ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸ್ಟಾರ್ ವೇಗಿ ಔಟ್!

By Web DeskFirst Published Nov 14, 2018, 8:18 PM IST
Highlights

2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ತಂಡದ 22 ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ. ಆದರೆ ಸ್ಟಾರ್ ವೇಗಿ ಸೇರಿದಂತೆ ಮೂವರು ಕ್ರಿಕೆಟಿಗರನ್ನ ತಂಡದಿಂದ ಕೈಬಿಡಲಾಗಿದೆ.

ಚೆನ್ನೈ(ನ.14): 2019ರ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಿದ್ಧತೆ ಆರಂಭಿಸಿದೆ. 12ನೇ ಆವೃತ್ತಿಗಾಗಿ ಸಿಎಸ್‌ಕೆ ಫ್ರಾಂಚೈಸಿ 22 ಆಟಗಾರರನ್ನ ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಮೂವರು ಆಟಗಾರರನ್ನ ತಂಡದಿಂದ ಕೈಬಿಟ್ಟಿದೆ.

ಐಪಿಎಲ್ ಗರ್ವನಿಂಗ್ ಕೌನ್ಸಿಲ್ ನಿಯಮದ ಪ್ರಕಾರ ನವೆಂಬರ್ 15ರೊಳಗೆ ತಂಡದಲ್ಲಿ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಪಟ್ಟಿ ನೀಡಬೇತು. ಹೀಗಾಗಿ  ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಹಾಗೂ ಭಾರತದ ಯುವ ಕ್ರಿಕೆಟಿಗರಾದ ಕಾನಿಶ್ಕ್ ಸೇಥ್, ಕ್ಷಿತಿಜ್ ಶರ್ಮಾ ಅವರನ್ನ ತಂಡದಿಂದ ಕೈಬಿಟ್ಟಿದೆ. 

ನಾಯಕ ಎಂ.ಎಸ್.ಧೋನಿ, ಸುರೇಶ್ ರೈನಾ, ಹರ್ಭಜನ್ ಸಿಂಗ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ಆಟಗಾರರನ್ನ ಸಿಎಸ್‌ಕೆ ರಿಟೈನ್ ಮಾಡಿಕೊಂಡಿದೆ.

2019ರ ಐಪಿಎಲ್ ಟೂರ್ನಿಗೆ ಆಟಗಾರರನ್ನ ಖರೀದಿಸಲು ಸದ್ಯ ಸಿಎಸ್‌ಕೆ ಬಳಿಕ 8.5 ಕೋಟಿ ರೂಪಾಯಿ ಬಾಕಿ ಇದೆ.  2 ವರ್ಷಗಳ ನಿಷೇಧದ ಬಳಿಕ 2018ರಲ್ಲಿ ಐಪಿಎಲ್‌ಕೆ ಕಮ್‌ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತು. 

click me!