2ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿ-ಮತ್ತೆ ಡಕ್‌ವರ್ತ್ ನಿಯಮ ಅನ್ವಯ?

By Web DeskFirst Published Nov 23, 2018, 3:02 PM IST
Highlights

INDvAUS ನಡುವಿನ 2ನೇT20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಈ ಪಂದ್ಯಕ್ಕೂ ಡಕ್‌ವರ್ತ್ ನಿಯಮ ಅನ್ವಯಿಸುವ ಸಾಧ್ಯತೆ ಹೆಚ್ಚಿದೆ. ಅರ್ಧಗಂಟೆಗೂ ಹೆಚ್ಚುಕಾಲ ಪಂದ್ಯ ಸ್ಥಗಿತಗೊಂಡರೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯಕ್ಕೆ ಡಕ್‌ವರ್ತ್ ನಿಯಮ ಅನ್ವಯಿಸುವ ಸಾಧ್ಯತೆ ಹೆಚ್ಚಿದೆ.

ಮೆಲ್ಬರ್ನ್(ನ.23): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನ ಡಕ್‌ವರ್ತ್ ಲೂಯಿಸ್ ನಿಯಮದಿಂದ ಸೋತಿದ್ದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯಕ್ಕೂ ಡಕ್‌ವರ್ತ್ ಲೂಯಿಸ್ ನಿಯಮ ಅನ್ವಯ ಆಗೋ ಸಾಧ್ಯತೆ ಇದೆ. ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ 2 ನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ.

ಇದನ್ನೂ ಓದಿ: ಡಕ್‌ವರ್ತ್ ಲೂಯಿಸ್ ನಿಯಮದಿಂದ ಮೊದಲ ಪಂದ್ಯ ಸೋತ ಭಾರತ

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸಿಸ್ ತಂಡಕ್ಕೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ಔಟಾದರು. ಕ್ರಿಸ್ ಲಿನ್ 13 ರನ್‌ಗಳಿಸಿ ನಿರ್ಗಮಿಸಿದರೆ, ಡಾರ್ಕಿ ಶಾರ್ಟ್ 14 ರನ್ ಕಾಣಿಕೆ ನೀಡಿದರು.

ಮಾರ್ಕಸ್ ಸ್ಟೊಯಿನಿಸ್ 4 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಆದರೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿತೀಯ ಪಂದ್ಯದಲ್ಲಿ 19 ರನ್ ಸಿಡಿಸಿ ಔಟಾದರು. ಬೆನ್ ಮೆಕ್‌ಡರ್ಮೊಟ್ ಅಜೇಯ 32 ರನ್ ಸಿಡಿಸಿದರೆ, ಆ್ಯಂಡ್ರೂ ಟೈ ಅಜೇಯ 12 ರನ್ ಬಾರಿಸಿದರು. 19 ಓವರ್‌ಗಳಲ್ಲಿ ಆಸ್ಟ್ರೇಲಿಯಾ 132 ರನ್ ಸಿಡಿಸಿತು. ಆದರೆ ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯವನ್ನ ಸ್ಥಗಿತಗೊಳಿಸಲಾಗಿದೆ.
 

click me!