ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ಮಳೆ ಸುರಿಯಲಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

11:43 PM (IST) Jun 16
11:16 PM (IST) Jun 16
ಕೆನಡಾದಲ್ಲಿ ನಡೆಯಲಿರು G7 ಶೃಂಗಸಭೆಗೂ ಮುನ್ನ, ಡೊನಾಲ್ಡ್ ಟ್ರಂಪ್ ಇಸ್ರೇಲ್-ಇರಾನ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸುವ ಹೇಳಿಕೆಯನ್ನು ಬೆಂಬಲಿಸಲು ನಿರಾಕರಿಸಿದರು, ಇಸ್ರೇಲ್‌ನ ಕ್ರಮಗಳನ್ನು ಬಲವಾಗಿ ಬೆಂಬಲಿಸಿದರು ಮತ್ತು ರಷ್ಯಾ ಮೈತ್ರಿಕೂಟಕ್ಕೆ ಮರಳಬೇಕೆಂದು ಕರೆ ನೀಡಿದರು.
10:31 PM (IST) Jun 16
09:45 PM (IST) Jun 16
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಇಸ್ರೇಲ್ ಇರಾನ್‌ನ ರಾಷ್ಟ್ರೀಯ ಟಿವಿ ಚಾನೆಲ್‌ನ ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಲೈವ್ ಕಾರ್ಯಕ್ರಮ ನಡೆಸುತ್ತಿದ್ದ ನಿರೂಪಕಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
09:27 PM (IST) Jun 16
ಪಹಲ್ಗಾಮ್ ದಾಳಿಯನ್ನು FATF ಖಂಡಿಸಿದ್ದು, ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಲಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಮತ್ತೆ 'ಬೂದು ಪಟ್ಟಿ'ಗೆ ಸೇರಿಸಬಹುದೆಂಬ ಚರ್ಚೆಗಳು ಆರಂಭವಾಗಿವೆ.
09:24 PM (IST) Jun 16
ಮಧ್ಯಪ್ರದೇಶದ ಇಂದೋರ್ನ ರಾಜಾ ರಘುವಂಶಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರವಾಸಿಗನೊಬ್ಬ ಅನಿರೀಕ್ಷಿತವಾಗಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದಂಪತಿ ಕಾಣಿಸಿಕೊಂಡಿದ್ದಾರೆ. ಇದು ದಂಪತಿಯ ಕೊನೆಯ ಕ್ಷಣ ಇರಬಹುದು ಎಂದು ಊಹಿಸಲಾಗಿದೆ.
09:01 PM (IST) Jun 16
08:47 PM (IST) Jun 16
ಯೂಸರ್‌ಗಳ ವೈಯಕ್ತಿಕ ಸಂದೇಶಗಳು, ಕರೆಗಳು ಮತ್ತು ಸ್ಟೇಟಸ್ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ ಮತ್ತು ಆದ್ದರಿಂದ ಜಾಹೀರಾತುಗಳನ್ನು ತೋರಿಸಲು ಬಳಸಲಾಗುವುದಿಲ್ಲ ಎಂದು WhatsApp ಹೇಳಿದೆ.
08:16 PM (IST) Jun 16
07:46 PM (IST) Jun 16
07:45 PM (IST) Jun 16
ಆದಾಯ ತೆರಿಗೆ ಇಲಾಖೆಯಿಂದ ಐದು ರೀತಿಯ ಹಣದ ವ್ಯವಹಾರಗಳಿಗೆ ನೋಟಿಸ್ ಬರಬಹುದು. ಹಾಗೆಂದು ನಿಮ್ಮ ಮೇಲೆ ಸಂದೇಹ ಎಂದಲ್ಲ. ಅದಕ್ಕಾಗಿ ನೀವು ಮಾಡಬೇಕಿರುವುದು ಏನು? ಇಲ್ಲಿದೆ ಡಿಟೇಲ್ಸ್
07:40 PM (IST) Jun 16
ಭಾರತವು ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ಅನ್ವೇಷಣೆಯ ಅಂಚಿನಲ್ಲಿದೆ. ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿದ್ದು, ಭಾರತದ ಪಾಲಿಗೆ ಈ ತೈಲ ನಿಕ್ಷೇಪ ಗಯಾನ ದೇಶಕ್ಕೆ ಮಾಡಿದ ಅದ್ಭುತವನ್ನು ಮಾಡಬಹುದು ಎಂದಿದ್ದಾರೆ.
07:27 PM (IST) Jun 16
07:22 PM (IST) Jun 16
ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇದೆಯೋ ಇಲ್ಲವೋ ಎನ್ನುವ ವಾದ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯಲೋಕಕ್ಕೇ ಸವಾಲು ಎನ್ನಿಸುವ ಘಟನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಏನದು?
06:51 PM (IST) Jun 16
06:50 PM (IST) Jun 16
ಅರ್ಧ ಶತಮಾನದ ನಂತರ ಕುಟುಂಬವೊಂದಕ್ಕೆ ಹೆಣ್ಣು ಮಗುವಿನ ಜನನ. ದೆಹಲಿಯಲ್ಲಿ ನಡೆದ ಈ ಸಂಭ್ರಮದಲ್ಲಿ ನೂರಾರು ಕಾರುಗಳ ಮೆರವಣಿಗೆ, ದೀಪಾಲಂಕಾರ, ಹೂವಿನ ಅಲಂಕಾರ, ಪಟಾಕಿಗಳೊಂದಿಗೆ ಅದ್ದೂರಿಯಾಗಿ ಮಗುವನ್ನು ಸ್ವಾಗತಿಸಲಾಯಿತು. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
06:48 PM (IST) Jun 16
ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರದ ಸರ್ಕಾರಿ ಶಾಲೆಯೊಂದು ಇಂಗ್ಲಿಷ್ ಮಾಧ್ಯಮದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ₹1000 ನೀಡುತ್ತಿದೆ. ಶಿಕ್ಷಕ ಶ್ರೀಧರ್ ಅವರ ಈ ಉಪಕ್ರಮದಿಂದಾಗಿ ದಾಖಲಾತಿ ಹೆಚ್ಚಿದೆ.
06:40 PM (IST) Jun 16
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರು ಹಗಲಿನ ವೇಳೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗಿಂತ ಆಸ್ತಮಾದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಪುರುಷರಲ್ಲಿ ಮಾತ್ರ ಈ ಸಂಬಂಧ ಕಂಡುಬಂದಿಲ್ಲ.
06:29 PM (IST) Jun 16
06:08 PM (IST) Jun 16
ಬೆಂಗಳೂರಿನ ಜಯನಗರದಲ್ಲಿ ರ‍್ಯಾಪಿಡೋ ಚಾಲಕನೊಬ್ಬ ಯುವತಿಗೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ರ‍್ಯಾಪಿಡೋ ಚಾಲಕನ ಹಲ್ಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು ಹೊಸ ತಿರುವು ನೀಡಿವೆ.
06:01 PM (IST) Jun 16
05:35 PM (IST) Jun 16
05:31 PM (IST) Jun 16
ಏರ್ ಇಂಡಿಯಾ ಅಪಘಾತದ ನಂತರ, ಅಧ್ಯಕ್ಷ ಎನ್ ಚಂದ್ರಶೇಖರನ್ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿ, ದುಃಖ ವ್ಯಕ್ತಪಡಿಸಿದರು ಮತ್ತು ಘಟನೆಯ ತನಿಖೆ ನಡೆಯುವವರೆಗೂ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದರು.
04:43 PM (IST) Jun 16
ಪಾಕಿಸ್ತಾನ ಮತ್ತು ಭಾರತ ನಡುವಿನ ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಸಮಗ್ರ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಭುಟ್ಟೋ ಹೇಳಿದ್ದಾರೆ.
04:10 PM (IST) Jun 16
ಸಂಬರಗಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ದನದ ಶೆಡ್‌ಗಳು ಇನ್ನೂ ನಿರ್ಮಾಣವಾಗದ ಕಾರಣ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್‌ನ ನಿರ್ಲಕ್ಷ್ಯದಿಂದಾಗಿ ಶೆಡ್ ವಿತರಣೆಯಲ್ಲಿ ಗೊಂದಲ ಉಂಟಾಗಿದೆ.
04:08 PM (IST) Jun 16
04:01 PM (IST) Jun 16
03:34 PM (IST) Jun 16
ಡೆಡ್‌ಲೈನ್ ನಂತರ ತೆರಿಗೆದಾರರು ತಮ್ಮ ರಿಟರ್ನ್ಸ್ ಸಲ್ಲಿಸಿದರೆ ಮರುಪಾವತಿಯನ್ನು ನಿರಾಕರಿಸುವ ವಿವಾದಾತ್ಮಕ ನಿಬಂಧನೆ ಈವರೆಗೂ ಜಾರಿಯಲ್ಲಿದೆ ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
03:34 PM (IST) Jun 16
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಪೊಲೀಸ್ ಪೇದೆಯೊಬ್ಬ ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿ ವ್ಯಾಪಾರಿಯೊಬ್ಬರಿಂದ ₹10 ಲಕ್ಷ ಸುಲಿಗೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಯುವತಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
02:56 PM (IST) Jun 16
02:36 PM (IST) Jun 16
ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಕಾರಿಗೆ ರೈತ ಮುಖಂಡ ಬಲ್ಲೂರು ರವಿಕುಮಾರ್ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮನವಿ ಸಲ್ಲಿಸಲು ಅವಕಾಶ ನೀಡದೆ ಅವರ ಮೇಲೆ ಹಲ್ಲೆ ನಡೆಸಿದ್ದಕ್ಕೆ ರೈತ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ರೈತರ ಮನವಿ ಸ್ವೀಕರಿಸಿದರು.
01:19 PM (IST) Jun 16
ಆಯಸ್ಸು ಗಟ್ಟಿಯಿದ್ದರೆ, ವಿಧಿ ಎನ್ನುವುದು ಯಾವುದೋ ರೂಪದಲ್ಲಿ ಬಂದು ಜೀವ ಕಾಪಾಡುತ್ತದೆ ಎನ್ನುವುದಕ್ಕೆ ಮೊನ್ನೆ ನಡೆದ ವಿಮಾನ ದುರಂತದಲ್ಲಿ ಲೇಟಾಗಿ ಬಂದು ವಿಮಾನ ತಪ್ಪಿಸಿಕೊಂಡಿರುವ ಭೂಮಿಯೇ ಸಾಕ್ಷಿ. ಅವರು ಹೇಳಿದ್ದೇನು ಕೇಳಿ...
01:19 PM (IST) Jun 16
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ*ಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಲಾಗಿದೆ. ಐದು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಿಲುಕಿದ್ದಾರೆ ಎಂದು ವಕೀಲರು ವಾದಿಸಿದರು. ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.
12:59 PM (IST) Jun 16
ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಿಶ್ವನಾಥ್ ಮುಗುಟಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೇಂಬರ್‌ನಲ್ಲಿದ್ದಾಗಲೇ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೇವಲ 15 ದಿನಗಳ ಹಿಂದಷ್ಟೇ ವರ್ಗಾವಣೆಗೊಂಡಿದ್ದರು.
12:21 PM (IST) Jun 16
11:33 AM (IST) Jun 16
ಜಾತಿಗಣತಿ ವರದಿ ಬಿಡುಗಡೆಯಾಗದಿರುವುದು ಹಿಂದುಳಿದ ವರ್ಗಗಳಿಗೆ ಹೆಚ್ಚುವರಿ ಶಕ್ತಿ ಮತ್ತು ಮೀಸಲಾತಿ ಹೆಚ್ಚಳದ ಅವಕಾಶ ಕಸಿದಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಪ್ರಬಲ ವರ್ಗದ ವಿರೋಧ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
10:51 AM (IST) Jun 16
ಗಿಣಿರಾಮ ಧಾರಾವಾಹಿಯಲ್ಲಿ ನಾಯಕಿ ಮಹತಿಯಾಗಿ ಮಿಂಚಿದ ನಟಿ ನಯನಾ ನಾಗರಾಜ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
09:22 AM (IST) Jun 16
ವಿಮಾನ ದುರಂತದ ಹೊಣೆಹೊತ್ತು ಪ್ರಧಾನಮಂತ್ರಿ ರಾಜೀನಾಮೆ ನೀಡಲಿ ಎಂದು ಹೇಳಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಠಕ್ಕರ್ ಕೊಟ್ಟಿರುವ ಮಾಜಿ ಸಚಿವ ಅಶ್ವತ್ಥ್ ನಾರಾಯಣ್.
09:07 AM (IST) Jun 16
ಬೆಂಗಳೂರು ಕ್ರೈಂ ನ್ಯೂಸ್: ಮಹಿಳೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ದೇವಾಲಯದ ಅರ್ಚಕನನ್ನು ಬಂಧಿಸಲಾಗಿದೆ.
08:44 AM (IST) Jun 16
ವಾರದ ರಜೆ ಪರಿಣಾಮ ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾನುವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ದಾಖಲೆ ನಿರ್ಮಿಸಿದ್ದಾರೆ.