
ಬೀದರ್ (ನ.28): ಪರೀಕ್ಷೆ ಬರೆದು ಒಂದು ವರ್ಷವಾದರೂ ಫಲಿತಾಂಶ ತಿಳಿಯದೇ,ಕಲಬುರಗಿ ವಿವಿ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಕಲಬುರಗಿ ವಿವಿ ವ್ಯಾಪ್ತಿಯ ಬೀದರ್ ಜಿಲ್ಲೆಯ ಸುಮಾರು 100ಕ್ಕೂ ಅಧಿಕ ಕಾಲೇಜುಗಳ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಲಿತಾಂಶ ತಿಳಿಯದೇ ಕಂಗಾಲಾಗಿದ್ದಾರೆ. ಪರೀಕ್ಷೆ ಬರೆದು ಒಂದು ವರ್ಷ ಕಳೆದರೂ ಇವರಿಗೆ ಈವರೆಗೂ ರಿಸಲ್ಟ್ ಗೊತ್ತಾಗಿಲ್ಲ. ರಿಸಲ್ಟ್‌ಗಾಗಿ ಚಾತಕ ಪಕ್ಷಿಯಂತೆ ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎ ಸೇರಿ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ವಿಶ್ವವಿದ್ಯಾಲಯ ನಮ್ಮ ಬದುಕಿನ ಜೊತೆ ಚೆಲ್ಲಾಟ ಆಡ್ತಿದೆ ಅಂತಾ ವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಭಲ್ ದಂಗೆಕೋರರಿಂದಲೇ ಆಸ್ತಿ ಹಾನಿಯ ಮೊತ್ತ ವಸೂಲಿ!
ವಿಶ್ವವಿದ್ಯಾಲಯದ ಪ್ರಮಾದದಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕವಿದ ಕಾರ್ಮೋಡ ಕವಿದಿದೆ. ಸ್ನಾತಕೋತ್ತರ ಪದವಿಯ ಕನಸು ಕಾಣ್ತಿರೋ ವಿದ್ಯಾರ್ಥಿಗಳ ಆಸೆಗೆ ವಿವಿ ತಣ್ಣೀರು ಎರಚಿದೆ. ಫಲಿತಾಂಶ, ಘಟಿಕೋತ್ಸವ ಪ್ರಮಾಣ ಪತ್ರ, ಅಂಕಪಟ್ಟಿ ಸಿಗದೇ ಡಿಗ್ರಿ ಮುಗಿದರೂ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತುಕೊಂಡಿದ್ದಾರೆ. ಬ್ಯಾಕ್ ಉಳಿದ ವಿಷಯಗಳ ಮರು ಪರೀಕ್ಷೆ ಮಾಡದಿದ್ದಕ್ಕೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮೌಲ್ಯಮಾಪನ ಮಾಡಿದ್ದಕ್ಕೆ ಅಂಕಗಳು ಕಡಿಮೆ ಬಂದಿವೆ ಎದು ವಿದ್ಯಾರ್ಥಿಗಳ ಆರೋಪ ಮಾಡಿದ್ದಾರೆ.
Chitradurga: 20 ವರ್ಷದ ಯುವತಿಗೆ 40ರ ಅಂಕಲ್ ಜೊತೆ ಲವ್-ಮದುವೆ; ಅಳಿಯನ ಜೀವ ತೆಗೆದ ಪೋಷಕರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ