ಬೆಂಗಳೂರು: ಇದೇ ಡಿಸೆಂಬರ್ ಒಳಗಾಗಿ ಮುಖ್ಯಮಂತ್ರಿ ಕುರ್ಚಿ ಖಾಲಿಯಾಗದಿದ್ದರೆ ನನ್ನ ಬಂದು ಕೇಳಿ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ಮುಖ್ಯಮಂತ್ರಿ ಬದಲಾವಣೆಯ ತಮ್ಮ ಹೇಳಿಕೆ ಪುನಾ ಸಮರ್ಥಿಸಿಕೊಂಡಿದ್ದಾರೆ. ಕೆಸಿಸಿಸಿ ಅಧ್ಯಕ್ಷ ಹುದ್ದೆಯೂ ಸದ್ಯಕ್ಕೆ ಖಾಲಿ ಇಲ್ಲವಲ್ಲ. ಆ ಕುರ್ಚಿ ಖಾಲಿಯಾದ ನಂತರ ಯಾರಿಗೆ ಅರ್ಹತೆ ಇರುತ್ತದೋ ಅಂತಹವರು ಅಧ್ಯಕ್ಷರಾಗುತ್ತಾರೆ ಎಂದಿದ್ದಾರೆ. ಪಕ್ಷದ ಕೆಲಸಗಳಲ್ಲಿ ಸಹಾಯ ಮಾಡದವರಿಗೆ ವಿಶ್ರಾಂತಿಯ ಅಗತ್ಯವಿದೆ. ಅಂತೆಯೇ, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸದವರು ನಿವೃತ್ತರಾಗಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು, ರಾಜ್ಯವು ಭ್ರಷ್ಟಾಚಾರದಲ್ಲಿ "ನಂಬರ್ ಒನ್" ಸ್ಥಾನದಲ್ಲಿದೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಂದು ರಾಜ್ಯದಲ್ಲಿ ನಡೆಯುವ ಕ್ಷಣ ಕ್ಷಣದ ರಾಜಕೀಯ ಮತ್ತು ಇನ್ನಿತರ ಸುದ್ದಿಗಳ ಮಾಹಿತಿ ಇಲ್ಲಿದೆ.

11:46 PM (IST) Apr 10
ಶಾಸಕ ಲಕ್ಷ್ಮಣ ಸವದಿ ಅವರಿಂದ ಅಥಣಿ ಮತಕ್ಷೇತ್ರದ ನೀರಾವರಿ ಯೋಜನೆಗೆ ಚಾಲನೆ. ಜನವರಿ ಒಳಗೆ 75 ಸಾವಿರ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಗುರಿ. ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ಕಾರ.
ಪೂರ್ತಿ ಓದಿ11:25 PM (IST) Apr 10
ಕೇಂದ್ರ ಸರ್ಕಾರವು 10 ವರ್ಷದಲ್ಲಿ 143 ವಸ್ತುಗಳ ಬೆಲೆ ಏರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ. ತೈಲ ಬೆಲೆ ಏರಿಕೆಯಿಂದ ಕೇಂದ್ರದ ಎನ್.ಡಿ.ಎ ಸರ್ಕಾರ 11 ವರ್ಷದಲ್ಲಿ 43 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಟೀಕಿಸಿದ್ದಾರೆ.
ಪೂರ್ತಿ ಓದಿ11:13 PM (IST) Apr 10
ಮೆಟ್ರೋದಲ್ಲಿ ಮದ್ಯ ಕುಡಿಯುತ್ತಾ, ಮೊಟ್ಟೆ ತಿಂದು ಗಲಾಟೆ ಮಾಡಿದ ಯುವಕನ ವಿಡಿಯೋ ವೈರಲ್ ಆಗಿದೆ. ಈತನನ್ನು ಪೊಲೀಸರು ಬಂಧಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪೂರ್ತಿ ಓದಿ11:00 PM (IST) Apr 10
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿಯನ್ನು ಸೋಲಿಸಿತು, ಇದಕ್ಕೆ ಕಾರಣರಾದವರು ಕನ್ನಡಿಗ ಕೆಎಲ್ ರಾಹುಲ್. ರಾಹುಲ್ ಅವರ ಅನುಭವ ಮತ್ತು ಉತ್ತಮ ಆಟದಿಂದ ಡೆಲ್ಲಿ ತಂಡವು ಗೆಲುವು ಸಾಧಿಸಿತು.
ಪೂರ್ತಿ ಓದಿ10:58 PM (IST) Apr 10
ಬೆಂಗಳೂರಿನ ಜೀವನಭೀಮಾನಗರದಲ್ಲಿ ಸಿಸಿಬಿ ಪೊಲೀಸರು ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಸಂತೋಷ್, ಯಶ್ ಮತ್ತು ರಾಜೇಶ್ ಎಂಬುವವರನ್ನು ಬಂಧಿಸಿ, 5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಪೂರ್ತಿ ಓದಿ10:40 PM (IST) Apr 10
ತಾಂಡವ್ ಹಾಗೂ ಶ್ರೇಷ್ಠ ಮದುವೆ ಬಳಿಕ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಇನ್ನೊಂದು ಮದುವೆ ಆಗುವ ಥರ ಕಾಣ್ತಿದೆ.
ಪೂರ್ತಿ ಓದಿ10:30 PM (IST) Apr 10
26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದೆ. ಈ ಯಶಸ್ಸಿಗೆ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಪೂರ್ತಿ ಓದಿ10:29 PM (IST) Apr 10
IAS ಸಂದರ್ಶನದಲ್ಲಿ ಕೇಳಲಾಗುವ ಟ್ರಿಕ್ಕಿ ಪ್ರಶ್ನೆಗಳು. ಮೆದುಳಿಗೆ ಕೈ ಹಾಕುವ ಪ್ರಶ್ನೋತ್ತರ ಇಲ್ಲಿವೆ ನೋಡಿ. ಈ ಪ್ರಶ್ನೆಗಳು ನಿಮ್ಮ ತಾರ್ಕಿಕ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುತ್ತವೆ.
ಪೂರ್ತಿ ಓದಿ10:07 PM (IST) Apr 10
ತೆಲಂಗಾಣದ ರಾಮಗುಂಡಂನಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ಎಪಿಕ್ ಮುನ್ಸೂಚನೆ ನೀಡಿದೆ. ಗೋದಾವರಿ ಗಣಿಗಾರಿಕೆ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 5 ತೀವ್ರತೆಯ ಭೂಕಂಪ ಸಂಭವಿಸಬಹುದು. ಮುನ್ನೆಚ್ಚರಿಕೆ ವಹಿಸಲು ಸೂಚನೆ.
ಪೂರ್ತಿ ಓದಿ10:04 PM (IST) Apr 10
ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದೇಶಿ ಪ್ರವಾಸಿಗರ ಖಾಸಗಿತನಕ್ಕೆ ಧಕ್ಕೆ ತಂದಿರುವ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.
ಪೂರ್ತಿ ಓದಿ09:45 PM (IST) Apr 10
ಮಿಥುನ್ ಚಕ್ರವರ್ತಿ ಅವರು ಮಮತಾ ಬ್ಯಾನರ್ಜಿ ಅವರು ವಕ್ಫ್ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕಾಯ್ದೆ ಮುಸ್ಲಿಮರಿಗೆ, ಅದರಲ್ಲೂ ಮುಸ್ಲಿಂ ಮಹಿಳೆಯರಿಗೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ09:19 PM (IST) Apr 10
ಫಿಲ್ ಸಾಲ್ಟ್ ಅಬ್ಬರದ ಆರಂಭದ ನಂತರ, ಡೆಲ್ಲಿ ಬೌಲರ್‌ಗಳು ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಟಿಮ್ ಡೇವಿಡ್ ಅವರ ಅಜೇಯ 37 ರನ್ಗಳ ನೆರವಿನಿಂದ ಆರ್‌ಸಿಬಿ ಡೆಲ್ಲಿಗೆ 164 ರನ್ಗಳ ಗುರಿ ನೀಡಿದೆ.
ಪೂರ್ತಿ ಓದಿ08:49 PM (IST) Apr 10
ಭಾರತದ ಇಂಡಿಗೋ ವಿಮಾನಯಾನ ಸಂಸ್ಥೆ ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿದೆ. ಷೇರುಗಳ ಏರಿಕೆ ಮತ್ತು ಮಾರುಕಟ್ಟೆ ಮೌಲ್ಯದಿಂದ ಈ ಸಾಧನೆ ಮಾಡಿದೆ. 2026 ರ ವೇಳೆಗೆ ವಿಮಾನಗಳ ಸಂಖ್ಯೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪೂರ್ತಿ ಓದಿ08:47 PM (IST) Apr 10
ರಾಜಸ್ಥಾನದ ಶಾಕಿಂಗ್ ಕ್ರೈಮ್ ನ್ಯೂಸ್: ರಾಜಸ್ಥಾನದ ಅಜ್ಮೀರದಲ್ಲಿ ಒಂದು ಶಾಕಿಂಗ್ ಕ್ರೈಮ್ ನಡೆದಿದೆ. ಇಲ್ಲಿ ಹೆಂಡತಿ ಅಂಗವಿಕಲ ಯುವಕನ ಪ್ರೀತಿಯಲ್ಲಿ ಕುರುಡಿಯಾಗಿ ಗಂಡನ ಕೊಲೆ ಮಾಡಿಸಿದ್ದಾಳೆ. ಆಮೇಲೆ ಮಾಡಿದ್ದನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಪೂರ್ತಿ ಓದಿ08:18 PM (IST) Apr 10
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 1000 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿದ್ದಾರೆ.
ಪೂರ್ತಿ ಓದಿ08:15 PM (IST) Apr 10
ರಿಲಯನ್ಸ್ ಜಿಯೋ ತನ್ನ ಉಚಿತ ಹಾಟ್‌ಸ್ಟಾರ್ ಯೋಜನೆಯನ್ನು ಏಪ್ರಿಲ್ 15, 2025 ರವರೆಗೆ ವಿಸ್ತರಿಸಿದೆ. ಹೊಸ ಸಿಮ್ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಪೂರ್ತಿ ಓದಿ08:04 PM (IST) Apr 10
ರಿಸರ್ವ್ ಬ್ಯಾಂಕ್ ಬಡ್ಡಿ ಕಡಿತದ ನಂತರ, ಕೆನರಾ ಬ್ಯಾಂಕ್ ಸ್ಥಿರ ಠೇವಣಿಗಳ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿಮೆ ಮಾಡಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ಪೂರ್ತಿ ಓದಿ07:42 PM (IST) Apr 10
ಕಾಂಗ್ರೆಸ್ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಸಿದೆ. ಇದೀಗ ಜನರು ಬೆಲೆ ಏರಿಕೆ ಮತ್ತು ಜನ ವಿರೋಧಿ ನೀತಿಗಳ ಬಗ್ಗೆ ಬೇಸತ್ತಿದ್ದು, ಯಾವಾಗ ಕಾಂಗ್ರೆಸ್ ಅಧಿಕಾರದಿಂದ ತೊಲಗುತ್ತೋ ಎಂದು ಕಾಯುತ್ತಿದ್ದಾರೆ ಎಂದು ಸಂಸದ ಬೊಮ್ಮಾಯಿ ಹೇಳಿದರು.
ಪೂರ್ತಿ ಓದಿ07:40 PM (IST) Apr 10
26/11ರ ದಾಳಿಯ ಆರೋಪಿ ತಹವ್ವುರ್ ರಾಣಾನ ಭಾರತಕ್ಕೆ ಕರ್ಕೊಂಡು ಬಂದಿದಾರೆ. ಎನ್ಐಎ ವಿಚಾರಣೆಯಿಂದ ಪಾಕಿಸ್ತಾನಕ್ಕೆ ಭಯ ಶುರುವಾಗಿದೆ. ರಾಣಾ ಏನ್ ರಹಸ್ಯ ಹೇಳ್ತಾನೋ ಏನೋ!
ಪೂರ್ತಿ ಓದಿ07:30 PM (IST) Apr 10
ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) 2025-26 ಶೈಕ್ಷಣಿಕ ವರ್ಷದಿಂದ ಪ್ರವೇಶಕ್ಕೆ ಸಂದರ್ಶನ ರದ್ದು ಮಾಡಿದೆ. ಕೇವಲ CUET ಅಂಕಗಳ ಆಧಾರದ ಮೇಲೆ ಪ್ರವೇಶ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ, ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪೂರ್ತಿ ಓದಿ07:17 PM (IST) Apr 10
ಇಂಡಿಯನ್ ಅಕಾಡೆಮಿ ವಿದ್ಯಾರ್ಥಿಗಳು NSS ಯೋಜನೆಯಡಿ ಲಿಂಗರಾಜಪುರಂ ಸರ್ಕಾರಿ ಶಾಲೆಯಲ್ಲಿ ಸೇವಾ ಕಾರ್ಯ ಕೈಗೊಂಡರು. ಸ್ವಚ್ಛತೆ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ, ಗೋಡೆಗಳ ಮೇಲೆ ಚಿತ್ರಕಲೆ ಬಿಡಿಸಿ ಶಾಲೆಯ ಸೌಂದರ್ಯ ಹೆಚ್ಚಿಸಿದರು.
ಪೂರ್ತಿ ಓದಿ07:10 PM (IST) Apr 10
ಬಾಲ್ಯದ ಸ್ನೇಹಿತರಾಗಿರುವ ಹಿಂದೂ ಮತ್ತು ಮುಸ್ಲಿಂ ಗೆಳೆಯರು ಇದೀಗ ತಮ್ಮ ಮದುವೆಯನ್ನು ಒಂದೇ ಮಂಟಪದಲ್ಲಿ ಆಯೋಜಿಸಿದ್ದು, ಒಂದೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿದೆ.
06:57 PM (IST) Apr 10
ಬೇಸಿಗೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆಯು ಜೀರ್ಣಕ್ರಿಯೆ ಸುಧಾರಣೆ, ರಕ್ತದೊತ್ತಡ ನಿಯಂತ್ರಣ, ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯಕ. ಆದರೆ, ಅತಿಯಾದ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚಳ, ಬಾಯಿ ದುರ್ವಾಸನೆ, ಮತ್ತು ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು.
ಪೂರ್ತಿ ಓದಿ06:57 PM (IST) Apr 10
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬಗ್ಗೆ ಡಾ. ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ ಎಂದು ಹೇಳಿದ್ದಾರೆ.
ಪೂರ್ತಿ ಓದಿ06:43 PM (IST) Apr 10
ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಎಲ್ಲಾ ಬ್ರ್ಯಾಂಡ್ ಪ್ರಚಾರದ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಅಭಿಮಾನಿಗಳಿಗೆ ಭಾರೀ ಕುತೂಹಲ.
ಪೂರ್ತಿ ಓದಿ06:34 PM (IST) Apr 10
ರಿತುರಾಜ್ ಗಾಯಕ್ವಾಡ್ ಗಾಯಗೊಂಡ ಕಾರಣ ಐಪಿಎಲ್‌ನಿಂದ ಹೊರಗುಳಿಯಲಿದ್ದು, ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಮತ್ತೆ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ಬದಲಿ ಆಟಗಾರರ ಆಯ್ಕೆ ಕಡಿಮೆ ಇದ್ದುದರಿಂದ ಧೋನಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕೋಚ್ ಫ್ಲೆಮಿಂಗ್ ತಿಳಿಸಿದ್ದಾರೆ.
ಪೂರ್ತಿ ಓದಿ06:32 PM (IST) Apr 10
ನಟಿ ಗೌಹರ್ ಖಾನ್ ಮತ್ತು ಪತಿ ಜೈದ್ ದರ್ಬಾರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರು ನೃತ್ಯದ ಮೂಲಕ ಹಂಚಿಕೊಂಡಿದ್ದಾರೆ. 2023ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು.
ಪೂರ್ತಿ ಓದಿ06:28 PM (IST) Apr 10
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜನಾಕ್ರೋಶ ಯಾತ್ರೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್‌ನಿಂದ ಜನಾಕ್ರೋಶ ಯಾತ್ರೆ ಘೋಷಿಸಿದರು.
ಪೂರ್ತಿ ಓದಿ06:06 PM (IST) Apr 10
128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರಿಸಲಾಗಿದೆ. ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ತಲಾ 6 ತಂಡಗಳು ಭಾಗವಹಿಸಲಿವೆ.
ಪೂರ್ತಿ ಓದಿ05:27 PM (IST) Apr 10
ಡೊನಾಲ್ಡ್ ಟ್ರಂಪ್ ಅವರ ಸುಂಕದ ಏಟನ್ನು ಮೀರಿಸಲು ಆಪಲ್ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಿತ್ತು. ನಂತರ ಚಾರ್ಟರ್ಡ್ ಕಾರ್ಗೋ ವಿಮಾನಗಳ ಮೂಲಕ 600 ಟನ್ ಅಥವಾ 1.5 ಮಿಲಿಯನ್ ಐಫೋನ್‌ಗಳನ್ನು ಭಾರತದಿಂದ ಅಮೆರಿಕಕ್ಕೆ ರವಾನಿಸಿದೆ.
ಪೂರ್ತಿ ಓದಿ05:24 PM (IST) Apr 10
ದೆಹಲಿಯ ಸರೋಜಿನಿ ನಗರ ಮಾರ್ಕೆಟ್‌ನಲ್ಲಿ ಒಂದೇ ಡ್ರೆಸ್‌ಗಾಗಿ ಇಬ್ಬರು ಆಂಟಿಯರು ಜಗಳವಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಪೂರ್ತಿ ಓದಿ05:19 PM (IST) Apr 10
ರೀಲ್ಸ್ ಹುಚ್ಚಿನಿಂದ ಯುವಕನೊಬ್ಬ ಬೈಕ್ ಚಲಾಯಿಸುತ್ತಲೇ ಯುವತಿಯ ಜೊತೆ ಸರಸ ಸಲ್ಲಾಪ ನಡೆಸಿದ ವಿಡಿಯೋ ವೈರಲ್ ಆಗಿದೆ!
05:19 PM (IST) Apr 10
ನಟ ಶಾರುಖ್ ಖಾನ್ ಮತ್ತು ಗಾಯಕ ಅಭಿಜೀತ್ ಭಟ್ಟಾಚಾರ್ಯ ನಡುವಿನ ಸಂಬಂಧ ಹಳಸಿರುವುದಕ್ಕೆ ಕಾರಣವನ್ನು ಇತ್ತೀಚಿನ ಸಂದರ್ಶನದಲ್ಲಿ ಅಭಿಜೀತ್ ಬಹಿರಂಗಪಡಿಸಿದ್ದಾರೆ. ತಮ್ಮ ಹಾಡುಗಳಿಗೆ ಶಾರುಖ್ ಸರಿಯಾದ ಮನ್ನಣೆ ನೀಡದ ಕಾರಣ ಇಬ್ಬರ ನಡುವೆ ಬಿರುಕು ಉಂಟಾಯಿತು ಎಂದು ಹೇಳಿದ್ದಾರೆ.
ಪೂರ್ತಿ ಓದಿ05:18 PM (IST) Apr 10
ರಾಮನಗರದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪೊಲೀಸರು ವಾಟಾಳ್ ನಾಗರಾಜ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.
ಪೂರ್ತಿ ಓದಿ05:14 PM (IST) Apr 10
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಗುರುತಿಸಿದ್ದ 3 ಸ್ಥಳಗಳನ್ನು ಎಎಐ ಪರಿಶೀಲಿಸಿದೆ. ಒಂದು ತಿಂಗಳಲ್ಲಿ ವರದಿ ಬಂದ ಬಳಿಕ ಸ್ಥಳ ಅಂತಿಮವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಪೂರ್ತಿ ಓದಿ04:55 PM (IST) Apr 10
ದೆಹಲಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ನೀತಿ 2.0 ಜಾರಿಗೆ ಬರಲಿದ್ದು, ಪೆಟ್ರೋಲ್ ಬೈಕ್ ಮತ್ತು ಸಿಎನ್‌ಜಿ ಆಟೋಗಳನ್ನು ನಿಷೇಧಿಸುವ ಸಾಧ್ಯತೆ ಇದೆ. 2025 ರಿಂದ ಸಿಎನ್‌ಜಿ ಆಟೋಗಳ ನೋಂದಣಿ ಸ್ಥಗಿತ.
ಪೂರ್ತಿ ಓದಿ04:49 PM (IST) Apr 10
ತಮಿಳುನಾಡಿನಲ್ಲಿ ಮುಟ್ಟಾದ ಕಾರಣ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಮಲ್ಲಿ ಕೂತು ಪರೀಕ್ಷೆ ಬರೆಯೋಕೆ ಬಿಡಲಿಲ್ಲ. ಕ್ಲಾಸ್ ಹೊರಗೆ ಕೂತು ಪರೀಕ್ಷೆ ಬರೆದ ಹುಡುಗಿಯ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ04:43 PM (IST) Apr 10
ಐಪಿಎಲ್ 2025ರ 24ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ತಂಡದ ಬಗ್ಗೆ ಜಿತೇಶ್ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಪೂರ್ತಿ ಓದಿ04:38 PM (IST) Apr 10
ಅಮೆರಿಕ-ಚೀನಾ ವ್ಯಾಪಾರ ಯುದ್ಧದ ನಡುವೆ, ಚೀನಾ ಎಲೆಕ್ಟ್ರಾನಿಕ್ ತಯಾರಕರು ಭಾರತೀಯ ಕಂಪನಿಗಳಿಗೆ ರಿಯಾಯಿತಿ ನೀಡುತ್ತಿದ್ದಾರೆ. ಇದರಿಂದ ಭಾರತದಲ್ಲಿ ಟಿವಿ, ಫ್ರಿಡ್ಜ್, ಸ್ಮಾರ್ಟ್‌ಫೋನ್ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ04:34 PM (IST) Apr 10
ಜನವರಿಯಿಂದ ಡಿಸೆಂಬರ್ವರೆಗೆ ಹುಟ್ಟಿದವರು ಆರೋಗ್ಯದ ವಿಷಯದಲ್ಲಿ ಹೇಗೆ ಇರುತ್ತಾರೆ? ಯಾವ ತಿಂಗಳಿನಲ್ಲಿ ಹುಟ್ಟಿದವರು ಅದೃಷ್ಟವಂತರು, ಯಾರು ದುರಾದೃಷ್ಟವಂತರು? ಇಲ್ಲಿದೆ ಡಿಟೇಲ್ಸ್