ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿದ ಅಲಿಸ್ಟೈರ್ ಕುಕ್

By Web DeskFirst Published Aug 30, 2018, 5:10 PM IST
Highlights

ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಆರಂಭದಲ್ಲೇ ತತ್ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಭರ್ಜರಿ ಶಾಕ್ ನೀಡಿದೆ.
 

ಸೌತಾಂಪ್ಟನ್(ಆ.30): ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಮತ್ತೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಕಳೆದ 3 ಟೆಸ್ಟ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಕುಕ್, ಇದೀಗ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಬಹುಬೇಗನೆ ಪೆವಿಲಿಯನ್ ಸೇರಿದ್ದಾರೆ.

ಸೌತಾಂಪ್ಟನ್ ಟೆಸ್ಟ್ ಪಂದ್ಯದಲ್ಲಿ ಕುಕ್ 17 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಕುಕ್ ಪೆವಿಲಿಯನ್ ಸೇರಿಕೊಂಡರು.

 

4th Test. 17.1: WICKET! A Cook (17) is out, c Virat Kohli b Hardik Pandya, 36/4 https://t.co/0H7QgsePBK

— BCCI (@BCCI)

 

ಅಲಿಸ್ಟೈರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ. ಸದ್ಯ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ.
 

click me!