರಬೇಕು. ಕೆಟ್ಟವರ ಗೆಳೆತನ ನಮ್ಮ ದಾಂಪತ್ಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು? ಚಾಣಕ್ಯ ನೀತಿಯಲ್ಲಿ ಒಳ್ಳೆಯ ಗೆಳೆತನದ ಮಹತ್ವವೇನು?

Read Full Story

05:58 PM (IST) Jun 18

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ 8000 ಕಿ.ಮೀ ದೂರ ಪ್ರಯಾಣಿಸಿ ಬೆಂಗಳೂರಿಗೆ ಬಂದ ವ್ಯಕ್ತಿ!

ಗಂಭೀರ ಹಲ್ಲಿನ ಸಿಸ್ಟ್ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್ ನಿವಾಸಿ ಜಾನ್ ಮಿಲ್ಲರ್, 8000 ಕಿ.ಮೀ. ಪ್ರಯಾಣಿಸಿ ಬೆಂಗಳೂರಿನಲ್ಲಿ ಯಶಸ್ವಿ ಚಿಕಿತ್ಸೆ ಪಡೆದರು. ಹ್ಯಾಪಿಯೆಸ್ಟ್ ಪರ್ಲ್ಸ್ ಡೆಂಟಲ್ ಕ್ಲಿನಿಕ್‌ನಲ್ಲಿ ನಡೆದ ಸಂಕೀರ್ಣ ಶಸ್ತ್ರಚಿಕಿತ್ಸೆಯು, ಬೆಂಗಳೂರನ್ನು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ಮತ್ತೊಮ್ಮೆ ಸಾಬೀತುಪಡಿಸಿದೆ.
Read Full Story

05:46 PM (IST) Jun 18

Megha Shetty - ನಂಗೆ ಗ್ಲಾಮರ್‌ಗಿಂತ ಕಥೆ ಮುಖ್ಯ - ಮೇಘಾ ಶೆಟ್ಟಿಗೆ 'ಕುಸುಮ' ಪಾತ್ರ ಯಾಕೆ ಇಷ್ಟು ಸ್ಪೆಷಲ್?

Gramayana ಚಿತ್ರದ ‘ಏನೇ ಹೇಳು ಕುಸುಮ’ ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್‌ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.

Read Full Story

05:29 PM (IST) Jun 18

Telegram ಅನ್ನು ಖಾಯಂ ಆಗಿ ಬ್ಯಾನ್‌ ಮಾಡಿ - ಚಿತ್ರರಂಗ ಉಳಿಸಲು ಕೇಂದ್ರ ಸರ್ಕಾರಕ್ಕೆ ಉಮೇಶ್ ಬಣಕಾರ್ ಪತ್ರ

Telegram Ban: ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ, ಇದೀಗ ಅದನ್ನು ಖಾಯಂ ಬ್ಯಾನ್ ಮಾಡಬೇಕು ಎಂದು ಉಮೇಶ್ ಬಣಕಾರ್ ಒತ್ತಾಯಿಸಿದ್ದಾರೆ.

Read Full Story

05:28 PM (IST) Jun 18

ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ - ದೂರು ದಾಖಲು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ.  

Read Full Story

04:42 PM (IST) Jun 18

ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos

Kannada Actress Priyanka Chincholi Photos: ‘ಹರ ಹರ ಮಹಾದೇವ’, ‘ಮನಸೆಲ್ಲಾ ನೀನೆ’ ಸೀರಿಯಲ್‌ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

04:40 PM (IST) Jun 18

Vijay Simplicity - ಸೂಟು ಬೂಟು ಧರಿಸಿದ್ರೂ ಮನಸ್ಸು ಮಾತ್ರ ಜನರ ಜೊತೆ - ಸಿಎಂ ವಿಜಯ್ ನಡೆ ವೈರಲ್!

Thalapathy Vijay Viral Video: ನೀಲಾಂಗರೈನ ತಮ್ಮ ನಿವಾಸದಿಂದ ಸೆಕ್ರೆಟರಿಯೇಟ್‌ಗೆ ಹೊರಟಿದ್ದ ಸಿಎಂ ವಿಜಯ್, ಚೆನ್ನೈನ ಬಿಸಿಲಿನಲ್ಲಿ ತಮಗಾಗಿ ಕಾಯುತ್ತಿದ್ದ ಜನರನ್ನು ನೋಡಿ ಸುಮ್ಮನೆ ಸಾಗಿಬಿಡಲಿಲ್ಲ.

Read Full Story

04:22 PM (IST) Jun 18

Controversy - ದರ್ಶನ್‌ಗಾಗಿ ಒಂಟಿ ಹೋರಾಟ - ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ!

Cinema Hungama: ಸ್ಯಾಂಡಲ್‌ವುಡ್‌ ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ.

Read Full Story

04:02 PM (IST) Jun 18

ಎಐ ಸಾಮ್ರಾಜ್ಯದಲ್ಲಿ ಕರ್ನಾಟಕದ ಅಚ್ಚರಿಯ ಜಿಗಿತ! ಆವಿಷ್ಕಾರಗಳಲ್ಲಿ ಏಷ್ಯಾದಲ್ಲೇ 2ನೇ ಸ್ಥಾನ ಪಡೆದ ಬೆಂಗಳೂರು!

 GSER 2026 ರ ಪ್ರಕಾರ,  AI ಆವಿಷ್ಕಾರದಲ್ಲಿ ಬೆಂಗಳೂರು ಏಷ್ಯಾ ಖಂಡದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ವರದಿಯು ಬೆಂಗಳೂರಿನ $152.8 ಬಿಲಿಯನ್ ಮೌಲ್ಯದ ಪರಿಸರ ವ್ಯವಸ್ಥೆಯನ್ನು ಮತ್ತು ಡೀಪ್‌ಟೆಕ್ ಹಾಗೂ ಎಐ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಅದರ ಜಾಗತಿಕ ಬೆಳವಣಿಗೆಯನ್ನು ದೃಢಪಡಿಸಿದೆ.

Read Full Story

02:36 PM (IST) Jun 18

ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ಕಾಶಿಗೆ ನೇರ ರೈಲು ಸಂಪರ್ಕ; ಎಲ್ಲೆಲ್ಲಿ ನಿಲುಗಡೆ?

ಉತ್ತರ ಕರ್ನಾಟಕದ ಜನರಿಗಾಗಿ ಹುಬ್ಬಳ್ಳಿಯಿಂದ ವಾರಾಣಾಸಿಗೆ ನೇರ ರೈಲು ಸಂಚಾರ ಆರಂಭವಾಗಿದೆ. ಗದಗ, ಬಾದಾಮಿ, ಬಾಗಲಕೋಟೆ ಮತ್ತು ವಿಜಯಪುರ ಮಾರ್ಗವಾಗಿ ಸಾಗುವ ಈ ರೈಲಿನ ವೇಳಾಪಟ್ಟಿ, ನಿಲುಗಡೆ ಹಾಗೂ ಪ್ರಯಾಣದ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
Read Full Story

02:00 PM (IST) Jun 18

ರೇಣುಕಾಸ್ವಾಮಿ ಕೊಲೆ ಪ್ರಕರಣ - ದರ್ಶನ್ ಪರ ಈ ಕೋರ್ಟ್‌ನಲ್ಲಿ ವಾದ ಮಂಡಿಸಲ್ಲ ಎಂದ ವಕೀಲ ಸುನೀಲ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಹೈಕೋರ್ಟ್ ವಿಚಾರಣೆಯಿಂದ ನಟ ದರ್ಶನ್ ಪರ ವಕೀಲರು ನಿವೃತ್ತಿ ಬಯಸಿದ್ದಾರೆ. ಇದೇ ವೇಳೆ, ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಅನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
Read Full Story

01:17 PM (IST) Jun 18

ಊರಿಗೆ ಶುದ್ಧ ನೀರು ಕೊಟ್ಟ ಕೆರೆಗೆ ಸಿಕ್ಕಿದ್ದು ತ್ಯಾಜ್ಯ! ತಿಪ್ಪೆಗುಂಡಿಯಾದ ಸಿರಿಗೆರೆ ಪುರಾತನ ಕೆರೆ!

ಕುರುಗೋಡು ತಾಲೂಕಿನ ಸಿರಿಗೇರಿ ಗ್ರಾಮದ ಪುರಾತನ ಕೆರೆಯು ತ್ಯಾಜ್ಯ ಮತ್ತು ಗಿಡಗಂಟಿಗಳಿಂದ ತುಂಬಿ, ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಈ ಹಿಂದೆ ಇಬ್ಬರು ಮಕ್ಕಳು ಮೃತಪಟ್ಟಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯಕ್ಕೆಗ್ರಾಮಸ್ಥರು ಕಿಡಿಕಾರಿದ್ದಾರೆ.

Read Full Story

12:32 PM (IST) Jun 18

ಮಂಡ್ಯ - ವೃದ್ಧೆಗೆ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗಲು ಯತ್ನ, ಗ್ರಾಮಸ್ಥರಿಗೆ ವಿಷಯ ತಿಳಿದು ಮುಂದಾಗಿದ್ದೇ ಬೇರೆ!

ಸಾಗ್ಯ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಚಾಕು ತೋರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಸಾಗ್ಯ ಮತ್ತು ಅಂಕನಹಳ್ಳಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಕದ್ದ ಓಲೆಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ.

Read Full Story

12:23 PM (IST) Jun 18

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ - ಪ್ರಯಾಣಕ್ಕೆ ಲಕ್ಷುರಿ ಕೋಚ್‌ ರೆಡಿ, ಒಳಾಂಗಣ ವಿನ್ಯಾಸದ ವಿಡಿಯೋ ವೈರಲ್

ಭಾರತೀಯ ರೈಲ್ವೆಯು ಮುಂಬೈ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ 'ವಂದೇ ಭಾರತ್ ಸ್ಲೀಪರ್' ರೈಲನ್ನು ಆರಂಭಿಸಲಿದೆ. ಈ ಪ್ರೀಮಿಯಂ ರೈಲು, ಪ್ರಸ್ತುತ ರೈಲುಗಳಿಗಿಂತ ವೇಗವಾಗಿರಲಿದ್ದು, ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಆಧುನಿಕ ಸೌಕರ್ಯಗಳಾದ ಖಾಸಗಿ ಕ್ಯಾಬಿನ್‌ಗಳು ಇದೆ.

Read Full Story

12:23 PM (IST) Jun 18

ಬೆಂಗಳೂರು–ವಿಜಯಪುರ ನೇರ ವಿಶೇಷ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಚಿವ MB ಪಾಟೀಲ್

ಉತ್ತರ ಕರ್ನಾಟಕ ಭಾಗದ ಬೆಂಗಳೂರು ನಗರದಿಂದ ವಿಜಯಪುರ ನಗರಕ್ಕೆ ನೇರ ರೈಲು ಪ್ರಯಾಣಿಕರಿಗೆ ಸಚಿವ ಎಂ.ಬಿ.ಪಾಟೀಲ್, ಗುಡ್‌ನ್ಯೂಸ್ ನೀಡಿದ್ದಾರೆ. ವಾರದಲ್ಲಿ ಎರಡು ದಿನ ಸಂಚರಿಸುವ ಈ ರೈಲನ್ನು ಶಾಶ್ವತಗೊಳಿಸಬೇಕು ಮತ್ತು ಪ್ರಯಾಣದ ಸಮಯವನ್ನು ಬದಲಾಯಿಸಬೇಕೆಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

Read Full Story

11:30 AM (IST) Jun 18

ಬದುಕಿದ್ದಾಗಲೇ ಬರ್ತಿವೆ ಡೆತ್​ ಸರ್ಟಿಫಿಕೇಟ್​ - ಹಾವೇರಿಯಲ್ಲೇ ಇನ್ನೊಂದು ಎಡವಟ್ಟು- ಸರ್ಕಾರದ ಸೌಲಭ್ಯಗಳು ಕಟ್​

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ, ತಾಯಿಯ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ ವೃದ್ಧೆಗೆ, ಆಕೆಯ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಲಾಗಿದೆ. ಈ ಆಡಳಿತಾತ್ಮಕ ಎಡವಟ್ಟಿನಿಂದಾಗಿ, ಶಿವಗಂಗವ್ವ ಎಂಬ ಮಹಿಳೆ ತನ್ನೆಲ್ಲಾ ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story

11:12 AM (IST) Jun 18

MLC Election - ಬಿಜೆಪಿಗೆ JDS ಗೆಲ್ಲೋದು ಇಷ್ಟವಿಲ್ಲ - ಅಚ್ಚರಿ ಹೇಳಿಕೆ ನೀಡಿದ STS, ಹೆಬ್ಬಾರ್

ವಿಧಾನಪರಿಷತ್ ಚುನಾವಣೆಯಲ್ಲಿ, ಬಿಜೆಪಿ ಉಚ್ಚಾಟಿತ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಅವರು ತಮ್ಮ 'ಆತ್ಮಸಾಕ್ಷಿ'ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಬಿಜೆಪಿಯು ತಮ್ಮನ್ನು ಸಂಪರ್ಕಿಸದ ಕಾರಣ ಅಸಮಾಧಾನಗೊಂಡಿದ್ದು, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರೂ ಇದೇ ರೀತಿಯ ಹೇಳಿಕೆ ನೀಡಿರುವುದು ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Read Full Story

10:42 AM (IST) Jun 18

ಕಲಬುರಗಿ - ನಿವೃತ್ತ ಇಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ. ಬ್ಯಾಂಕ್ ಲಾಕರ್‌ನಲ್ಲಿ ₹9 ಲಕ್ಷ ಹಳೆಯ ನೋಟು, 20 ತೊಲೆ ಚಿನ್ನ ಪತ್ತೆ!

ಕಲಬುರಗಿಯಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ನಿವೃತ್ತ ಇಂಜಿನಿಯರ್ ಮಾಣಿಕ್ ಕನಕಟ್ಟೆ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದಾಗ, ನಿಷೇಧಿತ ₹1000 ಮುಖಬೆಲೆಯ ಹಳೆಯ ನೋಟುಗಳು ಮತ್ತು 20 ತೊಲೆಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ.
Read Full Story

10:40 AM (IST) Jun 18

MLC Election - ಕಾಂಗ್ರೆಸ್‌ ನಿಂದ ಬಹುದೊಡ್ಡ ಆಫರ್; ಅಡ್ಡಮತದಾನ ಮಾಡಿದ್ರಾ ಮೂವರು?

ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಸುಳಿವು ಸಿಕ್ಕಿದ್ದು, ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್‌.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ. ಇತ್ತ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರೂ ಪ್ರತ್ಯೇಕವಾಗಿ ಮತ ಚಲಾಯಿಸಿ ಕುತೂಹಲ ಮೂಡಿಸಿದ್ದಾರೆ.
Read Full Story

10:13 AM (IST) Jun 18

RSS Registration row - ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಅಲ್ಲ; ಕುಟುಂಬ ರಾಜಕಾರಣದ ವ್ಯಕ್ತಿಯಿಂದ ಸಂಘಕ್ಕೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಿಯಾಂಕ್‌ ಖರ್ಗೆ ಅವರು ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿರಬಹುದು. ಆದರೆ ಆ ಹುದ್ದೆಯು ಅವರಿಗೆ ಕೇವಲ ಕಾನೂನು ಮಾನ್ಯ ಮಾಡಿದ ಕಾರ್ಯಕಾರಿ ಅಧಿಕಾರಗಳನ್ನಷ್ಟೇ ನೀಡುತ್ತದೆಯೇ ಹೊರತು ಯಾವುದೇ ನಾಗರಿಕ, ಸಂಘಟನೆಯನ್ನು ಕರೆಸಿ ತನ್ನ ವೈಯಕ್ತಿಕ ಇಚ್ಛೆಗನುಸಾರವಾಗಿ ಬದಲಾವಣೆಗೆ ಸೂಚಿಸುವ ಅಧಿಕಾರವನ್ನಲ್ಲ.

 

Read Full Story

09:42 AM (IST) Jun 18

5 ವರ್ಷದಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಕೋಟಿ ರೂಪಾಯಿ ಖರ್ಚು

ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯು ಕಳೆದ ಐದು ವರ್ಷಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಭಕ್ತರ ಸೌಕರ್ಯಗಳು ಮತ್ತು ದೇವಾಲಯದ ಅಭಿವೃದ್ಧಿಗಾಗಿ ಗರ್ಭಗುಡಿಯ ಗ್ರಾನೈಟ್ ಅಳವಡಿಕೆ, ವಾಣಿಜ್ಯ ಮಳಿಗೆ, ಶೌಚಾಲಯ ಸೇರಿದಂತೆ ಒಟ್ಟು 28 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಆರ್.ಜಿ. ನಾಯ್ಕ ಮಾಹಿತಿ ನೀಡಿದ್ದಾರೆ.
Read Full Story

09:35 AM (IST) Jun 18

Actress Roopika Marriage - ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!

Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ?

 

Read Full Story

09:22 AM (IST) Jun 18

ರಾಯಚೂರು ಜಿಲ್ಲೆಯ 29 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ - ಜಿಲ್ಲಾಧಿಕಾರಿಗಳಿಂದ ಆದೇಶ

ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯ  29 ಗ್ರಾಮಗಳಲ್ಲಿ ಮೊಹರಂ ಹಬ್ಬದ ಸಾರ್ವಜನಿಕ ಆಚರಣೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿಗಳು ಕರ್ನಾಟಕ ಪೋಲೀಸ್ ಕಾಯ್ದೆ 1963ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ.

Read Full Story

08:45 AM (IST) Jun 18

ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ; ರಾಜರ ಬೇಟೆಯ ಪರಾಕ್ರಮ ಅನಾವರಣ

ಪುಲಸಾನಿಒಡ್ಡು ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣೆ ವೇಳೆ ವಿಜಯನಗರ ಶೈಲಿಯ ಅಪರೂಪದ ವೀರರಗುಡಿಯೊಂದು ಪತ್ತೆಯಾಗಿದೆ. ಈ ದೇವಾಲಯವು ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳನ್ನು ಹೊಂದಿದ್ದು, 16-17ನೇ ಶತಮಾನದ ಇತಿಹಾಸ ಮತ್ತು ಅಂದಿನ ರಾಜರ ಬೇಟೆಯ ಪರಾಕ್ರಮವನ್ನು ಅನಾವರಣಗೊಳಿಸುತ್ತದೆ.

Read Full Story

08:35 AM (IST) Jun 18

RSS Registration issue - ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ

ಭಾರತೀಯ ಸಂವಿಧಾನವು ಸಂಘ-ಸಂಸ್ಥೆಗಳನ್ನು ಸ್ಥಾಪಿಸುವ ಮೂಲಭೂತ ಹಕ್ಕನ್ನು ನೀಡಿದೆ. ಈ ಸಂಸ್ಥೆಗಳ ನೋಂದಣಿಯು ಕಡ್ಡಾಯವಲ್ಲ, ಬದಲಾಗಿ ಐಚ್ಛಿಕವಾಗಿದ್ದು, ಸರ್ಕಾರಿ ಸವಲತ್ತುಗಳು ಮತ್ತು ಕಾನೂನಾತ್ಮಕ ವ್ಯಕ್ತಿತ್ವ ಪಡೆಯಲು ಮಾತ್ರ ನೋಂದಣಿ ಅವಶ್ಯಕವಾಗಿದೆ.
Read Full Story

07:42 AM (IST) Jun 18

ಹಾಸನ ನಗರದ ರೈಲ್ವೆ ಸೇತುವೆ ಎರಡೂ ಬದಿ ಸಂಚಾರ ಯಾವಾಗ? ಸಂಸದ ಶ್ರೇಯಸ್ ಪಟೇಲ್ ಮಹತ್ವದ ಘೋಷಣೆ

ಹಾಸನ ನಗರದ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ. ಜೊತೆಗೆ, ಗೃಹಲಕ್ಷ್ಮೀ ಯೋಜನೆಯು ಸ್ಥಗಿತಗೊಳ್ಳುವುದಿಲ್ಲ, ಬದಲಿಗೆ ಪರಿಷ್ಕರಣೆಗಾಗಿ ಮರು-ನೋಂದಣಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

07:24 AM (IST) Jun 18

ಆರ್‌ಎಸ್‌ಎಸ್‌ನ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಗೆ ಕುಟುಂಬದ ಆಸ್ತಿ ಕೆದಕಿದ ಎಂಪಿ ರೇಣುಕಾಚಾರ್ಯ!

ಆರೆಸ್ಸೆಸ್ ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ, ಭದ್ರಾ ಡ್ಯಾಂ ಬಳಿ ಜಿಲೆಟಿನ್ ಬಳಸಿ ಏಕಶಿಲೆ ಸ್ಫೋಟಿಸುತ್ತಿರುವುದು ಡ್ಯಾಂನ ಸುರಕ್ಷತೆಗೆ ಅಪಾಯ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Read Full Story

07:13 AM (IST) Jun 18

ಮದುವೆಯಲ್ಲಿ ಇನ್ಮುಂದೆ ತಡರಾತ್ರಿವರೆಗೆ ಬ್ಯಾಂಡ್, ಬೆಂಜೊ ಸದ್ದಿಲ್ಲ; ಹೊಸ ನಿಯಮಗಳು

ಮದುವೆ ಸಮಾರಂಭಗಳಲ್ಲಿ ತಡರಾತ್ರಿವರೆಗೆ ವಾದ್ಯ ನುಡಿಸುವುದನ್ನು ಮತ್ತು ಮದುವೆಗೆ ಒಂದು ದಿನ ಮುಂಚಿತವಾಗಿ ಸೇವೆ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಇನ್ನು ಮುಂದೆ, ಮದುವೆ ದಿನದಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸೇವೆ ಲಭ್ಯವಿರಲಿದೆ. 

Read Full Story

More Trending News