ಫೈನಲ್ ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಹಷೋಧ್ಘಾರಗಳ ನಡುವೆ ತಮ್ಮ ಮೆಚ್ಚಿನ ತಂಡಗಳಿಗೆ ಬೆಂಬಲ ನೀಡಿದರು. ಅಂತಿಮ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯ, ಭರಪೂರ ಮನರಂಜೆ ನೀಡಿತು. ಬಿರುಬಿಸಿಲನ್ನೂ ಲೆಕ್ಕಿಸದೆ ಸ್ಟೇಡಿಯಂನಲ್ಲಿ ಸೇರಿದ್ದ ಸಹಸ್ರಾರು ವೀಕ್ಷಕರಿಗೆ ಕ್ರೀಡಾ ರಸದೌತನ ನೀಡಿತು.
- ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಏ.29): ಕೊಡವ ಕುಟುಂಬಗಳ ನಡುವೆ ನಡೆದ 24ನೇ ವರ್ಷದ ಕೌಟುಂಬಿಕ ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ನ ಫೈನಲ್ ಪಂದ್ಯಲ್ಲಿ ಚೇಂದಂಡ ತಂಡ, ನೆಲ್ಲಮಕ್ಕಡ ತಂಡವನ್ನು ಮಣಿಸಿ ಮೂರನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
undefined
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಹಾಕಿ ಪಂದ್ಯ ರೋಚಕತೆಯಿಂದ ಕೂಡಿತ್ತು. ಅಂತಿಮ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಸಮಬಲದ ಹೋರಾಟ ನಡೆದು ಫಲಿತಾಂಶಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಅದರಲ್ಲಿ ಚೇಂದಂಡ ತಂಡಕ್ಕೆ ವಿಜಯಲಕ್ಷ್ಮೀ ಒಲಿಯಿತು.
ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ಪ್ರತಿಷ್ಠಿತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗರಿ
ಫೈನಲ್ ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಹಷೋಧ್ಘಾರಗಳ ನಡುವೆ ತಮ್ಮ ಮೆಚ್ಚಿನ ತಂಡಗಳಿಗೆ ಬೆಂಬಲ ನೀಡಿದರು. ಅಂತಿಮ ಕ್ಷಣದವರೆಗೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಪಂದ್ಯ, ಭರಪೂರ ಮನರಂಜೆ ನೀಡಿತು. ಬಿರುಬಿಸಿಲನ್ನೂ ಲೆಕ್ಕಿಸದೆ ಸ್ಟೇಡಿಯಂನಲ್ಲಿ ಸೇರಿದ್ದ ಸಹಸ್ರಾರು ವೀಕ್ಷಕರಿಗೆ ಕ್ರೀಡಾ ರಸದೌತನ ನೀಡಿತು.
ರೋಚಕತೆಯಿಂದ ಕೂಡಿದ ಅಂತಿಮ ಪಂದ್ಯದಲ್ಲಿ ಎರಡು ತಂಡವು 2-2 ಗೋಲಿನಿಂದ ಸಮಬಲ ಸಾಧಿಸಿದವು. ನಂತರ ನಡೆದ ಟೈಬ್ರೇಕರ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದವು. ಅಂತಿಮ ಕ್ಷಣದಲ್ಲಿ ಚೇಂದಂಡ ತಂಡ 8-7 ಮುನ್ನಡೆಯೊಂದಿಗೆ ನೆಲ್ಲಮಕ್ಕಡ ವಿರುದ್ಧ ವಿಜಯ ಸಾಧಿಸಿ ಮೂರನೇ ಬಾರಿಗೆ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪ್ರಶಸ್ತಿ ಎತ್ತಿ ಹಿಡಿಯಿತು.
ನೆಲ್ಲಮಕ್ಕಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ನೆಲ್ಲಮಕ್ಕಡ ತಂಡಕ್ಕೆ ಟ್ರೋಫಿ ಹಾಗೂ ನಗದು ವಿತರಿಸಲಾಯಿತು.
ಬೆಂಗ್ಳೂರು 10ಕೆ: ಕೀನ್ಯಾದ ಪೀಟರ್ ಎಂವಾನಿಕಿ ಚಾಂಪಿಯನ್
ಕುಲ್ಲೇಟಿರ ತೃತೀಯ, ಕುಪ್ಪಂಡಕ್ಕೆ ಚತುರ್ಥ: ಫೈನಲ್ ಪಂದ್ಯಕ್ಕೂ ಮೊದಲು ಮೂರನೇ ಹಾಗೂ ನಾಲ್ಕನೇ ಪ್ರಶಸ್ತಿಗೆ ಹೋರಾಟ ನಡೆಯಿತು. ಕುಲ್ಲೇಟಿರ ಮತ್ತು ಕುಪ್ಪಂಡ ( ಕೈಕೇರಿ) ತಂಡಗಳ ನಡುವೆ ನಡೆದ ಪಂದ್ಯ ಟೈ ಬ್ರೇಕರ್‌ನಲ್ಲಿ ಕುಲ್ಲೇಟಿರ ತಂಡ ಕುಪ್ಪಂಡ (ಕೈಕೇರಿ) ವಿರುದ್ಧ 3- 2 ಅಂತರದ ದಿಂದ ಜಯಗಳಿಸಿ ಮೂರನೇ ಸ್ಥಾನ ಗಳಿಸಿತು. ಕುಪ್ಪಂಡ (ಕೈಕೇರಿ) ತಂಡ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.