ಭಾರತ-ಇಂಗ್ಲೆಂಡ್ ಟೆಸ್ಟ್: ಗೆಲುವಿನತ್ತ ದಾಪುಗಾಲಿಟ್ಟ ಟೀಂ ಇಂಡಿಯಾ

By Web DeskFirst Published Aug 21, 2018, 11:44 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟ ತಲುಪಿದೆ. 4ನೇ ದಿನದಾಟದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರೂ, ಟೀಂ ಇಂಡಿಯಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. 

ನಾಟಿಂಗ್‌ಹ್ಯಾಮ್(ಆ.21): ಇಂಗ್ಲೆಂಡ್ ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನತ್ತ ಹೆಜ್ಜೆ ಇಟ್ಟಿದೆ. 2ನೇ ಇನ್ನಿಂಗ್ಸ್‌ನಲ್ಲಿ 521 ರನ್ ಟಾರ್ಗೆಟ್ ಪೆಡೆದ ಇಂಗ್ಲೆಂಡ್ 4ನೇ ದಿನದಾಟದ ಅಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 311 ರನ್‍‌ಗಳಿಸಿದೆ.  ಹೀಗಾಗಿ ಭಾರತದ ಗೆಲುವಿಗೆ ಇನ್ನು ಕೇವಲ 1 ವಿಕೆಟ್‌ಗಳ ಅವಶ್ಯಕತೆ ಇದೆ.

 

Stumps on Day 4. India one wicket away from victory. A 5-wkt haul for . pic.twitter.com/xXJrKrkyxP

— BCCI (@BCCI)

 

4ನೇ ದಿನದಾಟದಲ್ಲಿ  ವಿಕೆಟ್ ನಷ್ಟವಿಲ್ಲದೆ 23 ರನ್‌ಗಳೊಂದಿಗೆ ಇನ್ನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಆರಂಭದಲ್ಲೇ ಕೆಟನ್ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.  ಅಲಿಸ್ಟೈರ್ ಕುಕ್ 17 ರನ್ ಸಿಡಿಸಿ ಔಟಾಗಿದರು. ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಜೋ ರೂಟ್ ಹಾಗೂ ಒಲ್ಲಿ ಪೋಪ್ ವಿಕೆಟ್ ಕಳೆದುಕೊಂಡಿತು. ಆದರೆ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಜೊತೆಯಾಟ ಭಾರತಕ್ಕೆ ಅಪಾಯದ ಸೂಚನೆ ನೀಡಿತು.

ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.  ಇತ್ತ ಬಟ್ಲರ್‌ಗೆ ಉತ್ತಮ ಸಾಥ್ ನೀಡಿದ ಬೆನ್ ಸ್ಟೋಕ್ಸ್ ಅರ್ಧಶತಕ ಸಿಡಿಸಿ ಆಸರೆಯಾಗಿದರು. ಭಾರತ ಆತಂಕ ಹೆಚ್ಚಿಸಿದ ಬಟ್ಲರ್ 106 ರನ್ ಸಿಡಿಸಿ, ಜಸ್‌ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಜಾನಿ ಬೈರ್‌ಸ್ಟೋ ಬಂದ ಹಾಗೆ ಔಟಾದರು. ಇನ್ನು ಕ್ರಿಸ್ ವೋಕ್ಸ್ 4 ರನ್ ಸಿಡಿಸಿ ಔಟಾದರು. ಆಸರೆಯಾಗಿದ್ದ ಬೆನ್ ಸ್ಟೋಕ್ಸ್ 62 ರನ್ ಸಿಡಿಸಿ ಔಟಾದರು. 

ಸ್ಟುವರ್ಟ್ ಬ್ರಾಡ್ 20 ರನ್ ಸಿಡಿಸಿ ಔಟಾದರು.  ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 9 ವಿಕಟ್ ನಷ್ಟಕ್ಕೆ 311 ರನ್ ಸಿಡಿಸಿದೆ. ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಕಬಳಿಸಿ ಮಿಂಚಿದರು. ಇಂಗ್ಲೆಂಡ್ ಗೆಲುವಿಗೆ ಇನ್ನು 210 ರನ್‌ಗಳ ಅವಶ್ಯಕತೆ ಇದೆ. ಆದರೆ ಭಾರತ 1 ವಿಕೆಟ್ ಕಬಳಿಸಿ ಪಂದ್ಯ ಗೆಲುವಿಗೆ ಹಾತೊರೆಯುತ್ತಿದೆ. ಹೀಗಾಗಿ ನಾಳಿನ ದಿನದಾಟದ ಆರಂಭದಲ್ಲೇ ಭಾರತ ಗೆಲುವಿನ ನಗೆ ಬೀರೋ ಸಾಧ್ಯತೆ ಹೆಚ್ಚಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೇವಲ 161 ರನ್‌ಗಳಿಗೆ ಆಲೌಟ್ ಆಗೋ ಮೂಲಕ 168 ರನ್ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 352 ರನ್ ಸಿಡಿಸಿ ಡೆಕ್ಲೇರ್ ಮಾಡಿಕೊಂಡಿತ್ತು.

click me!