Published : Oct 11, 2025, 07:36 AM ISTUpdated : Oct 11, 2025, 11:39 PM IST

State News Live: BBK 12 - ಇನ್ನು ಒಂದೇ ವಾರಕ್ಕೆ ಫಿನಾಲೆ; ಮುಕ್ಕಾಲು ಭಾಗ ಸ್ಪರ್ಧಿಗಳು ಎಲಿಮಿನೇಟ್‌ ಆಗ್ತಾರೆ - ಕಿಚ್ಚ ಸುದೀಪ್

ಸಾರಾಂಶ

ಬೆಂಗಳೂರು (ಅ.11): ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಸಸ್ಪೆನ್ಸ್‌ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಮಾತ್ರವಲ್ಲ, ಬಿಜೆಪಿಯಲ್ಲೂ ಕುತೂಹಲ ಮೂಡಿಸಿದೆ. ಬಿಹಾರ ಚುನಾವಣೆಯ ಬಳಿಕ ರಾಜ್ಯ ರಾಜಕೀಯದತ್ತ ಬಿಜೆಪಿ ಹೈಕಮಾಂಡ್‌ ಗಮನಹರಿಸಲಿದೆ. ರಾಜ್ಯಾಧ್ಯಕ್ಷರ ಗೊಂದಲಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಆ ಮೂಲಕ ಪಕ್ಷ ಸಂಘಟನೆಗೆ ಹೊಸ ರೂಪ ಸಿಗುವ ಸಾಧ್ಯತೆ ಇದೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

BBK 12

11:40 PM (IST) Oct 11

BBK 12 - ಇನ್ನು ಒಂದೇ ವಾರಕ್ಕೆ ಫಿನಾಲೆ; ಮುಕ್ಕಾಲು ಭಾಗ ಸ್ಪರ್ಧಿಗಳು ಎಲಿಮಿನೇಟ್‌ ಆಗ್ತಾರೆ - ಕಿಚ್ಚ ಸುದೀಪ್

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಪ್ರತಿ ವಾರ ಎಲಿಮಿನೇಶನ್‌ ನಡೆಯುತ್ತದೆ. ಈಗ ಮೊದಲ ವಾರಕ್ಕೆ ಅಮಿತ್‌, ಕರಿಬಸಪ್ಪ ಅವರು ಹೊರಗಡೆ ಬಂದಿದ್ದಾರೆ. ಕಳೆದ ವಾರದಿಂದಲೂ ಕಿಚ್ಚ ಸುದೀಪ್‌ ಅವರು ಮಾಸ್‌ ಎಲಿಮಿನೇಶನ್‌ ನಡೆಯಲಿದೆ ಎಂದು ಹೇಳುತ್ತಲೇ ಇದ್ದಾರೆ. ಈ ಬಾರಿಯೂ ಮತ್ತೆ ಅದನ್ನೇ ರಿಪೀಟ್‌ ಮಾಡಿದ್ದಾರೆ.

 

Read Full Story

11:35 PM (IST) Oct 11

ಕಾಕತಾಳೀಯವೇ..? 'ಕಾಂತಾರ ಚಾಪ್ಟರ್ 1' ನೋಡಿ ಅಟ್ಲಿ ಹೇಳಿದ್ದು & ರಾಜಮೌಳಿ ಹೇಳಿದ್ದೂ ಅದನ್ನೇ!

ಅಟ್ಲಿ ಅವರ ಈ ಮಾತುಗಳು ದೇಶಾದ್ಯಂತ ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೆಚ್ಚುತ್ತಿರುವ ಗೌರವವನ್ನು ತೋರಿಸುತ್ತವೆ. ಅಟ್ಲಿ ಅವರ ಈ ಪ್ರಶಂಸೆಯು ಚಿತ್ರದ ಕಲಾತ್ಮಕ ಮತ್ತು ವಾಣಿಜ್ಯ ಯಶಸ್ಸಿನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

11:15 PM (IST) Oct 11

ನವೆಂಬರ್ 28ರ ನಂತರ ರಾಜ್ಯದ ಆಡಳಿತದಲ್ಲಿ ದೊಡ್ಡ ಬದಲಾವಣೆ - ಪ್ರಕಾಶ್‌ ಅಮ್ಮಣ್ಣಾಯ ಭವಿಷ್ಯ ಹೇಳಾಯ್ತು!

November Kranti In Karnataka: ನವೆಂಬರ್‌ನಲ್ಲಿ ಕ್ರಾಂತಿ ಆಗತ್ತೆ, ರಾಜ್ಯದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗತ್ತೆ ಎಂದು ಬಿಜೆಪಿ ವಾದ ಮಾಡುತ್ತಲಿದೆ. ಈಗ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಕೂಡ ರಾಜ್ಯಾಡಳಿತದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ. 

Read Full Story

10:29 PM (IST) Oct 11

ವಿವಿಐಪಿ ಪಾಸ್‌ ಇದ್ದಿದ್ದರೆ ಹಾಸನಾಂಬೆ ಸುಗಮ ದರ್ಶನ ಆಗುತ್ತಿರಲಿಲ್ಲ - ಸಚಿವ ಕೃಷ್ಣ ಬೈರೇಗೌಡ

ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಿರುವುದರಿಂದ ಜನರಿಗೆ ಅನುಕೂಲ ಆಗಿದೆ. ಧರ್ಮದರ್ಶನದ ಸಾಲಿನಲ್ಲಿ ನಿಂತಿರುವ ಸಾಮಾನ್ಯ ಜನರಿಗೂ ಕೂಡ ಈ ಬಾರಿ ಮೂರ್ನಾಲ್ಕು ಗಂಟೆಗಳಲ್ಲಿ ದರ್ಶನ ಆಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Read Full Story

10:06 PM (IST) Oct 11

Bigg Boss Kannada 12 ಶೋ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ - ಕಿಚ್ಚ ಸುದೀಪ್‌ ಹೇಳಿದ್ದೇ ಬೇರೆ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಒಂದು ದಿನಗಳ ಕಾಲ ಬಂದ್‌ ಆಗಿತ್ತು. ಹೌದು, ಈ ಶೋಗೆ ಬೀಗ ಹಾಕಲಾಗಿತ್ತು. ಕನ್ನಡ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿತ್ತು. ಈಗ ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಮಾತನಾಡಿದ್ದಾರೆ.

 

Read Full Story

09:55 PM (IST) Oct 11

ಪ್ರಧಾನಿ ಮೋದಿ ಜೊತೆ ರಾಮ್ ಚರಣ್, ಉಪಾಸನಾ ದಂಪತಿ - ಬಿಲ್ಲುಗಾರಿಕೆಗೆ ಇವರೇ ಸರಿ ಎಂದ ಫ್ಯಾನ್ಸ್!

ಆರ್ಚರಿ ಪ್ರೀಮಿಯರ್ ಲೀಗ್ ಯಶಸ್ಸಿನ ಹಿನ್ನೆಲೆಯಲ್ಲಿ ರಾಮ್ ಚರಣ್ ಮತ್ತು ಉಪಾಸನಾ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ರಾಮ್ ಚರಣ್ ಈ ಲೀಗ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

Read Full Story

09:42 PM (IST) Oct 11

ಸಚಿವರ ಪ್ರತ್ಯೇಕ ಧರ್ಮದ ಕುರಿತ ಹೇಳಿಕೆಯಿಂದ ಗೊಂದಲ - ಮಾಜಿ ಸಚಿವ ಬಿ.ಸಿ. ಪಾಟೀಲ

ಸಚಿವ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿಕೆ ನೀಡುತ್ತಿರುವುದು ಸತ್ಯಾಂಶವಾದರೂ ಕೂಡಾ ಇಲ್ಲಿನ ಜನತೆ ಗೊಂದಲಕ್ಕೀಡಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read Full Story

09:30 PM (IST) Oct 11

ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ - ಸಚಿವ ಎಚ್.ಕೆ. ಪಾಟೀಲ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 13ರಂದು ಎಲ್ಲ ಸಚಿವರಿಗೂ ಊಟಕ್ಕೆ ಬನ್ನಿ ಅಂತ ಕರೆದಿದ್ದು, ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಎಚ್.ಕೆ. ಪಾಟೀಲ್‌ ಹೇಳಿದರು.

Read Full Story

09:29 PM (IST) Oct 11

ಪತಿಯ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ಆಚರಿಸಿದ Amruthadhaare Serial, ರಜಪೂತ ವಂಶಸ್ಥೆ ಛಾಯಾ ಸಿಂಗ್

Amruthadhaare Kannada Serial Chaya Singh: ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್‌ ಅವರು ರಿಯಲ್‌ ಪತಿ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್‌ ವ್ರತ ಆಚರಿಸಿದ್ದಾರೆ. ವಿಡಿಯೋ ಕಾಲ್‌ ಮೂಲಕ ಆಚರಿಸಿರೋದು ವಿಶೇಷವಾಗಿತ್ತು.

 

Read Full Story

08:58 PM (IST) Oct 11

ರಾಜಮೌಳಿ ಕಣ್ಣೀರು ಹಾಕಿದ ಏಕೈಕ ಸಂದರ್ಭ... ಕೀರವಾಣಿ ಮಾಡಿದ ಕೆಲಸಕ್ಕೆ ಅಳು ನಿಲ್ಲಿಸದ ಜಕ್ಕಣ್ಣ!

ಸ್ಟಾರ್ ನಿರ್ದೇಶಕ ರಾಜಮೌಳಿ ಯಾವುದೇ ಪರಿಸ್ಥಿತಿಯಲ್ಲೂ ತುಂಬಾ ಧೈರ್ಯವಾಗಿರುತ್ತಾರೆ. ನೂರಾರು ಕೋಟಿ ಸಂಪಾದಿಸಿದರೂ ಸರಳವಾಗಿ, ಗೌರವಯುತವಾಗಿ ಕಾಣುತ್ತಾರೆ. ಆದರೆ ರಾಜಮೌಳಿ ಕಣ್ಣೀರು ಹಾಕಿದ ಆ ಅಪರೂಪದ ಸಂದರ್ಭ ಯಾವುದು ಗೊತ್ತಾ? ಅದಕ್ಕೆ ಕಾರಣ ಯಾರು?

Read Full Story

08:39 PM (IST) Oct 11

ಅಲ್ಲು ಅರ್ಜುನ್, ಮಹೇಶ್‌ಗಾಗಿ ಅಲ್ಲ.. ಆ ನಟಿಗಾಗಿ ರಾಜಮೌಳಿ ಪದೇ ಪದೇ ನೋಡೋ ಹಾಡುಗಳು ಯಾವುವು?

ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಒಬ್ಬ ನಟಿಗಾಗಿ ಪದೇ ಪದೇ ಹಾಡುಗಳನ್ನು ನೋಡುತ್ತಾರಂತೆ. ಆ ನಟಿ ಯಾರು? ಆ ಹಾಡುಗಳು ಯಾವುವು? ಅಸಲಿಗೆ ರಾಜಮೌಳಿ ಏನು ಹೇಳಿದರು? ಈ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

08:06 PM (IST) Oct 11

ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡಬೇಕಾಗುತ್ತೆ? ನವೆಂಬರ್‌ ಕ್ರಾಂತಿ ಬಗ್ಗೆ ಶ್ರೀರಾಮುಲು ಹೇಳಿದ್ದೇನು?

ಕಾಂಗ್ರೆಸ್ ನಾಯಕರೇ ಹೇಳಿದಂತೆ ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೋ.. ಜನವರಿಯಲ್ಲಿ ಸಂಕ್ರಾಂತಿ ಬರುತ್ತೇನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Read Full Story

07:47 PM (IST) Oct 11

ಐತಿಹಾಸಿಕ ಮದಗ ಮಾಸೂರ ಕೆರೆ ಅಭಿವೃದ್ಧಿಗೆ ಸರ್ಕಾರ ಸಿದ್ಧ - ಸಚಿವ ಎಚ್.ಕೆ. ಪಾಟೀಲ್‌

ಪ್ರತಿಯೊಬ್ಬರ ಜೀವನಾಡಿಯಾದ ಗಂಗಾ ಮಾತೆಗೆ ಪೂಜಿಸಿ ನಾಡಿನ ಸಮೃದ್ಧಿಗಾಗಿ ಸ್ಮರಣೆ ಮಾಡಿ ಬಾಗಿನ ಅರ್ಪಣೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

Read Full Story

07:37 PM (IST) Oct 11

2005ರ ಪೂರ್ವ ಅರಣ್ಯ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧ - ಸಚಿವ ಈಶ್ವರ್ ಖಂಡ್ರೆ

ಅರಣ್ಯ ಭೂಮಿಯಲ್ಲಿನ ಒತ್ತುವರಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆದರೆ ಮೂರು ಎಕರೆಗಿಂತ ಹೆಚ್ಚಿನ ಇತ್ತೀಚಿನ ಒತ್ತುವರಿಗಳಿಗೆ ರಕ್ಷಣೆ ನೀಡಲಾಗದು ಎಂದು ಸಚಿವ ಈಶ್ವರ್ ಖಂಡ್ರೆ ಖಡಕ್ ಸಂದೇಶ ನೀಡಿದ್ದಾರೆ.

Read Full Story

07:34 PM (IST) Oct 11

ನವೆಂಬರ್ ತನಕ ಕಾದು ನೋಡುವ ತಂತ್ರ, ಬಳಿಕ ಗೂಗ್ಲಿ ಹಾಕ್ತಾರಾ ಡಿಕೆ ಶಿವಕುಮಾರ್?

ನವೆಂಬರ್ ತನಕ ಕಾದು ನೋಡುವ ತಂತ್ರ, ಬಳಿಕ ಗೂಗ್ಲಿ ಹಾಕ್ತಾರಾ ಡಿಕೆ ಶಿವಕುಮಾರ್? ನವೆಂಬರ್ ತಿಂಗಳಲ್ಲೇ ಸಂಪುಟ ಪುನರಾಚನೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಧಿಕಾರ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಡಿಕೆ ಶಿವಕುಮಾರ್ ಪ್ಲಾನ್ ಏನು?

 

Read Full Story

07:31 PM (IST) Oct 11

ಅಸಂಘಟಿತ ಕಾರ್ಮಿಕ ಕುಟುಂಬಕ್ಕೆ 10 ಲಕ್ಷ ರು.ಗಳ ಸವಲತ್ತು - ಸಚಿವ ಸಂತೋಷ್ ಲಾಡ್

ಡೀಸೆಲ್ ಮೇಲೆ 1 ರು. ಸೆಸ್ ವಿಧಿಸಿ, ಅದನ್ನು ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಬಳಸುವ ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮಾತನಾಡಿದ್ದೇವೆ, ವಿಪಕ್ಷಗಳು ಕೂಡ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

Read Full Story

07:20 PM (IST) Oct 11

ಮದುವೆಯಾದ್ಮೇಲೆ ಉತ್ತರ ಭಾರತದಂತೆ ಕರ್ವಾ ಚೌತ್‌ ಆಚರಿಸಿದ Actress Vaishnavi Gowda; ಫೋಟೋಗಳಿವು

ಸೀತಾರಾಮ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಮೊದಲ ಬಾರಿಗೆ ಕರ್ವಾ ಚೌತ್‌ ಹಬ್ಬವನ್ನು ಆಚರಿಸಿದ್ದಾರೆ. ಅತ್ತೆಯಿಂದ ಸರ್ಗಿ ಪಡೆದು ಅವರು ಈ ವ್ರತ ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

07:20 PM (IST) Oct 11

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ಪರಿಹಾರ ದರಕ್ಕೆ ಆದೇಶ - ಸಚಿವ ತಿಮ್ಮಾಪೂರ

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪರಿಹಾರ ದರ ಆದೇಶ ಜಾರಿಗೊಳಿಸಿ ನಮ್ಮ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.

Read Full Story

07:11 PM (IST) Oct 11

ಸ್ಟಾರ್‌ ನಟರಿಗೆ ಡಬಲ್‌ ಸ್ಟಾಂಡರ್ಡ್‌ ಯಾಕೆ? ಈ ವ್ಯವಸ್ಥೆ ನಟಿಯರಿಗೆ ಯಾಕಿಲ್ಲ - ದೀಪಿಕಾ ಪಡುಕೋಣೆ

ಸ್ಟಾರ್‌ ನಟರು, ಹೀರೋಗಳ ಬಗ್ಗೆ ನಟಿಯರು ಮಾತಾಡಿದ ಕೂಡಲೇ ಅದು ದೊಡ್ಡ ಸುದ್ದಿಯಾಗುತ್ತದೆ, ಇಂಥಾ ಡಬಲ್‌ ಸ್ಟಾಂಡರ್ಡ್‌ ಯಾಕೆ? ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ನೇರ ಪ್ರಶ್ನೆ.

Read Full Story

07:07 PM (IST) Oct 11

Bengaluru - ಮಕ್ಕಳು ಆಟವಾಡುವ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಅಪ್ಪ-ಅಮ್ಮನ ಆಟವಾಡಿದ ಜೋಡಿ

ಬೆಂಗಳೂರಿನ ಮಲ್ಲೇಶ್ವರಂ ಪಾರ್ಕ್‌ನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಮಾಡುತ್ತಿರುವುದನ್ನು ಗಮನಿಸಿಯೂ ತಮ್ಮ ವರ್ತನೆ ಮುಂದುವರಿಸಿದ ಜೋಡಿಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

06:39 PM (IST) Oct 11

ಕಾಂತಾರಾ ಹಾಡಿಗೆ ಸ್ಟೆಪ್​ ಹಾಕಲು ಪಾತ್ರೆ ತೊಳೆದ Vaishnavi Gowda! ಅರೆರೆ ಇದೇನಿದು?

ನಟಿ ವೈಷ್ಣವಿ ಗೌಡ ಅವರು   ಕಾಂತಾರ ಸಂಗೀತಕ್ಕೆ ನೃತ್ಯ ಮಾಡಿದ ವೀಡಿಯೋ ಹಂಚಿಕೊಂಡಿದ್ದಾರೆ. ಆದರೆ, ಮೊದಲಿಗೆ ಪಾತ್ರೆಗಳನ್ನು ತೊಳೆದಿದ್ದಾರೆ. ಇದೇನಿದು? ಈ ವೀಡಿಯೋದಲ್ಲಿ ಅವರು ಸ್ವಲ್ಪ ದಪ್ಪ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. 

Read Full Story

06:32 PM (IST) Oct 11

ಮಹಾವತಾರ ಬಾಬಾಜಿ ಗುಹೆಯಲ್ಲಿ ಧ್ಯಾನಸ್ಥರಾದ ರಜನಿಕಾಂತ್ - ಸೂಪರ್‌ಸ್ಟಾರ್ ಸರಳ ಬದುಕು ಟ್ರೆಂಡಿಂಗ್!

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಮಹಾನ್‌ ಯೋಗಿ ಬಾಬಾಜಿ ಸಾಧನೆ ಮಾಡುತ್ತಿದ್ದ ಗುಹೆ ಇದೆ. ಮಹಾವತಾರ ಬಾಬಾಜಿ ಅವರನ್ನು ತನ್ನ ಅಧ್ಯಾತ್ಮ ಗುರು ಎಂದು ರಜನಿಕಾಂತ್‌ ಸ್ವೀಕರಿಸಿದ್ದಾರೆ.

Read Full Story

06:15 PM (IST) Oct 11

ಕಾಂತಾರ ಚಾಪ್ಟರ್‌ 1 - ಮೊದಲ ವಾರದಲ್ಲೇ 509 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದ ರಿಷಬ್ ಶೆಟ್ಟಿ ಸಿನಿಮಾ!

ಉತ್ತರ ಭಾರತದಲ್ಲಿ ಹಿಂದಿ ಡಬ್ಬಿಂಗ್‌ ವರ್ಶನ್‌ನಿಂದಲೇ ಕಾಂತಾರ ಚಾಪ್ಟರ್‌ 1 ಅಂದಾಜು 120 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಭಾರತದಲ್ಲಿ ಸಿನಿಮಾ ಅಂದಾಜು 350 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿರುವ ಸಾಧ್ಯತೆ ಇದೆ.

Read Full Story

06:07 PM (IST) Oct 11

ಹೆಣ್ಣೆಂದು ತಿಳಿದು ಎಲ್ಲೆಲ್ಲೋ ಉಜ್ಜಲು ಬಂದ ಅಜ್ಜ, ಆಮೇಲೆ? ಸೀರೆಯುಟ್ಟ ಕಾಮಿಡಿ ನಟ ರಾಘವೇಂದ್ರನ ಫಜೀತಿ ಕೇಳಿ

'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ, ತಮ್ಮ ಸ್ತ್ರೀವೇಷದ ಪಾತ್ರದಿಂದ 'ರಾಗಿಣಿ' ಎಂದೇ ಜನಪ್ರಿಯರಾಗಿದ್ದಾರೆ. ಆದರೆ ಈ ವೇಷದಿಂದಾಗಿ ಅವರು  ಎದುರಿಸಿದ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಅಜ್ಜನೊಬ್ಬ ತನ್ನ ತೊಡೆ ಉಜ್ಜಲು ಬಂದ ಆಘಾತಕಾರಿ ಘಟನೆಯನ್ನೂ ಅವರು ವಿವರಿಸಿದ್ದಾರೆ.

Read Full Story

05:50 PM (IST) Oct 11

Kaun Banega Crorepati 17 ಶೋನಲ್ಲಿ Rishab Shetty; ಅಮಿತಾಭ್‌ ಬಚ್ಚನ್‌ ಜೊತೆ 'ಹೆಮ್ಮೆಯ ಕನ್ನಡಿಗ'

Kaun Banega Crorepati 17:ಭಾರತೀಯ ಚಿತ್ರರಂಗದಲ್ಲಿ 'ಕಾಂತಾರ' ಸಿನಿಮಾವು ದೊಡ್ಡ ಕ್ರಾಂತಿ ಸೃಷ್ಟಿ ಮಾಡಿದೆ. ಕೆಜಿಎಫ್‌ ಸಿನಿಮಾದಿಂದ ಕನ್ನಡ ಚಿತ್ರರಂಗದ ತಾಕತ್ತು, ಪ್ರತಿಭೆ ಏನು ಎನ್ನೋದು ಜಗತ್ತಿಗೆ ಗೊತ್ತಾಗಿತ್ತು. ರಿಷಬ್ ಶೆಟ್ಟಿ, ಕ್ವಿಜ್ ಶೋ ಕೌನ್ ಬನೇಗಾ ಕರೋಡ್‌ಪತಿಗೆ ಆಗಮಿಸಿದ್ದಾರೆ.

 

Read Full Story

05:47 PM (IST) Oct 11

ಮಕ್ಕಳು ಚೆನ್ನಾಗಿ ಕ್ಯಾಲ್ಕುಲೇಶನ್ ಮಾಡ್ತಾರೆ, ಮೆಟ್ರೋ ದರ ಏರಿಕೆ ಬ್ಲಂಡರ್ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಮಕ್ಕಳು ಚೆನ್ನಾಗಿ ಕ್ಯಾಲ್ಕುಲೇಶನ್ ಮಾಡ್ತಾರೆ, ಮೆಟ್ರೋ ದರ ಏರಿಕೆ ಬ್ಲಂಡರ್ ಬಿಚ್ಚಿಟ್ಟ ತೇಜಸ್ವಿ ಸೂರ್ಯ, ಮೆಟ್ರೋ ದರ ಏರಿಕೆ ಬಗ್ಗೆ ಮಾಡಿರುವ ಲೆಕ್ಕಾಚಾರವೇ ತಪ್ಪಾಗಿದೆ. 50 ರಿಂದ 55 ಶೇಕಡಾ ಏರಿಕೆ ಬದಲು ತಪ್ಪಾಗಿ ಶೇ.105ರಷ್ಟು ಏರಿಕೆ ಮಾಡಿದ್ದಾರೆ ಎಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ.

Read Full Story

05:44 PM (IST) Oct 11

ತೆಲುಗು ಹುಡುಗಿಯರು ಟಾಲಿವುಡ್‌ಗೆ ಹೆಚ್ಚಾಗಿ ಬರಬೇಕು.. ಅಲ್ಲು ಅರ್ಜುನ್ ಮಾತಿಗೆ ಟಾಂಟ್ ಕೊಟ್ಟ ಶ್ರೀಲೀಲಾ!

ಸ್ಯಾಂಡಲ್‌ವುಡ್‌ನ ಕಿಸ್ ಬ್ಯೂಟಿ ಶ್ರೀಲೀಲಾ 'ಸ್ಲಮ್ ಡಾಗ್ ಹಸ್ಬೆಂಡ್' ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಟಾಂಟ್ ಕೊಟ್ಟಿದ್ದರು. ಅಷ್ಟಕ್ಕೂ ಶ್ರೀಲೀಲಾ, ಅಲ್ಲು ಅರ್ಜುನ್‌ ಬಗ್ಗೆ ಏನ್ ಹೇಳಿದ್ರು..

Read Full Story

05:21 PM (IST) Oct 11

Kantaraದ ಬಗ್ಗೆ ಹೇಳುತ್ತಲೇ ಕನ್ನಡದ ಹುಡುಗಿಯರಿಗೆ ಮದ್ವೆ ಟಿಪ್ಸ್​ ಕೊಟ್ಟ ನಟಿ ಸಮಂತಾ ರುತ್​ ಪ್ರಭು

ನಟಿ ಸಮಂತಾ ರುತ್ ಪ್ರಭು ಬೆಂಗಳೂರಿನಲ್ಲಿ ಜ್ಯುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟಿಸಿದರು. ಈ ವೇಳೆ, ಮದುವೆಯಾಗುವ ಯುವತಿಯರು ಚಿನ್ನ ಖರೀದಿಯ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಅವರು ಹೇಳಿದ್ದೇನು?

Read Full Story

05:00 PM (IST) Oct 11

ಜಡೇಜಾ ದಾಳಿಗೆ ವೆಸ್ಟ್ ಇಂಡೀಸ್ ಕಂಗಾಲು; ಎರಡನೇ ಟೆಸ್ಟ್‌ನಲ್ಲೂ ಭಾರತ ಮೇಲುಗೈ

ಯಶಸ್ವಿ ಜೈಸ್ವಾಲ್ ಮತ್ತು ಶುಭ್‌ಮನ್ ಗಿಲ್ ಅವರ ಶತಕಗಳ ನೆರವಿನಿಂದ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 518 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ.  

Read Full Story

04:58 PM (IST) Oct 11

Amruthadhaare Serial - ಆ ಮಗು ದತ್ತು ತಗೊಂಡ್ರೆ ಗೌತಮ್‌ ಬಾಳಲ್ಲಿ ದೊಡ್ಡ ಅನಾಹುತ; ಈಗ ಸಿಕ್ಕ ಸೂಚನೆ ಏನು?

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಸ್ವಂತ ಮಗಳನ್ನು ಹುಡುಕುತ್ತಿದ್ದ ಗೌತಮ್‌ಗೆ ಒಂದು ಹುಡುಗಿ ಅಚಾನಕ್‌ ಆಗಿ ಸಿಕ್ಕಿದ್ದಾಳೆ. ಈಗ ಆ ಮಗುವನ್ನು ಅವನು ದತ್ತು ತಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಇದರಿಂದ ಏನೇನು ಆಗಲಿದೆ?

 

Read Full Story

04:40 PM (IST) Oct 11

Amruthadhaare - ಗೌತಮ್‌ ಮಗಳಾಗಿ ಮನೆ ಸೇರಿದ ಬಾಲಕಿ ನಿಜಕ್ಕೂ ಯಾರು? ಇವಳ ಹಿನ್ನೆಲೆ ಏನು?

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್-ಭೂಮಿಕಾ ಪುತ್ರ ಆಕಾಶ್ ತನ್ನ ಅಜ್ಜ-ಅಜ್ಜಿಯನ್ನು ಭೇಟಿಯಾಗಿದ್ದಾನೆ. ಇನ್ನೊಂದೆಡೆ, ಗೌತಮ್‌ಗೆ ಸಿಕ್ಕಿರುವ ಅನಾಥ ಬಾಲಕಿಯೊಬ್ಬಳು ಅದೃಷ್ಟವಂತೆ ಎಂದು ಸಾಬೀತಾಗುತ್ತಿದ್ದು, ಆಕೆಯ ನಿಜವಾದ ಗುರುತಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.
Read Full Story

04:08 PM (IST) Oct 11

Amruthadhaare ಮೂಲಕ ಮನಗೆದ್ದ ಭೂಮಿಕಾ ಪುತ್ರ, ರಿಯಲ್​ ಅಪ್ಪನ ಜೊತೆ ಕ್ಯೂಟ್​ ಫೋಟೋಶೂಟ್​

'ಅಮೃತಧಾರೆ' ಸೀರಿಯಲ್‌ನ ಆಕಾಶ್ ಪಾತ್ರಧಾರಿ ದುಷ್ಯಂತ್ ಚಕ್ರವರ್ತಿ, ಅದೇ ಸೀರಿಯಲ್‌ನಲ್ಲಿ ನಟಿಸುತ್ತಿರುವ ಆನಂದ್ ಕುಮಾರ್ ಅವರ ನಿಜವಾದ ಮಗ. ದುಷ್ಯಂತ್ ಈಗಾಗಲೇ 'ಮದಗಜ' ಸಿನಿಮಾ, 'ನನ್ನಮ್ಮ ಸೂಪರ್‌ಸ್ಟಾರ್' ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ ನಟ ಆನಂದ್. 

 

Read Full Story

04:03 PM (IST) Oct 11

ಕಾಕ್ರೋಚ್ ಸುಧಿಗೆ ಕೇಳಿದ್ರೆ ಚಂದ್ರಪ್ರಭಾ I Love You ಅಂತ ಹೇಳೋದಾ?

Bigg Boss Kannada Clips ಬಿಗ್‌ಬಾಸ್ ಸೀಸನ್ 12ರ ಮೊದಲ ಕಳಪೆ ಪ್ರದರ್ಶನಕ್ಕಾಗಿ ಮಂಜು ಭಾಷಿಣಿ ಮತ್ತು ಯಾಶಿಕಾ ಶೆಟ್ಟಿ ಜೈಲು ಸೇರಿದ್ದಾರೆ. ಜೈಲಿನಲ್ಲಿದ್ದ ಯಾಶಿಕಾ ಜೊತೆ ತಮಾಷೆ ಮಾಡುವಾಗ ಚಂದ್ರಪ್ರಭ 'ಐ ಲವ್ ಯು' ಎಂದಿದ್ದಾರೆ.

Read Full Story

03:59 PM (IST) Oct 11

BBK 12 - ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಹೊರಕ್ಕೆ; ಕಿಚ್ಚ ಸುದೀಪ್‌ ಮಾತಿನಂತೆ ಒಪನ್‌ ಆದ ಬಾಗಿಲು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಾರದ ಜೊತೆ ಕಿಚ್ಚನ ಜೊತೆ ಎಪಿಸೋಡ್‌ ಪ್ರೋಮೋ ರಿಲೀಸ್‌ ಆಗಿದೆ. ಕಿಚ್ಚ ಸುದೀಪ್‌ ಅವರು ಕಾಕ್ರೋಚ್‌ ಸುಧಿಗೆ ಮನೆಯಿಂದ ಹೊರಗಡೆ ಹೋಗಬಹುದು, ಡೋರ್‌ ಒಪನ್‌ ಮಾಡಸ್ತೀನಿ ಎಂದು ಹೇಳಿದ್ದಾರೆ.

 

Read Full Story

03:51 PM (IST) Oct 11

ನಿಷೇಧಿತ ಪಿಎಫ್ಐ ಉಗ್ರ ಸಂಘಟನೆ ಸಕ್ರಿಯಗೊಳಿಸಿದ ಮುಸ್ಲಿಂ ಗುರು ಮಂಗಳೂರಿನಲ್ಲಿ ಅರೆಸ್ಟ್

ನಿಷೇಧಿತ ಪಿಎಫ್ಐ ಉಗ್ರ ಸಂಘಟನೆ ಸಕ್ರಿಯಗೊಳಿಸಿದ ಮುಸ್ಲಿಂ ಗುರು ಮಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಸೈಲೆಂಟ್ ಆಗಿ ಮಂಗಳೂರಿನಲ್ಲಿ ಉಗ್ರ ಸಂಘಟನೆಯನ್ನು ಆ್ಯಕ್ಟೀವ್ ಮಾಡಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಕಡಬ ನಿವಾಸಿ ಸೈಯದ್ ಇಬ್ರಾಹಿಂ ತಂಙಳ್ ಅರೆಸ್ಟ್ ಆಗಿದ್ದಾರೆ.

Read Full Story

03:46 PM (IST) Oct 11

ಲವರ್‌ ಜೊತೆ ಓಡಿ ಹೋದ ಮಗಳು, ಆಕೆಯ ತಿಥಿ ಮಾಡಿ ಊರಿಗೆ ಊಟ ಹಾಕಿಸಿದ ಅಪ್ಪ!

Father Performs Daughters Last Rites and Feeds Village After She Elopes ಬೆಳಗಾವಿಯ ರಾಯಬಾಗ ತಾಲೂಕಿನಲ್ಲಿ, 19 ವರ್ಷದ ಮಗಳು ಪ್ರೀತಿಸಿ ಓಡಿಹೋಗಿ ಮದುವೆಯಾದ ಕಾರಣಕ್ಕೆ ನೊಂದ ತಂದೆಯೊಬ್ಬರು, ಆಕೆ ತಮ್ಮ ಪಾಲಿಗೆ ಸತ್ತಳೆಂದು ಭಾವಿಸಿ ತಿಥಿ ಕಾರ್ಯ ನೆರವೇರಿಸಿದ್ದಾರೆ. 

Read Full Story

03:15 PM (IST) Oct 11

ಅವರು ಕೊಡ್ತಿಲ್ಲ, ಇವರು ಬಿಡ್ತಿಲ್ಲ; ಒತ್ತಡದಲ್ಲಿ ಬಿಜೆಪಿ, ಮುಗಿಯದ ಎನ್‌ಡಿಎ ಗೊಂದಲ

ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಡಿಎ ಒಕ್ಕೂಟದಲ್ಲಿ ಕ್ಷೇತ್ರ ಹಂಚಿಕೆ ಗೊಂದಲ ತೀವ್ರಗೊಂಡಿದೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷವು ಗೆಲ್ಲುವ ಕ್ಷೇತ್ರಗಳಿಗೆ ಪಟ್ಟು ಹಿಡಿದಿದ್ದು, ಇದು ಜೆಡಿಯು ಮತ್ತು ಇತರ ಮಿತ್ರಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.

Read Full Story

02:34 PM (IST) Oct 11

ರಾಹುಲ್​ ಗಾಂಧಿಗೆ ಸಿಗದ ನೊಬೆಲ್​ ಪ್ರಶಸ್ತಿ - ಕಾಂಗ್ರೆಸ್​ ಅಸಮಾಧಾನ- ನಾಯಕನ ಪೋಸ್ಟ್​ ವೈರಲ್​

ವೆನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾಡೋ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿಯವರಿಗೂ ಈ ಪ್ರಶಸ್ತಿ ಸಿಗಬೇಕಿತ್ತು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.  

Read Full Story

02:23 PM (IST) Oct 11

ಮಂಗಳೂರಿನ ಕ್ಯಾಬ್‌ ಚಾಲಕನಿಗೆ ಟೆರರಿಸ್ಟ್‌ ಎಂದ ಸೂಪರ್‌ಸ್ಟಾರ್‌, ಎಫ್‌ಐಆರ್‌ ದಾಖಲು!

FIR on Malayalam Actor Jayakrishnan for Calling Mangaluru Cab Driver Terrorist ಮಲಯಾಳಂ ನಟ ಜಯಕೃಷ್ಣನ್ ಮತ್ತು ಇಬ್ಬರು ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಜಾತಿ ನಿಂದನೆ ಮಾಡಿ, 'ಭಯೋತ್ಪಾದಕ' ಎಂದು ಕರೆದ ಆರೋಪದ ಮೇಲೆ ಎಫ್‌ಐಆರ್ ಎದುರಿಸುತ್ತಿದ್ದಾರೆ. 

Read Full Story

02:06 PM (IST) Oct 11

ನಟಿ ಮದ್ವೆಯಲ್ಲಿ ಮಂಗಳಸೂತ್ರವೇ ಮಿಸ್, ಇಲ್ಲೂ ಬೇಕಾ ನಾಟಕವೆಂದ ನೆಟ್ಟಿಗರು?

ಹಿಂದಿ ನಟಿ ಅವಿಕಾ ಗೋರ್ ಟಿವಿ ಸೀರಿಯಲ್‌ನ ರಿಯಾಲಿಟಿ ಶೋದಲ್ಲೇ ಮದುವೆಯಾಗುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಅವರ ಮದುವೆಗೆ ಕ್ಷಣಗಳಿರುವಾಗ ಮಂಗಳಸೂತ್ರ ನಾಪತ್ತೆಯಾಗಿ ನಟಿ ಗಾಬರಿಯಾಗಿ ಅಳುತ್ತಿದ್ದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

More Trending News