IPL 2024: ಚೆನ್ನೈ ಎದುರು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ

By Naveen Kodase  |  First Published May 12, 2024, 3:07 PM IST

ಚೆನ್ನೈ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಕೆಕೆಆರ್ ಬಳಿಕ ಎರಡನೇ ತಂಡವಾಗಿ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.


ಚೆನ್ನೈ(ಮೇ.12): 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 61ನೇ ಪಂದ್ಯದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ

ಚೆನ್ನೈ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಕೆಕೆಆರ್ ಬಳಿಕ ಎರಡನೇ ತಂಡವಾಗಿ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಧೃವ್ ಜುರೆಲ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮಿಚೆಲ್ ಸ್ಯಾಂಟ್ನರ್ ಬದಲಿಗೆ ಮಹೀಶ್ ತೀಕ್ಷಣ ತಂಡ ಕೂಡಿಕೊಂಡಿದ್ದಾರೆ. 

🚨 Toss 🚨 win the toss and elect to bat against

Follow the Match ▶️ https://t.co/1JsX9W2grC | pic.twitter.com/gwapMiGSD5

— IndianPremierLeague (@IPL)

Tap to resize

Latest Videos

ಮುಂಬೈ ಇಂಡಿಯನ್ಸ್‌ಗೆ ಗುಡ್‌ ಬೈ ಹೇಳಲು ರೋಹಿತ್ ಶರ್ಮಾ ರೆಡಿ..! ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ

ಚೆನ್ನೈ ಈ ಬಾರಿ 12 ಪಂದ್ಯಗಳನ್ನಾಡಿದ್ದು, ತಲಾ 6 ಗೆಲುವು, ಸೋಲು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಪ್ಲೇ-ಆಫ್‌ಗೇರ ಬೇಕಿದ್ದರೆ ಈ ಪಂದ್ಯದಲ್ಲಿ ಚೆನ್ನೈ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ತಂಡದ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆದರೆ ಇದರಿಂದ ಆರ್‌ಸಿಬಿಗೆ ಲಾಭವಾಗಲಿದೆ. ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಚೆನ್ನೈ ಸವಾಲು ಎದುರಾಗಲಿದೆ.

ಮತ್ತೊಂದೆಡೆ ರಾಜಸ್ಥಾನ 11ರಲ್ಲಿ 8 ಪಂದ್ಯ ಗೆದ್ದಿದ್ದು, ಮತ್ತೊಂದು ಗೆಲುವು ತಂಡ ವನ್ನು ಅಧಿಕೃತವಾಗಿ ಪ್ಲೇ-ಆಫ್‌ಗೇರಿಸಲಿದೆ. ಸೋತರೆ ನಾಕೌಟ್ ಸ್ಥಾನ ಅಧಿಕೃತಗೊಳ್ಳಲು ಮತ್ತಷ್ಟು ಸಮಯ ಕಾಯಬೇಕಿದೆ. 

ಮಡದಿ ಮಗನ ಜೊತೆ ಇರ್ಫಾನ್ ಪಠಾಣ್ ಮಸ್ತಿ, ಹೆಂಡ್ತಿ ಬುರ್ಖಾ ಹಾಕದ್ದಕ್ಕೆ ನೆಟ್ಟಿಗರ ತರಾಟೆ..!

ಉಭಯ ತಂಡಗಳ ಆಟಗಾರರ ಪಟ್ಟಿ:

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ಡೇರಲ್ ಮಿಚೆಲ್, ಶಿವಂ ದುಬೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮಹೀಶ್ ತೀಕ್ಷಣ ತುಷಾರ್ ದೇಶಪಾಂಡೆ, ಸಿಮರ್‌ಜೀತ್ ಸಿಂಗ್.

ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಸಂಜು ಸ್ಯಾಮ್ಸನ್(ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಧೃವ್ ಜುರೆಲ್, ಶುಭಂ ದುಬೆ, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಯುಜುವೇಂದ್ರ ಚಹಲ್, ಸಂದೀಪ್ ಶರ್ಮಾ.

ಪಂದ್ಯ: ಮಧ್ಯಾಹ್ನ 3.30ಕ್ಕೆ, 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
 

click me!