3ನೇ ಟೆಸ್ಟ್‌ಗೆ 3 ಬದಲಾವಣೆ -ಭಾರತದ 3ನೇ ವಿಕೆಟ್ ಪತನ

By Web DeskFirst Published Aug 18, 2018, 6:24 PM IST
Highlights

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸುಧಾರಣೆ ಕಂಡಿಲ್ಲ. ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿದೆ 3ನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಪ್‌ಡೇಟ್ಸ್.

ನಾಟಿಂಗ್‌ಹ್ಯಾಮ್(ಆ.18): ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. 3 ಬದಾಲಾವಣೆಯೊಂದಿಗೆ 3ನೇ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿದ ಭಾರತ ಇದೀಗ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಆರಂಭಿಕ 2 ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಇದೀಗವ 3ನೇ ಪಂದ್ಯದಲ್ಲೂ ಪರಿಸ್ಥಿತಿ ಸುಧಾರಿಸಿಲ್ಲ. ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದರು.

ಧವನ್ 35 ರನ್ ಸಿಡಿಸಿದರೆ, ರಾಹುಲ್ 23 ರನ್ ಕಾಣಿಕೆ ನೀಡಿದ್ದಾರೆ. ಆದರೆ ಆರಂಭಿಕರ ಪತನದ ಬಳಿಕ ಚೇತೇಶ್ವರ ಪೂಜಾರ 14 ರನ್ ಸಿಡಿಸಿ ಔಟಾದರು. 82 ರನ್‌ಗೆ ಟೀಂ ಇಂಡಿಯಾದ 3ನೇ ವಿಕೆಟ್ ಪತನಗೊಂಡಿದೆ. 

ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯಕ್ಕೆ ಭಾರತ 3 ಬದಲಾವಣೆ ಮಾಡಿದೆ. ಮುರಳಿ ವಿಜಯ್ ಬದಲು ಶಿಖರ್ ಧವನ್‌ಗೆ ಅವಕಾಶ ನೀಡಿದರೆ, ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್‌ಗೆ ಅವಕಾಶ ನೀಡಲಾಗಿದೆ. ಇನ್ನು ಕುಲ್ದೀಪ್ ಯಾದವ್ ಬದಲು ಜಸ್‌ಪ್ರೀತ್ ಬುಮ್ರಾಗೆ ಅವಾಶ ನೀಡಲಾಗಿದೆ.
 

click me!