ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 7ರಲ್ಲಿ ಪರಾಭವಗೊಂಡಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ್ದು, ಅಂಕ ಗಳಿಕೆಯನ್ನು 10ಕ್ಕೆ ಹೆಚ್ಚಿಸಿದೆ.
ಬೆಂಗಳೂರು(ಮೇ.12): ಸತತ 4 ಗೆಲುವಿನೊಂದಿಗೆ ತನ್ನ ಪ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಳ್ಳುವುದರ ಜೊತೆಗೆ ಟೂರ್ನಿಯ ಇತರ ತಂಡಗಳ ನಾಕೌಟ್ ರೇಸ್‌ನಲ್ಲೂ ರೋಚಕತೆ ಸೃಷ್ಟಿಸಿರುವ ಆರ್‌ಸಿಬಿ ಈಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಭಾನುವಾರ ಇತ್ತಂಡಗಳ ನಡುವೆ ನಗರದ ಚಿನ್ನಸ್ವಾಮಿ ಕ್ರೀಡಾಂಗ ಣದಲ್ಲಿ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದ್ದು, ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.
ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 7ರಲ್ಲಿ ಪರಾಭವಗೊಂಡಿತ್ತು. ಆದರೆ ಕಳೆದ 4 ಪಂದ್ಯಗಳಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ್ದು, ಅಂಕ ಗಳಿಕೆಯನ್ನು 10ಕ್ಕೆ ಹೆಚ್ಚಿಸಿದೆ. ಗುಜರಾತ್ ವಿರುದ್ಧ9 ವಿಕೆಟ್ ಗೆಲುವು ಮತ್ತು ಪಂಜಾಬ್ ವಿರುದ್ಧದ ಕಳೆದ ಪಂದ್ಯದ 60 ರನ್ ಜಯ ತಂಡದ ನೆಟ್ ರನ್‌ರೇಟನ್ನು ಭರಪೂರ ಹೆಚ್ಚಿಸಿದ್ದು ತಂಡಕ್ಕೆ ಪ್ಲಸ್ ಪಾಯಿಂಟ್. ಸದ್ಯ ತಂಡಕ್ಕೆ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದ್ದು, ಅದೃಷ್ಟವಿದ್ದರೆ ಪ್ಲೇ-ಆಫ್‌ಗೇರುವ ಸಾಧ್ಯತೆಯಿದೆ.
ಇಂದು ಚೆನ್ನೈ-ರಾಜಸ್ಥಾನ ಮೆಗಾ ಫೈಟ್: ಸಿಎಸ್‌ಕೆ ಸೋತರೆ ಆರ್‌ಸಿಬಿಗೆ ಲಾಭ
ಡೆಲ್ಲಿಗೂ ಜಯ ಅನಿವಾರ್ಯ: ಡೆಲ್ಲಿ 12 ಪಂದ್ಯಗಳಲ್ಲಿ ತಂಡ 12 ಅಂಕ ಸಂಪಾದಿಸಿದ್ದು, ಪ್ಲೇ-ಆಫ್ ಗೇರಬೇಕಿದ್ದರೆ ಇನ್ನೆರಡೂ ಪಂದ್ಯ ಗೆಲ್ಲಬೇಕು. ಒಂದು ವೇಳೆ ತಂಡ ಆರ್‌ಬಿ ವಿರುದ್ಧ ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ.
ವಿರಾಟ್ ಆಟಕ್ಕೆ ಕಾತರ: ವಿರಾಟ್ ಕೊಹ್ಲಿ ಅಭೂತಪೂರ್ವ ಲಯ ಕಾಯ್ದುಕೊಂಡಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಫೀಲ್ಡಿಂಗ್, ರನ್‌ಔಟ್ ಮೂಲಕವೂ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿರುವ ವಿರಾಟ್ ಆಟ ನೋಡಲು ತವರಿನ ಅಭಿಮಾನಿಗಳು ಕಾತರದಲ್ಲಿದ್ದಾರೆ. ವಿಲ್ ಜ್ಯಾಕ್ಸ್, ರಜತ್ ಪಾಟೀದಾರ್ ಕೂಡಾ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಡು ಪ್ಲೆಸಿಸ್, ಕಾರ್ತಿಕ್ ತಂಡದ ಕೈ ಹಿಡಿಯಬೇಕಿದ್ದು, ಬೌಲರ್‌ಗಳು ಕಳೆದ 4 ಪಂದ್ಯಗಳ ಪ್ರದರ್ಶನ ಮುಂದುವರಿಸಿದರೆ ತಂಡದ ಪ್ಲೇ-ಆಫ್ ಆಸೆ ಜೀವಂತವಾಗಿ ಉಳಿಯಲಿದೆ.
ಮುಂಬೈ ಬಗ್ಗುಬಡಿದು ಕೆಕೆಆರ್ ಪ್ಲೇ ಆಫ್‌ಗೆ ಅಧಿಕೃತ ಎಂಟ್ರಿ
ಅತ್ತ ಡೆಲ್ಲಿ ತನ್ನ ನಾಯಕ ಪಂತ್ ಅನುಪಸ್ಥಿತಿಯಲ್ಲಿ ಆಡಲಿದೆ. ಹೀಗಾಗಿ ಅಕ್ಷರ್ ಪಟೇಲ್ ತಂಡ ಮುನ್ನಡೆಸಲಿದ್ದಾರೆ. ಡೆಲ್ಲಿ ಸ್ಫೋಟಕ ಬ್ಯಾಟರ್‌ಗಳದಾ ಜೇಕ್ ಪ್ರೇಸರ್, ಅಭಿಷೇಕ್ ಪೊರೆಲ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟು ಕೊಂಡಿದ್ದು, ಬೌಲರ್‌ಗಳೂ ಬ್ಯಾಟಿಂಗ್ ಸ್ನೇಹಿ ಪಿಚ್ ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ವಿಲ್ ಜ್ಯಾಕ್ಸ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮೊರ್, ಮಹಿಪಾಲ್ ಲೋಮ್ರಾರ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಲಾಕಿ ಫರ್ಗ್ಯೂಸನ್.
ಡೆಲ್ಲಿ ಕ್ಯಾಪಿಟಲ್ಸ್: ಫೇಸರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ಶಾಯ್ ಹೋಪ್, ಟ್ರಿಸ್ಟಿನ್ ಸ್ಟಬ್ಸ್, ಗುಲ್ಬದ್ದೀನ್ ನೈಬ್, ಅಕ್ಷರ್ ಪಟೇಲ್(ನಾಯಕ), ಕುಲ್ಲೀಪ್ ಯಾದವ್, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹಮದ್.
ಪಂದ್ಯ: ಸಂಜೆ. 7:30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್: ಚಿನ್ನಸ್ವಾಮಿಯ ಪಿಚ್ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಇಲ್ಲಿ ನಡೆಯುವ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗುತ್ತದೆ. ಚೇಸ್ ಮಾಡಿದ ತಂಡ ಗೆದ್ದ ಉದಾಹರಣೆ ಜಾಸ್ತಿಯಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.