ಸಾನಿಯಾ-ಶೋಯೆಬ್ ದಂಪತಿ ಮಗುವಿನ ಹೆಸರೇನು ಗೊತ್ತಾ?

By Web DeskFirst Published Oct 30, 2018, 8:55 PM IST
Highlights

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿರುವುದನ್ನ ಪತಿ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಇದೀಗ ಸಾನಿಯಾ ಹಾಗೂ ಶೋಯೆಬ್ ದಂಪತಿ ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. 

ಹೈದರಾಬಾದ್(ಅ.30): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿಯ ಗಂಡು ಮಗುವಿಗೆ ನಾಮಕರಣ ಮಾಡಿದ್ದಾರೆ. ಮಂಗಳವಾರ(ಅ.30) ಹುಟ್ಟಿದ ಮಗುವಿಗೆ ಇಝ್‌ಹಾನ್ ಎಂದು ಹೆಸರಿಟ್ಟಿದ್ದಾರೆ.

ಉರ್ದು ಭಾಷೆಯಲ್ಲಿ ಇಝ್‌ಹಾನ್ ಅಂದರೆ ದೇವರ ಉಡುಗೊರೆ ಎಂದರ್ಥ. ಇದೀಗ ತಮ್ಮ ಪ್ರೀತಿಯ ಮಗುವಿಗೆ ನಾಮಕರಣ ಮಾಡಿರುವ ಸಾನಿಯಾ ಹಾಗೂ ಶೋಯೆಬ್ ದಂಪತಿ ಸಂತಸ ಅಲೆಯಲ್ಲಿದ್ದಾರೆ.

ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಸಂತಸವನ್ನ ಹಂಚಿಕೊಂಡಿದ್ದರು. ನಮಗೆ ಗಂಡು ಮಗುವಾಗಿದೆ ಎಂದು ತಿಳಿಸಲು ಅತೀವ ಸಂತೋಷವಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ, ಎಲ್ಲರ ಪ್ರಾರ್ಥನೆ ಹಾರೈಕೆಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಮಲಿಕ್ ಟ್ವೀಟ್ ಮಾಡಿದ್ದರು.

ಸಾನಿಯಾ-ಮಲಿಕ್ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಏಪ್ರಿಲ್ ತಿಂಗಳಲ್ಲಿ ಸಾನಿಯಾ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದರು. ಹೀಗಾಗಿ ಕೆಲವು ತಿಂಗಳುಗಳಿಂದಲೇ ಟೆನಿಸ್’ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ವೇಳೆಗೆ ಸಾನಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.   
 

click me!