ಅತ್ತ ಆರ್‌ಸಿಬಿ ಪಾಲಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಚೆನ್ನೈ ಸೋಲಿಗೆ ಆರ್‌ಸಿಬಿ ಕಾತರಿಸುತ್ತಿದೆ. ಚೆನ್ನೈ ಈ ಬಾರಿ 12 ಪಂದ್ಯಗಳನ್ನಾಡಿದ್ದು, ತಲಾ 6 ಗೆಲುವು, ಸೋಲು ಕಂಡಿದೆ. ಅಸ್ಥಿರ ಆಟ, ವೇಗದ ಬೌಲರ್‌ಗಳ ಅಲಭ್ಯತೆಯಿಂದ ತಂಡ ಸಂಕಷ್ಟದಲ್ಲಿದ್ದು, ಪ್ಲೇ-ಆಫ್‌ಗೇರ ಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೇರಲು ಹರಸಾಹಸ ಪಡುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲು ಎದುರಾಗಲಿದೆ. ಇತ್ತಂಡಗಳಿಗೂ ಈ ಪಂದ್ಯ ಮಹತ್ವದ್ದೆನಿಸಿದ್ದು, ಚೆಪಾಕ್ ಕ್ರೀಡಾಂಗಣದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.
ಅತ್ತ ಆರ್‌ಸಿಬಿ ಪಾಲಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಚೆನ್ನೈ ಸೋಲಿಗೆ ಆರ್‌ಸಿಬಿ ಕಾತರಿಸುತ್ತಿದೆ. ಚೆನ್ನೈ ಈ ಬಾರಿ 12 ಪಂದ್ಯಗಳನ್ನಾಡಿದ್ದು, ತಲಾ 6 ಗೆಲುವು, ಸೋಲು ಕಂಡಿದೆ. ಅಸ್ಥಿರ ಆಟ, ವೇಗದ ಬೌಲರ್‌ಗಳ ಅಲಭ್ಯತೆಯಿಂದ ತಂಡ ಸಂಕಷ್ಟದಲ್ಲಿದ್ದು, ಪ್ಲೇ-ಆಫ್‌ಗೇರ ಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ತಂಡದ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆದರೆ ಇದರಿಂದ ಆರ್‌ಸಿಬಿಗೆ ಲಾಭವಾಗಲಿದೆ. ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಚೆನ್ನೈ ಸವಾಲು ಎದುರಾಗಲಿದೆ.
ಮುಂಬೈ ಬಗ್ಗುಬಡಿದು ಕೆಕೆಆರ್ ಪ್ಲೇ ಆಫ್‌ಗೆ ಅಧಿಕೃತ ಎಂಟ್ರಿ
ಮತ್ತೊಂದೆಡೆ ರಾಜಸ್ಥಾನ 11ರಲ್ಲಿ 8 ಪಂದ್ಯ ಗೆದ್ದಿದ್ದು, ಮತ್ತೊಂದು ಗೆಲುವು ತಂಡ ವನ್ನು ಅಧಿಕೃತವಾಗಿ ಪ್ಲೇ-ಆಫ್‌ಗೇರಿಸಲಿದೆ. ಸೋತರೆ ನಾಕೌಟ್ ಸ್ಥಾನ ಅಧಿಕೃತಗೊಳ್ಳಲು ಮತ್ತಷ್ಟು ಸಮಯ ಕಾಯಬೇಕಿದೆ.
ಉಭಯ ತಂಡಗಳ ಸಂಭವನೀಯ ಆಟಗಾರರ ಪಟ್ಟಿ:
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ಡೇರಲ್ ಮಿಚೆಲ್, ಶಿವಂ ದುಬೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಎಂ ಎಸ್ ಧೋನಿ(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್‌ಜೀತ್ ಸಿಂಗ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಧೃವ್ ಜುರೆಲ್, ರೋವ್ಮನ್ ಪೋವೆಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಯುಜುವೇಂದ್ರ ಚಹಲ್, ಸಂದೀಪ್ ಶರ್ಮಾ.
ಪಂದ್ಯ: ಮಧ್ಯಾಹ್ನ 3.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ