ಮಂಡ್ಯ JDS​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

By Web Desk  |  First Published Dec 24, 2018, 7:54 PM IST

ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡ‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರನ್ನು ಶೂಟೌಟ್​ ಮಾಡುವಂತೆ ಸಿಎಂ ಕುಮಾರಸ್ವಾಮಿ ಗರಂ ಆಗಿಯೇ ಸೂಚನೆ ನೀಡಿದ್ದಾರೆ. ಏನಿದು ಪ್ರಕರಣ?


ವಿಜಯಪುರ/ಮಂಡ್ಯ, [ಡಿ.24]: ಮದ್ದೂರು ಜೆಡಿಎಸ್ ಮುಖಂಡ‌ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರನ್ನು ಶೂಟೌಟ್​ ಮಾಡುವಂತೆ ಸಿಎಂ ಕುಮಾರಸ್ವಾಮಿ ಪೊಲೀಸ್​ ವರಿಷ್ಠಾಧಿಕಾರಿಗೆ  ಸೂಚನೆ ನೀಡಿದ್ದಾರೆ.

ಇಂದು [ಸೋಮವಾರ] ಮಂಡ್ಯ ಜಿಲ್ಲೆಯ ಮದ್ದೂರಿನ ಪ್ರವಾಸಿ ಮಂದಿರ ಆವರಣದಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡ ಪ್ರಕಾಶ್​ ನನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. 

Latest Videos

undefined

JDS ಮುಖಂಡ ಹತ್ಯೆ: ಶೂಟೌಟ್ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ

ಈ ವಿಷಯ ತಿಳಿಯುತ್ತಿದ್ದಂತೆಯೇ  ವಿಜಯಪುರ ಹೆಲಿಪ್ಯಾಡ್ ನಲ್ಲಿ ಇಳಿದ ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪೋನ್​ ಮಾಡಿದ  ಸಿಎಂ ಕುಮಾರಸ್ವಾಮಿ ಹಂತಕನ ಎನ್ಕೌಂಟರ್​ ಮಾಡುವಂತೆ ಸೂಚನೆ ನೀಡಿದ್ದಾರೆ.

ಪ್ರಕಾಶ್​ ತುಂಬಾ ಒಳ್ಳೇ ವ್ಯಕ್ತಿ. ಅಂತವನನ್ನು ಕೊಲೆ ಮಾಡಿದ್ದಾರೆ. ಈ ವಿಷ್ಯ ನನ್ನನ್ನು ತಂಬಾ ದುಖವನ್ನುಂಟು ಮಾಡಿದೆ. ನೀವು ಯಾವ ರೀತಿ ಹ್ಯಾಂಡಲ್​ ಮಾಡುತ್ತೀರೋ ಗೊತ್ತಿಲ್ಲ. ಯಾಕೇಂದ್ರೆ ಇದೆಲ್ಲಾ ನಿಮ್ಮ ಜವಬ್ದಾರಿ ಇರುತ್ತದೆ.

 ಅಲ್ಲದೇ ಆವ್ಯಕ್ತಿ ತುಂಬಾ ಒಳ್ಳೆ ವ್ಯಕ್ತಿ. ಯಾವಾಗ ಕೊಲೆಗಾರನ್ನು ಹಿಡಿಯುತ್ತೀರೋ ಗೊತ್ತಿಲ್ಲ. ಅವರನ್ನು ಶೂಟೌಟ್​ ಮಾಡಿ ತೊಂದ್ರೆ ಇಲ್ಲ ಎಂದು ಫೋನ್ ನಲ್ಲಿಯೇ ಮಂಡ್ಯ ಎಸ್ಪಿಗೆ ಸೂಚನೆ ನಿಡಿದ್ದಾರೆ.  

ಕುಮಾರಸ್ವಾಮಿ  ಅವರ ಈ ಖಡಕ್ ಸೂಚನೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.

click me!