ಬಿರುಬೇಸಗೆ ನಡುವೆ ವಿಜಯಪುರದಲ್ಲಿ ಅದ್ದೂರಿ ಅಂಬಲಿ ಜಾತ್ರೆ! ಎಷ್ಟೇ ಊಟ ಮಾಡಿದ್ರೂ ಖಾಲಿಯಾಗೊಲ್ಲ ಅಡುಗೆ!

By Ravi Janekal  |  First Published Mar 23, 2024, 10:54 PM IST

ರಂಭಾಪುರ ಗ್ರಾಮದ ಕೆಲವೇ ಕುಟುಂಬಸ್ಥರು ಮಾತ್ರ ಮನೆಯಲ್ಲಿ ಅಡುಗೆ ಮಾಡಿ ತಂದು ಊರಿಗೆ ಬಡಿಸಿದ್ರು, ಇಲ್ಲಿ ಅಡುಗೆ ಖಾಲಿಯಾಗೋದೇ ಇಲ್ವಂತೆ. ಊರ ಜನರು ಊಟ ಮಾಡಿದ್ರು ಕೊನೆಯಲ್ಲಿ ಅಡುಗೆ ಉಳಿಯುತ್ತಂತೆ. ಇಲ್ಲಿಯವರೆಗೆ ಎಂದು ಕೂಡ ಇಲ್ಲಿ ತಂದ ಅಡುಗೆ ಖಾಲಿಯಾಗಿರುವ ಉದಾಹರಣೆ ಇಲ್ವಂತೆ!


- ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮಾ.23) ಉತ್ತರ ಕರ್ನಾಟಕದಲ್ಲಿ ಬೇಸಗೆ ಶುರುವಾಗ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಆಚರಣೆಗಳು ಶುರುವಾಗುತ್ತವೆ. ಅದ್ರಂತೆ ವಿಜಯಪುರದ ರಂಭಾಪುರ ಗ್ರಾಮದಲ್ಲಿ ನಡೆಯುವ ಅಂಬಲಿ ಜಾತ್ರೆ ತುಂಬಾನೇ ವಿಶೇಷ. ಇಲ್ಲಿನ ಮೆಂಡೆಗಾರ್‌ ಕುಟುಂಬ ನಡೆಸುವ ಅಂಬಲಿ ಜಾತ್ರೆಯಲ್ಲಿ ಜೋಳದ ಅಂಬಲಿಗೆ ಎಲ್ಲಿಲ್ಲದ ಮಹತ್ವ ಇದೆ. ಇಲ್ಲಿ ರೈತರು ಬೆಳೆದ ಜೋಳದಲ್ಲಿ ತಯಾರಾದ ಅಂಬಲಿ ಮೊದಲು ಆಂಜನೇಯನಿಗೆ ಅರ್ಪಿತವಾಗಿ ಬಳಿಕ ಮಹಾಪ್ರಸಾದವಾಗಿ ಜನರಿಗೆ ವಿತರಣೆ ಆಗುತ್ತೆ. ಅಷ್ಟಕ್ಕೂ ಇದ್ರಲ್ಲೇನು ವಿಶೇಷ ಇದೆ ಅಂತೀರಾ? ಇದೆ ಮುಂದೆ ಓದಿ..

Latest Videos

undefined

ಬಿರುಬೇಸಗೆ ನಡುವೆ ಅದ್ದೂರಿ ಅಂಬಲಿ ಜಾತ್ರೆ!

ವಿಜಯಪುಯರದಲ್ಲಿ ಈಗಾಗಲೇ ಬಿಸಲು ನೆತ್ತಿ ಸುಡುತ್ತಿದೆ. ಇಂಥ ಬೇಸಗೆಯಿಂದ ತಪ್ಪಿಸಿಕೊಳ್ಳಲು ಜನರು ಮಜ್ಜಿಗೆ, ಲಜ್ಜಿ ಸೇರಿದಂತೆ ತಂಪು ಪಾನಿಯಗಳ ಮೊರೆ ಹೋಗ್ತಿದ್ದಾರೆ. ಈ ನಡುವೆ ಬೇಸಗೆಯಲ್ಲಿ ತಂಪು ಪಾನೀಯಗಳಿಗಿಂತಲೂ ಅಂಬಲಿ ಸೇವನೆ ಆರೋಗ್ಯಕ್ಕೆ ಬಹಳಾನೇ ಉಪಯೋಗಕಾರಿ. ಹೀಗಾಗಿಯೇ ಬೇಸಗೆ ಶುರುವಾಗ್ತಿದ್ದಂತೆ ವಿಜಯಪುರ ಜಿಲ್ಲೆಯಲ್ಲಿ ಅಂಬಲಿಗಾಗಿಯೇ ವಿಶೇಷ ಜಾತ್ರೆಯೊಂದು ನಡೆಯುತ್ತೆ. ಈ ಜಾತ್ರೆಯಲ್ಲಿ ಅಂಬಲಿಯದ್ದೆ ಪಾರುಪತ್ಯ. ಹೌದು ವಿಜಯಪುರ ನಗರದ ಪಕ್ಕದಲ್ಲಿರುವ ರಂಭಾಪುರ ಎನ್ನುವ ಗ್ರಾಮದಲ್ಲಿ ಈ ಅಂಬಲಿ ಜಾತ್ರೆ ನಡೆಯೋದು ವಿಶೇಷ.

 

ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಬಯ್ಯುವುದೇ ವಿಶೇಷ..!

ಮೆಂಡೆಗಾರ್‌ ಕುಟುಂಬದಿಂದ ಅಂಬಲಿ ಜಾತ್ರೆ!

ಇಲ್ಲಿ ಮೆಂಡೆಗಾರ್‌ ಕುಟುಂಬ ತಯಾರಿಸುವ ಅಂಬಲಿಯನ್ನ ಮೆರವಣೀಗೆ ಮೂಲಕ ಊರಿನ ಆಂಜನೇಯ ದೇಗುಲಕ್ಕೆ ತರಲಾಗುತ್ತೆ. ಅಲ್ಲಿ ಪೂಜೆ ಪುನಸ್ಕಾರ ನಡೆದ ಬಳಿಕ ಅಂಬಲಿಯನ್ನ ನೈವೇದ್ಯವಾಗಿ ನೀಡಲಾಗುತ್ತೆ. ಬಳಿಕ ಅದೇ ಅಂಬಲಿಯನ್ನ ಮಹಾಪ್ರಸಾದವಾಗಿ ಜನರಿಗೆ ವಿತರಿಸಲಾಗುತ್ತೆ.

ಮಹಿಳೆಯರಿಂದ ಅಂಬಲಿ ಮೆರವಣಿಗೆ!

ಇದಕ್ಕೂ ಮೊದಲು ಈ ಅಂಬಲಿ ಜಾತ್ರೆಗೆಂದು ಮಹಿಳೆಯರೆಲ್ಲ ಸೇರಿ ಅಂಬಲಿ ತಯಾರಿಸಿದ ಮಡಿಕೆಯನ್ನ ತಲೆಯ ಮೇಲೆ ಹೊತ್ತು ಊರು ತುಂಬಾ ಮೆರವಣಿಗೆ ಮೂಲಕ ಬರುವುದು ಅನಾದಿ ಕಾಲದಿಂದಲು ನಡೆದುಕೊಂಡ ಬಂದ ಪದ್ಧತಿಯೂ ಆಗಿದೆ. ಇನ್ನೊಂದು ವಿಶೇಷ ಅಂದ್ರೆ ದೇವರಿಗೆ ಈ ವಿಶೇಷ ಜೋಳದ ಅಂಬಲಿ ಸಮರ್ಪನೆಯಾದ ಬಳಿಕವೇ ಊರ ಜನರಿಗೆ ಪ್ರಸಾದ ಸ್ವೀಕರಿಸೋದು ವಾಡಿಕೆ.

ವಿಜಯಪುರ ಬಿಸಲಿಗು ಅಂಬಲಿಗೂ ಇದೆ ನಂಟು!

ಈ ಜಾತ್ರೆಯಲ್ಲಿ ಅಂಬಲಿ ನೈವೇದ್ಯಕ್ಕೂ ಒಂದು ವಿಶೇಷ ಹಿನ್ನೆಲೆ ಇದೆ. ಶಿವರಾತ್ರಿಯ ಬಳಿಕ ಹೋಳಿ ಹುಣ್ಣಿಮೆ ಸಮೀಪಿಸುವಾಗಲೇ ಬೇಸಗೆ ಬಿಸಿಲು ಹೆಚ್ಚಾಗಿರುತ್ತೆ. ಬೇಸಗೆಯಲ್ಲಿ ತಂಪನ್ನು ನೀಡುವ ಜೋಳದ ಅಂಬಲಿಯನ್ನ ಹುಳಿ ಹಾಕಿ ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ತರುತ್ತಾರೆ. ಒಂದರ್ಥದಲ್ಲಿ ಆಂಜನೇಯ ದೇವರಿಗೆ ಸಮರ್ಪನೆಯಾಗುವ ಅಂಬಲಿಗೂ ಬೇಸಿಗೆ ಆರಂಭವಾಗೋದಕ್ಕೂ ಒಂದು ಲಿಂಕ್‌ ಇದ್ದೇ ಇದೆ.

ಯಾದಗಿರಿ: ಅದ್ಧೂರಿಯಾಗಿ ನಡೆದ ಪವಾಡ ಪುರುಷನ ಜಾತ್ರೆ‌, ವಿಶ್ವರಾಧ್ಯರ ದರ್ಶನ ಪಡೆದು ಪುನೀತರಾದ ಭಕ್ತರು..!

ಈ ಜಾತ್ರೆಯಲ್ಲಿ ಎಷ್ಟೇ ಜನರು ಊಟ ಮಾಡಿದ್ರು ಖಾಲಿಯಾಗಿಲ್ಲ ಅಡುಗೆ!

ಇಲ್ಲಿ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳಿಂದ ಅಡುಗೆ ತಯಾರಿಸಲಾಗುತ್ತೆ. ಅದೆಲ್ಲ ಅಡುಗೆಯನ್ನ ಮೆಂಡೆಗಾರ ಕುಟುಂಬಸ್ಥರು ಆಂಜನೇಯಸ್ವಾಮಿ ದೇಗುಲಕ್ಕೆ ತಂದು ಜನರಿಗೆ ಪ್ರಸಾದದ ರೂಪದಲ್ಲಿ ನೀಡೋದು ವಾಡಿಕೆ. ಖಡಕ್‌ ರೊಟ್ಟಿ, ಸಜ್ಜೆ ರೊಟ್ಟಿ, ಹುಳಿಬಾನ, ಶೇಂಗಾ ಚಟ್ನಿಯನ್ನ ಪ್ರಸಾದ ರೂಪವಾಗಿ ಭಕ್ತರಿಗೆ ನೀಡಲಾಗುತ್ತೆ. ಇನ್ನೊಂದು ವಿಚಿತ್ರ ಸಂಗತಿ ಅಂದ್ರೆ ರಂಭಾಪುರ ಗ್ರಾಮದ ಕೆಲವೇ ಕುಟುಂಬಸ್ಥರು ಮಾತ್ರ ಮನೆಯಲ್ಲಿ ಅಡುಗೆ ಮಾಡಿ ತಂದು ಊರಿಗೆ ಬಡಿಸಿದ್ರು, ಇಲ್ಲಿ ಅಡುಗೆ ಖಾಲಿಯಾಗೋದೇ ಇಲ್ವಂತೆ. ಊರ ಜನರು ಊಟ ಮಾಡಿದ್ರು ಕೊನೆಯಲ್ಲಿ ಅಡುಗೆ ಉಳಿಯುತ್ತಂತೆ. ಇಲ್ಲಿಯವರೆಗೆ ಎಂದು ಕೂಡ ಇಲ್ಲಿ ತಂದ ಅಡುಗೆ ಖಾಲಿಯಾಗಿರುವ ಉದಾಹರಣೆ ಇಲ್ವಂತೆ. ಮಿಕ್ಕಿದ ಎಲ್ಲ ಅಡುಗೆಯನ್ನ ಜಾತ್ರೆಗೆ ಬಂದ ಜನರು ಮನೆಗೆ ಕೊಂಡೊಯ್ದು ರಾತ್ರಿ ಊಟ ಮಾಡ್ತಾರೆ. ಇದೆಲ್ಲವೂ ರಂಭಾಪೂರ ಆಂಜನೇಯನ ಪವಾಡ ಅಂತಾರೆ ಗ್ರಾಮಸ್ಥರು.

click me!