ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗೆಂದು ನಾನು ದೆಹಲಿಗೆ ಬಂದಿಲ್ಲ. ಯಾರದ್ದೋ ಕೈಕಾಲು ಹಿಡಿದು ಬಿಜೆಪಿ ಸೇರಲ್ಲ. ಬಿಜೆಪಿಗೆ ತಗೊಳ್ಳಿ ಅಂತಾ ಯಾರ ಬಳಿಯೂ ಹೋಗಲ್ಲ. ನಾವು ಸ್ವಾಭಿಮಾನದಿಂದ ಬದುಕಿರೋರು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿ ಸೇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭ್ರಷ್ಟ ಕುಟುಂಬದ ನೇತೃತ್ವವನ್ನು ನಾವು ಒಪ್ಪಲ್ಲ. ರಾಜ್ಯದಲ್ಲಿ ಭ್ರಷ್ಟ ಕುಟುಂಬ ಎಲ್ಲಿವರೆಗೆ ಇರುತ್ತೋ, ಅಲ್ಲಿವರೆಗೂ ಬಿಜೆಪಿ ಸೇರುವ ಪ್ರಶ್ನೆ ಉದ್ಭವಿಸಲ್ಲ. ನಾನೇ ಪ್ರಾದೇಶಿಕ ಪಕ್ಷ ಮಾಡ್ತಿನಿ. 2028ಕ್ಕೆ ನಾನೇ ಮುಖ್ಯಮಂತ್ರಿ ಆಗ್ತಿನಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಮಗನ ಮದುವೆ ನಿಮಿತ್ತ ದೆಹಲಿಗೆ ಬಂದಿದ್ದೇನೆ. ಕೆಲವು ಹಳೆಯ ಸ್ನೇಹಿತರ ಭೇಟಿಗೆ ಬಂದಿದ್ದೇನೆ. ಯಾವ ಬಿಜೆಪಿ ನಾಯಕರನ್ನೂ ಭೇಟಿ ಮಾಡಲ್ಲ, ಪಕ್ಷ ಸೇರುವ ಬಗ್ಗೆ ಚರ್ಚೆ ಮಾಡಲ್ಲ ಎಂದರು.

11:31 PM (IST) Mar 10
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಿರಿಯ ನ್ಯಾಯವಾದಿ ಪ್ರಭಾಕರ್ ಮತ್ತು ಅವರ ಪತ್ನಿ ಮೇಲೆ ಜುಬೇರ್ ಎಂಬ ಯುವಕ ಹಲ್ಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ ವಕೀಲರು ಮತ್ತು ಸಾರ್ವಜನಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
11:30 PM (IST) Mar 10
ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
10:54 PM (IST) Mar 10
ಆಯವ್ಯಯದಲ್ಲಿ ಘೋಷಿಸಿದಂತೆ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
10:49 PM (IST) Mar 10
10:38 PM (IST) Mar 10
ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ಮಗಳ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಆ ನಟ ರಶ್ಮಿಕಾ ಬೆಳವಣಿಗೆಯನ್ನು ಸಹಿಸದೆ, 'ಗೀತಾ ಗೋವಿಂದಂ' ಚಿತ್ರದ ಬಳಿಕ ವೃತ್ತಿಜೀವನವನ್ನೇ ಅಂತ್ಯಗೊಳಿಸಲು ಒತ್ತಡ ಹೇರಿದ್ದ ಮತ್ತು ಆತನ ಪೊಸೆಸಿವ್‌ನೆಸ್ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
10:33 PM (IST) Mar 10
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕಲ್ಲಿನ ಕ್ವಾರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಹೊಲ, ದನದ ಕೊಟ್ಟಿಗೆ ಮತ್ತು ಮರಗಳಿಗೆ ಹಾನಿಯಾಗಿದೆ. ಘಟನೆಯಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
10:22 PM (IST) Mar 10
ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್, ದಕ್ಷಿಣ ಭಾರತದ ಶ್ರೀಮಂತ ವಾಸ್ತುಶಿಲ್ಪ ಪರಂಪರೆಯನ್ನು ಪ್ರದರ್ಶಿಸುವ ಒಂದು ವಿಶಿಷ್ಟ ತೆರೆದ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ 1 ಶತಮಾನಕ್ಕೂ ಹಳೆಯದಾದ ಸಾಂಪ್ರದಾಯಿಕ ಮನೆಗಳು, ದೇವಾಲಯಗಳನ್ನು ಪುನರ್ ನಿರ್ಮಿಸಿ, ಆ ಕಾಲದ ಜೀವನಶೈಲಿ ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.
10:21 PM (IST) Mar 10
Silli Lalli Kannada Serial Govinda Real Name: ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕಾಂಪೌಂಡರ್ ಗೋವಿಂದನ ಪಾತ್ರದಲ್ಲಿ ನಕ್ಕು ನಗಿಸಿದ್ದ ಸಂಗಪ್ಪ ಉಪಾಸೆ ಅವರು ಇಂದು ಸರ್ಕಾರಿ ಕೆಲಸದಲ್ಲಿದ್ದಾರೆ. ಸಿನಿಮಾದಲ್ಲಿ ಇವರಿಗೆ ಸಂಗಮೇಶ್ ಎಂದು ಕರೆಯಲಾಗುವುದಂತೆ.
09:38 PM (IST) Mar 10
ಟಿಕೆಟ್ ನೀಡಬೇಕೆಂಬುದನ್ನು ನಾನೂ ನಿರ್ಧರಿಸಲಾಗಲ್ಲ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೂ ನಿರ್ಧರಿಸಲಾಗುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಚಿವ ಜಮೀರ್ ಅಹಮದ್ ತಿರುಗೇಟು ನೀಡಿದ್ದಾರೆ.
09:20 PM (IST) Mar 10
09:04 PM (IST) Mar 10
ರಶ್ಮಿಕಾ ಮಂದಣ್ಣ ಬ್ರೇಕಪ್‌ಗೆ ಅವರೇ ಕಾರಣವೆಂದು ಈ ಹಿಂದೆ ದೂಷಿಸಲಾಗಿತ್ತು. ಆದರೆ, ಇದೀಗ ಅವರ ತಾಯಿಯದ್ದು ಎನ್ನಲಾದ ಆಡಿಯೋವೊಂದು, ನಟನ ಅನುಮಾನ ಮತ್ತು ಸರ್ವಾಧಿಕಾರಿ ಮನಸ್ಥಿತಿಯೇ ಸಂಬಂಧ ಮುರಿಯಲು ಕಾರಣ ಎಂದು ಬಹಿರಂಗಪಡಿಸಿದೆ.
08:56 PM (IST) Mar 10
07:51 PM (IST) Mar 10
07:50 PM (IST) Mar 10
06:58 PM (IST) Mar 10
05:43 PM (IST) Mar 10
05:04 PM (IST) Mar 10
ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯಮಿಯೊಬ್ಬರು ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯರ ಕಿಂಗ್‌ಫಿಶರ್ ಟವರ್ಸ್ ಪೆಂಟ್‌ಹೌಸ್ ಅನ್ನು ಒಂದು ರಾತ್ರಿ ಬಾಡಿಗೆಗೆ ಕೇಳಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಕಳೆದ 10 ವರ್ಷಗಳಿಂದ ಖಾಲಿ ಬಿದ್ದಿರುವ ಈ ಐಷಾರಾಮಿ ಬಂಗಲೆಯು ಸದ್ಯಕ್ಕೆ ಅಪೂರ್ಣವಾಗಿದೆ.
05:01 PM (IST) Mar 10
04:41 PM (IST) Mar 10
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಟೋ ಚಾಲಕಿ ಪಕ್ಕದಲ್ಲೊಂದು ಪುಟಾಣಿ ಸೀಟ್ ಇದೆ. ಮೂರು ವರ್ಷದ ಮಗುವೊಂದು ಇಡೀ ದಿನ ಅಮ್ಮನ ಜೊತೆ ಕುಳಿತು ಆಟೋ ಪ್ರಯಾಣ ಬೆಳೆಸ್ತಾಳೆ. ಕಾರಣ ಏನು ಗೊತ್ತಾ?
04:40 PM (IST) Mar 10
ಸೀರಿಯಲ್‌ಗಳು ಮನೆ ಹಾಳು ಮಾಡುತ್ತವೆ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬ ಸಾಮಾನ್ಯ ಆರೋಪಗಳಿಗೆ ನಟಿ ಅಮೃತಾ ರಾಮಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಾದರೆ ಅವರ ಮುಂದೆ ಯಾಕೆ ನೋಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
04:25 PM (IST) Mar 10
04:17 PM (IST) Mar 10
ಮರಿಯಾನಾ ಎಲ್. ನೈಶುಲರ್ ಅವರು ಮಾರ್ಚ್ 2ರಂದು ಚೆನ್ನೈನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಅಧಿಕಾರ ವಹಿಸಿಕೊಂಡರು. ಅಧಿಕಾರ ಸ್ವೀಕರಿಸಿದ ನಂತರ ಜನರಲ್ ನೈಶುಲರ್ ಮಾತನಾಡಿದರು.
03:38 PM (IST) Mar 10
03:37 PM (IST) Mar 10
ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಸುದ್ದಿ ಕೇವಲ ಊಹಾಪೋಹವಾಗಿದ್ದು, 'ಡೊಮೆಸ್ಟಿಕ್' ಪದದ ಬಳಕೆಯಲ್ಲಿನ ಗೊಂದಲದಿಂದ ಇದು ಸೃಷ್ಟಿಯಾಗಿದೆ. ಈ ಗೊಂದಲದಿಂದಾಗಿ ಜನರು ವಿಪರೀತ ಖರೀದಿಗೆ ಮುಂದಾಗಿ ಕೃತಕ ಅಭಾವಕ್ಕೆ ಕಾರಣರಾಗಿದ್ದಾರೆ.
02:52 PM (IST) Mar 10
Netflix Top 10 Movies: ನೆಟ್‌ಫ್ಲಿಕ್ಸ್‌ನಲ್ಲಿ ಭಾರತದಾದ್ಯಂತ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಮೊದಲ ಸ್ಥಾನದಲ್ಲಿ ಒಂದು ಸೆನ್ಸೇಶನಲ್ ಸಿನಿಮಾವಿದ್ದರೆ , ಟಾಪ್ 10 ಪಟ್ಟಿಯಲ್ಲಿ ತೆಲುಗಿನ ಕಾಮಿಡಿ ಸಿನಿಮಾವೊಂದು ಧೂಳೆಬ್ಬಿಸುತ್ತಿದೆ. ಆ ಸಿನಿಮಾಗಳು ಯಾವುವು ನೋಡೋಣ.
02:49 PM (IST) Mar 10
ಬೆಂಗಳೂರಿನ ಜಕ್ಕೂರು ವಿಲ್ಲಾ ಪಾರ್ಟಿ ಪ್ರಕರಣದಲ್ಲಿ, ನಿಖಿಲ್ ಮತ್ತು ಡಿಕ್ಸನ್ ಗ್ಯಾಂಗ್ ಕಾಲೇಜು ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಪಾರ್ಟಿಗೆ ಕರೆದು, ಡ್ರಿಂಕ್ಸ್‌ನಲ್ಲಿ ನಶೆ ಮಾತ್ರೆ ಬೆರೆಸಿ ಅತ್ಯಾ*-ಚಾರ ನಡೆಸಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.
02:40 PM (IST) Mar 10
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ.
02:18 PM (IST) Mar 10
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ, ಗೆಳತಿ ಹಾಗೂ ಸ್ನೇಹಿತರ ಮುಂದೆ ತಾನು ಯುವಕನಿಗೆ ಥಳಿಸಿದ್ದಾಗಿ ಬಿಲ್ಡಪ್ ಕೊಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕನೊಬ್ಬ 19 ವರ್ಷದ ಯುವಕನನ್ನು ಕೊಲೆ ಮಾಡಿದ್ದಾನೆ. ಹೋಳಿ ಹಬ್ಬದ ವೇಳೆ ನಡೆದ ಸಣ್ಣ ಗಲಾಟೆಯ ಬಳಿಕ ಈ ಘಟನೆ ನಡೆದಿದೆ.
02:15 PM (IST) Mar 10
01:42 PM (IST) Mar 10
ಕೋಲಾರದ ರೈತನ ಮಗನಾದ ಸಾಗರ್, ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಆಗಿ ಕರ್ತವ್ಯ ನಿರ್ವಹಿಸುತ್ತಲೇ ಯುಪಿಎಸ್‌ಸಿಯಲ್ಲಿ 641ನೇ ರ್ಯಾಂಕ್ ಪಡೆದಿದ್ದಾರೆ. ವಿಧಾನಸೌಧದ ಸಿಬ್ಬಂದಿಯಾಗಿ ವೃತ್ತಿ ಆರಂಭಿಸಿ, ಇದೀಗ ಐಪಿಎಸ್/ಐಆರ್‌ಎಸ್ ಅಧಿಕಾರಿಯಾಗುವ ಮೂಲಕ ಸಾವಿರಾರು ಯುವಕರಿಗೆ ಸ್ಪೂರ್ತಿದಾಯಕವಾಗಿದೆ.
01:21 PM (IST) Mar 10
01:15 PM (IST) Mar 10
ಇಂದು ಎಷ್ಟೋ ಹುಡುಗರಿಗೆ ಮದುವೆಗೆ ಹೆಣ್ಣೇ ಸಿಗ್ತಿಲ್ಲ. ಅದರಲ್ಲೂ ರೈತರಿಗೆ ಹೆಣ್ಣು ಸಿಗೋದು ಕಷ್ಟ ಆಗಿದೆ. ಈ ಮಧ್ಯೆ ಕೆಲ ಹುಡುಗಿಯರು ಅಂಕಲ್‌ಗಳನ್ನು ಮದುವೆಯಾದರು, ದುಡ್ಡಿಗೋಸ್ಕರ ಎಂಥೆಂಥವರನ್ನೋ ಮದುವೆಯಾದರು ಎಂದು ಗಂಡು ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಲೇ ಇರುತ್ತಾರೆ.
01:11 PM (IST) Mar 10
ಕೂಡ್ಲಿಗಿ ಹೊರವಲಯದಲ್ಲಿ, ಬೈಕ್‌ಗೆ ದಾರಿ ಬಿಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಕೆಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಚಾಲಕ, ನಿರ್ವಾಹಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಒಟ್ಟು 62 ಮಂದಿ ಪ್ರಯಾಣಿಸುತ್ತಿದ್ದರು.
01:06 PM (IST) Mar 10
ದೆಹಲಿಗೆ ಬಂದರೆ ನಾನು ಎಲ್ಲ ನಾಯಕರನ್ನೂ ಭೇಟಿ ಮಾಡುತ್ತೇನೆ. ಆದರೆ, ಯಾರನ್ನು ಭೇಟಿ ಮಾಡುತ್ತೇನೆ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
12:40 PM (IST) Mar 10
LPG Gas ಕೊರತೆ ಆಗಲಿದೆ ಎಂದು ಒಂದಿಷ್ಟು ವಿಷಯಗಳು ಹಬ್ಬುತ್ತಿವೆ. ಎಲ್‌ಪಿಜಿ ಹೇಗೆ ಬಳಕೆ ಆಗುವುದು? ಇದಕ್ಕೆ ಕಾರಣ ಏನು? ಇಲ್ಲಿರುವ ಗೊಂದಲ ಏನು ಎಂದು ಈ ವಿಚಾರವಾಗಿ ಕೃಷ್ಣ ಭಟ್ ಎನ್ನುವವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಮಗ್ರ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:36 PM (IST) Mar 10
11:30 AM (IST) Mar 10
11:30 AM (IST) Mar 10
ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತರನ್ನು ಪರಿಚಯಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ದೀಪಾ ಅವಟಗಿ ಎಂಬ ಫ್ಯಾಶನ್ ಡಿಸೈನರ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳೆಯ ಶಿವಾನಂದ್ ಜೊತೆ ಸೇರಿ ಉದ್ಯಮಿಗಳನ್ನು ಲಾಡ್ಜ್‌ಗೆ ಕರೆಸಿ, ಅವರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದಳು.
10:41 AM (IST) Mar 10
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ 28 ವರ್ಷದ ಶಿಲ್ಪಾ ಎಂಬ ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ.
10:21 AM (IST) Mar 10
Ramayana Movie: ಬಹಳ ನಿರೀಕ್ಷೆ ಹುಟ್ಟಿಸಿರುವ 'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.