ನನ್ನನ್ನು ನಡಾಲ್‌ ಎಂದುಕೊಂಡು ವ್ಯಕ್ತಿಯೊಬ್ಬ ಸೆಲ್ಫಿ ಕೇಳಿದ್ದ: ಫೆಡರರ್‌

By Kannadaprabha NewsFirst Published May 25, 2023, 11:18 AM IST
Highlights

* ಆಸಕ್ತಿದಾಯಕ ವಿಷಯವೊಂದನ್ನು ಬಿಚ್ಚಿಟ್ಟ ರೋಜರ್ ಫೆಡರರ್
* ನಡಾಲ್ ಎಂದುಕೊಂಡು ರೋಜರ್ ಫೆಡರರ್ ಬಳಿ ಸೆಲ್ಫಿ ಕೇಳಿದ್ದ ಅಭಿಮಾನಿ
* ಆ ಬಳಿಕ ಫೆಡರರ್‌ ಎಂದು ತಿಳಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೇ ಹೋಗಿದ್ದ ನಡಾಲ್ ಫ್ಯಾನ್

ನವದೆಹಲಿ(ಮೇ.25):  ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ವೇಳೆ ದಿಗ್ಗಜ ಟೆನಿಸಿಗ ರೋಜರ್‌ ಫೆಡರರ್‌ ಆಸಕ್ತಿದಾಯಕ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ‘ನಿಮಗೆ ಎದುರಾದ ಬಹಳ ತಮಾಷೆಯ ಪ್ರಸಂಗ ಯಾವುದು?’ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಫೆಡರರ್‌, ‘ಒಮ್ಮೆ ಫಾರ್ಮುಲಾ 1 ರೇಸ್‌ ನೋಡಲು ಹೋಗಿದ್ದೆ. ಆಗ ವ್ಯಕ್ತಿಯೊಬ್ಬ ನನ್ನ ಬಳಿಕ ಬಂದು ಮಿಸ್ಟರ್‌ ನಡಾಲ್‌ ನಿಮ್ಮೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಕೇಳಿದ. ನಾನು ನಡಾಲ್‌ ಅಲ್ಲ ಎಂದೆ. ಆ ವ್ಯಕ್ತಿ ತಪ್ಪಾಯಿತು ಕ್ಷಮಿಸಿ ಎಂದು ಹೇಳಿ ಫೋಟೋ ಕ್ಲಿಕ್ಕಿಸಿಕೊಳ್ಳದೆ ಹೊರಟುಹೋದ’ ಎಂದಿದ್ದಾರೆ.

‘ಟೆನಿಸ್‌ ಮಾಂತ್ರಿಕ’ ಎಂದೇ ಕರೆಸಿಕೊಳ್ಳುವ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ ವೃತ್ತಿಪರ ಟೆನಿಸ್‌ಗೆ ಕಳೆದ ವರ್ಷದ ಸೆಪ್ಟೆಂಬರ್ 15ರಂದು ನಿವೃತ್ತಿ ಘೋಷಿಸಿದ್ದರು. 41 ವರ್ಷದ ಫೆಡರರ್‌ 20 ಗ್ರ್ಯಾನ್‌ಸ್ಲಾಂಗಳೊಂದಿಗೆ ಟೆನಿಸ್‌ಗೆ ಗುಡ್‌ಬೈ ಹೇಳಿದ್ದರು.

90ರ ದಶಕದ ಅಂತ್ಯದಲ್ಲಿ ಪೀಟ್‌ ಸ್ಯಾಂಪ್ರಸ್‌, ಆ್ಯಂಡ್ರೆ ಅಗಾಸ್ಸಿಯಂತಹ ದಿಗ್ಗಜರು ತೆರೆ ಮರೆಗೆ ಸರಿಯುತ್ತಿದ್ದಾಗ ಟೆನಿಸ್‌ನಲ್ಲಿ ಹೊಸ ತಾರೆಯ ಉದಯವಾಯಿತು. 1998ರಲ್ಲಿ ವೃತ್ತಿಬದುಕಿನ ಕಾಲಿಟ್ಟಆ ಆಟಗಾರ ಮುಂದಿನ ಎರಡೂವರೆ ದಶಕ ಟೆನಿಸ್‌ ಲೋಕವನ್ನು ಆಳಿದರು. ದಾಖಲೆಗಳ ಮೇಲೆ ದಾಖಲೆ ಬರೆದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದರು.

ಏಷ್ಯನ್‌ ಕಬಡ್ಡಿ ಟೂರ್ನಿಗೆ ಬಲಿಷ್ಠ ಭಾರತ ತಂಡ ಪ್ರಕಟ; ಪ್ರೊ ಕಬಡ್ಡಿ ಹೀರೋಗೆ ಸ್ಥಾನ

ಫೆಡರರ್‌ ವೃತ್ತಿಬದುಕಿನ ಹೈಲೈಟ್ಸ್‌

- ಒಟ್ಟು 20 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ

- ದಾಖಲೆಯ 8 ವಿಂಬಲ್ಡನರ್‌ ಪ್ರಶಸ್ತಿ ಗೆಲುವು

- ಒಟ್ಟು 103 ಎಟಿಪಿ ಪ್ರಶಸ್ತಿ ಗೆಲುವು, ಅತಿಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ 2ನೇ ಸ್ಥಾನ

- ದಾಖಲೆಯ ಸತತ 237 ವಾರ ಸೇರಿ ಒಟ್ಟು 310 ವಾರ ವಿಶ್ವ ನಂ.1 ಆಗಿದ್ದ ಫೆಡರರ್‌

- 5 ಬಾರಿ ಕ್ಯಾಲೆಂಡರ್‌ ವರ್ಷವನ್ನು ವಿಶ್ವ ನಂ.1 ಆಗಿ ಮುಕ್ತಾಯಗೊಳಿಸಿದ ಸಾಧನೆ

ಫ್ರೆಂಚ್‌ ಓಪನ್‌: ಅರ್ಹತಾ ಸುತ್ತಲ್ಲಿ ಸೋತ ಅಂಕಿತಾ

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನ ಪ್ರಧಾನ ಸುತ್ತಿಗೆ ಪ್ರವೇಶಿಸಲು ಭಾರತದ ಅಂಕಿತಾ ರೈನಾ ವಿಫಲರಾಗಿದ್ದಾರೆ. ಅರ್ಹತಾ ಸುತ್ತಿನ ಮಹಿಳಾ ಸಿಂಗಲ್ಸ್‌ 2ನೇ ಪಂದ್ಯದಲ್ಲಿ ಅಂಕಿತಾ, ಜಪಾನ್‌ನ ಮೊಯುಕಾ ಯುಚಿಜಿಮಾ ವಿರುದ್ಧ 6-7, 1-6 ನೇರ ಸೆಟ್‌ಗಳಲ್ಲಿ ಸೋಲುಂಡರು. ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಎಮಿಲಿನ್‌ ಡಾರ್ಟೊರ್ನ್‌ ವಿರುದ್ಧ 7-5, 5-7, 6-2 ಸೆಟ್‌ಗಳಲ್ಲಿ ಗೆದ್ದು ಪ್ರಧಾನ ಸುತ್ತಿಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ಪ್ರಧಾನ ಸುತ್ತು ಮೇ 28ರಿಂದ ಆರಂಭಗೊಳ್ಳಲಿದ್ದು, ಜೂನ್‌ 11ರ ವರೆಗೂ ನಡೆಯಲಿದೆ.

ಕಿರಿ​ಯರ ಏಷ್ಯಾ​ಕಪ್‌ ಹಾಕಿ: ಭಾರ​ತಕ್ಕೆ 18-0 ಗೆಲು​ವು!

ಸಲಾಲ್ಹ(ಒಮಾನ್‌): ಹಾಲಿ ಚಾಂಪಿ​ಯನ್‌ ಭಾರತ ತಂಡ ಬುಧವಾರ ಇಲ್ಲಿ ಆರಂಭಗೊಂಡ ಕಿರಿಯರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಭರ್ಜರಿ ಶುಭಾ​ರಂಭ ಮಾಡಿದೆ. ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಟೂರ್ನಿ​ಯಲ್ಲಿ ಕಣ​ಕ್ಕಿ​ಳಿದ ಭಾರತ ‘ಬಿ’ ಗುಂಪಿನ ಮೊದಲ ಪಂದ್ಯ​ದಲ್ಲಿ ಚೈನೀಸ್‌ ತೈಪೆ​ಯನ್ನು ಬರೋ​ಬ್ಬರಿ 18-0 ಗೋಲು​ಗ​ಳಿಂದ ಮಣಿ​ಸಿತು.

10ನೇ ನಿಮಿ​ಷ​ದಲ್ಲಿ ಗೋಲಿನ ಖಾತೆ ತೆರೆದ ಭಾರತ ಮೊದ​ಲಾ​ರ್ಧಕ್ಕೆ 6-0 ಮುನ್ನಡೆ ಪಡೆ​ಯಿತು. ಆ ಬಳಿ​ಕವೂ ಚೆಂಡಿನ ಮೇಲೆ ಪ್ರಾಬಲ್ಯ ಸಾಧಿ​ಸಿದ ಭಾರತ 3 ಮತ್ತು 4ನೇ ಕ್ವಾರ್ಟ​ರ್‌​ನಲ್ಲಿ ತಲಾ 6 ಗೋಲು​ಗ​ಳನ್ನು ದಾಖ​ಲಿ​ಸಿತು. ಅರೈಜೀ​ತ್‌ ಸಿಂಗ್‌ 4, ಅಮ​ನ್‌​ದೀಪ್‌ 3 ಗೋಲು ಬಾರಿ​ಸಿ​ದರೆ, ಬಾಬಿ ಸಿಂಗ್‌, ಆದಿತ್ಯ ಅರ್ಜುನ್‌, ಉತ್ತಮ್‌ ಸಿಂಗ್‌ ತಲಾ 2, ಶಾರ್ದಾನಂದ್‌, ಅಂಗದ್‌ಬಿರ್‌ ಸಿಂಗ್‌, ಅಮೀರ್‌ ಅಲಿ, ಬಾಬಿ ಪೂವಣ್ಣ ಹಾಗೂ ಯೋಗಂಬರ್‌ ತಲಾ 1 ಗೋಲು ಹೊಡೆ​ದರು. ಭಾರತ ಗುಂಪು ಹಂತದ ತನ್ನ 2ನೇ ಪಂದ್ಯವನ್ನು ಗುರು​ವಾರ ಜಪಾನ್‌ ವಿರುದ್ಧ ಆಡಲಿದೆ.

click me!