ಮುಗಿಯಿತಾ ಯುವರಾಜ್-ಹರ್ಭಜನ್ ಕ್ರಿಕೆಟ್ ಕರಿಯರ್?

By Web DeskFirst Published Oct 30, 2018, 7:26 PM IST
Highlights

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕ್ರಿಕೆಟ್ ಕರಿಯರ್ ಅಂತ್ಯಗೊಂಡಿತಾ? ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲು ಕಾರಣವಿದೆ. ಪಂಜಾಬ್ ರಣಜಿ ತಂಡದ ಆಯ್ಕೆ ಇದೀಗ ಈ ಅನುಮಾನಕ್ಕೆ ಕಾರಣವಾಗಿದೆ.

ಚಂಡಿಘಡ(ಅ.30): ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿರುವ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕ್ರಿಕೆಟ್ ಕರಿಯರ್ ಅಂತ್ಯವಾಯಿತಾ ಅನ್ನೋ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ರಣಜಿ ತಂಡದ ಆಯ್ಕೆ.

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್, ಇಷ್ಟು ದಿನ ರಣಜಿ, ವಿಜಯ್ ಹಜಾರೆ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಸಕ್ರೀಯರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ಪಂಜಾಬ್ ರಣಜಿ ತಂಡದಿಂದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್‌ಗೆ ಕೊಕ್ ನೀಡಲಾಗಿದೆ.

ಯುವ ಕ್ರಿಕೆಟಿಗರಿಗೆ ಅವಕಾಶ ನೀಡೋ ಸಲುವಾಗಿ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ರಣಜಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ರಣಜಿ ಟೂರ್ನಿಯಿಂದ ಹೊರಗುಳಿದಿರುವುದು ಈ ಸ್ಟಾರ್ ಕ್ರಿಕೆಟಿಗರ ಕರಿಯರ್ ಅಂತ್ಯವಾಗಿದೆ ಅನ್ನೋ ಸೂಚನೆ ನೀಡುತ್ತಿದೆ.

ಹಿರಿಯ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಮನ್ದೀಪ್ ಸಿಂಗ್ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಅಂಡರ್ 19 ವಿಶ್ವಕಪ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಮಿಂಚಿದ ಶುಭ್‌ಮನ್ ಗಿಲ್ ಸ್ಥಾನ ಪಡೆದಿದ್ದಾರೆ. 

click me!