2019ರ ಐಪಿಎಲ್ ಟೂರ್ನಿ ಭಾರತದಿಂದ ಶಿಫ್ಟ್?

By Web DeskFirst Published Oct 21, 2018, 10:49 AM IST
Highlights

12ನೇ ಆವೃತ್ತಿ ಐಪಿಎಲ್ ಟೂರ್ನಿ ಆಯೋಜನೆ ಇದೀಗ ಬಿಸಿಸಿಐಗ ತಲೆನೋವಾಗಿ ಪರಿಣಮಿಸಿದೆ. ಒಂದೆಡೆ ಲೋಕಸಭಾ ಚುನಾವಣೆ, ಮತ್ತೊಂದೆಡೆ ವಿಶ್ವಕಪ್ ಟೂರ್ನಿ ಇದರ ನಡುವೆ ಐಪಿಎಲ್ ಆಯೋಜನೆಗೆ ಸಾಹಸವೇ ಮಾಡಬೇಕಿದೆ. ಇದಕ್ಕಾಗಿ ಐಪಿಎಲ್ ಸ್ಥಳಾಂತರಕ್ಕೆ ಮುಂದಾಗಿದೆ.
 

ಮುಂಬೈ(ಅ.21): ಪ್ರತಿ ವರ್ಷ ಐಪಿಎಲ್ ಟೂರ್ನಿ ಆಯೋಜನೆಗೆ ಒಂದಲ್ಲಾ ಒಂದು ಅಡೆತಡೆ ಇದ್ದೇ ಇದೆ. ಹಲವು ಸಮಸ್ಯೆಗಳ ನಡುವೆಯೂ 11 ಐಪಿಎಲ್ ಆವೃತ್ತಿಗಳನ್ನ ಯಶಸ್ವಿಯಾಗಿ ಪೂರೈಸಿದ ಬಿಸಿಸಿಐ ಇದೀಗ 12ನೇ ಆವೃತ್ತಿಗೆ ಸಜ್ಜಾಗಿದೆ. ಆದರೆ 2019ರ ಐಪಿಎಲ್ ಆವೃತ್ತಿ ಇದೀಗ ಭಾರತದಿಂದ ಶಿಫ್ಟ್ ಆಗೋ ಸಾಧ್ಯತೆ ಇದೆ.

2019ರಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಇದೇ ವೇಳೆ ಐಪಿಎಲ್ ಟೂರ್ನಿ ಆಯೋಜನೆ ಮಾಡಬೇಕಿದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನ ಸೌತ್ಆಫ್ರಿಕಾಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಬಿಸಿಸಿಐ ತಂಡವೊಂದು ಸೌತ್ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ. ಕೇಪ್‌ಟೌನ್, ಜೋಹಾನ್ಸ್‌ಬರ್ಗ್, ಡರ್ಬನ್ ಹಾಗೂ ಪೋರ್ಟ್ ಎಲಿಜಬೆತ್ ಕ್ರೀಡಾಂಗಣಗಳ ಪರಿಶೀಲನೆ ನಡೆಸಿ ವರದಿ ನೀಡಲಿದೆ.

2009ರಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಐಪಿಎಲ್ ಟೂರ್ನಿಯನ್ನ ಸೌತ್ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು. ಇನ್ನು 2014ರಲ್ಲಿ ಐಪಿಎಲ್‌ನ ಆರಂಭಿಕ ಹಂತದ ಪಂದ್ಯಗಳನ್ನ ಯುಎಇಗೆ ಸ್ಥಳಾಂತರಿಸಲಾಗಿತ್ತು.

click me!