ಬೆಂಗಳೂರು: ಹಟ್ಟಿ ಚಿನ್ನದ ಗಣಿ ಕಂಪನಿ (ಎಚ್‌ಜಿಎಂಎಲ್) 2025-26 ನೇ ಸಾಲಿನಲ್ಲಿ ಹೊಂದಿದ್ದ 1,700 ಕೆ.ಜಿ. ಚಿನ್ನ ಉತ್ಪಾದಿಸುವ ಗುರಿ ಪೈಕಿ ಶೇ.99.50ರಷ್ಟು ಅಂದರೆ 1,691.50 ಕೆ.ಜಿ. ಚಿನ್ನ ಉತ್ಪಾದಿಸಿದೆ. ಆ ಮೂಲಕ ಇದೇ ಮೊದಲ ಬಾರಿಗೆ ₹1,910 ಕೋಟಿ ವಹಿವಾಟು ನಡೆಸಿದ್ದು, ₹844 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರು ಹಾಗೂ ಶಾಸಕರಾದ ಜೆ.ಟಿ. ಪಾಟೀಲ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ವರದಿ ನೀಡಿದರು. ಈ ವೇಳೆ ಗೃಹ ಸಚಿವ ಡಾ। ಜಿ. ಪರಮೇಶ್ವರ್, ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಶಿಲ್ಪಾ ಹಾಜರಿದ್ದರು.
09:31 PM (IST) May 17
ಬಿಬಿಎಂಪಿ ಇಲಾಖೆಯಲ್ಲಿ ಸುಮಾರು ₹40 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ 255 ಅಧಿಕಾರಿಗಳು, 437 ಬಿಲ್ಡರ್‌ಗಳು ಭಾಗಿಯಾಗಿದ್ದು, 22 ಲಕ್ಷ ಗ್ರಾಹಕರಿಗೆ ವಂಚಿಸಲಾಗಿದೆ ಎಂದು ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.
09:01 PM (IST) May 17
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ 1122 ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು (550 ಪಿಜಿ ಮತ್ತು 572 ಎಂಬಿಬಿಎಸ್) ಮಂಜೂರು ಮಾಡಿದೆ. ಈ ಸೀಟುಗಳನ್ನು ರಾಜ್ಯದ ವಿವಿಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹಂಚಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ₹1090 ಕೋಟಿ ಅನುದಾನವನ್ನೂ ನೀಡಲಾಗಿದೆ.
08:29 PM (IST) May 17
07:34 PM (IST) May 17
ಮಧ್ಯಮ ಸ್ತರದ ಯುದ್ಧ ವಿಮಾನ ನಿರ್ಮಾಣ ಯೋಜನೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಬಲವಾದ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯದ ಬಲಿಷ್ಠ ವೈಮಾಂತರಿಕ್ಷ ಪರಿಸರ ವ್ಯವಸ್ಥೆ ಮತ್ತು ಯೋಜನೆಗೆ 650ಎಕರೆ ಭೂಮಿ ನೀಡುವ ಸಿದ್ಧತೆಯನ್ನು ವಿವರಿಸಿ ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ.
06:23 PM (IST) May 17
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಟರ್ಮಿನಲ್ ಕಾಮಗಾರಿಯು ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಕಮಲ ಬಸದಿ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಟರ್ಮಿನಲ್ ಅನ್ನು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಲು ಯೋಜಿಸಲಾಗಿದೆ.
05:46 PM (IST) May 17
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 40 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. 2025-26ನೇ ಸಾಲಿನಲ್ಲಿ 44.47 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.23.9ರಷ್ಟು ಭಾರೀ ಏರಿಕೆ ಕಂಡಿದೆ.
04:53 PM (IST) May 17
ಇತ್ತೀಚಿನ ದಿನಗಳಲ್ಲಿ ವೆರಿಕೋಸ್ ವೇಯ್ನ್ಸ್ ಸಮಸ್ಯೆ ತುಂಬಾ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಲುಗಳಲ್ಲಿ ರಕ್ತನಾಳಗಳು ಊದಿಕೊಂಡು, ತಿರುಚಿಕೊಂಡು ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣಿಸುತ್ತವೆ.
04:38 PM (IST) May 17
ಹಸಿರು ಸೇಬಿನಲ್ಲಿ 'ಪೆಕ್ಟಿನ್' ಅನ್ನೋ ಅಂಶ ಇದೆ. ಇದು ನಮ್ಮ ಕರುಳಿನಲ್ಲಿರೋ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಇದರಲ್ಲಿರೋ ನಾರಿನಂಶ ಜೀರ್ಣಕ್ರಿಯೆಗೂ ತುಂಬಾ ಒಳ್ಳೇದು.
03:30 PM (IST) May 17
ಬೆಂಗಳೂರಿನ ಕೊತ್ತನೂರು ಬಳಿಯ 'ಹೋಮ್ ಆಫ್ ಹೋಪ್' ನಿರಾಶ್ರಿತ ಕೇಂದ್ರದಿಂದ ನಾಲ್ವರು ಅಕ್ರಮ ವಿದೇಶಿ ಮಹಿಳೆಯರು ಕಿಟಕಿಯ ಗ್ರಿಲ್ ಮುರಿದು ಪರಾರಿಯಾಗಿದ್ದಾರೆ. ವೀಸಾ ಅವಧಿ ಮುಗಿದಿದ್ದರಿಂದ FRRO ವಶದಲ್ಲಿದ್ದ ಉಗಾಂಡ ಮತ್ತು ನೈಜೀರಿಯಾ ಮೂಲದ ಈ ಮಹಿಳೆಯರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
01:37 PM (IST) May 17
01:03 PM (IST) May 17
ನೀಟ್ ಪರೀಕ್ಷೆ ಗೊಂದಲ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತ ದುರಂತವಾಗಿದ್ದು, ಇದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾತ್ರವಿದೆ ಎಂದು ಆರೋಪಿಸಿದರು.
12:35 PM (IST) May 17
12:34 PM (IST) May 17
12:07 PM (IST) May 17
ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ನಾಯಕರ ಮೆಟ್ರೋ ಪ್ರಯಾಣವನ್ನು 'ನಾಟಕ' ಎಂದು ಟೀಕಿಸಿದ್ದಾರೆ. ಪ್ರತಿದಿನ ಸಾರ್ವಜನಿಕ ಸಾರಿಗೆ ಬಳಸುವಂತೆ ಸವಾಲು ಹಾಕಿರುವ ಅವರು, ಮತದಾರರ ಪಟ್ಟಿ ಪರಿಷ್ಕರಣೆಯ 'SIR' ಪ್ರಕ್ರಿಯೆಯು ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಂಚು ಎಂದು ಗಂಭೀರ ಆರೋಪ ಮಾಡಿದ್ದಾರೆ.
11:41 AM (IST) May 17
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ದಿನಸಿ ಬೆಲೆ ಗಗನಕ್ಕೇರಿದೆ. ರಾಜ್ಯಾದ್ಯಂತ ಅಕ್ಕಿ, ತೊಗರಿಬೇಳೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿದೆ.
11:37 AM (IST) May 17
ನಟ ದರ್ಶನ್ ರಾಜಕೀಯಕ್ಕೆ ಬರಬೇಕೆಂಬುದು ಅಭಿಮಾನಿಗಳ ಆಸೆಯಾಗಿದ್ದು, ತಮಿಳುನಾಡಿನ ನಟ ವಿಜಯ್ರಂತೆ ಕರ್ನಾಟಕದಲ್ಲೂ ನಟನೊಬ್ಬ ಸಿಎಂ ಆಗಬೇಕೆಂದು ಬಯಸಿದ್ದಾರೆ. ಇದರ ನಡುವೆ, ಪವಿತ್ರಾ ಗೌಡರ ವಕೀಲ ಬಾಲನ್, 'ದರ್ಶನ್ ಸಿಎಂ ಆದರೆ ನಾನು ಡಿಸಿಎಂ' ಎಂದು ರಾಜಕೀಯ ಉಚಿತ ಕೊಡುಗೆಗಳನ್ನು ವ್ಯಂಗ್ಯವಾಡಿದ್ದಾರೆ.
11:11 AM (IST) May 17
ದೆಹಲಿ ಮುಂಬೈ ಮಾರ್ಗದಲ್ಲಿ ಚಲಿಸುತ್ತಿದ್ದ 12431 ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣದಲ್ಲಿ ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.
11:07 AM (IST) May 17
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಾರ್ಗವಾಗಿ ಮುಂಬೈಗೆ ತೆರಳುವ ಹೊಸ ರೈಲಿಗೆ ಚಾಲನೆ ನೀಡಿದರು. ಈ ರೈಲು (16553/16554) ಸರ್ ಎಂ ವಿಶ್ವೇಶರಯ್ಯ ಟರ್ಮಿನಲ್‌ನಿಂದ ಲೋಕಮಾನ್ಯ ಟರ್ಮಿನಲ್‌ವರೆಗೆ ಸಂಚರಿಸಲಿದೆ.
10:47 AM (IST) May 17
ರಾಯಚೂರಿನ ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ ನಡೆದಿದೆ. ಕಳ್ಳರು ಹುಂಡಿಯನ್ನು ಮುಟ್ಟಿಲ್ಲ. ಆದರೆ ದೇಗುಲದಲ್ಲಿರುವ ಬೆಳ್ಳಿ ಸೇರಿದಂತೆ ಆಭರಣ ಒಂದನ್ನು ಬಿಡದೆ ಕಳ್ಳತನ ಮಾಡಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.
10:46 AM (IST) May 17
ಬೆಂಗಳೂರಿನಲ್ಲಿ ಇನ್ನು ಮುಂದೆ ಮನೆಗಳಲ್ಲಿನ ಹಳೆಯ ಹಾಗೂ ಬೇಡವಾದ ವಸ್ತುಗಳ ವಿಲೇವಾರಿಗೆ 'ಡಿಕ್ಲಟರ್' (DClutter) ಆ್ಯಪ್ ಪರಿಚಯಿಸಲಾಗಿದೆ. ಈ ಆ್ಯಪ್ ಮೂಲಕ ಮಾಹಿತಿ ನೀಡಿದರೆ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ತಂಡವು ಮನೆ ಬಾಗಿಲಿಗೆ ಬಂದು ಉಚಿತವಾಗಿ ಬೃಹತ್ ತ್ಯಾಜ್ಯವನ್ನು ಸಂಗ್ರಹಿಸುತ್ತೆ.
10:07 AM (IST) May 17
ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನು ಅರ್ಜಿ ತಿರಸ್ಕರಿಸಿದ ಕಾರಣ ಜೈಲುವಾಸವೇ ಗತಿಯಾಗಿದೆ. ಇದರ ಬೆನ್ನಲ್ಲೇ ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ದಾಸ ಜೈಲುವಾಸದ ಕುರಿತ ಸಂಪೂರ್ಣ ವರದಿ ಸಲ್ಲಿಸಿದೆ. ದರ್ಶನ್‌ಗೆ ಏನೆಲ್ಲಾ ಸವಲತ್ತು ಸಿಗುತ್ತಿದೆ?
10:00 AM (IST) May 17
ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಅವರ ಪುತ್ರ ಜಿ.ಡಿ.ಹರೀಶ್‌ಗೌಡರ ನೇತೃತ್ವದಲ್ಲಿ ಪಕ್ಷವು ಬೃಹತ್ ಕಾರ್ಯಕ್ರಮ ಆಯೋಜಿಸಿದೆ. ಹೆಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
09:58 AM (IST) May 17
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಡದಿ ಟೌನ್‌ಶಿಪ್ ಮತ್ತು ಭೂ ಸ್ವಾಧೀನ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದರು. ಹಿಂದೆ ವಿರೋಧಿಸಿದ್ದ ಕಾಂಗ್ರೆಸ್, ಈಗ ರೈತರ ಭೂಮಿಯನ್ನು ಕಬಳಿಸುತ್ತಿದೆ ಎಂದು ಆರೋಪಿಸಿ, ಇಂದಿನಿಂದ ಹೊಸ ಹೋರಾಟ ಆರಂಭಿಸುವುದಾಗಿ ಘೋಷಿಸಿದರು.
09:17 AM (IST) May 17
09:09 AM (IST) May 17
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 100 ಗುಡಿಗಳು ಮತ್ತು 100 ಬಾವಿಗಳ ಪತ್ತೆಗಾಗಿ ಉತ್ಖನನ ನಡೆಯುತ್ತಿದೆ. ಈವರೆಗೆ 32 ಗುಡಿಗಳು ಮತ್ತು 36 ಬಾವಿಗಳು ಪತ್ತೆಯಾಗಿದ್ದು, ಉಳಿದವುಗಳ ಶೋಧ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಪ
08:53 AM (IST) May 17
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರಲ್ಲಿ ಸದ್ಯ ಮೋಡ ಮುಸುಕಿದ ವಾತಾವರಣವಿದೆ. ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
07:52 AM (IST) May 17
ಪ್ರಧಾನಿ ಮೋದಿ ಚಿನ್ನದ ಖರೀದಿ ಮಿತಿಗೊಳಿಸಲು ಕರೆ ನೀಡಿದ್ದನ್ನು ಸಂಸದ ರಮೇಶ ಜಿಗಜಿಣಗಿ ಸಮರ್ಥಿಸಿಕೊಂಡಿದ್ದಾರೆ. ದೇಶದ ಹೆಸರಲ್ಲಿ ಕಾಂಗ್ರೆಸ್ ನಾಯಕರು ಚಿನ್ನದ ತುಲಾಭಾರ ಮಾಡಿಸಿಕೊಂಡಿದ್ದನ್ನು ಸ್ಮರಿಸಿದ ಅವರು, ಕೋವಿಡ್‌ನಂತಹ ಸಂಕಷ್ಟವನ್ನು ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
07:36 AM (IST) May 17
ಉಡುಪಿ ಪ್ರವಾಸದಲ್ಲಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಈ ಮಾನವೀಯ ಕಾರ್ಯವನ್ನು ಸಚಿವರು ಶ್ಲಾಘಿಸಿ, ತಕ್ಷಣವೇ ಆ ತಾಯಿಗೆ ನ್ಯಾಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
07:23 AM (IST) May 17
07:22 AM (IST) May 17
07:08 AM (IST) May 17
ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತವು (ಬಿಎಡಬ್ಲ್ಯುಎಂಎಲ್) 'ಡಿಕ್ಲಟರ್' ಎಂಬ ಹೊಸ ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಮೂಲಕ, ನಾಗರಿಕರು ತಮ್ಮ ಮನೆಗಳಲ್ಲಿನ ಪೀಠೋಪಕರಣ, ಹಾಸಿಗೆ, ಬಟ್ಟೆಗಳಂತಹ ಹಳೆಯ ಹಾಗೂ ಬೇಡವಾದ ವಸ್ತುಗಳ ಉಚಿತ ವಿಲೇವಾರಿಗೆ ಕೋರಿಕೆ ಸಲ್ಲಿಸಬಹುದು.
07:02 AM (IST) May 17
ಶಾಸಕ ಎ.ಎಸ್ ಪೊನ್ನಣ್ಣ ಅವರು, ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹಿಜಾಬ್ ಸಾಂವಿಧಾನಿಕ ಹಕ್ಕಾಗಿದ್ದು, ಕೇಸರಿ ಶಾಲನ್ನು ಧಾರ್ಮಿಕ ಸಂಕೇತವಾಗಿ ಹೋಲಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
06:55 AM (IST) May 17
ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯ ಹಜಾರ ರಾಮ ದೇವಸ್ಥಾನದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ ವಿಜಯನಗರ ಕಾಲದ ಪುರಾತನ ದೇವಾಲಯದ ಕಲ್ಲಿನ ಚಾವಣಿ ಮತ್ತು ಅಪರೂಪದ ಆನೆಯ ಕಲಾಕೃತಿಗಳು ಪತ್ತೆಯಾಗಿವೆ.