ಚಿನ್ನಸ್ವಾಮಿಯಲ್ಲಿ ನಡೆದ ಈ ಐಪಿಎಲ್‌ನ 4 ಪಂದ್ಯಗಳಿಗೆ ಒಟ್ಟು 80 ಸಾವಿರ ಲೀಟರ್‌ನಟ್ಟು ನೀರು ಬಳಕೆಯಾಗಿದೆ. ನಗರದಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆಯೂ ಭಾರಿ ಪ್ರಮಾಣದ ನೀರಿನ ಬಳಕೆಯಾಗಿದ್ದರ ಬಗ್ಗೆ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು.
ನವದೆಹಲಿ(ಮೇ.04): ಬೆಂಗಳೂರಿನಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆಯೂ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಸೂಚಿಸಿದೆ.
ಚಿನ್ನಸ್ವಾಮಿಯಲ್ಲಿ ನಡೆದ ಈ ಐಪಿಎಲ್‌ನ 4 ಪಂದ್ಯಗಳಿಗೆ ಒಟ್ಟು 80 ಸಾವಿರ ಲೀಟರ್‌ನಟ್ಟು ನೀರು ಬಳಕೆಯಾಗಿದೆ. ನಗರದಲ್ಲಿ ನೀರಿನ ಬಿಕ್ಕಟ್ಟಿನ ಮಧ್ಯೆಯೂ ಭಾರಿ ಪ್ರಮಾಣದ ನೀರಿನ ಬಳಕೆಯಾಗಿದ್ದರ ಬಗ್ಗೆ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಆ.13ಕ್ಕೆ ನಿಗದಿಪಡಿಸಿದೆ.
ಬೆಂಗೂರಲ್ಲಿ ಭಾರತ vs ದಕ್ಷಿಣ ಆಫ್ರಿಕಾ ವನಿತಾ ತಂಡಗಳ ಟಿ20, ಏಕದಿನ ಫೈಟ್
ಬೆಂಗಳೂರು: ಭಾರತ-ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳು ಜೂನ್-ಜುಲೈ ತಿಂಗಳಲ್ಲಿ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಲಾ 3 ಟಿ20, ಏಕದಿನ ಪಂದ್ಯಗಳನ್ನಾಡಲಿವೆ. ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರಣಿಯ ಮೊದಲ ಏಕದಿನ ಪಂದ್ಯ ಜೂ.16ಕ್ಕೆ ನಡೆಯಲಿದ್ದು, ಇನ್ನೆರಡು ಪಂದ್ಯಗಳು ಜೂ.19, 23ಕ್ಕೆ ನಿಗದಿಯಾಗಿವೆ. ಚೆನ್ನೈ ನಲ್ಲಿ ಜೂ.28 ರಿಂದ ಏಕೈಕ ಟೆಸ್ಟ್ ಪಂದ್ಯ ನಡೆಯಲಿದ್ದು, ಬಳಿಕ ಬೆಂಗಳೂರಿನಲ್ಲಿ ಇತ್ತಂಡಗಳು ಜು.5, 7 ಮತ್ತು9ರಂದು 3 ಟಿ20 ಪಂದ್ಯಗಳನ್ನಾಡಲಿವೆ.
IPL 2024 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಂದು ಆರ್‌ಸಿಬಿ vs ಗುಜರಾತ್ ಮೆಗಾ ಫೈಟ್
ಟಿ20 ವಿಶ್ವಕಪ್: ಅಮೆರಿಕ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮೂಲ್ ಪ್ರಾಯೋಜಕತ್ವ
ನವದೆಹಲಿ: ಜೂ.1ರಿಂದ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕ ತಂಡಗಳಿಗೆ ಭಾರತದ ಪ್ರಮುಖ ಡೈರಿ ಉತ್ಪನ್ನ ಸಂಸ್ಥೆ ಅಮೂಲ್ ಪ್ರಾಯೋಜಕತ್ವ ವಹಿಸಲಿದೆ. ಅಮೂಲ್ ವಿಶ್ವಕಪ್ ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವ 2ನೇ ಡೈರಿ ಸಂಸ್ಥೆ. ಕರ್ನಾಟಕದ ನಂದಿನಿ ಇತ್ತೀಚೆಗಷ್ಟೇ ಐರ್ಲೆಂಡ್, ಸ್ಕಾಟ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ವಹಿಸುತ್ತಿರುವುದಾಗಿ ಘೋಷಿಸಿತ್ತು. ಅಮೂಲ್ ಗುಜರಾತ್ ಮೂಲದ ಸಂಸ್ಥೆಯಾಗಿದ್ದು, ಈ ಮೊದಲು ಅಫ್ಘಾನಿಸ್ತಾನ, ನೆದರ್‌ಲೆಂಡ್ಸ್ ತಂಡಗಳಿಗೂ ಪ್ರಾಯೋಜಕತ್ವ ವಹಿಸಿತ್ತು. ಅಮೂಲ್ ಉತ್ಪನ್ನಗಳು ಈಗಾಗಲೇ ಅಮೆರಿಕದಲ್ಲೂ ಮಾರಾಟಗೊಳ್ಳುತ್ತಿವೆ.