ಕಡಲಾಮೆ ಮತ್ತು ಅವುಗಳ ಮೊಟ್ಟೆ ಸಂರಕ್ಷಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಕೇಂದ್ರದ ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ವೈಲ್ಡ್ ಲೈಫ್ ಹ್ಯಾಬಿ ಟೇಟ್ (ಐಡಿಡಬ್ಲ್ಯೂಎಚ್) ಸಹಯೋಗದಲ್ಲಿ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.
ಗಿರೀಶ್ ಗರಗ
ಬೆಂಗಳೂರು(ನ.28): ರಾಜ್ಯದ ಕರಾವಳಿ ಪ್ರದೇಶಕ್ಕೆ ಬರುವ ಕಡಲಾಮೆಗಳ ಜೀವನ ಶೈಲಿ ಅಧ್ಯಯನಕ್ಕಾಗಿ ಸರ್ಕಾರ ಕೆಲ ಕಡಲಾಮೆಗಳಲ್ಲಿ ಮೈಕ್ರೋ ಚಿಪ್ ಅಳವಡಿಕೆ ಹಾಗೂ ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಿದೆ.
ಪ್ರತಿವರ್ಷ ವಿವಿಧ ಸಮುದ್ರ ಭಾಗದಿಂದ ಸಾವಿರಾರು ಕಡಲಾಮೆಗಳು ರಾಜ್ಯದ ಕರಾವಳಿ ಭಾಗಕ್ಕೆ ಬರುತ್ತವೆ. ಸಮುದ್ರದಂಚಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಅಂತಹ ಮೊಟ್ಟೆಗಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲು ಅವುಗಳನ್ನು ಪತ್ತೆ ಮಾಡಿ, ಸಂರಕ್ಷಿಸುವುದು, ಮರಿಗಳನ್ನಾಗಿ ಮಾಡಿ ಕಡಲಿಗೆ ಬಿಡುವುದು ಇಲಾಖೆಗಳಿಗೆ ಹೆಚ್ಚಿನ ಕೆಲಸ ಹಿಡಿಯಲಿದೆ. ಅದಕ್ಕಾಗಿ ಕಡಲಾಮೆ ಮತ್ತು ಅವುಗಳ ಮೊಟ್ಟೆ ಸಂರಕ್ಷಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಕೇಂದ್ರದ ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ವೈಲ್ಡ್ ಲೈಫ್ ಹ್ಯಾಬಿ ಟೇಟ್ (ಐಡಿಡಬ್ಲ್ಯೂಎಚ್) ಸಹಯೋಗ ದಲ್ಲಿ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.
ಕಡಲಾಮೆಯ ಮಾಂಸ ತಿಂದ 9 ಜನ ಸಾವು 78ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ಟೆಂಟ್‌ಗಳು, ನೆಟ್ ಗಳಿಂದ ಕಡಲಾಮೆ ಮೊಟ್ಟೆಗಳ ಸಂರಕ್ಷಣೆ:
ಕರಾವಳಿ ಭಾಗದಲ್ಲಿ ಸಿಗುವ ಕಡಲಾಮೆಗಳು, ಅವುಗಳ ಮೊಟ್ಟೆ ಯನ್ನು ಸಂರಕ್ಷಿಸುವ ಹೊಣೆ ಅರಣ್ಯ ಇಲಾಖೆ ಯದ್ದಾಗಿದೆ. ಸಮುದ್ರ ದಡದಲ್ಲಿ ಮೊಟ್ಟೆಯನ್ನಿ ಡುತ್ತವೆ. ಮೊಟ್ಟೆಗಳಿಗೆ ನೀರು ತಲುಪಿದರೆ ಮರಿಗಳಾಗಲು ಸಾಧ್ಯವಿಲ್ಲ. ಹೀಗಾಗಿ ಸಮುದ್ರದ ನೀರು ತಲುಪುವ ತೀರದಲ್ಲಿಡುವ ಮೊಟ್ಟೆಗಳನ್ನು ಹುಡುಕುವುದಕ್ಕೆ ಅರಣ್ಯ ಇಲಾಖೆ ಸ್ಥಳೀಯರ ನೆರವು ಪಡೆಯಲಿದೆ. ಮೊಟ್ಟೆ ಪತ್ತೆಯಾದ ನಂತರ ಅದನ್ನು ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳಿಂದ ಸಂರಕ್ಷಿಸಲು ಅವುಗಳ ಸುತ್ತ ಟೆಂಟ್ ನಿರ್ಮಿಸಿ, ನೆಟ್ಗಳನ್ನು ಅಳವಡಿಸಿ ಸಂರಕ್ಷಿಸಿ ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ.
ಮೊಟ್ಟೆಯು 40-60 ದಿನಗಳಲ್ಲಿ ಮರಿಯಾಗಲಿದ್ದು, ಅಲ್ಲಿಯವರೆಗೆ ಅವುಗಳನ್ನು ಸಂರಕ್ಷಿಸ ಲಾಗುತ್ತದೆ. ಆದರೆ, ಮೊಟ್ಟೆಗಳನ್ನು ವ್ಯವಸ್ಥೆ ತವಾಗಿ ಸಂರಕಿಸಿ ಮರಿಗಳನ್ನಾಗಿ ಮಾಡಲು ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಮೈಕ್ರೋಚಿಪ್ ಅಳವಡಿಕೆ:
ಕರಾವಳಿ ಭಾಗಕ್ಕೆ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಹೆಚ್ಚಾಗಿ ಬರಲಿವೆ. ಅವುಗಳ ಚಲನವಲನವನ್ನು ಅಧ್ಯ ಯನ ಮಾಡಲು ಸರ್ಕಾರ ಮುಂದಾಗಿದೆ. ಡಿಸೆಂಬರ್‌ನಿಂದ ಮಾರ್ಚ್‌ರೆಗೆ ಕೆಲ ಕಡ ಲಾಮೆಗಳಿಗೆ ಸ್ಯಾಟಲೈಟ್ ಟ್ಯಾಗಿಂಗ್‌ಗಿರುವ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಅಲ್ಲದೆ ಹೀಗೆ ಮೈಕ್ರೋಚಿಪ್ ಅಳವಡಿಕೆ ಹಾಗೂ ಅದರ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸಲು ಭಾರತೀಯ ವನ್ಯಜೀವಿ ಸಂಸ್ಥೆ ರೀತಿಯ ಸಂಸ್ಥೆ ಜತೆಗೆ ಅರಣ್ಯ ಇಲಾಖೆ ಸಹ ಯೋಗ ಹೊಂದಲಿದೆ. ಮೈಕ್ರೋಚಿಪ್ ಅಳವ ಡಿಕೆಯಿಂದ ಆಮೆಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ, ಯಾವ ಪ್ರದೇಶದಲ್ಲಿ ಎಷ್ಟು ಸಮಯ ಉಳಿದುಕೊಳ್ಳಲಿವೆ. ಅಂತಿಮವಾಗಿ ಯಾವ ಕರಾವಳಿ ಭಾಗಕ್ಕೆ ತೆರಳಲಿವೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಆ ಮೂಲಕ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಜೀವನ ಶೈಲಿ ಪತ್ತೆ ಮಾಡಿ ಮುಂದಿನ ವರ್ಷ ಬರುವ ಕಡಲಾಮೆಗಳ ನಡವಳಿಕೆಯಂತೆ ಇಲಾಖೆ ಕಾರ್ಯ ಯೋಜನೆ ರೂಪಿಸಲಿದೆ.
ಅಳಿವಿನಂಚಿನಲ್ಲಿರೋ ಆಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ನಿಲ್ಲಿಸಿದ ಡಿಆರ್‌ಡಿಒ!
ಹೊನ್ನಾವರದಲ್ಲಿಯೇ 26,500 ಮೊಟ್ಟೆಗಳು ಪತ್ತೆ
ಮಂಗಳೂರಿನಿಂದ ಹೊನ್ನಾವರವರೆಗಿನ ಕರಾವಳಿ ಭಾಗದಲ್ಲಿ ಪ್ರತಿವರ್ಷ ಸಾವಿ ರಾರು ಹೆಚ್ಚಿನ ಕಡಲಾಮೆಗಳ ಮರಿಗಳು ಸಮುದ್ರ ಸೇರುತ್ತವೆ. ಆದರೆ, ಕಳೆದ ವರ್ಷ ಹೊನ್ನಾವರ ಭಾಗದಲ್ಲಿಯೇ 26,500 ಕಡಲಾಮೆ ಮೊಟ್ಟೆಗಳನ್ನು ಪತ್ತೆ ಮಾಡಿ ಸಂರಕ್ಷಿಸಲಾಗಿದೆ. ಅವುಗಳಿಂದ ಹೊರಬಂದ ಮರಿಗಳನ್ನು ನಂತರ ಸಮುದ್ರಕ್ಕೆ ಬಿಡಲಾಗಿದೆ.
ರಾಜ್ಯದ ಕರಾವಳಿ ಪ್ರದೇಶಕ್ಕೆ ಬರುವ ಕಡಲಾಮೆಗಳ ಮತ್ತು ಅವುಗಳ ಮೊಟ್ಟೆ ಮರಿಗಳನ್ನು ಸಂರಕ್ಷಿಸಲು ಪುನರ್ವಸತಿ-ಸಂರಕ್ಷಣಾ ಕೇಂದ್ರ ನಿರ್ಮಿ ಸಲು ಯೋಜಿಸಲಾಗಿದೆ. ಅದರ ಜತೆಗೆ ಕಡಲಾಮೆಗಳ ಚಲನವಲನದ ಮೇಲೆ ನಿಗಾವಹಿಸಲು ಸ್ಯಾಟಲೈಟ್ ಟ್ಯಾಗಿಂಗ್ ಇರುವ ಮೈಕ್ರೋಚಿಪ್ ಅಳವಡಿಸಿ ಅಧ್ಯಯನ ನಡೆಸಲಾಗುವುದು ಎಂದು ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಕೆ.ಯೋಗೀಶ್ ತಿಳಿಸಿದ್ದಾರೆ.