ಮೇಲ್ಜಾತಿ ಯುವಕರಿಗೆ ಕೀಳಾಗಿ ಮಾತನಾಡದಂತೆ ಹಾಗೂ ದೌರ್ಜಬ್ಯ ನಡೆಸದಂತೆ ಬುದ್ಧಿ ಹೇಳಿದ ಮರುದಿನವೇ ದಲಿತ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.05): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಹಾಗೂ ಸಂವಿಧಾನ ರಚನೆಯಾಗಿ 73 ವರ್ಷಗಳಾದರೂ ಈಗಲೂ ಅಸ್ಲೃಶ್ಯತೆ, ಜಾತೀಯತೆ, ಜಾತಿ ತಾರತಮ್ಯ ತಾಂಡವಾಡುತ್ತಿದೆ. ಮೇಲ್ಜಾತಿ ಯುವಕರಿಗೆ ಕೀಳಾಗಿ ಮಾತನಾಡದಂತೆ ಹಾಗೂ ದೌರ್ಜಬ್ಯ ನಡೆಸದಂತೆ ಬುದ್ಧಿ ಹೇಳಿದ ಮರುದಿನವೇ ದಲಿತ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗ್ರಾಮಗಳ ಅಭಿವೃದ್ಧಿ ಆಗದ ಹೊರತು ದೇಶ ಅಭಿವೃದ್ಧಿ ಆಗುವುದಿಲ್ಲ. ದೇಶದಲ್ಲಿ ಅಸ್ಪೃಶ್ಯತೆ ತೊಲಕಬೇಕು, ಹರಿಜನ ಉದ್ಧಾರ ಆಗಬೇಕು ಎಂದು ಕನಸು ಕಂಡಿದ್ದ ಮಹಾತ್ಮ ಗಾಂಧೀಜಿಯ ಕನಸು ಇನ್ನೂ ಅವರು ಸಾವನ್ನಪ್ಪಿ 70 ವರ್ಷಗಳಾದರೂ ಜೀವಂತವಾಗಿಯೇ ಇದೆ. ನಮ್ಮ ದೇಶದ ಆಧುನಿಕ ಕ್ಷೇತ್ರ ಹಾಗೂ ತಂತ್ರಜ್ಞಾನದಲ್ಲೂ ಮುಂದುವರೆದಿದೆ. ಆದರೆ, ಕೆಲ ಹಳ್ಳಿಗಳಲ್ಲಿ ಈಗಲೂ ಜಾತಿ ಬೇಧ ಹಾಗೂ ಪ್ರಬಲ ಸಮುದಾಯದ ದೌರ್ಜನ್ಯ ಮುಂದುವರೆದಿದೆ. ಮೇಲ್ಜಾತಿ ಯುವಕರ ದೌರ್ಜನ್ಯಕ್ಕೆ ದಲಿತ ಯುವಕನೋರ್ವನ ಜೀವ ಬಲಿಯಾಗಿದೆ.
undefined
ಶರಣರ ನಾಡಲ್ಲಿ ಮರ್ಯಾದಾ ಹತ್ಯೆ: ಹುಡುಗಿ ತಂದೆಯಿಂದಲೇ ಕೆಳಜಾತಿ ಯುವಕನ ಹತ್ಯೆ
ಜಾತಿಬೇಧ ತೋರದಂತೆ ಬುದ್ಧಿಮಾತು: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಾಯಿಯೊಂದಿಗೆ ಕೂಲಿ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದ ಬಡಪಾಯಿ ಯುವಕ ತನ್ನ ಮೇಲೆ ದೌರ್ಜನ್ಯ ನಡೆಸಿದ ಯುವಕರಿಗೆ ಜಾತಿ ಬೇಧ ತೋರದಂತ ಮಾತನಾಡಿದ್ದಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದಾದ ಮರುದಿನವೇ ದಲಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕುಟುಂಬ ಸದಸ್ಯರು ಹಾಗೂ ವಿವಿಧ ಸಂಘಟನೆಗಳು ಆರೋಪ ಮಾಡಿ ಪ್ರತಿಭಟನೆ ಆರಂಭಿಸಿವೆ.
ಹಲ್ಲೆ ವೇಳೆ ಎಚ್ಚರತಪ್ಪಿ ಬಿದ್ದ ತಾಯಿ: ಸಾವನ್ನಪ್ಪಿರೋ ಯುವಕ ಮಾರುತಿ (28). ತನ್ನ ತಂದೆ ತಾಯಿಯೊಂದಿಗೆ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ದನು. ಆದರೆ ಅದೇ ಗ್ರಾಮದ ಸುರೇಶ್ ಮತ್ತಿತರರ ಗುಂಪೊಂದು ಕಳೆದ ರಾತ್ರಿ ಏಕಾಏಕಿ ಮಾರುತಿ ಮನೆಗೆ ನುಗ್ಗಿ ದಾಂದಲೆ ಮಾಡಿದೆ. ಮಾರುತಿಯು ತನಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆಂಬ ನೆಪವೊಡ್ಡಿ, ಸುರೇಶ್ ಹಲ್ಲೆ ನಡೆಸಿದ್ದಾರಂತೆ. ಅಲ್ಲದೇ ದೌರ್ಜನ್ಯದಿಂದ, ಜಾತಿ ನಿಂದನೆ ನಡೆಸಿ ಮಾರುತಿಗೆ ಮನ ಬಂದಂತೆ ಹಲ್ಲೆ ನಡಸಿದ್ದಾರಂತೆ. ಈ ಹಲ್ಲೆಯ ವೇಳೆ ಮಾರುತಿಯ ತಾಯಿ ಲಕ್ಷ್ಮಮ್ಮ ಎಚ್ಚರತಪ್ಪಿ ಬಿದ್ದಿದ್ದರು. ಇನ್ನು ಸವರ್ಣೀಯರ ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ಮಾರುತಿಗೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಸುರೇಶ್ ಸಹಚರರು ಬೆದರಿಕೆ ಹಾಕಿದ್ದರಂತೆ. ಇದರ ಬೆನ್ನಲ್ಲೇ ಬೆಳಗಾಗುವುದರೊಳಗೆ ಮಾರುತಿ (28) ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಈ ದೃಶ್ಯ ಕಂಡಾಗ ಇದು ಆತ್ಮಹತ್ಯೆ ಅಲ್ಲವೆಂಬ ಅನುಮಾನ ಮೂಡಿದೆ. ಹೀಗಾಗಿ ಇದು ಸವರ್ಣಿಯರು ಹಾಗು ದಲಿತರ ನಡುವಿನ ಹಳೇ ದ್ವೇಷದಿಂದಾಗಿ ಮಾರುತಿಯ ಕೊಲೆಯಾಗಿದೆ ಎಂದು ಮಾರುತಿ ತಾಯಿ ಆರೋಪಿಸಿದ್ದಾರೆ.
ಕೊಲೆಯಾಗಿ ಹಲವು ದಿನಗಳಾದರೂ ಆರೋಪಿ ಬಂಧನವಾಗಿಲ್ಲ: ವಿಷಯ ತಿಳಿಯುತ್ತಿದ್ದಂತೆ ಹೊಳಲ್ಕೆರೆ ದಲಿತ ಸಂಘಟನೆ ಕಾರ್ಯಕರ್ತರು ತಾಳ್ಯ ಗ್ರಾಮಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ಅಲ್ಲದೇ ಸುಮಾರು ವರ್ಷಗಳಿಂದ ದಲಿತರ ಮೇಲೆ ಹಲ್ಲೆ ಆಗ್ತಿರೋದು ವಿಷಾದನೀಯ ಎಂದು ಪೊಲೀಸರ ಮುಂದೆ ಆಕ್ರೋಶ ಹೊರಹಾಕಿದರು. ಇನ್ನು ಈ ಸಂಬಂಧ ಸುರೇಶ್ ಮತ್ತು ಇತರರ ವಿರುದ್ಧ ಜಾತಿ ನಿಂದನೆ ಹಾಗು ಕೊಲೆ ಪ್ರಕರಣಗಳು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೇಸು ದಾಖಲಿಸಿಕೊಂಡಿರೊ ಪೊಲೀಸರು ಕೇಸನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಕೋಲಾರ ಮರ್ಯಾದಾ ಹತ್ಯೆ: ದಲಿತನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಉಸಿರುಗಟ್ಟಿಸಿ ಕೊಂದ ತಂದೆ!
ಒಟ್ಟಾರೆ ಇಷ್ಟು ಮುಂದುವರೆದ ಕಾಲದಲ್ಲಿಯೂ ದಲಿತರು ಹಾಗು ಸವರ್ಣಿಯರೆಂಬ ಜಾತಿಭೇಧ ಇನ್ನು ಜೀವಂತವಾಗಿದೆ. ದೌರ್ಜನ್ಯ ಹಾಗು ಜಾತಿನಿಂದನೆ ಮುಂದುವರೆದಿದೆ. ಹೀಗಾಗಿ ಅಮಾಯಕ ಯುವಕನ ಜೀವ ಬಲಿಯಾಗಿದೆ ಎಂಬುದು ನೋವಿನ ಸಂಗತಿ. ಇನ್ನಾದ್ರು ಪೊಲೀಸರು ಎಚ್ಚೆತ್ತು ಇಂತಹ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸುವ ಮೂಲಕ ಎಚ್ಚರಿಕೆ ವಹಿಸಬೇಕಿದೆ.