Published : Mar 13, 2026, 05:19 AM ISTUpdated : Mar 13, 2026, 11:32 PM IST

Karnataka News Live: ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ಸಾರಾಂಶ

ಬೆಂಗಳೂರು: ಒಳ ಮೀಸಲಾತಿ ಕಗ್ಗಂಟು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಹಿರಿಯ ಸಚಿವರಿಗಾಗಿ ಸೋಮವಾರ ಔತಣಕೂಟ ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಎಚ್.ಮುನಿ ಯಪ್ಪ, ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಎಚ್‌. ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಸೇರಿ ಸುಮಾರು 15 ಸಚಿವರನ್ನು ಔತಣ ಕೂಟಕ್ಕೆ ಆಹ್ವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಜಾತಿಯ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಔತಣ ಕೂಟದ ರೂಪದಲ್ಲಿ ಸಭೆ ಆಯೋಜಿಸಲಾಗಿದ್ದು, ಸಚಿವರಿಂದ ಸಿಎಂ ಗೊಂದಲ ನಿವಾರಣೆ ಕುರಿತು ಅಭಿಪ್ರಾಯ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Alphonso Mango

11:32 PM (IST) Mar 13

ಒಂದು ದಶಕದಿಂದ ಗಲ್ಫ್‌ ದೇಶಗಳಲ್ಲಿ ಉತ್ತಮ ಬೇಡಿಕೆ ಸೃಷ್ಟಿಸಿದ್ದ ಧಾರವಾಡ ಆಪೂಸ್‌ ಮಾವು ರಫ್ತಿಗೆ ಯುದ್ಧದ ಕರಿನೆರಳು!

ವರದಿ: ಬಸವರಾಜ ಹಿರೇಮಠ

ಮಧ್ಯಪ್ರಾಚ್ಯದಲ್ಲಿನ ಯುದ್ಧವು ಧಾರವಾಡ ಆಪೂಸ್ ಎಂದೇ ಖ್ಯಾತವಾದ ಅಲ್ಫಾನ್ಸೋ ಮಾವಿನ ರಫ್ತಿಗೆ ಅಡ್ಡಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳೆಗಾರರ ಸಂಘವು ಅಮೆರಿಕ, ಯುಕೆ ಮತ್ತು ಸಿಂಗಾಪುರದಂತಹ ಪರ್ಯಾಯ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ.  

Read Full Story

11:17 PM (IST) Mar 13

ಕರ್ನಾಟಕದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಳ, ಅರಣ್ಯ ಪ್ರದೇಶ ಕ್ಷೀಣ!

ರಾಜ್ಯದಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಸಂಖ್ಯೆ ಮತ್ತು ಕುಗ್ಗುತ್ತಿರುವ ಅರಣ್ಯ ಪ್ರದೇಶದಿಂದಾಗಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು, ಸರ್ಕಾರವು ರೈಲು ಹಳಿ ತಡೆಗೋಡೆ ನಿರ್ಮಾಣದಂತಹ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಂಘರ್ಷ ತಡೆಗಟ್ಟಲು ಆದ್ಯತೆ ನೀಡುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Read Full Story

10:59 PM (IST) Mar 13

'ಅರ್ಧಕ್ಕೆ ಕೈಕೊಡುವವಳಲ್ಲ' ಅಂದಿದ್ದ ನಟಿ ಸಂಜನಾ ಬುರ್ಲಿ ಸೀರಿಯಲ್​ ಬಿಟ್ಟಿದ್ಯಾಕೆ? ಕುತೂಹಲದ ಪೋಸ್ಟ್​!

'ಪುಟ್ಟಕ್ಕನ ಮಕ್ಕಳು' ಸೀರಿಯಲ್​ನಿಂದ ಪೂರ್ವಸೂಚನೆ ನೀಡಿ ಹೊರಬಂದಿದ್ದ ನಟಿ ಸಂಜನಾ ಬುರ್ಲಿ, ಇದೀಗ 'ಗಂಧದ ಗುಡಿ' ಧಾರಾವಾಹಿಯಿಂದ ದಿಢೀರ್ ನಿರ್ಗಮಿಸಿದ್ದಾರೆ. ಅವರ ಮದುವೆ ಕಾರಣ ಎನ್ನಲಾಗುತ್ತಿದ್ದರೂ, ಅವರು ಹಂಚಿಕೊಂಡಿರುವ ಒಂದು ನಿಗೂಢ ಪೋಸ್ಟ್​ನಿಂದಾಗಿ ಅವರ ನಿರ್ಧಾರದ ಬಗ್ಗೆ  ಅನುಮಾನಗಳು ಮೂಡಿವೆ.

Read Full Story

10:52 PM (IST) Mar 13

ಕೊಡಗಿನ ಆತಂಕಕ್ಕೆ ತೆರೆ - ಹಲವರನ್ನ ಬಲಿ ಪಡೆದ ಕಾಡಿನ ಒಂಟಿ ಸಲಗ ಕೊನೆಗೂ ಸೆರೆ

ಕೊಡಗು ಜಿಲ್ಲೆಯ ಸಿದ್ದಾಪುರ, ಪಾಲಿಬೆಟ್ಟ, ಮತ್ತು ಅಮ್ಮತ್ತಿ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಆತಂಕ ಸೃಷ್ಟಿಸಿ, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆ ಹಿಡಿದಿದೆ. ಸಾಕಾನೆಗಳ ಸಹಾಯದಿಂದ ನಡೆಸಿದ ಈ ಕಾರ್ಯಾಚರಣೆಯು ಸ್ಥಳೀಯ ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ.
Read Full Story

10:32 PM (IST) Mar 13

ಕೆಪಿಎಸ್‌ಸಿ ಅಕ್ರಮಗಳಲ್ಲಿ ಮುಳುಗಿದೆ, ಸಂಸ್ಥೆ ಮುಚ್ಚಿ - ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ

ಎಷ್ಟೆಲ್ಲಾ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದರೂ ಕೆಪಿಎಸ್‌ಸಿಯವರಿಗೆ ಭಯ ಇಲ್ಲದಂತಾಗಿದೆ. ಖಾಲಿ ಪತ್ರಿಕೆ ನೀಡಿದವರೂ ಆಯ್ಕೆಯಾಗಿದ್ದಾರೆ. ಹೀಗಾಗಿ ಕೆಪಿಎಸ್‌ಸಿ ಸಂಸ್ಥೆಯನ್ನೇ ರದ್ದುಪಡಿಸಬೇಕು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

Read Full Story

10:28 PM (IST) Mar 13

ಉಡುಪಿ ಅಬಕಾರಿ ಅಧಿಕಾರಿಗೆ ಲೋಕಾಯುಕ್ತ ಶಾಕ್ - 15 ಕಡೆ ದಾಳಿ, ಕೋಟಿಗಟ್ಟಲೆ ಪತ್ತೆ, ಅಕ್ರಮ ಆಸ್ತಿ ಗುಟ್ಟು ರಟ್ಟು!

ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿ ಶ್ರೀನಿವಾಸ್ ಟಿ. ಎಂ. ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ, 15 ಸ್ಥಳಗಳಲ್ಲಿ ಶೋಧ ನಡೆಸಿ, ಸುಮಾರು 8.69 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ.
Read Full Story

10:02 PM (IST) Mar 13

ಬಸವನಗುಡಿ ಸುಬ್ರಮಣ್ಯ ಮಠಕ್ಕೆ ಜಾಗದ ಗುತ್ತಿಗೆ ಮುಂದುವರಿಕೆ - ಸಚಿವ ರಾಮಲಿಂಗಾರೆಡ್ಡಿ

ಗುತ್ತಿಗೆ ಆಧಾರದಡಿ ನೀಡಿರುವ ಜಾಗದ ವಿಚಾರದಲ್ಲಿ ಈಗಾಗಲೇ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವೇ ಅಂತಿಮವಾಗಿದ್ದು, ಗುತ್ತಿಗೆ ಮುಂದುವರಿಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Read Full Story

09:18 PM (IST) Mar 13

ಗರ್ಭಿಣಿಯಾದ್ಮೇಲೆ ಪತಿಯ ಮೊದಲ ಮದುವೆ ವಿಷ್ಯ ಗೊತ್ತಾಯ್ತು - ರೌಡಿ ಗಂಡನನ್ನು ಬದಲಾಯಿಸಿರೋ ರೇಷ್ಮಾ ಆಂಟಿ ಕರಾಳ ಬದುಕು

Reels Reshma: ಒಂದಿನ ಗಂಡ ಹೊಡೆಯುತ್ತಾನೆ, ಬೈತಾನೆ, ಗಂಡ ಪ್ರೀತಿ ಮಾಡ್ತಾನೆ ಎಂದೆಲ್ಲ ಹೇಳಿಕೊಂಡು ವಿಡಿಯೋ ಮಾಡುತ್ತಿದ್ದ ರೇಷ್ಮಾ ಆಂಟಿ ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗಿ ಆಗಿದ್ದರು. ಇವರನ್ನು ಬೈಯ್ಯುವವರೇ ಜಾಸ್ತಿ ಇದ್ದರೂ ಕೂಡ, ವೈಯಕ್ತಿಕ ಬದುಕಿನ ಕರಾಳ ವಿಷಯಗಳು ಅನೇಕರಿಗೆ ಗೊತ್ತಿಲ್ಲ.

 

Read Full Story

09:00 PM (IST) Mar 13

ಗೋಕಾಕ- ಧಾರವಾಡ ರಸ್ತೆ ಚತುಷ್ಪಥವಾಗಿಸಿ - ಸಂಸದ ಜಗದೀಶ ಶೆಟ್ಟರ್ ಮನವಿ

ಸಂಸದ ಜಗದೀಶ ಶೆಟ್ಟರ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ನವದೆಹಲಿಯ ಸಂಸತ್ ಭವನದಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾಮಗಾರಿಗಳ ಕುರಿತು ಚರ್ಚಿಸಿದರು.

Read Full Story

08:48 PM (IST) Mar 13

ಕೃಷಿ ವಿಶ್ವವಿದ್ಯಾಲಯ ಲಕ್ಷ ಕೋಟಿ ಅನುದಾನಕ್ಕೆ ಸಮ - ಸಚಿವ ಚಲುವರಾಯಸ್ವಾಮಿ

ಕೃಷಿ ವಿಶ್ವವಿದ್ಯಾಲಯ ತಂದು ಜಿಲ್ಲೆಗೆ ಶಾಶ್ವತ ಕೊಡುಗೆ ನೀಡಿದ್ದೇವೆ. ಇನ್ನು ಲಕ್ಷ ಕೋಟಿ ಅನುದಾನ ತಂದರೂ ಕೃಷಿ ವಿಶ್ವವಿದ್ಯಾನಿಲಯಕ್ಕೆ ಸಮನಾಗುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Read Full Story

07:48 PM (IST) Mar 13

ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ - ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು - Bigg Boss ವಿನಯ್‌ ಗೌಡ ಕಿಡಿ

ಬಿಗ್‌ಬಾಸ್‌ ವಿಜೇತ ವಿನಯ್‌ ಗೌಡ ಅವರು, ಡಾಗ್‌ ಸತೀಶ್‌ರನ್ನು ನಾಯಿಗಳ ಹೆಸರೇ ಗೊತ್ತಿಲ್ಲದ ಬ್ರೀಡರ್‌ ಎಂದು ಕರೆದಿದ್ದಾರೆ. ಗೂಗಲ್‌ನಲ್ಲಿ ನಂಬರ್‌ ಒನ್‌ ಎಂದು ಸ್ವಯಂ ಘೋಷಿಸಿಕೊಂಡಿರುವ ಸತ್ಯ ಬಿಚ್ಚಿಟ್ಟಿರುವ ವಿನಯ್, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿರುವ ವಿರುದ್ಧ ಕೇಸ್​​ ಹಾಕ್ಬೇಕು ಎಂದಿದ್ದಾರೆ. 

Read Full Story

07:34 PM (IST) Mar 13

ಐಐಎಸ್‌ಸಿ ಬೆಂಗಳೂರು ಪ್ರಾಜೆಕ್ಟ್ ಎಂಜಿನಿಯರ್ ನೇಮಕಾತಿ 2026, ಈ ತಕ್ಷಣವೇ ಅರ್ಜಿ ಸಲ್ಲಿಸಿ

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ನಿಗದಿತ ದಿನಾಂಕದೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಸಂದರ್ಶನದ ಮೂಲಕ ನಡೆಯಲಿದೆ.
Read Full Story

07:34 PM (IST) Mar 13

ಸೆಲ್ಫ್‌ ಗಿಫ್ಟ್ ಪಡೆಯಲು ಹೋಗಿ ಬರಿಗೈಲಿ ವಾಪಸಾದ ಮೇಘನಾ ರಾಜ್‌, ಅಮ್ಮನ ಪ್ಲ್ಯಾನ್‌ ಫೇಲ್‌ ಆದ್ರೂ ಮಗ ರಾಯನ್‌ ಫುಲ್‌ ಖುಷ್!

ನಟಿ ಮೇಘನಾ ರಾಜ್ ತಮ್ಮ 'ಸಂಗೀತಾ ಬಾರ್ & ರೆಸ್ಟೋರೆಂಟ್‌' ಸಿನಿಮಾ ಶೂಟಿಂಗ್ ಮುಗಿದಿದ್ದಕ್ಕೆ ತಮಗೇ ಉಡುಗೊರೆ ಖರೀದಿಸಲು ಮಾಲ್‌ಗೆ ಹೋಗಿದ್ದರು. ಆದರೆ, ಇಷ್ಟದ ಬ್ಯಾಗ್ ಸಿಗದಿದ್ದಾಗ, ಮಗ ರಾಯನ್‌ಗಾಗಿ ಆರ್ಮಿ ಆಫೀಸರ್ ಕಾಸ್ಟ್ಯೂಮ್ ಖರೀದಿಸಿದರು.

Read Full Story

07:16 PM (IST) Mar 13

ಇದು ಮುದ್ದೆ ಅಲ್ಲ, ಆನೆ ಲದ್ದಿ; ಈ ಮಹಿಳೆ ತಿನ್ನೋದು ನೋಡಿ, ದೃಷ್ಟಿ ಬಿದ್ದು, ಉಣ್ಣಬಾರದು; ಹಿಡಿ ಶಾಪ ಹಾಕಿದ ಜನರು

Savitha Lokesh Yadav Video: ಆರು ಮೂಟೆ ರಾಗಿಯನ್ನು ಆರು ತಿಂಗಳಿಗೆ ಖಾಲಿ ಮಾಡಿದೆ. 12 ತಿಂಗಳೊಳಗಡೆ ರಾಗಿ ಚೀಲ ಖಾಲಿ ಮಾಡ್ತೀನಿ, ನಿಮ್ಮ ಮನೆಯಲ್ಲಿ ರಾಗಿ ಇದ್ದರೆ ನಾನೇ ಖರೀದಿ ಮಾಡ್ತೀನಿ, ಯಾರಿಗೂ ಕೊಡಬೇಡಿ ಎಂದು ಸವಿತಾ ಲೋಕೇಶ್‌ ಯಾದವ್‌ ಎನ್ನುವವರು ವಿಡಿಯೋ ಹಂಚಿಕೊಂಡಿದ್ದಾರೆ.

 

Read Full Story

07:13 PM (IST) Mar 13

ತ್ರಿಷಾ, ನಯನತಾರಾ ಸೇರಿ ಸೌತ್‌ನ ಟಾಪ್ 5 ದುಬಾರಿ ನಟಿಯರಿವರು - ನಂ.1 ನಟಿಯ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಸೌತ್ ಸಿನಿಮಾಗಳ ನಟಿಯರಿಗೆ ಬೇಡಿಕೆ ಮುಗಿಲು ಮುಟ್ಟಿದೆ. ಅಲ್ಲಿನ ನಟಿಯರು ಈಗ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಾದ್ರೆ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟಿಯರು ಯಾರು? ಅವರ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.

Read Full Story

05:49 PM (IST) Mar 13

Sivakarthikeyan - ಅವಳಿಲ್ಲದಿದ್ರೆ ಇದೆಲ್ಲಾ ಆಗ್ತಿರಲಿಲ್ಲ, ಖರ್ಚಿಗೆ ಹೆಂಡ್ತಿ ಹತ್ರ ದುಡ್ಡು ಕೇಳ್ತೀನಿ - ಅಮರನ್ ನಟ!

ಏನಾದ್ರೂ ಖರ್ಚು ಬಂದ್ರೆ, ನಾನು ಅವಳ ಹತ್ರನೇ ದುಡ್ಡು ಕೇಳ್ತೀನಿ ಅಂತ ತಮಿಳು ನಟ ಶಿವಕಾರ್ತಿಕೇಯನ್ ಹೇಳಿದ್ದಾರೆ. ತನ್ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ಪತ್ನಿ ಆರತಿಗೆ ನೀಡಿದ್ದಾರೆ.

 

Read Full Story

05:13 PM (IST) Mar 13

ಅಫ್ಘಾನಿಸ್ತಾನ–ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರ - ಕಾಬೂಲ್, ಕಂದಹಾರ್ ಮೇಲೆ ದಾಳಿ, 6 ಮಂದಿ ಸಾವು

ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಸೈನಿಕ ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿವೆ. ಈ ದಾಳಿ-ಪ್ರತಿದಾಳಿಗಳಿಂದಾಗಿ ಡುರಾಂಡ್ ಗಡಿ ರೇಖೆಯ ಬಳಿ ಉದ್ವಿಗ್ನತೆ ತೀವ್ರಗೊಂಡಿದ್ದು, ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
Read Full Story

05:13 PM (IST) Mar 13

Master Anand Home - ಮಾಸ್ಟರ್‌ ಆನಂದ್‌ ಹೊಸ ಮನೆ ಹೈಟೆಕ್ ಕಿಚನ್‌ ನೋಡಿ ಬೆಕ್ಕಸ ಬೆರಗಾದ 'ಗಿಚ್ಚಿ ಗಿಲಿಗಿಲಿ' ಟೀಂ

Master Anand New Home: ಕನ್ನಡದ ಅನೇಕ ಸಿನಮಾಗಳಲ್ಲಿ ಬಾಲನಟನಾಗಿ ನಟಿಸಿದ್ದ ಮಾಸ್ಟರ್‌ ಆನಂದ್‌ ಅವರು ಸಾಕಷ್ಟು ಧಾರಾವಾಹಿಗಳ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಕಷ್ಟು ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಈಗ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ. 

Read Full Story

05:02 PM (IST) Mar 13

ನಟಿಯರ ಅಸಭ್ಯ ಫೋಟೋ, ವೀಡಿಯೋ ತೆಗೆದರೆ ಸೈಬರ್ ಕ್ರೈಮ್ ದೂರು - KFCC ಎಚ್ಚರಿಕೆ

ಸಾರ್ವಜನಿಕ ಸ್ಥಳಗಳಲ್ಲಿ ನಟಿಯರ ಅಸಭ್ಯ ಚಿತ್ರ, ವೀಡಿಯೋ ತೆಗೆಯುವ ಪಾಪರಾಜಿಗಳ ವಿರುದ್ಧ ಇತ್ತೀಚೆಗೆ ನಟಿ ಸಪ್ತಮಿ ಗೌಡ ಕಿಡಿಕಾರಿದ್ದರು. ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರ ಬೆಂಬಲಕ್ಕೆ ನಿಂತಿದೆ.

Read Full Story

04:48 PM (IST) Mar 13

Kadal Kote - ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ - ನಟ ವಸಿಷ್ಠ ಸಿಂಹ

ಈ ಕಥೆ ವಿಭಿನ್ನವಾಗಿದೆ ಎನ್ನುವುದಕ್ಕಿಂತ ಹೆಚ್ಚು ನೈಜವಾಗಿದೆ ಮತ್ತು ಮನಸ್ಸಿಗೆ ಬಹಳ ಹತ್ತಿರವಾಗುವಂತಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಗ್ಯಾಂಗ್‍ಸ್ಟರ್ ಕಥೆಯಾದರೂ, ಚಿತ್ರದಲ್ಲಿ ಒಳ್ಳೆಯ ಮೌಲ್ಯಗಳಿವೆ ಎಂದರು ವಸಿಷ್ಠ ಸಿಂಹ.

Read Full Story

04:47 PM (IST) Mar 13

ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಹರ್ಮೋಜ್ ಜಲಸಂಧಿಯಲ್ಲಿ ಇರಾನ್ ನಿರ್ಬಂಧ ಹೇರಿದ್ದರೂ, ಯುಎಇಯಿಂದ 3100 ಟನ್ ಬಿಟುಮೆನ್ (ಕಚ್ಚಾ ಡಾಂಬರ್) ಹೊತ್ತ 'ಚೆಂಗ್ ಎಕ್ಸ್' ಹೆಸರಿನ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಯಶಸ್ವಿಯಾಗಿ ಆಗಮಿಸಿದೆ.

Read Full Story

04:42 PM (IST) Mar 13

Priyanka Shivanna Home - ಇದು ಸಾಧನೆ ಅಂದ್ರೆ..! ಹೊಸ ಮನೆಗೆ ಕಾಲಿಟ್ಟ Agnisakshi Serial ಪ್ರಿಯಾಂಕಾ ಶಿವಣ್ಣ

Priyanka Shivanna New Home: ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಸತ್ಯ ಹೀಗೆ ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಶಿವಣ್ಣ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಹಾಗಾದರೆ ಯಾವೆಲ್ಲ ಕಲಾವಿದರು ಬಂದಿದ್ದರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

04:32 PM (IST) Mar 13

ಚಿತ್ರಮಂದಿರ ಉಳಿಸಲು ದೊಡ್ಡ ತೀರ್ಮಾನ - OTTಗೆ 8 ವಾರ ಗ್ಯಾಪ್ ಕಡ್ಡಾಯ

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಚಿತ್ರೋದ್ಯಮ ಪ್ರದರ್ಶಕರು ಭಾಗವಹಿಸಿದ್ದ ಸಭೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಸಭೆಯ ಪ್ರಮುಖ ಅಂಶಗಳೆಂದರೆ...

Read Full Story

04:18 PM (IST) Mar 13

ಅವರಿಬ್ಬರೂ ಸುಖವಾಗಿದ್ದರೆ, ಸೋಷಿಯಲ್ ಮೀಡಿಯಾಕ್ಕೆ ನಿದ್ದೆ ಬರುವುದಿಲ್ಲ - ರಶ್ಮಿಕಾ ಮಂದಣ್ಣ

ಸರಿಯಾಗಿ ಹದಿನೈದು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಮದುವೆಯಾದರು. 2018ರ ಸೆಪ್ಟೆಂಬರ್ 18ರಿಂದ 2026ರ ಫೆಬ್ರವರಿ 26 ತನಕ ಅವರನ್ನು ಸೋಷಿಯಲ್ ಮೀಡಿಯಾದ ಸತ್ಪ್ರಜೆಗಳು ಎಷ್ಟು ಸಾಧ್ಯವೋ ಅಷ್ಟು ಹಿಂಸಿಸಿದ್ದರು.

Read Full Story

04:16 PM (IST) Mar 13

ಕೆಎಸ್‌ಆರ್‌ಟಿಸಿ ಪಯಣದಲ್ಲಿ ಪಲ್ಲಕ್ಕಿ ವೈಭವ, 115 ನೂತನ ಬಸ್‌ಗಳ ಲೋಕಾರ್ಪಣೆ, ಯಾವ ರೂಟ್‌ನಲ್ಲಿ ಸಂಚಾರ?

ಕೆಎಸ್‌ಆರ್‌ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿದಂತೆ ಒಟ್ಟು 115 ನೂತನ ಬಸ್‌ಗಳನ್ನು ಸೇವೆಗೆ ಬಿಡುಗಡೆ ಮಾಡಿದೆ. ಈ ಬಸ್‌ಗಳು ಧರ್ಮಸ್ಥಳ, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದ್ದು, ತುರ್ತು ಪರಿಸ್ಥಿತಿಗಾಗಿ 5 ಬಾಗಿಲುಗಳ ವಿಶೇಷ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿವೆ.
Read Full Story

03:23 PM (IST) Mar 13

ಬರೋಬ್ಬರಿ 56,000ಕ್ಕೂ ಹೆಚ್ಚಿನ ಹುದ್ದೆ ಭರ್ತಿಗೆ ಕ್ರಮ, ಇದರಲ್ಲಿ 8,000 ಪೇದೆಗಳ ನೇಮಕಕ್ಕೆ ನಿರ್ಧಾರ - ಡಾ.ಪರಮೇಶ್ವರ

ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ 8 ಸಾವಿರ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಇದರ ಜೊತೆಗೆ, ನೇಮಕಾತಿಗಳಲ್ಲಿ 371ಜೆ ನಿಯಮ ಪಾಲನೆಯಾಗದಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ.
Read Full Story

03:21 PM (IST) Mar 13

ದಾಸನ ಫ್ಯಾನ್ಸ್‌ಗೆ ಕಿಚ್ಚನ ಫ್ಯಾನ್ಸ್ ಪೈಪೋಟಿ..! ಚಾರ್ಜ್ ​ಶೀಟ್‌​ನಲ್ಲಿ ಸುದೀಪ್ ಫ್ಯಾನ್ಸ್ ಹೆಸರು..?

ನಟಿ ರಮ್ಯಾ ಬಳಿಕ, ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಈ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅವರ ಅಭಿಮಾನಿಗಳು ಎಂದು ತಿಳಿದುಬಂದಿದೆ.
Read Full Story

02:52 PM (IST) Mar 13

ಅಪರೇಶನ್‌ ಕಮಲಕ್ಕೆ ಹೆದರಿ ಬಿಡದಿ ರೆಸಾರ್ಟ್‌ಗೆ 8 ಕಾಂಗ್ರೆಸ್ ಶಾಸಕರು ಶಿಫ್ಟ್, ಮಹತ್ವದ ಬೆಳವಣಿಗೆ

ಅಪರೇಶನ್‌ ಕಮಲಕ್ಕೆ ಹೆದರಿ ಬಿಡದಿ ರೆಸಾರ್ಟ್‌ಗೆ 8 ಕಾಂಗ್ರೆಸ್ ಶಾಸಕರು ಶಿಫ್ಟ್, ಮಹತ್ವದ ಬೆಳವಣಿಗೆ ನಡೆದಿದೆ. ಅಧಿಕಾರ ಬದಲಾವಣೆ ಚರ್ಚೆಗಳ ನಡುವೆ ಈ ಬೆಳವಣಿಗೆ ತೀವ್ರ ಕೋಲಾಹಲ ಸೃಷ್ಟಿಸಿದೆ. ಯಾವ ಶಾಸಕರು ರೆಸಾರ್ಟ್‌ಗೆ ಶಿಪ್ಟ್?

Read Full Story

01:10 PM (IST) Mar 13

ಕುಮಾರ ಪರ್ವತ ಚಾರಣಕ್ಕೆ ಹೋಗುವ ಪ್ಲಾನ್ ಇದೆಯಾ? ಸರ್ಕಾರದ ಹೊಸ ನಿಯಮಗಳು ತಿಳ್ಕೊಳ್ಳಿ!

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣಕ್ಕೆ ಹೋಗುವವರಿಗೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಟಿಕೆಟ್ ಬುಕ್ ಮಾಡಬೇಕು, ಪ್ರತಿದಿನ ಕೇವಲ 150 ಜನರಿಗೆ ಮಾತ್ರ ಅವಕಾಶವಿದ್ದು, ರಾತ್ರಿ ವಾಸ್ತವ್ಯವನ್ನು ನಿಷೇಧಿಸಲಾಗಿದೆ.

Read Full Story

12:30 PM (IST) Mar 13

ಬಳ್ಳಾರಿ - ಶವದ ಮುಂದೆ ಮಕ್ಕಳಿಂದ 'ಜನಗಣಮನ' ಹಾಡಿಸಿದ ಮುಠ್ಠಾಳ ಪ್ರಾಂಶುಪಾಲ! ಗ್ರಾಮಸ್ಥರು ಕಿಡಿ

ಬಳ್ಳಾರಿಯ ಶ್ರೀಧರಗಡ್ಡೆ ಗ್ರಾಮದಲ್ಲಿ, ಪ್ರಾಂಶುಪಾಲರೊಬ್ಬರು ವೃದ್ಧೆಯ ಶವದ ಮುಂದೆ ಶಾಲಾ ಮಕ್ಕಳಿಂದ ರಾಷ್ಟ್ರಗೀತೆ ಹಾಡಿಸಿದ್ದಾರೆ. ರಾಷ್ಟ್ರಗೀತೆಗೆ ಅಪಮಾನವೆಸಗಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

12:00 PM (IST) Mar 13

ಸತತ ಎರಡನೇ ದಿನವೂ ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಬೆಂಗಳೂರಲ್ಲಿಂದು ಚಿನ್ನ-ಬೆಳ್ಳಿ ರೇಟ್ ಎಷ್ಟು?

ಬೆಂಗಳೂರು: ಒಂದು ಕಡೆ ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ಯುದ್ದದ ಕಾವು ಜೋರಾಗುತ್ತಲೇ ಇದೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲೂ ಏರಿಳಿತಗಳು ಮುಂದುವರೆದಿದೆ. ಇದೀಗ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.

 

Read Full Story

11:50 AM (IST) Mar 13

'ನನ್ನ ಮಗಳು ನೆನಪಾಗಿ ಸುಮ್ಮನಿರಾಗಲಿಲ್ಲ..' ಜೀವ ಪಣಕ್ಕಿಟ್ಟು ಹೆಜ್ಜೇನು ದಾಳಿಯಿಂದ ತಾಯಿ-ಮಗುವನ್ನ ರಕ್ಷಿಸಿದ ವೀರಕಪುತ್ರ!

ಬೆಂಗಳೂರಿನ ಬನಶಂಕರಿಯಲ್ಲಿ ಸಾವಿರಾರು ಜೇನ್ನೊಣಗಳು ತಾಯಿ-ಮಗುವಿನ ಮೇಲೆ ದಾಳಿ ಮಾಡಿದಾಗ, ವೀರಕಪುತ್ರ ಶ್ರೀನಿವಾಸ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ  ರಕ್ಷಿಸಿದ್ದಾರೆ. ತಾಯಿ-ಮಗುವನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಕಾಪಾಡಿದ ಶ್ರೀನಿವಾಸ್, ತಾವೇ ಜೇನ್ನೊಣಗಳ ದಾಳಿಗೆ ತುತ್ತಾಗಿ ಅಸ್ವಸ್ಥರಾಗಿದ್ದಾರೆ.

Read Full Story

10:49 AM (IST) Mar 13

ಶಿರಸಿ - ಪರೀಕ್ಷೆ ವೇಳೆ ಟಿವಿ ನೋಡಬೇಡ ಎಂದಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು!

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪರೀಕ್ಷೆ ಸಮಯದಲ್ಲಿ ಟಿವಿ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಬಾಲಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Read Full Story

10:45 AM (IST) Mar 13

6 ವರ್ಷಗಳ ಕಾಲ ಸೂಪರ್‌ ಹಿಟ್‌ ಆಗಿ ಮೆರೆದಿದ್ದ ಅಗ್ನಿಸಾಕ್ಷಿ ಸೀರಿಯಲ್‌; ಪಾರ್ಟ್‌ 2ರಲ್ಲಿ ಹೀರೋ ಯಾರು?

Agnisakshi Kannada Serial Part 2: ಕನ್ನಡದಲ್ಲಿ ಸಾಕಷ್ಟು ಮೆಗಾ ಧಾರಾವಾಹಿಗಳು ಬಂದಿದ್ದು, ಅವುಗಳಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ಗೆ ಅಗ್ರಗಣ್ಯ ಸ್ಥಾನವಿದೆ. ಈಗಲೂ ಸಿದ್ದಾರ್ಥ್-ಸನ್ನಿಧಿ ಜೋಡಿಗೆ ಅಭಿಮಾನಿಗಳಿದ್ದಾರೆ. ಈಗ ಈ ಟೀಂನಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಕಲರ್ಸ್‌ ಕನ್ನಡವೇ ಈ ಬಗ್ಗೆ ಹೇಳಿದೆ.

 

Read Full Story

10:30 AM (IST) Mar 13

ಅಪ್ಪ ಇಲ್ಲದ ಕಂದನಿಗೆ ತಾಯಿ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

ತುಮಕೂರಿನಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ, ತಾಯಿಯೊಬ್ಬರ ಮನವಿಯಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಅಪ್ಪನಿಲ್ಲದ ಮಗುವಿಗೆ 'ಚಿರಾಗ್' ಎಂದು ನಾಮಕರಣ ಮಾಡಿದರು.

Read Full Story

09:28 AM (IST) Mar 13

ಸಾರಿಗೆ ಸಚಿವರೇ ಇಲ್ನೋಡಿ! ಮುರಿದ ಸೀಟಿಗೆ ಟವೆಲ್ ಕಟ್ಟಿ ಕುಳಿತ ರೈತ, ಸೀಟುಗಳೇ ಹಿಂಗೆ, ಇನ್ನು ಇಂಜಿನ್ನು ಹೆಂಗೆ?

ಚಿಕ್ಕಮಗಳೂರು-ಮೈಸೂರು ಮಾರ್ಗದ ಸರ್ಕಾರಿ ಬಸ್ಸಿನಲ್ಲಿ ಮುರಿದುಬಿದ್ದಿದ್ದ ಸೀಟಿಗೆ ರೈತರೊಬ್ಬರು ತಮ್ಮ ಟವೆಲ್ ಬಳಸಿ ಆಸರೆ ಮಾಡಿಕೊಂಡು ಪ್ರಯಾಣಿಸಿದ್ದಾರೆ. ಈ ಘಟನೆಯು ಸಾರಿಗೆ ಇಲಾಖೆಯ ಬಸ್‌ಗಳ ಕಳಪೆ ನಿರ್ವಹಣೆ ಮತ್ತು ಶಕ್ತಿ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

08:39 AM (IST) Mar 13

ಅಸ್ಸಾಂನಲ್ಲಿ ಆಪರೇಷನ್ ಕಮಲ ಭೀತಿ - ಬೆಂಗಳೂರಿನಲ್ಲಿ ಬೀಡು ಬಿಟ್ಟ ಅಸ್ಸಾಂನ 12 ಕಾಂಗ್ರೆಸ್ ಶಾಸಕರು

ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿಯ 'ಆಪರೇಷನ್ ಕಮಲ'ದ ಭೀತಿಯಿಂದ 12 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆಯಂತೆ ಆಗಮಿಸಿರುವ ಅವರು, ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

Read Full Story

08:35 AM (IST) Mar 13

150 ಎಪಿಸೋಡ್‌ಗೆ ಗಂಧದ ಗುಡಿ ಧಾರಾವಾಹಿಯಿಂದ ಹೊರಬಂದ ನಟಿ ಸಂಜನಾ ಬುರ್ಲಿ; ಹೊಸ ನಟಿ ಎಂಟ್ರಿ; ಇದೆ ಬಲವಾದ ಕಾರಣ

Shri Gandhada Gudi Serial: ಕೆಲ ದಿನಗಳಿಂದ ಜನಪ್ರಿಯ ವಾಹಿನಿಯ ಧಾರಾವಾಹಿಯಿಂದ ನಾಯಕಿಯೊಬ್ಬರು ಹೊರಗಡೆ ಬರುತ್ತಾರೆ ಎಂಬ ಪೋಸ್ಟ್‌ ಹರಿದಾಡುತ್ತಿತ್ತು. ಈಗ ಯಾವ ಧಾರಾವಾಹಿ ಎಂದು ರಿವೀಲ್‌ ಆಗಿದೆ. ಹೌದು, ಗಂಧದಗುಡಿ ಧಾರಾವಾಹಿಯಿಂದ ಹೀರೋಯಿನ್‌ ಬದಲಾವಣೆ ಆಗಿದೆ.

 

Read Full Story

08:30 AM (IST) Mar 13

ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ ರಚನೆಗೆ ಕ್ರಮ - ಗೃಹ ಸಚಿವ ಪರಮೇಶ್ವರ್

ರಾಜ್ಯದಲ್ಲಿ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿ ರಚಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ 10,365 ತೃತೀಯ ಲಿಂಗಿಗಳು ಪತ್ತೆಯಾಗಿದ್ದು, ಈ ಸಂಖ್ಯೆಯನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
Read Full Story

08:15 AM (IST) Mar 13

ಒಳ ಮೀಸಲಾತಿ ಗೊಂದಲ - ಪ್ರಮುಖ ಹದಿನೈದು ಸಚಿವರಿಗೆ 16ರಂದು ಸಿಎಂ ಔತಣಕೂಟ

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಈ ಔತಣಕೂಟದ ರೂಪದ ಸಭೆಯಲ್ಲಿ ಸುಮಾರು 15 ಸಚಿವರು ಭಾಗವಹಿಸಲಿದ್ದು, ಕಗ್ಗಂಟು ನಿವಾರಣೆ ಕುರಿತು ಮುಖ್ಯಮಂತ್ರಿಗಳು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
Read Full Story

More Trending News